31/05/2026
ಐಪಿಎಲ್‌ನಲ್ಲಿ ಐತಿಹಾಸಿಕ ವಿಜಯ ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು!
ತಂಡದ ಪರಿಶ್ರಮ, ಸಮರ್ಪಣೆ ಹಾಗೂ ಹೋರಾಟದ ಮನೋಭಾವಕ್ಕೆ ಈ ಗೆಲುವು ಅತ್ಯುತ್ತಮ ಪ್ರತಿಫಲವಾಗಿದೆ. ಈ ಅದ್ಭುತ ಪಯಣದಲ್ಲಿ ತಂಡದ ಆಟಗಾರರು, ತರಬೇತುದಾರರು, ಆಡಳಿತ ಮಂಡಳಿ ಹಾಗೂ ಆರಂಭದಿಂದಲೂ ತಂಡದೊಂದಿಗೆ ನಿಂತ ಕೋಟ್ಯಂತರ ಅಭಿಮಾನಿಗಳಿಗೆ ಅಭಿನಂದನೆಗಳು.
Heartiest congratulations to the Royal Challengers Bengaluru (RCB) on their historic IPL victory!
A truly well-deserved triumph that reflects the team's perseverance, dedication, and fighting spirit. Congratulations to the players, coaching staff, management, and the millions of passionate fans who stood by the team throughout this remarkable journey.
31/05/2026
ನೆಚ್ಚಿನ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಅವರ ‘ಮನ್ ಕೀ ಬಾತ್’ ಕಾರ್ಯಕ್ರಮವನ್ನು ವಿವಿಧ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ತೆರಳುತ್ತಿದ್ದ ಸಂದರ್ಭದಲ್ಲಿ ಕಾರಿನಲ್ಲೇ ವೀಕ್ಷಿಸಿ ಆಲಿಸಲಾಯಿತು.
ಪ್ರಧಾನಮಂತ್ರಿಗಳ ಪ್ರೇರಣಾದಾಯಕ ವಿಚಾರಗಳು, ದೇಶದ ಅಭಿವೃದ್ಧಿಯ ಕುರಿತಾದ ದೃಷ್ಟಿಕೋನ ಹಾಗೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರ ಕಥನಗಳು ಸದಾ ಹೊಸ ಚೈತನ್ಯ ಮತ್ತು ಸ್ಪೂರ್ತಿಯನ್ನು ತುಂಬುತ್ತವೆ. 🇮🇳
Watched and listened to the beloved Prime Minister, Shri Narendra Modi's Mann Ki Baat programme while travelling by car to participate in various public events.
The Prime Minister’s inspiring thoughts, vision for the nation’s development, and stories of individuals making a positive impact across different sectors of society continue to instill new energy, motivation, and a sense of purpose. 🇮🇳
30/05/2026
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರ ಕಚೇರಿ ಹಾಗೂ ಗರುಡ ಫೌಂಡೇಶನ್ ಬೆಂಗಳೂರು ಇವರ ಸಹಯೋಗದಲ್ಲಿ ಹೊಂಬೇಗೌಡನಗರ ವಾರ್ಡ್‌ನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉನ್ನತ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ವಿಲ್ಸನ್ ಗಾರ್ಡನ್‌ನ ಹೊಂಬೇಗೌಡ ಶಾಲೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಸ್ಥಳೀಯ ನಿವಾಸಿಗಳು ಉತ್ಸಾಹದಿಂದ ಭಾಗವಹಿಸಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಹಾಗೂ ಅವರಲ್ಲಿ ಉನ್ನತ ಗುರಿಗಳನ್ನು ಸಾಧಿಸುವ ಸ್ಪೂರ್ತಿ ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.
ಕಾರ್ಯಕ್ರಮದಲ್ಲಿ ಗರುಡ ಫೌಂಡೇಶನ್ ಬೆಂಗಳೂರು ವ್ಯವಸ್ಥಾಪಕ ಟ್ರಸ್ಟಿ ಶ್ರೀಮತಿ ಮೇದಿನಿ ಉದಯ್ ಗರುಡಾಚಾರ್, ಹೊಂಬೇಗೌಡ ಶಾಲೆಯ ಅಧ್ಯಕ್ಷರಾದ ಶ್ರೀ ನಾರಾಯಣ ರೆಡ್ಡಿ, ಬೆಂಗಳೂರು ದಕ್ಷಿಣ ಜಿಲ್ಲಾ ಉಪಾಧ್ಯಕ್ಷೆ ಶ್ರೀಮತಿ ಭಗವತಿ ಅಮರೇಶ್, ಚಿಕ್ಕಪೇಟೆ ಮಂಡಲ ಬಿಜೆಪಿ ಅಧ್ಯಕ್ಷರಾದ ಶ್ರೀ ಧನರಾಜ್, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸುಯೋಧನ್, ಜಿಬಿಎ ಮಾಜಿ ಸದಸ್ಯರಾದ ಶ್ರೀ ಸತ್ಯರಾಜ್, ಬಿಜೆಪಿ ಬಿಎಲ್‌ಎ-೧ ಶ್ರೀ ಗಜೇಂದ್ರ, ಮಂಡಲ ಬಿಜೆಪಿ ಪದಾಧಿಕಾರಿಗಳಾದ ಶ್ರೀ ಕಾಂತಿಲಾಲ್ ಹಾಗೂ ಶ್ರೀ ಅಶೋಕ್ ಯಾದವ್, ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ರೀಮತಿ ಪದ್ಮ ನಯನ, ವಾರ್ಡ್ ಬಿಜೆಪಿ ಅಧ್ಯಕ್ಷರಾದ ಶ್ರೀ ರೇವಣಸಿದ್ದಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರವಿಚಂದ್ರನ್ ಹಾಗೂ ಶ್ರೀ ರಾಜಕುಮಾರ್ ಸೇರಿದಂತೆ ಅನೇಕ ಗಣ್ಯರು, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಅವರ ಪರಿಶ್ರಮ, ಸಮರ್ಪಣೆ ಹಾಗೂ ಅತ್ಯುತ್ತಮ ಶೈಕ್ಷಣಿಕ ಸಾಧನೆಗೆ ಅಭಿನಂದನೆ ಸಲ್ಲಿಸಲಾಯಿತು. ವಿದ್ಯಾರ್ಥಿಗಳೆಲ್ಲರೂ ಉಜ್ವಲ ಭವಿಷ್ಯವನ್ನು ನಿರ್ಮಿಸಿಕೊಳ್ಳಲಿ ಎಂದು ಶುಭ ಹಾರೈಸಲಾಯಿತು.
The Chickpet Assembly Constituency MLA Office, in association with Garuda Foundation Bengaluru, organized a felicitation programme for meritorious SSLC students of Hombegowdanagar Ward who excelled in their examinations.
The programme was held at Hombegowda School, Wilson Garden, and witnessed the enthusiastic participation of students, parents, and local residents. The initiative aimed to recognize and encourage academic excellence among young achievers and inspire them to pursue higher goals in their educational journey.
The event was graced by the presence of Garuda Foundation Bengaluru Managing Trustee Smt. Medini Uday Garudachar, Hombegowda School Chairman Shri Narayan Reddy, Bengaluru South District Vice President Smt. Bhagavathi Amaresh, Chickpet Mandal BJP President Shri Dhanaraj, Mandal General Secretary Shri Suyodhan, GBA Ex-Councillor Shri Sathyaraj, BJP BLA-1 Shri Gajendra, Mandal BJP Office Bearers Shri Kanthilal and Shri Ashok Yadav, Mandal Mahila Morcha President Smt. Padma Nayana, Ward BJP President Shri Revana Siddappa, General Secretaries Shri Ravichandran and Shri Rajakumar, along with several other party leaders, office bearers, and dignitaries.
The meritorious students were felicitated and congratulated for their hard work, dedication, and outstanding academic performance. Best wishes were extended to all the students for a bright and successful future.
30/05/2026
ಜಯನಗರದ ತಿಲಕ್ ನಗರದಲ್ಲಿರುವ ಶ್ರೀ ಮಹಾಶಕ್ತಿ ಮಾರಿಯಮ್ಮ ದೇವಸ್ಥಾನದ 54ನೇ ವರ್ಷದ ಭವ್ಯ ಹೂವಿನ ಕರಗ ಮಹೋತ್ಸವದ ಅಂಗವಾಗಿ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಿಯ ದರ್ಶನ ಪಡೆದು ರಾಜ್ಯದ ಸುಖ, ಶಾಂತಿ, ಸಮೃದ್ಧಿ ಹಾಗೂ ಸರ್ವ ಜನರ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಪವಿತ್ರ ಸಂದರ್ಭದಲ್ಲಿ ಬಿ.ಹೆಚ್.ಇ.ಎಲ್ ವಾರ್ಡ್‌ನ ಬಿಜೆಪಿ ಅಧ್ಯಕ್ಷರಾದ ಶ್ರೀ ಮಣಿಕಂಠ, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಭಕ್ತಾದಿಗಳು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
ಸಂಪ್ರದಾಯ, ಸಂಸ್ಕೃತಿ ಮತ್ತು ಭಕ್ತಿಯ ಪ್ರತೀಕವಾಗಿರುವ ಇಂತಹ ಧಾರ್ಮಿಕ ಉತ್ಸವಗಳು ಸಮಾಜದಲ್ಲಿ ಐಕ್ಯತೆ, ಸೌಹಾರ್ದತೆ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಮತ್ತಷ್ಟು ಬಲಪಡಿಸುತ್ತವೆ.
Visited the Sri Mahashakti Mariyamma Temple in Tilak Nagar, Jayanagar, on the occasion of its 54th Annual Grand Hoovina Karaga Mahotsava. Offered prayers and sought the blessings of the Goddess for peace, prosperity, well-being, and the welfare of all people.
On this auspicious occasion, BJP BHEL Ward President Shri Manikanta, members of the temple administration committee, devotees, and local leaders were present.
Such religious festivals, which symbolize our rich traditions, culture, and devotion, play a vital role in strengthening social harmony, unity, and spiritual values within society.
29/05/2026
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಎಸ್.ಜೆ. ಪಾರ್ಕ್ ವಾರ್ಡ್‌ನ ಕೆ.ಎಸ್. ಗಾರ್ಡನ್ ಪ್ರದೇಶಕ್ಕೆ ಭೇಟಿ ನೀಡಿ, ಸ್ಥಳೀಯ ನಿವಾಸಿಗಳು ಎದುರಿಸುತ್ತಿರುವ ಕುಡಿಯುವ ನೀರು ಸರಬರಾಜು ಸಂಬಂಧಿತ ಸಮಸ್ಯೆಗಳ ಕುರಿತು ಸಾರ್ವಜನಿಕರಿಂದ ಮಾಹಿತಿ ಪಡೆದು ಸ್ಥಳ ಪರಿಶೀಲನೆ ನಡೆಸಲಾಯಿತು.
ಈ ವೇಳೆ ಸಮಸ್ಯೆಗಳ ಕುರಿತು ನಿವಾಸಿಗಳೊಂದಿಗೆ ಸವಿಸ್ತಾರವಾಗಿ ಚರ್ಚಿಸಿ, ನನ್ನೊಂದಿಗೆ ಉಪಸ್ಥಿತರಿದ್ದ ಬಿ.ಡಬ್ಲ್ಯೂ.ಎಸ್.ಎಸ್.ಬಿ ಅಧಿಕಾರಿಗಳಿಗೆ ಅಗತ್ಯ ಕ್ರಮಗಳನ್ನು ತ್ವರಿತವಾಗಿ ಕೈಗೊಂಡು ಸಮಸ್ಯೆಯನ್ನು ಶೀಘ್ರ ಬಗೆಹರಿಸುವಂತೆ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ಚಿಕ್ಕಪೇಟೆ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸುಯೋಧನ್, ಮಂಡಲ ಬಿಜೆಪಿ ಮುಖಂಡರಾದ ಶ್ರೀ ಗಿರೀಶ್ ಪುಟ್ಟಪ್ಪ, ವಾರ್ಡ್ ಬಿಜೆಪಿ ಅಧ್ಯಕ್ಷರಾದ ಶ್ರೀ ವಸಂತ್ ಕುಮಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Visited the K.S. Garden area of S.J. Park Ward in Chickpet Assembly Constituency and conducted a spot inspection after receiving information from local residents regarding issues related to drinking water supply.
During the visit, detailed discussions were held with the residents about the prevailing problems, and the BWSSB officials present were instructed to take immediate necessary action and resolve the issue at the earliest.
On this occasion, Chickpet Mandal BJP General Secretary Shri Suyodhan, Mandal BJP leader Shri Girish Puttappa, Ward BJP President Shri Vasanth Kumar, and others were present.
29/05/2026
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ತೇಜಸ್ವಿ ಸೂರ್ಯ ಅವರ ಕಚೇರಿಯಲ್ಲಿ ಆಯೋಜಿಸಲಾದ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಪದಾಧಿಕಾರಿಗಳು ಹಾಗೂ ಬಿಎಲ್ಎ-1 ಕಾರ್ಯಕರ್ತರ ಮಹತ್ವದ ಸಭೆಯಲ್ಲಿ ಭಾಗವಹಿಸಲಾಯಿತು.
ಈ ಸಭೆಯಲ್ಲಿ ಎಸ್.ಐ.ಆರ್ ಅನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಹಾಗೂ ಸಂಘಟಿತ ರೀತಿಯಲ್ಲಿ ಅನುಷ್ಠಾನಗೊಳಿಸುವ ಕುರಿತು ಸವಿಸ್ತಾರವಾಗಿ ಚರ್ಚಿಸಿ, ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಸಂಸದರಾದ ಶ್ರೀ ತೇಜಸ್ವಿ ಸೂರ್ಯ, ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷರು ಹಾಗೂ ಶಾಸಕರಾದ ಶ್ರೀ ಸಿ.ಕೆ.ರಾಮಮೂರ್ತಿ, ಜಿಲ್ಲಾ ಬಿಜೆಪಿ ಪದಾಧಿಕಾರಿಗಳು, ವಿವಿಧ ಮಂಡಲಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
Participated in an important meeting of Bengaluru South District BJP office bearers and BLA-1 workers held at the office of Bengaluru South Lok Sabha MP Shri Tejasvi Surya.
During the meeting, detailed discussions were held on implementing the S.I.R. more effectively and in an organized manner, along with deliberations on future strategies.
On this occasion, MP Shri Tejasvi Surya, Bengaluru South District BJP President and MLA Shri CK Ramamurthy, district BJP office bearers, presidents of various mandals, and party functionaries were present.
29/05/2026
ಕನ್ನಡ ಚಿತ್ರರಂಗದ ‘ರೆಬೆಲ್ ಸ್ಟಾರ್’, ಕೋಟ್ಯಂತರ ಅಭಿಮಾನಿಗಳ ಹೃದಯಸಾಮ್ರಾಟ್, ‘ಮಂಡ್ಯದ ಗಂಡು’ ನನ್ನ ಆತ್ಮೀಯ ಸ್ನೇಹಿತರಾದ ಶ್ರೀ ಅಂಬರೀಶ್ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು.
ಅವರ ಅದ್ಭುತ ಅಭಿನಯ, ಗಾಂಭೀರ್ಯಪೂರ್ಣ ವ್ಯಕ್ತಿತ್ವ, ಸದಾ ಹಸನ್ಮುಖಿ ಹಾಗೂ ಸ್ನೇಹಭಾವದ ನಡೆ-ನುಡಿ ಜನಮನದಲ್ಲಿ ಅಚಲವಾಗಿ ಉಳಿದಿವೆ. ಸಮಾಜದ ಬಡವರು ಮತ್ತು ನೊಂದವರ ಬಗ್ಗೆ ಅವರು ತೋರಿದ ಮಾನವೀಯ ಕಾಳಜಿ ಹಾಗೂ ಸಹಾಯಹಸ್ತ ಸದಾಕಾಲವೂ ಸ್ಮರಣೀಯ.
On the birth anniversary of Kannada cinema’s ‘Rebel Star’, the heartthrob of millions of fans, and the beloved ‘Mandyada Gandu’, my dear friend Shri Ambareesh, I offer my respectful tributes.
His exceptional acting, dignified personality, ever-smiling nature, and warm-hearted character continue to remain deeply etched in the hearts of people. His compassion and concern for the poor and the underprivileged, along with his ever-helping nature, will always be remembered.
#ಮಂಡ್ಯದಗಂಡು
27/05/2026
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಎಸ್.ಜೆ. ಪಾರ್ಕ್ ವಾರ್ಡ್‌ನ ಸಿ.ಕೆ.ಸಿ ಗಾರ್ಡನ್ ಪ್ರದೇಶಕ್ಕೆ ಭೇಟಿ ನೀಡಿ, ಸ್ಥಳೀಯ ನಿವಾಸಿಗಳು ಎದುರಿಸುತ್ತಿರುವ ವಿವಿಧ ಸಾರ್ವಜನಿಕ ಸಮಸ್ಯೆಗಳು ಹಾಗೂ ಮೂಲಭೂತ ಸೌಕರ್ಯಗಳ ಕೊರತೆಗಳ ಕುರಿತು ಸವಿಸ್ತಾರವಾಗಿ ಮಾಹಿತಿ ಪಡೆದು ಸ್ಥಳ ಪರಿಶೀಲನೆ ನಡೆಸಲಾಯಿತು.
ಈ ವೇಳೆ ಸಾರ್ವಜನಿಕರು ಪ್ರಸ್ತಾಪಿಸಿದ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಶೀಘ್ರ ಪರಿಹರಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ತಕ್ಷಣವೇ ಸೂಚನೆ ನೀಡಲಾಯಿತು.
ಈ ಸಂದರ್ಭದಲ್ಲಿ ಜಿಬಿಎ ಅಧಿಕಾರಿಗಳು, ಚಿಕ್ಕಪೇಟೆ ಮಂಡಲ ಬಿಜೆಪಿ ಅಧ್ಯಕ್ಷರಾದ ಶ್ರೀ ಧನರಾಜ್, ವಾರ್ಡ್ ಬಿಜೆಪಿ ಅಧ್ಯಕ್ಷರಾದ ಶ್ರೀ ವಸಂತ್ ಕುಮಾರ್ ಹಾಗೂ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
Visited the C.K.C. Garden area in S.J. Park Ward of Chickpet Assembly Constituency and conducted an on-site inspection after receiving detailed information regarding various public grievances and the lack of basic infrastructure facilities faced by local residents.
During the visit, immediate instructions were issued to the concerned officials to prioritize and resolve the issues raised by the public at the earliest.
GBA officials, Chickpet Mandal BJP President Shri Dhanaraj, Ward BJP President Shri Vasanth Kumar, along with local leaders and party workers, were also present on the occasion.
27/05/2026
ಬೆಂಗಳೂರಿನ ಗಾಂಧಿನಗರದಲ್ಲಿರುವ ಶ್ರೀ ಬ್ರಹ್ಮತಂತ್ರ ಸ್ವತಂತ್ರ ಪರಕಾಲ ಸ್ವಾಮಿ ಮಠದಲ್ಲಿ ಭಕ್ತಿಭಾವದಿಂದ ಆಯೋಜಿಸಲಾದ ಕೃಷ್ಣ ಯಜುರ್ವೇದ ತೈತ್ತಿರೀಯ ಮಂತ್ರ ಸ್ವಾಹಾಕಾರ ಯಜ್ಞದಲ್ಲಿ ಭಾಗವಹಿಸಿ, ಲೋಕಕ್ಷೇಮ, ಸಮಾಜದ ಶಾಂತಿ, ಸಮೃದ್ಧಿ ಹಾಗೂ ಸರ್ವರ ಒಳಿತಿಗಾಗಿ ಭಗವಂತನಲ್ಲಿ ಮನಃಸಂಕಲ್ಪಪೂರ್ವಕ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಪವಿತ್ರ ಸಂದರ್ಭದಲ್ಲಿ ಪರಮಪೂಜ್ಯ ಪರಕಾಲ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀಮದ್ ಅಭಿನವ ವಾಗೀಶ ಬ್ರಹ್ಮತಂತ್ರ ಸ್ವತಂತ್ರ ಪರಕಾಲ ಮಹಾದೇಶಿಕರವರ ಹಾಗೂ ಶ್ರೀ ಯದುಗಿರಿ ಯತಿರಾಜ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜಿಯರ್ ಸ್ವಾಮೀಜಿಯವರ ದಿವ್ಯ ಆಶೀರ್ವಾದ ಪಡೆದುಕೊಳ್ಳುವ ಸೌಭಾಗ್ಯ ದೊರಕಿತು.
ಈ ಸಂದರ್ಭದಲ್ಲಿ ಗರುಡ ಫೌಂಡೇಶನ್ ಮುಖ್ಯಸ್ಥೆ ಶ್ರೀಮತಿ ಮೇದಿನಿ ಉದಯ್ ಗರುಡಾಚಾರ್, ಅಶೋಕ ಪಿಲ್ಲರ್ ವಾರ್ಡ್ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶ್ರೀ ಮಧು ಶ್ರೀನಿವಾಸನ್ ಹಾಗೂ ಮಠದ ಭಕ್ತಾದಿಗಳು ಉಪಸ್ಥಿತರಿದ್ದರು.
Participated in the Krishna Yajurveda Taittiriya Mantra Swahakara Yajna, organized with great devotion at the Sri Brahmatantra Swatantra Parakala Swamy Mutt in Gandhinagar, Bengaluru, and offered prayers to the Almighty with a solemn resolve for the welfare of the world, peace in society, prosperity, and the well-being of all.
On this sacred occasion, I had the blessed opportunity to receive the divine blessings of the revered Peethadhipathi of Parakala Mutt, His Holiness Sri Sri Srimad Abhinava Vagisha Brahmatantra Swatantra Parakala Mahadeshikar, and the Peethadhipathi of Sri Yadugiri Yatiraja Mutt, His Holiness Sri Sri Yadugiri Yatiraja Narayana Ramanuja Jeeyar Swamiji.
Garuda Foundation Managing Trustee Smt. Medini Uday Garudachar, Ashok Pillar Ward BJP General Secretary Shri Madhu Srinivasan, and devotees of the Mutt were also present on the occasion.
27/05/2026
ಭಾರತೀಯ ಜನತಾ ಪಾರ್ಟಿಯ ಮಾಜಿ ರಾಷ್ಟ್ರೀಯ ಅಧ್ಯಕ್ಷರು, ದೂರದೃಷ್ಟಿಯ ನಾಯಕರು, ಅಭಿವೃದ್ಧಿಯ ಹರಿಕಾರರು ಹಾಗೂ ಕೇಂದ್ರ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವರಾದ ಶ್ರೀ ನಿತಿನ್ ಗಡ್ಕರಿ ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು.
ದೇಶದ ಮೂಲಸೌಕರ್ಯ ಅಭಿವೃದ್ಧಿಗೆ ಅವರ ದೂರದೃಷ್ಟಿಯ ನಾಯಕತ್ವ, ಕಾರ್ಯಕ್ಷಮತೆ ಮತ್ತು ನವಚಿಂತನೆ ಅಪಾರ ಕೊಡುಗೆಯನ್ನು ನೀಡಿದ್ದು, ಯುವಜನತೆಗೆ ಸದಾ ಪ್ರೇರಣೆಯಾಗಿದೆ.
ಭಗವಂತನು ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಮತ್ತು ಇನ್ನಷ್ಟು ಜನಸೇವೆಯ ಶಕ್ತಿಯನ್ನು ಕರುಣಿಸಲಿ ಎಂದು ಹಾರೈಸುತ್ತೇನೆ.
Heartfelt birthday wishes to Shri Nitin Gadkari, former National President of the Bharatiya Janata Party (BJP), a visionary leader, pioneer of development, and Union Minister for Road Transport and Highways.
His visionary leadership, efficiency, and innovative thinking have made immense contributions to the development of the nation’s infrastructure and continue to inspire the youth.
I pray to God to bless him with good health, long life, and continued strength to serve the nation.