Rajiv Gandhi Housing Corporation Ltd

Rajiv Gandhi Housing Corporation Ltd

Share

ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ

Photos from Rajiv Gandhi Housing Corporation Ltd's post 21/02/2026

ರಾಜೀವ್ ಗಾಂಧಿ ವಸತಿ ನಿಗಮ (RGHCL) ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪರಶುರಾಮ್ ಶಿನ್ನಾಳಕರ್ ಅವರು ಇಂದು ದೊಡ್ಡ ನಾಗಮಂಗಲ 1 ಲಕ್ಷ ಬೆಂಗಳೂರು ಬಹು ಮಹಡಿ ಕಟ್ಟಡ ಸಮುಚ್ಚಯದ ಬಳಿ ಭೇಟಿ ನೀಡಿ, ಬೋರ್‌ವೆಲ್ ತೋಡಲು ಗುರುತಿಸಲಾಗಿರುವ ಸ್ಥಳಗಳನ್ನು ಪರಿಶೀಲಿಸಿದರು.

ಭವಿಷ್ಯದಲ್ಲಿ ನಿವಾಸಿಗಳಿಗೆ ಸಮರ್ಪಕ ಹಾಗೂ ನಿರಂತರ ಕುಡಿಯುವ ನೀರಿನ ಸೌಲಭ್ಯ ಒದಗಿಸುವ ಉದ್ದೇಶದಿಂದ ಗುರುತಿಸಿದ ಬೋರ್‌ವೆಲ್ ಪಾಯಿಂಟ್‌ಗಳ ಬಗ್ಗೆ ಸ್ಥಳದಲ್ಲೇ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಸೂಚನೆಗಳನ್ನು ನೀಡಿದರು.

ನಿವಾಸಿಗಳ ಮೂಲಭೂತ ಸೌಕರ್ಯಗಳನ್ನು ಮತ್ತಷ್ಟು ಸುಧಾರಿಸಲು RGHCL ಬದ್ಧವಾಗಿದೆ.

21/02/2026

Rajiv Gandhi Housing Corporation Limited (RGHCL) ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪರಶುರಾಮ್ ಶಿನ್ನಾಳಕರ್ ರವರು ಇಂದು ಗೂಲಿಮಂಗಲದಲ್ಲಿ ನಿಗಮದ ವತಿಯಿಂದ ನಿರ್ಮಿಸಿರುವ “ಒಂದು ಲಕ್ಷ ಬೆಂಗಳೂರು ಬಹುಮಹಡಿ ವಸತಿ"ಯೋಜನೆಯಲ್ಲಿ ಅಂಗವಿಕಲ ಕೋಟಾದಡಿ ನೆಲ ಮಹಡಿಯಲ್ಲಿ ವಸತಿ ಪಡೆದಿರುವ ಫಲಾನುಭವಿ ಅವರ ಮನೆಗೆ ಭೇಟಿ ನೀಡಿದರು.

ಮನೆಯ ನಿರ್ಮಾಣ ಗುಣಮಟ್ಟ, ಮೂಲಭೂತ ಸೌಲಭ್ಯಗಳು ಹಾಗೂ ಎದುರಾಗಿರುವ ಸಮಸ್ಯೆಗಳ ಕುರಿತು ಫಲಾನುಭವಿಯವರ ಜೊತೆ ಆತ್ಮೀಯವಾಗಿ ಮಾತುಕತೆ ನಡೆಸಿ, ಅವರ ಅಭಿಪ್ರಾಯಗಳನ್ನು ನೇರವಾಗಿ ಕೇಳಿದರು.

ಮನಃಪೂರ್ವಕವಾಗಿ ಮಾತನಾಡಿದ ಫಲಾನುಭವಿ, “ಉತ್ತಮ ಗುಣಮಟ್ಟದ ಕಟ್ಟಡ ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸಿದ್ದೀರಿ. ನಮ್ಮಂತಹ ಅಂಗವಿಕಲರು ಹಾಗೂ ಬಡ ಕುಟುಂಬಗಳಿಗೆ RGHCL ನಿಗಮದ ಈ ಯೋಜನೆ ಆಶಾಕಿರಣವಾಗಿದೆ. ಎಲ್ಲ ಬಡ ಜನತೆಗೆ ವಸತಿ ಕಲ್ಪಿಸುವ ನಿಗಮದ ಬದ್ಧತೆಯ ಮೇಲೆ ನನಗೆ ಭರವಸೆ ಮೂಡಿದೆ” ಎಂದು ಕೃತಜ್ಞತೆ ವ್ಯಕ್ತಪಡಿಸಿದರು.

ನಿಜವಾದ ಅಭಿವೃದ್ಧಿ ಎಂದರೆ ಜನರ ಮನೆಬಾಗಿಲಿಗೆ ತಲುಪುವ ಸೇವೆ.
RGHCL – ಬಡವರ ಕನಸಿನ ಮನೆಗೆ ದಾರಿದೀಪ.

#ಸೇವೆಯಸ್ಪರ್ಶ #ಬಡವರಕನಸು Facebook

Photos from Rajiv Gandhi Housing Corporation Ltd's post 21/02/2026

Rajiv Gandhi Housing Corporation Limited (RGHCL) ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪರಶುರಾಮ್ ಶಿನ್ನಾಳಕರ್ ರವರು ಇಂದು ಗೂಲಿಮಂಗಲದಲ್ಲಿ ನಿಗಮದ ವತಿಯಿಂದ ನಿರ್ಮಿಸಿರುವ “ಒಂದು ಲಕ್ಷ ಬೆಂಗಳೂರು” ಬಹುಮಹಡಿ ವಸತಿ ಕಟ್ಟಡ ಸಮುಚ್ಚಯಕ್ಕೆ ಭೇಟಿ ನೀಡಿ, ಅರ್ಹ ಫಲಾನುಭವಿಗಳಿಗಾಗಿ ಏರ್ಪಡಿಸಿದ್ದ ಗೃಹ ಸಾಲ ಮೇಳದಲ್ಲಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ಫಲಾನುಭವಿಗಳೊಂದಿಗೆ ನೇರವಾಗಿ ಸಂವಾದ ನಡೆಸಿ, ಗೃಹ ಸಾಲ ಸೌಲಭ್ಯಗಳು, ಅರ್ಜಿ ಪ್ರಕ್ರಿಯೆ ಹಾಗೂ ಸರ್ಕಾರದ ವಿವಿಧ ವಸತಿ ಯೋಜನೆಗಳ ಬಗ್ಗೆ ವಿವರವಾದ ಮಾಹಿತಿ ನೀಡಲಾಯಿತು. ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ತಮ್ಮ ಕನಸಿನ ಮನೆ ಹೊಂದುವ ದಾರಿಯಲ್ಲಿ ಈ ಗೃಹ ಸಾಲ ಮೇಳ ಮಹತ್ವದ ಹೆಜ್ಜೆಯಾಗಿದೆ.

ಸರ್ಕಾರದ ಆಶಯದಂತೆ “ಎಲ್ಲರಿಗೂ ವಸತಿ” ಎಂಬ ಗುರಿ ಸಾಧನೆಗೆ RGHCL ನಿರಂತರವಾಗಿ ಬದ್ಧವಾಗಿದೆ.

Photos from Rajiv Gandhi Housing Corporation Ltd's post 21/02/2026

ಗೂಲಿಮಂಗಲದಲ್ಲಿ Rajiv Gandhi Housing Corporation Limited (RGHCL) ವತಿಯಿಂದ ನಿರ್ಮಿಸಲಾಗಿರುವ “ಒಂದು ಲಕ್ಷ ಬೆಂಗಳೂರು ಬಹುಮಹಡಿ ವಸತಿ ಯೋಜನೆ” ಕಟ್ಟಡ ಸಮುಚ್ಚಯದ ಬಳಿ ಇಂದು ಅರ್ಹ ಫಲಾನುಭವಿಗಳಿಗಾಗಿ ವಿಶೇಷ ಗೃಹ ಸಾಲ ಮೇಳ ಯಶಸ್ವಿಯಾಗಿ ನಡೆಯಿತು.

ಈ ಮೇಳದಲ್ಲಿ ವಿವಿಧ ಬ್ಯಾಂಕ್‌ಗಳ ಪ್ರತಿನಿಧಿಗಳು ಭಾಗವಹಿಸಿ, ಫಲಾನುಭವಿಗಳಿಗೆ ಸಾಲ ಸೌಲಭ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಅಗತ್ಯ ದಾಖಲೆಗಳ ಪರಿಶೀಲನೆ, ಅರ್ಜಿ ಸ್ವೀಕಾರ ಹಾಗೂ ತ್ವರಿತ ಮಾರ್ಗದರ್ಶನದ ಮೂಲಕ ಮನೆ ಕನಸನ್ನು ನನಸು ಮಾಡಿಕೊಳ್ಳಲು ಸಹಕಾರ ನೀಡಲಾಯಿತು.

ಸರ್ಕಾರದ ವಸತಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದು, ಮನೆ ಇಲ್ಲದವರಿಗೆ ಮನೆ ಎಂಬ ಮಹತ್ತರ ಕನಸನ್ನು ನನಸು ಮಾಡುವ ದಿಸೆಯಲ್ಲಿ RGHCL ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ.
“ನಮ್ಮ ಮನೆ – ನಮ್ಮ ಭವಿಷ್ಯ” ಎಂಬ ಧ್ಯೇಯದೊಂದಿಗೆ ಪ್ರತಿಯೊಬ್ಬ ಅರ್ಹರಿಗೆ ಮನೆ ಸೌಲಭ್ಯ ಒದಗಿಸುವ ಕಾರ್ಯ ನಿರಂತರವಾಗಿ ಮುಂದುವರಿಯುತ್ತಿದೆ.

KarnatakaGovernment

20/02/2026

RGHCL ಗೃಹ ಸಾಲ ಮೇಳ – 2025

ನಿಮ್ಮ ಕನಸಿನ ಮನೆಗೆ ಈಗಲೇ ದೃಢ ಹೆಜ್ಜೆ ಇಡಿ.
ಅರ್ಹ ಫಲಾನುಭವಿಗಳಿಗಾಗಿ ವಿಶೇಷ ಅವಕಾಶವನ್ನು ಒದಗಿಸುತ್ತಿರುವ Rajiv Gandhi Housing Corporation Ltd ವತಿಯಿಂದ ಭವ್ಯ ಗೃಹ ಸಾಲ ಮೇಳ ಆಯೋಜಿಸಲಾಗಿದೆ.

ಜನಸಾಮಾನ್ಯರ ಮನೆ ಕನಸನ್ನು ನನಸಾಗಿಸುವ ಉದ್ದೇಶದಿಂದ ಈ ಮೇಳದಲ್ಲಿ ಗೃಹ ಸಾಲ ಯೋಜನೆಗಳ ಕುರಿತು ಸಂಪೂರ್ಣ ಮಾಹಿತಿ ಹಾಗೂ ನೇರ ಮಾರ್ಗದರ್ಶನ ನೀಡಲಾಗುತ್ತದೆ.

ಸ್ಥಳ ವಿವರಗಳು:👇

ಗೂಲಿಮಂಗಲ – ಸರ್ವೆ ನಂ. 67
ದೊಡ್ಡ ನಾಗಮಂಗಲ – ಸರ್ವೆ ನಂ. 11
ದಿನಾಂಕ: 21/02/2026
ಸಮಯ: ಬೆಳಗ್ಗೆ 11:00 ರಿಂದ ಸಂಜೆ 4:00 ರವರೆಗೆ..

ಮೇಳದ ವಿಶೇಷತೆಗಳು:
ಗೃಹ ಸಾಲ ಯೋಜನೆಗಳ ಕುರಿತು ಸಂಪೂರ್ಣ ಮಾಹಿತಿ
ಸ್ಥಳದಲ್ಲೇ ಅರ್ಜಿ ಸ್ವೀಕರಣೆ ಮತ್ತು ಮಾರ್ಗದರ್ಶನ
ಅಧಿಕಾರಿಗಳಿಂದ ನೇರ ಸಲಹೆ ಮತ್ತು ಸ್ಪಷ್ಟನೆ.

WhatsApp Chatbot ಸಹಾಯ: 9739774666

ನಿಮ್ಮ ಮನೆ ಕನಸಿಗೆ ನಿಜವಾದ ಸಾಕ್ಷಿ ಆಗಲು RGHCL ಸದಾ ನಿಮ್ಮೊಂದಿಗಿದೆ.

ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ನಿಮ್ಮ ಸ್ವಂತ ಮನೆ ಕನಸನ್ನು ಸಾಕಾರಗೊಳಿಸಿ.
B.Z. Zameer Ahmed Khan
Managing Director
Rajiv Gandhi Housing Corporation Ltd

Photos from Rajiv Gandhi Housing Corporation Ltd's post 18/02/2026

ಇಂದು “1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ” ಅಡಿಯಲ್ಲಿ ನಡೆಯುತ್ತಿರುವ ಪ್ರಥಮ ಹಂತದ (phase-1) ಕಾಮಗಾರಿಗಳ ಪ್ರಗತಿ ಪರಿಶೀಲನೆ ಹಾಗೂ ಬೆಲೆ ಏರಿಕೆ (Price Escalation) ಕುರಿತು ಕಾವೇರಿ ಭವನದಲ್ಲಿರುವ ರಾಜೀವ್ ಗಾಂಧಿ ವಸತಿ ನಿಗಮದ (RGHCL) 9ನೇ ಮಹಡಿಯ ಸಭಾಂಗಣದಲ್ಲಿ ಸಭೆ ನಡೆಯಿತು.

ಈ ಸಭೆಯನ್ನು ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪರಶುರಾಮ್ ಶಿನ್ನಾಳಕರ್ ಅಧ್ಯಕ್ಷತೆಯಲ್ಲಿ ಹಾಗೂ ಮುಖ್ಯ ಅಭಿಯಂತರರಾದ ಶ್ರೀ ಪರಶುರಾಮೇಗೌಡ ಅವರು ಮತ್ತು ತಾಂತ್ರಿಕ ಸಲಹಾ ಸಮಿತಿ (Technical Advisory Committee) ಸದಸ್ಯರ ಉಪಸ್ಥಿತಿಯಲ್ಲಿ ನಡೆಸಲಾಯಿತು.

ಸಭೆಯಲ್ಲಿ ಯೋಜನೆಯ ವಿವಿಧ ಹಂತಗಳ ಕಾಮಗಾರಿಗಳ ಪ್ರಗತಿ, ಗುಣಮಟ್ಟ ಹಾಗೂ ವೆಚ್ಚ ನಿರ್ವಹಣೆ ಕುರಿತು ಸಮಗ್ರವಾಗಿ ಚರ್ಚೆ ನಡೆಸಿ, ಮುಂದಿನ ಕ್ರಮಗಳ ಬಗ್ಗೆ ಅಗತ್ಯ ನಿರ್ದೇಶನಗಳನ್ನು ನೀಡಲಾಯಿತು.

Photos from Rajiv Gandhi Housing Corporation Ltd's post 14/02/2026

ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ (RGHCL) ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪರಶುರಾಮ್ ಶಿನ್ನಾಳಕರ್ ಅವರು ದಿನಾಂಕ 13.02.2026 ರಂದು ಆನೆಕಲ್ ತಾಲ್ಲೂಕಿನ ಲಿಂಗಾಪುರದಲ್ಲಿರುವ OLH (ಒನ್ ಲಕ್ಷ ಹೌಸಿಂಗ್) ಯೋಜನೆಯ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಭೇಟಿಯ ವೇಳೆ ಕಾಮಗಾರಿಗಳ ಪ್ರಗತಿ, ಗುಣಮಟ್ಟ ಹಾಗೂ ಸಮಯಪಾಲನೆಯ ಬಗ್ಗೆ ಅಧಿಕಾರಿಗಳೊಂದಿಗೆ ಸಮಗ್ರವಾಗಿ ಚರ್ಚಿಸಿ, ನಿರ್ಮಾಣ ಕಾರ್ಯದಲ್ಲಿ ಯಾವುದೇ ವಿಳಂಬವಾಗದಂತೆ ಹಾಗೂ ಸರ್ಕಾರದ ಮಾರ್ಗಸೂಚಿಗಳಂತೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಂಬಂಧಿತ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು.

ಈ ಸಂದರ್ಭದಲ್ಲಿ ಸ್ಥಳೀಯ ಇಂಜಿನಿಯರ್‌ಗಳು, ಯೋಜನಾ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಉಪಸ್ಥಿತರಿದ್ದರು. ಸಾರ್ವಜನಿಕರಿಗೆ ಗುಣಮಟ್ಟದ ವಸತಿ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ನಿಗಮ ಬದ್ಧವಾಗಿದ್ದು, ಯೋಜನೆಗಳು ವೇಗವಾಗಿ ಪೂರ್ಣಗೊಳ್ಳುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ.






SiteVisit
HousingForAll
GovernmentOfKarnataka
OneLakhHousing
AffordableHousing
KarnatakaHousing
PublicService

Photos from Rajiv Gandhi Housing Corporation Ltd's post 10/02/2026

ತಾಂತ್ರಿಕ ಸಲಹಾ ಸಮಿತಿ ಸಭೆ.

ರಾಜೀವ್ ಗಾಂಧಿ ವಸತಿ ನಿಗಮ (RGHCL) ವತಿಯಿಂದ ಬೆಂಗಳೂರು ಕಾವೇರಿ ಭವನದ ಕಚೇರಿಯಲ್ಲಿ, ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪರಶುರಾಮ್ ಶಿನ್ನಾಳಕರ್ ಅವರ ನೇತೃತ್ವದಲ್ಲಿ ವಿವಿಧ ವಸತಿ ಯೋಜನೆಗಳಿಗೆ ಸಂಬಂಧಿಸಿದ ತಾಂತ್ರಿಕ ವಿಷಯಗಳ ಕುರಿತು ಮಹತ್ವದ ತಾಂತ್ರಿಕ ಸಲಹಾ ಸಮಿತಿ ಸಭೆ ಆಯೋಜಿಸಲಾಯಿತು.

ಈ ಸಭೆಯಲ್ಲಿ RGHCL ನ ಮುಖ್ಯ ಅಭಿಯಂತರರಾದ ಶ್ರೀ ಪರಶುರಾಮೇಗೌಡ, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು ಭಾಗವಹಿಸಿ, ಯೋಜನೆಗಳ ಗುಣಮಟ್ಟ, ಅನುಷ್ಠಾನ ಮತ್ತು ತಾಂತ್ರಿಕ ಅಂಶಗಳ ಬಗ್ಗೆ ಸಮಗ್ರ ಚರ್ಚೆ ನಡೆಸಿದರು.

Photos from Rajiv Gandhi Housing Corporation Ltd's post 10/02/2026

ಬೆಂಗಳೂರು ನಗರದ ಕಡತನಮಲೆ ಯಲ್ಲಿ ರಾಜೀವ್ ಗಾಂಧಿ ವಸತಿ ನಿಗಮ (RGHCL) ವತಿಯಿಂದ ನಿರ್ಮಾಣಗೊಳ್ಳುತ್ತಿರುವ “1 ಲಕ್ಷ ಬಹುಮಹಡಿ ವಸತಿ ಯೋಜನೆ”ಯ ಕಟ್ಟಡ ನಿರ್ಮಾಣ ಸ್ಥಳಕ್ಕೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪರಶುರಾಮ್ ಶಿನ್ನಾಳಕರ್ ಅವರು ಸ್ಥಳ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಯೋಜನೆಯ ಇಂಜಿನಿಯರ್‌ಗಳು ಮತ್ತು ಅಧಿಕಾರಿಗಳಿಂದ ಮೂಲಸೌಕರ್ಯ ಅಭಿವೃದ್ಧಿ ಸಂಬಂಧಿತ ಮಾಹಿತಿ ಪಡೆದು, ಕಾಮಗಾರಿಯನ್ನು ಸಮಯಬದ್ಧವಾಗಿ ಹಾಗೂ ಗುಣಮಟ್ಟದೊಂದಿಗೆ ಪೂರ್ಣಗೊಳಿಸುವಂತೆ ಅಗತ್ಯ ಸೂಚನೆಗಳನ್ನು ನೀಡಿದರು.

Photos from Rajiv Gandhi Housing Corporation Ltd's post 10/02/2026

ಬೆಂಗಳೂರು ನಗರದ ತಮ್ಮರಸನಹಳ್ಳಿ ಯಲ್ಲಿ ರಾಜೀವ್ ಗಾಂಧಿ ವಸತಿ ನಿಗಮ (RGHCL) ವತಿಯಿಂದ ನಿರ್ಮಾಣಗೊಳ್ಳುತ್ತಿರುವ “1 ಲಕ್ಷ ಬಹುಮಹಡಿ ವಸತಿ ಯೋಜನೆ”ಯ ಕಟ್ಟಡ ನಿರ್ಮಾಣ ಸ್ಥಳಕ್ಕೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪರಶುರಾಮ್ ಶಿನ್ನಾಳಕರ್ ಅವರು ಸ್ಥಳ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಯೋಜನೆಯ ಇಂಜಿನಿಯರ್‌ಗಳು ಮತ್ತು ಅಧಿಕಾರಿಗಳಿಂದ ಮೂಲಸೌಕರ್ಯ ಅಭಿವೃದ್ಧಿ ಸಂಬಂಧಿತ ಮಾಹಿತಿ ಪಡೆದು, ಕಾಮಗಾರಿಯನ್ನು ಸಮಯಬದ್ಧವಾಗಿ ಹಾಗೂ ಗುಣಮಟ್ಟದೊಂದಿಗೆ ಪೂರ್ಣಗೊಳಿಸುವಂತೆ ಅಗತ್ಯ ಸೂಚನೆಗಳನ್ನು ನೀಡಿದರು.

Photos from Rajiv Gandhi Housing Corporation Ltd's post 10/02/2026

ಬೆಂಗಳೂರು ನಗರದ ಮುತ್ತುಗದಹಳ್ಳಿ ಯಲ್ಲಿ ರಾಜೀವ್ ಗಾಂಧಿ ವಸತಿ ನಿಗಮ (RGHCL) ವತಿಯಿಂದ ನಿರ್ಮಾಣಗೊಳ್ಳುತ್ತಿರುವ “1 ಲಕ್ಷ ಬಹುಮಹಡಿ ವಸತಿ ಯೋಜನೆ”ಯ ಕಟ್ಟಡ ನಿರ್ಮಾಣ ಸ್ಥಳಕ್ಕೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪರಶುರಾಮ್ ಶಿನ್ನಾಳಕರ್ ಅವರು ಸ್ಥಳ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಯೋಜನೆಯ ಇಂಜಿನಿಯರ್‌ಗಳು ಮತ್ತು ಅಧಿಕಾರಿಗಳಿಂದ ಮೂಲಸೌಕರ್ಯ ಅಭಿವೃದ್ಧಿ ಸಂಬಂಧಿತ ಮಾಹಿತಿ ಪಡೆದು, ಕಾಮಗಾರಿಯನ್ನು ಸಮಯಬದ್ಧವಾಗಿ ಹಾಗೂ ಗುಣಮಟ್ಟದೊಂದಿಗೆ ಪೂರ್ಣಗೊಳಿಸುವಂತೆ ಅಗತ್ಯ ಸೂಚನೆಗಳನ್ನು ನೀಡಿದರು.

Photos from Rajiv Gandhi Housing Corporation Ltd's post 10/02/2026

ಬೆಂಗಳೂರು ನಗರದ ಕೊಲುವರಾಯನಹಳ್ಳಿಯ ಸರ್ವೇ ನಂ 70 ರಲ್ಲಿ ರಾಜೀವ್ ಗಾಂಧಿ ವಸತಿ ನಿಗಮ (RGHCL) ವತಿಯಿಂದ ನಿರ್ಮಾಣಗೊಳ್ಳಲಿರುವ “1 ಲಕ್ಷ ಬಹುಮಹಡಿ ವಸತಿ ಯೋಜನೆ”ಯ ಕಟ್ಟಡ ನಿರ್ಮಾಣ ಸ್ಥಳಕ್ಕೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪರಶುರಾಮ್ ಶಿನ್ನಾಳಕರ್ ಅವರು ಸ್ಥಳ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಯೋಜನೆಯ ಇಂಜಿನಿಯರ್‌ಗಳು ಮತ್ತು ಅಧಿಕಾರಿಗಳಿಂದ ಮೂಲಸೌಕರ್ಯ ಅಭಿವೃದ್ಧಿ ಸಂಬಂಧಿತ ಮಾಹಿತಿ ಪಡೆದು, ಕಾಮಗಾರಿಯನ್ನು ಸಮಯಬದ್ಧವಾಗಿ ಹಾಗೂ ಗುಣಮಟ್ಟದೊಂದಿಗೆ ಪೂರ್ಣಗೊಳಿಸುವಂತೆ ಅಗತ್ಯ ಸೂಚನೆಗಳನ್ನು ನೀಡಿದರು.

Want your business to be the top-listed Government Service in Bangalore?

Click here to claim your Sponsored Listing.

Location

Address

Cauvery Bhavan
Bangalore
560009