PRAJAAKEEYA:046-Aland

PRAJAAKEEYA:046-Aland

Share

Prajaakeeya
Reject Leaders we need only “ SUPER WORKERS ”. People’s money should be spent for

20/01/2022

ಏನಂತೀರಾ ಪ್ರಜಾಪ್ರಭುಗಳೇ?
ಪ್ರಜಾಕೀಯನಾ? ಅಥವಾ ರಾಜಕೀಯನಾ?
#ಯುಪಿಪಿ #ಉತ್ತಮಪ್ರಜಾಕೀಯಪಕ್ಷ #ಪ್ರಜಾಕೀಯ

20/01/2022
19/02/2021

ಬಂಧುಗಳೇ,
ನಿಮಗೆ ನಮ್ಮ ರಾಜ್ಯದ ರಾಜಕೀಯ ವಲಯದಲ್ಲಿ ಕೆಲಸ ಮಾಡಬೇಕು, ಬೆಳೆಯಬೇಕು, ಮುಂದೊಂದು ದಿನ ನಾಯಕ/ಜನ ಪ್ರತಿನಿಧಿ/ಶಾಸಕ/ಸಂಸದ ಆಗಬೇಕು ಎನ್ನುವ ಆಸೆ, ಆಕಾಂಕ್ಷೆ, ಕಾಳಜಿ, ಮನಸ್ಸು, ಇದೆಯೇ?

ಹಾಗಿದ್ದಲ್ಲಿ, ಕನಿಷ್ಟ ಎರಡು ಮಾರ್ಗಗಳಿವೆ.

1. ಹೇಗಾದರೂ ಸರಿ, ಹಣ-ಹೆಂಡ ಹಂಚಿಯಾದರೂ ಸರಿ, ಚುನಾವಣಾ ಅಕ್ರಮ ಎಸಗಿಯಾದರೂ ಸರಿ, ಸ್ವಾಭಿಮಾನ ಬಿಟ್ಟಾದರೂ ಸರಿ, ಭ್ರಷ್ಟರನ್ನು ಸಮರ್ಥನೆ ಮಾಡಿಕೊಂಡಾದರೂ ಸರಿ, ಒಟ್ಟಿನಲ್ಲಿ ನಾನು ರಾಜಕೀಯ ನಾಯಕ ಆಗಬೇಕು ಎನ್ನುವುದು ನಿಮ್ಮ ಆಕಾಂಕ್ಷೆ ಇದ್ದಲ್ಲಿ ದಯವಿಟ್ಟು ಕರ್ನಾಟಕದಲ್ಲಿ ಸಕ್ರಿಯವಾಗಿರುವ ಭ್ರಷ್ಟ ರಾಜಕೀಯ ಪಕ್ಷಗಳಲ್ಲಿ ಯಾವುದನ್ನಾದರೂ ಒಂದನ್ನು ಈಗಲೇ ಸೇರಿ. ನಿಮಗೆ ಶುಭವಾಗಲಿ.

2. ಇಲ್ಲ, ನಾನು ಪ್ರಾಮಾಣಿಕವಾಗಿ ಬರೀ ಸಂಬಳ ತಗೊಂಡು ಕೆಲಸ ಮಾಡುವ, ನಾಡನ್ನು ಕಟ್ಟುವ ಕೆಲಸ ಮಾಡಬೇಕು, ಚುನಾವಣಾ ಅಕ್ರಮಗಳನ್ನು ಮಾಡದೆ ಗೆಲ್ಲಬೇಕು, ನಿಧಾನವಾದರೂ ಸರಿ ರಾಜಿ ಆಗಲಾರೆ, ಇತ್ಯಾದಿ ನೀತಿ ನಿಯಮ ನಿಯತ್ತು ಇದ್ದಲ್ಲಿ, ದಯವಿಟ್ಟು "ಉತ್ತಮ ಪ್ರಜಾಕೀಯ ಪಕ್ಷದ" ಸಿದ್ಧಾಂತ ತಿಳಿದುಕೊಳ್ಳಿ ಹಾಗೂ ಯುಪಿಪಿ ಜೊತೆ ಕೈ ಜೋಡಿಸಿ. ನಿಮಗೂ ಸಮಾಜಕ್ಕೂ ಒಳ್ಳೆಯದಾಗಲಿ.

ವಂದನೆಗಳೊಂದಿಗೆ,
ಸಾಮಾನ್ಯ ಪ್ರಜ್ಞಾವಂತ ಪ್ರಜೇ

14/02/2021

ಪೆಟ್ರೋಲ್/ಡೀಸೆಲ್ ದರ ಪ್ರತಿದಿನ ಎಗ್ಗಿಲ್ಲದೇ ಎರಿಸುತ್ತಿರುವ ಸರ್ಕಾರ. ನಮ್ಮ ದೇಶದ ಭ್ರಷ್ಟ ರಾಜಕೀಯ ನಾಯಕರು ಸುಳ್ಳಿನ ಮೇಲೆ ಸುಳ್ಳು ಭಾಷಣ ಮಾಡಿ ಮತದಾರರನ್ನು ಯಾಮಾರಿಸಿಬಿಡುತಿದ್ದಾರೆ.😥

ಬಹುತೇಕರು ಜಾತಿ-ಧರ್ಮದ ಕಿಚ್ಚು ಹೊತ್ತಿಸುವುದು ಮತ ಗಿಟ್ಟಿಸಿಕೊಳ್ಳುವುದು ಆಗ್ಬಿಟ್ಟಿದ್ದೆ;

ತೆರಿಗೆ ರೂಪದಲ್ಲಿ ಬಡವರ/ಮಧ್ಯಮ ವರ್ಗದ ಜನರಿಂದ ಕಿತ್ತು ತಿನ್ನುವ ದುಡ್ಡು ಎತ್ತ ಸಾಗುತ್ತಿದೆ...?!

ಭ್ರಷ್ಟಾಚಾರ, ನಿರುದ್ಯೋಗ, ತಾಂಡವಾಡುತ್ತಿದೆ ರಾಜ್ಯದಲ್ಲಿ ಇದರ ಬಗ್ಗೆಯು ಸಹ ಮಾತನಾಡಿ ಅಸಲಿ/ನಕಲಿ ಮಹಾಪ್ರಭುಗಳೇ🙉🙈🙊

14/02/2021

#ಫುಲ್ವಾಮಭಯೋತ್ಪಾದಕದಾಳಿ #ಹುತಾತ್ಮಯೋಧರು
14-02-2019.
"ಇಂದು ಕಾಶ್ಮೀರದಲ್ಲಿ ನಡೆದ ಹೇಯ ಭಯೋತ್ಪಾದಕ ಕೃತ್ಯ ಕೇವಲ ಭಾರತದ ಮೇಲೆ ದಾಳಿ ಅಲ್ಲ. ಪ್ರತಿ ಭಯೋತ್ಪಾದಕ ಕೃತ್ಯವೂ ಮಾನವೀಯತೆಯ ಮೇಲಿನ ದಾಳಿ. ಜೀವವಿರೋಧಿ.

ಇಡೀ ಪ್ರಪಂಚವೇ ಪ್ರಜಾಸತ್ತೆಯನ್ನು ಬಹುತೇಕವಾಗಿ ಒಪ್ಪಿಕೊಂಡಿರುವ ಇಂದಿನ ಸಂದರ್ಭದಲ್ಲಿ ಹಿಂಸೆಯ ಮೂಲಕ ಏನನ್ನೋ ಸಾಧಿಸಬಯಸುವ ಭಯೋತ್ಪಾದಕರು ಇಡೀ ಮನುಷ್ಯ ಕುಲದ ಶತ್ರುಗಳು. ಯುಗಧರ್ಮದ ಧರ್ಮವಿರೋಧಿಗಳು. ಈ ಧರ್ಮವಿರೋಧಿಗಳ ವಿರುದ್ಧ ವಿಶ್ವದ ಎಲ್ಲಾ ರಾಷ್ಟ್ರಗಳು ಯುದ್ಧ ಸಾರಬೇಕಿದೆ ಮತ್ತು ಅಂತಹ ಸಂಘಟಿತ ಪ್ರಯತ್ನಕ್ಕೆ ಬೆಂಬಲ ಕೊಡದ ಸರ್ಕಾರಗಳನ್ನು ಅಲ್ಲಿಯ ಜನರೇ ಕಿತ್ತೊಗೆಯಬೇಕಿದೆ. ಇಲ್ಲವಾದಲ್ಲಿ ಮೊದಲಿಗೆ ನಾಶವಾಗುವವರು ಅಲ್ಲಿಯ ಜನರೇ.

ಈ ದುರಂತ ಕೇವಲ ಭಯೋತ್ಪಾದಕರ ಬಲವನ್ನಷ್ಟೇ ಅಲ್ಲ ನಮ್ಮ ದೇಶದ ಆಂತರಿಕ ಭದ್ರತೆ ಮತ್ತು ಆಂತರಿಕ ಇಂಟೆಲಿಜೆನ್ಸ್ ಹಾಗೂ ಪೊಲೀಸ್ ವ್ಯವಸ್ಥೆಗಳ ಕಾರ್ಯಕ್ಷಮತೆಯನ್ನು ಪ್ರಶ್ನಿಸುತ್ತಿದೆ. ಅಯೋಗ್ಯ ಮತ್ತು ಇಂದಿನ ಸವಾಲುಗಳನ್ನು ಎದುರಿಸಲಾಗದ ಅನರ್ಹರೆ ಇರುವ ಇಂದಿನ ರಾಜಕೀಯ ನಾಯಕರು ನಮ್ಮ ಅತಿ ದೊಡ್ಡ ಸಮಸ್ಯೆ ಆಗಿದ್ದಾರೆ.

ದೇಶದ ರಕ್ಷಣೆಗೆ ಪ್ರಾಣ ನೀಡುವ ಸೈನಿಕರ ತ್ಯಾಗ ಮತ್ತು ಬಲಿದಾನಗಳು ವ್ಯರ್ಥವಾಗಬಾರದಾದರೆ ನಮ್ಮ ನಾಯಕರು ಯೋಗ್ಯರಿರಬೇಕು. ನಮ್ಮ ನೋವು ಮತ್ತು ಆಕ್ರೋಶಗಳು ಸ್ವಾರ್ಥಿ, ಅನರ್ಹ, ಮತ್ತು ಭ್ರಷ್ಟಾಚಾರಿ ನಾಯಕರೆಡೆಗೆ ತಿರುಗಬೇಕು. ಆಗ ಭಯೋತ್ಪಾದಕರು ನಮ್ಮ ನೆಲದ ಮೇಲೆ ಹಿಂಸೆ ಮಾಡಲು ಹಿಂಜರಿಯುತ್ತಾರೆ. ನಮ್ಮ ಆಯ್ಕೆಗಳು ಸರಿಯಾಗಿರಲಿ.

ಜೈ ಜವಾನ್." 🙏
ಜೈ ಕಿಸಾನ್." 🙏

30/01/2021

ಇವತ್ತಿನ ರಾಜಕಾರಣಿಗಳಿಗೆ ಹೋಲಿಕೆಯಾಗುವ ಚಿತ್ರ

18/01/2021

ಈ ರೀತಿ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದರೆ ಮಾತ್ರ, ಸಾಮಾನ್ಯ ಜನರು ಮತ್ತು ರೈತರು ಜೀವನ ನೆಡೆಸಲು ಸಾಧ್ಯ......

Uttama Prajaakeeya Party | UPP | Official Website | Upendra 18/01/2021

ತುಂಬಾ ಜನ "ಪ್ರಜಾಕೀಯ" ವನ್ನು ಸೇರಬೇಕು ಎಂದು ಬಯಸುತ್ತಿದ್ದಾರೆ ಮತ್ತು ಯಾರನ್ನು ಸಂಪರ್ಕಿಸಬೇಕು ಎಂದು ಕೇಳುತ್ತಿದ್ದಾರೆ,
"ಉತ್ತಮ ಪ್ರಜಾಕೀಯ ಪಕ್ಷ ಪ್ರಜೆಗಳ ಪಕ್ಷ". ಇಲ್ಲಿ ಯಾವುದೇ ಕಾರ್ಯಕರ್ತರು, ಹುದ್ದೆಗಳು, ಆಫೀಸು, ಹಣದ ವ್ಯವಹಾರ ಇರುವುದಿಲ್ಲ... ಇಲ್ಲಿ ಇರುವುದು ಕೆಳಗಿನ ಎರಡೇ ಅಂಶಗಳು..

1. ಪ್ರಜಾಕಾರ್ಮಿಕ: ನೀವು ಉತ್ತಮ ಪ್ರಜಾಕೀಯ ಪಕ್ಷದಿಂದ ವಿವಿಧ ಚುನಾವಣೆಗಳಿಗೆ ಅಭ್ಯರ್ಥಿಗಳಾಗಬಹುದು.. ಅದಕ್ಕೆ www.prajaakeeya.org ವೆಬ್ಸೈಟ್ನಲ್ಲಿ ಮತದಾರರ ಶಿಫಾರಸ್ಸು ಪತ್ರ ಡೌನ್ಲೋಡ್ ಮಾಡಿಕೊಂಡು ಜನರಿಗೆ ಪ್ರಜಾಕೀಯ ಸಿದ್ದಾಂತದ ಬಗ್ಗೆ ತಿಳಿಸಿ ಮತದಾರರ ಶಿಫಾರಸ್ಸು ಪತ್ರದಲ್ಲಿ ಸಹಿ ಮತ್ತು ಅದರ ವೀಡಿಯೋ ಪಡೆದು ಇವುಗಳೊಂದಿಗೆ ಇದೇ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸುವುದು.

2. ಪ್ರಜಾಪ್ರಭು: ನೀವೇ ಪ್ರಜಾಪ್ರಭುಗಳಾಗಿ PRAJAAKEEYA ಮೊಬೈಲ್ ಅಪ್ಲಿಕೇಶನ್ ಆ್ಯಂಡ್ರಾಯ್ಡ್ ಹಾಗೂ iOS ನಲ್ಲಿ ಲಭ್ಯವಿದ್ದು ಇನ್ಸ್ಟಾಲ್ ಮಾಡಿಕೊಂಡು ಪ್ರಜಾಕೀಯದ ಸಿದ್ದಾಂತಗಳನ್ನು ಇತರರೊಡನೆ ಹಂಚಿಕೊಂಡು ಬೆಂಬಲಿಸುವುದು.

ಧನ್ಯವಾದಗಳು.. -ನಿಮ್ಮ ಉಪೇಂದ್ರ

#ಉತ್ತಮ_ಪ್ರಜಾಕೀಯ_ಪಕ್ಷ #ಯುಪಿಪಿ #ಪ್ರಜಾಕೀಯ

📱ಉತ್ತಮ ಪ್ರಜಾಕೀಯ ಪಕ್ಷದ ಅಧಿಕೃತ ಆ್ಯಂಡ್ರಾಯ್ಡ್ ಮೊಬೈಲ್ ಆ್ಯಪ್ ಅನ್ನು ಇನ್ಸ್ಟಾಲ್/ ಡೌನ್ಲೋಡ್ ಮಾಡಿಕೊಳ್ಳಲು ಈ ಕೆಳಗಿನ ಲಿಂಕ್ ಅನ್ನು ಬಳಸಿ 👇👇
https://play.google.com/store/apps/details?id=com.app.prajaakeeya

📲ಉತ್ತಮ ಪ್ರಜಾಕೀಯ ಪಕ್ಷದ ಅಧಿಕೃತ ಐಫೋನ್ ಮೊಬೈಲ್ ಆ್ಯಪ್ ಅನ್ನು ಇನ್ಸ್ಟಾಲ್/ ಡೌನ್ಲೋಡ್ ಮಾಡಿಕೊಳ್ಳಲು ಈ ಕೆಳಗಿನ ಲಿಂಕ್ ಅನ್ನು ಬಳಸಿ 👇👇
https://itunes.apple.com/us/app/prajaakeeya/id1316882222?ls=1&mt=8

Uttama Prajaakeeya Party | UPP | Official Website | Upendra UPP is an Indian political party based in Karnataka founded by Sri. Upendra. The main motto is to bring Professionalism in Politics.

17/01/2021

ಈ ಬೋರ್ಡ್ ನೋಡಿ ಸಾಕಷ್ಟು ಬೇಜಾರಾಯಿತು🤦 ಇರಬೇಕು ಪಕ್ಷಾಭಿಮಾನ ಆದರೆ ಈ ಲೆವೆಲಿಗಲ್ಲ 🤦
ಇದು ಕರ್ನಾಟಕ (ಕನ್ನಡದ) ಸರ್ಕಾರನಾ? 🤔🤔🤔

ಶಿವಮೊಗ್ಗದಲ್ಲಿ ನಡೆದ ಸಿಆರ್ ಪಿಎಫ್ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಸಂಪೂರ್ಣ ಹಿಂದಿ ಬ್ಯಾನರುಗಳನ್ನು ಬಳಸಿ, ಹಿಂದಿಯಲ್ಲೇ ನಿರೂಪಣೆ ಮಾಡಿರುವುದನ್ನು ಗಮನಿಸಿದೆ. ಇದು ಬೇರೇನೂ ಅಲ್ಲ, ಕನ್ನಡಿಗರ ಮೇಲೆ ಹಿಂದಿ ಸಾಮ್ರಾಜ್ಯಶಾಹಿಗಳು ಹೂಡಿರುವ ಪರೋಕ್ಷ ಯುದ್ಧ. ಕನ್ನಡತನವನ್ನು ನಾಶಗೊಳಿಸುವ ವ್ಯವಸ್ಥಿತ ದಾಳಿ. ಇದನ್ನು ಕನ್ನಡಿಗರೆಲ್ಲರೂ ಒಟ್ಟಾಗಿ ಖಂಡಿಸಬೇಕಿದೆ.

ಕನ್ನಡನಾಡಲ್ಲಿ ಕನ್ನಡವನ್ನೇ ಬಳಸಬೇಕೆಂಬುದು ಯಾವುದೇ ಸರ್ಕಾರಕ್ಕೆ ಇರಬೇಕಾದ ಸಾಮಾನ್ಯ ಪ್ರಜ್ಞೆ. ಇದು ಅವರಿಗೆ ಗೊತ್ತಿಲ್ಲವೆಂದೇನಿಲ್ಲ. ಉದ್ದೇಶಪೂರ್ವಕವಾಗಿಯೇ ಕನ್ನಡಿಗರ ಮೇಲೆ ಹಿಂದಿಯನ್ನು ಹೇರುತ್ತಿರುವ ಈ ದುರಹಂಕಾರವನ್ನು ಕನ್ನಡಿಗರು ಸಹಿಸಬೇಕಿಲ್ಲ. ನಾವು ಸಹಸ್ರಾರು ವರ್ಷಗಳಿಂದ ಕನ್ನಡಿಗರು, ಇಂಥ ಹುನ್ನಾರಗಳಿಗೆ ತಲೆಬಾಗುವುದಿಲ್ಲ.

ಕಾರ್ಯಕ್ರಮದಲ್ಲಿ‌ ಮುಖ್ಯಮಂತ್ರಿಗಳಾದಿಯಾಗಿ ಹಲವಾರು ಸಚಿವ ಸಂಪುಟದ ಸದಸ್ಯರು ಭಾಗವಹಿಸಿದ್ದರು. ಯಾರೊಬ್ಬರಿಗೂ ಸಹ ಈ ಕನ್ನಡವಿಲ್ಲದ ಹಿಂದೀಮಯ‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಮುಜುಗರ, ನಾಚಿಕೆ ಆಗಲಿಲ್ಲವೇ? ಇವರೆಲ್ಲರೂ ತಮ್ಮ ಕನ್ನಡತನವನ್ನು ದಿಲ್ಲಿ ಹಿಂದೀವಾಲಾಗಳಿಗೆ ಅಡವಿಟ್ಟಿದ್ದಾರೆಯೇ?

ಹಿಂದೀ ಸಾಮ್ರಾಜ್ಯಶಾಹಿ ಹಿಂದೆಂದಿಗಿಂತಲೂ‌ ಇಂದು ಆಕ್ರಮಣಕಾರಿಯಾಗಿದೆ. ಕನ್ನಡಿಗರೇ, ಏನು ಮಾಡ್ತೀರೋ‌ ಮಾಡಿ ನೋಡೋಣ ಎಂದು ಸವಾಲು ಹಾಕುತ್ತಿದೆ. ಈ‌ ಸವಾಲನ್ನು ನಾವು ಎದುರಿಸುತ್ತೇವೆ. ಕನ್ನಡ ನೆಲವನ್ನು, ಕನ್ನಡಿಗರ ಅಸ್ಮಿತೆಯನ್ನು ಉಳಿಸಿಕೊಳ್ಳುತ್ತೇವೆ. ಈ ಮರಾಮೋಸದ ಸಮರದಲ್ಲಿ ಗೆದ್ದೇಗೆಲ್ಲುತ್ತೇವೆ.

ಕನ್ನಡಿಗರು ಜಾತಿ, ಮತ, ಧರ್ಮ, ಪಂಥ, ಪಕ್ಷಗಳನ್ನು ಬದಿಗಿಟ್ಟು ಒಂದಾಗಬೇಕಾದ ಕಾಲವಿದು. ಈಗ ನಾವು ಮೈಮರೆತು ಕುಳಿತರೆ ನಮಗೆ ಉಳಿಗಾಲವಿಲ್ಲ. ಕನ್ನಡಿಗರೆಲ್ಲರೂ ಈ ದುಷ್ಟ ಹುನ್ನಾರಗಳ ವಿರುದ್ಧ ಹೋರಾಡೋಣ. ನಾವು ಹಿಂದಿ ಗುಲಾಮರಲ್ಲ‌ ಎಂದು ಸಾರೋಣ. ಹಿಂದಿ ಸಾಮ್ರಾಜ್ಯಶಾಹಿಯ ರಣಕೇಕೆಯನ್ನು ಹಿಮ್ಮೆಟ್ಟಿಸೋಣ.

17/01/2021

ಚುನಾವಣೆಯಲ್ಲಿ ಜನರು ಸೋಲಿಸಿದ ವ್ಯಕ್ತಿ ಪ್ರಜಾಪ್ರಭುತ್ವದಲ್ಲಿ ಮಂತ್ರಿ ಆಗುತ್ತಾರೆ ಇದು ಸರಿಯೇ ?!

16/01/2021

ಪ್ರಜಾಕೀಯ ತತ್ವದಡಿ ಗ್ರಾಮ ಪಂಚಾಯಿತಿ ಅರೇಹಳ್ಳಿ ಸದಸ್ಯ ಕಾರ್ಯಕ್ಕೆ ನೇಮಕವಾದ ಚೇತನ್ ಕುಮಾರ್ ಅವರನ್ನು ಪ್ರಜಾಕಿಯ ಸಂಸ್ಥಾಪಕರಾದ ಉಪೇಂದ್ರಕುಮಾರ್ ಅವರು ಬೇಟಿಯಾಗಲು ಬಂದ ಸಂದರ್ಭದಲ್ಲಿ ಕಿಕ್ಕಿರಿದು ಬಂದ ಸುದ್ದಿ ಮಾಧ್ಯಮದವರು ಇವರೇ ನಿಜವಾದ ಪ್ರಜಾಪ್ರಭುತ್ವ💓

Want your business to be the top-listed Government Service in Aland?

Click here to claim your Sponsored Listing.

Location

Telephone

Address

Aland
Aland
585314