Mala B Narayan Rao - Basavakalyan

Mala B Narayan Rao - Basavakalyan

Share

ದಿವಂಗತ ಶ್ರೀ ಬಿ ನಾರಾಯಣರಾವ್ ಅವರ ಹೆಂಡತಿ
ಕೆಪಿಸಿಸಿ ಬಸವಕಲ್ಯಾಣ ಕ್ಷೇತ್ರದ ಶಾಸಕ ಅಭ್ಯರ್ಥಿ 2021

02/10/2025

'ಅಹಿಂಸೆ ದುರ್ಬಲರ ಶಸ್ತ್ರವಲ್ಲ, ಅದು ಶೂರರ ಶಕ್ತಿ ' ಎಂದು ಜಗತ್ತಿಗೆ ಬೋಧಿಸಿದ ಮಹಾತ್ಮ ಗಾಂಧೀಜಿ ಅವರ ಜಯಂತಿಯಂದು ಗೌರವದ ನಮನಗಳು

ಬಾಪೂಜಿ ಅವರ ತತ್ವ ಸಂದೇಶಗಳು ಇಂದಿಗೂ ಪ್ರಸ್ತುತವಾಗಿಯೇ ಇದೆ.

ವಿಶ್ವ ಅಹಿಂಸಾ ದಿನದಂದು, ಮಾನವೀಯತೆ, ಸಹಿಷ್ಣುತೆ ಹಾಗೂ ಪರಸ್ಪರ ಗೌರವದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ.

ಗಾಂಧಿ ಜಯಂತಿ ಹಾಗೂ ವಿಶ್ವ ಅಹಿಂಸಾದಿನದ ಹಾರ್ದಿಕ ಶುಭಾಶಯಗಳು


02/10/2025

ದುರ್ಗಾಮಾತೆಯ ಶಕ್ತಿಪೂಜೆಗೆ ವಿಜಯದಶಮಿ ಶ್ರೇಷ್ಠ ದಿನ.

ಸತ್ಯದ ವಿಜಯ, ಅಸತ್ಯದ ನಾಶ, ಧರ್ಮದ ಬಲ ಹಾಗೂ ಅಧರ್ಮದ ಶಮನಕ್ಕೆ ಪ್ರತೀಕವಾದ ಈ ಹಬ್ಬವು ನಮ್ಮೆಲ್ಲರ ಬದುಕಿಗೆ ಶಕ್ತಿ, ಧೈರ್ಯ ಮತ್ತು ಸತ್ಯನಿಷ್ಠೆ ನೀಡಲಿ.

ಈ ವಿಜಯದಶಮಿ ಪ್ರತಿಯೊಬ್ಬರ ಜೀವನದಲ್ಲೂ ಸಕಾರಾತ್ಮಕ ಚಿಂತನೆ, ಹೊಸ ಪ್ರೇರಣೆ ಮತ್ತು ಸಫಲತೆಗೆ ದಾರಿ ಮಾಡಿಕೊಡಲಿ.

ಸರ್ವರಿಗೂ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು

#ವಿಜಯದಶಮಿ

05/09/2025

ಪ್ರವಾದಿ ಮಹಮ್ಮದ್ ಅವರ ಜನ್ಮದಿನವಾದ ಈದ್ ಮಿಲಾದ್ ನ ಈ ಪವಿತ್ರ ಸಂದರ್ಭದಲ್ಲಿ, ಎಲ್ಲಾ ಮುಸ್ಲಿಂ ಸಹೋದರ ಸಹೋದರಿಯರಿಗೆ ಹೃತ್ಪೂರ್ವಕ ಶುಭಾಶಯಗಳು.
ಈ ಹಬ್ಬವು ಎಲ್ಲರ ಬದುಕಿನಲ್ಲಿ ಶಾಂತಿ, ಸಹಾನುಭೂತಿ ಮತ್ತು ಭ್ರಾತೃತ್ವದ ಮೌಲ್ಯಗಳನ್ನು ವೃದ್ಧಿಸಲಿ.
ಸಮಾಜದಲ್ಲಿ ಸೌಹಾರ್ದತೆ ಮತ್ತು ಏಕತೆ ಬೆಳೆಸುವ ಶಕ್ತಿಯನ್ನು ಈ ಹಬ್ಬ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

20/08/2025

ಮಾಹಿತಿ ತಂತ್ರಜ್ಞಾನದ ಪಿತಾಮಹ, ಭಾರತರತ್ನ,ಶ್ರೀ ರಾಜೀವ್ ಗಾಂಧಿರವರ ಜನ್ಮದಿನದ ನೆನಪಿನಲ್ಲಿ ಆಚರಿಸಲಾಗುವ ರಾಷ್ಟ್ರೀಯ ಸದ್ಭಾವನಾ ದಿನದಂದು ಗೌರವದ ನಮನಗಳನ್ನು ಸಲ್ಲಿಸುತ್ತೇನೆ. ಪಂಚಾಯತ್ ರಾಜ್ ವ್ಯವಸ್ಥೆಗೆ ಹೊಸ ಸ್ವರೂಪ, ಮತದಾನ ವಯಸ್ಸಿನ ಇಳಿಕೆ ಮುಂತಾದ ಕಾರ್ಯಕ್ರಮಗಳ ಮೂಲಕ ಆಧುನಿಕ ಭಾರತದ ಶಿಲ್ಪಿ ಎಂಬ ಖ್ಯಾತಿಗಳಿಸಿದ್ದಾರೆ. ಅವರ ವೈಜ್ಞಾನಿಕ ಚಿಂತನೆಗಳು, ದೇಶದ ಬಗೆಗಿನ ಕಾಳಜಿ ಎಲ್ಲರಿಗೂ ಮಾದರಿಯಾಗಿದೆ.



20/08/2025

ಸಾಮಾಜಿಕ ನ್ಯಾಯದ ಹರಿಕಾರ, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಡಿ. ದೇವರಾಜ ಅರಸು ಅವರ ಜನ್ಮದಿನದಂದು ಗೌರವ ನಮನಗಳು. ರಾಜ್ಯದಲ್ಲಿ ಉಳುವವನೇ ಹೊಲದೊಡೆಯ ಕಾಯ್ದೆ, ವೃದ್ಧಾಪ್ಯ ವೇತನ, ಸ್ಟೈಫೆಂಡರಿ, ಭಾಗ್ಯಜ್ಯೋತಿ, ಉಚಿತ ನಿವೇಶನ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದು, ರಾಜ್ಯದ ಸಮಗ್ರ ಅಭಿವೃದ್ಧಿಗೆ ಅವರ ಸೇವೆ ಅಪಾರ.


17/08/2025

ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ತುರ್ತು ಸಂದರ್ಭಗಳಲ್ಲಿ ಮೀನುಗಾರರ ನೆರವಿಗೆ ಧಾವಿಸಲು ಕರಾವಳಿಯ ಮೂರು ಜಿಲ್ಲೆಗಳಲ್ಲಿ ವಿಶೇಷ ಸಮುದ್ರ (SEA) ಆ್ಯಂಬುಲೆನ್ಸ್ ಸೇವೆ ಆಂಭಿಸಲಾಗುತ್ತಿದೆ.

ಸಮುದ್ರದಲ್ಲಿ ಮೀನುಗಾರಿಕೆ ಸಂದರ್ಭದಲ್ಲಿ ಅಪಘಾತ ಅಥವಾ ತೀವ್ರ ಅನಾರೋಗ್ಯ ಸಮಸ್ಯೆ ಎದುರಾದಲ್ಲಿ ಸೀ ಆ್ಯಂಬುಲೆನ್ಸ್‌ಗಳು ಜೀವರಕ್ಷಕ ಆರೋಗ್ಯ ಸೇವೆ ಒದಗಿಸಲಿವೆ.

ಅಗತ್ಯ ವೈದ್ಯಕೀಯ ಉಪಕರಣಗಳು, ಬೆಂಕಿ ನಂದಕ ಸಾಧನಗಳು ಮತ್ತು ಜೀವ ರಕ್ಷಕ ಪರಿಕರಗಳನ್ನು ಸೀ ಆ್ಯಂಬುಲೆನ್ಸ್‌ಗಳು ಒಳಗೊಂಡಿರುತ್ತವೆ.





16/08/2025

ನಮ್ಮ ಹೃದಯದಲ್ಲಿ ಪ್ರೀತಿ, ಕರುಣೆ, ಸತ್ಯದ ಬೀಜ ಬಿತ್ತುವ ದಿನವಾಗಲಿ ಇಂದಿನ ಹಬ್ಬ.

ಎಲ್ಲರಿಗೂ ಶ್ರೀ ಕೃಷ್ಣಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು ✨🙏




#ಕೃಷ್ಣಜನ್ಮಾಷ್ಟಮಿ
#ಶ್ರೀಕೃಷ್ಣ

Photos from Mala B Narayan Rao - Basavakalyan's post 15/08/2025

ಇಂದು ಜಿಲ್ಲಾಡಳಿತ ಬೀದರ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಜರುಗಲಿರುವ 79 ನೇ ಧ್ವಜಾರೋಹಣ ಕಾರ್ಯಕ್ರಮವನ್ನು ನೆಹರೂ ಕ್ರೀಡಾಂಗಣದಲ್ಲಿ ನೆರವೇರಿಸಲಾಯಿತು.ಈ ಸಂಧರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಅವರ ಅಮೃತ ಹಸ್ತದಿಂದ ಧ್ವಜಾರೋಹಣ ನೆರವೇರಿಸಲಾಯಿತು ಕಾರ್ಯಕ್ರಮದಲ್ಲಿ ಸಂಸದರಾದ ಸಾಗರ ಖಂಡ್ರೆ, ಶಾಸಕರಾದ ಶೈಲೇಂದ್ರ ಬೆಲ್ದಾಳೆ, ಬಸವರಾಜ ಜಾಬಶೆಟ್ಟಿ, ಮಹಮ್ಮದ್ ಗೌಸ್,ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ,ಜಿ. ಪ. ಕಾರ್ಯನಿರ್ವಾಧಿಕಾರಿ ಗಿರೀಶ ಬಡೋಲೇ, ಪ್ರದೀಪ ಗುಂಟೆ ಸೇರಿದಂತೆ ಗಣ್ಯರು ಪ್ರಮುಖರು ಭಾಗಿಯಾಗಿದ್ದರು.

15/08/2025

ಸ್ವಾತಂತ್ರ್ಯ ದಿನಾಚರಣೆ ದೇಶದ ಸಮಸ್ತ ಜನತೆಯ ಸಂಭ್ರಮದ ದಿನ. ಭಾರತಾಂಬೆಯನ್ನು ದಾಸ್ಯದಿಂದ ಬಿಡುಗಡೆ ಮಾಡಲು ಅಸಂಖ್ಯಾತ ಜನರು ಬಲಿದಾನಗೈದರು. ಕೋಟ್ಯಂತರ ಜನರು ಹೋರಾಡಿದರು. ದೇಶ ಸ್ವಾತಂತ್ರ್ಯ ಪಡೆಯಲು ಸಮರ್ಪಿಸಿಕೊಂಡ ಎಲ್ಲರಿಗೂ ಗೌರವ ನಮನಗಳು.

ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು.



#79





08/08/2025

ನಾಡಿನ ಸಮಸ್ತ ಜನತೆಗೆ ಶ್ರೀ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು.

ಶ್ರೀ ವರಮಹಾಲಕ್ಷ್ಮಿ ದೇವಿ ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ಆರೋಗ್ಯ, ಐಶ್ವರ್ಯ ನೆಮ್ಮದಿ ಕೊಟ್ಟು ಕಾಪಾಡಲಿ.

#ವರಮಹಾಲಕ್ಷ್ಮಿ

06/08/2025

ರಾಜ್ಯದ ಗೃಹ ಸಚಿವರು,
ಸಮಾಜ ಸೇವಕ ಮತ್ತು ದಲಿತ ಸಮುದಾಯದ ಶ್ರೇಷ್ಠ ನಾಯಕ ಡಾ. ಜಿ. ಪರಮೇಶ್ವರ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಮತ್ತು ಜನಸೇವೆ ಮಾಡಲು ಇನ್ನಷ್ಟು ಶಕ್ತಿಯನ್ನು ನೀಡಲಿ. ಸಮಾಜ ಸುಧಾರಣೆಯಲ್ಲಿಯೂ, ಪ್ರಗತಿಪರ ರಾಜಕೀಯದಲ್ಲಿಯೂ ನಿಮ್ಮ ಕೇಂದ್ರೀಯ ಪಾತ್ರ ಸದಾ ಮುಂದುವರಿಯಲಿ ಎಂದು ಹಾರೈಸುತ್ತೇವೆ.














#ಜನ್ಮದಿನಶುಭಾಶಯಗಳು

Photos from Mala B Narayan Rao - Basavakalyan's post 03/08/2025

ನುಡಿದಂತೆ ನಡೆದ ಹಾಗೂ ನಡೆಯುತ್ತಿರುವ, ಭಾಗ್ಯಗಳ ಸರದಾರ, ರಾಜ್ಯ ಕಂಡ ಧೀಮಂತ ನಾಯಕರು, ನಮ್ಮ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

ತಾಯಿ ಚಾಮುಂಡೇಶ್ವರಿ ನಿಮಗೆ ಉತ್ತಮ ಅರೋಗ್ಯ, ದೀರ್ಘಾಯುಷ್ಯ, ಶಾಂತಿ ಮತ್ತು ಸಮೃದ್ಧಿಯನ್ನು ನೀಡಿ ಆಶೀರ್ವದಿಸಲಿ ಎಂದು ಹಾರೈಸುತ್ತೇನೆ.







Want your business to be the top-listed Government Service in Basavakalyan?

Click here to claim your Sponsored Listing.

Location

Telephone

Address

Basavakalyan