ಸಾರ್ವಜನಿಕರೆ ಎಚ್ಚರ
ಬೈಕ್ ಸವಾರರಲ್ಲಿ ವಿನಂತಿ ನಿಮ್ಮ ವಾಹನಗಳನ್ನು ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸುವಾಗ ಕೀ ಲಾಕ್ ಮಾಡಿಕೊಂಡಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಿ.
ರಾತ್ರಿ ವೇಳೆ ಬೈಕ್ ಗಳನ್ನು ಆದಷ್ಟು ಮನೆಯ ಕಾಪೌಂಡ್ ಒಳಗೆ ನಿಲ್ಲಿಸಿ ಮತ್ತು ನಿಮ್ಮ ಮನೆಗೆ ಸಿ.ಸಿ. ಟಿ.ವಿ. ಕ್ಯಾಮೆರಾ ಅಳವಡಿಸಿಕೊಳ್ಳಿ
ಅನುಮಾಸ್ಪದ ವ್ಯಕ್ತಿಗಳು ಕಂಡು ಬಂದರೆ ಪೊಲೀಸರಿಗೆ ಕೂಡಲೇ ಮಾಹಿತಿ ನೀಡಿ
DCP SOUTH BCP
Public Service
ಸಾರ್ವಜನಿಕರಲ್ಲಿ ವಿನಂತಿ
ಸರಗಳ್ಳರ ಬಗ್ಗೆ ಎಚ್ಚರಿಕೆಯಿಂದ ಇರಿ
ಮಹಿಳೆಯವರು, ವೃದ್ದರು ತಮ್ಮ ಅಮೂಲ್ಯವಾದ ಒಡವೆಗಳನ್ನು ಆದಷ್ಟು ಮನೆಯಲ್ಲಿಟ್ಟು ಇಟ್ಟು ವಾಯುವಿಹಾರ/ತರಕಾರಿ-ಹಾಲು ಖರೀದಿ ಮತ್ತು ಮಕ್ಕಳನ್ನು ಶಾಲೆಗೆ ಬಿಡುವ & ಕರೆದುಕೊಂಡು ಬರುವಸಮಯದಲ್ಲಿ ಮಾಡುವುದು ಒಳ್ಳೆಯದು
ಅನುಮಾನಸ್ಟಪದ ವ್ಯಕ್ತಿಗಳು, ಬೈಕ್ ಸವಾರರು ಕಂಡು ಬಂದಲ್ಲಿ ಕೂಡಲೇ ಪೊಲೀಸರಿಗೆ ತಿಳಿಸಲು ಮರೆಯದಿರಿ.
ಪತ್ರಿಕಾ ಪ್ರಕಟಣೆ
ಉಪ ಪೊಲೀಸ್ ಆಯುಕ್ತರು, ದಕ್ಷಿಣ ವಿಭಾಗ
ದಿನಾಂಕ:15-05-2017
ವಿ.ವಿ.ಪುರಂ ಪೊಲೀಸ್ ಠಾಣೆಯ ಪೊಲೀಸರಿಂದ 4 ಜನ ಕುಖ್ಯಾತ ಸುಲಿಗೆಕೋರರ ಬಂಧನ - 7 ಪ್ರಕರಣಗಳ ಪತ್ತೆ.
ದಿನಾಂಕ 25-4-2017 ರಂದು ರಾತ್ರಿ ಸುಮಾರು 10-30 ಗಂಟೆಯಲ್ಲಿ ಫಿರ್ಯಾದುದಾರರಾದ ಶ್ರೀ.ದಿನೇಶ್ಕುಮಾರ್ ರವರು ಅವೆನ್ಯೂ ರಸ್ತೆಯಲ್ಲಿದ್ದ ತಮ್ಮ ಅಂಗಡಿಗೆ ಬೀಗಹಾಕಿ ಹಣದ ಬ್ಯಾಗ್ನ್ನು ತನ್ನ ಸ್ನೇಹಿತನ ಕೈಗೆ ಕೊಟ್ಟು ಇಬ್ಬರು ಹೊಂಡಾ ಆಕ್ಟಿವಾ ವಾಹನದಲ್ಲಿ ಮನೆಗೆ ಹೋಗಲು ರಾತ್ರಿ 11-00 ಗಂಟೆಯಲ್ಲಿ ತ್ರಿಶಾಲ ಲಾಡ್ಜ್ ಮುಂದೆ ಹೋಗುವಾಗ ಹಿಂದಿನಿಂದ ದ್ವಿಚಕ್ರವಾಹನದಲ್ಲಿ ಹಿಂಭಾಲಿಸಿ ಬಂದವರು ಫಿರ್ಯಾದುದಾರರ ಸ್ನೇಹಿತರ ಕೈಯಲ್ಲಿದ್ದ ಹಣದ ಬ್ಯಾಗ್ನ್ನು ಕಿತ್ತುಕೊಂಡು ಹೋಗಿದ್ದು, ಸದರಿ ಬ್ಯಾಗ್ನಲ್ಲಿ 12,84,000/- ರೂಗಳು ಹಾಗೂ ಇತರೆ ಡಾಕ್ಯುಮೆಂಟ್ಸ್ಗಳಿದ್ದವು ಎಂದು ನೀಡಿದ ದೂರಿನ ಮೇರೆಗೆ ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿತರ ಪತ್ತೆಗಾಗಿ ವಿ.ವಿ.ಪುರಂ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿಯವರ ತಂಡವನ್ನು ರಚಿಸಿದ್ದು, ಸದ್ರಿ ತಂಡವು ಅಪರಾಧ ನಡೆದ ಸ್ಥಳದಲ್ಲಿನ ಲಭ್ಯವಿರುವ ಎಲ್ಲಾ ಸಿ.ಸಿ.ಕ್ಯಾಮರಗಳ ವಿವರವನ್ನು ಕಲೆಹಾಕಿ ಎಲ್ಲಾ ಸಿ.ಸಿ.ಟಿ.ವಿಗಳನ್ನು ಪರಿಶೀಲಿಸಿದ್ದು, ಈ ಹಿಂದೆ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದ ಜಮೀರ್ ಮತ್ತು ಸದ್ದಾಂ ಈ ಕೃತ್ಯದಲ್ಲಿ ಭಾಗಿಯಾಗಿರುವುದಾಗಿ ಖಾತ್ರಿಪಡಿಸಿಕೊಂಡು
1) ಮಹಮದ್ಜಮೀರ್ @ ಜಮೀರ್ ಬಿನ್ ಲೇಟ್. ಮಹಮದ್ ಅಬ್ಬಾಸ್ ವಯಸ್ಸು 39 ವರ್ಷ,,
2) ಅಯಾಜ್ @ ಚೌದ್ರಿ ಬಿನ್ ಸೈಯದ್ಭಾಷ ವಯಸ್ಸು 35 ವರ್ಷ
3) ಸದ್ದಾಂಖಾನ್ @ ಸದ್ದಾಂ ಬಿನ್ ಲಿಯಾಖತ್ ಆಲಿ ಖಾನ್ ವಯಸ್ಸು 27 ವರ್ಷ
4) ತೌಸಿಫ್ಪಾಷ @ ಅಡ್ಡು ಬಿನ್ ಮಹಮದ್ಫೀರ್ಸಾಬ್ ವಯಸ್ಸು 26 ವರ್ಷ
ಇವರುಗಳನ್ನು ದಿನಾಂಕ.7-5-2017 ರಂದು ಬಂಧಿಸಿರುತ್ತಾರೆ. ಆರೋಪಿತರಿಂದ ಒಟ್ಟು 3,70,000/- ರೂಗಳನ್ನು ಹಾಗೂ ಇವರು ಕೃತ್ಯಕ್ಕೆ ಉಪಯೋಗಿಸುತ್ತಿದ್ದ ಎರಡು ಚಾಕುಗಳು, ಎರಡು ದ್ವಿಚಕ್ರವಾಹನಗಳನ್ನು ವಶಪಡಿಸಿರುತ್ತಾರೆ.
ಈ ಆರೋಪಿಗಳು ಹಣಕಾಸು ವ್ಯವಹಾರ ನಡೆಯುವ ಕಡೆಗಳಲ್ಲಿ ಹೊಂಚುಹಾಕಿ ಹಣವನ್ನು ತೆಗೆದುಕೊಂಡು ಹೋಗುವವರನ್ನು ಗಮನಿಸಿ ಅವರನ್ನು ಹಿಂಭಾಲಿಸಿ 2016-17 ನೇ ಸಾಲಿನಲ್ಲಿ ವಿ.ವಿ.ಪುರಂ, ಚಾಮರಾಜಪೇಟೆ, ಕಾಟನ್ಪೇಟೆ, ಹಾಗೂ ಎಸ್.ಆರ್.ನಗರ ಪೊಲೀಸ್ ಠಾಣೆಗಳಲ್ಲಿ ವರದಿಯಾಗಿದ್ದ ಒಟ್ಟು 7 ಹಣ ಸುಲಿಗೆ ಪ್ರಕರಣಗಳು ಪತ್ತೆಯಾಗಿರುತ್ತವೆ. ಈ ಹಿಂದೆ ಸಹ ಮೇಲ್ಕಂಡ ಆರೋಪಿಗಳು ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾರೆ.
ಪತ್ರಿಕಾ ಪ್ರಕಟಣೆ
ಉಪ ಪೊಲೀಸ್ ಆಯುಕ್ತರು, ದಕ್ಷಿಣ ವಿಭಾಗ
ದಿನಾಂಕ:15-05-2017
ಸುಬ್ರಮಣ್ಯಪುರ ಉಪ ವಿಭಾಗದ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯ ಪೊಲೀಸರಿಂದ, ಅಪರಿಚಿತ ವ್ಯಕ್ತಿಯ ಅನುಮಾನಾಸ್ಪದ ಸಾವಿನ ತನಿಖೆಯಿಂದ ನಿಗೂಢ ಕೊಲೆ ಪ್ರಕರಣ ಬೆಳಕಿಗೆ
ಜಾಖರ್ಾಂಡ್ ರಾಜ್ಯದ ಮೂರು ಜನ ಆರೋಪಿಗಳ ಬಂಧನ.
ದಿನಾಂಕ:01-04-2017 ರಂದು ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕ್ಲಾಸಿಕ್ ಆರ್ಚಿಡ್ ಲೇಔಟ್ ನ ಒಂದು ಖಾಲಿ ಸೈಟಿನಲ್ಲಿ ಒಬ್ಬ ಅಪರಿಚಿತ ವ್ಯಕ್ತಿಯ ಕೊಳೆತ ಮೃತ ದೇಹವು ದೊರಕಿದ್ದು, ಅದರಂತೆ ಠಾಣೆಯ ಯು.ಡಿಆರ್. ಸಂಖ್ಯೆ 09/17 ಕಲಂ 174 ಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಬೆಂಗಳೂರು ನಗರದ ಪಶ್ಚಿಮ ವಲಯದ ಅಪರ ಪೊಲೀಸ್ ಆಯುಕ್ತರಾದ ಶ್ರೀಮತಿ ಮಾಲಿನಿ ಕೃಷ್ಣಮೂತರ್ಿ ಮತ್ತು ದಕ್ಷಿಣ ವಿಭಾಗದ ಉಪ-ಪೊಲೀಸ್ ಆಯುಕ್ತರಾದ ಶ್ರೀ. ಎಸ್.ಡಿ ಶರಣಪ್ಪ ರವರ ಮಾರ್ಗದರ್ಶನದಲ್ಲಿ, ಸುಬ್ರಮಣ್ಯಪುರ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ.ಮಂಜುನಾಥಚೌದರಿ ರವರ ನೇತೃತ್ವದಲ್ಲಿ, ಪುಟ್ಟೇನಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ರವರಾದ ಶ್ರೀ.ಟಿ.ಎಂ.ಧಮರ್ೇಂದ್ರ ರವರ ನಾಯಕತ್ವದಲ್ಲಿ ತಂಡವನ್ನು ರಚನೆ ಮಾಡಿ ಅಪರಿಚಿತ ವ್ಯಕ್ತಿಯ ವಾರಸುದಾರರನ್ನು ಮತ್ತು ಆರೋಪಿಗಳನ್ನು ಪತ್ತೆ ಮಾಡಲು ಜಾಖರ್ಾಂಡ್ ರಾಜ್ಯಕ್ಕೆ ಸಿಬ್ಬಂದಿಗಳೊಂದಿಗೆ ತೆರಳಿ ಅಲ್ಲಿ ಮೃತ ಸಹದೇವ್ರಾಯ್ ಬಿನ್ ಜಗನ್ನಾಥ್ರಾಯ್, ಸುಮಾರು 30 ವರ್ಷ ಎಂಬಾತನನ್ನು ಸಿಮೆಂಟ್ ಮೋಲ್ಡ್ ಪೀಸ್ನಿಂದ ಆತನ ತಲೆ ಮತ್ತು ಮುಖದ ಮೇಲೆ ಎತ್ತಿಹಾಕಿ ಕೊಲೆ ಮಾಡಿ, ನಂತರ ಮೃತದೇಹವನ್ನು ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮಣ್ಣಿನಲ್ಲಿ ಹೂತು ಹಾಕಿ ಜಾಖರ್ಾಂಡ್ ರಾಜ್ಯದಲ್ಲಿ ತಲೆಮರೆಸಿಕೊಂಡಿದ್ದ 3 ಜನ ಆಸಾಮಿಗಳನ್ನು ಪತ್ತೆ ಮಾಡಿ ದಸ್ತಗಿರಿ ಮಾಡಿರುತ್ತಾರೆ. ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ಪಿ.ಎಸ್.ಐ ಶ್ರೀ.ರಘುನಾಯ್ಕ್.ಎ.ಆರ್, ಪಿ.ಎಸ್.ಐ ಶ್ರೀ.ಸೋಮರಾಜು, ಎ.ಎಸ್.ಐ ಶ್ರೀ.ಸುಂದರ್ ರಾವ್, ಹೆಚ್.ಸಿ-7851 ಪ್ರಧೀಪ್, ಹೆಚ್.ಸಿ-8171 ಶಿವಮೂತರ್ಿ, ಹೆಚ್.ಸಿ-7705 ಯದುಕುಮಾರ್, ಪಿ.ಸಿ-11921 ಪುಟ್ಟರಾಜು ರವರುಗಳು ಸಹಕರಿಸಿರುತ್ತಾರೆ.
1)ಮಂಗ್ರೋಮಹತಾ@ಮುಂಗುಡು, ಬಿನ್ ಶಂಕರ್ ಮಾತೊ, 32 ವರ್ಷ,
2)ಗೋನೋರಾಯ್@ ಗಿನ್ನು, ಬಿನ್ ಭಾಗತ್ರಾಯ್, 42 ವರ್ಷ, ವಿ
3)ಬೈಜ್ಯನಾಥ್ ಕೋಲ್@ ಬಿನ್ ಗಹಾನ್ ಕೋಲ್, 45 ವರ್ಷ,
ರವರುಗಳನ್ನು ಪುಟ್ಟೇನಹಳ್ಳಿ ಪೊಲೀಸ್ ಠಾಣಾ ಮೊ.ಸಂ.184/2017 ಕಲಂ 302, 201 ರೆ/ವಿ 34 ಐ.ಪಿ.ಸಿ ಕೇಸಿನಲ್ಲಿ ದಸ್ತಗಿರಿ ಮಾಡಿ ಕೃತ್ಯಕ್ಕೆ ಬಳಸಿದ್ದ ಸಿಮೆಂಟ್ ಮೋಲ್ಡ್ ಪೀಸ್ ಹಾಗೂ ಇತರೆ ಉಪಕರಣಗಳನ್ನು ಅಮಾನತ್ತುಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
16/05/2017
ಉಪ ಪೊಲೀಸ್ ಆಯುಕ್ತರು ದಕ್ಷಿಣ ವಿಭಾಗ ರವರ ಪತ್ರಿಕಾ ಪ್ರಕಟಣೆ
ದಿನಾಂಕ:15-05-2017
ನೇಪಾಳದಿಂದ ಭಾರತಕ್ಕೆ ಬಂದು ಕನ್ನ ಕಳವು ಮಾಡುತ್ತಿದ್ದ ಕುಖ್ಯಾತ ಕಳ್ಳರ ಬಂಧನ.
ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ಮೊ.ಸಂಖ್ಯೆ 115/2017 ಕಲಂ 454, 457, 380 ಐಪಿಸಿ.
2017ನೇ ಇಸವಿ ಮಾಚರ್್ ತಿಂಗಳಿನಲ್ಲಿ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ಸರಹದ್ದಿನ ಯಲಚೇನಹಳ್ಳಿ, 4ನೇಕ್ರಾಸ್, ಮನೆ ನಂಬರ್ 35/36 ಮನೆಯ ಕಿಟಕಿಯ ಸರಳ್ಳನ್ನು ಕುಯ್ದು ಮನೆಯೊಳಗೆ ಪ್ರವೇಶಿಸಿ ಮನೆಯಲ್ಲಿದ್ದ ಚಿನ್ನದ ವಡವೆಗಳು ಮತ್ತು ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದ ಠಾಣಾ ಮೊ.ಸಂಖ್ಯೆ 115/2017 ಕಲಂ 454, 457, 380 ಐಪಿಸಿ ಕೇಸಿನ ಆರೋಪಿಗಳಾದ
1] ಗಣೇಶ್ಬಹದ್ದೂರ್ರೊಕಾಯ @ ಗಣೇಶ್ ಬಹದ್ದೂರ್ಸಿಂಗ್ ಬಿನ್ ಸುರೇಶ್ಬಹದ್ದೂರ್ ರೊಕಾಯ, ವಯಸ್ಸು 34ವರ್ಷ,
2] ನರೇಂದ್ರ ಬಹದ್ದೂರ್ ತಾಪ @ ನರೇಂದ್ರ ಬಹದ್ದೂರ್ ಬಿನ್ ಚಂದ್ರಬಹದ್ದೂರ್ ತಾಪ, ವಯಸ್ಸು 39ವರ್ಷ,
ಮೇಲ್ಕಂಡ ಆರೋಪಿಗಳ 2004 ನೇ ಇಸವಿಯಿಂದ ಇದುವರೆವಿಗೂ ತಲೆಮರಿಸಿಕೊಂಡಿದ್ದು, ಇವರುಗಳನ್ನು ಪ್ರಕರಣದ ತನಿಖಾ ಕಾಲದಲ್ಲಿ ದಿನಾಂಕ 24/04/2017 ರಂದು ದಸ್ತಗಿರಿ ಮಾಡಿ ವಿಚಾರಣೆಗೊಳಪಡಿಸಿದ್ದು, ಸದರಿ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಸದರಿ ಆರೋಪಿಗಳ ವಶದಿಂದ ಒಟ್ಟು ಸುಮಾರು 2,60,000/-ರೂಪಾಯಿ ಬೆಲೆ ಬಾಳುವ ಸುಮಾರು 84 ಗ್ರಾಂನಷ್ಟು ಚಿನ್ನದ ವಡವೆಗಳು, ಒಂದು ವಾಚು, ಒಂದು ಕ್ಯಾಮರಾ, ಒಂದು ಲ್ಯಾಪ್ಟಾಪ್, ನಗದು ಹಣ 6 ಸಾವಿರ ರೂಪಾಯಿವನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಗಳ ವಿಚಾರಣೆಯಿಂದ ಬೆಂಗಳೂರಿನ ಪುಲಿಕೇಶಿನಗರ, ವಿಜಯನಗರ, ಕೆ.ಎಸ್.ಲೇಔಟ್ ಪೊಲೀಸ್ ಠಾಣೆಯ 2 ಕನ್ನ ಕಳವು ಪ್ರಕರಣ ಮತ್ತು ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ 5 ಕನ್ನ ಕಳವು ಪ್ರಕರಣಗಳು ಸೇರಿದಂತೆ ಬೆಳಕಿಗೆ ಬಂದಿರುತ್ತೆ.
ಮೇಲ್ಕಂಡ ಆರೋಪಿಗಳನ್ನು ಬಂಧಿಸಲು ಬೆಂಗಳೂರು ನಗರ, ದಕ್ಷಿಣ ವಿಭಾಗದ ಮಾನ್ಯ ಉಪ ಪೊಲೀಸ್ ಕಮೀಷನರ್ ಶ್ರೀ ಎಸ್.ಡಿ ಶರಣಪ್ಪ ಮತ್ತು ಬನಶಂಕರಿ ಉಪ ವಿಭಾಗದ ಎ.ಸಿ.ಪಿ, ಶ್ರೀ ಮಂಜುನಾಥ್ ಚೌದರಿ ರವರುಗಳ ಮಾರ್ಗದರ್ಶನದಲ್ಲಿ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ರವಿ ಪಾಟೀಲ್, ಪಿ.ಎಸ್.ಐರವರಾದ ಶ್ರೀಮತಿ ಸುಮ ಬಿ.ಆರ್ ಶ್ರೀ ಸುಬ್ರಮಣಿ ಕೆ. ಶ್ರೀಮತಿ ಪ್ರೇಮಕುಮಾರಿ ಪಿ. ಮತ್ತು ಸಿಬ್ಬಂದಿಯವರಾದ ಪಿ.ಸಿ 11006 ಮಹೇಶ್, ಪಿ.ಸಿ 12178 ಪ್ರದೀಪ್, ಪಿ.ಸಿ 3757 ತೌಸೀಫ್, ಪಿ.ಸಿ 12030 ನೂರುಲ್ಲಾ, ಪಿ.ಸಿ 12844 ಪ್ರವೀಣ್ ಮತ್ತು ಹೆಚ್.ಸಿ 7489 ರವಿಕುಮಾರ್ ರವರು ಆರೋಪಿಗಳ ಪತ್ತೆ ಕಾರ್ಯದಲ್ಲಿ ಶ್ರಮವಹಿಸಿ ಯಶಸ್ವಿಯಾಗಿರುತ್ತಾರೆ.
16/05/2017
ಪತ್ರಿಕಾ ಪ್ರಕಟಣೆ
ಉಪ ಪೊಲೀಸ್ ಆಯುಕ್ತರು, ದಕ್ಷಿಣ ವಿಭಾಗ
ದಿನಾಂಕ:15-05-2017
ಬಸವನಗುಡಿ ಪೊಲೀಸರಿಂದ, ನಿಷೇದಿತ 3 ಕೋಟಿ, 25ಲಕ್ಷ ರೂಪಾಯಿ ಮೌಲ್ಯದ ಹಳೇ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾಯಿಸುತ್ತಿದ್ದ ಆಸಾಮಿಗಳ ಬಂಧನ.
ದಿನಾಂಕ 14-05-2017 ರಂದು ಸಂಜೆ 07-30 ಗಂಟೆಯಲ್ಲಿ ಭಾತ್ಮೀದಾರರು ನೀಡಿದ ಮಾಹಿತಿ ಮೇರೆಗೆ ಬಸವನಗುಡಿ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ದೊಡ್ಡಗಣಪತಿ ದೇವಸ್ಥಾನದ ಬಳಿ ನಿಷೇದಿತ 500 ಮತ್ತು 1000 ರೂ ಮುಖಬೆಲೆಯ ಹಳೆಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾಯಿಸಲು ಪ್ರಯತ್ನ ಮಾಡುತ್ತಿದ್ದ
1) ಶ್ರೀನಿವಾಸ್ ಬಿನ್ ವೆಂಕಟೇಶ್ 43 ವರ್ಷ,
2) ಮಹೇಶ್ ಬಿನ್ ಮಲ್ಲಪ್ಪ 32 ವರ್ಷ,
3)ಪಿ.ಕರುಣಾಕರನ್ ಬಿನ್ ಪೂಮಾಲೈ 48 ವರ್ಷ,
4) ಅಬ್ದುಲ್ ಮುಜಿಬ್ ಬಿನ್ ಗೌಸ್ ಮುಹಿವುದ್ದೀನ್ 40 ವರ್ಷ,
5) ನೀಲಕಂಠ ಬಿನ್ ಸೋಮಶೇಖರ್ 32 ವರ್ಷ
6)ಹೆಚ್.ಜಿ ಜಂಭನಗೌಡ ಬಿನ್ ಹೆಚ್.ಬಿ ಬಸವನಗೌಡ 62 ವರ್ಷ,
7) ನಾರಾಯಣ ಬಿನ್ ಆಂಜನಪ್ಪ 48 ವರ್ಷ,
8)ಉದಯ್ ಕುಮಾರ್ ಬಿನ್ ಎನ್.ಜಿ ಕೃಷ್ಣಮೂತರ್ಿ 34 ವರ್ಷ,
9) ಕಾತರ್ಿಕ್ ಬಿನ್ ಸದಾಶಿವ 32 ವರ್ಷ
10) ಪಿ.ರುದ್ರಕುಮಾರ್ ಬಿನ್ ಪೆದ್ದಪ್ಪರೆಡ್ಡಿ 47 ವರ್ಷ,
ಎಂಬುವವರ ಮೇಲೆ ದಾಳಿ ಮಾಡಿ, ಹಿಡಿದು ಅವರ ವಶದಲ್ಲಿದ್ದ 500 ಮತ್ತು 1000 ರೂ ಮುಖಬೆಲೆಯ 3 ಕೋಟಿ, 25ಲಕ್ಷ ರೂಪಾಯಿ ಮೌಲ್ಯದ ನಿಷೇದಿತ ಹಳೆಯ ನೋಟುಗಳನ್ನು ಹಾಗೂ ಏಂ 05 ಒಅ 1418 ಔಟಟಿ ಕಾರನ್ನು ವಶಪಡಿಸಿಕೊಳ್ಳಲಾಗಿರುತ್ತದೆ.ಹಾಗೂ 1)ಪ್ರಸಾದ್ 2) ಶಶಿ 3) ರಾಜೇಂದ್ರ ಎಂಬ ವ್ಯಕ್ತಿಗಳು ತಪ್ಪಿಸಿಕೊಂಡಿರುತ್ತಾರೆ. ಈ ಬಗ್ಗೆ ಬಸವನಗುಡಿ ಪೊಲೀಸ್ ಠಾಣಾ ಮೊ.ಸಂ 160/2017 ಕಲಂ 5&7, Specified Bank Notes(cessation of liabilities)Act 2017 ರಡಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
ಬೆಂಗಳೂರುನಗರ ದಕ್ಷಿಣ ವಿಭಾಗದ ಡಿಸಿಪಿ ಡಾ.ಶರಣಪ್ಪ ಎಸ್.ಡಿ., ಐಪಿಎಸ್ ರವರ ನೇತೃತ್ವದಲ್ಲಿ, ಜಯನಗರ ಉಪ ವಿಭಾಗದ ಎಸಿಪಿ ಶ್ರೀ.ಜಿ.ಎಂ.ಕಾಂತರಾಜ್ ರವರ ಮಾರ್ಗದರ್ಶನದಲ್ಲಿ ಬಸವನಗುಡಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ.ಎಸ್.ಡಿ.ಶಶಿಧರ್ ಪ್ರೊ.ಪಿ.ಎಸ್.ಐ ರವರಾದ ಕು.ಪವಿತ್ರ, ಹಾಗೂ ಎ.ಎಸ್.ಐ ರಾಜಣ್ಣ, ಹೆಚ್.ಸಿ.5599 ಕೆಂಪರಾಜು, ಹೆಚ್.ಸಿ.6940 ಬಲರಾಮನಾಯ್ಕ, ಹೆಚ್.ಸಿ 6199 ಸುರೇಶ್, ಹೆಚ್.ಸಿ.7945 ಪರಮೇಶ್, ಹೆಚ್.ಸಿ 7413 ಸುರೇಶ್ ಮತ್ತು ಪಿ.ಸಿ 11928 ಬ್ರಹ್ಮಾನಂದ, ಪಿ.ಸಿ 12288 ಅಶೋಕ್, ಪಿ.ಸಿ 2248 ಲಕ್ಷ್ಮಣ್ ರವರುಗಳು ಆರೋಪಿಯನ್ನು ಬಂಧಿಸಿ, ನಿಷೇದಿತ 500 ಮತ್ತು 1000 ರೂ ಮುಖಬೆಲೆಯ ಹಳೆಯ ನೋಟುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಈ ಉತ್ತಮ ಕಾರ್ಯದ ಬಗ್ಗೆ ಮಾನ್ಯ ಪೊಲೀಸ್ ಕಮೀಷನರ್ರವರು ಪ್ರಶಂಸಿರುತ್ತಾರೆ.
ಪತ್ರಿಕಾ ಪ್ರಕಟಣೆ
ಉಪ ಪೊಲೀಸ್ ಆಯುಕ್ತರು, ದಕ್ಷಿಣ ವಿಭಾಗ
ದಿನಾಂಕ :10-05-2017
ಜಯನಗರ ಪೊಲೀಸರಿಂದ ದ್ವಿಚಕ್ರ ವಾಹನಗಳ ಲಾಕ್ ಮುರಿದು ಕಳವು ಮಾಡುತ್ತಿದ್ದ ಆರೋಪಿಗಳ ಬಂಧನ
ಈಗ್ಗೆ ಸುಮಾರು ಒಂದೂವರೆ ವರ್ಷದಿಂದ ಬೆಂಗಳೂರಿನ ಜಯನಗರ, ಬನಶಂಕರಿ, ತಿಲಕನಗರ, ಬೇಗೂರು, ಪೊಲೀಸ್ ಠಾಣಾ ಸರಹದ್ದಿನಲ್ಲಿ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪಿಗಳಾದ
1)ಜೀವನ್ @ ಕಡಲೆಪುರಿ ವೆಂಕಟೇಶ್, 21ವರ್ಷ
2)ಕಾತರ್ಿಕ್ @ ಬೊಕ್ಕಾ ಬಿನ್ ಸುಬ್ರಮಣಿ, 19 ವರ್ಷ,
ಎಂಬುವರುಗಳನ್ನು
ಬಂಧಿಸುವಲ್ಲಿ ಬೆಂಗಳೂರು ನಗರದ ಪಶ್ಚಿಮ ವಲಯದ ಅಪರ ಪೊಲೀಸ್ ಆಯುಕ್ತರಾದ ಶ್ರೀಮತಿ ಮಾಲಿನಿ ಕೃಷ್ಣಮೂತರ್ಿ ಮತ್ತು ದಕ್ಷಿಣ ವಿಭಾಗದ ಮಾನ್ಯ ಉಪ ಪೊಲೀಸ್ ಆಯುಕ್ತರಾದ ಡಾ||ಶರಣಪ್ಪ.ಎಸ್.ಡಿ ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ಹಾಗೂ ಜಯನಗರ ಉಪ-ವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ಶ್ರೀ ಜಿ.ಎಂ. ಕಾಂತರಾಜ್ರವರ ನೇತೃತ್ವದಲ್ಲಿ, ಜಯನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ.ರಾಜೇಶ್.ಕೆ, ಸಬ್ ಇನ್ಸ್ಪೆಕ್ಟರ್ಗಳಾದ ಶ್ರೀ.ಪಿ. ಶಿವಕುಮಾರ್,ಶ್ರೀ ಮಂಜುನಾಥ್.ಎನ್ ಹಾಗೂ ಸಿಬ್ಬಂದಿಗಳಾದ ಎ.ಎಸ್.ಐ ಸತ್ಯಮೂತರ್ಿ, ಹೆಚ್.ಸಿ 5773 ಶ್ರೀ ಶಿವರಾಜಯ.್ಯಹೆಚ್, ಹೆಚ್.ಸಿ 7560 ಶ್ರೀ.ಶಿವಕುಮಾರ್, ಹೆಚ್ ಸಿ 6588 ಶ್ರೀ.ಲೋಕೇಶ್, ಹೆಚ್.ಸಿ 6859 ಶ್ರೀ.ಸೈಯದ್ ಮುಸ್ತಾಫ ರವರು ಆರೋಪಿಗಳನ್ನು ಬಂಧಿಸಿ ಅವರು ನೀಡಿದ ಮಾಹಿತಿಯಂತೆ 4.00.000/- ರೂ ಬೆಲೆ ಬಾಳುವ 10 ದ್ವಿಚಕ್ರ ವಾಹನಗಳನ್ನು ವಶಪಡಿಸಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಪತ್ರಿಕಾ ಪ್ರಕಟಣೆ
ಉಪ ಪೊಲೀಸ್ ಆಯುಕ್ತರು, ದಕ್ಷಿಣ ವಿಭಾಗ
ದಿನಾಂಕ :10-05-2017
ಜೆಪಿ ನಗರ ಪೊಲೀಸರಿಂದ ಕನ್ನ ಕಳವು ಮಾಡುವ ಕುಖ್ಯಾತ ಆರೋಪಿಯ ಬಂಧನ, 8,97,000-00 ರೂ ಬೆಲೆ ಬಾಳುವ 273 ಗ್ರಾಂ ತೂಕದ ಚಿನ್ನದ ಆಭರಣಗಳು, 1 ನಿಕಾನ್ ಕ್ಯಾಮಾರ ಮತ್ತು 1 ದ್ವಿ ಚಕ್ರವಾಹನ ವಶ.
ಜೆ.ಪಿ.ನಗರ ಪೊಲೀಸ್ ಠಾಣೆಯ ಪೊಲೀಸರು
ವೀರಮಣಿ @ ಮಣಿ ಬಿನ್ ತಿರುಮಲೈ 19 ವರ್ಷ,
ಎಂಬುವನನ್ನು ದಸ್ತಗಿರಿ ಮಾಡಿ, ಆತನು ಕೊಟ್ಟ ವರ್ತಮಾನದ ಮೇರೆಗೆ ಜೆ.ಪಿ.ಗರ ಪೊಲೀಸ್ ಠಾಣೆ, ಜಾಲಹಳ್ಳಿ ಪೊಲೀಸ್ ಠಾಣೆ ಮತ್ತು ಬಾಗಲಗುಂಟೆ ಪೊಲೀಸ್ ಠಾಣೆಯ ಹಾಗೂ ಸಂಜಯನಗರ ಪೊಲೀಸ್ ಠಾಣೆಗಳಲ್ಲಿ ವರದಿಯಾಗಿದ್ದ ನಾಲ್ಕು ಕನ್ನ ಕಳವು ಪ್ರಕರಣಗಳಿಗೆ ಸಂಬಂಧಪಟ್ಟ ಒಟ್ಟು ಸುಮಾರು 8,97,000-00 ರೂ ಬೆಲೆ ಬಾಳುವ 273 ಗ್ರಾಂ ತೂಕದ ಚಿನ್ನದ ಒಡವೆಗಳು, ಒಂದು ನಿಕಾನ್ ಕ್ಯಾಮೆರಾ ಹಾಗೂ ಒಂದು ಯಮಹಾ ಆರ್.ಎಕ್ಸ್.ಜೆಡ್ ಮೋಟಾರ್ ಸೈಕಲ್ ಅನ್ನು ಅಮಾನತ್ತುಪಡಿಸಿಕೊಂಡು ದಿನಾಂಕ.22.04.2017 ರಂದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತದೆ.
ಈ ಕಾಯರ್ಾಚರಣೆಯನ್ನು ಬೆಂಗಳೂರು ನಗರ ಬೆಂಗಳೂರು ನಗರದ ಪಶ್ಚಿಮ ವಲಯದ ಅಪರ ಪೊಲೀಸ್ ಆಯುಕ್ತರಾದ ಶ್ರೀಮತಿ ಮಾಲಿನಿ ಕೃಷ್ಣಮೂತರ್ಿ ಮತ್ತು ದಕ್ಷಿಣ ವಿಭಾಗದ ಮಾನ್ಯ ಉಪ ಪೊಲೀಸ್ ಆಯುಕ್ತರಾದ ಡಾ||ಶರಣಪ್ಪ.ಎಸ್.ಡಿ ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ಹಾಗೂ ಜಯನಗರ ಉಪ-ವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ಶ್ರೀ ಜಿ.ಎಂ. ಕಾಂತರಾಜ್ರವರ ನೇತೃತ್ವದಲ್ಲಿ,ಜೆ.ಪಿ.ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ.ಎಸ್.ಜೆ.ಮಹಾಜನ್, ಮಹಿಳಾ ಪಿ.ಎಸ್.ಐ ಶ್ರೀಮತಿ.ಸರಸ್ವತಿ.ಟಿ, ಪ್ರೋ.ಪಿ.ಎಸ್.ಐ ಶ್ರೀ.ಶ್ರೀಕಾಂತ್ ತೇಲಿ ಹಾಗೂ ಸಿಬ್ಬಂದಿಯವರಾದ ಶ್ರೀ.ವೆಂಕಟಾಚಲಯ್ಯ ಎ.ಎಸ್.ಐ, ಶ್ರೀ.ಮುನಿರಾಜು ಎ.ಎಸ್.ಐ, ಶ್ರೀ.ಶಿವಕುಮಾರ್ ಹೆಚ್.ಸಿ.5372, ಶ್ರೀ.ನರಸಿಂಹಮೂತರ್ಿ ಹೆಚ್.ಸಿ.7176, ಶ್ರೀ.ನಾಗೇಶ್ ಬಿ.ಎಂ ಹೆಚ್.ಸಿ.7570, ಶ್ರೀ.ಅಂಬರೀಶ ಪಿ.ಸಿ.10593, ಶ್ರೀ.ಶ್ರೀಶೈಲ ಕಂಬಾರ ಪಿ.ಸಿ.13106, ಶ್ರೀ.ಆರ್.ಜಿ.ಚಂದ್ರಪ್ಪ ಪಿ.ಸಿ.11939 ಮತ್ತು ಶ್ರೀ.ಪ್ರವೀಣ್ ಪಿ.ಸಿ.13861 ರವರನ್ನು ಒಳಗೊಂಡ ತಂಡವು ಆರೋಪಿಯನ್ನು ದಸ್ತಗಿರಿ ಮಾಡಿ ಮಾಲುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಈ ಕಾರ್ಯವನ್ನು ಮೇಲಾಧಿಕಾರಿಗಳು ಪ್ರಶಂಶಿಸಿರುತ್ತಾರೆ.
ಪತ್ರಿಕಾ ಪ್ರಕಟಣೆ
ಉಪ ಪೊಲೀಸ್ ಆಯುಕ್ತರು, ದಕ್ಷಿಣ ವಿಭಾಗ
ದಿನಾಂಕ :10-05-2017
ಜಯನಗರ ಪೊಲೀಸರಿಂದ ಅಂತರ ಜಿಲ್ಲಾ ದರೋಡೆ ಹಾಗೂ ಸುಲಿಗೆ/ರಾಬರಿ ಆರೋಪಿಗಳ ಬಂಧನ - 15 ಪ್ರಕರಣಗಳ ಪತ್ತೆ
ದಿನಾಂಕ 01-04-2017 ರಂದು ಬೆಳಗಿನ ಜಾವ 05-30 ಘಂಟೆಯ ಸಮಯದಲ್ಲಿ ಬನಶಂಕರಿ ಬಸ್ ನಿಲ್ದಾಣದ ಬಳಿ ಸರ್ಕಾರಿ ಸಾರ್ವಜನಿಕ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ ನಿರ್ವಾಹಕನ ಕರ್ತವ್ಯಕ್ಕೆ ಅಡ್ಡಿಪಡಿಸಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ರಕ್ತಗಾಯಗೊಳಿಸಿ ಸಾರ್ವಜನಿಕರು ಬೆಚ್ಚಿ ಬೀಳುವಂತೆ ಮಾಡಿ ಇಟಿಯೋಸ್ ಕಾರಿನಲ್ಲಿ ಪರಾರಿಯಾಗಿ ತಲೆಮರೆಸಿಕೊಂಡಿದ್ದ ಸಂಬಂದ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದರಿ ಪ್ರಕರಣದಲ್ಲಿನ ಆರೋಪಿಗಳನ್ನು ಪತ್ತೆಮಾಡುವುದಕ್ಕಾಗಿ ಬೆಂಗಳೂರು ದಕ್ಷಿಣ ವಿಭಾಗದ ಉಪ ಪೊಲೀಸ್ ಕಮಿಷನರ್ ಡಾ|| ಎಸ್.ಡಿ ಶರಣಪ್ಪ ರವರು ಸಭೆ ನಡೆಸಿ 03 ತಂಡಗಳನ್ನು ರಚಿಸಿ ಆರೋಪಿಗಳನ್ನು ಪತ್ತೆ ಮಾಡುವಂತೆ ನಿರ್ದೇಶನ ನೀಡಿದ ಮೇರೆಗೆ ಜಯನಗರ ಉಪವಿಭಾಗದ ಸಹಾಯಕ ಪೊಲೀಸ್ ಕಮಿಷನರ್ ಶ್ರೀ. ಜಿ.ಆರ್ ಕಾಂತರಾಜು ರವರ ಮಾರ್ಗದರ್ಶನದಲ್ಲಿ, ಜಯನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ. ರಾಜೇಶ್.ಕೆ ರವರ ನೇತೃತ್ವದಲ್ಲಿ ಪೊಲೀಸ್ ಸಬ್‌ಇನ್ಸ್ಪೆಕ್ಟರ್ ಶ್ರೀಮತಿ.ಈಶ್ವರಿ.ಪಿ.ಎನ್ ಮತ್ತು ಸಿಬ್ಬಂದಿರವರುಗಳು ತಲೆಮರೆಸಿಕೊಂಡಿದ್ದ ಈ ಕೆಳಕಂಡ ಆರೋಪಿಗಳಾದ
1. ಮಾಯಕೃಷ್ಣ @ ಮಾಂಗ. ಎ, ಬಿನ್: ಲೇಟ್ ಅರ್ಜುನ, 25 ವರ್ಷ,
2. ಮಣಿಕಂಠ ಸಿ, ಬಿನ್: ಚಿನ್ನತಂಬಿ, 24 ವರ್ಷ,
3. ಮೂರ್ತಿ @ ಪಿಂಟು, ಬಿನ್: ದೇವಪ್ಪ, 30 ವರ್ಷ,
4. ಕುರಲ್ ಅರಸನ್ ಬಿನ್ ಲೇಟ್ ನಾಗರಾಜಪ್ಪ, 23 ವರ್ಷ,
5. ಶ್ರೀ. ನಂಜುಂಡ.ವಿ, ಬಿನ್: ಲೇಟ್ ವೆಂಕಟರಮಣಪ್ಪ, 27 ವರ್ಷ,
6.ಶ್ರೀ.ಸತ್ಯವೇಲು @ ಜೀವ, ಬಿನ್ ಲೇಟ್ ಮಾಣಿಕ್ಕಂ, 23 ವರ್ಷ,
ಎಂಬುವರುಗಳನ್ನು ಬಂದಿಸಿ ಕೂಲಂಕುಷವಾಗಿ ವಿಚಾರ ಮಾಡಿದಾಗ ತಿಳಿದುಬಂದಿದ್ದೇನೆಂದರೆ ಆರೋಪಿ ಮೂರ್ತಿ @ ಪಿಂಟು ಎಂಬುವನು ಕೊಲೆಯಾದ ರೌಡಿ ಆಸಾಮಿ ಸ್ಟ್ಯಾಂಡ್ ಕುಟ್ಟಿಯ ಬಲಗೈ ಬಂಟನಾಗಿದ್ದು, ಈತನ ವಿರುದ್ದ ಬನಶಂಕರಿ ಪೊಲೀಸ್ ಠಾಣೆಯಲ್ಲಿ ರೌಡಿ ಪಟ್ಟಿ ತೆರೆದಿರುತ್ತದೆ. ಸ್ಟ್ಯಾಂಡ್ ಕುಟ್ಟಿಯನ್ನು ಕೊಲೆ ಮಾಡಿದ್ದ ರಾಜ @ ಹಲ್ಲುಮುರ್ಖ ಎಂಬುವನು ಜೈಲಿನಿಂದ ಬಿಡುಗಡೆಯಾಗಿ ರೌಡಿ ಪಟ್ಟಿ ಆಸಾಮಿ ಮೂರ್ತಿ @ ಪಿಂಟು ಎಂಬುವನನ್ನು ಕೊಲೆ ಮಾಡಲು ಎರಡು ಬಾರಿ ಅಟ್ಯಾಕ್ ಮಾಡಿದ್ದು, ತಪ್ಪಿಸಿಕೊಂಡ ಮೂರ್ತಿ @ ಪಿಂಟು ರೌಡಿ ಆಸಾಮಿಯು ರಾಜ @ ಹಲ್ಲುಮುರ್ಖ ಎಂಬುವನನ್ನು ಕೊಲೆ ಮಾಡುವುದಕ್ಕಾಗಿ ಮೇಲ್ಕಂಡ ಆರೋಪಿಗಳ ಸಹಾಯ ಕೋರಿದ್ದು, ಮೂರ್ತಿ ಜೊತೆ ಸೇರಿ ಕೊಲೆ ಮಾಡುವುದಕ್ಕೆ ಒಪ್ಪಿಕೊಂಡ ಉಳಿದ ಆರೋಪಿಗಳು ಕೊಲೆ ಮಾಡಲು ಬೇಕಾದ ಕಾರುಗಳು ಮತ್ತು ಮಾರಕಾಸ್ತ್ರಗಳನ್ನು ಹಾಗೂ ಕೊಲೆ ಮಾಡಿದ ನಂತರ ತಪ್ಪಿಸಿಕೊಳ್ಳಲು ಖರ್ಚಿಗೆ ಹಣ ಸಂಪಾದಿಸುವುದಕ್ಕಾಗಿ ರಾಬರಿ & ದರೋಡೆ ಮಾಡಲು ತೀರ್ಮಾನಿಸಿ,
ಮಾಂಗ & ಮಣಿ ಎಂಬ ಆರೋಪಿಗಳ ಬಳಿ ಇದ್ದ ಬಾಡಿಗೆ ಆಟೋರಿಕ್ಷಾಗಳಲ್ಲಿ ಕೊಡಿಗೇಹಳ್ಳಿ ಮತ್ತು ಜಾಲಹಳ್ಳಿ ಪೊಲೀಸ್ ಠಾಣಾ ಸರಹದ್ದಿಗೆ ಹೋಗಿ ಒಂಟಿಯಾಗಿ ಕಾರು ನಿಲ್ಲಿಸಿಕೊಂಡು ನಿಂತಿದ್ದ ಇಬ್ಬರು ಕಾರು ಚಾಲಕರಿಗೆ ಚಾಕುಗಳಿಂದ ಚುಚ್ಚಿ ಕೊಲೆ ಮಾಡುವುದಾಗಿ ಹೆದುರಿಸಿ 02 ಇಟಿಯೋಸ್ ಕಾರುಗಳನ್ನು ರಾಬರಿ ಮಾಡಿಕೊಂಡು ಬಂದು, ನಂಬರ್ ಪ್ಲೇಟ್ಗಳನ್ನು ಬದಲಿಸಿ, ಸದರಿ ಕಾರುಗಳನ್ನು ಉಪಯೋಗಿಸಿಕೊಂಡು ಮಾಗಡಿ, ಹಾಸನ, ಮಂಗಳೂರು, ಧರ್ಮಸ್ಥಳ ಮುಂತಾದ ಕಡೆಗಳಲ್ಲಿ ರಾತ್ರಿ ಸಮಯದಲ್ಲಿ ಒಂಟಿಯಾಗಿ ಬಸ್ ಗಾಗಿ ಕಾಯುತ್ತಿರುವ ಅಮಾಯಕ ಸಾರ್ವಜನಿಕರಿಗೆ ಡ್ರಾಪ್ ಕೊಡುವುದಾಗಿ ನಂಬಿಸಿ ಕಾರಿಗೆ ಹತ್ತಿಸಿಕೊಂಡು ಸ್ವಲ್ಪ ದೂರ ಕರೆದುಕೊಂಡು ಹೋಗಿ ಆರೋಪಿಗಳ ಬಳಿ ಇದ್ದ ಮಾರಕಾಸ್ತ್ರಗಳಾದ ಚಾಕುಗಳನ್ನು ತೋರಿಸಿ ಚುಚ್ಚಿ, ಹೊಡೆದು ತೀವ್ರ ಸ್ವರೂಪದ ರಕ್ತಗಾಯಗೊಳಿಸಿ, ಕೊಲೆ ಮಾಡುವುದಾಗಿ ಹೆದರಿಸಿ ಬಲವಂತವಾಗಿ ಅಮಾಯಕ ಸಾರ್ವಜನಿಕರ ಬಳಿ ಇದ್ದ ಮೊಬೈಲ್ ಗಳನ್ನು ಮತ್ತು ಚಿನ್ನದ ವಡವೆಗಳನ್ನು ಹಾಗೂ ಹಣವನ್ನು ಕಿತ್ತುಕೊಂಡು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ವಾಹನದಿಂದ ಕೆಳಗೆ ದಬ್ಬಿ ಪರಾರಿಯಾಗುತ್ತಿದ್ದ ಮತ್ತು ಹೈವೆ ರಸ್ತೆಗಳಲ್ಲಿ ಲಾರಿಗಳನ್ನು ನಿಲ್ಲಿಸಿಕೊಂಡು ವಿಶ್ರಾಂತಿ ಪಡೆಯುತ್ತಿರುವ ಚಾಲಕರಿಗೆ ವಿಳಾಸ ಕೇಳುವ ನೆಪವೊಡ್ಡಿ ಬಾಗಿಲನ್ನು ತೆಗೆಸಿ ಆರೋಪಿಗಳ ಬಳಿ ಇದ್ದ ಮಾರಕಾಸ್ತ್ರಗಳಾದ ಚಾಕುಗಳನ್ನು ತೋರಿಸಿ ಚುಚ್ಚಿ, ಹೊಡೆದು ತೀವ್ರ ಸ್ವರೂಪದ ರಕ್ತಗಾಯಗೊಳಿಸಿ ಕೊಲೆ ಮಾಡುವುದಾಗಿ ಹೆದರಿಸಿ ಬಲವಂತವಾಗಿ ಚಾಲಕರ ಬಳಿ ಇದ್ದ ಹಣ ಮತ್ತು ಚಿನ್ನದ ಒಡವೆಗಳು ಹಾಗೂ ಮೊಬೈಲ್ ಗಳನ್ನು ಕಿತ್ತುಕೊಳ್ಳುತ್ತಿದ್ದ ಮೇಲ್ಕಂಡ ಆರೋಪಿಗಳನ್ನು ಬಂದಿಸಿ ಆರೋಪಿಗಳಿಂದ ಎರಡು ಕಾರು ಮತ್ತು ಮೂರು ಉಂಗುರ, 1 ಆಟೋ, 1 ದ್ವಿಚಕ್ರ ವಾಹನ1 ಚಿನ್ನದ ಚೈನು, ಹಾಗೂ 20 ಮೊಬೈಲ್ ಪೋನುಗಳನ್ನು ಅಮಾನತ್ತುಪಡಿಸುವ ಮೂಲಕ ಕರ್ನಾಟಕದಾದ್ಯಂತ ದಾಖಲಾಗಿದ್ದ ರಾಬರಿ ಮತ್ತು ದರೋಡೆ ಪ್ರಕರಣಗಳನ್ನು ಬೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ಈ ಉತ್ತಮ ಕಾರ್ಯದ ಬಗ್ಗೆ ಮಾನ್ಯ ಪೊಲೀಸ್ ಕಮೀಷನರ್ರವರು ಪ್ರಶಂಸಿರುತ್ತಾರೆ ಕಾರ್ಯವೈಖರಿಯನ್ನು ಶ್ಲಾಘಿಸಿರುತ್ತದೆ.
ಪತ್ರಿಕಾ ಪ್ರಕಟಣೆ
ಉಪ ಪೊಲೀಸ್ ಆಯುಕ್ತರು, ದಕ್ಷಿಣ ವಿಭಾಗ
ದಿನಾಂಕ :10-05-2017
ಬನಶಂಕರಿ ಪೊಲೀಸರಿಂದ ಕುಖ್ಯಾತ ಕನ್ನ ಕಳವು ಆರೋಪಿಗಳ ಬಂಧನ ಸುಮಾರು 18.5 ಲಕ್ಷ ಬೆಲೆ ಬಾಳುವ 602 ಗ್ರಾಂ ತೂಕದ ಚಿನ್ನದ ಆಭರಣಗಳು ಹಾಗೂ 1 ಕೆಜಿ ಬೆಳ್ಳಿ ವಶ.
ದಿನಾಂಕ:07-11-2016 ರಂದು ರಾತ್ರಿ 21-15 ಗಂಟೆಯಲ್ಲಿ ಫಿಯರ್ಾದುದಾರರಾದ ಶ್ರೀ.ರಾಮಲಿಂಗಂ ನಂ-70, 2ನೇ ಮಹಡಿ, 2ನೇ ಮೈನ್, ಕದಿರೇನಹಳ್ಳಿ, ಬನಶಂಕರಿ 2ನೇ ಹಂತ, ಬೆಂಗಳೂರು-70 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:07-11-2016 ರಂದು ಸಂಜೆ ಸುಮಾರು 06-45 ಗಂಟೆಯಲ್ಲಿ ಫಿಯರ್ಾದುದಾರರ ಹೆಂಡತಿರವರು ವಾಕಿಂಗ್ಗೆ ಹೋಗಿದ್ದಾಗ ಯಾರೋ ಕಳ್ಳರು ಮನೆಯ ಕಿಟಕಿಯಲ್ಲಿಟ್ಟಿದ್ದ ಕೀ ತೆಗೆದುಕೊಂಡು ಮನೆಯ ಬಾಗಿಲನ್ನು ತೆಗೆದು ಒಳಗೆ ಪ್ರವೇಶ ಮಾಡಿ ಮನೆಯ ಅಲ್ಮೇರಾದಲ್ಲಿದ್ದ ಚೀಟಿ ಹಣ, ಒಂದು ಲಾಂಗ್ ಗುಂಡು ಮಾದರಿಯ ಚೈನ್ 30ಗ್ರಾಂ, 3 ಚಿನ್ನದ ಉಂಗುರಗಳು 15ಗ್ರಾಂ, ಕಳವಾಗಿರುತ್ತೆ. ಈ ಬಗ್ಗೆ ಕ್ರಮ ಜರುಗಿಸಿ ಪತ್ತೆ ಮಾಡಿಕೊಡಿ ಎಂದು ಕೊಟ್ಟ ದೂರಿನ ಮೇರೆಗೆ ಠಾಣಾ ಮೊ.ಸಂ.326/2016 ಕಲಂ 380 ಐಪಿಸಿ ರಿತ್ಯ ಕೇಸು ದಾಖಲು ಮಾಡಿ ತನಿಖೆ ಕೈಗೊಂಡಿರುತ್ತೆ.
ಈ ಕೇಸಿನಲ್ಲಿ ಆರೋಪಿತರಾದ,
ಎ1-ಲಕ್ಷ್ಮಣ್ @ ಸೋನಿ ಬಿನ್ ತಿಪ್ಪಣ್ಣ, 48ವರ್ಷ,
ಎ2-ಉದಯ್ @ ನೀರ್ ಮಜ್ಜಿಗೆ ಬಿನ್ ಲೇಟ್ ಗೋವಿಂದಪ್ಪ, 30ವರ್ಷ,
ಎ3-ಚಂದ್ರ.ಎಸ್ @ ಡೋಂಗಿ ಬಿನ್ ಲೇಟ್ ಶಿವಣ್ಣ, 28ವರ್ಷ,
ರವರುಗಳನ್ನು ದಸ್ತಗಿರಿ ಮಾಡಿ ಆರೋಪಿಗಳ ವರ್ತಮಾನದ ಮೇರೆಗೆ, ಈ ಕೇಸಿಗೆ ಸಂಬಂಧಪಟ್ಟ ಚಿನ್ನದ ಆಭರಣಗಳನ್ನು ಸ್ವಾಧೀನಪಡಿಸಿರುತ್ತೆ ಹಾಗೂ ಆರೋಪಿಗಳ ವರ್ತಮಾನದ ಮೇರೆಗೆ
1)ಬನಶಂಕರಿ ಪೊಲೀಸ್ ಠಾಣೆಯ ಇತರೆ 3 ಪ್ರಕರಣಗಳು,
2)ಜಯನಗರ ಪೊಲೀಸ್ ಠಾಣೆಯ 3 ಪ್ರಕರಣಗಳು,
3)ಸುಬ್ರಮಣ್ಯಪುರ ಪೊಲೀಸ್ ಠಾಣೆಯ 2 ಪ್ರಕರಣಗಳು,
4)ಜೆಪಿ ನಗರ ಪೊಲೀಸ್ ಠಾಣೆಯ 1 ಪ್ರಕರಣ
5) ಬೆಂಗಳೂರು ರೈಲ್ವೇ ಪೊಲೀಸ್ ಠಾಣೆಯ 1 ಪ್ರಕರಣಸ ಒಟ್ಟು 10 ಪ್ರಕರಣಗಳನ್ನು ಪತ್ತೆ ಮಾಡಿದ್ದು ಸದರಿ ಪ್ರಕರಣಗಳಿಗೆ ಸಂಬಂಧಿಸಿದಂತೆ 18.5 ಲಕ್ಷ ರೂ ಬೆಲೆ ಬಾಳುವ ಸುಮಾರು 602 ಗ್ರಾಂ ತೂಕದ ಚಿನ್ನದ ಆಭರಣಗಳು ಮತ್ತು 1 ಕೆಜಿ ಬೆಳ್ಳಿಯ ವಸ್ತುಗಳನ್ನು ಸ್ವಾಧೀನಪಡಿಸಿರುತ್ತೆ.
ಆರೋಪಿಗಳನ್ನು ಬಂಧಿಸುವಲ್ಲಿ ಬೆಂಗಳೂರು ನಗರದ ಪಶ್ಚಿಮ ವಲಯದ ಅಪರ ಪೊಲೀಸ್ ಆಯುಕ್ತರಾದ ಶ್ರೀಮತಿ ಮಾಲಿನಿ ಕೃಷ್ಣಮೂತರ್ಿ ಮತ್ತು ದಕ್ಷಿಣ ವಿಭಾಗದ ಮಾನ್ಯ ಉಪ ಪೊಲೀಸ್ ಆಯುಕ್ತರಾದ ಡಾ||ಶರಣಪ್ಪ.ಎಸ್.ಡಿ ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ, ಜಯನಗರ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತರು ಶ್ರೀ.ಜೆ.ಎಂ.ಕಾಂತರಾಜ್ ಬನಶಂಕರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ.ಕೃಷ್ಣ ಟಿ.ಟಿ, ಪಿಎಸ್ಐಗಳಾದ ಶ್ರೀ.ಅಜರ್ುನ್ ಸಿ.ಆರ್, ಪಿಎಸ್ಐ, ಶ್ರೀ.ಗಿರಿಮಲ್ಲಪ್ಪ ಉಪ್ಪಾರ್ ಪ್ರೋ.ಪಿಎಸ್ಐ, ಕು||ಪುಷ್ಪಲತಾ ಪ್ರೋ.ಮಪಿಎಸ್ಐ, ಕು||ವಿದ್ಯಶ್ರೀ ಪ್ರೋ.ಮಪಿಎಸ್ಐ, ಶ್ರೀಮತಿ ರೇಷ್ಮಾ ಪ್ರೋ.ಮಪಿಎಸ್ಐ, ಬನಶಂಕರಿ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಎಎಸ್ಐ ಶ್ರೀ.ಪಿ.ಚಿಕ್ಕಣ್ಣ, ಹೆಚ್ಸಿಗಳಾದ ಶ್ರೀ.ಮುತ್ತಾ ನಾಯ್ಕ್, ಶ್ರೀ.ಮಂಜುನಾಥ್, ಶ್ರೀ.ವೆಂಕಟೇಶ್, ಶ್ರೀ.ಹರೀಶ್, ಪಿಸಿಗಳಾದ ಶ್ರೀ.ಎಸ್.ಖೇ.ರಾಠೋಡ, ಶ್ರೀ.ಶರತ್ ಕುಮಾರ್, ಶ್ರೀ.ಶಿವರಾಜು, ಜಯನಗರ ಪೊಲೀಸ್ ಠಾಣೆಯ ಪಿಸಿಗಳಾದ ಶ್ರೀ.ಶೇಷಗಿರಿ ನಾಯ್ಕ್ ಎಂ.ಆರ್, ಶ್ರೀ.ನಿಂಗಪ್ಪ ಆರಿ ರವರುಗಳು ಆರೋಪಿಯನ್ನು ಹಿಡಿದು ತನಿಖೆ ಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ಆರೋಪಿಗಳನ್ನು ಪೊಲೀಸ್ ಅಭೀರಕ್ಷೆಗೆ ಪಡೆದು ಹೆಚ್ಚಿನ ವಿಚಾರಣೆಗೆ ಗುರಿಪಡಿಸಿರುತ್ತೆ.
08/03/2017
Wish u the Happy Women's day
ಪತ್ರಿಕಾ ಪ್ರಕಟಣೆ.
ಬೆಂಗಳೂರು ನಗರ
ದಕ್ಷಿಣ ವಿಭಾಗ
ದಿನಾಂಕ:22-02-2017
ವಿ.ವಿ.ಪುರಂ ಪೊಲೀಸ್ ಠಾಣೆಯ ಪೊಲೀಸರಿಂದ ಸರಗಳ್ಳತನ
ಮಾಡುತ್ತಿದ್ದ ಆರೋಪಿಯ ಬಂಧನ 50,000/- ರೂ ಬೆಲೆ ಬಾಳುವ 20 ಗ್ರಾಂ ತೂಕ ಒಂದು ಚಿನ್ನದ ಮಾಂಗಲ್ಯ ಚೈನು ವಶ.
ದಿನಾಂಕ 8-7-2016 ರಂದು ಫಿರ್ಯಾದುದಾರರಾದ ಡಾ. ಇರ್ಲಿನ್ಮೆರ್ಲಿ ಜೇಮ್ಸ್ ರವರು ಬೆೆಳಗಿನ ಜಾವ ಸುಮಾರು 3-15 ಗಂಟೆಯ ಸಮಯದಲ್ಲಿ ವಿ.ವಿ.ಪುರಂ ಪೊಲೀಸ್ ಠಾಣಾ ಸರಹದ್ದಿನ ಟಿಪ್ಪು ಸುಲ್ತಾನ್ ಪ್ಯಾಲೇಸ್ ಎದರು ಇರುವ ಬಿ.ಎಂ.ಸಿ ಲೇಡೀಸ್ ಹಾಸ್ಟಲ್ ಮುಂಭಾಗ ಆಟೋಗಾಗಿ ಕಾಯುತ್ತಿರುವಾಗ್ಗೆ ಆರೋಪಿಗಳಾದ
1. ಸಂತೋಷ್ ಬಿನ್ ಶಂಕರ್ ವಯಸ್ಸು 24 ವರ್ಷ
2. ಅನಿಲ್ ಬಿನ್ ಲೇಟ್. ಹನುಮಂತ ವಯಸ್ಸು 27 ವರ್ಷ
3. ಕಿರಣ್ಕುಮಾರ್ @ ಗೋಡ ಬಿನ್ ಲೇಟ್. ಪ್ಯಾಟ್ರಿಕ್, ವಯಸ್ಸು 21 ವರ್ಷ
ಇವರುಗಳು ಕಪ್ಪು ಬಣ್ಣದ ಪಲ್ಸರ್ ಬೈಕ್ನಲ್ಲಿ ಬಂದು, ಫಿರ್ಯಾದುದಾರರ ಕತ್ತಿನಲ್ಲಿದ್ದ ಸುಮಾರು 50,000/- ರೂ ಬೆಲೆ ಬಾಳುವ 20 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿದ್ದು, ಈ ಆರೋಪಿಗಳ ಪೈಕಿ ತಲೆಮರೆಸಿಕೊಂಡಿದ್ದ ಆರೋಪಿ ಎ3- ಕಿರಣ್ಕುಮಾರ್ @ ಗೋಡ ಈತನನ್ನು ದಿನಾಂಕ 21-2-2017 ರಂದು ಬಂಧಿಸಿ, ಮಹಿಳೆಯಿಂದ ಕಿತ್ತುಕೊಂಡು ಹೋಗಿದ್ದ ಮಾಂಗಲ್ಯ ಸರವನ್ನು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಪಲ್ಸರ್ ಬೈಕ್ನ್ನು ವಶಪಡಿಸಿಕೊಂಡಿರುತ್ತಾರೆ. ಈ ಆರೋಪಿಗಳು ಈ ಹಿಂದೆ ಸರಕಳ್ಳತನ ಮಾಡುತ್ತಿದ್ದ ಬಗ್ಗೆ ಇವರ ವಿರುದ್ದ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎ3- ಕಿರಣ್ಕುಮಾರ್ @ ಗೋಡ ಈತನು ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದನು.
ಬೆಂಗಳೂರು ನಗರ ದಕ್ಷಿಣ ವಿಭಾಗದ ಮಾನ್ಯ ಉಪ ಪೊಲೀಸ್ ಕಮೀಷನರ್, ಡಾ|| ಎಸ್.ಡಿ. ಶರಣಪ್ಪ,. ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ, ವಿ.ವಿ.ಪುರಂ ಉಪ ವಿಭಾಗದ ಸಹಾಯಕ ಪೊಲೀಸ್ ಕಮೀಷನರ್ರವರಾದ ಶ್ರೀ.ಮಹಾಂತರೆಡ್ಡಿರವರ ನೇತೃತ್ವದಲ್ಲಿ ವಿ.ವಿ.ಪುರಂ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ.ಟಿ.ಡಿ.ರಾಜು ಹಾಗೂ ಎ.ಎಸ್.ಐ. ಶ್ರೀ.ರಾಮಕೃಷ್ಣಯ್ಯ, ಸಿಬ್ಬಂದಿಯವರಾದ ಶ್ರೀ.ರಘುನಾಥ್, ಶ್ರೀ.ಡಿ.ಸುರೇಶ್, ಶ್ರೀ.ಕಳಸಯ್ಯ, ಶ್ರೀ.ಯಶವಂತ್ದೀಪ, ಶ್ರೀ.ರವಿ, ಶ್ರೀ.ಬಸವರಾಜಸವದತ್ತಿ ಹಾಗೂ ಶ್ರೀ.ಬಸವರಾಜ ರವರು ಆರೋಪಿಗಳನ್ನು ಬಂಧಿಸಿ, ಚಿನ್ನದ ಮಾಂಗಲ್ಯ ಸರವರನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
Click here to claim your Sponsored Listing.
Location
Category
Contact the business
Website
Address
Bangalore
560004
