ಕೆ ಆರ್ ಎಸ್ ಪಕ್ಷ ಮದ್ದೂರು - KRS Party Maddur Taluk

ಕೆ ಆರ್ ಎಸ್ ಪಕ್ಷ ಮದ್ದೂರು - KRS Party Maddur Taluk

Share

ಪ್ರಾದೇಶಿಕ, ಪ್ರಾಮಾಣಿಕ, ಜನಪರ ರಾಜಕಾರಣಕ್ಕಾಗಿ.

01/06/2026

ಬೆಂಗಳೂರಿನಿಂದ ಬಿಡದಿ-ಭೈರಮಂಗಲ ಚಲೋ.

ಫಲವತ್ತಾದ ಭೂಮಿ, ಸಮೃದ್ಧ ಜಲಸಂಪತ್ತು, ಬುದ್ಧಿವಂತ ಮತ್ತು ಕಾಯಕಜೀವಿ ರೈತರನ್ನು ಹೊಂದಿರುವ ಬಿಡದಿ ಭಾಗದ ಸುಮಾರು 7-8 ಸಾವಿರ ಎಕರೆ ಪ್ರಕೃತಿಯನ್ನು ನೆಲಸಮ ಮಾಡಿ, ಲಕ್ಷಾಂತರ ಮರಗಳನ್ನು ಕತ್ತರಿಸಿ, ಆ ಜಾಗವನ್ನು ಮೊದಲು ಬಟಾಬಯಲು ಮಾಡಿ ನಂತರ ಕಾಂಕ್ರೀಟ್ ಕಾಡು ಎಬ್ಬಿಸಿಯೇ ತೀರುವ ಪಾಪದ ಕೆಲಸಕ್ಕೆ ಭಾವಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಂದಾಗಿದ್ದಾರೆ. ಇದನ್ನು ಅಹಿಂಸಾತ್ಮಕವಾಗಿ ಮತ್ತು ನ್ಯಾಯಯುತವಾಗಿ ವಿರೋಧಿಸಲು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ - KRS Party ತೀರ್ಮಾನಿಸಿದೆ.

ಈ ನಿಟ್ಟಿನಲ್ಲಿ ಮುಂದಿನ ಶನಿವಾರ, ಜೂನ್ 6, 2026ರಂದು, ಬೃಹತ್ ಹೋರಾಟವನ್ನು ಹಮ್ಮಿಕೊಂಡಿದೆ. ದಯವಿಟ್ಟು ಎಲ್ಲರೂ ಈ ಹೋರಾಟದಲ್ಲಿ ಭಾವಹಿಸಬೇಕೆಂದು 🙏 ಮನವಿ ಮಾಡುತ್ತಿದ್ದೇವೆ.

ಏನೇ ಆಗಲಿ, ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ.

01/06/2026

Notice ವಿವರ

ತುಮಕೂರು ಜಿಲ್ಲೆಯ Nepokid ಮಾಜಿ ಗೃಹಸಚಿವ Dr.G. ಪರಮೇಶ್ವರ್ ಹಾಗೂ ಈವೆಂಟ್ ಮ್ಯಾನೇಜರ್ ಗಳಾದ IAS ,IPS ಗಳ ಆಡಳಿತದ ರೀತಿಯ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ಮೇಲಿನವರ ಅಣತಿಯಂತೆ ಬೆಳ್ಳಂ ಬೆಳಿಗ್ಗೆ ಚಿಕ್ಕನಾಯಕನಹಳ್ಳಿ ತಾಲೂಕಿನ ಭಟ್ಟರಹಳ್ಳಿ ಗ್ರಾಮದ ನನ್ನ ಜಮೀನಿನಲ್ಲಿ ಕೃಷಿ ಕೆಲಸ ಮಾಡುವಾಗ ತೋಟಕ್ಕೆ ಬಂದು ಪೋಲಿಸ್ ಗಿರಿ ಮಾಡುತ್ತಿರುವ ಪೊಲೀಸರು...

#ಮಲ್ಲಿಕಾರ್ಜುನಭಟ್ಟರಹಳ್ಳಿ #ಹಳದಿಸೇನೆ #ಚಿಕ್ಕನಾಯಕನಹಳ್ಳಿ #ತುಮಕೂರು #ಕರ್ನಾಟಕ್ಕಾಗಿನಾವು

01/06/2026

ತುಮಕೂರು ಜಿಲ್ಲೆಯ Nepodik ಮಾಜಿ ಗೃಹಸಚಿವ Dr.G. ಪರಮೇಶ್ವರ್ ಹಾಗೂ ಈವೆಂಟ್ ಮ್ಯಾನೇಜರ್ ಗಳಾದ IAS ,IPS ಗಳ ಆಡಳಿತದ ರೀತಿಯ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ಮೇಲಿನವರ ಅಣತಿಯಂತೆ ಬೆಳ್ಳಂ ಬೆಳಿಗ್ಗೆ ಚಿಕ್ಕನಾಯಕನಹಳ್ಳಿ ತಾಲೂಕಿನ ಭಟ್ಟರಹಳ್ಳಿ ಗ್ರಾಮದ ನನ್ನ ಜಮೀನಿನಲ್ಲಿ ಕೃಷಿ ಕೆಲಸ ಮಾಡುವಾಗ ತೋಟಕ್ಕೆ ಬಂದು ಪೋಲಿಸ್ ಗಿರಿ ಮಾಡುತ್ತಿರುವ ಪೊಲೀಸರು...

29/05/2026
29/05/2026

ಭೈರಮಂಗಲದ ಫಲವತ್ತಾದ ಭೂಮಿಯಲ್ಲಿ ಕೆ ಆರ್ ಎಸ್ ಪಕ್ಷದ ಹೋರಾಟ

Photos from ಕೆ ಆರ್ ಎಸ್ ಪಕ್ಷ ಮದ್ದೂರು - KRS Party Maddur Taluk's post 24/05/2026

ಮದ್ದೂರು ಕಾವೇರಿ ನೀರಾವರಿ ನಿಗಮದ ಕೆಮ್ಮಣ್ಣುನಾಲೆ ಕಾಮಗಾರಿಯಲ್ಲಿ ಗೋಲ್‌ಮಾಲ್? ಬೆಚ್ಚಿ ಬೀಳಿಸುವ ಅಂದಾಜುಪಟ್ಟಿಯ ಹುಳುಕುಗಳು!

​ಮಂಡ್ಯ ಜಿಲ್ಲೆಯ ಮದ್ದೂರು ಭಾಗದ 'ಕೆಮ್ಮಣ್ಣುನಾಲೆ' ಕಾಮಗಾರಿಯ ಅಂದಾಜುಪಟ್ಟಿಯನ್ನು ಪರಿಶೀಲಿಸಿದಾಗ, ತಾಂತ್ರಿಕವಾಗಿ ಮತ್ತು ಆರ್ಥಿಕವಾಗಿ ನಷ್ಟ ಆಗುವಂತಹ ಸ್ಪಷ್ಟ ದೋಷಗಳು ಕಂಡುಬಂದಿವೆ. ಅಧಿಕಾರಿಗಳ ಕಣ್ತಪ್ಪೋ ಇಲ್ಲವೇ ಉದ್ದೇಶ ಪೂರ್ವಕವೋ? ನೀವೇ ಓದಿ.

200 ಮೀಟರ್ ಕಲ್ಲುಗಳ ಲೆಕ್ಕಾಚಾರದಲ್ಲಿ ಮ್ಯಾಜಿಕ್ ಮಾಡಿದ್ದಾರೆ. ರಸ್ತೆಯ ಒಟ್ಟು ಉದ್ದ ಸುಮಾರು 21.6 ಕಿ.ಮೀ ಇದೆ. ನಿಯಮದ ಪ್ರಕಾರ ಪ್ರತಿ ಕಿಲೋಮೀಟರ್‌ಗೆ 4 ಕಲ್ಲುಗಳಂತೆ (200, 400, 600, 800 ಮೀಟರ್) ಅಂದಾಜು 87 ಕಲ್ಲುಗಳು ಬೇಕಾಗುತ್ತವೆ. ರಸ್ತೆಯ ಎರಡೂ ಬದಿ ಹಾಕಿದರೂ ಒಟ್ಟು 174 ಕಲ್ಲುಗಳಾಗುತ್ತವೆ. ಆದರೆ, ಅಂದಾಜುಪಟ್ಟಿಯಲ್ಲಿ ಇದನ್ನು ಬರೋಬ್ಬರಿ 195 ಎಂದು ತೋರಿಸಲಾಗಿದೆ. ಈ ಹೆಚ್ಚುವರಿ ಕಲ್ಲುಗಳ ಲೆಕ್ಕಾಚಾರ ಎಲ್ಲಿಂದ ಬಂತು? ಇದು ಸ್ಪಷ್ಟವಾದ ಹೆಚ್ಚುವರಿ ಬಿಲ್ ಮಾಡುವ ತಂತ್ರವೇ?

ಕಲ್ಲುಗಳಿಗೆ ಬಣ್ಣ ಬಳಿಯುವ ಲೆಕ್ಕದಲ್ಲಿ ಕೂಡ ದೊಡ್ಡ ವಂಚನೆಯ ಸಾಧ್ಯತೆ ಇದೆ. ಹೊಸ ಕಾಂಕ್ರೀಟ್ ಮೇಲ್ಮೈಗೆ ಬಣ್ಣ ಬಳಿಯುವ ಐಟಂ 25 ರಲ್ಲಿ ಬಹುದೊಡ್ಡ ಪ್ರಮಾದವಿದೆ. ಲೋಕೋಪಯೋಗಿ ಇಲಾಖೆ ನಿಯಮಾವಳಿಗಳ ಪ್ರಕಾರ ಪೇಂಟಿಂಗ್ ಕಾಮಗಾರಿಯನ್ನು ಯಾವಾಗಲೂ ಚದರ ಮೀಟರ್‌ಗಳಲ್ಲಿ ಅಳೆಯಬೇಕು. ಆದರೆ ಇಲ್ಲಿ ಗಡಿ ಕಲ್ಲುಗಳ ಒಟ್ಟು ಸಂಖ್ಯೆಯನ್ನೇ (2600 Nos) ಪೇಂಟಿಂಗ್ ಅಳತೆಗೂ ನೇರವಾಗಿ ನಮೂದಿಸಲಾಗಿದೆ. ಚದರ ಮೀಟರ್ ದರವನ್ನು ಸಂಖ್ಯೆಗಳಿಗೆ ಗುಣಿಸಿದರೆ ಅಂದಾಜು ಮೊತ್ತವು ವಾಸ್ತವಕ್ಕಿಂತ ಹೆಚ್ಚಾಗಿ, ಸರ್ಕಾರದ ಹಣಕಾಸು ಸೋರಿಕೆಗೆ ದಾರಿ ಮಾಡಿಕೊಡುತ್ತದೆ.

ಗಡಿ ಕಲ್ಲುಗಳ ಬಳಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ತೋರಿಸಲಾಗಿದೆ. 21.6 ಕಿ.ಮೀ ಉದ್ದದ ನಾಲಾ ಸರ್ವೀಸ್ ರಸ್ತೆಗೆ ಬರೋಬ್ಬರಿ 2600 ಗಡಿ ಕಲ್ಲುಗಳನ್ನು ಅಂದಾಜಿಸಲಾಗಿದೆ. ಅಂದರೆ ರಸ್ತೆಯುದ್ದಕ್ಕೂ ಪ್ರತಿ 8 ರಿಂದ 9 ಮೀಟರ್‌ಗೊಂದು ಕಲ್ಲನ್ನು ನೆಡಬೇಕಾಗುತ್ತದೆ. ನಾಲಾ ವ್ಯಾಪ್ತಿಯಲ್ಲಿ ಇಷ್ಟು ಹತ್ತಿರದಲ್ಲಿ ಕಲ್ಲುಗಳನ್ನು ನೆಡುವ ಅಗತ್ಯವಿದೆಯೇ? ಗಡಿ ಕಲ್ಲುಗಳ ಸಂಖ್ಯೆ ಹೆಚ್ಚಾದಷ್ಟೂ, ಅದಕ್ಕೆ ಹೊಡೆಯುವ ಬಣ್ಣದ ಲೆಕ್ಕಾಚಾರವೂ ಹೆಚ್ಚಾಗಿ ಬೊಕ್ಕಸಕ್ಕೆ ನಷ್ಟವಾಗುತ್ತದೆ.

ಈ ಅಂದಾಜುಪಟ್ಟಿಯಲ್ಲಿ ಕವರ್ ಡಕ್ಟ್ ಚೈನೇಜ್ ವಿವರಗಳೇ ಇಲ್ಲ. 750 ಮೀಟರ್ ಉದ್ದದ ಕವರ್ ಡಕ್ಟ್‌ ಉಲ್ಲೇಖ ಮಾಡಲಾಗಿದೆ. ಆದರೆ ಈ 21 ಕಿ.ಮೀ ರಸ್ತೆಯಲ್ಲಿ ಈ 750 ಮೀಟರ್ ಒಂದೇ ಕಡೆ ಇದೆಯೇ ಅಥವಾ ಬೇರೆ ಬೇರೆ ಕಡೆ ತುಂಡು-ತುಂಡಾಗಿರುವ ಡಕ್ಟ್‌ಗಳ ಒಟ್ಟು ಉದ್ದವೇ ಎಂಬುದಕ್ಕೆ ಯಾವುದೇ ಚೈನೇಜ್ ವಿವರಗಳಿಲ್ಲ.

ಈ ಅಂದಾಜುಪಟ್ಟಿಯನ್ನು ಮದ್ದೂರಿನ ಕಾವೇರಿ ನೀರಾವರಿ ನಿಗಮ ನಿಯಮಿತ, ನಂ.3, ವಿ.ಸಿ. ಉಪ ವಿಭಾಗದ ಅಧಿಕಾರಿಗಳು ಸಿದ್ಧಪಡಿಸಿದ್ದು, ಮಂಡ್ಯ ವಿ.ಸಿ. ವಿಭಾಗದ ಇಇ ಹಾಗೂ ಎಸ್‌ಸಿ ಪರಿಶೀಲಿಸಿದ್ದಾರೆ. ಇಷ್ಟು ದೊಡ್ಡ ಮಟ್ಟದ ತಾಂತ್ರಿಕ ಹುಳುಕುಗಳು ಅಧಿಕಾರಿಗಳ ಕಣ್ಣಿಗೆ ಯಾಕೆ ಬಿದ್ದಿಲ್ಲ? ​ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ಈ ಅಂದಾಜುಪಟ್ಟಿಯನ್ನು ಮರುಪರಿಶೀಲಿಸಬೇಕಿದೆ.

​ #ಕೆಮ್ಮಣ್ಣುನಾಲೆ

23/05/2026

ಪಿರಿಯಾಪಟ್ಟಣ ಮೈಸೂರು ಜಿಲ್ಲೆ

Want your business to be the top-listed Government Service in Bangalore?

Click here to claim your Sponsored Listing.

Location

Category

Telephone

Address

208, Drive Rajkumar Rd, Prakash Nagar, Rajajinagar, Bengaluru
Bangalore
560021