01/07/2022
Health is Wealth
Contact information, map and directions, contact form, opening hours, services, ratings, photos, videos and announcements from Tejas M K, Bangalore.
01/07/2022
Health is Wealth
ಯೋಗದಿನಕ್ಕೆ ಜೂನ್ 21ನ್ನೇ ಆಯ್ಕೆ ಮಾಡಿದ್ದು ಯಾಕೆ..,!? ಯೋಗದಿನಕ್ಕೂ ಆರೆಸ್ಸೆಸ್ಸಿಗೂ ಜೂನ್ ಇಪ್ಪತ್ತೊಂದಕ್ಕೂ ಏನು ಸಂಬಂಧ..!?
ಬಂಧುಗಳೇ, ಜೂನ್ 21, ಕೇವಲ RSS ಕಛೇರಿಯಲ್ಲಿ ಆಚರಿಸುತ್ತಿದ್ದ ಒಂದು ಸಂತಾಪ ಸ್ಮರಣಾ ದಿನವಾಗಿತ್ತು ಆದರೆ ಈಗ..!?
ಆರೆಸೆಸ್ಸ್ ಸಂಸ್ಥಾಪಕ ಹೆಡ್ಗೆವಾರ್ ನಿಧನವಾದ ದಿನ ಜೂನ್ 21. ಯೋಗಕ್ಕೂ ಹೆಡ್ಗೆವಾರ್ ಗೂ ಏನು ಸಂಬಂಧ.? ದಯಮಾಡಿ ತಿಳಿದವರು ತಿಳಿಸಿ. ಆದರೆ ಅಂತರಾಷ್ಟ್ರೀಯ ಯೋಗದಿನಕ್ಕೆ ಈ ದಿನವನ್ನೇ ನಿಗಧಿಪಡಿಸಿ ಅದನ್ನು ಸರ್ಕಾರವೇ ಮುಂದೆ ನಿಂತು ಶ್ರೀಮಾನ್ಯನ ಬೆವರಿನ ತೆರಿಗೆಹಣದ ಕೋಟ್ಯಂತರ ರೂಪಾಯಿ ವ್ಯಯಿಸಿ ಅದ್ದೂರಿಯಾಗಿ ಆಯೋಜಿಸುವ ಮೂಲಕ ಇಡೀ ಭಾರತದ ಭಾಗಶಃ ಜನ ಆರೆಸೆಸ್ಸ್ ನಲ್ಲಿ ಇಲ್ಲದವರೂ ಅದನ್ನು ಒಪ್ಪದವರೂ ಅದರ ಬಗ್ಗೆ ಏನೂ ಗೊತ್ತಿಲ್ಲದವರೂ ಕೂಡ ಇಂದು ಯೋಗದ ಹೆಸರಲ್ಲಿ ಹೆಡ್ಗೆವಾರ್ ಗೆ ನಿಂತು ಕುಂತು ಕೈಯೆತ್ತಿ ನಮಸ್ಕಾರ ಮಾಡುವಂತೆ ಮಾಡಲಾಗಿದೆ ಎಂಬುದನ್ನು ನಾವಿಲ್ಲಿ ಅರ್ಥ ಮಾಡಿಕೊಳ್ಳಬೇಕು...!
ಯೋಗವನ್ನೇನು ನಿತ್ಯವೂ ಮಾಡಬಹುದು. ಅದು ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ಪೂರಕವಾದ ಉಸಿರಾಟದ ಒಂದು ವ್ಯಾಯಾಮ. ಎರಡುವರೆ ಸಾವಿರ ವರ್ಷಗಳ ಹಿಂದೆ ಭಗವಾನ್ ಬುದ್ಧರು ಮನಸ್ಸನ್ನು ಕೇಂದ್ರೀಕರಿಸಲು ತನ್ನೊಳಗನ್ನು ತಾ ನೋಡಿಕೊಳ್ಳಲು ಆರಂಭಿಸಿದ ದೀರ್ಘಮೌನ ಧ್ಯಾನದ ಒಂದು ಭಾಗ (ಬುದ್ಧರಿಗೂ ಮುನ್ನ ಋಷಿಮುನಿಗಳು ಮಾಡುತ್ತಿದ್ದದ್ದು ನಿರ್ಧಿಷ್ಟ ಕೋರಿಕೆಗಾಗಿ ದೇವರನ್ನು ಒಲಿಸಿಕೊಳ್ಳಲು ಮಾಡುತ್ತಿದ್ದದ್ದು ತಪಸ್ಸು. ತಪಸ್ಸೇ ಬೇರೆ ಧ್ಯಾನವೇ ಬೇರೆ) ಅದನ್ನು ವಿಪಸ್ಸನ ಧ್ಯಾನ ಎಂದು ಕರೆಯುತ್ತಾರೆ. ನಾವು ಎಚ್ಚರಿರುವಾಗ ಕೆಲಸ ಮಾಡುವಾಗ ಮಲಗಿದಾಗ ಸದಾ ಉಸಿರಾಡುತ್ತೇವೆ ಆದರೆ ಆ ಉಸಿರಾಟದ ಕಡೆ ಗಮನ ಹರಿಸುವುದಿಲ್ಲ. ಗಮನ ಹರಿಸಿದರೆ ಅದೇ ಧ್ಯಾನ ಅದೇ ಯೋಗ...!
ಹೀಗೆ ಗಮನ ಹರಿಸಿ ಉಸಿರಾಡಲು ಹಾಗು ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ದೇಹ ಮನಸ್ಸನ್ನು ಪಕ್ಕುಗೊಳಿಸಲು ದೇಹ ಮತ್ತು ಮನಸ್ಸಿದ್ದರೆ ಸಾಕು. ಕೋಟ್ಯಾಂತರ ರೂಪಾಯಿಯಾಗಲಿ ಅದಕ್ಕೊಂದು ಸರ್ಕಾರದ ಒತ್ತಾಸೆಯಾಗಲಿ ಬೇಕಾಗಲ್ಲ.
ಒಟ್ಟಾರೆ ಒಂದು ಸಂಘದ ಸಂಸ್ಥಾಪಕ ಹೆಡ್ಗೆವಾರ್ ಗೆ ಗೊತ್ತೋ ಗೊತ್ತಿಲ್ಲದೆಯೋ ಇಡೀ ದೇಶದ ಜನರಿಂದ ಸ್ಮರಿಸಿ ಕೈಮುಗಿಸಲು ಮಾಡಿದ ದುಂದುವೆಚ್ಚದ ಸ್ವೇಚ್ಛೆಯ ಹುನ್ನಾರವೇ ಈ ಅಂತರಾಷ್ಟ್ರೀಯ ಯೋಗದಿನ...!
30/04/2022
19/02/2022
ದಲಿತರ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರ 393 ನೇ ಜಯಂತಿಯ ಶುಭಾಶಯಗಳು
19 ಫೆಬ್ರವರಿ 1630 03 ಏಪ್ರಿಲ್ 1680
ಭಾರತದ ಇತಿಹಾಸದ ಚರಿತೆಯಲ್ಲಿ ಮೊತ್ತ ಮೊದಲು ಕಾಲಗರ್ಭದಲ್ಲಿ ಹುದುಗಿ ಹೋಗಿದ್ದ ಶಿವಾಜಿ ಮಹಾರಾಜರ ಚರಿತ್ರೆಯನ್ನು 1869 ರಲ್ಲಿ ಸಂಶೋದಿಸಿ ಜಗತ್ತಿಗೆ ಪರಿಚಿಯಿಸಿ 1870 ರಲ್ಲಿ ಶಿವಾಜಿ ಜಯಂತಿ ಪ್ರಾರಂಭ ಮಾಡಿದಕೀರ್ತಿ #ಮಹಾತ್ಮಾ_ಜ್ಯೋತಿ_ಬಾಯ್_ಪುಲೆಯವರಿಗೆ ಸಲ್ಲಬೇಕು...ಆದರೆ ಪೆಶ್ವೇಗಳ ಸಮರ್ಥಕ ಬಾಲಗಂಗಾಧರ ತಿಲಕ್ ಶಿವಾಜಿ ಜಯಂತಿಯ ನಿಲ್ಲಿಸುವ ಸಂಚು ರೂಪಿಸಿ 1893 ರಲ್ಲಿ ಗಣೇಶೋತ್ಸವ ಪ್ರಾರಂಭಿಸಿದರು .
ಇಂದು ಶಿವಾಜಿಯವರನ್ನು ಹಿಂದೂ ಧರ್ಮದ ರಕ್ಷಕ ಎಂದು ಕೊಂಡಾಡುತ್ತಿದ್ದಾರೆ. ಆದರೆ ಶಿವಾಜಿಯವರಿಗೆ ಹೆಜ್ಜೆ ಹೆಜ್ಜೆಗೂ ಮಾನಸಿಕ ಹಿಂಸೆ ನೀಡಿ ಅವರ ಮೇಲೆ ಹಲ್ಲೆ ಮಾಡಿ ಅವರ ಜೀವ ತೆಗೆಯಲು ನೋಡಿದರು ಇದೇ ಧರ್ಮದವರು. ಶಿವಾಜಿ ಮಹಾರಾಜರು ಎಂದಿಗೂ ಹಿಂದೂ ಧರ್ಮದ ರಕ್ಷಣೆಗಾಗಿ ಶಸ್ತ್ರ ಹಿಡಿದವರಲ್ಲ.. ಸಾಮ್ರಾಜ್ಯ ವಸಹಾತು ಶಾಹಿಗಳ ವಿರುದ್ದ ಕತ್ತಿ ಮಸೆದರು ಅಷ್ಟೇ.ಶಿವಾಜಿ ಮುಸ್ಲಿಂ ವಿರೋಧಿಯಾಗಿದ್ದಾರೆ ಅವರ ಸೈನ್ಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಅಧಿಕಾರಿಗಳು ಸೈನಿಕರಿದ್ದರು ಇವಿಷ್ಟೇ ಸಾಕು ಶಿವಾಜಿ ಮಹಾರಾಜರು ಸಮಾನತೆಯ ಹರಿಕಾರರು ಎನ್ನಲು🙏💐
29/01/2022
26/01/2022
Happy Republic Day 🇮🇳🇮🇳🇮🇳🇮🇳🇮🇳 💐💐💐
09/01/2022
191 birth anniversary 💐😊🙏