06/09/2025
ನಮಸ್ತೇ ಸ್ನೇಹಿತರೇ,
ನಮ್ಮ ದೊಡ್ಡ ಗೊಲ್ಲರಹಟ್ಟಿ ಪ್ರಾಥಮಿಕ ಶಾಲೆಯ ಶಿಕ್ಷಕಿಯಾದಂತ ಲೀಲಾವತಿ ಮೇಡಂ ರವರಿಗೆ ಶಿಕ್ಷಕರ ದಿನಾಚಾರಣೆಯಂದು ರಾಜ್ಯ ಶಿಕ್ಷಣ ಇಲಾಖೆ, ಬೆಂಗಳೂರು ದಕ್ಷಿಣ ಮತ್ತು ಪ್ರಾಥಮಿಕ ಹಾಗು ಪ್ರೌಢ ಶಾಲಾ ಶಿಕ್ಷಕರ ಸಂಘ ಈ ವರ್ಷದ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿಯನ್ನು ನೀಡಿ ಗೌರವಿಸಿರುತ್ತದೆ.
15/08/2025
ನಮ್ಮ ಸರ್ಕಾರಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ
29/05/2025
📢 ಅಧ್ಯಾಪಕ ಹುದ್ದೆ – (ಒಪ್ಪಂದ ಆಧಾರದ ಮೇಲೆ)
ದೊಡ್ಡಗೊಲ್ಲರಹಟ್ಟಿ ಸರ್ಕಾರಿ ಶಾಲೆಗೆ B.Ed ಪೂರ್ಣಗೊಳಿಸಿದ ಅಭ್ಯರ್ಥಿಗಳಿಂದ ಒಪ್ಪಂದ ಆಧಾರದ ಮೇಲೆ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ.
📚 ಶಿಕ್ಷಕರು ವಿಜ್ಞಾನ, ಗಣಿತ ಮತ್ತು ಇಂಗ್ಲಿಷ್ ವಿಷಯ ಗಳನ್ನು ಬೋಧಿಸಲು ಸಿದ್ಧರಾಗಿರಬೇಕು.
📍 ಆಸಕ್ತರು ಪ್ರಾಥಮಿಕ ಮುಖ್ಯೋಪಾಧ್ಯಾಯಿನಿಯವರನ್ನು ನೇರವಾಗಿ ಸಂಪರ್ಕಿಸಿ.
ದಯವಿಟ್ಟು ಈ ಮಾಹಿತಿಯನ್ನು ಅರ್ಹ ಅಭ್ಯರ್ಥಿಗಳೊಂದಿಗೆ ಹಂಚಿಕೊಳ್ಳಿ!
📢 Teaching Opportunity (Contract Basis)
Our Government School at Doddagollarahatti is inviting B.Ed qualified candidates for a contract teacher position.
Subjects to handle: Science, Maths & English (Multi-subject handling preferred).
📍 Interested candidates should meet the Primary Headmaster in person.
Please share with eligible friends and contacts!
22/05/2025
📢 ದಾಖಲಾತಿ ಪ್ರಾರಂಭವಾಗಿದೆ!
ನಮ್ಮ ಸರ್ಕಾರಿ ಶಾಲೆ, ದೊಡ್ಡಗೊಲ್ಲರಹಟ್ಟಿ
2025–26 ನೇ ಸಾಲಿಗೆ LKG ರಿಂದ 10ನೇ ತರಗತಿಯವರೆಗೆ ದಾಖಲಾತಿ ಆರಂಭವಾಗಿದೆ.
🎓 ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ
🎁 ಉಚಿತ ಶಿಕ್ಷಣ – ಇಂದೇ ಮಕ್ಕಳನ್ನು ದಾಖಲಿಸಿ!
🙏 ನಮ್ಮ ಶಾಲೆಗೆ ಹೊಸ ವಿದ್ಯಾರ್ಥಿಗಳನ್ನು ಸೇರಿಸಲು ಸಹಕರಿಸಿ.
ನಿಮ್ಮ ಸ್ನೇಹಿತರು, ಕುಟುಂಬ, ಪಕ್ಕದವರು ಎಲ್ಲರಿಗೂ ಶೇರ್ ಮಾಡಿ.
ಪ್ರತಿಯೊಬ್ಬ ವಿದ್ಯಾರ್ಥಿಗೂ ಉತ್ತಮ ಶಿಕ್ಷಣ ಸಿಗಲಿ! 🙌
05/03/2025
🤣 ಹಾಸ್ಯಮಯ ನಾಟಕ – "Mr. ರಾವ್ & ಅಸೋಸಿಯೇಟ್ಸ್"! 🎭
🎉ಒಂದು ಮರೆಯಲಾಗದ ಮನರಂಜನೆಯ ಸಂಜೆ!
ನಮಸ್ಕಾರ ಸ್ನೇಹಿತರೆ! 🙌
ನಮ್ಮ ಹಳೆ ವಿದ್ಯಾರ್ಥಿಗಳ ಸಂಘ & ರಂಗ ತರಂಗ ಟ್ರಸ್ಟ್ ಒಟ್ಟಿಗೆ ನಿಮ್ಮೆಲ್ಲರಿಗಾಗಿ ಒಂದು ಅದ್ಭುತ ಹಾಸ್ಯನಾಟಕವನ್ನು ಕರೆದೊಯ್ದಿವೆ!
📅 ದಿನಾಂಕ: 8 ಮಾರ್ಚ್ 2025 (ಶನಿವಾರ)
⏰ ಸಮಯ: ಸಂಜೆ 6:30
📍 ಸ್ಥಳ: ಕಲಾಗ್ರಾಮ, ಮಲ್ಲತ್ತಳ್ಳಿ
😆 ಈ ನಾಟಕ ಏಕೆ ತಪ್ಪಿಸಕೂಡದು?
✅ ಹೊಟ್ಟೆಕುಲುಕುವ ನಗೆಗಾಲಿ – ದಿನನಿತ್ಯದ ಒತ್ತಡಕ್ಕೆ ಬ್ರೇಕ್!
✅ ಕುಟುಂಬ ಸಮೇತ ಆನಂದಿಸಬಹುದಾದ ಪ್ರದರ್ಶನ – ಮಕ್ಕಳಿಂದ ಹಿರಿಯರ ತನಕ ಮನರಂಜನೆಯ ಹಬ್ಬ!
✅ ಹಳೆಯ ಸ್ನೇಹಿತರು ಮತ್ತೆ ಭೇಟಿಯಾಗುವ ಅವಕಾಶ!
❤️ ಸಾಮಾಜಿಕ ಜವಾಬ್ದಾರಿ:
ನಮ್ಮ ಸರ್ಕಾರಿ ಶಾಲೆಯ ಐದು ಮಕ್ಕಳು ಈ ನಾಟಕ ವೀಕ್ಷಿಸಲು ಅವಕಾಶ ಪಡೆಯುತ್ತಿದ್ದಾರೆ! ಒಬ್ಬರು 5 ಟಿಕೆಟ್‌ಗಳ ಸ್ಪಾನ್ಸರ್ ಮಾಡಿದ್ದು, ಈ ಮಕ್ಕಳು ಸಹ ಈ ಸಂಭ್ರಮದಲ್ಲಿ ಭಾಗಿಯಾಗುತ್ತಿದ್ದಾರೆ! 👏
🎟️ ಟಿಕೆಟ್ ದರ: ₹200 ಮಾತ್ರ!
📞 ಬುಕ್ಕಿಂಗ್: 9986415010
💡 ಈ ಶನಿವಾರ ಯಾವ ಪ್ಲಾನ್ ಬೇಡ!
ನಿಮ್ಮ ಕುಟುಂಬ & ಸ್ನೇಹಿತರೊಂದಿಗೆ ಬನ್ನಿ, "Mr. ರಾವ್ & ಅಸೋಸಿಯೇಟ್ಸ್"
ನಾಟಕದ ರಂಗವನ್ನು ಹರ್ಷಭರಿತಗೊಳಿಸೋಣ! 🎭✨
🔥 ನಗಲು, ಮರೆಯಲು, ಆನಂದಿಸಲು – ಕಲಾಗ್ರಾಮದಲ್ಲಿ ಭೇಟಿಯಾಗೋಣ! 🤩
#ನಾಟಕ #ನಗುವಿನಸಂಜೆ #ಕಲಾಗ್ರಾಮ #ಹಾಸ್ಯ #ಸಂಸ್ಕೃತಿಕಹಬ್ಬ
16/12/2024
ನಮಸ್ತೆ ಎಲ್ಲರಿಗೂ 🙏
ರಂಗಕರ್ಮಿಗಳನ್ನು ಉತ್ಸಾಹಿಸಲು ಹಾಗೂ ಪ್ರೋತ್ಸಾಹಿಸಲು, ನಮ್ಮ ಹಳೆ ವಿದ್ಯಾರ್ಥಿಗಳ ಸಂಘವು ರಂಗ ತರಂಗ ಟ್ರಸ್ಟ್‌ನೊಂದಿಗೆ ಕೈಜೋಡಿಸಿದೆ. ಈ ಹಿನ್ನೆಲೆಯಲ್ಲಿ, ನಾವು ಸಹಕರಿಸುತ್ತಿರುವ ಈ ನಾಟಕ ಪ್ರದರ್ಶನಕ್ಕೆ ತಾವುಗಳು ಕುಟುಂಬ ಸಮೇತ ಆಗಮಿಸಿ ಪ್ರೋತ್ಸಾಹ ನೀಡಬೇಕಾಗಿ ಮನವಿ ಮಾಡುತ್ತೇವೆ.
ನಮ್ಮಲ್ಲಿ ಅನೇಕರು, ಅದೆಷ್ಟೋ ವರ್ಷಗಳ ನಂತರ ನಾಟಕವನ್ನು ನೋಡುವ ಅಪೂರ್ವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಈ ಸಾಂಸ್ಕೃತಿಕ ಕ್ಷಣಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.
ನಿಮ್ಮ ಹಾಜರಿಯಿಂದ ಈ ಕಾರ್ಯಕ್ರಮವು ಇನ್ನಷ್ಟು ಯಶಸ್ವಿಯಾಗಲು ಸಹಕಾರವಾಗುತ್ತದೆ.
ಧನ್ಯವಾದಗಳು 🙏
07/08/2024
ನಮಸ್ತೆ ಸ್ನೇಹಿತರೆ 🙏, ನಮ್ಮೆಲ್ಲರ ಪ್ರೀತಿಯ ದೈಹಿಕ ಶಿಕ್ಷಕರಾದ ಡಾ. ನಾಗೇಶ್ ಸರ್ ರವರು ಇಂದು (7-8-2024) ಬೇರೊಂದು ಶಾಲೆಗೆ ವರ್ಗಾವಣೆಯಾಗಿದ್ದಾರೆ.
ನಾಗೇಶ್ ಸಾರ್ ರವರು ನಮ್ಮ ಸರ್ಕಾರೀ ಶಾಲೆ ದೊಡ್ಡಗೊಲ್ಲರಹಟ್ಟಿಯಲ್ಲಿ 16 ವರ್ಷಗಳಿಗಿಂತ ಹೆಚ್ಚು ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು 💐. ಕ್ರೀಡೆ ಮತ್ತು ದೈಹಿಕ ಶಿಕ್ಷಣದ ಕಡೆಗೆ ನಿಮ್ಮ ಬದ್ಧತೆ ಮತ್ತು ಪ್ರೀತಿಯು ಅನೇಕ ವಿದ್ಯಾರ್ಥಿಗಳಿಗೆ ಹಾಗು ನಮಗೆ ಮಾರ್ಗದರ್ಶನವಾಗಿದೆ.
ನೀವು ಹೊಸ ಪಥವನ್ನು ಹಿಡಿದು ಹೊಸ ಶಾಲೆಗೆ ವರ್ಗಾವಣೆಯಾಗುತ್ತಿದ್ದಂತೆ, ನಿಮ್ಮ ಈ ಹೊಸ ಪ್ರಯಾಣ ಯಶಸ್ವಿಯಾಗಲಿ ಎಂಬ ಹಾರೈಕೆಗಳು. ನಿಮಗೆ ಇನ್ನು ಹೆಚ್ಚು ಯಶಸ್ಸು, ಸಂತೋಷ, ಮತ್ತು ಇನ್ನಷ್ಟು ವಿದ್ಯಾರ್ಥಿಗಳ ಜೀವನವನ್ನು ಪ್ರೇರೇಪಿಸುವ ಅವಕಾಶಗಳು ಲಭಿಸಲಿ.
ಮತ್ತೊಮ್ಮೆ ನಿಮ್ಮ ಅಮೂಲ್ಯ ಸೇವೆ ಮತ್ತು ಬದ್ಧತೆಗೆ ನಮ್ಮ ಧನ್ಯವಾದಗಳು.
ಅಭಿನಂದನೆಗಳು,
ಸರ್ಕಾರೀ ಶಾಲೆ ದೊಡ್ಡ ಗೊಲ್ಲರಹಟ್ಟಿ, ಹಳೆಯ ವಿದ್ಯಾರ್ಥಿಗಳ ಸಂಘ.
01/08/2024
ಸರ್ಕಾರಿ ಪ್ರೌಢಶಾಲೆ ದೊಡ್ಡಗೊಲ್ಲರಹಟ್ಟಿ ಬಾಲಕಿಯರ ತಂಡ ಕಬಡ್ಡಿಯಲ್ಲಿ 2ನೇ ಬಹುಮಾನ ಪಡೆಯಿತು.
ಇಡೀ ವಿಜೇತ ತಂಡಕ್ಕೆ ಅಭಿನಂದನೆಗಳು. ಸ್ಪರ್ಧೆಗೆ ತರಬೇತಿ ನೀಡಿದ ಶಿಕ್ಷಕರಿಗೆ ಧನ್ಯವಾದಗಳು.
14/07/2024
ಇಂದು ನಮ್ಮ ಶಾಲೆಯ ಹಳೆ ವಿದ್ಯಾರ್ಥಿಗಳ ತಂಡ ಜ್ಞಾನಭಾರತಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಆದಷ್ಟು ಬೇಗ ಶಾಲಾ ಆವರಣದಲ್ಲಿ ಸ್ಪೀಡ್ ಬ್ರೇಕರ್‌ಗಳನ್ನು ಅಳವಡಿಸಿ, ಶಾಲಾ ಮಕ್ಕಳ ಸುರಕ್ಷತೆಯನ್ನು ಖಾತ್ರಿಪಡಿಸುವಂತೆ ಪೊಲೀಸ್ ನಿರೀಕ್ಷಕರಿಗೆ ಮನವಿ ಪತ್ರ ಸಲ್ಲಿಸಿದೆ. ಅವರು ನಾಳೆ ಬೆಳಿಗ್ಗೆ 9:00 ಗಂಟೆಗೆ ಶಾಲೆಗೆ ಭೇಟಿ ನೀಡಿ ನಮ್ಮ ಸಮಸ್ಯೆಯನ್ನು ಪರಿಹರಿಸುತ್ತಾರೆ ಎಂದು ನಮಗೆ ತಿಳಿಸಲಾಯಿತು.