DCP Electronic City BCP

DCP Electronic City BCP

Share

Official page of DCP Electronic City BCP.

Public safety, Crime prevention alerts, Theft and Crime Property Recovery, Cyber Fraud Alerts, Law and Order Updates, Public and Police Community Building.

13/06/2026

ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ಸಬ್ ಬೀಟ್ ಸಂಖ್ಯೆ-23ರ ನೈದಿಲೆ ರೆಸಿಡೆನ್ಸಿ ಅಪಾರ್ಟ್‌ಮೆಂಟ್‌ನಲ್ಲಿ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಅವರು ಭಾಗವಹಿಸಿ, ಸೈಬರ್ ಅಪರಾಧ ತಡೆ, ತುರ್ತು ಸಹಾಯವಾಣಿ ಸಂಖ್ಯೆಗಳು (112, 1930), ಮಹಿಳಾ ಮತ್ತು ಮಕ್ಕಳ ಸುರಕ್ಷತೆ, ಮನೆ ಕಳ್ಳತನ ತಡೆ, ಒಬ್ಬರೇ ವಾಸಿಸುವ ಹಿರಿಯ ನಾಗರಿಕರ ಸುರಕ್ಷತೆ ಹಾಗೂ ಸಾರ್ವಜನಿಕ ಸುರಕ್ಷತೆಗೆ ಸಂಬಂಧಿಸಿದಂತೆ ಜಾಗೃತಿ ಮೂಡಿಸಿದರು. ಜೊತೆಗೆ, ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ಹಾಗೂ ಸುರಕ್ಷಿತ ಮತ್ತು ಅಪರಾಧಮುಕ್ತ ಸಮಾಜ ನಿರ್ಮಾಣಕ್ಕಾಗಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಯಿತು.

13/06/2026

ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯ ಪಬ್ ಹಾಗೂ ಬಾರ್ ಮಾಲೀಕರು/ನಿರ್ವಾಹಕರ ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ಇತ್ತೀಚಿನ ಕಾನೂನು ನಿಯಮಗಳು ಹಾಗೂ ಸರ್ಕಾರದ ಮಾರ್ಗಸೂಚಿಗಳ ಕುರಿತು ವಿವರವಾದ ಮಾಹಿತಿ ನೀಡಲಾಯಿತು. ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವುದು, ಅಪ್ರಾಪ್ತ ವಯಸ್ಕರಿಗೆ ಮದ್ಯ ಮಾರಾಟ ಮಾಡದಿರುವುದು, ನಿಗದಿತ ಸಮಯವನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಹಾಗೂ ಎಲ್ಲಾ ಕಾನೂನು ನಿಯಮಗಳನ್ನು ಅನುಸರಿಸುವಂತೆ ಸೂಚನೆ ನೀಡಲಾಯಿತು.
A meeting of Pub and Bar owners/managers within the limits of Parappana Agrahara Police Station was conducted. During the meeting, detailed information was provided regarding the latest laws, regulations, and government guidelines. The participants were instructed to strictly comply with all legal provisions, maintain public peace and order, refrain from serving alcohol to minors, adhere to prescribed operating hours, and ensure that no unlawful activities take place within their establishments.

13/06/2026

ಇಂದು ರಾಣಿ ಚೆನ್ನಮ್ಮ ಪಡೆ ತಂಡವು ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ಅಚಲ ವಿದ್ಯಾ ಮಂದಿರ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮವನ್ನು ನಡೆಸಿತು. ಕಾರ್ಯಕ್ರಮದಲ್ಲಿ ತುರ್ತು ಸಹಾಯವಾಣಿ ಸಂಖ್ಯೆಗಳಾದ (112, 1098, 1930), ಕೆಎಸ್‌ಪಿ ಆ್ಯಪ್, ಸೈಬರ್ ಸುರಕ್ಷತೆ, ಕಾಣೆಯಾದ ಹಾಗೂ ಅಪಹರಣ ಪ್ರಕರಣಗಳ ತಡೆಗಟ್ಟುವಿಕೆ, ಪೋಕ್ಸೋ ಕಾಯ್ದೆ, ಮಾದಕ ವಸ್ತುಗಳ ದುಷ್ಪರಿಣಾಮಗಳು ಹಾಗೂ ಆತ್ಮರಕ್ಷಣೆ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು
Today, the Rani Chennamma Squad conducted an awareness programme for students at Achala Vidya Mandira School under the limits of Hulimavu Police Station.

During the programme, awareness was created among the students regarding emergency helpline numbers (112, 1098, 1930), the KSP App, cyber safety, prevention of missing and kidnapping cases, the POCSO Act, the harmful effects of drugs, and self-defence techniques.

12/06/2026

ಇಂದು ಎಲೆಕ್ಟ್ರಾನಿಕ್ ಸಿಟಿ ವಿಭಾಗದ ರಾಣಿ ಚೆನ್ನಮ್ಮ ಪಡೆ ತಂಡವು ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯ ನ್ಯೂ ಕೇಂಬ್ರಿಡ್ಜ್ ಪಬ್ಲಿಕ್ ಸ್ಕೂಲ್ ನಲ್ಲಿ ವಿದ್ಯಾರ್ಥಿಗಳಿಗಾಗಿ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿತು.

ಈ ಸಂದರ್ಭದಲ್ಲಿ ತುರ್ತು ಸಂಪರ್ಕ ಸಂಖ್ಯೆಗಳು (Emergency Contacts), ಸೈಬರ್ ವಂಚನೆ ತಡೆ, ಕಾಣೆಯಾದ ಹಾಗೂ ಅಪಹರಣ ಪ್ರಕರಣಗಳ ಕುರಿತು ಮುಂಜಾಗ್ರತಾ ಕ್ರಮಗಳು, POCSO ಕಾಯ್ದೆ, ಮಾದಕ ವಸ್ತುಗಳ ದುಷ್ಪರಿಣಾಮಗಳು ಹಾಗೂ ವಿದ್ಯಾರ್ಥಿಗಳ ಸುರಕ್ಷತೆ ಕುರಿತು ಅರಿವು ಮೂಡಿಸಲಾಯಿತು.

ಜಾಗೃತ ವಿದ್ಯಾರ್ಥಿಗಳು – ಸುರಕ್ಷಿತ ಸಮಾಜದ ನಿರ್ಮಾತೃಗಳು.
Today, the Rani Chennamma Squad of Electronic City Division conducted an awareness programme for students at New Cambridge Public School under the limits of Parappana Agrahara Police Station.

During the programme, awareness was created on emergency contact numbers, cyber fraud prevention, safety measures related to missing and kidnapping cases, the POCSO Act, the harmful effects of drugs, and overall student safety.

Aware Students – Builders of a Safer Society.

12/06/2026

ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯ ಬಾರ್ ಮತ್ತು ವೈನ್ ಶಾಪ್ ಮಾಲೀಕರು/ನಿರ್ವಾಹಕರ ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ಮಾನ್ಯ ಡಿಜಿಪಿ ಅವರ ಸುತ್ತೋಲೆಯ ಕುರಿತು ವಿವರವಾದ ಮಾಹಿತಿ ನೀಡಿ,
ಅಪ್ರಾಪ್ತ ವಯಸ್ಕರಿಗೆ ಮದ್ಯ ಮಾರಾಟ ಮಾಡಬಾರದು ಎಂದು ಕಟ್ಟುನಿಟ್ಟಾಗಿ ಸೂಚನೆ ನೀಡಲಾಯಿತು.

ಜೊತೆಗೆ, ಕಾನೂನು ಮತ್ತು ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹಾಗೂ ಯಾವುದೇ ಉಲ್ಲಂಘನೆ ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನು ನೀಡಲಾಗಿರುತ್ತದೆ.

12/06/2026

ಇಂದು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ವಾರದ ಕವಾಯತು (Weekly Parade) ನಡೆಸಲಾಯಿತು. ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ಶಿಸ್ತು, ಕಾರ್ಯಕ್ಷಮತೆ ಮತ್ತು ಕರ್ತವ್ಯನಿಷ್ಠೆಯನ್ನು ಪರಿಶೀಲಿಸಲಾಯಿತು.

ಅಲ್ಲದೆ, ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವುದು, ಸಮಯೋಚಿತವಾಗಿ ಕರ್ತವ್ಯ ನಿರ್ವಹಿಸುವುದು, ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಇಲಾಖೆಯ ನಿಯಮಾನುಸಾರ ಕಾರ್ಯನಿರ್ವಹಿಸುವ ಕುರಿತು ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಲಾಯಿತು.

ಶಿಸ್ತುಬದ್ಧ ಪೊಲೀಸ್ ಸೇವೆ – ಸುರಕ್ಷಿತ ಸಮಾಜದ ಅಡಿಪಾಯ.

12/06/2026

ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ಸಬ್ ಬೀಟ್ ನಂ. 06ರ ಹುಳಿಮಾವು ಗ್ರಾಮ, ಜನತಾ ಕಾಲೋನಿ ಹಾಗೂ ಪೈ ಲೇಔಟ್ ಪ್ರದೇಶಗಳಲ್ಲಿ ಸಾರ್ವಜನಿಕರ ಸಭೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಹುಳಿಮಾವು ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ (PI) ರವರು ಸಾರ್ವಜನಿಕರ ಕುಂದು-ಕೊರತೆಗಳನ್ನು ಆಲಿಸಿ, ಅವುಗಳ ಪರಿಹಾರಕ್ಕಾಗಿ ಅಗತ್ಯ ಸಲಹೆ ಮತ್ತು ಸೂಚನೆಗಳನ್ನು ನೀಡಿದರು. ಜೊತೆಗೆ, ಸಾರ್ವಜನಿಕರ ಸುರಕ್ಷತೆಗಾಗಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು, ಸೈಬರ್ ಅಪರಾಧ ತಡೆ, ಮಹಿಳಾ ಮತ್ತು ಹಿರಿಯ ನಾಗರಿಕರ ಸುರಕ್ಷತೆ ಹಾಗೂ ತುರ್ತು ಸಂದರ್ಭಗಳಲ್ಲಿ 112 ಸಹಾಯವಾಣಿ ಬಳಕೆ ಕುರಿತು ಜಾಗೃತಿ ಮೂಡಿಸಲಾಯಿತು.

ಜನಸ್ನೇಹಿ ಪೊಲೀಸ್ – ಸುರಕ್ಷಿತ ಸಮಾಜದತ್ತ ನಮ್ಮ ಹೆಜ್ಜೆ.

A public meeting was conducted in Hulimavu Village, Janatha Colony, and Pai Layout areas under Sub-Beat No. 06 of Hulimavu Police Station limits.

During the meeting, the Police Inspector (PI) of Hulimavu Police Station interacted with the residents, listened to their grievances, and provided necessary guidance and suggestions for resolving their concerns. Awareness was also created regarding public safety measures, prevention of cyber crimes, safety of women and senior citizens, and the use of the 112 Emergency Helpline during emergencies.

People-Friendly Police – Our Step Towards a Safer Society.

11/06/2026

ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಹೆಬ್ಬಗೋಡಿ ಪೊಲೀಸ್ ಠಾಣೆಯ PSI ಸಂಜೀವ್ ನಾಯಕ್, ASI ರವಿನಾಯಕ್ ಹಾಗೂ HC ದೇವೇಂದ್ರಪ್ಪ ಅವರು 112 ತುರ್ತು ಸಹಾಯವಾಣಿಗೆ ಬಂದ ಮಾಹಿತಿಯ ಆಧಾರದ ಮೇಲೆ ತಕ್ಷಣ ಕಾರ್ಯಪ್ರವೃತ್ತರಾಗಿ ಚಿಂತನ್ ಮಡಿವಾಳ ರೈಲ್ವೆ ನಿಲ್ದಾಣಕ್ಕೆ ತೆರಳಿ, ಕೇರಳ ಮೂಲದ ವ್ಯಕ್ತಿಯೊಬ್ಬರು ಆತ್ಮಹಾನಿಗೆ ಯತ್ನಿಸುತ್ತಿದ್ದ ಸಂದರ್ಭವನ್ನು ಸಮಯೋಚಿತವಾಗಿ ತಡೆದು, ಅವರನ್ನು ಸುರಕ್ಷಿತವಾಗಿ ರಕ್ಷಿಸಿ ಅಮೂಲ್ಯ ಜೀವವನ್ನು ಉಳಿಸಿದರು.
ಪೊಲೀಸ್ ಸಿಬ್ಬಂದಿಯವರ ಈ ಮಾನವೀಯ ಕಾರ್ಯ, ಕರ್ತವ್ಯನಿಷ್ಠೆ ಹಾಗೂ ಸಮಯಪ್ರಜ್ಞೆಯನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿ ಅಭಿನಂದಿಸಿದ್ದಾರೆ.
"ಸೇವೆ, ಸುರಕ್ಷತೆ ಮತ್ತು ಮಾನವೀಯತೆ" ಎಂಬ ಪೊಲೀಸ್ ಧ್ಯೇಯವನ್ನು ಈ ಕಾರ್ಯ ಮತ್ತೊಮ್ಮೆ ಸಾಬೀತುಪಡಿಸಿದೆ.

Want your business to be the top-listed Government Service in Bangalore?

Click here to claim your Sponsored Listing.

Location

Website

Address

Office Of Deputy Commissioner Of Police, Electronic City Division, Hebbagodi, Bommasandra
Bangalore
560099