KPYCC Mysuru - Rural SM

Website

KPYCC Mysuru - Rural SM Official Page of KPYCC Mysuru Rural Social Media

24/09/2026

ಕಮಲದ ಕಳ್ಳಾಟ ಬಟಾಬಯಲು...!
ಪ್ರಜಾಪ್ರಭುತ್ವದ ಕಗ್ಗೊಲೆಯ ಅಸಲಿ ಮುಖವಾಡ ಕಳಚಿಬಿದ್ದಿದೆ. ಇಬ್ಬರು ಚುನಾವಣಾ ಆಯುಕ್ತರೇ ಕಳೆದ 10 ತಿಂಗಳಲ್ಲಿ ಬರೋಬ್ಬರಿ 14 ಬಾರಿ ಚುನಾವಣಾ ಆಯೋಗದ ನಿರ್ಧಾರಗಳು "ಅಕ್ರಮ ಮತ್ತು ಕಾನೂನುಬಾಹಿರ" ಎಂದು ಎಚ್ಚರಿಸಿ ಆಕ್ಷೇಪಿಸಿದ್ದರು ಎಂದು The Indian Express () ವರದಿ ಬಯಲು ಮಾಡಿದೆ. ಮೋದಿ-ಶಾ ಕೈಗೊಂಬೆಯಾಗಿ ಸ್ವತಂತ್ರ ಸಾಂವಿಧಾನಿಕ ಸಂಸ್ಥೆಯನ್ನೇ ದುರುಪಯೋಗಪಡಿಸಿಕೊಂಡು, ಮತದಾರರ ಪಟ್ಟಿಯಲ್ಲೂ ಕಳ್ಳಾಟ ನಡೆಸಿರುವ ಕಮಲದ ಸರ್ಕಸ್ ದೇಶದ ಮುಂದಿಟ್ಟಿದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಲೂಟಿ ಮಾಡಲು ಹೊರಟಿರುವ ಬಿಜೆಪಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ.

💯

23/09/2026

"ಕೇಂದ್ರ ಸರ್ಕಾರ ನಡಿಯೋದೇ ರಾಜ್ಯ ಸರ್ಕಾರಗಳ ದುಡ್ಡಿನಿಂದ"

ಕಾಂಗ್ರೆಸ್‌ಗೆ ಬೈಯೋದನ್ನು ಬಿಟ್ಟರೆ ಬಿಜೆಪಿಗೆ ಬೇರೇನೂ ವಿಷಯವೇ ಇಲ್ಲ ಎಂದು ಸದನದಲ್ಲೇ ಕಮಲ ನಾಯಕರ ಬೆವರಿಳಿಸಿದ ಮಾನ್ಯ ಸಚಿವ ಸಂತೋಷ್ ಲಾಡ್.

ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳು ಕಟ್ಟೋ ತೆರಿಗೆ ಹಣದಿಂದಲೇ ಕೇಂದ್ರ ಸರ್ಕಾರ ಉಸಿರಾಡ್ತಿದೆ. ನಮ್ಮ ಹಣವನ್ನು ನುಂಗಿ, ನಮ್ಮ ರಾಜ್ಯಕ್ಕೇ ಪಾಲು ಕೊಡದೆ ವಂಚಿಸೋ ಕೇಂದ್ರ ಬಿಜೆಪಿ ಸರ್ಕಾರಕ್ಕೆ ತಕ್ಕ ಉತ್ತರ ಕೊಡುವ ಧೈರ್ಯ ಇರೋದು ಕಾಂಗ್ರೆಸ್‌ಗೆ ಮಾತ್ರ.

📍

21/09/2026

ವಿರೋಧಿಗಳೇ ತಲೆಬಾಗಿ ಒಪ್ಪಿಕೊಂಡ ಜನನಾಯಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್.

ಕೇವಲ 100 ದಿನಗಳಲ್ಲಿ ರಾಜ್ಯದ ಜನರಲ್ಲಿ ಹೊಸ ಭರವಸೆ ಮೂಡಿಸಿದ ಏಕೈಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಂದು ಸ್ವತಃ ಬಿಜೆಪಿ ಮುಖಂಡ ಹೆಚ್.ಎಂ. ವಿಶ್ವನಾಥ್ ಅವರೇ ಮುಕ್ತಕಂಠದಿಂದ ಹೊಗಳಿದ್ದಾರೆ.

"ಯಾವುದೇ ಕೆಲಸ ಕೈಗೆತ್ತಿಕೊಂಡರೂ ಅದನ್ನು ಮಾಡಿ ಮುಗಿಸುವ ತಾಕತ್ತು ಇರೋದು ಡಿಕೆಶಿಗೆ ಮಾತ್ರ" ಅನ್ನೋದು ಇಡೀ ರಾಜ್ಯದ ಜನರ ಅಚಲ ನಂಬಿಕೆ. ಕೆಲಸದ ಮುಂದೆ ವಿರೋಧಿಗಳ ಸುಳ್ಳು ರಾಜಕೀಯ ಮಂಡಿಯೂರಿ ನಿಂತಿದೆ.

🔥

20/09/2026

ನಿನ್ನ ಪ್ರಶ್ನೆಗಳಿಗೆ ಹೆದರೋಕೆ ಅದು ಮೋದಿಯಲ್ಲ, ಡಿ.ಕೆ. ಶಿವಕುಮಾರ್.

ವೇದಿಕೆ ಮೇಲೆ ಬಾಯಿ ಚಪಲಕ್ಕೆ ಪ್ರಶ್ನೆ ಕೇಳಿ ತಗ್ಲಾಕ್ಕೊಂಡ ಅಜಿತ್ ಹನಮಕ್ಕನವರ್‌ಗೆ ಸಿಕ್ತು ನೋಡಿ ಸರಿಯಾದ ಚಾಟಿ ಏಟು. ಮೋದಿಯವರ ಹಾಗೆ ಪ್ರೆಸ್‌ಮೀಟ್ ಅಂದ್ರೆ ಓಡಿಹೋಗೋ ಲೀಡರ್ ಅಲ್ಲ ನಮ್ಮ ಮುಖ್ಯಮಂತ್ರಿಗಳು.

ಮುಖಾಮುಖಿ ಕೂತು, ಕಣ್ಣಲ್ಲಿ ಕಣ್ಣಿಟ್ಟು, ಗೌತಮ್ ಅದಾನಿ ಭೇಟಿ ಹಿಂದಿನ ವಾಸ್ತವ ಏನು, ರಾಜ್ಯದ ಹೂಡಿಕೆ ಮತ್ತು ಅಭಿವೃದ್ಧಿ ಹೇಗಾಗಬೇಕು ಅಂತ ಎಳೆಎಳೆಯಾಗಿ ಬಿಡಿಸಿಟ್ಟಾಗ ಅಜಿತ್ ಮುಖದಲ್ಲಿ ನಗುವಿಲ್ಲ, ಬಣ್ಣವೇ ಇಳಿದುಹೋಯ್ತು. ಬಕೆಟ್ ಹಿಡಿಯೋ ಪತ್ರಕರ್ತರಿಗೆ ಈ ಕಪಾಳಮೋಕ್ಷ ಅಗತ್ಯವಿತ್ತು.

🔥

19/09/2026

ಎಸಿ ರೂಮಲ್ಲಿ ಕೂತು ಭಾಷಣ ಬಿಗಿಯುವವರ ನಡುವೆ, ತಾವೇ ಖುದ್ದಾಗಿ ಗ್ರೌಂಡ್‌ಗಿಳಿದು ಜನರ ಕಣ್ಣೀರು ಒರೆಸುವ ನಿಜವಾದ ಜನನಾಯಕ ಮಾನ್ಯ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್.

ಮೀನುಗಾರರ ಸಮಸ್ಯೆಗಳನ್ನು ಖುದ್ದು ಸ್ಥಳಕ್ಕೆ ತೆರಳಿ ಆಲಿಸಿ, ಅವರ ವ್ಯಾಪಾರ-ವಹಿವಾಟಿಗೆ ಯಾವುದೇ ಅಡ್ಡಿಯಾಗದಂತೆ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಲು ಡಿಸಿ ಮತ್ತು ಕಮಿಷನರ್‌ಗೆ ಸ್ಥಳದಲ್ಲೇ ಖಡಕ್ ಸೂಚನೆ ನೀಡಿದ್ದಾರೆ. ಮಾತಿಗಿಂತ ಕೃತಿಗೆ ಒತ್ತು ಕೊಟ್ಟು, ಪ್ರತಿಯೊಬ್ಬ ಶ್ರಮಿಕನ ಬೆನ್ನಿಗೆ ನಿಲ್ಲುವುದೇ ಕಾಂಗ್ರೆಸ್ ಸರ್ಕಾರದ ಜನಪರ ಬದ್ಧತೆ.

⚡ 🔥

18/09/2026

ಬಡವರು ದುಡಿದ ದುಡ್ಡನ್ನು ಖರ್ಚು ಮಾಡೋಕೂ ಟ್ಯಾಕ್ಸ್ ಹಾಕಿರಲ್ಲ, ನಿಮ್ಮದು ಯಾವ ಸೀಮೆ ಸರ್ಕಾರ ಮಾರಾಯ್ರೇ ?

UPI, Google Pay, Paytm ಮಾಡೋದಕ್ಕೂ ಶುಲ್ಕ ವಸೂಲಿ ಮಾಡಿ "ನಾವು ಖರ್ಚು ಮಾಡಿದ್ದೀವಿ, ರಿಕವರಿ ಮಾಡ್ಕೋಬೇಕಲ್ಲ" ಅಂತ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಕ್ಯಾಮೆರಾ ಮುಂದೆ ಸಮರ್ಥಿಸಿಕೊಳ್ತಿದ್ದಾರೆ. ಶ್ರೀಮಂತರ ಕೋಟಿ ಕೋಟಿ ಸಾಲ ಮನ್ನಾ ಮಾಡೋ ಬಿಜೆಪಿಗೆ, ಬಡವರು ತಿಂಡಿ ತಿಂದ ದುಡ್ಡಿನಲ್ಲೂ ಕಮಿಷನ್ ಬೇಕಂತೆ. ಇದು 'ಭಾರತೀಯ ಜನತಾ ಪಾರ್ಟಿ' ಅಲ್ಲ, ಅಪ್ಪಟ 'ಭಾರತೀಯ ಭ್ರಷ್ಟಾಚಾರ್ ಪಾರ್ಟಿ'

🚀 🔥

"ಅಬ್ ಕಿ ಬಾರ್ ಟ್ರಂಪ್ ಸರ್ಕಾರ್" ಅಂದಿದ್ದಕ್ಕೆ ಮೋದಿಜಿಗೆ ಸಿಕ್ತು ನೋಡಿ ಬರ್ತ್‌ಡೇ ಗಿಫ್ಟ್. 😂🎁ರಷ್ಯಾದಿಂದ ಆಯಿಲ್ ತಂದ ಖುಷಿಗೆ ಆಪ್ತಮಿತ್ರ ಟ್...
17/09/2026

"ಅಬ್ ಕಿ ಬಾರ್ ಟ್ರಂಪ್ ಸರ್ಕಾರ್" ಅಂದಿದ್ದಕ್ಕೆ ಮೋದಿಜಿಗೆ ಸಿಕ್ತು ನೋಡಿ ಬರ್ತ್‌ಡೇ ಗಿಫ್ಟ್. 😂🎁

ರಷ್ಯಾದಿಂದ ಆಯಿಲ್ ತಂದ ಖುಷಿಗೆ ಆಪ್ತಮಿತ್ರ ಟ್ರಂಪ್ ಕೊಟ್ಟಿದ್ದಾರೆ "100% ಟ್ಯಾರಿಫ್" ರಿಟರ್ನ್ ಗಿಫ್ಟ್. ವಿಶ್ವಗುರುವಿನ 'ಹಗ್ ಡಿಪ್ಲೊಮಸಿ' ನೋಡಿ ಇಡೀ ಪ್ರಪಂಚವೇ ನಗ್ತಿದೆ. ಅಮೆರಿಕಾಗೆ ಹೋಗಿ ಡೊಳ್ಳು ಬಾರಿಸಿ ಬಂದಿದ್ದಕ್ಕೆ ದೇಶದ ರಫ್ತು ವ್ಯಾಪಾರಕ್ಕೆ ಬಿತ್ತು ನೋಡಿ ಸರಿಯಾದ ಏಟು.

🌟

16/09/2026

ಇಷ್ಟು ದಿನ ತಟ್ಟೆ ಬಡಿದಿದ್ದಾಯ್ತು, ಇವಾಗ ದೀಪ ಹಚ್ಚಿ ಬೀಳಬೇಕಂತೆ ನೋಡ್ರಪ್ಪಾ 😂🪔
ದೇಶದಲ್ಲಿ ನಿರುದ್ಯೋಗ, ಬೆಲೆ ಏರಿಕೆ, ಬಡವರ ಸಮಸ್ಯೆಗಳಿಗೆ ಪರಿಹಾರ ಇಲ್ಲ... ಆದರೆ ಮೋದಿ ಅವರ ಹುಟ್ಟುಹಬ್ಬಕ್ಕೆ ಸಂಜೆ 6 ರಿಂದ 7 ರವರೆಗೆ ಮನೆಮನೆಗಳಲ್ಲಿ ದೀಪ ಹಚ್ಚಿ ಅಂತ ಬಿಜೆಪಿ ಅಧ್ಯಕ್ಷರು ಕರೆ ಕೊಡ್ತಾರೆ.

ಕೊರೊನಾ ಕಾಲದಲ್ಲಿ ಚಪ್ಪಾಳೆ-ತಟ್ಟೆ ತಟ್ಟಿಸಿ ಸರ್ಕಸ್ ಮಾಡಿಸಿದ್ರು, ಈಗ ಹುಟ್ಟುಹಬ್ಬಕ್ಕೂ ಜನರ ಕೈಲಿ ದೀಪ ಹಚ್ಚಿಸೋ ಹೊಸ ಗಿಮಿಕ್ ಶುರು ಮಾಡಿದ್ದಾರೆ.ಈ ನಾಟಕ ಕಂಪನಿಗೆ ಜನರೇ ನಗ್ತಿದ್ದಾರೆ.

💯

14/09/2026

ಬಾಯ್ಬಿಟ್ರೆ ಉದ್ದುದ್ದ ಭಾಷಣ, ಅಭಿವೃದ್ಧಿ ವಿಷಯಕ್ಕೆ ಬಂದ್ರೆ ಬಿಗ್ ಝೀರೋ! ಡಿಕೆಶಿ ಏಟಿಗೆ ಡೈಪರ್ ಸೂರ್ಯ ಸೈಲೆಂಟ್ 😂

"ಪಬ್ಲಿಕ್ ಟ್ರಾನ್ಸ್‌ಪೋರ್ಟ್ ಬಳಸಿ" ಅಂತ ಲೆಕ್ಚರ್ ಕೊಡೋ ಸೂರ್ಯ, ಸ್ವಂತ ಕಾರು ಬಿಟ್ಟು ದಿನಕ್ಕೊಂದು ದಿನ ಬಸ್ಸಲ್ಲಿ ಓಡಾಡಿದ್ದಾರಾ? ಕೇಂದ್ರದಲ್ಲೂ, ರಾಜ್ಯದಲ್ಲೂ ಡಬಲ್ ಇಂಜಿನ್ ಸರ್ಕಾರ ಇದ್ದಾಗ ಬೆಂಗಳೂರು ಟ್ರಾಫಿಕ್‌ಗೆ ಇಟ್ಟ ಕಲ್ಲೆಷ್ಟು? ಮಾಡಿದ ಕೆಲಸವೆಷ್ಟು? ಪ್ರಶ್ನೆ ಕೇಳಿದರೆ ಎಮೋಷನಲ್ ಡ್ಯಾಮೇಜ್ ಆಗಿ ಅಳೋ ನಾಟಕ ಮಾಡ್ತಾರೆ. ಇಂಥ ರೀಲ್ಸ್ ಎಂಪಿಗೆ ಜನರೇ ತಕ್ಕ ಉತ್ತರ ಕೊಡ್ತಾರೆ

🔥 💯

ಪಾಠ: ಭ್ರಷ್ಟಾಚಾರ...ಮಾಸ್ಟರ್: ಮೋಂಗ್ಲಿ...ಶಿಷ್ಯರು: ಕರ್ನಾಟಕದ ಕಮಿಷನ್ ಗಿರಾಕಿಗಳು.ಗಣಿ ಲೂಟಿ, ಜಮೀನು ಕಬಳಿಕೆ, ಕಮಿಷನ್ ದಂಧೆ ಮತ್ತು ಬೆಡ್ ಬ...
05/09/2026

ಪಾಠ: ಭ್ರಷ್ಟಾಚಾರ...
ಮಾಸ್ಟರ್: ಮೋಂಗ್ಲಿ...
ಶಿಷ್ಯರು: ಕರ್ನಾಟಕದ ಕಮಿಷನ್ ಗಿರಾಕಿಗಳು.

ಗಣಿ ಲೂಟಿ, ಜಮೀನು ಕಬಳಿಕೆ, ಕಮಿಷನ್ ದಂಧೆ ಮತ್ತು ಬೆಡ್ ಬ್ಲಾಕಿಂಗ್‌ನಲ್ಲಿ ಪಿಎಚ್‌ಡಿ ಪಡೆದ ಶಿಷ್ಯರಿಗೆ ಮೋಂಗ್ಲಿಯಿಂದ ಸ್ಪೆಷಲ್ ಕ್ಲಾಸ್: "ಜನರ ಕಣ್ಣಿಗೆ ಮಣ್ಣೆರಚಿ ದೇಶ ಲೂಟಿ ಹೊಡೆಯುವುದು ಹೇಗೆ ಅಂತ." ದೆಹಲಿ ಗುರುವಿನ ಮಾರ್ಗದರ್ಶನದಲ್ಲಿ ಸುಳ್ಳು ಮತ್ತು ಹಗರಣಗಳ ತರಬೇತಿ.

🌟

Address

Mysore
571101

Alerts

Be the first to know and let us send you an email when KPYCC Mysuru - Rural SM posts news and promotions. Your email address will not be used for any other purpose, and you can unsubscribe at any time.

Shortcuts

Share