20/10/2024
ದಿನಾಂಕ 13.10.2024 ರಂದು ಹೊಸಬೆಳಕು ಆಶ್ರಮದಲ್ಲಿರುವ ನೊಂದ ಮನಸುಗಳ ಬದುಕಿಗೆ ಹೊಸ ಚೈತನ್ಯವನ್ನು ಒದಗಿಸುವ ಸಲುವಾಗಿ *ನಮ್ಮ ವೇದಿಕೆ ನಿಮ್ಮ ಪ್ರತಿಭೆ* ಎಂಬ ವಿಭಿನ್ನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಇದರ ಉದ್ಘಾಟನೆಯನ್ನು ಗಣ್ಯರಾದ ವಿಕ್ರಂ ಹೆಗ್ಡೆ ಕಣಜಾರು, ಜಗದೀಶ್ ತೆಂಡುಲ್ಕರ್ ರಂಗನಪಲ್ಕೆ, ರವಿ ಪಡ್ಡಮ್ ಹಿರಿಯಡ್ಕ, ಕರುಣಾಕರ ಶೆಟ್ಟಿ ಬಾರ್ಕೂರು ಇವರು ನೆರವೇರಿಸಿದರು ಹಾಗೂ ಯಕ್ಷಗಾನದ ಮೇರು ಕಲಾವಿದರಾದ ತಂಗಣ ಸುಧಾಕರ ಶೆಟ್ಟಿ ಉಪಸ್ಥಿತರಿದ್ದರು ಹಾಗೂ ಅಥಿತಿ ಗಣ್ಯರಿಗೆ ಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ತನಿಖಾ ತರುಣ್ ರವರು ಸ್ಮರಣಿಕೆಯನ್ನು ನೀಡಿ ಗೌರವಿಸಿದರು ಹಾಗೂ ನರಸಿಂಹ ಮೇಷ್ಟ್ರು ಇವರು ಕಾರ್ಯಕ್ರಮವನ್ನು ನಿರೂಪಿಸಿದರು.
*ಈ ವೇದಿಕೆಯಲ್ಲಿ ಪ್ರತಿ ಭಾನುವಾರ ದಂದು ಮುಕ್ತವಾಗಿ ತಮ್ಮ ಕಾರ್ಯಕ್ರಮವನ್ನು ನೀಡುವುದಕ್ಕೆಅವಕಾಶವಿರುತ್ತದೆ*