20/04/2026
ಯಾವುದೇ ರಾಜ್ಯಗಳ ಹಕ್ಕುಗಳೊಂದಿಗೆ ರಾಜಿ ಮಾಡಿಕೊಳ್ಳದೆ ನಾರಿ ಶಕ್ತಿ ವಂದನಾ ಅಧಿನಿಯಮವು ಲೋಕಸಭಾ ಸ್ಥಾನಗಳನ್ನು 543 ರಿಂದ 815ಕ್ಕೆ ವಿಸ್ತರಿಸಿ 33% ಮಹಿಳಾ ಮೀಸಲಾತಿಯನ್ನು ಹೆಚ್ಚುವರಿ ಸ್ಥಾನಗಳ ಮೂಲಕ ನೀಡುವುದನ್ನು ಪ್ರಸ್ತಾಪಿಸಿತ್ತು.
ಯಾವುದೇ ಹಾಲಿ ಸಂಸದರು ತಮ್ಮ ಸ್ಥಾನಗಳನ್ನು ಕಳೆದುಕೊಳ್ಳುತ್ತಿರಲಿಲ್ಲ. ಯಾವುದೇ ರಾಜ್ಯಗಳು ತಮ್ಮ ಪಾಲು ಕಳೆದುಕೊಳ್ಳುತ್ತಿರಲಿಲ್ಲ, ಹೆಚ್ಚು ಧ್ವನಿಗಳು ಸೇರಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲಿದ್ದವು.
ಆದರೂ ಪ್ರತಿಪಕ್ಷಗಳು ಮಹಿಳೆಯರಿಗೆ ಅವರ ಹಕ್ಕು ನೀಡುವುದನ್ನು ಮತ್ತೊಮ್ಮೆ ವಿರೋಧಿಸಿವೆ.
20/04/2026
ನಾಡಿನ ಸಮಸ್ತ ಜನತೆಗೆ ಅಕ್ಷಯ ತೃತೀಯ ಹಬ್ಬದ ಹಾರ್ದಿಕ ಶುಭಾಶಯಗಳು. 🙏🏼
#ಅಕ್ಷಯತೃತೀಯ
20/04/2026
ಇಂದು ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಮೈಸೂರ್ ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಎದುರಿಗಿರುವ ಬಸವಧಾಮದಲ್ಲಿ ಶರಣರ ಸಾಂಸ್ಕೃತಿಕ ಕಂಪು ಮೇಳೈಸಿತ್ತು.
ಜಗಜ್ಯೋತಿ ಬಸವೇಶ್ವರರ ಜಯಂತಿಯ ಶುಭ ಸಂದರ್ಭದಲ್ಲಿ, ನಾನು ನನ್ನ ಕುಟುಂಬ ಸಮೇತ ಭಕ್ತಿಯಿಂದ ಪಾಲ್ಗೊಂಡು, ಅಣ್ಣ ಬಸವಣ್ಣನವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದೆ. ಕಾರ್ಯಕ್ರಮಕ್ಕೆ ಮೆರುಗು ನೀಡುವಂತೆ ಖ್ಯಾತ ಗಾಯಕ ಶ್ರೀ ಶಶಿಧರ್ ಕೋಟೆ ಅವರಿಂದ 'ವಚನಗಾನ ವೈಭವ' ಜರುಗಿತು. ಅರ್ಥಪೂರ್ಣ ವಚನಗಳ ಗಾಯನವು ನೆರೆದಿದ್ದ ಭಕ್ತರ ಮನಸ್ಸಿನಲ್ಲಿ ಶಾಂತಿ ಮತ್ತು ಸೌಹಾರ್ದತೆಯ ಭಾವವನ್ನು ಮೂಡಿಸಿತು.
ಈ ಸಮಾರಂಭದಲ್ಲಿ ಕೇವಲ ಭಕ್ತಿ ಮಾತ್ರವಲ್ಲದೆ ಪ್ರತಿಭೆಗೂ ಮನ್ನಣೆ ನೀಡಲಾಯಿತು. ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 21ನೇ ರಾಂಕ್ ಪಡೆದು ಕ್ಷೇತ್ರದ ಕೀರ್ತಿ ಹೆಚ್ಚಿಸಿದ ಕಮಲಾನಗರದ ನಿವಾಸಿ ಪ್ರವೀಣ್ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಶರಣರ ಆಶೀರ್ವಾದದೊಂದಿಗೆ ಈ ಯುವ ಪ್ರತಿಭೆ ಮುಂದಿನ ದಿನಗಳಲ್ಲಿ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಲಿ ಎಂಬ ಹಾರೈಕೆ ನಮ್ಮದಾಗಿತ್ತು.
"ಕಾಯಕವೇ ಕೈಲಾಸ" ಎಂಬ ತತ್ವದಡಿ ನಡೆದ ಈ ಕಾರ್ಯಕ್ರಮವು ಬಸವಣ್ಣನವರ ಸಮಾನತೆಯ ಸಂದೇಶವನ್ನು ಮತ್ತೊಮ್ಮೆ ನೆನಪಿಸಿಕೊಟ್ಟಿತು.
20/04/2026
ಕಾಯಕ ಮತ್ತು ದಾಸೋಹದ ಹಾದಿಯಲ್ಲಿ ನಾವೆಲ್ಲರೂ ಸಾಗೋಣ.
"ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ..." 🙏🏼
ಸರ್ವರಿಗೂ ಬಸವ ಜಯಂತಿಯ ಶುಭಾಶಯಗಳು.
16/04/2026
ಮೋದಿ ಸರ್ಕಾರದಡಿ ಮಹಿಳಾ ಸಬಲೀಕರಣ ರಚನಾತ್ಮಕ,
ಬದಲಾವಣೆ ಕಂಡಿದೆ.
➡️ ಆರ್ಥಿಕ ಸಬಲೀಕರಣ
➡️ ಮಹಿಳೆಯರ ವಿಕಾಸ
➡️ ಘನತೆಯುತ ಜೀವನ
➡️ ಸುರಕ್ಷತೆ ಮತ್ತು ಭವಿಷ್ಯ
ಈ ಮಹತ್ತರ ಬದಲಾವಣೆಯು ಕೇವಲ ಒಂದು ಪ್ರದೇಶಕ್ಕೆ ಸೀಮಿತವಾಗಿಲ್ಲ, ಇದು ಎಲ್ಲಾ ವಲಯಗಳಲ್ಲೂ ಈಗ ಸ್ಪಷ್ಟವಾಗಿ ಗೋಚರಿಸುತ್ತಿದೆ.
14/04/2026
ಡಾ. ಬಿ. ಆರ್. ಅಂಬೇಡ್ಕರ್ ಅವರ ಸಾಮಾಜಿಕ, ಆರ್ಥಿಕ ಮತ್ತು ಕಾನೂನಿಗೆ ಸಂಬಂಧಿಸಿದ ದೃಷ್ಟಿಕೋನವು ಎಲ್ಲರನ್ನೊಳಗೊಂಡ ಸಮಾಜ ನಿರ್ಮಾಣ ಮತ್ತು ರಾಷ್ಟ್ರದ ಉತ್ತಮ ಆಡಳಿತದ ದಿಕ್ಕಿನೆಡೆಗೆ ನಮಗೆ ಯಾವಾಗಲೂ ಮಾರ್ಗದರ್ಶನ ನೀಡುತ್ತದೆ.
ಭಾರತ ರತ್ನ ಬಾಬಾಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಅವರ ಜಯಂತಿಯಂದು ಶತ ಶತ ಪ್ರಣಾಮಗಳು. 🙏🏼🙏🏼🙏🏼
13/04/2026
ನಾರಿ ಶಕ್ತಿಯ ಕಲ್ಯಾಣಕ್ಕೆ ಸಮರ್ಪಿತಗೊಂಡಿದೆ - ಮೋದಿ ಸರ್ಕಾರ 🚺 💪
4% ರಿಂದ ಆರಂಭಗೊಂಡ ಈ ಪಯಣ ಈಗ 33% ಕ್ಕೆ ಐತಿಹಾಸಿಕ ಏರಿಕೆ ಕಾಣಲಿದೆ.
ನಾರಿ ಶಕ್ತಿ ವಂದನಾ ಅಧಿನಿಯಮದ ಬಳಿಕ ಸಂಸತ್ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರ ಧ್ವನಿ ಗಟ್ಟಿಯಾಗಿ ಮೊಳಗಲಿದೆ.
✅ ಮಹಿಳಾ ನಾಯಕತ್ವಕ್ಕೆ ಹೊಸ ಗುರುತು
✅ ವಿಕಸಿತ ಭಾರತದ ಬಲಿಷ್ಠ ಆಧಾರ
ಸಂಕಲ್ಪ ಮಾಡಿದ್ದನ್ನು ಸಾಕಾರಗೊಳಿಸಲಾಗುತ್ತಿದೆ. 🇮🇳
06/04/2026
ದೇಶದ ಹಿತಾಸಕ್ತಿಯನ್ನೇ ಆದ್ಯತೆಯಾಗಿಸಿಕೊಂಡು ಸೇವಾ ಭಾವನೆಯೊಂದಿಗೆ ಬಿಜೆಪಿಯನ್ನು ಮುನ್ನಡೆಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿವರು...
ಅವರೆಲ್ಲರ ದೂರದೃಷ್ಟಿ, ಸಮರ್ಥ ನಾಯಕತ್ವದಿಂದಾಗಿ ಬಿಜೆಪಿಯು ಇಂದು ಅತಿದೊಡ್ಡ ರಾಜಕೀಯ ಪಕ್ಷವಾಗಿ ಬೆಳೆದಿದೆ.
ಸೇವೆಯೇ ಗುರಿ ಎಂಬ ಸಮರ್ಪಣಾ ಮನೋಭಾವದೊಂದಿಗೆ ಶ್ರಮಿಸುತ್ತಿರುವ ಪ್ರತಿಯೊಬ್ಬರಿಗೂ ಬಿಜೆಪಿ ಸ್ಥಾಪನಾ ದಿನದ ಶುಭಾಶಯಗಳು.
06/04/2026
ಕಾರ್ಯಕರ್ತರ ಬೆವರಿನಿಂದ ಕಟ್ಟಿದ ಮಹಾಸೌಧ: ಬಿಜೆಪಿ 🪷
ಬಿಜೆಪಿಯ ಉಗಮ ಮತ್ತು ಬೆಳವಣಿಗೆಯ ಹಿಂದೆ ಅಚಲವಾದ ರಾಷ್ಟ್ರೀಯತಾ ಸಿದ್ಧಾಂತವಿದೆ. ಜನಸಂಘದ ಕಾಲದಿಂದಲೂ 'ದೇಶ ಮೊದಲು, ಆಮೇಲೆ ಪಕ್ಷ, ಕೊನೆಯಲ್ಲಿ ನಾನು' ಎಂಬ ತತ್ವವನ್ನು ಕಾರ್ಯಕರ್ತರು ಮೈಗೂಡಿಸಿಕೊಂಡಿದ್ದಾರೆ. ಮಾಧ್ಯಮಗಳು ಈ ಪಕ್ಷವನ್ನು ನಿರ್ಲಕ್ಷಿಸಿದಾಗ ಅಥವಾ ವಿರೋಧಿಸಿದಾಗಲೂ, ಕಾರ್ಯಕರ್ತರು ಮನೆ ಮನೆಗೆ ತೆರಳಿ ಸಿದ್ಧಾಂತವನ್ನು ತಲುಪಿಸುವ ಕೆಲಸ ಮಾಡಿದರು. ಪತ್ರಿಕೆಗಳ ಬೆಂಬಲವಿಲ್ಲದ ಕಾಲದಲ್ಲೂ ಗೋಡೆ ಬರಹಗಳ ಮೂಲಕ, ಕರಪತ್ರಗಳ ಮೂಲಕ ಪಕ್ಷದ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸಿದ ಕೀರ್ತಿ ಕಾರ್ಯಕರ್ತರಿಗೆ ಸಲ್ಲುತ್ತದೆ.
#ಬಿಜೆಪಿಸ್ಥಾಪನಾದಿನ
BJP Karnataka
Bharatiya Janata Party (BJP)
06/04/2026
ಬಿಜೆಪಿಯ ಸಮಸ್ಥ ಕಾರ್ಯಕರ್ತರಿಗೆ ಸಂಸ್ಥಾಪನಾದಿನದ
ಹಾರ್ದಿಕ ಶುಭಾಶಯಗಳು.
ಸಂಕಲ್ಪ, ಸೇವೆ ಮತ್ತು ಸಮರ್ಪಣೆಯಿಂದ ಭಾರತೀಯ ಜನತಾ ಪಾರ್ಟಿಯನ್ನು ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಬೆಳೆಸಿದ ಪ್ರತಿಯೊಬ್ಬ ದೇವದುರ್ಲಭ ಕಾರ್ಯಕರ್ತರಿಗೆ ಬಿಜೆಪಿ ಸ್ಥಾಪನಾ ದಿನದ ಶುಭಾಶಯಗಳು.
ಪಕ್ಷದ ಪ್ರತಿಯೊಂದು ಹೆಜ್ಜೆಯಲ್ಲೂ ಕಾರ್ಯಕರ್ತರ ತ್ಯಾಗ, ಹಿರಿಯರ ಮಾರ್ಗದರ್ಶನ ಮತ್ತು ಜನರ ವಿಶ್ವಾಸವಿದೆ.
ಸ್ಥಾಪನಾ ದಿನದ ಈ ಶುಭ ಸಂದರ್ಭದಲ್ಲಿ, ನಮ್ಮ ಸಂಘಟನೆಯ ಶಕ್ತಿಯನ್ನು ಮತ್ತಷ್ಟು ಬಲಪಡಿಸಿ, ಜನಸೇವೆಗಾಗಿ ನಿಷ್ಠೆಯಿಂದ ಮುಂದುವರೆಯುವ ಸಂಕಲ್ಪ ಮಾಡೋಣ. 🙏🏼
#ಬಿಜೆಪಿಸ್ಥಾಪನಾದಿನ
28/03/2026
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮವು 29 ಮಾರ್ಚ್ 2026 ರಂದು ಬೆಳಿಗ್ಗೆ 11 ಗಂಟೆಗೆ ಪ್ರಸಾರವಾಗಲಿದೆ.
27/03/2026
ನಾಡಿನ ಸಮಸ್ತ ಜನತೆಗೆ ಶ್ರೀರಾಮನವಮಿ ಹಬ್ಬದ ಹಾರ್ದಿಕ ಶುಭಾಶಯಗಳು. 💛❤️🙏🏼
ಮರ್ಯಾದಾಪುರುಷೋತ್ತಮ ಶ್ರೀರಾಮಚಂದ್ರನ ಸದ್ಗುಣಗಳನ್ನು ನಮ್ಮಲ್ಲಿ ಬೆಳೆಸಿಕೊಂಡು ಸಮಾಜಕ್ಕೆ ಒಳಿತನ್ನು ಮಾಡೋಣ.