Department of fisheries Karnataka

Department of fisheries Karnataka

Share

ಮೀನುಗಾರಿಕೆಯು ವಿದೇಶಿ ವಿನಿಮಯ ಹಾಗೂ ಉದ್ಯೋಗಾವಕಾಶದ ಸೃಷ್ಠಿಯ ಮೂಲವಾಗಿರುವುದರಿಂದ ದೇಶದ ಆರ್ಥಿಕ ಪ್ರಗತಿಯಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ.

ಮೀನುಗಾರಿಕೆಯು ವಿದೇಶಿ ವಿನಿಮಯ ಹಾಗೂ ಉದ್ಯೋಗಾವಕಾಶದ ಸೃಷ್ಠಿಯ ಮೂಲವಾಗಿರುವುದರಿಂದ ದೇಶದ ಆರ್ಥಿಕ ಪ್ರಗತಿಯಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ. ಇದರ ಜೊತೆಗೆ ಈ ವಲಯವು ಕೈಗಾರಿಕೆ ಉದ್ದಿಮೆಯ ಸ್ವರೂಪವನ್ನು ಸಹ ಹೊಂದಿದೆ. ಮಾನವನ ಆಹಾರದಲ್ಲಿ ಮೀನು ಕಡಿಮೆ ಬೆಲೆಯ ಪ್ರೋಟೀನ್ ಮೂಲವಾಗಿದೆ. ಮೀನುಗಾರಿಕೆ ಇಲಾಖೆಯನ್ನು 1957ರ ಇಸವಿಯಲ್ಲಿ ರಾಜ್ಯದಲ್ಲಿರುವ ಕರಾವಳಿ ಮತ್ತು ಒಳನಾಡು ವಲಯದ ಸಂಪನ್ಮೂಲಗಳನ್ನು ಉಪಯೋಗಿಸಿ ರಾಜ್ಯದ ಮೀನು ಉತ್ಪಾದನೆಯನ್ನು ಹೆಚ್ಚಿಸುವ ಉದ್ದೇಶದಿಂದ ಸ್ಥಾಪಿಸಲಾಯಿತು.

Photos from Department of fisheries Karnataka's post 29/05/2026

ದಿನಾಂಕ: 27-05-2026 ರಂದು ಬೆಂಗಳೂರು ನಗರ ಜಿಲ್ಲೆ, ಯಲಹಂಕ ತಾಲ್ಲೂಕಿನ ತಿಮ್ಮಸಂದ್ರ ಕೆರೆಯಲ್ಲಿ ಶ್ರೀಮತಿ ಯಶಸ್ವಿನಿ ಟಿ.ಎನ್., ಮೀನುಗಾರಿಕೆ ಜಂಟಿ ನಿರ್ದೇಶಕರು, ಬೆಂಗಳೂರು ವಲಯ ಇವರ ಅಧ್ಯಕ್ಷತೆಯಲ್ಲಿ ಉದ್ದೇಶಿತ ಯಶವಂತಪುರ ಮೀನುಗಾರರ ಸಹಕಾರ ಸಂಘ, ರವರ ಕೌಶಲ್ಯ ಪರೀಕ್ಷೆಯನ್ನು ನೆಡೆಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಚಿಕ್ಕಣ್ಣ, ಮೀನುಗಾರಿಕೆ ಉಪ ನಿರ್ದೇಶಕರು, ಬೆಂಗಳೂರು ನಗರ ಜಿಲ್ಲೆ, ಶ್ರೀಮತಿ ರೀನಾ ವಿ., ಮೀನುಗಾರಿಕೆ ಸಹಾಯಕ ನಿರ್ದೇಶಕರು, ಬೆಂಗಳೂರು ಉತ್ತರ ತಾಲ್ಲೂಕು ಮತ್ತು ಸಿಬ್ಬಂದಿ ಹಾಗೂ ಉದ್ದೇಶಿತ ಮೀನುಗಾರರ ಸಹಕಾರ ಸಂಘದ ಸದಸ್ಯರು ಉಪಸ್ಥಿತರಿದ್ದರು.
Follow us on
Facebook : https://www.facebook.com/dofkarnataka
Instagram : https://www.instagram.com/dof_kar
Twitter : https://x.com/dof_kar
Youtube : https://www.youtube.com/
Website : https://fisheries.karnataka.gov.in/

Photos from Department of fisheries Karnataka's post 29/05/2026

ದಿನಾಂಕ: 27-05-2026 ರಂದು ತುಮಕೂರು ಜಿಲ್ಲೆ, ತಿಪಟೂರ್ ತಾಲ್ಲೂಕಿನಲ್ಲಿ 2025-26ನೇ ಸಾಲಿನಲ್ಲಿ ಮಂಜೂರಾದ ಇಲಾಖೆಯ ಸವಲತ್ತುಗಳನ್ನು ಮಾನ್ಯ ಶ್ರೀ ಷಡಾಕ್ಷರಿ, ಶಾಸಕರು, ತಿಪಟೂರ್ ವಿಧಾನಸಭಾ ಕ್ಷೆತ್ರ ರವರು ಇಲಾಖೆಯ ಎಸ್‌ಸಿಪಿ, ಟಿಎಸ್‌ಪಿ ಮತ್ತು ರಾಜ್ಯ ವಲಯ ಯೋಜನೆಯಡಿ ಹರಿಗೋಲು, ಕಿಟ್ಟು ಪರಿಕರಗಳನ್ನು ಹಾಗೂ ಮತ್ಸ್ಯ ವಾಹಿನಿ ಯೋಜನೆಯಡಿ ದ್ವಿಚಕ್ರ ಮತ್ತು ನಾಲ್ಕುಚಕ್ರ ವಾಹನಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಎಂ.ಎಚ್. ನಂಜುಂಡಪ್ಪ, ಮೀನುಗಾರಿಕೆ ಉಪ ನಿರ್ದೇಶಕರು, ತುಮಕೂರು, ಶ್ರೀ ಮೋಹನ ಕುಮಾರ, ಮೀನುಗಾರಿಕೆ ಸಹಾಯಕ ನಿರ್ದೇಶಕರು, ತಿಪಟೂರು(ಪ್ರಭಾರ), ಇಲಾಖೆಯ ಸಿಬ್ಬಂದಿ ಹಾಗೂ ಫಲಾನುಭವಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
Follow us on
Facebook : https://www.facebook.com/dofkarnataka
Instagram : https://www.instagram.com/dof_kar
Twitter : https://x.com/dof_kar
Youtube : https://www.youtube.com/
Website : https://fisheries.karnataka.gov.in/

Photos from Department of fisheries Karnataka's post 29/05/2026

ದಿನಾಂಕ: 27-05-2026 ರಂದು ಬೆಂಗಳೂರು ಅರಣ್ಯಭವನದಲ್ಲಿ ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಶಾಲೆಟ್ ಪಿಂಟೋ ರವರ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಶ್ರೀ ಗಣೇಶ್ ಕೆ., ಮೀನುಗಾರಿಕೆ ಅಪರ ನಿರ್ದೇಶಕರು (ಕರಾವಳಿ), ಬೆಂಗಳೂರು ರವರು ಡಾ. ಮೀನಾಕ್ಷಿ ನೇಗಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥ, ಶ್ರಿ ಕುಮಾರ್ ಪುಷ್ಕರ್, ಪಿಸಿಸಿಎಫ್ (ವನ್ಯಜೀವಿ), ಶ್ರೀ ಮಂಜುನಾಥ, ವ್ಯವಸ್ಥಾಪಕ ನಿರ್ದೇಶಕರು, ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್, ಶ್ರೀ ರವಿಶಂಕರ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮಂಡಳಿಯ ಸದಸ್ಯ ಕಾರ್ಯದರ್ಶಿ , ಡಿಸಿಎಫ್ ಗಳೊಂದಿಗೆ ಭಾಗವಹಿಸಿದರರು.
Follow us on
Facebook : https://www.facebook.com/dofkarnataka
Instagram : https://www.instagram.com/dof_kar
Twitter : https://x.com/dof_kar
Youtube : https://www.youtube.com/
Website : https://fisheries.karnataka.gov.in/

Photos from Department of fisheries Karnataka's post 29/05/2026

ದಿನಾಂಕ: 27-05-2026 ರಂದು ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಜಲಾಶಯಕ್ಕೆ ಗುಂಡಾಲ್ ಮೀನುಮರಿ ಕೇಂದ್ರದಿಂದ 3ಲಕ್ಷ ಮೀನುಮರಿಗಳನ್ನು ಸರಬರಾಜು ಮಾಡಿ ಶ್ರೀ ಗಿರೀಶ್ ಓ., ಮೀನುಗಾರಿಕೆ ಜಂಟಿ ನಿರ್ದೇಶಕರು, ಮೈಸೂರು ವಲಯ ರವರ ಸಮ್ಮುಖದಲ್ಲಿ ಜಲಾಶಯಕ್ಕೆ ದಾಸ್ತಾನು ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀ ಬಾಬಾಸಾಬ್, ಮೀನುಗಾರಿಕೆ ಉಪ ನಿರ್ದೇಶಕರು, ಮಂಡ್ಯ, ಶ್ರೀ ನಂದೀಶ್, ಮೀನುಗಾರಿಕೆ ಸಹಾಯಕ ನಿರ್ದೇಶಕರು, ಗುಂಡಾಲ್ ಮತ್ತು ಶ್ರೀಮತಿ ಪೂಜಾಶ್ರೀ ಕೆ.ಜೆ., ಮೀನುಗಾರಿಕೆ ಸಹಾಯಕ ನಿರ್ದೇಶಕರು, ಕೆಆರ್‌ಎಸ್ ರವರು ಹಾಗೂ ಸ್ಥಳೀಯ ಮೀನು ಕೃಷಿಕರು ಉಪಸ್ಥಿತರಿದ್ದರು.
Follow us on
Facebook : https://www.facebook.com/dofkarnataka
Instagram : https://www.instagram.com/dof_kar
Twitter : https://x.com/dof_kar
Youtube : https://www.youtube.com/
Website : https://fisheries.karnataka.gov.in/

Photos from Department of fisheries Karnataka's post 29/05/2026

ದಿನಾಂಕ: 27-05-2026 ರಂದು ವಿಜಯನಗರ ಜಿಲ್ಲೆಯ ಮೀನುಗಾರಿಕೆ ಉಪನಿರ್ದೇಶಕರು ಕಚೇರಿಯ ನೂತನ ಕಟ್ಟಡವನ್ನು ಸನ್ಮಾನ್ಯ ಶ್ರೀ ಗವಿಯಪ್ಪ, ಶಾಸಕರು, ವಿಜಯನಗರ ವಿಧಾನಸಭಾ ಕ್ಷೇತ್ರ ರವರು ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಶ್ರೀ ಮಲ್ಲೇಶ್ ಬಿ., ಮೀನುಗಾರಿಕೆ ಉಪನಿರ್ದೇಶಕರು, ವಿಜಯನಗರ ಮತ್ತು ಇಲಾಖೆ ಅಧಿಕಾರಿಗಳು, ಮೀನುಗಾರಿಕೆ ಸಹಕಾರ ಸಂಘದ ಪದಾಧಿಕಾರಿಗಳು, ಮೀನುಗಾರರು, ಪತ್ರಿಕಾ ಮಾದ್ಯಮದವರು ಹಾಗೂ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
Follow us on
Facebook : https://www.facebook.com/dofkarnataka
Instagram : https://www.instagram.com/dof_kar
Twitter : https://x.com/dof_kar
Youtube : https://www.youtube.com/
Website : https://fisheries.karnataka.gov.in/

Photos from Department of fisheries Karnataka's post 27/05/2026

ದಿನಾಂಕ: 27-05-2026 ರಂದು ಉತ್ತರ ಕನ್ನಡ ಜಿಲ್ಲೆ, ಹೊನ್ನಾವರ ತಾಲೂಕು ಪಂಚಾಯತ ಸಭಾಂಗಣದಲ್ಲಿ ತ್ರೈಮಾಸಿಕ ಕೆ.ಡಿ.ಪಿ ಸಭೆಯಲ್ಲಿ ಸನ್ಯಾನ್ಯ ಶ್ರೀ ಮಂಕಾಳ ಎಸ್. ವೈದ್ಯ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು, ಮೀನುಗಾರಿಕೆ ಮಾಡುವ ಸಂಧರ್ಭದಲ್ಲಿ ಸಿಡಿಲು ಬಡಿದು ಆಕಸ್ಮಿಕವಾಗಿ ಮೃತಪಟ್ಟ ಶ್ರೀ ವಿನಾಯಕ ಗಣೇಶ್ ಖಾರ್ವಿ ರವರ ವಾರಸುದಾರಾದ ಶ್ರೀಮತಿ ಪವಿತ್ರಾ ವಿನಾಯಕ ಖಾರ್ವಿ, ಸಾ: ಅಪ್ಸರಕೊಂಡ, ತಾ: ಹೊನ್ನವಾರ ರವರಿಗೆ ಮೀನುಗಾರಿಕೆ ಸಂಕಷ್ಟ ಪರಿಹಾರ ನಿಧಿ ಯೋಜನೆಯಡಿ ಹತ್ತು ಲಕ್ಷ ರುಪಾಯಿಗಳ ಚೆಕ್ ನ್ನು ವಿತರಣೆ ಮಾಡಿದರು ಹಾಗೂ ಟ್ರಾಲ್ ದೋಣಿಗಳ ಟ್ರಾಲ್ ಬಲೆಗಳಿಗೆ ಆಮೆಗಳನ್ನು ಹೊರಗಿಡುವ ಉಪಕರಣ (Turtle Excluder Devices)ವನ್ನು ಟ್ರಾಲ್ ಬೊಟ್ ಮಾಲೀಕರಿಗೆ ಸಾಂಕೇತಿಕವಾಗಿ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀ ಚೇತನ್ ಕುಮಾರ್ ಪಿ., ಮೀನುಗಾರಿಕೆ ಸಹಾಯಕ ನಿರ್ದೇಶಕರು, ಹೊನ್ನಾವರ ರವರು ಹಾಗೂ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
Follow us on
Facebook : https://www.facebook.com/dofkarnataka
Instagram : https://www.instagram.com/dof_kar
Twitter : https://x.com/dof_kar
Youtube : https://www.youtube.com/
Website : https://fisheries.karnataka.gov.in/

Photos from Department of fisheries Karnataka's post 27/05/2026

ದಿನಾಂಕ: 26-05-2026 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶ್ರೀ ಮಹೇಶ್ ಕುಮಾರ್, ಮೀನುಗಾರಿಕೆ ಅಪರ ನಿರ್ದೇಶಕರು, ಮೀನುಗಾರಿಕೆ ಬಂದರುಗಳು, ಮಲ್ಪೆ ರವರು ಮಂಗಳೂರು ಮೀನುಗಾರಿಕೆ ಬಂದರಿನ 3 ನೇ ಹಂತದ ಕಾಮಗಾರಿ ಹಾಗೂ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ1 ಮತ್ತು 2 ನೇ ಹಂತದ ಆಧುನೀಕರಣ ಕಾಮಗಾರಿಯ ಪ್ರಗತಿಯನ್ನು ವಿಕ್ಷೀಸಿದರು. ಈ ಸಂದರ್ಭದಲ್ಲಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಬಂದರು ಮತ್ತು ಮೀನುಗಾರಿಕೆ ಉಪ ವಿಭಾಗ, ಮಂಗಳೂರು ರವರು ಮತ್ತು ಇಲಾಖೆಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಉಪಸ್ಥಿತರಿದ್ದರು.
Follow us on
Facebook : https://www.facebook.com/dofkarnataka
Instagram : https://www.instagram.com/dof_kar
Twitter : https://x.com/dof_kar
Youtube : https://www.youtube.com/
Website : https://fisheries.karnataka.gov.in/

Photos from Department of fisheries Karnataka's post 27/05/2026

ದಿನಾಂಕ: 26/05/2026 ರಂದು ಮೈಸೂರು ಜಿಲ್ಲೆ, ಟಿ. ನರಸೀಪುರ ತಾಲ್ಲೂಕಿನ ಮೇದಿನಿ, ಹೆಮ್ಮಿಗೆ ಮತ್ತು ಅಕ್ಕೂರು ಗ್ರಾಮಗಳಿಗೆ ಶ್ರೀ ಶ್ವೇತಾ ಕೆ.ಬಿ., ಮೀನುಗಾರಿಕೆ ಸಹಾಯಕ ನಿರ್ದೇಶಕರು, ಟಿ ನರಸೀಪುರ ರವರು ಭೇಟಿ ನೀಡಿ ಅಲ್ಲಿನ ಮೀನುಗಾರರಿಗೆ ಡೈನಮೈಟ್ ಮೀನುಗಾರಿಕೆ ಮಾಡದಂತೆ ಅರಿವು ಮೂಡಿಸಿ ಹಾಗೂ ಪರವಾನಿಗೆ ಪಡೆದು ಮೀನುಗಾರಿಕೆ ಮಾಡುವಂತೆ ಮಾಹಿತಿ ನೀಡಲಾಯಿತು.
Follow us on
Facebook : https://www.facebook.com/dofkarnataka
Instagram : https://www.instagram.com/dof_kar
Twitter : https://x.com/dof_kar
Youtube : https://www.youtube.com/
Website : https://fisheries.karnataka.gov.in/

Photos from Department of fisheries Karnataka's post 26/05/2026

ದಿನಾಂಕ: 25/5/2026 ರಂದು ಶಿವಮೊಗ್ಗ ಜಿಲ್ಲೆಯ ಬಿಆರ್ ಪ್ರಾಜೆಕ್ಟ್ ನ ಬಂದ್ ಬ್ರೀಡಿಂಗ್ ಮೀನುಮರಿ ಉತ್ಪಾದನಾ ಕೇಂದ್ರದಲ್ಲಿ 2026-27 ನೇ ಸಾಲಿನ ಭಾರತೀಯ ದೊಡ್ಡ ಗೆಂಡೆ ಮೀನುಗಳ ಸಂತಾನೋತ್ಪತ್ತಿ ಋತುವನ್ನು ಶ್ರೀ ಷಡಕ್ಷರಿ ಜಿ.ಎಸ್., ಮೀನುಗಾರಿಕೆ ಜಂಟಿ ನಿರ್ದೇಶಕರು, ಶಿವಮೊಗ್ಗ ವಲಯ ಮತ್ತು ಶ್ರೀ ಶಿವಕುಮಾರ್ ಜಿ.ಎಮ್., ಮೀನುಗಾರಿಕೆ ಉಪ ನಿರ್ದೇಶಕರು, ಶಿವಮೊಗ್ಗ ರವರ ಸಮ್ಮುಖದಲ್ಲಿ ಪ್ರಾರಂಭಿಸಲಾಯಿತು. ಒಟ್ಟು 70 ಕೆಜಿ ಕಟ್ಲಾ 710 ಲೀಟರ್ ಮತ್ತು 6 ಕೆಜಿ ರೋಹು 120 ಲೀಟರ್ ಮೊಟ್ಟೆ ಇಳುವರಿ ನೀಡಿವೆ. ಈ ಸಂದರ್ಭದಲ್ಲಿ ಬಿಆರ್ ಪ್ರಾಜೆಕ್ಟ್ ನ ಎಲ್ಲಾಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
Follow us on
Facebook : https://www.facebook.com/dofkarnataka
Instagram : https://www.instagram.com/dof_kar
Twitter : https://x.com/dof_kar
Youtube : https://www.youtube.com/
Website : https://fisheries.karnataka.gov.in/

Photos from Department of fisheries Karnataka's post 26/05/2026

ದಿನಾಂಕ: 25/05/2026 ರಂದು ಕೋಲಾರ ಜಿಲ್ಲೆಯ ಮಾರ್ಕಂಡೇಯ ಮೀನುಮರಿ ಉತ್ಪಾದನಾ ಕೇಂದ್ರ, ಬೂದಿಕೋಟೆಯಲ್ಲಿ ಶ್ರೀಮತಿ ಯಶಸ್ವಿನಿ ಟಿ.ಎನ್., ಮೀನುಗಾರಿಕೆ ಜಂಟಿ ನಿರ್ದೇಶಕರು, ಬೆಂಗಳೂರು ರವರ ಸೂಚನೆಯಂತೆ ದೊಡ್ಡಗೆಂಡೆ ಮೀನುಮರಿಗಳ ಉತ್ಪಾದನಾ ಕಾರ್ಯವನ್ನು ಪ್ರಾರಂಭಿಸಲಾಯಿತು. ಒಟ್ಟು 20 ಕೆ.ಜಿ 8 ಕಾಟ್ಲಾ ಮೀನುಗಳನ್ನು ಬಳಕೆ ಮಾಡಲಾಯಿತು. ಇದರಲ್ಲಿ ಭಾಗಶಃ ತಳಿ 2 ಮೀನು 6 ಕೆಜಿ ರಷ್ಟು ಆಗಿರುತ್ತದೆ. ಇದರಿಂದ 120 ಲೀಟರ್‌ ಮೊಟ್ಟೆಯನ್ನು ಪಡೆಯಲಾಗಿದೆ ಮತ್ತು 10 ಕೆಜಿ ರೋಹು ಮೀನುಗಳನ್ನು ಉಪಯೋಗಿಸಿದ್ದು 125 ಲೀಟರ್ ಮೊಟ್ಟೆಗಳನ್ನು ಪಡೆಯಲಾಗಿದೆ..
Follow us on
Facebook : https://www.facebook.com/dofkarnataka
Instagram : https://www.instagram.com/dof_kar
Twitter : https://x.com/dof_kar
Youtube : https://www.youtube.com/
Website : https://fisheries.karnataka.gov.in/

Want your business to be the top-listed Government Service in Bangalore?

Click here to claim your Sponsored Listing.

Location

Telephone

Address

ಮೀನುಗಾರಿಕೆ ನಿರ್ದೇಶನಾಲಯ, 3ನೇ ಮಹಡಿ, ಪೋಡಿಯಂ ಬ್ಲಾಕ್, ವಿಶ್ವೇಶ್ವರಯ್ಯ ಕೇಂದ್ರ, ಡಾ
Bangalore
560001