25/08/2026
ಭಾವಪೂರ್ಣ ಶ್ರದ್ಧಾಂಜಲಿ 💐
ಹೃದಯಕ್ಕೆ ಭಾರವಾಗುತ್ತಿದೆ…
ಕನ್ನಡಪರ ಹೋರಾಟಗಾರರು ಹಾಗೂ ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಲಹೆಗಾರರಾಗಿದ್ದ, ನಮ್ಮೆಲ್ಲರ ಪ್ರೀತಿಯ ಶ್ರೀ ಆರ್. ಚಂದ್ರಪ್ಪಣ್ಣ ಅವರು ನಮ್ಮನ್ನೆಲ್ಲ ಅಗಲಿ ಇಹಲೋಕ ತ್ಯಜಿಸಿರುವ ಸುದ್ದಿ ಅತ್ಯಂತ ದುಃಖವನ್ನುಂಟು ಮಾಡಿದೆ.
ಅವರ ಅಗಲಿಕೆ ಕನ್ನಡಪರ ಹೋರಾಟದ ಕ್ಷೇತ್ರಕ್ಕೆ ಹಾಗೂ ಜಯಕರ್ನಾಟಕ ಜನಪರ ವೇದಿಕೆಯ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ. ಸದಾ ಹೋರಾಟದ ಮನೋಭಾವದಿಂದ ಸಮಾಜದ ಪರವಾಗಿ ಧ್ವನಿ ಎತ್ತುತ್ತಿದ್ದ ಅವರ ಸೇವೆ, ಸರಳ ವ್ಯಕ್ತಿತ್ವ ಹಾಗೂ ಹೋರಾಟದ ಬದುಕು ಸದಾ ಸ್ಮರಣೀಯ.
ಭಗವಂತನು ಅಗಲಿದ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬದವರು, ಬಂಧು-ಬಳಗದವರು ಮತ್ತು ಅಪಾರ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
ಓಂ ಶಾಂತಿ 🙏🙏🙏