Manjula Nayak - A Inspiration

Manjula Nayak -  A Inspiration Contact information, map and directions, contact form, opening hours, services, ratings, photos, videos and announcements from Manjula Nayak - A Inspiration, Social service, Mangalore.

ಹಿಂಸೆ ಮತ್ತು ದ್ವೇಷದ ಭಾಷೆ ಪ್ರಜಾಪ್ರಭುತ್ವದ ಲಕ್ಷಣವಲ್ಲ, ಅದು ವೈಫಲ್ಯದ ಸಂಕೇತ​"ಬಿಜೆಪಿ ನಾಯಕ ಚಲವಾದಿ ನಾರಾಯಣಸ್ವಾಮಿ ಅವರೇ, 'ಕಾಂಗ್ರೆಸ್ ನಾ...
04/11/2026

ಹಿಂಸೆ ಮತ್ತು ದ್ವೇಷದ ಭಾಷೆ ಪ್ರಜಾಪ್ರಭುತ್ವದ ಲಕ್ಷಣವಲ್ಲ, ಅದು ವೈಫಲ್ಯದ ಸಂಕೇತ

​"ಬಿಜೆಪಿ ನಾಯಕ ಚಲವಾದಿ ನಾರಾಯಣಸ್ವಾಮಿ ಅವರೇ, 'ಕಾಂಗ್ರೆಸ್ ನಾಯಕರನ್ನು ತುಂಡು ತುಂಡಾಗಿ ಕತ್ತರಿಸಿ ಅರಬ್ಬಿ ಸಮುದ್ರಕ್ಕೆ ಎಸೆಯುತ್ತೇವೆ' ಎಂದು ಹೇಳುವ ಮೂಲಕ ನಿಮ್ಮ ಸಿದ್ಧಾಂತದ ಮತ್ತು ಸಂಸ್ಕೃತಿಯ ಅಸಲಿ ಮುಖವನ್ನು ಅನಾವರಣಗೊಳಿಸಿದ್ದೀರಿ. ರಾಜಕೀಯದಲ್ಲಿ ಸದ್ಧರ್ಮ, ಸೈದ್ಧಾಂತಿಕ ಸವಾಲುಗಳು ಮತ್ತು ನೀತಿ-ನಿಯಮಗಳ ಚರ್ಚೆ ಇರಬೇಕೇ ಹೊರತು, ರೌಡಿಸಂ ಮತ್ತು ಕೊಲೆ ಬೆದರಿಕೆಯ ಮಾತುಗಳಲ್ಲ. ನಿಮ್ಮ ಬೆದರಿಕೆಗಳಿಗೆ ಬೆದರಲು ಇದು ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ ಪಕ್ಷವೇ ಹೊರತು, ಹಿಂಬಾಗಿಲ ರಾಜಕೀಯ ಮಾಡುವ ಪಕ್ಷವಲ್ಲ.

​ನಿಮ್ಮ ಅಧಿಕಾರದ ಮದ ಮತ್ತು ಶಾಸನಬದ್ಧ ಹುದ್ದೆಯ ಘನತೆಯನ್ನು ಮರೆತು ಹಿಂಸೆಗೆ ಪ್ರಚೋದನೆ ನೀಡುತ್ತಿರುವುದು ನಿಮ್ಮ ಆಡಳಿತಾತ್ಮಕ ವೈಫಲ್ಯ ಮತ್ತು ಹತಾಶೆಯನ್ನು ತೋರಿಸುತ್ತದೆ. ನಾಲಿಗೆ ಹರಿಬಿಟ್ಟು ಸಮಾಜದಲ್ಲಿ ಶಾಂತಿ ಕದಡುವ ಯತ್ನವನ್ನು ಕನ್ನಡಿಗರು ಮತ್ತು ಪ್ರಜಾಪ್ರಭುತ್ವ ಪ್ರೇಮಿಗಳು ಎಂದಿಗೂ ಸಹಿಸುವುದಿಲ್ಲ. ಗಾಂಧೀಜಿಯವರ ಅಹಿಂಸೆಯ ಹಾದಿಯಲ್ಲಿ ಸಾಗುವ ನಮಗೆ ನಿಮ್ಮ ಬೆದರಿಕೆಗಳನ್ನು ಮೆಟ್ಟಿ ನಿಲ್ಲುವ ಧೈರ್ಯವೂ ಇದೆ, ಜನಮಾನಸದಲ್ಲಿ ನಿಮ್ಮ ಈ ವಿಧ್ವಂಸಕ ಆಲೋಚನೆಗಳಿಗೆ ಸಕ್ತ ಉತ್ತರ ನೀಡುವ ಶಕ್ತಿಯೂ ಇದೆ. ನಿಮ್ಮ ಕೊಲೆಗಡುಕ ನಾಲಿಗೆಗೆ ರಾಜ್ಯದ ಜನತೆ ಸೂಕ್ತ ಪಾಠ ಕಲಿಸಲಿದ್ದಾರೆ.

ಪ್ರಜಾಪ್ರಭುತ್ವದ ರಕ್ಷಣೆಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕರ್ನಾಟಕ ನಾರಿಯರ ಸಿಂಹಗರ್ಜನೆ 💥‘ಮತ ಕಳ್ಳತನ’ದ ಮೂಲಕ ಪ್ರಜಾಪ್ರಭುತ್ವದ ಕಂಠ ಹತೋಟಿ...
01/11/2026

ಪ್ರಜಾಪ್ರಭುತ್ವದ ರಕ್ಷಣೆಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕರ್ನಾಟಕ ನಾರಿಯರ ಸಿಂಹಗರ್ಜನೆ 💥

‘ಮತ ಕಳ್ಳತನ’ದ ಮೂಲಕ ಪ್ರಜಾಪ್ರಭುತ್ವದ ಕಂಠ ಹತೋಟಿ ಮಾಡಲು ಹೊರಟಿರುವ ಅಧಿಕಾರಶಾಹಿಯ ವಿರುದ್ಧ ರಾಹುಲ್ ಗಾಂಧಿಯವರು ಕರೆ ನೀಡಿದ ‘ಚಲೋ ದೆಹಲಿ’ ಚಳವಳಿಯಲ್ಲಿ ಇಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಕರ್ನಾಟಕದ ನಾರಿಯರ ಸೈನ್ಯದೊಂದಿಗೆ ಹೆಜ್ಜೆ ಹಾಕಿದೆ.

ಪ್ರಜಾಪ್ರಭುತ್ವದ ಕಗ್ಗೊಲೆಗೈದಿರುವ ಜ್ಞಾನೇಶ್ ಕುಮಾರ್ ಅವರು ತಮ್ಮ ಹುದ್ದೆಗೆ ಕೂಡಲೇ ರಾಜೀನಾಮೆ ನೀಡುವವರೆಗೂ, ದೇಶದ ನಾರಿಯರು ಈ ಸರ್ಕಾರದ ನೂರೆಂಟು ಕುತಂತ್ರಗಳ ವಿರುದ್ಧ ವಿಶ್ರಮಿಸುವ ಪ್ರಶ್ನೆಯೇ ಇಲ್ಲ.

ಜನಾದೇಶವನ್ನು ಕದ್ದು ಅಧಿಕಾರದ ದಾಹ ತೀರಿಸಿಕೊಳ್ಳುತ್ತಿರುವ ಅಸಂವಿಧಾನಿಕ ಶಕ್ತಿಗಳಿಗೆ ತಕ್ಕ ಪಾಠ ಕಲಿಸಲು, ಪ್ರಜಾಪ್ರಭುತ್ವದ ರಕ್ಷಣೆ ಹಾಗೂ ಮತದಾನದ ಪಾವಿತ್ರ್ಯವನ್ನು ಕಾಯಲು ನಮ್ಮ ಈ ಹೋರಾಟ ಕಡೆವರೆಗೂ ಮುಂದುವರಿಯಲಿದೆ.

​ ​ ​ ​
​
​ ​
​ ​

01/11/2026

ಅಧಿಕಾರದ ಮದ ಇಳಿಸೋಕೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕರ್ನಾಟಕದ ಸಿಂಹಿಣಿಯರು ಸಜ್ಜು 💪🔥

​
​

ನಾಡಿನ ಸಮಸ್ತ ಜನತೆಗೆ 71ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು💛❤️​ಕನ್ನಡ ಎಂದರೆ ಕೇವಲ ನುಡಿಯಲ್ಲ, ಅದೊಂದು ಅನಂತ ಭಾವ, ನಮ್ಮ ಅಸ್ಮಿತೆಯ...
01/11/2026

ನಾಡಿನ ಸಮಸ್ತ ಜನತೆಗೆ 71ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು💛❤️

​ಕನ್ನಡ ಎಂದರೆ ಕೇವಲ ನುಡಿಯಲ್ಲ, ಅದೊಂದು ಅನಂತ ಭಾವ, ನಮ್ಮ ಅಸ್ಮಿತೆಯ ತವರು, ಬದುಕಿನ ಹೆಮ್ಮೆಯ ಸಂಸ್ಕೃತಿ. ಭಾಷಾವಾರು ಪ್ರಾಂತ್ಯಗಳ ಉಳಿವಿಗಾಗಿ ನಮ್ಮ ಹಿರಿಯರು ನಡೆಸಿದ ದಶಕಗಳ ಹೋರಾಟ, ತ್ಯಾಗ-ಬಲಿದಾನ ಹಾಗೂ ಒಗ್ಗಟ್ಟಿನ ಇತಿಹಾಸವೇ ಇಂದಿನ ನಮ್ಮ ಸ್ವಾತಂತ್ರ್ಯದ ಅಡಿಪಾಯ.

​ಈ ನಾಡಿನ ಬಹುತ್ವ, ಸೌಹಾರ್ದತೆ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಅಮೂಲ್ಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ.

​ಬಹುತ್ವವೇ ಕನ್ನಡದ ಜೀವಾಳ, ಸೌಹಾರ್ದತೆಯೇ ಕರ್ನಾಟಕದ ಉಸಿರು!

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ!

ಉಕ್ಕಿನ ಮಹಿಳೆ, ಕ್ರಾಂತಿಯ ಜ್ವಾಲೆ - ಶ್ರೀಮತಿ ಇಂದಿರಾ ಗಾಂಧಿಯವರಿಗೆ ನಮನ 💐​ಭಾರತದ ಇತಿಹಾಸವನ್ನು ತನ್ನ ಉಕ್ಕಿನ ನಿರ್ಧಾರಗಳಿಂದ ಬರೆದ ಅಪ್ರತಿಮ...
30/10/2026

ಉಕ್ಕಿನ ಮಹಿಳೆ, ಕ್ರಾಂತಿಯ ಜ್ವಾಲೆ - ಶ್ರೀಮತಿ ಇಂದಿರಾ ಗಾಂಧಿಯವರಿಗೆ ನಮನ 💐

​ಭಾರತದ ಇತಿಹಾಸವನ್ನು ತನ್ನ ಉಕ್ಕಿನ ನಿರ್ಧಾರಗಳಿಂದ ಬರೆದ ಅಪ್ರತಿಮ ನಾಯಕಿ, ಶತ್ರುಪಡೆಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಸಿಂಹಿಣಿ, ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು💐

​ಇಂದಿರಾ ಗಾಂಧಿ ಎಂದರೆ ಕೇವಲ ಒಬ್ಬ ವ್ಯಕ್ತಿಯಲ್ಲ, ಅದೊಂದು ಶಕ್ತಿ. ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರಲು ಯತ್ನಿಸಿದ ಶತ್ರು ರಾಷ್ಟ್ರಗಳಿಗೆ ನಡುರಸ್ತೆಯಲ್ಲೇ ತಕ್ಕ ಶಾಸ್ತಿ ಮಾಡಿ, ಪಾಕಿಸ್ತಾನವನ್ನು ಇಬ್ಬಾಗಿಸಿ ಬಾಂಗ್ಲಾದೇಶ ಎಂಬ ಹೊಸ ರಾಷ್ಟ್ರವನ್ನೇ ಉದಯಿಸುವಂತೆ ಮಾಡಿದ ಧೀರ ಮಹಿಳೆ ಇಂದಿರಾ ಗಾಂಧಿಯವರು. ಜಾಗತಿಕ ವೇದಿಕೆಯಲ್ಲಿ ಅಮೆರಿಕದಂತಹ ಮಹಾಶಕ್ತಿಗಳ ಬೆದರಿಕೆಗೆ ಹೆದರದೆ, ಭಾರತದ ಧ್ವಜವನ್ನು ಎತ್ತಿ ಹಿಡಿದ ಅವರ ಕೆಚ್ಚೆದೆಯ ನಾಯಕತ್ವವನ್ನು ಜಗತ್ತು ಎಂದಿಗೂ ಮರೆಯಲು ಸಾಧ್ಯವಿಲ್ಲ.

​ಬ್ಯಾಂಕುಗಳ ರಾಷ್ಟ್ರೀಕರಣ, ರಾಜಧನ ರದ್ದುಗೊಳಿಸುವಿಕೆ ಹಾಗೂ ಬಡವರ ಪರವಾದ ಕ್ರಾಂತಿಕಾರಿ ನಿರ್ಧಾರಗಳ ಮೂಲಕ ದೇಶದ ಆರ್ಥಿಕತೆಗೆ ನವಚೈತನ್ಯ ನೀಡಿದವರು ಇಂದಿರಾ ಗಾಂಧಿಯವರು. ಪ್ರಾಣ ಬೆದರಿಕೆ ಕಣ್ಣಮುಂದಿದ್ದರೂ, ದೇಶದ ಏಕತೆ ಮತ್ತು ಅಖಂಡತೆಗಾಗಿ ತನ್ನ ದೇಹದ ಕೊನೆಯ ಹನಿ ರಕ್ತವನ್ನೂ ಧಾರೆ ಎರೆದ ಶ್ರೇಷ್ಠ ದೇಶಭಕ್ತೆ.

​"ನನ್ನ ದೇಹದ ಪ್ರತಿಯೊಂದು ಹನಿ ರಕ್ತವೂ ದೇಶದ ಬೆಳವಣಿಗೆಗೆ ಮತ್ತು ಬಲವರ್ಧನೆಗೆ ಕೊಡುಗೆ ನೀಡುತ್ತದೆ"
​ಎಂದು ಸಾರಿ ಹೇಳಿ, ದೇಶಕ್ಕಾಗಿಯೇ ಜೀವತ್ಯಾಗ ಮಾಡಿದ ಈ ಉಕ್ಕಿನ ಮಹಿಳೆಯ ಧೈರ್ಯ, ಕ್ರಾಂತಿ ಮತ್ತು ದೂರದೃಷ್ಟಿ ನಮ್ಮ ರಕ್ತದಲ್ಲಿ ಸದಾ ಉರಿಯುತ್ತಿರಲಿ.

​ ​
​ ​
​
​ ​ ​

Address

Mangalore

Website

Alerts

Be the first to know and let us send you an email when Manjula Nayak - A Inspiration posts news and promotions. Your email address will not be used for any other purpose, and you can unsubscribe at any time.

Shortcuts

Share

Category