29/05/2026
ಹಿಂದೂ ಜೈಭೀಮ್ ಸೇನೆ ಸಂಘಟನೆ. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ವಾರ್ಡ್ 142 (ಸುಂಕೆನಹಳ್ಳಿ ) ಕೊಹಿನೂರ್ ಸಾರ್ವಜನಿಕರ ಆಟದ ಮೈದಾನದಲ್ಲಿದ ಅವ್ಯವಸ್ಥೆ ಯನ್ನು ದಿನಾಂಕ 15 ಮೇ ಯಂದು ಸಂಬಂಧಪಟ್ಟ GBA ಜೊತೆ ಸಮಾಲೋಚನೆ ಮಾಡಿ ಸ್ವಚ್ಛತೆ ಮತ್ತು ಸುಲಭ ಶೌಚಾಲಯ ನವೀಕರಣ ಕಾಮಗಾರಿಯನ್ನು ಮಾಡಿಸಲಾಯಿತು.
22/05/2026
ಇಂದು ಬೆಂಗಳೂರಿನ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಸಿದ್ದಾಪುರದ ಕೆಎಂ ಕಾಲೋನಿಯಲ್ಲಿ( ವೆಂಕಟರೆಡ್ಡಿ ನಗರ ) ನಡೆದ ಊರ ಹಬ್ಬದಲ್ಲಿ ತಾಯಿ "ಅಣ್ಣಮ್ಮ. ಗಂಗಮ್ಮ. ಅಟ್ಟಿಲಕ್ಕಮ್ಮ. ಹಾಗೂ ಇನ್ನಿತರ ದೇವತೆಗಳ "ಪೂಜೆ. ಸಾಂಸ್ಕೃತಿಕ. ಕಾರ್ಯಕ್ರಮ ಹಾಗೂ "ಅನ್ನದಾನವನ್ನು ಹಮ್ಮಿಕೊಳ್ಳಲಾಯಿತು. ಇದರ ಅಂಗವಾಗಿ "ಹಿಂದೂ ಜೈ ಭೀಮ್ ಸೇನೆಯ. ಸಂಸ್ಥಾಪಕ ರಾಜ್ಯಾಧ್ಯಕ್ಷರು ಚಂದ್ರಶೇಖರ್ (ಕೋಟೆ ಶೇಕಿ ) ರವಿ ಪಿ. ರಾಜ್ಯ ವಕ್ತಾರರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ ಸಂದರ್ಭ
15/05/2026
ಈ ದಿನ ಹಿಂದೂ ಜೈ ಭೀಮ್ ಸೇನೆಯ ರಾಜ್ಯ ಅಧ್ಯಕ್ಷರಾದ ಮತ್ತು ಸಂಸ್ಥಾಪಕರಾದ ಶ್ರೀ ಚಂದ್ರಶೇಖರ್ (ಕೋಟೆ ಶೇಕಿ) ರವರ ನೇತೃತ್ವದಲ್ಲಿ "ಸಹಾಯಕ ಕಾರ್ಯಪಾಲಕ ಅಭಿಯಂತರರು."
ಆರೋಗ್ಯ ಮತ್ತು ನೈರ್ಮಲ್ಯ ಇಲಾಖೆ, ಕಾಮಗಾರಿಗಳ ಯೋಜನೆ ಇಲಾಖೆ.ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ವಾರ್ಡ್ ಸಂಖ್ಯೆ: 142 (ಸುಂಕೇನಹಳ್ಳಿ),ಯ ಕೊಹಿನೂರು ಸಾರ್ವಜನಿಕ ಆಟದ ಮೈದಾನದಲ್ಲಿ 10 ವರ್ಷಗಳ ಗಳ ಹಿಂದೆ ನಿರ್ಮಿಸಿರುವ ಸುಲಭ ಶೌಚಾಲಯವನ್ನು ಸಾರ್ವಜನಿಕರ ಬಳಕೆಗೆ ಮತ್ತು ವ್ಹಾಯಾಮ ಕೇಂದ್ರ (GYM) ಶಟಲ್ ಕಾಕ್ ಕೋರ್ಟ್ ಅನ್ನು ನಿರ್ಮಿಸಲಾಗಿದೆ ಇಲ್ಲಿಯವರೆಗೂ ಅಧಿಕೃತವಾಗಿ ಸಾರ್ವಜನಿಕರ ಬಳಕೆಗೆ ಮುಕ್ತವಾಗಿರುವುದಿಲ್ಲ ಇದರಿಂದ ಹಿರಿಯ ನಾಗರಿಕರಿಗೂ ಯುವಕರಿಗೂ ಮತ್ತು ಕ್ರೀಡಾಪಟುಗಳಿಗೆ ತೊಂದರೆಯಾಗುತ್ತಿರುವುದನ್ನು ಗಮನಿಸಿದ ಹಿಂದೂ ಜೈ ಭೀಮ್ ಸಂಘಟನೆಯು ಈ ದಿನ ಸಂಬಂಧಪಟ್ಟ ಇಲಾಖೆಗಳಿಗೆ ಭೇಟಿ ನೀಡಿ ಮನವಿ ಪತ್ರ ಕೊಡುವುದರ ಮೂಲಕ ಅತಿ ಶೀಘ್ರದಲ್ಲಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸುಲಾಗಿದೆ.ಈ ಸಂದರ್ಭದಲ್ಲಿ ರಾಜ್ಯ ವಕ್ತಾರಾದ ಶ್ರೀ ರವಿ ರವರು. ಪದಾಧಿಕಾರಿಗಳು ಭಾಗವಹಿಸಿದರು.
27/04/2026
ನೆನ್ನೆ ಛತ್ರಪತಿ ಶಿವಾಜಿ ಮಹಾರಾಜ್ ರವರ 399 ನೇ ಹುಟ್ಟುಹಬ್ಬದ ಪ್ರಯುಕ್ತ ಶಿವಾಘರ್ಜನಾ ಯುವ ಸೇನಾ ಬೆಂಗಳೂರಿನ ಮಲ್ಲೇಶ್ವರಂ ನ. ಕಾಡು ಮಲ್ಲೇಶ್ವರ ದೇವಸ್ಥಾನದಿಂದ ಹಮ್ಮಿಕೊಂಡಿದ ಜಾತದಲ್ಲಿ ಹಿಂದೂ ಜೈ ಭೀಮ್ ಸೇನೆ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಚಂದ್ರಶೇಖರ (ಕೋಟೆ ಶೇಕಿ ) ರವರು. ಶ್ರೀ ಭಾರತ್ ಕುಮಾರ್ ರವರು ಪ್ರಧಾನ ಕಾರ್ಯದರ್ಶಿ (ಸಮಾಜ ಸೇವಕರು ) ಶ್ರೀ ರವಿ ರವರು ರಾಜ್ಯ ವಕ್ತಾರರು ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ ಕ್ಷಣಗಳು.