29/08/2026
ಶಿಗ್ಗಾವಿ ನಗರದಲ್ಲಿ ಚಿರಂಜೀವಿ ಶ್ರೀ ಆಂಜನೇಯ ದೇವಸ್ಥಾನದಲ್ಲಿ ದೇವರಿಗೆ ಮೂತ್ರ ವಿಸರ್ಜನೆ ಮಾಡಿರುವ ಅವಮಾನಕಾರಿ ಕೃತ್ಯ ಖಂಡಿಸಿ ಜೆಡಿಎಸ್ ವತಿಯಿಂದ ಪ್ರತಿಭಟನೆ
ಶಿಗ್ಗಾವ್ ನಗರದಲ್ಲಿರುವ ಚಿರಂಜೀವಿ ಶ್ರೀ ಆಂಜನೇಯ ದೇವಸ್ಥಾನದಲ್ಲಿ ನಡೆದಿರುವ ಅವಮಾನಕಾರಿ ಕೃತ್ಯವನ್ನು ತೀವ್ರವಾಗಿ ಖಂಡಿಸಿ, ಹಾವೇರಿ ಜಿಲ್ಲಾ ಜೆಡಿಎಸ್ ಹಾಗೂ ಶಿಗ್ಗಾವ್ ನಗರ ಜೆಡಿಎಸ್ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಶಿಗ್ಗಾವಿ ತಹಶೀಲ್ದಾರ್ ಅವರ ಮುಖಾಂತರ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿ, ಇಂತಹ ಕೃತ್ಯ ಎಸಗಿರುವ ಮೊಹಮ್ಮದ್ ರಫೀಕ್ ಕದರ ಮಂಡಲಗಿ ಎಂಬ ಆರೋಪಿಗಳನ್ನು ಕೂಡಲೇ ಬಂಧಿಸಿ, ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಲಾಯಿತು.
ಪ್ರತಿಭಟನೆಯಲ್ಲಿ ಜೆಡಿಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಶ್ರೀ ಬಸಪ್ಪ ಯಾದವ, ಜೆಡಿಎಸ್ ಪಕ್ಷದ ಹಾವೇರಿ ಜಿಲ್ಲಾಧ್ಯಕ್ಷರಾದ ಶ್ರೀ ಮಂಜುನಾಥ ಎಸ್. ಗೌಡ ಶಿವಣ್ಣನವರು
ಶಿಗ್ಗಾವ್ ತಾಲೂಕು ಅಧ್ಯಕ್ಷರಾದ ಶ್ರೀ ಬಸ್ಸಟ್ಟೆಪ್ಪ ಗುದ್ಲಿಶೆಟ್ಟರ್, ರಾಣೇಬೆನ್ನೂರು ತಾಲೂಕು ಅಧ್ಯಕ್ಷರಾದ ಶ್ರೀ ನಿಂಗಪ್ಪ ಸತ್ಯಪ್ಪನವರ, ಈರಣ್ಣ ನವಲಗುಂದ, ನಾಗರಾಜು ಚೌಹಾಣ, ಶಿವಾನಂದ ಎಲಿಗಾರ, ಸಂಜೀವ ಮನ್ನಣ್ಣನವರ, ಜಿಲ್ಲಾ ಯುವ ಘಟಕ ಅಧ್ಯಕ್ಷರು ರುದ್ರಗೌಡ ಪಾಟೀಲ, ಗುರುರಾಜ್ ಗೊಜನೂರ, ಉಷಾ ಜಾಡ ಮಲ್ಲಿ, ಲಕ್ಷ್ಮಿ ಕಿರಣ ಹೊಳೆಯಮ್ಮನವರ, ಮಧು ಸಿದ್ದಣ್ಣನವರ ಸೇರಿದಂತೆ ಪಕ್ಷದ ವಿವಿಧ ಮುಖಂಡರು, ಮಹಿಳಾ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಜೆಡಿಎಸ್ ಹಾವೇರಿ ಜಿಲ್ಲಾಧ್ಯಕ್ಷರಾದ ಶ್ರೀ ಮಂಜುನಾಥ ಎಸ್. ಗೌಡ ಶಿವಣ್ಣನವರು, ಹಾಗೂ ಜೆಡಿಎಸ್ ಪಕ್ಷದ ಎಲ್ಲರು ಸೇರಿ ಚಿರಂಜೀವಿ ಶ್ರೀ ಆಂಜನೇಯ ದೇವಸ್ಥಾನದಿಂದ ತಹಶೀಲ್ದಾರ್ ಕಚೇರಿಯ ವರಗೆ ಬೃಹತ್ ಪಾದಯಾತ್ರೆ ಮೂಲಕ ತಹಶೀಲ್ದಾರ್ ಕಚೇರಿಗೆ ಬಂದು ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹಾವೇರಿ ಜಿಲ್ಲಾಧ್ಯಕ್ಷರಾದ ಶ್ರೀ ಮಂಜುನಾಥ ಎಸ್ ಗೌಡ ಶಿವಣ್ಣನವರು ಭಕ್ತ ಶ್ರೀ ಕನಕದಾಸ ಹುಟ್ಟಿರುವ ನಾಡು ಶ್ರೀ ಶಿಶುನಾಳ ಶರೀಫರು ಜನಿಸಿರುವ ನಾಡ ಆಗಿರುವಂತಹ ಹಾವೇರಿ ಜಿಲ್ಲೆ ಇಂತಹ ನಾಡಲ್ಲಿ ಇಂಥಹ ಅವಮಾನಕಾರಿ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ
“ದೇವಸ್ಥಾನ ಸೇರಿದಂತೆ ಯಾವುದೇ ಧಾರ್ಮಿಕ ಸ್ಥಳವನ್ನು ಅವಮಾನಿಸುವಂತಹ ಕೃತ್ಯಗಳನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಇಂತಹ ಕೃತ್ಯಗಳು ಮರುಕಳಿಸದಂತೆ ತಪ್ಪಿತಸ್ಥರ ವಿರುದ್ಧ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಬೇಕು. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ ಎಂಬ ಸಂದೇಶ ಸಮಾಜಕ್ಕೆ ಹೋಗುವ ರೀತಿಯಲ್ಲಿ ನ್ಯಾಯ ದೊರಕಬೇಕು.”
ಇಂತಹ ಹೇಯ ಕೃತ್ಯ ಎಸಗಿರುವ ಆರೋಪಿಗಳಿಗೆ ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.
“ಇಂತಹ ಕೃತ್ಯಗಳನ್ನು ಎಸಗುವವರಿಗೆ ಕಾನೂನಿನ ಬಗ್ಗೆ ಭಯ ಮೂಡುವ ರೀತಿಯಲ್ಲಿ ಕಠಿಣ ಕಾನೂನು ಕ್ರಮ ಜರುಗಬೇಕು. ಇಂತಹ ಗಂಭೀರ ಪ್ರಕರಣಗಳಲ್ಲಿ ಆರೋಪಿಗಳಿಗೆ ವಕೀಲರು ಜಾಮೀನು ದೊರೆಯದಂತೆ, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಆರೋಪಿಗಳು ಸುಲಭವಾಗಿ ಹೊರಬಂದರೆ, ಮುಂದೆಯೂ ಇಂತಹ ಕೃತ್ಯಗಳನ್ನು ಮಾಡಲು ಕೆಲವರಿಗೆ ಕಾನೂನಿನ ಭಯವಿಲ್ಲದಂತಾಗುವ ಸಾಧ್ಯತೆ ಇದೆ.
ಅದೇ ರೀತಿ, ಒಬ್ಬ ವ್ಯಕ್ತಿಯ ತಪ್ಪಿನಿಂದ ಇಡೀ ಸಮುದಾಯವನ್ನು ದೂಷಿಸುವಂತಾಗಬಾರದು. ನಮ್ಮ ನಡುವೆ ಸಹೋದರತ್ವದಿಂದ ಬದುಕುತ್ತಿರುವ ಅನೇಕ ಒಳ್ಳೆಯ ಮುಸ್ಲಿಂ ಬಾಂಧವರಿಗೆ ಇಂತಹ ಕೃತ್ಯಗಳಿಂದ ಅನಗತ್ಯವಾಗಿ ಕೆಟ್ಟ ಹೆಸರು ಬರುವಂತಾಗುತ್ತದೆ. ಆದ್ದರಿಂದ ತಪ್ಪು ಮಾಡಿದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ, ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಕಾಪಾಡಬೇಕು ಭಯ ಇರುವಂತೆ ಕಠಿಣ ಹಾಗೂ ನ್ಯಾಯಯುತ ಶಿಕ್ಷೆಯಾಗಬೇಕು ಧರ್ಮಸ್ಥಳಗಳ ಪಾವಿತ್ರ್ಯವನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ಇಂತಹ ಕೃತ್ಯಗಳು ಮರುಕಳಿಸದಂತೆ ಕಾನೂನು ತನ್ನ ಕೆಲಸವನ್ನು ಕಟ್ಟುನಿಟ್ಟಾಗಿ ಮಾಡಬೇಕು. ಎಂದು ಅವರು ಮನವಿ ಮಾಡಿದರು.”
#ಜೆಡಿಎಸ್ #ಹಾವೇರಿ #ಶಿಗ್ಗಾವ್ #ಪ್ರತಿಭಟನೆ #ನ್ಯಾಯಕ್ಕಾಗಿ_ಒತ್ತಾಯ #ಸಾಮಾಜಿಕ_ಸಾಮರಸ್ಯ