SDPI Haveri

Website Contact the organization

SDPI Haveri SDPI Haveri District Official Page
Politics For a Cause, Not For Career

ದಿನಾಂಕ 24-07-2026 ರಂದು ಹಾವೇರಿ ಜಿಲ್ಲೆಯ ಕನವಳ್ಳಿ ಗ್ರಾಮದಲ್ಲಿ ಎಸ್‌ಡಿಪಿಐ (SDPI) ಪಕ್ಷದ ತತ್ವಗಳು, ಸಿದ್ಧಾಂತಗಳು ಹಾಗೂ ಸಂಘಟನೆಯ ಉದ್ದೇಶ...
28/07/2026

ದಿನಾಂಕ 24-07-2026 ರಂದು ಹಾವೇರಿ ಜಿಲ್ಲೆಯ ಕನವಳ್ಳಿ ಗ್ರಾಮದಲ್ಲಿ ಎಸ್‌ಡಿಪಿಐ (SDPI) ಪಕ್ಷದ ತತ್ವಗಳು, ಸಿದ್ಧಾಂತಗಳು ಹಾಗೂ ಸಂಘಟನೆಯ ಉದ್ದೇಶಗಳ ಕುರಿತು ವಿಶೇಷ ಸಭೆ ನಡೆಯಿತು.

ಈ ಸಭೆಯಲ್ಲಿ ದಾವಣಗೆರೆ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಅವರ ಉಪಸ್ಥಿತಿಯಲ್ಲಿ ಕನವಳ್ಳಿ ಗ್ರಾಮದ ಮುಖಂಡರು ಹಾಗೂ ಪ್ರಮುಖರು ಭಾಗವಹಿಸಿ, ಎಸ್‌ಡಿಪಿಐ ಪಕ್ಷದ ನೀತಿ-ನಿಲುವುಗಳು, ಜನಪರ ಕಾರ್ಯಚಟುವಟಿಕೆಗಳು ಮತ್ತು ಸಂಘಟನೆ ವಿಸ್ತರಣೆಯ ಕುರಿತು ಸವಿಸ್ತಾರವಾಗಿ ಚರ್ಚಿಸಿದರು.

ಸಭೆಯ ಅಂತ್ಯದಲ್ಲಿ ಕನವಳ್ಳಿ ಗ್ರಾಮದಲ್ಲಿ ಎಸ್‌ಡಿಪಿಐ ಪಕ್ಷದ ಸಂಘಟನೆಯನ್ನು ಪ್ರಾರಂಭಿಸಿ, ಸ್ಥಳೀಯ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಮುಂದಿನ ಕಾರ್ಯಯೋಜನೆ ರೂಪಿಸುವ ಬಗ್ಗೆ ಮುಖಂಡರು ಇಂಗಿತ ವ್ಯಕ್ತಪಡಿಸಿದರು. ಜೊತೆಗೆ, ಎಸ್‌ಡಿಪಿಐ ಪಕ್ಷದ ಅಗತ್ಯತೆ ಮತ್ತು ಪರ್ಯಾಯ ರಾಜಕೀಯದ ಬಗ್ಗೆ ಸಹಮತ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಜಿಲಾನಿ ಮೇದೂರು, ಪ್ರಧಾನ ಕಾರ್ಯದರ್ಶಿಯಾದ ಯಾಸೀರ್ ಇರ್ಷಾದ್ ಹಾಗೂ ಜಿಲ್ಲಾ ಸಮಿತಿ ಸದಸ್ಯರಾದ ವಾಜೀದ ಅಲಿ ತಿಮ್ಮನಕಟ್ಟಿ ಅವರು ಉಪಸ್ಥಿತರಿದ್ದರು.

ಎದ್ದೇಳು ಕರ್ನಾಟಕದ ವತಿಯಿಂದ ಆಯೋಜಿಸಲಾಗಿದ್ದ SIR (Special Intensive Revision) ಜನಜಾಗೃತಿ ಜಾಥಾವು ದಿನಾಂಕ 13 ಜೂನ್ ರಿಂದ 18 ಜೂನ್ 2026...
20/06/2026

ಎದ್ದೇಳು ಕರ್ನಾಟಕದ ವತಿಯಿಂದ ಆಯೋಜಿಸಲಾಗಿದ್ದ SIR (Special Intensive Revision) ಜನಜಾಗೃತಿ ಜಾಥಾವು ದಿನಾಂಕ 13 ಜೂನ್ ರಿಂದ 18 ಜೂನ್ 2026 ರವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಮಹತ್ವದ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಿತು.ಜಾಥಾವು 18 ಜೂನ್ ರಂದು ಹಾವೇರಿ ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ನಾವು ಸಕ್ರಿಯವಾಗಿ ಭಾಗವಹಿಸಿ, SIR ಪ್ರಕ್ರಿಯೆ, ಮತದಾರರ ಪಟ್ಟಿಯ ಪರಿಷ್ಕರಣೆ, ಮತದಾರರ ಹಕ್ಕುಗಳು ಹಾಗೂ ಪ್ರಜಾಪ್ರಭುತ್ವದ ಬಲವರ್ಧನೆಯಲ್ಲಿ ನಾಗರಿಕರ ಪಾತ್ರ ಕುರಿತಾಗಿ ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು.

SDPI ಹಾವೇರಿ ಜಿಲ್ಲಾ ಸಮಿತಿಯ ಸಾಮಾನ್ಯ ಸಭೆಯು ಜಿಲ್ಲಾಧ್ಯಕ್ಷರಾದ ಜಿಲಾನಿ ಮೇದೂರು ರವರ ಅಧ್ಯಕ್ಷತೆಯಲ್ಲಿ ಹಾಗೂ ಜಿಲ್ಲಾ ಉಸ್ತುವಾರಿ ಅಪ್ಸರ್ ಕೆ...
15/02/2026

SDPI ಹಾವೇರಿ ಜಿಲ್ಲಾ ಸಮಿತಿಯ ಸಾಮಾನ್ಯ ಸಭೆಯು ಜಿಲ್ಲಾಧ್ಯಕ್ಷರಾದ ಜಿಲಾನಿ ಮೇದೂರು ರವರ ಅಧ್ಯಕ್ಷತೆಯಲ್ಲಿ ಹಾಗೂ ಜಿಲ್ಲಾ ಉಸ್ತುವಾರಿ ಅಪ್ಸರ್ ಕೆ. ಆರ್.ನಗರ ರವರ ಉಪಸ್ಥಿತಿಯಲ್ಲಿ, ಪಕ್ಷದ ಜಿಲ್ಲಾ ಕಛೇರಿಯಲ್ಲಿ ಜರುಗಿತು.

ಸದರಿ ಸಭೆಯಲ್ಲಿ, SIR ಪ್ರಕ್ರಿಯೆಯ ಪ್ರಥಮ ಹಂತದ ಮ್ಯಾಪಿಂಗ್, ಅದರ ಪರಿಣಾಮಗಳು ಹಾಗೂ ಮುಂದಿನ ಎನ್ಯೂಮರೇಷನ್ ಹಂತದ ಕುರಿತು ಸವಿಸ್ತಾರವಾಗಿ ಚರ್ಚೆ ನಡೆಸಲಾಯಿತು.

ಮುಂಬರಲಿರುವ ಹಾವೇರಿ ಜಿಲ್ಲಾ ವ್ಯಾಪ್ತಿಯಲ್ಲಿ ಬರುವಂತಹ ಸ್ಥಳೀಯ ಸಂಸ್ಥೆ ಚುನಾವಣೆಗಳ ಬಗ್ಗೆ ಚರ್ಚೆ ನಡೆದು, ರಾಣೇಬೆನ್ನೂರು ನಗರ ಸಭೆ ಹಾಗೂ ವಿವಿಧ ಪಂಚಾಯತಿಗಳು ಸೇರಿದಂತೆ ವಿವಿಧ ವಾರ್ಡುಗಳಲ್ಲಿ ಸ್ಪರ್ಧಿಸಲು ಹಾಗೂ ಚುನಾವಣಾ ಪೂರ್ವ ತಯಾರಿ ನಡೆಸಲು ತೀರ್ಮಾನಿಸಲಾಯಿತು.

ಈ ಮಹತ್ವದ ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಖಾಸೀಮ್ ರಬ್ಬಾನಿ, ಪ್ರಧಾನ ಕಾರ್ಯದರ್ಶಿ ಅಕ್ಬರ್ ಅಲಿ ಮತ್ತು ಯಾಸಿರ್ ಇರ್ಷಾದ್, ಕಾರ್ಯದರ್ಶಿ ಸದಾಂ ಅಕ್ಕಿಆಲೂರು, ಮತ್ತು ವಿಮೆನ್ ಇಂಡಿಯಾ ಮೂವ್ಮೆಂಟ್ ನ ಜಿಲ್ಲಾ ಅಧ್ಯಕ್ಷೆ ಶಾಹ್ತಾಜ್ ಬೆಗ್ಂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಫಿಯಾ ದಾರೋಗರ್ ವಿವಿಧ ವಿಧಾನಸಭಾ ಕ್ಷೇತ್ರಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಜಿಲ್ಲಾ ಸಮಿತಿಯ ಸರ್ವ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

ಹಾವೇರಿ ಜಿಲ್ಲೆ ವಿಮೆನ್ ಇಂಡಿಯಾ ಮೂವ್ಮೆಂಟ್ ನ ಜಿಲ್ಲಾಧ್ಯಕ್ಷರಾಗಿ ಶಹ್ತಾಜ್ ಬೀ ಆಯ್ಕೆ.ಎಸ್ಡಿಪಿಐ ಪಕ್ಷದ ಮಹಿಳಾ ಘಟಕವಾದ ವಿಮೆನ್ ಇಂಡಿಯಾ ಮೂವ್...
10/02/2026

ಹಾವೇರಿ ಜಿಲ್ಲೆ ವಿಮೆನ್ ಇಂಡಿಯಾ ಮೂವ್ಮೆಂಟ್ ನ ಜಿಲ್ಲಾಧ್ಯಕ್ಷರಾಗಿ ಶಹ್ತಾಜ್ ಬೀ ಆಯ್ಕೆ.

ಎಸ್ಡಿಪಿಐ ಪಕ್ಷದ ಮಹಿಳಾ ಘಟಕವಾದ ವಿಮೆನ್ ಇಂಡಿಯಾ ಮೂವ್ಮೆಂಟ್ ನ ಜಿಲ್ಲಾ ಪ್ರತಿನಿಧಿ ಸಭೆಯು ರಾಣೆಬೆನ್ನೂರಿನ ಖ್ವಾಜಾ ಬಂದಾ ನವಾಜ್ ಹಾಲ್ ನಲ್ಲಿ ನಡೆಯಿತು.

ನೂತನ ಜಿಲ್ಲಾಧ್ಯಕ್ಷೆಯಾಗಿ ಶಹ್ತಾಜ್ ಬೀ, ಜಿಲ್ಲಾ ಉಪಾಧ್ಯಕ್ಷೆಯಾಗಿ ಫಾತಿಮಾ ಗುಬ್ಬಿ,
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ಆಫಿಯಾ ದಾರೋಗರ್,
ಜಿಲ್ಲಾ ಕಾರ್ಯದರ್ಶಿಗಳಾಗಿ ರೆಹಾನ ಬಾನು ದೊಡ್ಡ ಗುಬ್ಬಿ,
ಕೋಶಾಧಿಕಾರಿಯಾಗಿ ರುಖೈಯ ರಾಣೇಬೆನ್ನೂರು,
ಸಮಿತಿ ಸದಸ್ಯರುಗಳಾಗಿ ಸಮೀನಾ ಖಾನಂ, ಶಾಝಿಯಾ ಶೇಕ್ ಶೇಕ್ ಸಣದಿ, ರುಖೈಯ ಮಾಸೂರ್ ಹಾಗೂ ಝೋಯಾ ಖತೀಬ್ ರವರು ಆಯ್ಕೆಯಾಗಿರುತ್ತಾರೆ.

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಹಾವೇರಿ ಜಿಲ್ಲಾಧ್ಯಕ್ಷ ಜಿಲಾನಿ ಮೇದೂರ ಪ್ರಸಕ್ತ ಮಹಿಳೆಯರಲ್ಲಿ ರಾಜಕೀಯದ ಅರಿವು ಮೂಡಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂಬ ಸಂದೇಶವನ್ನು ನೀಡಿದರು. ಸಭೆಯನ್ನು ನಡೆಸಿಕೊಡಲು ವಿಮೆನ್ ಇಂಡಿಯಾ ಮೂವ್ಮೆಂಟ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ *ನಸ್ರಿಯಾ ಬೆಳ್ಳಾರೆ* ಹಾಗೂ ರಾಜ್ಯ ಸಮಿತಿ ಸದಸ್ಯರಾದ *ನಾಜಿಯ ಕಾಪು* ರವರು ಆಗಮಿಸಿದ್ದರು. ಎಸ್ ಡಿ ಪಿ ಐ ಹಾವೇರಿ ಜಿಲ್ಲಾ ಉಪಾಧ್ಯಕ್ಷ ಖಾಸಿಂ ರಬ್ಬಾನಿ ಪ್ರಸ್ತಾವಿಕವಾಗಿ ಮಾತನಾಡಿ ಮಹಿಳೆಯರು ಸಹ ಚುನಾವಣೆಯಲ್ಲಿ ಸ್ಪರ್ಧಿಸಿ ಉನ್ನತ ಮಟ್ಟಕ್ಕೇರಬೇಕೆಂದರು. ಹಾಗೂ ನೂತನವಾಗಿ ಆಯ್ಕೆಯಾದ ವಿಮೆನ್ ಇಂಡಿಯಾ ಮೂವ್ಮೆಂಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಫಿಯಾ ದಾರೋಗರ್ ಧನ್ಯವಾದಗೈದರು.

01/01/2026
01/01/2026

ಮಾನ್ಯ Chief Minister of Karnataka Siddaramaiah ನವರೇ, ಕೋಗಿಲು ಸಂತ್ರಸ್ತರ ವಿಚಾರದಲ್ಲಿ, ಈ ರೀತಿ ಸುಳ್ಳು ಹರಡುವ, ದ್ವೇಷ ಬಿತ್ತುವ ಮಾಧ್ಯಮ ಮತ್ತು ಬಿಜೆಪಿ ನಾಯಕರ ಮೇಲೆ ಕ್ರಮ ಕೈಗೊಳ್ಳಬೇಕು.

~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು SDPI, ಕರ್ನಾಟಕ

01/01/2026
01/01/2026

Urdu Newspaper Coverage of SDPI Protest Against the Eviction of People in Kogilu Layout, Bengaluru

01/01/2026

ಬೆಂಗಳೂರಿನ ಫಕೀರ್ ಕಾಲೋನಿಯ ಬಡವರ ಮನೆಗಳಿಗೆ ಬುಲ್ಲೋಜರ್! ಇನ್ಫೋಸಿಸ್ ನಿಂದ KIADB ಭೂಮಿ ರಿಯಲ್ ಎಸ್ಟೇಟ್‌ಗೆ ಮಾರಾಟ ಸರ್ಕಾರ ಮೌನ!

ಬಡವರ ಕಣ್ಣಿಗೆ ಸುಣ್ಣ, ಕಾರ್ಪೊರೇಟ್ ಕಣ್ಣಿಗೆ ಬೆಣ್ಣೆ

53.5 ಎಕರೆ ಭೂಮಿ ದುರುಪಯೋಗ ಪಡಿಸಿಕೊಂಡ ಇನ್ಫೋಸಿಸ್ ವಿರುದ್ಧ ಏನು ಕ್ರಮ..?

~ಅಬ್ದುಲ್ ಮಜೀದ್,
(ರಾಜ್ಯಾಧ್ಯಕ್ಷರು, SDPI ಕರ್ನಾಟಕ)

Address

Near Khila Majid
Ranebennur

Alerts

Be the first to know and let us send you an email when SDPI Haveri posts news and promotions. Your email address will not be used for any other purpose, and you can unsubscribe at any time.

Contact The Organization

Send a message to SDPI Haveri:

Shortcuts

Share