16/03/2026
🌞MANOVIKASINI – Summer Value & Leadership Camp 2026 🌞
Arya Samaj, V.V. Puram, Bengaluru is happy to invite children to a 14-day enriching summer camp designed to nurture values, leadership, patriotism, and holistic development.
This unique camp blends Vedic wisdom with fun activities, helping children build strong character, confidence, and teamwork skills.
✨ Camp Highlights:
* Daily Yajna & Bhajan
* Veda mantras & Shlokas
* Vedic values & Samskruta Sambhashane
* Stories of National Heroes and Rashtra Bhakti
* Fun hands on science activites.
* Yoga, Games, Arts & Theatre
* Seva Day at Gaushala
* Leadership & communication activities
* Final Talent Day stage performance
📅 Dates: 13th – 26th April 2026 (14 Days)
⏰ Time: 9:30 AM – 4:30 PM (Full Day Camp)
💰 Camp Fee: ₹3000
(Includes healthy lunch, materials & Gaushala visit)
📍 Venue: Arya Samaj Mandira, V.V. Puram, Bengaluru
📞 Registration Contact:
9606228333 | 9738676611
Give your children a summer filled with learning, culture, discipline, and joy.
26/12/2025
ವಿಶ್ವೇಶ್ವರಪುರಂ ಆರ್ಯ ಸಮಾಜದಲ್ಲಿ ಪ್ರತಿ ಭಾನುವಾರ ವಿಶೇಷ ಯಜ್ಞ ಮತ್ತು ಸತ್ಸಂಗ ಕಾರ್ಯಕ್ರಮವಿರುತ್ತದೆ. 28.12.2025 ರಂದು ಶ್ರೀ. ವಿವೇಕ್ ಜೆ,(BAMS, MS(Ayu) PhD), ಪ್ರಾಧ್ಯಾಪಕರು, ಶಲ್ಯತಂತ್ರ ವಿಭಾಗ ,ಶ್ರೀ ಶ್ರೀ ಆಯುರ್ವೇದ ಆಸ್ಪತ್ರೆ, ಬೆಂಗಳೂರು, ಇವರು ಮಾನಸ ಪ್ರಕೃತಿ ಎಂಬ ವಿಷಯದ ಕುರಿತಾಗಿ ಮಾತನಾಡಲಿದ್ದಾರೆ ಎಲ್ಲ ವೇದಾಭಿಮಾನಿಗಳಿಗೂ ಪ್ರೀತಿಪೂರ್ವಕ ಸ್ವಾಗತ.
ಸಮಯ: ಬೆಳಗ್ಗೆ 8 ಗಂಟೆ
ದಿನಾಂಕ: 28.12.25
ಸ್ಥಳ: ಆರ್ಯ ಸಮಾಜ, ಸ್ವಾಮಿ ಶ್ರದ್ಧಾನಂದ ಭವನ,
ವಿ, ವಿ ಪುರಂ, ಬೆಂಗಳೂರು.
ತಪ್ಪದೇ ಬನ್ನಿ🙏🏻
19/12/2025
ವಿಶ್ವೇಶ್ವರಪುರಂ ಆರ್ಯ ಸಮಾಜದಲ್ಲಿ ಪ್ರತಿ ಭಾನುವಾರ ವಿಶೇಷ ಯಜ್ಞ ಮತ್ತು ಸತ್ಸಂಗ ಕಾರ್ಯಕ್ರಮವಿರುತ್ತದೆ. 21.12.2025 ರಂದು ಬೆಂಗಳೂರಿನ DAV ಪಬ್ಲಿಕ್ ಶಾಲೆಯ ನಿರ್ದೇಶಕರಾದ, ಶ್ರೀಮತಿ. ಡಾ. ಶ್ರದ್ಧಾ ಪ್ರಮೋದ್ ರವರು ಗಾಯತ್ರಿ ಮಂತ್ರ ಮತ್ತು ವೈದಿಕ ಜೀವನ ಎಂಬ ವಿಷಯದ ಕುರಿತಾಗಿ ಮಾತನಾಡಲಿದ್ದಾರೆ ಎಲ್ಲ ವೇದಾಭಿಮಾನಿಗಳಿಗೂ ಪ್ರೀತಿಪೂರ್ವಕ ಸ್ವಾಗತ.
ಸಮಯ: ಬೆಳಗ್ಗೆ 8 ಗಂಟೆ
ದಿನಾಂಕ: 21.12.25
ಸ್ಥಳ: ಆರ್ಯ ಸಮಾಜ, ಸ್ವಾಮಿ ಶ್ರದ್ಧಾನಂದ ಭವನ,
ವಿ, ವಿ ಪುರಂ, ಬೆಂಗಳೂರು.
ತಪ್ಪದೇ ಬನ್ನಿ🙏🏻
18/11/2025
16.11.2025, ಭಾನುವಾರ Dr. ಹರೀಶ್ ಚಂದ್ರ ಅವರ ಸತ್ಸಂಗ ಬಹಳ ಗಹನವಾದ ವಿಚಾರಗಳನ್ನು ಒಳಗೊಂಡಿತ್ತು. ಜ್ಞಾನ - ಕರ್ಮ - ಭೋಗ ಎಂಬ ಲೋಕಾರೂಢಿಯ ಸರಪಳಿಯಿಂದ ಬಿಡಿಸಿಕೊಂಡು
ಜ್ಞಾನ - ಕರ್ಮ - ಉಪಾಸನೆಯ ಕಡೆಗೆ ಹೋಗಬೇಕಾದ ಅಗತ್ಯತೆಯನ್ನು ಅವರು ಉದಾಹರಣೆಗಳ ಮೂಲಕ ತಿಳಿಸಿಕೊಟ್ಟರು.
ಈ ದಾರಿ ವಿಶ್ವಕ್ಕೆ ಮಾರ್ಗದರ್ಶಕ ಎಂದು ಮಹರ್ಷಿ ದಯಾನಂದರು ತಿಳಿಸಿಕೊಟ್ಟರು, ಅವರ ಮಾರ್ಗದಲ್ಲೇ ನಾವೆಲ್ಲ ನಡೆಯೋಣ ಎಂಬುದು ಅವರ ಸತ್ಸಂಗದ ತಿರುಳಾಗಿತ್ತು.
* ಪ್ರತಿ ಭಾನುವಾರ ಬೆಳಿಗ್ಗೆ 8 ಗಂಟೆಗೆ ವೈದಿಕ ಹವನ ನಂತರ ಸತ್ಸಂಗವಿರುತ್ತದೆ. ಆಸಕ್ತರೆಲ್ಲರೂ ಭಾಗವಹಿಸಬಹುದು.*
ಸ್ಥಳ : ಆರ್ಯ ಸಮಾಜ, ಶ್ರದ್ದಾನಂದ ಭವನ
ವಿ ವಿ ಪುರಂ, ಬೆಂಗಳೂರು.
ಸಂಪರ್ಕಿಸಿ: 9606228333
18/11/2025
ವಿದ್ಯಾಮಂಥನ. *೨*
ಆರ್ಯ ಸಮಾಜ, ವಿ ವಿ ಪುರಂ, ರಾಜ್ಯದ ಕನ್ನಡ ಮಾಧ್ಯಮದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಕಾರ ನೀಡುವ ಉದ್ದೇಶದಿಂದ " ವಿದ್ಯಾಮಂಥನ " ಯೋಜನೆಯಡಿಯಲ್ಲಿ ಕನಕಪುರದ ಕೋಡಿಹಳ್ಳಿ ಹೋಬಳಿಯ, ಮಲ್ಲಾಪುರದಲ್ಲಿರುವ ಅಪ್ಸ ಸುರಕ್ಷಾ ಕೇಂದ್ರದ ೧೦ ವಿದ್ಯಾರ್ಥಿಗಳಿಗೆ ಅಂತರ್ಜಾಲದ ಮೂಲಕ ಶಿಕ್ಷಣ, ಪರೀಕ್ಷಾ ತಯಾರಿ, ಪ್ರಶ್ನೋತ್ತರ ಕೈಪಿಡಿ ಮುಂತಾದವನ್ನು ವಿತರಿಸಲಾಯಿತು.
"ವಿದ್ಯಾಮಂಥನ"ದ ಮೂಲಕ ಮಕ್ಕಳು ಜ್ಞಾನಾಮೃತವನ್ನು ಪಡೆಯಲಿ ಎಂದು ಹಾರೈಸುತ್ತೇವೆ.
26/09/2025
Namaste,
"Vidyamanthana" is an initiative of tchr.app aimed at supporting Class 10 students of Government and Aided Schools that face a shortage of qualified teachers. The program provides students with comprehensive support, including high-quality study material, question-and-answer formats, and video tutoring through both recorded and live sessions.
In alignment with the commitment made on 3rd August 2025 during the Shravani Parva celebrations, Arya Samaj V.V. Puram formally launched this program on 12th September 2025.
The first beneficiaries of this initiative are 25 students of Thimmarayaswamy High School, Bahadurpura, Anekal, Bangalore. On this occasion, students received physical copies of the study material, along with guidance on accessing and utilizing the licensed online content, in a simple yet meaningful program held on the school premises.
The program was inaugurated by Sri Balakrishna Arya, Vice-President of Arya Samaj V.V. Puram, who conveyed best wishes to the students on behalf of Dr. Radhakishan Varma, President, Mr. Balaji, Secretary, and all the trustees and members of Arya Samaj V.V. Puram.
09/08/2025
ವಿಶ್ವೇಶ್ವರಪುರಂನ ಶ್ರದ್ಧಾನಂದ ಭವನದಲ್ಲಿ ಆಗಸ್ಟ್ 3, ಭಾನುವಾರದಂದು, ಆರ್ಯ ಸಮಾಜ “ಶ್ರಾವಣಿ ಪರ್ವ” ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ ಮಾತನಾಡಿದ ವಿಜಯವಾಣಿ ಪತ್ರಿಕೆಯ ಸಹಾಯಕ ಸುದ್ದಿ ಸಂಪಾದಕರಾದ ಶ್ರೀ. ರವೀಂದ್ರ ದೇಶಮುಖರವರು, ಜ್ಞಾನವನ್ನು ಪಡೆಯುವುದರ ಜೊತೆಗೆ ಸಂತೋಷದಿಂದ ಇರುವುದೂ ಸಹ ಬಹಳ ಮುಖ್ಯ. ತಮ್ಮ ನೋವನ್ನು ಬದಿಗಿಟ್ಟು ಮತ್ತೊಬ್ಬರ ನೋವನ್ನು ಕರಗಿಸಲು ಖುಷಿಯನ್ನು ಹಂಚುವುದರ ಮೂಲಕ ಪ್ರಯತ್ನಪಟ್ಟವರ ನಿಜ ಜೀವನದ ಘಟನೆಗಳು ನಮ್ಮ ಬದುಕಿಗೆ ಪ್ರೇರಣಾದಾಯಿ ಎಂದು ಹೇಳಿದರು.
ಇದೇ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿಕ್ರಮ ವಾರಪತ್ರಿಕೆಯ ಗೌರವ ಸಂಪಾದಕರಾದ ಶ್ರೀಯುತ. ನ. ನಾಗರಾಜ್ ಜೀ ರವರು ಜಗತ್ತಿಗೆ ಶ್ರೇಷ್ಠ ಚಿಂತನೆಗಳನ್ನು ಕೊಟ್ಟವರು ಆರ್ಯರು. ಸಂಸ್ಕೃತಿ, ಮೌಲ್ಯ, ಆಚಾರ ವಿಚಾರಗಳನ್ನು ಸಮಾಜಕ್ಕೆ ಪಸರಿಸುವ ಕಾರ್ಯವನ್ನು ಆರ್ಯ ಸಮಾಜ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಎಲ್ಲರೂ ಸಜ್ಜನರಾಗಬೇಕು, ಸಜ್ಜನರೆಲ್ಲ ಸಂಘಟಿತರಾಗಬೇಕು, ಸಂಘಟಿತರಾಗಿ ಸಕ್ರಿಯರಾಗಬೇಕು. ಆಗ ಮಾತ್ರ ಸಮಾಜ ಎಲ್ಲರೂ ಕೂಡಿ ಸಂತೋಷದಿಂದ ಬಾಳುವಂತಹ ಸ್ವರ್ಗವಾಗುತ್ತದೆ ಎಂದು ತಿಳಿಸಿದರು.
ವಿದುಷಿ. ಶ್ರೀಮತಿ. ಅಮೃತವರ್ಷಿಣಿ ಉಮೇಶ್ ರವರು ಇಂದಿನ ಸಮಾಜಕ್ಕೆ ದಯಾನಂದರ ಕೊಡುಗೆಗಳ ಕುರಿತು ಮತ್ತು ಹಿಂದೂ ಸಮಾಜ ಇಂದು ಎದುರಿಸುತ್ತಿರುವ ಸವಾಲುಗಳಿಗೆ ಮಹರ್ಷಿ ದಯಾನಂದರು ತೋರಿಸಿಕೊಟ್ಟ ದಾರಿ ಹೇಗೆ ರಾಮಬಾಣವಾಗಬಲ್ಲದು ಎಂದು ತಿಳಿಸಿಕೊಟ್ಟರು. ಧರ್ಮದ ಕುರಿತಾಗಿ ಅಪವ್ಯಾಖ್ಯೆಗಳನ್ನು ಮಾಡುವವರಿಗೆ ವೇದ ಶಾಸ್ತ್ರವನ್ನು ವೇದಾಂಗಗಳ ಆಧಾರದ ಮೇಲೆ ಅರ್ಥಮಾಡಿಕೊಂಡರೆ ಸೂಕ್ತವಾಗಿ ಉತ್ತರಿಸಬಹುದು ಎಂದು ವಿಸ್ತೃತವಾಗಿ ತಿಳಿಸಿಕೊಟ್ಟರು.
ಮಧ್ಯಾಹ್ನದ ಅವಧಿಯಲ್ಲಿ ಮಾತನಾಡಿದ ಖ್ಯಾತ ಅಂಕಣಕಾರರು ಹಾಗೂ ಲೇಖಕರು ಆದಂತಹ ಪ್ರವೀಣ್ ಕುಮಾರ್, ಮಾವಿನಕಾಡು ರವರು ನಮ್ಮ ಧರ್ಮದಲ್ಲಿ ನ್ಯೂನತೆಗಳಿವೆ ಎಂದು ಬೆರಳು ತೋರುವವರಿಗೆ ಹೇಗೆ ಉತ್ತರಿಸಬಹುದು ಎಂದು ತಿಳಿಸಿಕೊಟ್ಟರು. ಇಲ್ಲಿ ಕಾಣುವ ಸಮಸ್ಯೆಗಳಿಗೆ ನಾವೇ ಕಾರಣವೇ ಹೊರತು ಧರ್ಮವಲ್ಲ. ಈ ಬಗ್ಗೆ ಕೀಳರಿಮೆ ಮೂಡಿಸಿ ಗೊಂದಲ ಹುಟ್ಟಿಸುವವರ ಪ್ರಶ್ನೆಗೆ ಮರು ಪ್ರಶ್ನೆಯಷ್ಟೇ ಉತ್ತರವಾಗಬೇಕು. ಮೂಢನಂಬಿಕೆ, ಜಾತಿ ಪದ್ಧತಿ, ಗಂಡು ಹೆಣ್ಣು ಎಂಬ ಭೇದ ಕೇವಲ ಒಂದು ಧರ್ಮದಲ್ಲಿ ಮಾತ್ರ ಇರುವುದಲ್ಲ, ಯಾವ ರಿಲಿಜನ್ ಗಳೂ ಇದಕ್ಕೆ ಹೊರತಾಗಿಲ್ಲ ಎಂದು ಸಾಕ್ಷಿ ಸಮೇತ ತೋರಿಸಬಹುದು ಎಂದು ತಿಳಿಸಿಕೊಟ್ಟರು.
ಸಂಜೆ ವಿದುಷಿ. ಶ್ರೀಮತಿ.ಮಾಧುರಿ ಕೌಶಿಕ್ ರವರು ಪಂಡಿತ. ಸುಧಾಕರ ಚತುರ್ವೇದಿಗಳು ಬರೆದ "ಕಾವ್ಯ ಸುಧಾ" ಕವನ ಸಂಗ್ರಹದಿಂದ ಕೆಲವು ಕವನಗಳನ್ನು ಹಾಡಿದರು. ವೇದಾಧ್ಯಾಯಿನಿ. ಶ್ರೀಮತಿ. ಶ್ವೇತನಂದಿನಿ ರಾಕೇಶ್ ರವರು ಅದರ ವ್ಯಾಖ್ಯಾನವನ್ನು ಮಾಡಿದರು. ಇದಕ್ಕೆ ಮೃದಂಗದಲ್ಲಿ ವಿದ್ವಾನ್.ಶ್ರೀ. ಪ್ರಜ್ವಲ್ ಭಾರದ್ವಾಜ ಜೊತೆ ನೀಡಿದರು. ಇವರುಗಳ ಜುಗಲ್ಬಂದಿ ಎಲ್ಲರನ್ನೂ ರೋಮಾಂಚನಗೊಳಿಸಿತು.
ಒಟ್ಟಾರೆ ಇಡೀ ದಿನದ ಕಾರ್ಯಕ್ರಮಗಳು ಮುಂದಿನ ಶ್ರಾವಣದವರೆಗೆ ಸಮಾಜ ಮುಖಿ ಕೆಲಸಗಳನ್ನು ಮಾಡಲು ಮತ್ತಷ್ಟು ಸ್ಫೂರ್ತಿ ಉತ್ಸಾಹಗಳನ್ನು ತುಂಬಿಕೊಟ್ಟಿದೆ ಎನ್ನುವುದರಲ್ಲಿ ಸಂದೇಹವೇ ಇಲ್ಲ.
07/08/2025
ಆಗಸ್ಟ್ 2, ಶನಿವಾರ ವಿಶ್ವೇಶ್ವರಪುರಂನ ಆರ್ಯ ಸಮಾಜ ಪ್ರತಿವರ್ಷದಂತೆ ಶ್ರೀ ಮೋಹನ್ ದೇವ್ ಆಳ್ವಾ ರವರ ದತ್ತಿಯ ಸಹಯೋಗದೊಂದಿಗೆ ಪ್ರೌಢಶಾಲಾ ಮಕ್ಕಳಿಗಾಗಿ ಹಲವಾರು ಸ್ಪರ್ಧಾ ಕಾರ್ಯಕ್ರಮಗಳನ್ನು ಆಯೋಜಿಸಿತ್ತು.
" Back to the Vedas: The relevance of Maharshi Dayanand saraswati's teaching in today's world", ಎಂಬ ವಿಷಯದ ಮೇಲೆ ಪ್ರಬಂಧ, "How did Maharshi Dayanand Saraswati's call for Swaraj lead to Spiritual and Social freedom" ಎಂಬ ವಿಷಯದ ಕುರಿತು ಭಾಷಣ, ಸಂಸ್ಕೃತ ಶ್ಲೋಕ ಮತ್ತು ಅದರ ಕಥೆ ಹೇಳುವ ಹಾಗು "Fostering Vedic Values" ರಸಪ್ರಶ್ನೆ ಸ್ಪರ್ಧೆಗಳು ನಡೆದವು.
ಒಟ್ಟಾರೆ 180ಕ್ಕೂ ಹೆಚ್ಚು ಮಕ್ಕಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
ಮಕ್ಕಳ ಶೈಕ್ಷಣಿಕ ಬೆಳವಣಿಗೆಯ ಜೊತೆಗೆ ಅವರಲ್ಲಿರುವ ಇತರೆ ಕಲೆ, ಸಾಮರ್ಥ್ಯವನ್ನು ಗುರುತಿಸುವುದು ಎಷ್ಟು ಅವಶ್ಯಕ ಎಂಬುದು ಲೇಖನ ಹಾಗೂ ಭಾಷಣ ಸ್ಪರ್ಧೆಯನ್ನು ನೋಡಿದಾಗ ಭಾಸವಾಯಿತು.
ಅವರ ನಿರರ್ಗಳ ಮಾತುಗಳು, ಆತ್ಮವಿಶ್ವಾಸ, ವಿಷಯವನ್ನು ಪ್ರಸ್ತುತ ಪಡಿಸುವ ರೀತಿ ಮುಂದಿನ ಪೀಳಿಗೆ ಸಮರ್ಥವಾಗಿ ವೈದಿಕ ಹಾಗೂ ರಾಷ್ಟ್ರೀಯ ಚಿಂತನೆಯನ್ನು ಹೊತ್ತು ತಯಾರಾಗುತ್ತಿರುವುದರ ದ್ಯೋತಕ ಎನಿಸುತ್ತಿತ್ತು.
ವಿದ್ಯಾರ್ಥಿಗಳು 15 ಕ್ಕೂ ಹೆಚ್ಚು ಶ್ಲೋಕಗಳನ್ನು ಅದಕ್ಕೆ ಪೂರಕವಾಗಿರುವ ಕಥೆಗಳನ್ನೂ ಕಲಿತು ನೆನಪಿಟ್ಟುಕೊಂಡು ತೀರ್ಪುಗಾರರು ಪ್ರಶ್ನಿಸಿದಾಗ ಅದನ್ನು ಅಚ್ಚುಕಟ್ಟಾಗಿ ಹೇಳಿದ ರೀತಿ ಅವರ ನೆನಪಿನ ಶಕ್ತಿಗೆ ಹಿಡಿದ ಕನ್ನಡಿಯಂತಿತ್ತು.
ಮಧ್ಯಾಹ್ನ ನಡೆದ ರಸಪ್ರಶ್ನೆ ಕಾರ್ಯಕ್ರಮ ಬಹಳ ವಿಶೇಷವಾಗಿತ್ತು. 14 - 15 ವರ್ಷದ ತರುಣ ತರುಣಿಯರು ರಾಷ್ಟ್ರದ ಬಗ್ಗೆ, ಪ್ರಮಾಣಗಳ ಬಗ್ಗೆ, ವೈದಿಕ ತತ್ವ ಸಿದ್ಧಾಂತಗಳ ಬಗ್ಗೆ ಮತ್ತು ಆರ್ಯ ಸಮಾಜದ ನಿಯಮಗಳು, ಕಾರ್ಯ ಚಟುವಟಿಕೆಗಳ ಅರಿತು, ಉತ್ತರಿಸಿದ ರೀತಿ ಎಲ್ಲರನ್ನೂ ಆಶ್ಚರ್ಯ ಚಕಿತರನ್ನಾಗಿಸಿಬಿಟ್ಟಿತು.
ಒಟ್ಟಾರೆ ಅಂದಿನ ದಿನ ಎಲ್ಲ ಕಾರ್ಯಕರ್ತರಿಗೂ ಖುಷಿ ತಂದುಕೊಟ್ಟಿದ್ದಂತು ಸತ್ಯ.