Holaya Brigade - ಹೊಲಯ ಬ್ರಿಗೇಡ್

Holaya Brigade - ಹೊಲಯ ಬ್ರಿಗೇಡ್

Share

Contact information, map and directions, contact form, opening hours, services, ratings, photos, videos and announcements from Holaya Brigade - ಹೊಲಯ ಬ್ರಿಗೇಡ್, Social service, Bangalore.

ಹೊಲಯ, ಪರಯ, ಪುಲಯ, ಮಹರ್, ಮಾಲಾ,ಮೇರ, ಮನ್ಸ, ಪರವ, ಪಂಬದ, ನಲಿಕೆ, ಕೆಂಬಟ್ಟಿ, ಹಗ್ಗ , ಮಗ್ಗ , ಮೊಗೇರ, ಹಸಲ ಹಾಗೂ ಇತರೆ ಕೃಷಿ ಪ್ರಧಾನ ಪರಿಶಿಷ್ಟರ ಸಮಗ್ರ ಮಾಹಿತಿಯನ್ನು ತೆರೆದಿಡುವ ಪುಟ.

- ಹೊಲಯ ಬ್ರಿಗೇಡ್, ಕರ್ನಾಟಕ

25/04/2026

ಭಾರತದಾದ್ಯಂತ ಒಂದು ಸಮುದಾಯವನ್ನೇ ಊರಿಂದ
ಹೊರಗಿಟ್ಟ ಬ್ರಾಹ್ಮಣ ಮಹಾಸಭಾದವರಿಗೆ...
ಯಾವ ರೀತಿಯ ದಂಡ ವಿಧಿಸಬೇಕು
ಇಡೀ ಅಗ್ರಹಾರದ ಮಂದಿಯನ್ನು ದೇಶ ಬಿಟ್ಟು ಓಡಿಸುವಂತೆ
ಯಾರಿಗೆ ಪತ್ರ ಬರೆಯಬೇಕು... ಎಷ್ಟು ದಂಡ ಹಾಕಬೇಕು.
(ಸರಿಯಾಗಿ ನ್ಯಾಯ ಮಾತಾಡ್ರಪ್ಪ...)
#ದಸಂಸ #ಅಂಬೇಡ್ಕರ್

21/04/2026

ಈ ನಾಡು ಕಂಡ ಧೀಮಂತ ನಾಯಕ
ಶ್ರೀ ಬಿ. ಬಸವಲಿಂಗಪ್ಪ
ಶ್ರೀ ಬಿ. ಬಸವಲಿಂಗಪ್ಪ ಅವರಂತಹ ನಾಯಕರು ರಾಜಕೀಯ ಕ್ಷೇತ್ರದಲ್ಲಿ ತುಂಬಾ ಅಪರೂಪಕ್ಕೆ ಮಾತ್ರ ಸಿಗುತ್ತಾರೆ. ಅವರು ಬುದ್ಧ, ಬಸವ, ಅಂಬೇಡ್ಕರ್, ಲೋಹಿಯಾ ಮತ್ತು ಕುವೆಂಪು ಅವರ ಕೃತಿಗಳನ್ನು ಆಳವಾಗಿ ಓದಿಕೊಂಡಿದ್ದರು. ಸಾಮಾಜಿಕ ನ್ಯಾಯಕ್ಕಾಗಿ ಹಗಲಿರುಳೆನ್ನದೆ ದುಡಿಯುವ ಅಪಾರವಾದ ಕಳಕಳಿ ಅವರಲ್ಲಿ ಇತ್ತು. ಸಮಾಜದ ಏಳಿಗೆಗೆ ಮಾರಕವಾಗಿರುವ ಮೂಢನಂಬಿಕೆಗಳು ಮತ್ತು ಕಂದಾಚಾರಗಳನ್ನು ಅವರು ತೀವ್ರವಾಗಿ ವಿರೋಧಿಸುತ್ತಿದ್ದರು. ಜಾತಿಪದ್ಧತಿ, ಅಸ್ಪೃಶ್ಯತೆ ಹಾಗೂ ಲಿಂಗಭೇದನೀತಿಯ ಅನಾಹುತಗಳು ಕೊನೆಗೊಂಡು ಯಾವುದೇ ವೈಕ್ತಿಯ ಸ್ವಾತಂತ್ರ್ಯ ಮತ್ತು ಸಮಾನತೆಯ ಹಕ್ಕುಗಳಿಗೆ ಕಿಂಚಿತ್ತೂ ಧಕ್ಕೆಯಾಗದಂತಹ ವಾತಾವರಣವು ನಮ್ಮ ರಾಷ್ಟ್ರದಲ್ಲಿ ನಿರ್ಮಾಣವಾಗಬೇಕೆನ್ನುವ ದೊಡ್ಡ ಕನಸನ್ನು ಅವರು ಕಾಣುತ್ತಿದ್ದರು.
ಮಲ ಹೊರುವ ಪದ್ಧತಿಯ ನಿಷೇಧ, ಉಳುವವನೇ ಭೂಮಿಯ ಒಡೆಯ, ಜಮೀನ್ದಾರಿ ಪದ್ಧತಿಯ ರದ್ದತಿ ನಿಯಮ ರೂಪಿಸುವಲ್ಲಿ ಶ್ರಮಿಸಿದವರಾಗಿದ್ದಾರೆ. ಬಸವಲಿಂಗಪ್ಪ ಅವರು ಅಂಬೇಡ್ಕರ್ ಮುಖಾಂತರ ಬೌದ್ಧ ಧರ್ಮವನ್ನು ಅರಿತು ಕೊಂಡಿದ್ದರು. ಅಂಬೇಡ್ಕರ್ ಅವರು ನಾಗಪುರದಲ್ಲಿ 1956 ರಲ್ಲಿ ಬೌದ್ಧ ಧರ್ಮಕ್ಕೆ ಸೇರಿದ್ದನ್ನು ಬಹಳ ಅಭಿಮಾನ ಪಟ್ಟುಕೊಂಡು ಪ್ರಭಾವಿತರಾಗಿದ್ದರು. ಅವರು ಬದುಕಿದ್ದ ಕಾಲದಲ್ಲಿ ಯಾವ ಮಠ ಮಾನ್ಯಗಳಿಗೂ ಭೇಟಿಕೊಡದೆ, ಪುರಸ್ಕರಿಸದೆ ದೂರ ಉಳಿದಿದ್ದರು.

ಶ್ರೀ ವಿ. ಶ್ರೀನಿವಾಸ್ ಪ್ರಸಾದ್
ಮಾಜಿ ಕೇಂದ್ರ ಸಚಿವರು
ಮತ್ತು ಶಾಸಕರು, ಮೈಸೂರು.

'ಏನ್ ಕನ್ನಡ ಕನ್ನಾಡಂತ ಬಡ್ಕೊತೀರಿ', ಕನ್ನಡ ಸಾಹಿತ್ಯದಲ್ಲಿ ಅವರ (ಬ್ರಾಹ್ಮಣರ) ಬರಹಗಳೇನಿದ್ದರೂ ಬೂಸಾ ಇದ್ದಂಗೆ, ಇಂಗ್ಲೀಷ್ ಬರಹಗಳಲ್ಲಿರುವ ಪ್ರೌಢಿಮೆ ಇಲ್ಲದ ಇವರ ಬರಹಗಳೆನಿದ್ದರೂ ದನ ತಿನ್ನೋಕೆ ಲಾಯಕ್ಕು ಎಂಬ ಮಾತುಗಳು 70ರ ದಶಕದಲ್ಲಿ ಬಸವಲಿಂಗಪ್ಪ ಅವರ ಅಸಹನೆಯಿಂದ ಹೊರಟ ಮಾತುಗಳೆಂಬುದನ್ನು ನೆನೆದರೇ ತಲ್ಲಣ ತರಂಗಗಳೇರ್ಪಡುತ್ತವೆ. ಕನ್ನಡ ಸಾಹಿತ್ಯ ಸೇವೆ ಎಂಬುದರ ಅಡಿ ಸೈ ಅನ್ನಿಸಿಕೊಂಡಿದ್ದವರೆಲ್ಲಗೂ ಆಗಿರಬಹುದಾದ ಆಘಾತವನ್ನು ಕಲ್ಲಿಸಿಕೊಳ್ಳುವುದೇ ಕಷ್ಟ. ಇಡೀ ಕನ್ನಡ ಸಾಹಿತ್ಯದಲ್ಲಿನ ಅವರ (ಬ್ರಾಹ್ಮಣರ) ಬರಹಗಳು ಬಹಿರಂಗವಾಗಿಯೇ ಕಟುಟೀಕೆಗೆ ಗುರಿಯಾದದ್ದು. ಆಮೇಲೆ? ರಾಜ್ಯದಾದ್ಯಂತ ಪ್ರಕ್ಷುಬ್ಧ ಪರಿಸ್ಥಿತಿ ಏರ್ಪಟ್ಟಿತಲ್ಲದೆ, ಸಂಪ್ರದಾಯ ಸಾಹಿತ್ಯ ಶರಣರು ಹೌಹಾರಿದರು. ಮರುದಿನದ ಪತ್ರಿಕೆಗಳಲ್ಲಿ ರಾರಾಜಿಸಿದ ಶೀರ್ಷಿಕೆ, ವಿವರಗಳಲ್ಲಿ ಅವರ (ಬ್ರಾಹ್ಮಣರ) ಬರಹಗಳು ಎಂಬ ಸೊಲ್ಲೇ ಮಂಗಮಾಯವಾಗಿ ಕನ್ನಡ ಸಾಹಿತ್ಯ ಬೂಸಾ ಎಂಬ ಶೀರ್ಷಿಕೆಯುಳ್ಳ ಬಸವಲಿಂಗಪ್ಪನವರ ಪದಗಳೇ ಕರ್ಣಕಠೋರವಾಗಿ ಮಾರ್ದನಿಸಿ ರಾಜ್ಯಾದ್ಯಂತ ಪ್ರತಿಭಟನೆ ವ್ಯಕ್ತವಾಗಲು ನಿಮಿತ್ತ ಮಾತ್ರವಾಯಿತು. ತಕ್ಷಣವೇ ದಲಿತ, ದಲಿತೇತರರ ನಡುವಿನ ಘರ್ಷಣೆಯಾಗಿ ಪ್ರತಿಫಲಿಸಿತು. ಮೈಸೂರಿನ ದಲಿತಬಾಂಧವರು ಮಾಡು ಇಲ್ಲವೆ ಮಡಿ ಎಂಬ ದೃಢ ನಿರ್ಧಾರ ಕೈಗೊಂಡೇ ಪ್ರತಿರೋಧ ಒಡ್ಡಲು ಪ್ರಾರಂಭಿಸಿದರು.ಈ ವಿಷಯ ವಿಧಾನಮಂಡಲದಲ್ಲೂ ಪ್ರತಿಧ್ವನಿಸಿತು. ಒಳ ಹೊರಗಿನ ಒತ್ತಡಕ್ಕೆ ಮಣಿದ ದೇವರಾಜ ಅರಸರು ಬಸವಲಿಂಗಪ್ಪನವರನ್ನು ಸಚಿವ ಸಂಪುಟದಿಂಡಲೇ ಕೈ ಬಿಡುವ ನಿರ್ಧಾರ ತೆಗೆದುಕೊಂಡರು.

ಜಾತಿಯ ವಾಂಛಲ್ಯದಿಂದಲೇ ಮರು ಹುಟ್ಟು ಪಡೆಯುವ ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಸಹಜವಾಗಿಯೇ ದಲಿತರು ದಲಿತೇತರರ ಕೆಂಗಣ್ಣಿಗೆ ಗುರಿಯಾಗಬೇಕಾಯಿತು. ಇದೊಂದು ಕಾರಣದಿಂದಾಗಿಯೇ ಚುನಾಯಿತ ದಕ್ಷ ದಲಿತ ಪ್ರತಿನಿಧಿಯೊಬ್ಬರು ಅಧಿಕಾರದಿಂದ ಕೆಳಗಿಳಿಯಬೇಕಾಯಿತು. ಬಸವಲಿಂಗಪ್ಪನವರನ್ನು ಸಂಪುಟದಿಂದ ಕೈ ಬಿಟ್ಟ ಸುದ್ದಿ ಕಾಳಿಚ್ಚಿನಂತೆ ಹರಡುತ್ತಿದ್ದಂತೆಯೇ ಜಾಗೃತಗೊಂಡ ದಲಿತ ಜನತೆ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ತೋರತೋಡಗಿತು. ಕೇವಲ ಹೊಂದಾಣಿಕೆ ಸ್ವರೂಪದ ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ತನ್ನ ಕುರ್ಚಿಗೆ ಭದ್ರವಾಗಿ ಅಂಟಿಕೊಂಡು, ತನ್ನ ಪ್ರಗತಿಯ ಕಡೆಗಷ್ಟೇ ಮುಖ ಮಾಡುವ ರಾಜಕಾರಣದ ಸಹಜ ಸ್ವಭಾವಕ್ಕೆ ತದ್ವಿರುದ್ದವಾಗಿ ಕಟ್ಟಾ ಅಂಬೇಡ್ಕರ್‌ವಾದಿ, ಸಚಿವ, ದಲಿತ ಜನಪ್ರತಿನಿಧಿಯೊಬ್ಬ ಅಧಿಕಾರಕ್ಕಾಗಿ ರಾಜಿಮಾಡಿಕೊಳ್ಳದೇ ತಮ್ಮ ನಿಲುವಿಗೆ ಬದ್ದರಾಗಿದ್ದುದು ಅಚ್ಚರಿ ಹುಟ್ಟಿಸುತ್ತದೆ.
ಯಾರ ಮರ್ಜಿಗೂ ಕಾಯದೆ ಎಲ್ಲಾ ಸಂದರ್ಭಗಳಲ್ಲು ದಲಿತ ಪರ ಕಾಳಜಿ ಹೊಂದಿ, ಚಿಂತನೆಗಳನ್ನು ನಿರ್ಭಿಡೆಯಿಂದ ತರ್ಕಬದ್ದವಾಗಿಯೇ ಮುಂದಿಡುತ್ತಿದ್ದ ಅವರ ರೀತಿಯೇ ಎದುರಾಳಿಗಳು ಉಸಿರೆತ್ತದಂತೆ ಮಾಡುತ್ತಿತ್ತು. ಕಾಂಗ್ರೆಸ್ ಪಕ್ಷದಲ್ಲಿದ್ದೂ ಪಕ್ಷದ ದಲಿತ ವಿರೋಧಿ ನೀತಿಗೆ ರಾಜಿ ಮಾಡಿಕೊಳ್ಳದ ವಿಶಿಷ್ಟ ರಾಜಕಾರಣಿಯೆಂದರೆ ಬಸವಲಿಂಗಪ್ಪನವರು ಮಾತ್ರ.

ಬಸವಲಿಂಗಪ್ಪ ಅವರು ದಲಿತರ ಆತ್ಮಾಭಿಮಾನವನ್ನು ಎತ್ತಿ ಹಿಡಿಯುವಲ್ಲಿ ತೋರಿದ ಪ್ರಬುದ್ಧತೆ ಮತ್ತು ಅವರ ಸುಧಾರಣೆಗಾಗಿ ಕೈಗೊಂಡ ಹಲವಾರು ಕ್ರಮಗಳು ಐತಿಹಾಸಿಕವಾಗಿಯೂ ಮಹತ್ವದ್ದಾಗಿವೆ. ಮಲ ಹೊರುವ ಅಮಾನುಷ ಪದ್ಧತಿಯ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ ಕೀರ್ತಿ ಬಸವಲಿಂಗಪ್ಪ ಅವರಿಗೇ ಸಲ್ಲಬೇಕು. ದೇವದಾಸಿ ಪದ್ಧತಿ ಕುರಿತಂತೆ ಸದನದಲ್ಲಿ ಮಾಡಿದ ಭಾಷಣವು ದೇವದಾಸಿ ಪದ್ಧತಿಯ ಕುತಂತ್ರವನ್ನು ಅಲ್ಲಗಳೆದು ಅದಕ್ಕೆ ಸಂಬಂಧಿಸಿದಂತೆ ಸೂಕ್ತ ಬದಲಾವಣೆಗಳನ್ನು ತರುವಲ್ಲಿ ಯಶಸ್ವಿಯಾದರು. ಬಸವಲಿಂಗಪ್ಪನವರ ಕಾರ್ಯವೈಖರಿ, ತನ್ನ ಜನತೆಯ ಹಿತದೃಷ್ಟಿ ತನ್ಮೂಲಕ ಸಮಾಜದ ಒಳಿತಿಗಾಗಿ ಕೈಕೊಂಡ ಸುಧಾರಣ ಕ್ರಮಗಳು ಇಂದಿಗೂ ಚಿರಸ್ಮರಣೀಯವಾಗಿವೆ. ಅವರ ನಂತರ ಅವರು ಬಿಟ್ಟುಹೋದ ಸ್ಥಳವನ್ನು ಯಾವೊಬ್ಬ ದಲಿತ ನಾಯಕರೂ ಸಮರ್ಥವಾಗಿ ತುಂಬಲಿಲ್ಲವೆಂಬುದನ್ನು ವಿಷಾದದಿಂದಲೇ ಹೇಳಬೇಕಾಗಿದೆ.

ಡಾ. ಸಿದ್ದಲಿಂಗಯ್ಯ
ಬೆಂಗಳೂರು,

15/04/2026

I've just reached 7K followers! Thank you for continuing support. I could never have made it without each one of you. 🙏🤗🎉

14/04/2026

14/04/2026

ಬಾಬಾಸಾಹೇಬರ ಸಿದ್ದಾಂತಕ್ಕೆ ವಾರಸುದಾರರು ಯಾರು?

ಇಂದಿಗೆ ಡಾ.ಬಿ.ಅಂಬೇಡ್ಕರ್ ರವರು ಜನ್ಮ ತಾಳಿ 135 ವರ್ಷಗಳಾದವು.ಮತ್ತೊಮ್ಮೆ ಅವರ ವಯಕ್ತಿಕ,ಸಾಂಸಾರಿಕ,ಸಾರ್ವಜನಿಕ ಜೀವನವನ್ನು,ಹಿಂದೆ ತಿರುಗಿ ನೋಡೋಣ.ಇವರ ಪೂರ್ವಿಕರ ಊರು ಮಹರಾಷ್ಟ್ರದ ರತ್ನಗಿರಿ ಜಿಲ್ಲೆಯ ಅಂಬೇವಾಡಿ,( ಈ ಊರಿನ‌ ಹೆಸರನ್ನೆ ಅಂಬೇಡ್ಕರ್ ಗೆ ಇಡಲಾಗಿದೆ)ಇವರು ಹುಟ್ಟಿದ್ದು ಮಧ್ಯ‌ಪ್ರದೇಶದ ಮಿಲಿಟಿರಿ ವಸಾಹತು ಕಾಲನಿ ಮವ್ ನಲ್ಲಿ,ಓದಿದ್ದು ಮುಂಬೈ,ಕೊಲಂಬಿಯಾ ಮತ್ತು ಲಂಡನ್ ನಲ್ಲಿ,.ಬಾಲ್ಯದಲ್ಲೆ ಜಾತಿ ತಾರತಮ್ಯ ಮನುವಾದಿಗಳ ಅಟ್ಟಹಾಸಕ್ಕೆ ನಲುಗಿ ಹೋಗಿದ್ದರು.ತಂದೆ ನೋಡಲು ‌ಸತಾರಕ್ಕೆ ಹೋಗುವಾಗ ಅಸ್ಪೃಷ್ಯತೆಯ ಕಾಎಣಕ್ಕಾಗಿ ಗಾಡಿಯಿಂದ ಬಿದ್ದು ದೈಹಿಕವಾಗಿ ಗಾಯಗೊಂಡರು, ಕ್ಷೌರಿಕನ ಅಂಗಡಿಯಲ್ಲಿ ಅಸ್ಫೃಷ್ಯರಿಗೆ ಕ್ಷೌರ ಮಾಡದ ಕಾರಣ ಮಾನಸಿಕವಾಗಿ ನೊಂದುಕ್ಕೊಂಡ ಬಾಲಕ ಅಂಬೇಡ್ಕರ್ ತನ್ನ ಐದನೆ ವಯಸ್ಸಿನಲ್ಲಿ ತಾಯಿ ಭೀಮಬಾಯಿಯವರನ್ನು ಕಳೆದುಕ್ಕೊಂಡು ಮಾತೃ ಮಮತೆಯನ್ನು ,24 ನೆ ವಯಸ್ಸಿಗೆ ತನ್ನ ತಂದೆ ರಾಮ್ ಜಿ ಸಕ್ಪಾಲ್ ರವರನ್ನು ಕಳೆದುಕ್ಕೊಂಡ ಪುತ್ರ ವಾತ್ಸಲ್ಯವನ್ನು, 1935 ರಲ್ಲಿ ತನ್ನ ಹೆಂಡತಿ ರಮಾಬಾಯಿ,ಕಳೆದುಕ್ಕೊಂಡ ಪತ್ನಿ ಪ್ರೇಮವೂ ಹಾಗೂ .ಐದು ಮಕ್ಕಳಲ್ಲಿ ಮೂವರು ಗಂಡು ,ಇದ್ದ ಒಬ್ಬ ಮಗಳನ್ನು ಕಳೆದುಕ್ಕೊಂಡು ಸಂತಾನ‌ ಯಾತನೆಯನ್ನು ಅನಭವಿಸಿದರು. ಉಳಿದ ಒಬ್ಬನೆ ಮಗ ಯಶವಂತನ ಅನಾರೋಗ್ಯದಿಂದ ಚಿಂತಾಕ್ರಾಂತರಾದರು ಇವನು ಕೂಡ ನನ್ನಷ್ಟೆ ಓದಬೇಕು ಎಂದುಕ್ಕೊಂಡ ಅಭಿಲಾಷೆಯು ಹೋಯ್ತು.ಬಾಬಾಸಾಹೇಬರು ಎರಡನೇ ಮದುವೆಯಾಗಿದ್ದರಿಂದ ಇದ್ದ ಒಬ್ಬ ಮಗ ಯಶವಂತನು ಮನಸ್ಥಾಪಗಳಿಂದ ದೂರವಾದನು, ಸಂಬಂದಿಕರು ಯಾರು ಕೂಡ ಮುಂಭೈ ಕಡೆ ಮುಖ‌ ಮಾಡಲಿಲ್ಲ ಹೀಗೆ ಅವರ ವೈಯಕ್ತಿಕ ಜೀವನ ಕರಾಳವಾಗಿತ್ತು ಎಂಬುದನ್ನು ನಾವು ಊಯಿಸಲಾಗದು ಎಂತವರಿಗೂ ಅವರ ವೈಯಕ್ತಿಕ ಜಿವನ ತಿಳಿದು ದುಃಖ ಉಮ್ಮಳಿಸಿ ಬರದೇ ಇರದು. ಇಂತಹ ನೊಂದ ಮನಸ್ಸು ಜಾತಿ ದೌರ್ಜನ್ಯಕ್ಕೆ ,ಪುರೋಹಿತಶಾಯಿ ಸಾಮಾಜಿಕ ವ್ಯವಸ್ಥೆಯಲ್ಲಿ ಸಂಪ್ರದಾಯ,ಕಟ್ಡುಪಾಡುಗಳ ಹೆಸರಲ್ಲಿ ಅಸಾಮಾನತೆಗೆ ಒಳಗಾದ ಎಲ್ಲಾ ಜನರ( ಹಿಂದುಳಿದವರು, ದಲಿತರು ಮತ್ತು ಅಲ್ಪಸಂಖ್ಯಾತರು,ಸಂಪ್ರದಾಯ ಹಸರಲ್ಲಿ ಕೌಟಂಬಿಕ ದೌರ್ಜನ್ಯಕ್ಕೊಳಪಟ್ಟ ಬ್ರಾಹ್ಮಣ ಹೆಣ್ಣು‌ಮಕ್ಕಳು ಸೇರಿದಂತೆ ) ಸಮಾನತೆಗಾಗಿ ಹೋರಾಡಿ ಇವರಿಗೆ ಮತದಾನದ ಹಕ್ಜು,ಮೂಲಭೂತ ಹಕ್ಕುಗಳು, ಮೀಸಲು ಸೌಲಭ್ಯಗಳು‌ ಹಾಗೂ ಮಾನವೀಯ ಮೌಲ್ಯಗಳುಳ್ಳ ಸಂವೀಧಾನಾತ್ಮಕ ಹಕ್ಕುಗಳನ್ನು ನೀಡಿದರು.ಇಂತಹ ಮಹಾನ್ ನಾಯಕನ ಸಿದ್ದಾಂತಕ್ಜೆ ವಾರಸುದಾರರಿಲ್ಲದಂತಾಗಿದೆ.

ಅಂಬೇಡ್ಕರ್ ರವರು ಪರಿನಿಬ್ಬಾಣ ಹೊಂದಿದ ಕೆಲದಿನಗಳಾದ ನಂತರ ಅವರ ಮುಂಬೈ ಆಸ್ತಿಗಾಗಿ ಅವರ ಎರಡನೆ ಪತ್ನಿ ಡಾ.ಸವಿತಾ ಹಾಗು ಮಗ ಯಶವಂತನ ನಡುವೆ ಮನಸ್ತಾಪಗಳಾಗಿ ಕೋರ್ಟ್ ದಾವೆ ದಾಖಲಾಗುತ್ತದೆ ಮನೆ ಜಪ್ತಿ ಮಾಡಿ ಸೀಲ್ ಮಾಡಲಾಗುತ್ತದೆ ಹಾಗು ದೆಹಲಿಯ ಆಲಿಪುರ ರಸ್ತೆಯ ಬಾಡಿಗೆ ಮನೆ ಮಾಲಿಕರು ನಿಧನರಾದ ಮೇಲೆ ಅವರ ಮಗಳಿಗೆ ಆಸ್ತಿ ವರ್ಗವಾಗಿ ಮನೆ ಖಾಲಿ ಮಾಡುವಂತೆ ಡಾ ಸವಿತಾ.ಅಂಬೇಡ್ಕರ್ ರವರಿಗೆ ಕೋರ್ಟ್ ನೋಟೀಸ್ ಜಾರಿಯಾಗುತ್ತದೆ ಸಕಾಲದಲ್ಲ ಖಾಲಿ ಮಾಡದ ಕಾರಣ ಡಾ.ಬಿ.ಆರ್ ಅಂಬೇಡ್ಕರ್ ರವರ ವಸ್ತಗಳನ್ನು ಬೀದಿಗೆ ಎಸೆಯುತ್ತಾರೆ .ಹೆಣ್ಣು ಮಕ್ಕಳ ಪರ ಹೋರಾಡಿದ ಬಾಬಾ ಸಾಹೇಬರಿಗೆ ಒಂದು ಹೆಣ್ಣು ಕನಿಕರ ತೋರುವುದಿರಲಿ ಮಾನವೀಯತೆ ಮರೆತು ಅವರ ವಸ್ತುಗಳನ್ನು ಬೀದಿಯಲ್ಲಿ ಎಸೆದಳು. ಮಗನಿಗೆ ಪ್ತತ್ಯೇಕ ವಾಸದ ಮನೆ ಕಟ್ಟಿಕ್ಕೊಟ್ಟರು ಅಲ್ಲದೆ ಜೀವನೋಪಾಯಕ್ಕಾಗಿ ಮುದ್ರಣಾಲಯ ಮಾಡಿಕೊಟ್ಟರು ಯಶವಂತ ತಂದೆಯ ಮಾರ್ಗ ಅನುಸರಿಸಿ ನೈಜ ವಾರುಸುದಾರಿಕೆ ಬಿಟ್ಟು ಆಸ್ತಿ ವಾರಸುದಾರಿಕೆಗಾಗಿ ಮನೆಯ ಮೇಲೆಯೆ ಕೇಸು ದಾಖಲಿಸುತ್ತಾನೆ.

ಭಾರತ ಕರೆನ್ಸಿ ಮತ್ತು ಅದರ ಹುಟ್ಟು ಸಮಸ್ಯೆ ಬಗ್ಗೆ ಯಂಗ್ ಹಿಲ್ಟನ್ ಸಮಿತಿಗೆ ಪ್ರಬಂಧ ಮಂಡಿಸಿ . ಭಾರತದ ರುಪಾಯಿ ಮತ್ತು ಬ್ಯಾಂಕಿಗ್ ವ್ಯವಸ್ತೆಗಾಗಿ 1926 ರಲ್ಲಿ ರಾಯಲ್ ಕಮೀಷನ್ ಸಮಿತಿ ಶಿಪಾರಸ್ಸಿನ ಮೇಲೆ 1935 ರಲ್ಲಿ ಭಾರತದ ರಿಸರ್ವ್ ಬ್ಯಾಂಕ್ ಸ್ಥಾಪನೆಯಾಗುತ್ತದೆ. ಇದಕ್ಕೆ ಕಾರಣ ಕರ್ತರಾದ ಡಾ.ಬಿ.ಆರ್ .ಅಂಬೇಡ್ಕರ್ ರವರ ಭಾವಚಿತ್ರ ಭಾರತದ ಕರೆನ್ಸಿ ಮೇಲೆ ಮುದ್ರಿತವಾಗಬೇಕಿತ್ತು,ಇಲ್ಲಾ ಕನಿಷ್ಟ ಪಕ್ಷ ಎಲ್ಲಾ ಬ್ಯಾಂಕ್ ಗಳಲ್ಲಿ ಅವರ ಭಾವಚಿತ್ರ ಅಳವಡಿಸಕ್ಕೊಳ್ಳ ಬೇಕಿತ್ತು,ಅವರಿಗೂ ಅಂಬೇಡ್ಕರ್ ಬೇಡವಾದರು.
ಅವರು ಸ್ಥಾಪಿಸಿದ ಶಿಕ್ಷಣ ಸಂಸ್ತೆ, ಮತ್ತು ರಾಜಕೀಯ ಪಕ್ಷ ರಿಪಬ್ಲಿಕನ್ ಪಾರ್ಟಿ ಆಪ್ ಇಂಡಿಯಾದ ವಾರಸುದಾರಿಕೆಗಾಗಿ ಡಾ.ಅಂಬೇಡ್ಕರ್ ರವರ ಒಡನಾಡಿಗಳ ನಡುವೆ ಜಗಳ ಆರಂಭವಾಗಿ ಆ ಸಂಸ್ಥೆಗಳು ಕೂಡ ವಾರಸುದಾರರಿಲ್ಲದೆ ಹಾಳಾದವು‌.

ನಾನು ಹಿಂದೂವಾಗಿ ಹುಟ್ಟುದ್ದೇನೆ ನಾನು ಹಿಂದೂವಾಗಿ ಸಾಯಲಾರೆ ಎಂದು ತೀರ್ಮಾನಿಸಿ 21 ವರ್ಷಗಳ ಸತತ ಅದ್ಯಯನ ಮಾಡಿ ,ತನ್ನ ಜನರನ್ನು ಸಂಘಟಿಸಿ ಯಾವ ಧರ್ಮ ಅಸ್ಪ್ರಷ್ಯರನ್ನು ನಾಯಿಗಿಂತ ಕಡೆಯಾಗಿ ಕಾಣುತ್ತಿದೆ ಆ ಧರ್ಮ ಬಿಟ್ಟು ಹೊರ ಬನ್ನಿ ಎಂದು ಕರೆ ನೀಡಿ ತಮ್ಮ ಜನರನ್ನು‌ ಸಂಘಟಿಸಿ ,ಮನವರಿಕೆ ಮಾಡಿ ಹಳೆಯ ತೇರವಾದ, ಹೀನಾಯನ,ಮತ್ತು ಮಹಾಯಾನ ಪಂಥಗಳ ಆಚರಣೆ ನಮ್ಮ ಜನರಿಗೆ ಅರ್ಥವಾಗುವುದಿಲ್ಲವೆಂದು ಹೇಳಿ ಮತ್ತು‌ನನ್ನ ಜನರ ಬಿಡುಗಡೆಗಾಗಿ 1956 ರಲ್ಲಿ ತನ್ನ ಸ್ವಂತ ದಮ್ಮ ಕ್ಕೆ ಮರಳಿ ಮತ್ತು ಬೌದ್ದ ದಮ್ಮ ದೊಳಗೆ ನವಯಾನ ಬೌದ್ದ ಸಮ್ಮ ಸ್ಥಾಪಿಸಿ 22 ಪ್ರತಿಜ್ಞೆಗಳನ್ನು ನೀಡಿ ಇಂದಲ್ಲ ನಾಳೆ ನನ್ನ ಜನ‌ ಎಷ್ಟೆ ಅವಮಾನವಾಗಲಿ, ಭಾರತದಲ್ಲಿ ಬೌದ್ದ ದಮ್ಮವನ್ನು ಮರುಸ್ಥಾಪಿಸುತ್ತಾರೆ‌ಂಬ ಕನಸು ಕಂಡಿದ್ದರು ಆಗಿದ್ದೇನು ಅದೇ ಹಳೆಯ ಸಂಪ್ರದಾಯಗಳಿಗೆ ಮನಸೋತ ಅವರ ಜನ ನವಯಾನದ ದಮ್ಮದೆಡಿ ಮನಸ್ಸು ಮಾಡುತ್ತಿಲ್ಲ .ಮಹರಾಷ್ಟ್ರದಲ್ಲಿರುವ ಅವರ ಮೊಮ್ಮಕ್ಕಳಾಗಲಿ,ಮರಿಮೊಮ್ಮಕ್ಕಳಾಗಲಿ ಬಾಬಾಸಾಹೇಬರ ಮಾರ್ಗದಲ್ಲಿ ಜನರನ್ನು ಸಂಘಟಿಸುವ ಯಾವ ಪ್ರಯತ್ನಗಳು ಇತರ ರಾಜ್ಯಗಳಿರಲಿ ಮಹರಾಷ್ಟ್ರದಲ್ಲಿಯೂ ಯಶಸ್ವಿಯಾಗಿಲ್ಲ.

ಡಾ.ಅಂಬೇಡ್ಕರ್ ರವರ ತತ್ವ ಸಿದ್ದಾಂತಗಳ ಮೇಲೆ ಹೋರಾಟ ಮಾಡಿದ ಬಹುಜನ ಸಮಾಜ ಪಕ್ಷ ಕೂಡ ಅಂಬೇಡ್ಕರವರ ಸಿದ್ದಾಂತಗಳನ್ನೆಲ್ಲಾ ಗಾಳಿಗೆ ತೂರಿದೆ ಅವರ ಪ್ರತಿಮೆಗಳನ್ನು ಮುಗಿಲೆತ್ತರಕ್ಕೆ ನಿಲ್ಲಸಿ ನಾವು ಅಂಬೇಡ್ಕರ್ ವಾರಸುದಾರರು ಎಂದು ಹೇಳಿ ಮುಗ್ದ ಜನರಿಂದ ಹಣ ಪಡೆದು, ಮತ ಗಳಿಸಿ ಮಾಯಾವಾಗಿ ಹೋಗಿದೆ . ಆ ಪಕ್ಷದ ನಾಯಕರಾಗಿದ್ದವರು ಅಂಬೇಡ್ಕರ್ ಸಿದ್ದಾಂತಗಳನ್ನು ವಿರೋಧಿಸುವ ಪಕ್ಷದಲ್ಲಿ ಚಾಕರಿ ಮಾಡಿಕ್ಕೊಂಡು,ಯಾವ ಲಜ್ಜೆಯೂ ಇಲ್ಲದೆ ಅವರನ್ನೆ ಸಮರ್ಥಿಸಿಕ್ಕೊಂಡು ಕಂಡುಬರುತ್ತಿದೆ.

ಮೀಸಲಾತಿ ಪಡೆದ ಪರಿಶಿಷ್ಟ ಜಾತಿಗಳು,ಹಿಂದುಳಿದ ವರ್ಗಗಳು ಬಸವಣ್ಣ, ಮಲೆ ಮಾದೇಶ್ವರ, ಮಂಟೆಸ್ವಾಮಿ, ಯಲ್ಲವ್ವ,ಸೇವಾ ಲಾಲ್ ಆಯಾ ಜಾತಿಯ ಮಠಾದಿಪತಿಗಳು, ಕೆಂಪೇಗೌಡ, ಬಾಬು ಜಗಜೀವನ ರಾಮ್ ಹಾಗು ಇತರರನ್ನು ತಮ್ಮ ನಾಯಕರೆಂದು ಮೆರವಣಿಗೆ ,ಉತ್ಸವ ಮಾಡಿಕ್ಕೊಂಡಿದ್ದಾರೆಯೇ ಹೊರತು ಮನಸಾರೆ ಡಾ.ಬಿ.ಆರ್ ಅಂಬೇಡ್ಕರ್ ರವರನ್ನು ತಮ್ಮ ನಾಯಕನೆಂದು ಪರಿಗಣಿಸಿಲ್ಲ ಇರಲಿ‌ ಅದು ಅವರ ಸಾಂಸ್ಜತಿಕ ನಾಯಕರ ಮೇಲಿನ ಅಭೀಮಾನ ಅಂದುಕ್ಕೊಳ್ಳೋಣ.ಈ ನಾಯಕರು ಇವರ ಜನರಿಗೇಕೆ ಹಕ್ಕು, ಅಧಿಕಾರಗಳನ್ನು ನೀಡಿಲಿಲ್ಲ?. ಹಕ್ಕು,ಅಧಿಕಾರ ಮತ್ತು ಸ್ವಾಭೀಮಾನ ನೀಡದವರನ್ನು ಹಾಡಿ ಹೊಗಳವ ಜನ ಸಮೂದಾಯ ಈ ಹಕ್ಕುಗಳನ್ನು ಕೊಟ್ಟ ಬಾಬಾಸಾಹೇಬರನ್ನೆ ಮರೆತ ಈ ಜನಸಮೂದಾಯ ಚಿರ ಋಣಿಗಳಾಬೇಕಾದ ಜನ ಕೃತಘ್ನರಾಗಿದ್ದಾರೆ ಮತ್ತು ದ್ರೋಹ ಬಗೆದಿದ್ದಾರೆ

ಸಾಮಾಜಿಕ ಜಾಲ ತಾಣ ಬಂದ ಮೇಲಂತು ಅಂಬೇಡ್ಕರ್ ರವರನ್ನು ಎಷ್ಟು ಅವಮಾನ ಮಾಡಬೇಕು ಅವೆಲ್ಲವನ್ನು ಯಾವ ವಿವೇಕವಿಲ್ಲದೆ ಮಾಡುತ್ತಿದ್ದಾರೆ.ಡಾ.ಅಂಬೇಡ್ಕರ್ ರವರು ಸಂವಿಧಾನ ರಚಿಸಿಯೇ ಇಲ್ಲ .ಬಿ.ಎನ್ ರಾವ್ ಎಂಬುವವರು ರಚಿಸಿಕ್ಕೊಟ್ಟಿದ್ದಾರೆ ಅದಕ್ಕೆ ಅಂಬೇಡ್ಕರ್ ತಮ್ಮ ಹೆಸರು ಹಾಕಿಕ್ಕೊಂಡಿದ್ದಾರೆ ಎಂದು ಹಸಿ ಸುಳ್ಳನ್ನು ಹರಿಯಬಿಟ್ಟಿದ್ದಾರೆ. ಸಂವೀಧಾನ ಕರಡು ಸಮಿತಿಯ ಅಧ್ಯಕ್ಷರಾದ ಮೇಲೆ ಒಂದಲ್ಲ ಒಂದು ಕಾರಣದಿಂದ ಎಲ್ಲ ಸದಸ್ಯರು ಭಾಗಿಯಾಗುವುದಿಲ್ಲ .ಒಬ್ಬರೇ ಏಕಾಂಗಿಯಾಗಿ ಕರಡು ಕೇವಲ 2 ವರ್ಷ 11 ತಿಂಗಳ ಸಮಯದಲ್ಲಿ ಸಂವೀದಾನವನ್ನು ರಚಿಸಿದ್ದಾರೆ.ಇದರ ಎಲ್ಲ ಕ್ರೆಡಿಟ್ ಡಾ.ಆಂಬೇಡ್ಕರ್ ರವರಿಗೆ ಸಲ್ಲಬೇಕೆಂದು ಸಂವೀದಾನ ರಚನಾ ಸಮಿತಿ ಆದ್ಯಕ್ಷರಾಗಿದ್ದ ಡಾ.ಬಾಬು ರಾಜೇಂದ್ರ ಪ್ರಸಾದ್ ರವರು ಹೊಗಳಿದ್ದಾರೆ ಈ ಹೇಳಿಕೆ ಸಂಸತ್ ನಲ್ಲಿ ದಾಖಲಾಗಿದೆ. ಆದರೂ ಅಪಪ್ರಚಾರವೇಕೆ?

ಕೆಲ SC/ST/OBC ಗಳಿಗೆ ಮೀಸಲಾತಿ ಪಡೆಯುವವರೆಗೂ ಮಾತ್ರ ಅಂಬೇಡ್ಕರ್ ರನ್ನು ಸ್ಮರಿಸುತ್ತಾರೆ,ಅನ್ಯಾಯವಾದಾಗ ಅವರ ಪಟ ಹಿಡಿದು ನ್ಯಾಯ ಕೇಳುತ್ತಾರೆ ಸಮಸ್ಯೆ ಪರಿಹಾರವಾದ ಮೇಲೆ ದೇವಸ್ಥಾನಕ್ಕೆ ಹೋಗಿ ಕೈ ಮುಗಿದು ಕಾಣಿಕೆ ಹಾಕುತ್ತಾರೆ ಚರ್ಚ್ ಮುಂದೆ ಥ್ಯಾಂಕ್ಸ್ ಗಿವಿಂಗ್ ಸರ್ವಿಸ್ ನೀಡೋದು ಮಾಡುತ್ತಾರೆಯೇ ಹೊರತು ಮನಸ್ಸಲ್ಲು ಎಂದೂ ಬಾಬಾಸಾಹೇಬರಿಗೆ ವಂದಿಸುವುದಿಲ್ಲ. ಇಂತಹ ನಡವಳಿಕೆ ಜನರಲ್ಲಿ ಬರುವುದೇಕೆ ಅಂಬೇಡ್ಕರ್ ಎಂದರೆ ಇವರಿಗೆ ಅಪತ್ಯ.
ಇನ್ನು ಬರಹಗಾರರು,ಭಾಷಣಕಾರರು,

ಹೋರಾಟಗಾರರು ಮತ್ತು ಪ್ರಗತಿ ಪರ ಚಿಂತಕರು ಕೂಡ ಹೊರತಲ್ಲ ತಮ್ಮ ಸ್ವಾರ್ಥ ಸಾಧನೆಗೆ ಡಾ.ಅಂಬೇಡ್ಕರ್ ರವರ ಹೆಸರನ್ನು ಮಸಾಲೆ ತರ ಬಳಸುವ ಕಲೆ ಚೆನ್ನಾಗಿ ಕರಗತ ಮಾಡಿಕ್ಕೊಂಡಿದ್ದಾರೆ ಅವರ ಬರಹಗಳಲ್ಲಿ ಅಂಬೇಡ್ಕರ್ ಬಳಸಲ್ಲಟ್ಟ ವಸ್ತು ವಿಷಯಗಳಾಗಲಿ,ಸತ್ಯವನ್ಬಾಗಲಿ ನೇರವಾಗಿ ಬರೆಯುವುದುಲ್ಲ ಸತ್ಯ ಬರೆದರೆ ನಮ್ಮ ಸ್ವಾರ್ಥ ಸಾಧನೆಗೆ ಎಲ್ಲಿ ಅಡ್ಡಿಯಾಗುತ್ತದೆ ಎಂಭ ಭಯ.ಇನ್ನು ಭಾಷಣಕಾರರು ಡಾ.ಅಂಬೇಡ್ಕರವರು ಬರೆದ ಪುಸ್ತಕ ಓದದೆ ಇತರರು ಬರೆದ ಪುಸ್ತಕ ಓದಿ ಮತ್ತು ಸಾಮಾಜಿಕ ಜಾಲತಾಣವೆಂಬ ವ್ಯಾಟ್ಸಾಪ್ ವಿ ವಿ ಗಳಲ್ಲಿ.ನೋಡಿ ಮಾತನಾಡುವ ಅಭ್ಯಾಸ ಮಾಡಿಕ್ಕೊಂಡಿದ್ದಾರೆ ಉದಾಹರಣೆಗೆ ಅಂಬೇಡ್ಕರವರು ಹರಿದು ಹೋದ ಅಂಗಿ ಮುಚ್ಚುಕ್ಕೊಳ್ಳಲು ಕೋಟ್ ಧರಿಸುತ್ತಿದ್ದರು ಎಂದು ಹೇಳುವುದು.ಡಾ.ಅಂಬೇಡ್ಕರ್ ಎಂಭ ಹೆಸರನ್ನು ಬ್ರಾಹ್ಮಣ ಗುರುಗಳು ಇಟ್ಟಿದ್ದರು ಎಂದು ಸುಳ್ಳು ಹರಡುವುದು ..ಸ್ವಾರ್ಥ,, ಪ್ರತಿಷ್ಟೆ ಗೋಸ್ಕರ ನಕಲಿ ಅಂಬೇಡ್ಕರ್ ವಾದಿಗಳು ಸಂಘ ಕಟ್ಟಿಕ್ಕೊಂಡು ವಸೂಲಿ ಮಾಡಿ ಅವರ ಹುಟ್ಟು ಹಬ್ಬ ಆಚರಿಸುವುದು ,ಕ್ರಿಕೇಟ್ ಕೂಟ ನಡೆಸುವುದು ಮತ್ತು ಸಂಗೀತ ಸಂಜೆ ಮಾಡಿ ಅವರಿಗೆ ಅವಮಾನವಾಗುವಂತಹ ಸನ್ನಿವೇಶ ಸೃಜಿಸಿ ನಾವೇ ನೈಜ ಅಂಬೇಡ್ಕರ್ ವಾದಿಗಳೆನ್ನುವುದು.
ಇನ್ನು ಶಾಲಾ ಕಾಲೇಜುಗಳಲ್ಲಿ ಓದುವರು ಮತ್ತು ಬಾಡಿಗೆ ಮನೆಗಳಲ್ಲಿ ವಾಸಿಸುವವರು ಎಲ್ಲಿ ನಾವು SC ಎಂದು ಗೊತ್ತಾಗುತ್ತದೆ ಎಂದು ನಾವು ಗೌಡರು ಲಿಂಗಾಯತರು ಎಂದು ಹೇಳಿಕ್ಕೊಂಡು ಇರುವುದು.ಇವರಿಗಾಗಲಿ ಇವರನ್ನು‌ ಜಾತಿ ಹೆಸರಲ್ಲಿ ತಾರತಮ್ಯ ಮಾಡುವರಿಗಾಗಲಿ ಅಂಬೇಡ್ಕರ್ ಬಗ್ಗೆ ಸ್ವಲ್ಲವೂ ಕೃತಜ್ಞತೆ ಇಲ್ಲ ಹಾಗಾದರೆ ಯಾರಿಗೆ ಬೇಕು ಅಂಬೇಡ್ಕರ್? ಹಿಂದುಳಿದ ವರ್ಗದವರಿಗಾ ಹೊಲಯರಿಗಾ, ಮಾದಿಗರಿಗಾ, ಬೋವಿ‌, ಲಂಬಾಣಿಗರಿಗಾ?

ಡಾ.ಅಂಬೇಡ್ಕರ್ ಜಯಂತಿಗೆ ಕೆಲವೇ ದಲಿತರು ಬಿಟ್ಟರೆ ಮೇಲ್ಜಾತಿ ಒಬ್ಬನೇ ಒಬ್ಬ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಾಗಲಿ,ಪತ್ತಿಕೆಗಳಲ್ಲಾಗಲಿ, ಶುಭಾಷಯ ಕೋರಲು ಹಿಂದೇಟು ಹಾಕುತ್ತಾರೆ ದಲಿತರು ಮಾತ್ರ ಬಸವಣ್ಣ,ನಾರಾಯಣ ಗುರು ಟಿಪ್ಪು ಮತ್ತುಕೆಂಪೇಗೌಡರ, ಕುವೆಂಪುರವರ ಜಯಂತಿಗೆ ಅಮುಗಿ ಬಿದ್ದು ಶುಭಾಶಯ ಹಂಚಿಕ್ಕೊಳ್ಳುತ್ತಾರೆ ಮೇಲ್ಜಾತಿ ಜನರ ಈ ನಡವಳಿಕೆ ಅರ್ಥವಾಗದು.ಈ ಎಲ್ಲರು ಈಗಾಲದರು ಆತ್ಮಾವಲೋಕನ ಮಾಡಿಕ್ಕೊಂಡರೆ ಸಾಕು ಸಮಾಜದಲ್ಲಿ ಯಾವ ಭಯವೂ ಇಲ್ಲದೆ ದಲಿತರ ಮೇಲೆ ಮತ್ತು ಮಹಿಳೆ ,ಮಕ್ಕಳ ಮೇಲೆ ನಡೆಸುವ ದೌರ್ಜನ್ಯಗಳು ನಿಲ್ಲುತ್ತವೆ.

ಮೇಲ್ಜಾತಿ ಜನರು ಮಾತ್ರ ತಮ್ಮ ಜಾತಿಯ ನಾಯಕರ ಜಯಂತಿಗೆ ಸೀಮಿತವಾಗಿಬಿಟ್ಡಿದ್ದಾರೆ ಮತದಾನದ ಹಕ್ಕು,ಮೀಸಲಾತಿ ಹಕ್ಕು ಕೊಟ್ಟ ಅಂಬೇಡ್ಕರರನ್ನೆ ಮರೆತು ಬಿಡುತ್ತಾರೆ ಸಾರ್ವಜನಿಕರ ಈ ನಡವಳಿಕೆ ಇನ್ನು ಬದಲಾಗಿಲ್ಲವೆಂದರೆ ಯಾರಿಗೂ ಅಂಬೇಡ್ಕರಗ ಸಿದ್ದಾಂತ ಯಾರಿಗೂ ಬೇಡವಾಗಿದೆ.

ಹಿತ್ತಲಿನಲ್ಲಿ ಹಿಕ್ಮತ್ತು ಮಾಡುತ್ತಿದ್ದ ಕೆಲ ಮಾದಿಗರಂತು ಅಂಬೇಡ್ಕರ್ ಹೆಸರಲ್ಲಿ ಭವನಗಳಿವೆ,ಅಭೀವೃದ್ದಿ ನಿಗಮ‌ ಇದೆ ,ಅಧ್ಯಯನ ಸಂಸ್ಥೆ ಇದೆ ಬಾಬು ಜಗಜೀವನ್ ರಾಮ್ ಗು ಬೇಕು ಅಂತ ಕೆಲ ವಿವಿಗಳಲ್ಲಿ ಬಾಬುಜಗಜಿವನ ರಾಮ್ ಸಂಶೋಧನಾ ಸಂಸ್ಥೆ,ಭವನಗಳು ಮತ್ತು ಚರ್ಮಕಾರರ ಅಭೀವೃದ್ದಿ ನಿಗಮವಿದೆ , ಕರ್ನಾಟಕಕ್ಕು ಜಗಜೀವನ ರಾಮ್ ಏನು ಸಂಭಂದ? ಬಿಹಾರವಾಗಲಿ,ಇತರೆಡೆಯಾಗಲಿ ಬಾಬು ಜಗಜೀವನ ರಾಮ್ ಜನ್ಮ ದಿನ‌ ಆಚರಿಸುವುದಿಲ್ಲ .ಕರ್ನಾಟಕದಲ್ಲೇಕೆ ಅವರ ಜನ್ನ ದಿನವನ್ನು ಸರಕಾರಿ ಕಾರ್ಯಕ್ರಮವನ್ನಾಗಿ ಮಾಡಿದೆ ಕರ್ನಾಟಕದ ಮಾದಿಗರಿಗೆ ಅವರ ಕೊಡುಗೆ ಏನು? ಅಂಬೇಡ್ಕರ್ ರವರಿಗೆ ಅವಮಾನ ಮಾಡಲೆಂದೇ ಅವರನ್ನು ಕರ್ನಾಟಕಕ್ಕೆ ಎಳೆದು ತಂದು ಹೊಲ‌ಮಾದಿಗರ ನಡುವೆ ಕಿತ್ತಾಟ,ತಿಕ್ಕಾಟವಾಗುವಂತೆ ಮಾಡಿದವರು ತೆರೆಮೆರೆ ಮನುವಾದಿ ಗುಂಪುಗಳು, ಈಗ ಒಬ್ಬ ಮಾದಿಗ ಇತಿಹಾಸ ಪ್ರಾದ್ಯಾಪಕ ಸಾರ್ವಜನಿಕವಾಗಿಯೇ ಅಂಬೇಡ್ಕರ್ ಗೆ ಸಾಂಸ್ಕತಿಕ ಇತಿಹಾಸವಿಲ್ಲ ತನ್ನ ಜನರಿಗೆ ಅಂದರೆ ಹೊಲಯ ಸಮೂದಾಯಗಳಿಗೆ ಸಂಸ್ಕೃತಿ ಕಟ್ಟಿಕೊಡಲು ಅಂಬೇಡ್ಕರ್ ಬೌದ್ಧ ದಮ್ನ ಸ್ವೀಕರಿಸಿದರು ಎಂದು ಅವಹೇಳನ‌ ಮಾಡುವ ಮಟ್ಟಕ್ಕೂ ಇಳಿದಿದ್ದಾರೆ.ಇನ್ನು ಕೆಲ ಕೇಸರಿ ರಾಜಕೀಯ ನಾಯಕರು ನಾವು ಬಂದಿರೋದೆ ಅಂಬೇಡ್ಕರ್ ಬರೆದ ಸಂವೀದಾನ ರದ್ದು ಮಾಡಲು ಎಂದು ಹೇಳಿಕ್ಕೊಂಡಿದ್ದಾರೆ .ಇವೆಲ್ಲವನ್ನು ಗಮನಿಸಿದರೆ ತೆಗಳಿ ತೆಗಳಿ ಪ್ರತಿನಿತ್ಯ ಅವಮಾನ ಮಾಡುವ ಮಟ್ಟಕ್ಕೆ ಜನ ಬಂದಿದ್ದಾರೆ ಅಂಬೇಡ್ಕರರಯ ಪ್ರತಿಪಾದಿಸಿದ ಸಾಮಾಜಿಕ ನ್ಯಾಯ,ಸಮಾನತೆ ಮತ್ತು ಸೋದರತೆಗೆ ಭಾರತೀಯ ಸಮಾಜದಲ್ಲಿ ಅವಕಾಶ ನೀಡೆವು ಎಂಬ ಪರೋಕ್ಷ ನಡವಳಿಕೆ ಇದೆ ಇದನ್ನು ಈಗಲಾದರು ಜನ ಬಿಡಬೇಕು ಇಲ್ಲದಿದ್ದರೆ ಸಿಟ್ಟಾದ ಹಾವು ತನ್ನ ಬಾಲವನ್ನೆ ಕಚ್ಚಿಕ್ಕೊಂಡು ಸಾಯುವಂತೆ ಇಂತಹ ಜನರಿಗೂ ಪ್ರಸಂಗ ಬರಬಹುದು.

ಬಾಬಾಸಾಹೇಬರಿಗೆ ಕೊನೆಯಾಸೆಯೊಂದಿತ್ತು ನನ್ನ ಜನ ಅಂದರೆ ತುಳಿತಕ್ಕೊಳಪಟ್ಟ ಜನ ಎಷ್ಟೇ ಅವಮಾನವಾಗಲಿ ಬಿಸಲು ಮಳಗೆ ಅಂಜದೆ ಈ ಭಾರತದ ನಲೆದಲ್ಲಿ ಭೌಧ್ದದಮ್ಮವನ್ಮು ಮರಳಿ ಕಟ್ಡುತ್ತಾರೆ ಆಮೂಲಕ‌ ಭಾರತ ಪ್ರಭುದ್ಧ ಭಾರತವಾಗುತ್ತದೆ ಎಂಬುದಾಗಿತ್ತು ಅಲ್ಲೊಂದು ಇಲ್ಲೊಂದು ಭೌದ್ದ ವಿಹಾರಗಳು ತಲೆ ಎತ್ತುತ್ತಿವೆ,ನೂರಾರು ಬೌದ್ಧ ಸನ್ಯಾಸಿಗಳಿದ್ದಾರೆ ಅವರು ಕೂಡ ತೇರವಾದ ಪಾಲಿಸುತ್ತಾರೆಯೇ ಹೊರತು‌ಅಂಬೇಡ್ಕರ್ ಸ್ಥಾಪಿಸಲ್ಪಟ್ಟ ನವಯಾನ ಬುದ್ದಿಸಮ್ ಹೇಳುವ ಒಬ್ಬನೇ ಒಬ್ನ ಬೌದ್ದ ಸನ್ಯಾಸಿ ಇಲ್ಲ.ಈಗ ಬೌದ್ಧ ಅಭಿವೃದ್ಧಿ ನಿಗಮವಾಗಿದೆ .ಅದು ಕೂಡ ಬೇರೆ ನಿಗಮಗಳಂತೆ ಬ್ರಷ್ಟಾಚಾರ,ಸ್ವಜನ ಪಕ್ಷ ಪಾತ ಮಾಡಿದರೆ ಅಂಬೇಡ್ಕರ್ ಅಂದುಕ್ಕೊಂಡ ಬೌದ್ದ ರಾಷ್ಟ್ರ ಹಳಿ ತಪ್ಪುತ್ತದೆ.ಈ ನಿಗಮವಾದರು ಅಂಬೇಡ್ಕರ್ ಮಾರ್ಗ ಅನುಸರಿಸುವಂತಾದರೆ ಈ ನಿಗಮ‌ ಸ್ಥಾಪಿಸಿದ್ದು ಸಾರ್ಥಕವಾಗುತ್ತದೆ. ನಿಗಮಹ್ಜೆ ಮೂಗು ದಾರ ಹಾಕುವರು ಯಾರು?

ಬಾಬಾಸಾಹೇಬರು ವೈಸರಾಯ್ ಸಮಿತಿಯಲ್ಲಿ ಕಾರ್ಮಿಕ ಸದಸ್ಯರಾಗಿ,ಕಾರ್ಮಿಕರ ಎಲ್ಲಾ ಸಮಸ್ಯೆಗಳನ್ನು ತಲಸ್ಪರ್ಷಿ ಅಧ್ಯಯನ‌ ಮಾಡಿ ಸಮಿತಿಗೆ ವರದಿ ನೀಡಿದರು. ಕೈಗಾರಿಕಾ ಮಾಲಿಕರು ಮತ್ತು ಕಾರ್ಮಕರು ಕಾರ್ಮಿಕರನ್ನು ಒಂದೇ ವೇದಿಕೆಗೆ ತಂದರು,ಅವರ ಸಮಸ್ಯೆ ಅವರೇ ಸರಿಪಡಿಸಿಕ್ಕೊಳ್ಳುವಂತೆ ಮಾಡಿ ಅವರ ಶ್ರೇಯೋಭಿವೃದ್ದಿಗಾಗಿ ಅನೇಕ ಸವಲತ್ತುಗಳನ್ನು ಜಾರಿ ಮಾಡಿಸಿದರು ಹಾಗೂ ಭಾರತ ಸರಕಾರದ ಕಾರ್ಮಿಕ ಮಂತ್ರಿಯಾಗಿ ಅನೇಕ ಕಾನೂನುಗಳನ್ನು ಮಾಡಿ ಕಾರ್ಮಿಕರಿಗೆ ಆಶಾಕಿರಣವಾದರು.ದುಡಿಯುವ ಸಮಯವನ್ನು 14 ಗಂಟೆಯಿಂದ 8 ಘಂಟೆಗೆ ಇಳಿಸಿದರು.ಕಲ್ಲಿದ್ದಲು ಗಣಿಯಲ್ಲಿ ಮಹಿಳೆಯರು ಕೆಲಸ ಮಾಡುವಂತಿಲ್ಲ ಎಂಬ ಕಾನೂನು ಮಾಡಿದರು.ಹೆರಿಗೆ ರಜೆ ,ಭತ್ಯೆ,ಕಾರ್ಮಿಕ ವಿಮಾ ನಿಗಮ,ಕಾರ್ಮಿಕ ಮಕ್ಕಳಿಗೆ ಕಾರ್ಖಾನೆ ಪಕ್ಕದಲ್ಲೆ ಶಾಲೆಗಳನ್ನು ತೆರದು ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಭದ್ರ ಬುನಾದಿ ಹಾಕಿಕ್ಕೊಟ್ಡ ಶ್ರೇಷ್ಟ ನಾಯಕ ಆದರೆ ಇಂತಹ ಮಹಾನ್ ನಾಯಕ ನನ್ನು ಕಾರ್ಮಿಕರು ತಮ್ಮ ಕಣ್ಮಣಿಯಂತೆ ಕಾಣದೆ ಯಾವ ಮಾರ್ಕ್ಸ್ ವಾದಿ ಸಿದ್ದಾಂತವನ್ನು ಅಂಬೇಡ್ಜರ್ ವಿರೋಧಿಸಿದ್ದರೊ ಅದೇ ಸಿದ್ದಾಂತ, ಕಮ್ಯುನಿಷ್ಟ್ ನಾಯಕರನ್ನು ಕಾರ್ಮಿಕರು ತಮ್ಮ ನಾಯಕರಂತೆ ಕಂಡು ಇವರಿಗೂ ಅಂಬೇಡ್ಜರ್ ಬೇಡವಾದರು.
ಭಾರತದ ರೈತರ ಜೀವನವನ್ನು ಅಸನುಗೊಳಿಸಲು ಭಾಕ್ರನಂಗಲ್ ನಂತಹ ವಿವಿದುದ್ದೇಶ ನೀರಾವರಿ ಯೋಜನೆ ಜಾರಿಗೆ ತಂದರು,ಕೃಷ್ಣ ಕ್ಕೊಳ್ಳ ಯೋಜನೆ ಮತ್ತು ವಿಶ್ವೇಶ್ವರಾಯರನ್ನೊಳಗೊಂಡತೆ ಮೆಟ್ಟೂರು ಜಲಾಶಯ ಯೋಜನೆ ರೂಪಿಸಿ ರಾಜ್ಯಗಳ ನಡುವೆ ನದಿ ನೀರು‌ ಸಮರ್ಪಕ ಹಂಚಿಕೆ,ಪವರ್ ಗ್ರಿಡ್ ವಿನ್ಯಾಸ ಮಾಡಿ ,ವಿದ್ಯುತ್ ಉತ್ಪಾಧನೆ ಮಾಡಿ ಭಾರತದಲ್ಲಿ ಕೈಗಾರಿಕಾ ಕ್ತಾಂತಿಗೆ ನಾಂದಿ ಹಾಡಿದ ಸರ್ವಶ್ರೇಷ್ಟ ಜ್ಞಾನಿ ಅಂಬೇಡ್ಕರ್ .ಕಾರ್ಮಿಕರಾಗಲಿ,ರೈತರಾಗಲಿ ಇಲ್ಲಾ ಉದ್ದಿಮೆದಾರರಾಗಲಿ ಯಾರೊಬ್ಬರು ಕೂಡ ಅಂಬೇಡ್ಕರ್ ರವರನ್ನು ತಮ್ಮ ನಾಯಕನೆಂದು ಪರಿಗಣಿಸದೆ ಹೋದದ್ದ ಭಾರತೀಯರ ದೌರ್ಬಲ್ಯವೆಂದೇ ಹೇಳಬಹುದು.
ದಡ ಸೇರಿದ ಮೇಲೆ ಅಂಬಿಗನ ಹಂಗೇಕೆ ಎಂದು ಅವರ ಜನ; ರೈತರು,ಕಾರ್ಮಿಕರು,ಹಿಂದುಳಿದ ವರ್ಗದವರು,ದಲಿತರು,ಮಹಿಳೆಯರು,ನೌಕರರು ಮತ್ತು ವಿದ್ಯಾರ್ಥಿಗಳು ತಮ್ಮ ಸ್ವಾರ್ಥ ಸಾಧನೆಯಲ್ಲೆ ಬದುಕುತ್ತಿರುವಾಗ ಅವರ ಸಿದ್ದಾಂತ ಮತ್ತು ಮಾರ್ಗ ಅನುಸರಿಸುವವರು ಯಾರು? ಪ್ರಕೃತಿಯೇ ಬಲ್ಲದು.

ಬಾಬಾ ಸಾಹೇಬ್ ಅಂಬೇಡ್ಕರ್ ರವರು ವಿಗ್ರಹಾರಧನೆ ವಿರೋದಿಸಿದ್ದರು .ದುರಂತವೆಂದರೆ ಜಗತ್ತಿನಲ್ಲಿ ಅತೀ ಹೆಚ್ಚು ಅಂಬೇಡ್ಕರ್ ರವರ ವಿಗ್ರಹಳಿವೆ. ಆದರೆ ಜನರ ಮೆದುಳು ಮತ್ತು ಮನಸ್ಸಿನಲ್ಲಿ ಅವರ ಸಿದ್ದಾಂತಕ್ಕೆ ಜಾಗವಿಲ್ಲ. ಒಂದು ಕಡೆ ಕೇಂದ್ರದಲ್ಲಿ ಆಡಳಿತ ಮಾಡುತ್ತಿರುವ ಬಿಜೇಪಿ ಸರಕಾರ ಅಂಬೇಡ್ಕರ್ ರವರು ವಾಸಿಸಿದ ಸ್ಥಳಗಳನ್ನು ಪಂಚಕ್ಷೇತ್ರ ಗಳನ್ನಾಗಿ‌ ಪರಿವರ್ತಿಸಿ ಬೀಗುತ್ತಾ ಅವರ ಸಿದ್ದಾಂತಗಳನ್ನೆಲ್ಲಾ ಗಾಳಿಗೆ ತೂರುತ್ತಿದಾರೆ ಬಾಯಲ್ಲಿ ಜೈ ಭೀಮಾ ಬಗಲಲ್ಲಿ ತ್ರಿಶೂಲ.

ಜನರ ಮನಸ್ಸಿನಲ್ಲಿ ಅನಗತ್ಯ ವಿಚಾರ ತುಂಬುತ್ತಾ ಅಂಬೇಡ್ಕರ್ ರವರ ಸಿದ್ದಾಂತಗಳನ್ನು ಜನರಿಗೆ ಸರಿಯಾಗಿ ತಿಳಸದೆ,ಪಾಲಿಸದೆ ಅವರ ಕೊಡುಗೆಗಳ ಫಲಾನುಭವಿಗಳೆಲ್ಲರೂ ಸೇರಿ ಗಾಳಿಗೆ ತೂರುತ್ತಾ ಅವರ ಜನ್ಮ ದಿನ ಆಡಂಬರದಲ್ಲಿ ಮಾಡುವ ಸಮೂದಾಯಗಳು ಮತ್ತೊಮ್ಮೆ ಆತ್ಮಾವಲೋಕನ ಮಾಡುವುದು ಇಂದಿನ ತುರ್ತಾಗಿದೆ.
----------
ಬಿ ಎಂ.ಲಿಂಗರಾಜ್
ಪ್ರಧಾನ ಸಂಚಾಕಕರು
ನವಯಾನ ಬುದ್ದ ದಮ್ಮ ಒಕ್ಕೂಟ
ಮೈಸೂರು. ಹಾಗು ಅಧಿಕಾರಿಗಳು,ಭಾರತ ರಾಷ್ಟ್ರೀಯ ಪರೀಕ್ಷಣ ಸೇವೆ -ಭಾರತ
ಭಾರತೀಯ ಭಾಷ ಸಂಸ್ಥಾನ‌, ಮೈಸೂರು

28/03/2026

ಕೊನೆಯ ಎರಡು ಸಾಲುಗಳೇ ಇಲ್ಲಿ ಮುಖ್ಯವಾಗಿದೆ.

26/03/2026

ಕರ್ನಾಟಕದ ಪ್ರತಿ ಜಿಲ್ಲೆಯಲ್ಲಿರುವ ಹೊಲಯ ಸಮುದಾಯದ
ಮುಖಂಡರುಗಳು, ಸಂಘ ಸಂಸ್ಥೆಯವರು ಆಯಾ ಜಿಲ್ಲೆಯ
ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಬಾಬಾ ಸಾಹೇಬರ ಜಯಂತಿ ಕುರಿತ ಪೂರ್ವಭಾವಿ ಸಭೆ ಪ್ರತ್ಯೇಕವಾಗಿ
ನಡೆಸಲು ಕೋರಿಕೊಳ್ಳುವುದು.

ಒಟ್ಟಿಗೆ ಮಾಡುವುದು ಬೇಡ

25/03/2026

ಜೈಭೀಮ್, ಬಂಧುಗಳೆ,

ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಇಂದು ನಡೆದ ರಾಜ್ಯ ಮಟ್ಟದ ಹೊಲಯ ಮತ್ತು ಹೊಲಯ ಸಂಬಂಧಿತ ಸಮುದಾಯಗಳ ಮಹಾ ಸಮಾವೇಶವು ಅತ್ಯಂತ ಯಶಸ್ವಿಯಾಗಿದೆ.

ದೂರದ ಊರುಗಳಿಂದ ಸ್ವಂತ ವಾಹನಗಳಲ್ಲಿ, ವಿವಿಧ ರೀತಿಯ ಸಾರಿಗೆ ವ್ಯವಸ್ಥೆಯ ಮೂಲಕ ಭಾಗವಹಿಸಿ, ಐತಿಹಾಸಿಕ ಯಶಸ್ಸಿಗೆ ಕಾರಣವಾದ ಎಲ್ಲಾ ಬಂಧುಗಳಿಗೆ ಧನ್ಯವಾದಗಳು.

ಇಷ್ಟು ದೊಡ್ಡ ಸಂಖ್ಯೆಯಲ್ಲಿ ಹೊಲಯ ಸಮುದಾಯದ ಜನರು ಭಾಗವಹಿಸಿ ರಾಜ್ಯಕ್ಕೆ ಮತ್ತು ಸರ್ಕಾರಕ್ಕೆ ಸೂಕ್ತ ಸಂದೇಶ ನೀಡಲಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ಆಗ್ರಹಗಳು, ಈಡೇರುವ ಭರವಸೆಯಿದೆ. ನಮ್ಮ ಈ ಒಗ್ಗಟ್ಟು ಮುಂದಿನ ದಿನಗಳಲ್ಲಿ ರಾಜಕೀಯದ ಅಧಿಕಾರ ಹಿಡಿಯವ ಯಾವುದೇ ಸರ್ಕಾರದ ಮೇಲೆ ಪ್ರಭಾವ ಬೀರುವಂತೆ ಬಲಿಷ್ಠರಾಗೋಣ. ಬಾಬಾಸಾಹೇಬರ ಕನಸು ಈಡೇರಿಸೋಣ.

- ಜೈಭೀಮ್

-ಹೊಲಯ ಬ್ರಿಗೇಡ್‌, ಕರ್ನಾಟಕ

25/03/2026

ಸಮಗಾರ, ಮಚಗಾರ, ಡೋಹಾರ,
ಈ ಸಮುದಾಯಗಳು ಮಾದಿಗ ಜಾತಿಯನ್ನು ಒಪ್ಪುವುದಿಲ್ಲ.
-ಪರಮಾನಂದ ಗೋಡಕೇ ಸ್ಪಷ್ಟನೆ

ಇಂದಿನ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ನ್ಯಾಯಮೂರ್ತಿ ನಾಗಮೋಹನದಾಸ್ ರವರ ಅವೈಜ್ಞಾನಿಕ ಒಳಮೀಸಲಾತಿ ಸಮೀಕ್ಷೆಯನ್ನು ರದ್ದತಿಗೆ ಅಗ್ರಹಿಸಿ ಸಮಗಾರ, ಡೋಹಾರ ಮತ್ತು ಮಚಗಾರ ಸಮುದಾಯಗಳಿಗೂ ನ್ಯಾಯ ಸಿಗುವಲ್ಲಿ ಪ್ರಮುಖ ಪಾತ್ರ ವಹಿಸೋಣ.

ಸಾಮಾಜಿಕ ನ್ಯಾಯವನ್ನು ಇದುವರೆಗೂ ಮುಂದುವರೆಸಿಕೊಂಡು ಬರುತ್ತಿರುವ ನಾವು ಅನ್ಯಾಯವನ್ನು ಪ್ರಶ್ನಿಸದೇ ಬಿಡಬಾರದು.

ಜೈ ಭೀಮ್.

24/03/2026

ಜೈಭೀಮ್, ಬಂಧುಗಳೆ,

ನಾಳೆ ನಡೆಯಲಿರುವ ರಾಜ್ಯ ಮಟ್ಟದ ಹೊಲಯ ಮತ್ತು ಹೊಲಯ ಸಂಬಂಧಿತ ಸಮುದಾಯಗಳ ಮಹಾ ಸಮಾವೇಶಕ್ಕೆ ಹೃತೂರ್ವಕ ಶುಭಾಶಯಗಳು!

ದೂರದ ಊರುಗಳಿಂದ ಸ್ವಂತ ವಾಹನಗಳಲ್ಲಿ, ವಿವಿಧ ರೀತಿಯ ಸಾರಿಗೆ ವ್ಯವಸ್ಥೆಯಲ್ಲಿ ಭಾಗವಹಿಸಲು ಆಗಮಿಸುತ್ತಿರುವ ಎಲ್ಲಾ ಬಂಧುಗಳಿಗೆ ಸುರಕ್ಷಿತ ಪ್ರಯಾಣವಾಗಲಿ ಎಂದು ಹಾರೈಸುತ್ತೇವೆ. ನಿಮ್ಮ ಆಗಮನವು ಸಮಾವೇಶದ ಶಕ್ತಿ ಹಾಗೂ ಏಕತೆಯ ಸಂಕೇತವಾಗಲಿ. ಎಲ್ಲರೂ ಜಾಗರೂಕರಾಗಿ, ನಿಯಮಗಳನ್ನು ಪಾಲಿಸಿ, ಸುರಕ್ಷಿತವಾಗಿ ಪ್ರಯಾಣಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ.

ಎಲ್ಲರಿಗೂ ಶುಭಾಶಯಗಳು .

– ಜೈಭೀಮ್

-ಹೊಲಯ ಬ್ರಿಗೇಡ್‌, ಕರ್ನಾಟಕ

ಪ್ರತಿಭಟನಾ ಸಮಾವೇಶ
ದಿನಾಂಕ: 25.03.2026 ರಂದು ಬುಧುವಾರ ಬೆಳಿಗ್ಗೆ 11.00 ಗಂಟೆಗೆ ಪ್ರೀಡಮ್ ಪಾರ್ಕ್ ಬೆಂಗಳೂರು.

21/03/2026

ಡಾ.ಅಂಬೇಡ್ಕರ್ ಅವರು ಶೋಷಿತರ ನಿಜವಾದ ಪ್ರತಿನಿಧಿಯಲ್ಲವೆ?

ಎರಡನೇ ಮಹಾಯುದ್ದದ ನಂತರ ಬ್ರಿಟನ್ ದೇಶವು ಆರ್ಥಿಕವಾಗಿ ಮತ್ತು ರಾಜಕೀಯವಾಗಿ ದುರ್ಬಲವಾಯಿತು.‌ ವಿಶ್ವಸಂಸ್ಥೆಯ ಸ್ಥಾಪನೆಯ ನಂತರವಂತೂ ಎಲ್ಲಾ ದೇಶಗಳು ಬಂಧನಮುಕ್ತವಾಗಬೇಕಾಯಿತು. ಅದರಂತೆಯೇ ಬ್ರಿಟಿಷ್ ಸರ್ಕಾರ ಭಾರತಕ್ಕೆ ಸ್ವಾತಂತ್ರ್ಯ ನೀಡಲು ನಿರ್ಧರಿಸಿತ್ತು. ಆದರೆ ತಕ್ಷಣವೇ ಸಂಪೂರ್ಣ ಅಧಿಕಾರ ಹಸ್ತಾಂತರ ಸಾಧ್ಯವಾಗದ ಕಾರಣ, ತಾತ್ಕಾಲಿಕ ಆಡಳಿತ ವ್ಯವಸ್ಥೆ ರೂಪಿಸಬೇಕಾಯಿತು.‌ ಅದಕ್ಕಾಗಿ ಮಧ್ಯಂತರ ಸರ್ಕಾರವನ್ನು ರಚಿಸಲಾಯಿತು. 1946ರಲ್ಲಿ ಬ್ರಿಟನ್‌ನಿಂದ ಕ್ಯಾಬಿನೆಟ್ ಮಿಷನ್ ಭಾರತಕ್ಕೆ ಬರುತ್ತದೆ. ಭಾರತದಲ್ಲಿ ಸಂವಿಧಾನ ರಚನೆ ಮತ್ತು ಆಡಳಿತ ವ್ಯವಸ್ಥೆ ರೂಪಿಸಲು ಯೋಜನೆಯನ್ನು ನೀಡಿತ್ತಲ್ಲದೆ, ಅದರ ಭಾಗವಾಗಿ ಮಧ್ಯಂತರ ಸರ್ಕಾರ ರಚಿಸಲು ಸಲಹೆ ನೀಡಿತ್ತು.‌ ಹಾಗಾಗಿ 1946ರಲ್ಲಿ ಮಧ್ಯಂತರ ಸರ್ಕಾರ (Interim Government) ರಚನೆಯಾಯಿತು.

ಪ್ರಮುಖವಾಗಿ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ಈ ಮಧ್ಯಂತರ ಸರ್ಕಾರದ ಭಾಗವಾಗುವಲ್ಲಿ ಯಶಸ್ವಿಯಾದವು.‌ ಒಟ್ಟು ಸುಮಾರು 14 ಸದಸ್ಯ ಬಲದ ಮಧ್ಯಂತರ ಸರ್ಕಾರದಲ್ಲಿ ಕಾಂಗ್ರೆಸ್ - 6, ಮುಸ್ಲಿಂ ಲೀಗ್ - 5, ಇತರರು - 3, ಪರಿಶಿಷ್ಟ ಜಾತಿಗಳು- ಕೇವಲ 1 ಸ್ಥಾನಕ್ಕೆ ಸೀಮಿತವಾದರು. ಇದರ ವಿರುದ್ಧ ಬಾಬಾಸಾಹೇಬರು ತೀವ್ರವಾದ ಅಸಮಾಧಾನ ಹೊರಹಾಕುತ್ತಾರೆ.‌ ಬ್ರಿಟಿಷ್ ಸರ್ಕಾರ ಮತ್ತು ಕಾಂಗ್ರೆಸ್ ನಡುವೆ ಒಂದು ರೀತಿಯ ಸಂಚು (conspiracy) ನಡೆದಿದೆ, ಇದರಿಂದ ಪರಿಶಿಷ್ಟ ಜಾತಿಗಳ ಪ್ರಭಾವವನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗಿದೆ. ಮುಸ್ಲಿಮರಿಗೆ ನೀಡಿದ ಪ್ರಾಮುಖ್ಯತೆ, ಅಂದರೆ ಮುಸ್ಲಿಮರಿಗೆ ಹೆಚ್ಚಿನ ಪ್ರತಿನಿಧಿತ್ವ (33⅓%) ನೀಡಲಾಗಿದೆ. ಆದರೆ ಪರಿಶಿಷ್ಟ ಜಾತಿಗಳಿಗೆ ಅದಕ್ಕಿಂತ ಕಡಿಮೆ ಅವಕಾಶ ನೀಡಲಾಗಿದೆ, ಇದು ನ್ಯಾಯಸಮ್ಮತವಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಬ್ರಿಟಿಷ್ ವೈಸರಾಯ್ Lord Wavell ಅವರ ನೇತೃತ್ವದಲ್ಲಿ ಜೂನ್ 25, 1945 ರಿಂದ ಜುಲೈ 14, 1945 ರವರೆಗೆ ನಡೆದಿದ್ದ 'ಸಿಮ್ಲಾ ಸಮಾವೇಶದಲ್ಲಿ' ಬಾಬಾಸಾಹೇಬ್ ಡಾ.ಅಂಬೇಡ್ಕರ್ ಅವರು 'ಮಧ್ಯಂತರ ಸರ್ಕಾರದಲ್ಲಿ' ದಲಿತರಿಗೆ ಕನಿಷ್ಟ 2 ಸ್ಥಾನಗಳನ್ನು ನೀಡುವಂತೆ ಬೇಡಿಕೆಯಿಟ್ಟಿದ್ದರು.‌ ಅದಕ್ಕೆ ಸಭೆ ಸಹ ಒಪ್ಪಿಗೆಯನ್ನು ಸೂಚಿಸಿತ್ತಾದರೂ ಕಟ್ಟಕಡೆಗೆ ಅದು ಒಂದೇ ಒಂದು ಸ್ಥಾನಕ್ಕೆ ಇಳಿಯಿತು. ಅದೂ ಸಹ 1930 ರಿಂದಲೂ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದ ಬಾಬು ಜಗಜೀವನ್ ರಾಮ್ ಅವರಿಗೆ ಕಾಂಗ್ರೆಸ್ ಆ ಸ್ಥಾನ ನೀಡಿತ್ತು.‌

ಇಲ್ಲಿ ವಿಚಿತ್ರವಾದ ಸಂಗತಿಯೊಂದಿದೆ, ಅದನ್ನು ಬಾಬಾಸಾಹೇಬರು ಹೀಗೆ ಬರೆದುಕೊಂಡಿದ್ದಾರೆ, ಗಮನಿಸಿ, "ಕಾರ್ಯಕಾರಿ ಮಂಡಳಿಗೆ ಸೇರಲು ಶ್ರೀ ಜಗಜೀವನ್ ರಾಮ್ ಅವರಿಗೆ ನೀಡಿದ ಪ್ರಸ್ತಾಪವನ್ನು ಅವರು ಒಪ್ಪಿಕೊಂಡಿದ್ದಾರೆ. ಕಾರ್ಯಕಾರಿ ಮಂಡಳಿಯಲ್ಲಿ ಪರಿಶಿಷ್ಟ ವರ್ಗಗಳಿಗೆ ಪ್ರಾತಿನಿಧ್ಯದ ಅಸಮರ್ಪಕತೆಯನ್ನು ವಿರೋಧಿಸಿ ನಾನು ಪ್ರಧಾನಿಗೆ ತಂತಿ (ಪತ್ರ) ಕಳುಹಿಸಿದಾಗ, ಕಾರ್ಯಕಾರಿ ಮಂಡಳಿಯಲ್ಲಿ ಹೆಚ್ಚಿನ ಪ್ರಾತಿನಿಧ್ಯಕ್ಕಾಗಿ ಪರಿಶಿಷ್ಟ ವರ್ಗಗಳ ಪರವಾಗಿ ನಾನು ಮಾಡಿದ ಹಕ್ಕನ್ನು ಬೆಂಬಲಿಸಿ ಶ್ರೀ ಜಗಜೀವನ್ ರಾಮ್ ಅವರೂ ಸ್ವತಃ ಪತ್ರಿಕೆಗಳಿಗೆ ಹೇಳಿಕೆ ನೀಡಿದ್ದರು. ಆದರೆ ಪರಿಶಿಷ್ಟ ವರ್ಗಗಳಿಗೆ ಪ್ರಾತಿನಿಧ್ಯ ಹೆಚ್ಚಿಸಲು ಕಾಂಗ್ರೆಸ್ ಒಪ್ಪದಿದ್ದರೂ, ಶ್ರೀ ಜಗಜೀವನ್ ರಾಮ್ ಅವರು ಕಾಂಗ್ರೆಸ್ ಆಹ್ವಾನವನ್ನು ಒಪ್ಪಿಕೊಂಡಿದ್ದರು!

ಸಿಮ್ಲಾ ಒಪ್ಪಂದದಂತೆ ಕನಿಷ್ಠ ಎರಡು ಸ್ಥಾನಗಳನ್ನು ದಲಿತರಿಗೆ ನೀಡದಿದ್ದುದು ಮೊದಲನೇ ಗಂಭೀರವಾದ ವಿಷಯ, ಎರಡನೇ ಗಂಭೀರವಾದ ವಿಷಯ ಏನೆಂದರೆ ಆರಂಭದಲ್ಲಿ ಡಾ.ಅಂಬೇಡ್ಕರ್ ಅವರು ಪ್ರತಿಪಾದಿಸಿ, ಒತ್ತಾಯಿಸಿದ್ದ ದಲಿತರ ಎರಡು ಸ್ಥಾನಗಳ ಪ್ರಾತಿನಿಧ್ಯ ಬೇಡಿಕೆಯನ್ನು ಬೆಂಬಲಿಸಿ, ಸಾರ್ವಜನಿಕವಾಗಿ, ಪತ್ರಿಕೆಗಳಿಗೆ ಹೇಳಿಕೆ ನೀಡಿದ್ದ ವ್ಯಕ್ತಿಯೇ ಮಧ್ಯಂತರ ಸರ್ಕಾರದ ದಲಿತರ ಪ್ರತಿನಿಧಿಯಾಗಿ ಆಯ್ಕೆಯಾಗಿ ನಿಂತಿದ್ದು! ಇಡೀ ಶೋಷಿತ ಸಮುದಾಯಗಳ ಪ್ರತಿನಿಧಿಯಾಗಿ ಡಾ.ಅಂಬೇಡ್ಕರ್ ಅವರು ಸಾಮಾಜಿಕ ಹೋರಾಟ ರೂಪಿಸಿದರೂ 'ಮಧ್ಯಂತರ ಸರ್ಕಾರದ' ಪ್ರತಿನಿಧಿತ್ವವನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಇದನ್ನು ಬಾಬು ಜಗಜೀವನ್ ರಾವ್ ಅವರೂ‌ ಸಹ ವಿರೋಧಿಸದೆ ತಣ್ಣನೆ ಸುಮ್ಮನಾಗಿ ಮಧ್ಯಂತರ ಸರ್ಕಾರದ ದಲಿತ ಪ್ರತಿನಿಧಿಯಾಗಿ ಕಾಂಗ್ರೆಸ್ ಜೊತೆಗೆ ನಿಲ್ಲುತ್ತಾರೆ. ಡಾ.ಅಂಬೇಡ್ಕರ್ ಅವರು ಜಗಜೀವನ್ ರಾಮ್ ಅವರ ಆಯ್ಕೆ ಸಮರ್ಪಕ ಪ್ರತಿನಿಧಿತ್ವವಲ್ಲ, ಬದಲಿಗೆ “ಪ್ರತಿನಿಧಿತ್ವದ ಕೊರತೆಯನ್ನು ಮುಚ್ಚುವ ಕಾಂಗ್ರೇಸ್ ನ ಪ್ರಯತ್ನ ಎಂದು ಟೀಕಿಸುತ್ತಾರೆ. ಜಗಜೀವನ್ ರಾಮ್ ಅವರು ಕಾಂಗ್ರೆಸ್‌ನ ಭಾಗವಾಗಿದ್ದುದರಿಂದ ಕಾಂಗ್ರೆಸ್ ನಿರ್ಧಾರಗಳನ್ನು ಹೆಚ್ಚು ಅನುಸರಿಸಬೇಕಾಗುತ್ತದೆ,
ಪರಿಶಿಷ್ಟ ಜಾತಿಗಳ ಪರವಾಗಿ ಬಲವಾದ ಧ್ವನಿಯಾಗಲು ಸಾಧ್ಯವಾಗುವುದಿಲ್ಲ ಎಂಬುದು ಅಂಬೇಡ್ಕರ್ ಅವರ ಅಭಿಪ್ರಾಯವಾಗಿತ್ತು.

ಕಟ್ಟಕಡೆಯ ಪ್ರಶ್ನೆ: ಡಾ.ಅಂಬೇಡ್ಕರ್ ಅವರು ಶೋಷಿತರ ನಿಜವಾದ ಪ್ರತಿನಿಧಿಯಲ್ಲವೆ? ಸಿಮ್ಲಾ ಒಪ್ಪಂದ ಮುರಿದು ದಲಿತರ ಎರಡು ಸ್ಥಾನಗಳು, ಒಂದೇ ಒಂದು ಸ್ಥಾನಕ್ಕೆ ಇಳಿದದ್ದು ಯಾಕೆ? ಯಾರ ಅವಕಾಶವನ್ನು, ಯಾರು ತಪ್ಪಿಸಿದರು? ಬಾಬಾಸಾಹೇಬರಿಗಿಂತ ಇನ್ಯಾವ ಸಮರ್ಥ ನಾಯಕರು ಶೋಷಿತರ ನಿಜವಾದ ಧ್ವನಿಯಾಗಬಲ್ಲವರಿದ್ದರು? ನೀವೆ ವಿಚಾರ ಮಾಡಿ ಬಂಧುಗಳೆ.,

- ಅಪ್ಪಗೆರೆ ಡಿ ಟಿ ಲಂಕೇಶ್
(ಆಧಾರ: ಡಾ.ಬಿ.ಆರ್.ಅಂಬೇಡ್ಕರ್ ಅವರ ಬರಹ ಮತ್ತು ಭಾಷಣಗಳು, ಸಂಪುಟ -17, ಭಾಗ - 2, ಪುಟ - 256, 257, ಮತ್ತು ಅಂತರ್ಜಾಲ ಮಾಹಿತಿ)

18/10/2025
Want your business to be the top-listed Government Service in Bangalore?

Click here to claim your Sponsored Listing.

Location

Category

Website

Address

Bangalore