Dept. Of Handloom and Textiles

Dept. Of Handloom and Textiles

Share

The Department of Handlooms and Textiles was set up during 1991-92 in Karnataka.

21/05/2026

"ಕರ್ನಾಟಕದ ಜವಳಿ ಉದ್ಯಮಕ್ಕೆ ಹೊಸ ಚೈತನ್ಯ!"

ರಾಜ್ಯದ ಜವಳಿ ಉದ್ಯಮವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಮತ್ತು ಗ್ರೀನ್ ಫೀಲ್ಡ್ ಟೆಕ್ಸ್ ಟೈಲ್ ಪಾರ್ಕ್ ಗಳ ಸ್ಥಾಪನೆಗೆ ಉತ್ತೇಜನ ನೀಡಲು ಕರ್ನಾಟಕ ಸರ್ಕಾರವು ವಿಶೇಷ ರಿಯಾಯಿತಿ ಮತ್ತು ಸಹಾಯಧನವನ್ನು ಘೋಷಿಸಿದೆ.

ಪ್ರಮುಖ ವಿವರಗಳು:

- ಮೂಲಸೌಕರ್ಯಕ್ಕೆ ಬಲ: ಪ್ರತಿ ಗ್ರೀನ್ ಫೀಲ್ಡ್ ಪಾರ್ಕ್ ಗೆ ಗರಿಷ್ಠ ₹40 ಕೋಟಿ ವರೆಗೆ (ಯೋಜನಾ ವೆಚ್ಚದ ಶೇ. 40) ಆರ್ಥಿಕ ನೆರವು.
- ಕೇಂದ್ರ-ರಾಜ್ಯ ಸಹಯೋಗ: ಕೇಂದ್ರ ಸರ್ಕಾರದ ನೆರವು ಪಡೆಯುತ್ತಿರುವ ಯೋಜನೆಗಳಿಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಶೇ. 10 ರಷ್ಟು ಆರ್ಥಿಕ ಬೆಂಬಲ.
- ಉದ್ಯೋಗಾವಕಾಶ: ಈ ಯೋಜನೆಯು ರಾಜ್ಯದಲ್ಲಿ ಸಾವಿರಾರು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿ ಹೊಂದಿದೆ.

ನವೀನ ಮತ್ತು ಆಧುನಿಕ ಜವಳಿ ಪಾರ್ಕ್ ಗಳ ಸ್ಥಾಪನೆಯ ಮೂಲಕ ಕರ್ನಾಟಕದ ಕೈಗಾರಿಕಾ ಬೆಳವಣಿಗೆಯಲ್ಲಿ ಪಾಲುದಾರರಾಗಿ.

ಹೆಚ್ಚಿನ ಮಾಹಿತಿಗಾಗಿ ಕೈಗಾರಿಕಾ ಇಲಾಖೆಯನ್ನು ಸಂಪರ್ಕಿಸಿ:

14/05/2026

ತ್ಯಾಜ್ಯ ವಿಲೇವಾರಿ ಮತ್ತು ಸಂಸ್ಕರಣಾ ಘಟಕಗಳಿಗೆ ವಿಶೇಷ ಸಬ್ಸಿಡಿ - ಪರಿಸರ ಸಂರಕ್ಷಣೆಯೊಂದಿಗೆ ನಿಮ್ಮ ಉದ್ದಿಮೆಯನ್ನು ಬೆಳೆಸಿ!

ಕರ್ನಾಟಕ ಸರ್ಕಾರವು ಸುಸ್ಥಿರ ಕೈಗಾರಿಕಾ ಬೆಳವಣಿಗೆಗೆ ಪೂರಕವಾಗಿ, ರಾಜ್ಯದ ಎಲ್ಲಾ ಉದ್ದಿಮೆಗಳಿಗೆ ತ್ಯಾಜ್ಯ ವಿಲೇವಾರಿ ಮತ್ತು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಭಾರಿ ಧನಸಹಾಯವನ್ನು ಘೋಷಿಸಿದೆ.

ವಿವರಗಳು:

- ಅರ್ಹತೆ: ಹೊಸ ಮತ್ತು ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಕೈಗಾರಿಕೆಗಳು.
- ಸಹಾಯಧನ: ಘಟಕ ಸ್ಥಾಪನೆಯ ವೆಚ್ಚದಲ್ಲಿ 50% ಅಥವಾ ಗರಿಷ್ಠ 5 ಕೋಟಿ ರೂಪಾಯಿಗಳವರೆಗೆ ಸಹಾಯಧನ ಲಭ್ಯ.
- ವಿಶೇಷತೆ: ಪರಿಸರ ಸ್ನೇಹಿ ತಂತ್ರಜ್ಞಾನ ಹಾಗೂ ಇಟಿಪಿ (ETP) ಘಟಕಗಳ ಸ್ಥಾಪನೆಗೆ ಆದ್ಯತೆ.

ನಿಮ್ಮ ಉದ್ದಿಮೆಯನ್ನು ಹಸಿರು ಉದ್ದಿಮೆಯನ್ನಾಗಿ ಪರಿವರ್ತಿಸಿ, ಪರಿಸರ ಉಳಿಸಿ ಮತ್ತು ಸರ್ಕಾರದ ಈ ಯೋಜನೆಯ ಲಾಭ ಪಡೆಯಿರಿ.

10/05/2026

"ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ನೆರಳಾಗಿ, ಪ್ರೀತಿ ಮತ್ತು ಮಮತೆಯ ಸಾಕಾರ ಮೂರ್ತಿಯಾಗಿರುವ ಜಗತ್ತಿನ ಎಲ್ಲಾ ತಾಯಂದಿರಿಗೂ 'ವಿಶ್ವ ತಾಯಂದಿರ ದಿನ'ದ ಹಾರ್ದಿಕ ಶುಭಾಶಯಗಳು. ನಮ್ಮ ಬದುಕಿಗೆ ಅರ್ಥ ನೀಡುವ ಶಕ್ತಿ 'ತಾಯಿ'."

01/05/2026

ನಾಡಿನ ಸಮಸ್ತ ಜನತೆಗೆ ಬುದ್ಧ ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು.

"ಶಾಂತಿ ಮತ್ತು ಸೌಹಾರ್ದತೆಯ ದೀಪವನ್ನು ಬೆಳಗಿಸಿದ ಬುದ್ಧರ ತತ್ವಗಳನ್ನು ಪಾಲಿಸೋಣ." ವಿಶ್ವಕ್ಕೆ ಅಹಿಂಸೆ ಮತ್ತು ಪ್ರೀತಿಯ ಸಂದೇಶ ಸಾರಿದ ಭಗವಾನ್ ಗೌತಮ ಬುದ್ಧರ ತತ್ವಗಳು ನಮ್ಮ ಬದುಕಿಗೆ ದಾರಿದೀಪವಾಗಲಿ. ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲಿ ಎಂದು ಈ ಪವಿತ್ರ ದಿನದಂದು ಆಶಿಸೋಣ.

01/05/2026

ನೂಲಿನ ನಂಟು, ಶ್ರಮದ ಕಟ್ಟು - ಎಲ್ಲರಿಗೂ ವಿಶ್ವ ಕಾರ್ಮಿಕ ದಿನಾಚರಣೆಯ ಶುಭಾಶಯಗಳು!

ತಮ್ಮ ಕೈಚಳಕದಿಂದ ನಾಡಿನ ಸಂಸ್ಕೃತಿಯನ್ನು ಉಡುಪಾಗಿಸುವ ನೇಯ್ಗೆಯ ಬಂಧುಗಳು ನಮ್ಮ ಹೆಮ್ಮೆ. ಹಗಲಿರುಳು ಮಗ್ಗದ ಮುಂದೆ ಕುಳಿತು ಶ್ರಮಿಸುವ ನೇಕಾರರ ಬೆವರಿನ ಹನಿಗಳು ದೇಶದ ಆರ್ಥಿಕತೆಗೆ ದೊಡ್ಡ ಶಕ್ತಿ. ಬಲಿಷ್ಠ ರಾಷ್ಟ್ರದ ನಿರ್ಮಾಣಕ್ಕೆ ಶ್ರಮಿಸುತ್ತಿರುವ ಸಮಸ್ತ ಕೈಮಗ್ಗ ಮತ್ತು ಜವಳಿ ಕಾರ್ಮಿಕ ಬಂಧುಗಳಿಗೆ ಗೌರವಪೂರ್ವಕ ವಂದನೆಗಳು.

26/04/2026

ನಾಡಿನ ಸಮಸ್ತ ಜನತೆಗೆ ಜಗನ್ಮಾತೆ ತಾಯಿ ಶ್ರೀ ವಾಸವಿ ದೇವಿ ಜಯಂತಿಯ ಹಾರ್ದಿಕ ಶುಭಾಶಯಗಳು.

23/04/2026

"ಸಿದ್ಧ ಉಡುಪು ವಲಯದ ಕಾರ್ಮಿಕರಿಗೆ ವೇತನ ಸಹಾಯಧನ"

ಸಿದ್ದ ಉಡುಪು ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಧ್ಯಮ ಮತ್ತು ಬೃಹತ್ ಉದ್ಯಮಗಳಿಗೆ ಇದು ಒಂದು ಅತ್ಯುತ್ತಮ ಸುವರ್ಣಾವಕಾಶವಾಗಿದೆ.

ನಮ್ಮ ಸರ್ಕಾರದ ನೂತನ ಯೋಜನೆಯಡಿ ಸಿದ್ಧ ಉಡುಪು ಘಟಕಗಳಲ್ಲಿ ಶ್ರಮಿಸುತ್ತಿರುವ ಕಾರ್ಮಿಕರ ಆರ್ಥಿಕ ಸಬಲೀಕರಣಕ್ಕಾಗಿ ಮಾಸಿಕ ವೇತನ ಸಹಾಯಧನವನ್ನು ನೀಡಲಾಗುತ್ತಿದೆ.

ಈ ಯೋಜನೆಯ ಅಡಿಯಲ್ಲಿ ಸಿದ್ಧ ಉಡುಪು ವಿಭಾಗದ ವಲಯವಾರು ವಿವರಗಳು ಈ ಕೆಳಗಿನಂತಿವೆ:

- ವಲಯ 1 ರಲ್ಲಿ ಕಾರ್ಯನಿರ್ವಹಿಸುವ ಪ್ರತಿ ಕಾರ್ಮಿಕರಿಗೆ ರೂ. 3000/-
- ವಲಯ 2 ರಲ್ಲಿ ಕಾರ್ಯನಿರ್ವಹಿಸುವ ಪ್ರತಿ ಕಾರ್ಮಿಕರಿಗೆ ರೂ. 2000/- ಗಳ ಸಹಾಯಧನ ಲಭ್ಯವಿದೆ.
- ವಲಯ 3 ಮತ್ತು 4 ಕ್ಕೆ ಈ ಸೌಲಭ್ಯ ಅನ್ವಯಿಸುವುದಿಲ್ಲ.

ಕೈಗಾರಿಕಾ ಪ್ರಗತಿ ಮತ್ತು ಕಾರ್ಮಿಕರ ಕಲ್ಯಾಣವನ್ನು ದೃಷ್ಟಿಯಲ್ಲಿಟ್ಟುಕೊಂಡು ಜಾರಿಗೆ ತಂದಿರುವ ಈ ಮಹತ್ವದ ಯೋಜನೆಯ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಆಸಕ್ತರು ತಕ್ಷಣವೇ ತಮ್ಮ ಜಿಲ್ಲೆಯ ಜಿಲ್ಲಾ ಕೈಗಾರಿಕಾ ಕೇಂದ್ರ (DIC) ಅಥವಾ ಸಮೀಪದ ಕೈಗಾರಿಕಾ ಇಲಾಖೆಯ ಕಚೇರಿಗೆ ಭೇಟಿ ನೀಡಿ.

20/04/2026

ಕಾಯಕವೇ ಕೈಲಾಸ" ಎಂದು ಜಗತ್ತಿಗೆ ಸಾರಿದ ಕ್ರಾಂತಿಯೋಗಿ ಜಗಜ್ಯೋತಿ ಬಸವಣ್ಣನವರ ಜಯಂತಿಯಂದು ಅವರಿಗೆ ಭಕ್ತಿಪೂರ್ವಕ ಪ್ರಣಾಮಗಳು. 🙏✨

ನೇಯ್ಗೆ ಎಂಬುದು ಕೇವಲ ಕಸುಬಲ್ಲ, ಅದು ಶ್ರದ್ಧೆಯ ಕಾಯಕ. ಬಸವಣ್ಣನವರ ತತ್ವದಂತೆ ನಮ್ಮ ನೇಕಾರರು ಶ್ರಮದ ಮೂಲಕ ಸುಂದರ ಸಮಾಜಕ್ಕೆ ಬಣ್ಣ ತುಂಬುತ್ತಿದ್ದಾರೆ. ನೇಕಾರರ ಶ್ರಮಕ್ಕೆ ಗೌರವ ನೀಡುವುದು ಮತ್ತು ಅವರ ಅಭಿವೃದ್ಧಿಯೇ ನಮ್ಮ ಇಲಾಖೆಯ ಮುಖ್ಯ ಉದ್ದೇಶ.

ಸಮಸ್ತ ನಾಡಿನ ಜನತೆಗೆ ಬಸವ ಜಯಂತಿಯ ಶುಭಾಶಯಗಳು.

#ಬಸವಜಯಂತಿ #ಕಾಯಕವೇಕೈಲಾಸ

20/04/2026

ನೇಯ್ಗೆಯ ಪ್ರತಿ ಎಳೆಯಲ್ಲೂ ಸಮೃದ್ಧಿ ಅಡಗಿದೆ! 🧶✨

ಸಮಸ್ತ ನಾಡಿನ ಜನತೆಗೆ ಅಕ್ಷಯ ತೃತೀಯದ ಹಾರ್ದಿಕ ಶುಭಾಶಯಗಳು. ಈ ಪವಿತ್ರ ದಿನದಂದು ನಮ್ಮ ನಾಡಿನ ಹೆಮ್ಮೆಯ ಕೈಮಗ್ಗದ ಉಡುಪುಗಳನ್ನು ಖರೀದಿಸುವ ಮೂಲಕ ನೇಕಾರರ ಬದುಕಿನಲ್ಲಿ ಹೊಸ ಚೈತನ್ಯ ತುಂಬೋಣ. ನಿಮ್ಮ ಸಂಭ್ರಮದ ಖರೀದಿ ನೇಕಾರರ ಬಾಳಿಗೆ ಅಕ್ಷಯ ಸಂಪತ್ತು ತರಲಿ.

#ಅಕ್ಷಯತೃತೀಯ #ಕೈಮಗ್ಗ #ಜವಳಿಇಲಾಖೆ

14/04/2026

ಸಾಮಾಜಿಕ ಸಮಾನತೆಯ ಹರಿಕಾರರು, ಸಮಾಜ ಸುಧಾರಕರು ಹಾಗೂ ಭಾರತದ ಸಂವಿಧಾನ ನಿರ್ಮಾತೃ ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್ ಅವರ ಜಯಂತಿಯಂದು ಭಾವಪೂರ್ಣ ನಮನಗಳು.

ಮಾನವ ಹಕ್ಕುಗಳ ರಕ್ಷಣೆ ಹಾಗೂ ಶ್ರಮಿಕರ ಏಳಿಗೆಗಾಗಿ ಬಾಬಾಸಾಹೇಬರು ಹಾಕಿಕೊಟ್ಟ ದಾರಿ ನಮಗೆ ಆದರ್ಶ. ಸಾಮಾಜಿಕ ನ್ಯಾಯದ ಭದ್ರ ಬುನಾದಿಯ ಮೇಲೆ ಸದೃಢ ಭಾರತವನ್ನು ಕಟ್ಟುವ ಅವರ ವಿಚಾರಗಳು, ನಮ್ಮ ಕೈಮಗ್ಗ ನೇಕಾರರ ಬದುಕಿಗೆ ಹಾಗೂ ವೃತ್ತಿ ಗೌರವಕ್ಕೆ ಎಂದಿಗೂ ಸ್ಫೂರ್ತಿದಾಯಕ.

Want your business to be the top-listed Government Service in Bangalore?

Click here to claim your Sponsored Listing.

Location

Address


Bangalore
560020