20/04/2024
ಈ ಬಾರಿಯ ಲೋಕಸಭಾ ಚುನಾವಣೆ, ಅತ್ಯಂತ ಪ್ರಮುಖ ಹಾಗೂ ಹಿಂದೆಲ್ಲಾ ಚುನಾವಣೆಗಳಿಗಿಂತ ವಿಭಿನ್ನ.
ಅದರಲ್ಲೂ, ಕೋಲಾರದ ರಾಜಕೀಯ, ಇನ್ನೊಂದು ಹಂತಕ್ಕೊಗಿದೆ.
ಈ ಬಾರಿ ಲೋಕ ಸಮರ,
ಸಂವಿಧಾನವನ್ನು ಬದಲಾಯಿಸುವ ಸಂಕಲ್ಪತೊಟ್ಟ ಬಿಜೆಪಿ (ಕೆಲ ನಾಯಕರು ನೇರ ನೇರವಾಗಿಯೇ ಸ್ಟೇಜ್'ಗಳ ಮೇಲೆ ಹೇಳಿದ್ದಾರೆ) ಮತ್ತು ಸಂವಿಧಾನ ಉಳಿಸುವುದೇ ನಮ್ಮ ಗುರಿ ಎಂದು ಆಶ್ವಾಸನೆ ಕೊಟ್ಟಿರುವ ಕಾಂಗ್ರೆಸ್ ನ ನಡುವೆ.
ಕೋಲಾರದಲ್ಲಂತೂ, ಬಿಜೆಪಿಯ ಒಬ್ಬ ಪ್ರಮುಖ ನಾಯಕ, ಜೆಡಿಎಸ್ ನ ನಾಯಕನ ಕೈ ಹಿಡಿದು, "ಕೋಲಾರವನ್ನು ಮೀಸಲು ಕ್ಷೇತ್ರದಿಂದ ತೆಗಿಸಿ, ನಿಮ್ಮನ್ನು ಎಂ ಪಿ ಮಾಡುತ್ತೇನೆ" ಎಂದು ಹೇಳಿದ್ದಾನೆ!
ನಾವೆಲ್ಲರೂ ಸ್ವಲ್ಪ ಪ್ರಜ್ಞಾವಂತಿಕೆಯಿಂದ ಯೋಚಿಸಿ ಮತದಾನ ಮಾಡೋಣ.
ಸಂವಿಧಾನದುಳಿವಿಗೆ, ಒಂದಾಗೋಣ💙
03/11/2022
ಸಮುದಾಯದ ಕೂಗು, ಸ್ವಾಭಿಮಾನದ ಪ್ರಶ್ನೆ ...
ಜಾತಿವಾದಿಗಳ ಎದೆಯಲ್ಲಿ "ಜಲ್ಲ್" ಎನ್ನಿಸುವಷ್ಟು ಜೋರಾಗಿ ಇರಬೇಕು...
30/08/2022
ಜಾತಿವಾಧಿ ಜನಗಳೇ,
ಸೇರಿಸಿಕೊಳ್ಳುವಿರಾ ನಿಮ್ಮ ಜಾತಿಯೊಳಗೆ ನನ್ನಾ!!!?
22/08/2022
ಕುಡಿಯಲು ನೀರು ಮುಟ್ಟಿದರೂ ಕೊಲ್ಲುವರು,
ತಿನ್ನಲು ಬಾಡು ಮುಟ್ಟಿದರೂ ಕೊಲ್ಲುವರು,
ದುಡಿದ ಹೊನ್ನು ಮುಟ್ಟಿದರೂ ಕೊಲ್ಲುವರು,
ಪ್ರೀತಿಸಿದ ಹೆಣ್ಣು ಮುಟ್ಟಿದರೂ ಕೊಲ್ಲುವರು.
ಕಡೆಗೆ ನೀ ಸತ್ತರೆ, ಮಣ್ಣು ಮುಟ್ಟಲೂ ಬಿಡದೆ ಕೊಲ್ಲುವರಯ್ಯ...
ಏಕೆಂದರೆ ನೀನೊಬ್ಬ ದಲಿತ.
(ನೊಂದ ದಲಿತನ ನೋವಿನ ಕೂಗು)
14/04/2022
ಸುಮಾರು ತಿಂಗಳುಗಳ ನಂತರ page recovery ಆಗಿದೆ😍💙
ಅದೂ ಬಾಬಾಸಾಹೇಬರ ಜಯಂತೋತ್ಸವದ ದಿನವೇ😍💙
ಜೈ ಭೀಮ್💙💙
17/07/2021
ವಾಹ್...ಚೆನ್ನಾಗಿದೆ ಕಣ್ರಯ್ಯಾ!!!!
18/06/2021
ನನ್ನ ಈ Page ಗೆ ಮೂಲ ಸ್ಫೂರ್ತಿಯೇ ಸಿದ್ದಲಿಂಗಯ್ಯನವರ ಒಂದು Quote ಮತ್ತು ಗದ್ದರ್ ಅವರ ಒಂದು ಗೀತೆ..
ಈ ಪೇಜ್ ಅಲ್ಲಿ ಇರುವ ಒಂದೆರಡು Quote ಅವರಿಗೆ ಮುಟ್ಟಿಸಿವ ಆಸೆಯೂ ಇತ್ತು..
ಆದ್ರೆ ಇದರಲ್ಲಿ ಇನ್ನಷ್ಟು ಕಂಟೆಂಟ್ ಬರ್ದು ಆಮೇಲೆ ಅವರಿಗೆ ಮುಟ್ಟಿಸೋ ಪ್ರಯತ್ನ ಮಾಡೋಣ ಅಂತ ಸುಮ್ಮನಾಗಿದ್ದೆ...
ಕಾರಣಾಂತರಗಳಿಂದ Page Active ಇಡಲು ಆಗಲಿಲ್ಲ...
ಆದರೆ lockdown ನಲ್ಲಿ ಮತ್ತೆ Page Active ಇಡುವ ಯೋಚನೆಯಲ್ಲಿದ್ದೆ...
ನಂತರ Page block ಆಗಿ ಒಪೆನ್ ಏ ಆಗುತ್ತಿರಲಿಲ್ಲ, ಆದುದರಿಂದ ಇದರೆಡೆ ಗಮನ ಕೊಡೋದು ಬಿಟ್ಟಿದ್ದೆ..
ಆದ್ರೆ...😢
ಅಷ್ಟರಲ್ಲಿ ಸಿದ್ಧಲಿಂಗಯ್ಯನವರು ಇನ್ನಿಲ್ಲ!?😢
ನೀವು ಎಂದೆಂದಿಗೂ ಅಜರಾಮರ ಸರ್...
ಡಾ.ಸಿದ್ದಲಿಂಗಯ್ಯ(1954-∞)
14/04/2021
"ಜ್ಞಾನದ ರಣಕಹಳೆ" - ಬಾಬಾಸಾಹೇಬರ ಕುರಿತು ಕವನ...
ರಚಿಸಿದವರು - ರಘುಪತಿ, ವಕೀಲರು.
13/04/2021
130ನೇ ಭಿಮಾಜಯಂತಿಯ ಹಾರ್ದಿಕ ಶುಭಾಶಯಗಳು💙🇪🇺