CPIML Liberation - Karnataka

CPIML Liberation - Karnataka

Share

CPIML Liberation is a revolutionary communist party fighting for the emancipation of people from the shackles of exploitation and all forms of domination.

Official handle of the CPIML Liberation, Karnataka State Committee [email protected]

05/05/2026

👉🏽ಹೇಳಿಕೆ: ವಿಧಾನಸಭಾ ಚುನಾವಣಾ ಫಲಿತಾಂಶದ ಕುರಿತು

ಅಸ್ಸಾಂ, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಮತ್ತು ಪುದುಚೇರಿ ವಿಧಾನಸಭೆಗಳ ಚುನಾವಣೆಗಳು, ವಿಶೇಷವಾಗಿ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ, ಒಂದರ ಹಿಂದೆ ಮತ್ತೊಂದು ಆಘಾತಕಾರಿ ಫಲಿತಾಂಶಗಳನ್ನು ನೀಡಿವೆ. ಪಶ್ಚಿಮ ಬಂಗಾಳದ ಚುನಾವಣಾ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ತಮಿಳುನಾಡು ಚಲನಚಿತ್ರತಾರೆ ಜೋಸೆಫ್ ವಿಜಯ್ ಚಂದ್ರಶೇಖರ್ ನೇತೃತ್ವದಲ್ಲಿ ಹೊಸ ಪಕ್ಷವಾದ ಟಿವಿಕೆ ಉದಯಗೊಂಡಿದ್ದು, ಕಳೆದ ಆರು ದಶಕಗಳಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆಯ ಪರ್ಯಾಯ ರಾಜಕೀಯ ಪ್ರಾಬಲ್ಯವನ್ನು ಕೊನೆಗೊಳಿಸಿದೆ.

ಪಶ್ಚಿಮ ಬಂಗಾಳದಲ್ಲಿ 90 ಲಕ್ಷಗಿಂತಲೂ ಹೆಚ್ಚು ಮತ್ತು ತಮಿಳುನಾಡಿನಲ್ಲಿ 70 ಲಕ್ಷಗಿಂತಲೂ ಹೆಚ್ಚು ಮತದಾರರನ್ನು ಸಾಮೂಹಿಕವಾಗಿ ಹೊರಗಿಟ್ಟ ನಂತರ ಮತ್ತು ಅಸ್ಸಾಂನಲ್ಲಿ ಕ್ಷೇತ್ರಗಳ ಅತ್ಯಂತ ವಿಚಿತ್ರವಾದ ಪುನರ್ವಿಂಗಡಣೆಯ (delimitation) ನಂತರ ಫಲಿತಾಂಶಗಳು ಬಂದಿರುವುದನ್ನು ನಾವು ಗಮನಿಸಬೇಕು. ಪಶ್ಚಿಮ ಬಂಗಾಳದ SIR ಪ್ರಕ್ರಿಯೆಯಲ್ಲಿ 'ತಾರ್ಕಿಕ ವ್ಯತ್ಯಾಸ'ದ (logical discrepancy) ಹೆಸರಿನಲ್ಲಿ ಹೆಚ್ಚುವರಿ ಫಿಲ್ಟರ್‌ಗಳನ್ನು ಸೇರಿಸಲಾಯಿತು ಮತ್ತು 30 ಲಕ್ಷ ಹೆಚ್ಚು ಮತದಾರರು ತಮ್ಮ ಮತದಾನದ ಹಕ್ಕನ್ನು ಕಳೆದುಕೊಳ್ಳಬೇಕಾಯಿತು. ಈ ಮತದಾರರ ಹೊರದಬ್ಬುವಿಕೆಯ ಜೊತೆಗೆ, ಕೇಂದ್ರ ಸರ್ಕಾರವು ಚುನಾವಣೆಯ ಪ್ರಕ್ರಿಯೆಯಲ್ಲಿ ಭಾರೀ ಮಾತ್ರದ ಹಸ್ತಕ್ಷೇಪ ಮತ್ತು ಅಭೂತಪೂರ್ವ ಅರೆಸೈನಿಕ ಪಡೆಗಳ ನಿಯೋಜನೆಯ ಸಂದರ್ಭದಲ್ಲಿ ನಡೆಸಲಾಗಿದೆ.

ಲೆಕ್ಕಾಚಾರ ಭರಿತ ಈ ಚುನಾವಣೆಯಲ್ಲಿ ಬಾಂಗ್ಲಾದೇಶದ "ನುಸುಳುಕೋರರ" ನೆಪವನ್ನು ಬಳಸಿಕೊಂಡು ಮತದಾರರಲ್ಲಿ ಕೋಮು ದ್ವೇಷ ಪ್ರೇರಿತ ಪ್ರಚಾರ ಮತ್ತು ಇತರ ಇಸ್ಲಾಮೋಫೋಬಿಕ್ ಮಿತ್ಯಗಳನ್ನು ಟಿಎಂಸಿಯ ದುರಾಡಳಿತದ ವಿರುದ್ಧ ಜನರನ್ನು ಕ್ರೋಢೀಕರಿಸಿ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಅನಿರೀಕ್ಷಿತ ವಿಜಯಕ್ಕೆ ಕಾರಣವಾಗಿದೆ.

ಫಲಿತಾಂಶದಿಂದ ಹುರಿದುಂಬಿದ ಬಿಜೆಪಿಯು ಅಧಿಕಾರವನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳಲು ಮತ್ತು ಕೇಂದ್ರೀಕರಿಸಲು, ಮತದಾನದ ಹಕ್ಕನ್ನು ಕಳೆದುಕೊಳ್ಳುವುದು ಮತ್ತು ಜನಾಂಗೀಯ ಹಿಂಸಾಚಾರವನ್ನು ಹೆಚ್ಚಿಸಿ, ಜನರ ಪ್ರತಿರೋಧವನ್ನು ಹತ್ತಿಕ್ಕಲು ರಾಜಕೀಯ ದಮನವನ್ನು ಹೆಚ್ಚಿಸುತ್ತಾ ತನ್ನ ದುಷ್ಟ ರಾಜಕೀಯ ಕಾರ್ಯಸೂಚಿಯನ್ನು ಮುಂದುವರಿಸಲು ಪ್ರಯತ್ನಿಸುತ್ತದೆ. ಎಡ ಮತ್ತು ಪ್ರಗತಿಪರ ಶಕ್ತಿಗಳು ಒಗ್ಗಟ್ಟಿನಿಂದ ಈ ಫ್ಯಾಸಿಸ್ಟ್ ಶಕ್ತಿಗಳನ್ನು ವಿರೋಧಿಸಲು ಜನರೊಂದಿಗೆ ನಿಲ್ಲಬೇಕು.

ಸಿಪಿಐ(ಎಂಎಲ್) ಲಿಬರೇಶನ್

Photos from CPIML Liberation - Karnataka's post 02/05/2026

CPIML ಲಿಬರೇಶನ್ ಸಿಂಧನೂರು ತಾಲೂಕ ಸಮಿತಿ ನೇತೃತ್ವದಲ್ಲಿ ಒಡಿಶಾದ ಬುಡಕಟ್ಟು ಸಮುದಾಯದ ಜೀತು ಮುಂಡಾ ಅವರ ಮೇಲೆ ಸರ್ಕಾರಿ ಬ್ಯಾಂಕ್ ಅಧಿಕಾರಿಗಳ ಅಮಾನವೀಯ ವರ್ತನೆ ಖಂಡಿಸಿ, ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೊಳಪಡಿಸಿ ತಪ್ಪಿತಸ್ಥ ಬ್ಯಾಂಕ್ ಅಧಿಕಾರಿಗಳನ್ನು ಹುದ್ದೆಯಿಂದ ವಜಾಗೊಳಿಸಲು ಆಗ್ರಹಿಸಿ ಪ್ರತಿಭಟನೆ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

01/05/2026

ಕಾರ್ಮಿಕರ ದಿನಾಚರಣೆಯ ಕ್ರಾಂತಿಕಾರಿ ಶುಭಾಶಯಗಳು....

1871ರ ಪ್ಯಾರೀಸ್ ಕಮ್ಯೂನ್, ಕೇವಲ 72 ದಿನದ ಅಲ್ಪಾವಧಿ ಆಳ್ವಿಕೆ ನಡೆಸಿದರೂ. ಕಾರ್ಮಿಕರು ಉತ್ಪಾದನೆ ಮಾಡಲು ಮಾತ್ರ ಸೀಮಿತರಾಗಿಲ್ಲ. ಅವರು ಕ್ರಾಂತಿಯನ್ನು ಜರುಗಿಸಿ ಆಧಿಕಾರ ಹಿಡಿಯಬಲ್ಲರೆಂದು ಪ್ಯಾರೀಸ್ ಕ್ರಾಂತಿ ತೋರಿಸಿ ಕೊಟ್ಟಿತು. ಜಗತ್ತಿನ ತಂತ್ರಜ್ಞಾನ ಉತ್ಪಾದನೆಯ ಮುಂಚೂಣಿಯಲ್ಲಿದ್ದ ಯೂರೋಪ್ ಕಾರ್ಮಿಕ ಶೋಷಣೆಯಲ್ಲಿಯೂ ಹಿಂದೆ ಬಿದ್ದಿರಲಿಲ್ಲ. ಮಾಲೀಕ ವರ್ಗದ ಬಂಡವಾಳಶಾಹಿಗಳು ಕಾರ್ಮಿಕರನ್ನು ಯಂತ್ರಗಳಂತೆ ಬಳಸಿಕೊಂಡು, ಜೀವನದ ಕನಿಷ್ಠ ಭದ್ರತೆ ನೀಡದೇ, ಶಕ್ತಿ ಹೀನಗೊಂಡ ಕಾರ್ಮಿಕರನ್ನು ತ್ಯಾಜ್ಯದಂತೆ ಬಿಸಾಡುವ ಹೀನ ಸ್ಥಿತಿ ಇತ್ತು. ಯೂರೋಪಿನಿಂದ ಸ್ಪೂರ್ತಿ ಪಡೆದ ಅಮೇರಿಕ ಉಪಖಂಡದ ಚಿಕ್ಯಾಗೋ ನಗರದಲ್ಲಿ 1886ರ ಮೇ ಆರಂಭದಲ್ಲಿ ಬಂಡವಾಳಶಾಹಿ ಮಾಲೀಕ ವರ್ಗದ ವಿರುದ್ಧ 12-16 ತಾಸಿನ ಕೆಲಸದ ಅವಧಿ ವಿರುದ್ಧ ಕಾರ್ಮಿಕರು ದಂಗೆ ಎದ್ದರು. ಕೆಲಸದ ಅವಧಿ 8 ಗಂಟೆಗೆ ಮಿತಿಗೊಳಿಸಲು ಒತ್ತಾಯಿಸಿ ಪೋಲೀಸರ ಗುಂಡಿಗೆ ಎದೆಯೊಡ್ಡಿದರು. ಇಲ್ಲಿ 4 ಕಾರ್ಮಿಕರು ಗಲ್ಲಿಗೇರುವ ಮೂಲಕ ಇಡೀ ಜಗತ್ತಿನ ಕಾರ್ಮಿಕರು ಎಚ್ಚೆತ್ತು ಸಿಡಿದೇಳವಂತೆ ಮಾಡಿದ ದಿನವಾಯಿತು. ಅಂದಿನಿಂದ ಜಗತ್ತಿನ ಬಹುತೇಕ ರಾಷ್ಟ್ರಗಳು 8 ತಾಸಿನ ಕೆಲಸಕ್ಕೆ ಮಣಿದವು. ಇದರ ಪ್ರೇರಣಿಯಿಂದ ಅರ್ಕಾಟಿಕ, ಅಹ್ಮದಾಬಾದ್ ಮತ್ತು ಬಾಂಬೆಯಲ್ಲಿ ಹತ್ತಿ ಗಿರಣಿಯ ಸಹಸ್ರಾರು ಕಾರ್ಮಿಕರು ಮಾಲೀಕರ ವಿರುದ್ಧ ಬೀದಿಗಿಳಿಯುವ ಮೂಲಕ 1823ರಲ್ಲಿ ರೋಚಕ ಇತಿಹಾಸ ನಿರ್ಮಿಸಿದರು. ಅಲ್ಲದೇ ಕಾರ್ಮಿಕರು ಬ್ರಿಟಿಷ್ರ ವಿರುದ್ಧ ದಂಗೆ ಎದ್ದು, ಸ್ವಾತಂತ್ರ್ಯ ಚಳುವಳಿಯಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಡಿದರು. ಕಾರ್ಮಿಕರ ಶ್ರಮ ದೋಚುವ ಬಂಡವಾಳಶಾಹಿ, ಕಂಪನಿರಾಜ್ ,ಆಳುವ ವರ್ಗದ ವಿರುದ್ಧ ಐಕ್ಯತೆಯಿಂದ ಕಾರ್ಮಿಕ ಹಕ್ಕುಗಳ ಉಳಿವಿಗಾಗಿ ಸಂಘರ್ಷ ತೀವ್ರಗೊಳಿಸೋಣ.

ದುಡಿಯುವ ವರ್ಗದ ಐಕ್ಯತೆ ಚಿರಾಯುವಾಗಲಿ.!
AICCTU ಜಿಂದಾಬಾದ್!

Photos from CPIML Liberation - Karnataka's post 22/04/2026

CPI(ML) Liberation's 57th Party Foundation Day and 156th Birth Anniversary of Comrade Lenin was observed in party branches in Karnataka.

CPI(ML) members resolved to uphold the communist banner and lead the struggle for a genuinely sovereign secular socialist democratic republic, & to expand and strengthen the CPI(ML) in every possible way to fulfill the dreams of our great martyrs and serve the interests of our great people.

Photos from CPIML Liberation - Karnataka's post 17/04/2026

ಖಾಸಗಿ ಆಸ್ಪತ್ರೆಗಳ ಜೊತೆ ಸರಕಾರಿ ಆಸ್ಪತ್ರೆಗಳ ಒಪ್ಪಂದ ಮಾಡಿ ಕೊಂಡಿರುವ ಸರಕಾರ ಕ್ರಮ ಖಂಡಿಸಿ CPIML ಲಿಬರೇಶನ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ನಮ್ಮ ಹಕ್ಕೊತ್ತಾಯಗಳು -
👉 ಸರ್ಕಾರ ತಕ್ಷಣವೇ ಖಾಸಗಿ ಆಸ್ಪತ್ರೆಗಳೊಂದಿಗೆ ಮಾಡಿಕೊಂಡಿರುವ ಎಲ್ಲಾ ಒಪ್ಪಂದಗಳನ್ನು ರದ್ದುಪಡಿಸಬೇಕು!
👉 ಸರಕಾರಿ ಆಸ್ಪತ್ರೆಗಳಿಗೆ ಅಗತ್ಯವಿರುವ ಎಲ್ಲಾ ಮೂಲಸೌಕರ್ಯ ಮತ್ತು ಸಿಬ್ಬಂದಿಯನ್ನು ಒದಗಿಸಬೇಕು!
👉 ಪ್ರತಿಯೊಬ್ಬ ನಾಗರಿಕನಿಗೂ ಉಚಿತ ಮತ್ತು ಗುಣಮಟ್ಟದ ಆರೋಗ್ಯ ಸೇವೆ ಲಭ್ಯವಾಗಬೇಕು!
ಜನರ ಹಕ್ಕುಗಳನ್ನು ರಕ್ಷಿಸಲು, ಶೋಷಣೆಯ ವಿರುದ್ಧ ಧ್ವನಿ ಎತ್ತಲು — ಎಲ್ಲರೂ ಒಗ್ಗೂಡಬೇಕು.

15/04/2026

ಸರಕಾರಿ ಆರೋಗ್ಯ ವ್ಯವಸ್ಥೆಯನ್ನು ಖಾಸಗೀಕರಣಕ್ಕೆ ಒಪ್ಪಿಸುವ ಸರ್ಕಾರದ ದ್ರೋಹ — ಜನರ ಹಕ್ಕುಗಳ ಮೇಲೆ ದಾಳಿ!

ರಾಜ್ಯದ ಆಡಳಿತ ವರ್ಗ ಮತ್ತೆ ಒಂದು ಬಾರಿ ತನ್ನ ನಿಜಸ್ವರೂಪವನ್ನು ಬಯಲಿಗೆಳೆಯುತ್ತಿದೆ. ಜನಸಾಮಾನ್ಯರ ಆರೋಗ್ಯವನ್ನು ರಕ್ಷಿಸಬೇಕಾದ ಸರ್ಕಾರವೇ ಇಂದು ಖಾಸಗಿ ಆಸ್ಪತ್ರೆಗಳ ಲಾಭದಾಸೆಗೆ ತಲೆಬಾಗುತ್ತಿದ್ದು, ಸರಕಾರಿ ಆಸ್ಪತ್ರೆಗಳನ್ನೇ ಹಂತ ಹಂತವಾಗಿ ಖಾಸಗೀಕರಣದ ಹಾದಿಗೆ ಒಯ್ಯುತ್ತಿದೆ. ಇದು ಕೇವಲ ಆಡಳಿತದ ನಿರ್ಧಾರವಲ್ಲ — ಇದು ಬಡಜನರ ಬದುಕಿನ ಮೇಲೆ ನಡೆಸುತ್ತಿರುವ ನೇರ ದಾಳಿ!

ಸರಕಾರಿ ಆಸ್ಪತ್ರೆಗಳು ಜನರ ಹಕ್ಕು. ಅದು ದಾನವಲ್ಲ, ಅದು ದಯೆಯಲ್ಲ — ಅದು ಸಂವಿಧಾನಿಕ ಹಕ್ಕು. ಆದರೆ, ಆ ಹಕ್ಕನ್ನು ಕಿತ್ತುಕೊಳ್ಳುವ ಕೆಲಸವನ್ನು ರಾಜ್ಯ ಸರ್ಕಾರ ವ್ಯವಸ್ಥಿತವಾಗಿ ಮಾಡುತ್ತಿದೆ. “ಸೌಲಭ್ಯಗಳ ಕೊರತೆ” ಎಂಬ ನೆಪದಲ್ಲಿ ಖಾಸಗಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವುದು ಎಂದರೆ ಸರ್ಕಾರ ತನ್ನ ಹೊಣೆಗಾರಿಕೆಯಿಂದ ಓಡಿ ಹೋಗುತ್ತಿದೆ ಎಂಬುದಕ್ಕೆ ಸ್ಪಷ್ಟ ಸಾಕ್ಷಿ.

ಬೆಳ್ತಂಗಡಿ, ಮೂಡಬಿದ್ರೆ, ಬಂಟ್ವಾಳ, ವಿಟ್ಲ ಪ್ರದೇಶಗಳಲ್ಲಿನ ಆಸ್ಪತ್ರೆಗಳನ್ನು ಖಾಸಗಿ ವೈದ್ಯಕೀಯ ಸಂಸ್ಥೆಗಳ ಜೊತೆ ಸೇರಿಸುವುದು ಜನಪರ ನೀತಿ ಅಲ್ಲ — ಇದು ಕಾರ್ಪೊರೇಟ್ ಪರ ನೀತಿ! ಇವುಗಳಿಂದ ಲಾಭವಾಗುವುದು ಜನರಿಗೆ ಅಲ್ಲ, ಕೆಲವೇ ಮুষ্টಿಮೇಲೆ ಕುಳಿತಿರುವ ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಮಾತ್ರ.
ಇಂದು ಖಾಸಗಿ ಆಸ್ಪತ್ರೆಗಳು ಹೇಗೆ ಜನರನ್ನು ಸುಲಿಗೆ ಮಾಡುತ್ತಿವೆ ಎಂಬುದು ಪ್ರತಿಯೊಬ್ಬ ಸಾಮಾನ್ಯ ನಾಗರಿಕನಿಗೂ ಗೊತ್ತಿದೆ. ಚಿಕಿತ್ಸೆ ಎಂಬ ಹೆಸರಿನಲ್ಲಿ ಸಾವಿರಾರು ರೂಪಾಯಿಗಳನ್ನು ಕಿತ್ತುಕೊಳ್ಳುವ ವ್ಯವಸ್ಥೆಗೆ ಈಗ ಸರ್ಕಾರವೇ ಕಾನೂನುಬದ್ಧ ಬಲ ನೀಡುತ್ತಿದೆ. ಇದು ಸ್ವೀಕಾರಾರ್ಹವಲ್ಲ!

ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸುವುದು ಸರ್ಕಾರದ ಮೊದಲ ಕರ್ತವ್ಯ. ಆದರೆ ಅದನ್ನು ಬಿಟ್ಟು ಖಾಸಗೀಕರಣದ ದಾರಿಗೆ ಹೋಗುವುದು ಎಂದರೆ, ಬಡವರನ್ನು ಆರೋಗ್ಯ ಸೇವೆಯಿಂದ ದೂರ ತಳ್ಳುವುದು. ಇದು ಸಾಮಾಜಿಕ ಅನ್ಯಾಯದ ಪರಾಕಾಷ್ಠೆ.

ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಬಹುಕಾಲದಿಂದ ಸರಕಾರಿ ಮೆಡಿಕಲ್ ಕಾಲೇಜಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಆದರೆ ಸರ್ಕಾರ ಅದನ್ನು ಕಡೆಗಣಿಸಿ ಇರುವ ವ್ಯವಸ್ಥೆಯನ್ನೇ ಕುಸಿತಗೊಳಿಸುತ್ತಿದೆ. ಇದು ಜನರ ಆಶೆಗಳನ್ನೇ ದ್ರೋಹ ಮಾಡುವಂತಾಗಿದೆ.

ಇದನ್ನು ವಿರೋಧಿಸುವುದು ಕೇವಲ ರಾಜಕೀಯ ಹೋರಾಟವಲ್ಲ — ಇದು ಮಾನವೀಯ ಹೋರಾಟ. ಆರೋಗ್ಯ ಹಕ್ಕಿಗಾಗಿ, ಸಮಾನತೆಗೆಗಾಗಿ, ಶೋಷಣೆಯ ವಿರುದ್ಧ ಹೋರಾಡುವ ಅವಶ್ಯಕತೆ ಇದೆ.

👉 ಸರ್ಕಾರ ತಕ್ಷಣವೇ ಖಾಸಗಿ ಆಸ್ಪತ್ರೆಗಳೊಂದಿಗೆ ಮಾಡಿಕೊಂಡಿರುವ ಎಲ್ಲಾ ಒಪ್ಪಂದಗಳನ್ನು ರದ್ದುಪಡಿಸಬೇಕು!
👉 ಸರಕಾರಿ ಆಸ್ಪತ್ರೆಗಳಿಗೆ ಅಗತ್ಯವಿರುವ ಎಲ್ಲಾ ಮೂಲಸೌಕರ್ಯ ಮತ್ತು ಸಿಬ್ಬಂದಿಯನ್ನು ಒದಗಿಸಬೇಕು!
👉 ಪ್ರತಿಯೊಬ್ಬ ನಾಗರಿಕನಿಗೂ ಉಚಿತ ಮತ್ತು ಗುಣಮಟ್ಟದ ಆರೋಗ್ಯ ಸೇವೆ ಲಭ್ಯವಾಗಬೇಕು!
ಜನರ ಹಕ್ಕುಗಳನ್ನು ರಕ್ಷಿಸಲು, ಶೋಷಣೆಯ ವಿರುದ್ಧ ಧ್ವನಿ ಎತ್ತಲು — ಎಲ್ಲರೂ ಒಗ್ಗೂಡಬೇಕು.

Photos from CPIML Liberation - Karnataka's post 15/04/2026

A public programme on "Constitution and Fundamental Rights" was held in Anandapuram in on the occasion of Ambedkar Jayanti. Children and women sang songs in praise of Ambedkar, and pledged to uphold the Constitution of India.

Photos from CPIML Liberation - Karnataka's post 15/04/2026

Ambedkar Jayanti celebrated across various districts of Karnataka, including in Kodagu, Mysore, Koppal, Bengaluru and others. The pledge to uphold the Indian Constitution and to fight for equality, dignity, fraternity and liberty was taken by the working class.

Photos from CPIML Liberation - Karnataka's post 10/04/2026

ಸಿಂಧನೂರು ತಾಲೂಕಿನ ದಢೇಸುಗೂರು ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘ (AIARLA) ಗ್ರಾಮ ಘಟಕ ನಾಮಫಲಕ ಉದ್ಘಾಟನೆ ನೆರವೇರಿಸಿ ಕಾರ್ಯಕ್ರಮ ನಡೆಸಲಾಯಿತು.

Photos from CPIML Liberation - Karnataka's post 02/04/2026

Glimpses of today's discussion on Karnataka's new law on dishonour killing. To watch the discussion, visit CPIML Karnataka FB page.

Want your business to be the top-listed Government Service in Bangalore?

Click here to claim your Sponsored Listing.

Location

Category

Telephone

Website

https://karnataka.cpiml.net/

Address


Bangalore
560048