04/06/2026
I was pleased to participate in the inauguration of Southway Coffee at Subramanyapura, Bengaluru, and convey my best wishes to the team.
Entrepreneurial initiatives like these contribute to local economic growth, create employment opportunities, and enrich community life. I wish Southway Coffee great success in its journey and hope it becomes a cherished destination for coffee lovers and families alike.
04/06/2026
ಭಾಷೆಗಳ ಗಡಿಗಳನ್ನು ಮೀರಿ ತಮ್ಮ ಗಾಯನದ ಮೂಲಕ ಕೋಟ್ಯಾಂತರ ಸಂಗೀತಪ್ರಿಯರ ಮನಸ್ಸನ್ನು ರಂಜಿಸಿದ ಪದ್ಮವಿಭೂಷಣ ಪುರಸ್ಕೃತ ದಿವಂಗತ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಜನ್ಮದಿನದಂದು ಶ್ರದ್ಧಾಪೂರ್ವಕ ನಮನಗಳು.
04/06/2026
ಮೈಸೂರು ಸಂಸ್ಥಾನವನ್ನು ಪ್ರಗತಿಯ ಪಥದಲ್ಲಿ ಮುನ್ನಡೆಸಿದ ಜನಪರ ದೊರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿಯಂದು ಗೌರವಪೂರ್ವಕ ಸ್ಮರಣೆ.
ಅವರ ದೂರದೃಷ್ಟಿಯ ಆಡಳಿತ ಮತ್ತು ಜನಪರ ಸೇವೆಗಳು ಸದಾ ಸ್ಮರಣೀಯ.
04/06/2026
The Government of India, the Ministry of Chemicals & Fertilizers, and the National Pharmaceutical Pricing Authority (NPPA) have fixed retail prices of 30 essential drug formulations used in the treatment of diabetes, hypertension, heart disease, infections, and women's health conditions.
This patient-centric initiative will help make life-saving and long-term medications more affordable, reducing the financial burden on millions of families across the country. Ensuring access to quality healthcare at reasonable prices is a significant step towards building a healthier and more equitable India.
Such measures reaffirm the commitment to affordable healthcare and the welfare of every citizen.
03/06/2026
ಜನ್ಮದಿನದ ಹಿನ್ನಲೆ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ M Krishnappa ಅವರ ನಿವಾಸಕ್ಕೆ ಭೇಟಿ ನೀಡಿ ಅವರಿಗೆ ಶುಭ ಕೋರಿದೆ.
ಜನಸೇವೆ ಮಾಡಲು ಭಗವಂತ ಹೆಚ್ಚಿನ ಶಕ್ತಿ ಕರುಣಿಸಲೆಂದು ಶುಭ ಹಾರೈಸಿದೆ.
03/06/2026
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಶ್ರೀ DK Shivakumar ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಸಾರ್ವಜನಿಕ ಜೀವನದಲ್ಲಿ ಅಪಾರ ಅನುಭವ ಹೊಂದಿರುವ ತಾವು ಕರ್ನಾಟಕವನ್ನು ಮತ್ತಷ್ಟು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸುವಿರಿ ಎಂಬ ವಿಶ್ವಾಸವಿದೆ. ರಾಜ್ಯದ ಸಮಗ್ರ ಅಭಿವೃದ್ಧಿಯೊಂದಿಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಜನರ ಆಶೋತ್ತರಗಳಿಗೆ ಸ್ಪಂದಿಸಿ, ಈ ಭಾಗದ ಅಭಿವೃದ್ಧಿಗೂ ವಿಶೇಷ ಆದ್ಯತೆ ನೀಡುವಿರಿ ಎಂದು ನಿರೀಕ್ಷಿಸುತ್ತೇನೆ.
ತಮ್ಮ ಆಡಳಿತಾವಧಿ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ. ಶುಭವಾಗಲಿ.
03/06/2026
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಪ್ರತಿಷ್ಠಿತ ಎಂ.ಇ.ಎಸ್ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಪ್ರಥಮ ಪಿಯುಸಿ ಉದ್ಘಾಟನಾ ಕಾರ್ಯಕ್ರಮ ಹಾಗೂ ದತ್ತಿ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದೆ.
ಶಿಕ್ಷಣವು ಕೇವಲ ಅಂಕಗಳು ಅಥವಾ ಪದವಿಗಳಿಗೆ ಸೀಮಿತವಾಗಿರದೆ, ವ್ಯಕ್ತಿತ್ವ, ಮೌಲ್ಯಗಳು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ಸಾಧನವಾಗಬೇಕು ಎಂದು ತಿಳಿಸಿದೆ. ವಿದ್ಯಾರ್ಥಿಗಳು ದೊಡ್ಡ ಕನಸುಗಳನ್ನು ಕಾಣಬೇಕು, ಕಠಿಣ ಪರಿಶ್ರಮ, ಆತ್ಮವಿಶ್ವಾಸ ಮತ್ತು ಬದ್ಧತೆಯೊಂದಿಗೆ ತಮ್ಮ ಗುರಿಗಳನ್ನು ಸಾಧಿಸಬೇಕು ಎಂದು ಕರೆ ನೀಡಿದೆ.
ಇಂದಿನ AI ಯುಗದಲ್ಲಿ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳುವ ಜೊತೆಗೆ ನಮ್ಮ ಚಿಂತನಶಕ್ತಿ ಮತ್ತು ಸೃಜನಶೀಲತೆಯನ್ನು ಸದಾ ಸಕ್ರಿಯವಾಗಿರಿಸಿಕೊಳ್ಳಬೇಕು. “ನಿಮ್ಮ ಇಂದಿನ ಸಹಿ ನಾಳೆ ಆಟೋಗ್ರಾಫ್ ಆಗಬೇಕು” ಎಂಬ ಗುರಿಯೊಂದಿಗೆ ಜೀವನದಲ್ಲಿ ಮುನ್ನಡೆಯುವಂತೆ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದೆ.
ಈ ಕಾರ್ಯಕ್ರಮದಲ್ಲಿ ಡಾ. ಪಾವನಾ ವಿ., ಡಾ. ಎಸ್. ಸಿ. ಶರ್ಮಾ, ಶ್ರೀ ನಟೇಶ್ ಎಚ್.ಇ., ಡಾ. ಮಹೇಶ್ ಕುಮಾರ್ ಆರ್., ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.
03/06/2026
I was delighted to participate as the Chief Guest at The Literary Confluence and Book Launch organized by Spark Igniting Minds Publications at Atta Galatta, Bengaluru.
During my address, I emphasized that reading books should become a lifelong habit, especially among children and youth, as it helps reduce stress, enhances creativity, improves communication skills, and builds character. In an age dominated by mobile phones and social media, books remain a powerful source of knowledge, wisdom, and personal growth.
I also highlighted that true leadership is about creating opportunities for others and contributing towards nation-building through education, innovation, entrepreneurship, and strong values.
I was pleased to join in the launch of Story Through My Eyes – Part 2, Unspoken Mysteries, and Whispers of the Soil, and congratulate the authors on their valuable contributions to literature.
02/06/2026
ಚನ್ನಪಟ್ಟಣ ತಾಲ್ಲೂಕಿನಲ್ಲಿ ನಾಲ್ಕು ನೂತನ ಬಸ್ ತಂಗುದಾಣಗಳ ಉದ್ಘಾಟನೆ
ಇಂದು ಚನ್ನಪಟ್ಟಣ ತಾಲ್ಲೂಕಿನ ತಗಚಗೆರೆ ಹಾಗೂ ಕೋಡಂಬಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಸದರ ಪ್ರದೇಶಾಭಿವೃದ್ಧಿ ಯೋಜನೆಯಡಿ ನಿರ್ಮಿಸಲಾಗಿರುವ ನಾಲ್ಕು ನೂತನ ಬಸ್ ತಂಗುದಾಣಗಳನ್ನು ಉದ್ಘಾಟಿಸಿದೆ.
ಗ್ರಾಮೀಣ ಭಾಗದ ಜನರಿಗೆ ಉತ್ತಮ ಮೂಲಸೌಕರ್ಯ ಕಲ್ಪಿಸುವುದು ನನ್ನ ಆದ್ಯತೆಯಾಗಿದ್ದು, ವಿದ್ಯಾರ್ಥಿಗಳು, ಮಹಿಳೆಯರು, ಹಿರಿಯ ನಾಗರಿಕರು ಸೇರಿದಂತೆ ಸಾರ್ವಜನಿಕರಿಗೆ ಸುರಕ್ಷಿತ ಹಾಗೂ ಅನುಕೂಲಕರ ಸಂಚಾರ ವ್ಯವಸ್ಥೆ ಒದಗಿಸುವ ಉದ್ದೇಶದಿಂದ ಈ ಬಸ್ ತಂಗುದಾಣಗಳನ್ನು ನಿರ್ಮಿಸಲಾಗಿದೆ.
ಅಭಿವೃದ್ಧಿಯ ಫಲ ಪ್ರತಿಯೊಬ್ಬ ನಾಗರಿಕನಿಗೂ ತಲುಪಬೇಕು ಎಂಬ ಸಂಕಲ್ಪದೊಂದಿಗೆ ಇಂತಹ ಜನಪರ ಯೋಜನೆಗಳನ್ನು ಮುಂದುವರಿಸಲಾಗುತ್ತಿದೆ.
ಈ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಶ್ರೀ ಜಯಮುತ್ತು, ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಶ್ರೀ ಆನಂದ್ ಸ್ವಾಮಿ, ಚನ್ನಪಟ್ಟಣ ಜೆಡಿಎಸ್ ಅಧ್ಯಕ್ಷರಾದ ಶ್ರೀ ನಾಗರಾಜು, ಬಿಜೆಪಿ ತಾಲ್ಲೂಕು ಅಧ್ಯಕ್ಷರಾದ ಶ್ರೀ ಚೇತನ್, ಸ್ಥಳೀಯ ಎನ್ಡಿಎ ಮುಖಂಡರು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.