03/02/2023
ಬಿಜೆಪಿ ವಿಜಯ ಸಂಕಲ್ಪ ಅಭಿಯಾನ
ಸ್ನೇಹಿತರೇ,
ಈ ದಿನ ಸಂಡೂರು ಮಂಡಲದ ಕುರೆಕುಪ್ಪ ಮಹಾಶಕ್ತಿ ಕೇಂದ್ರದ ತೋರಣಗಲ್ಲು ರೈ.ನಿ ಶಕ್ತಿ ಕೇಂದ್ರದಲ್ಲಿ ಬಿಜೆಪಿ ವಿಜಯ ಸಂಕಲ್ಪ ಕಾರ್ಯಕ್ರಮವನ್ನು ಮನೆ - ಮನೆ ಸಂಪರ್ಕ,ಸ್ಟಿಕ್ಕರ್ ಹಚ್ಚುವುದು, ಮತದಾರರ ಭೇಟಿ ಮಾಡುವುದು,ಗೋಡೆ ಬರಹ ಸೇರಿದಂತೆ ಇನ್ನಿತರ ಪಕ್ಷದ ಚಟುವಟಿಕೆಗಳನ್ನು ಕಾರ್ಯಗತಗೊಳಿಸುವ ಮೂಲಕ ಬಿಜೆಪಿ ಗೆಲುವಿನ ಯಾತ್ರೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಈ ಅಭಿಯಾನದಲ್ಲಿ ಮುಖಂಡರಾದ ಫಾರೂಕ್ ರವರು,ಬೂತ್ ಪ್ರಬಾರಿ ಗಣೇಶ್,ಮುಖಂಡರಾದ ಶ್ರೀರಾಮುಲು, ಸೀನ,ವೆಂಕಟೇಶ್, ಬೂತ್ ಅಧ್ಯಕ್ಷ ರಾಜ,ಅರುಣ,ಶ್ರೀನಿವಾಸ, ಇಂತಿಯಾಜ್, ಹಾಗೂ ಮುಂತಾದವರು ಉಪಸ್ಥಿತರಿದ್ದರು.
- ಎನ್. ರಾಮಕೃಷ್ಣ (GCB),
ಸಂಚಾಲಕರು 'ಬಿಜೆಪಿ ವಿಜಯ ಸಂಕಲ್ಪ ಅಭಿಯಾನ".ಸಂಡೂರು ಮಂಡಲ.
20/01/2023
ಈ ದಿನ ಸಂಡೂರು ವಿಧಾನಸಭ ಕ್ಷೇತ್ರದ ಕುರೆಕುಪ್ಪ ಮಹಾ ಶಕ್ತಿಕೇಂದ್ರ ದಲ್ಲಿ ದಿನಾಂಕ 21 ರಿಂದ 29 ರ ವರೆಗೆ ನಡೆಯುವ ಭಾರತೀಯ ಜನತಾ ಪಾರ್ಟಿ ಯ ಬೂತ್ ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮ ದ ಪೂರ್ವಭಾವಿ ಸಭೆಯನ್ನು ಕುರೆಕುಪ್ಪ ಬಸ್ ನಿಲ್ದಾಣ ಹಿಂಬಾಗದ ಲೇಔಟ್ ನಲ್ಲಿ ಮಾಡಲಾಯಿತು ಮಂಡಲ ಸಂಚಾಲಕರು ರಾಮಕೃಷ್ಣ.GCB ಪುರಸಭೆ ಸದಸ್ಯರಾದ ಕಾರ್ಗಿಲ್ ಬಸನಗೌಡ,ಮುಖಂಡರಾದ ಬೊಯ ರಾಮಂಜಿನಿ ಮಾರುತಿ,ಗಿರಿಯಪ್ಪ,ತಿಮ್ಮಪ್ಪ,ನಾಗರಾಜು,ಮಹಾಶಕ್ತಿ ಕೇಂದ್ರದ ಅಧ್ಯಕ್ಷರು ಕೆ.ಹನುಮಂತಪ್ಪ, ಪ್ರಭಾರಿ ಶ್ರೀನಿವಾಸ. ಹಿರಿಯರು ಮತ್ತು ಯುವಕರು ಕಾರ್ಯಕ್ರಮ ದಲ್ಲಿ ಭಾಗಿಯಾಗಿದ್ದರು 🙏🙏
04/10/2022
ನವರಾತ್ರಿಯ ಸಂತಸ, ಆಯುಧ ಪೂಜೆಯ ಸಡಗರ ನಿಮ್ಮೆಲ್ಲರ ಬದುಕಲ್ಲಿ ನವಚೇತನ ತುಂಬಲಿ, ಎಲ್ಲರಿಗೂ ಆಯುಧ ಪೂಜೆಯ ಶುಭಾಶಯಗಳು.
Prakash Singh
02/10/2022
ಸಂಡೂರು ದಸರಾ ಉತ್ಸವ ಸಮಿತಿ - 2022
ದಿನಾಂಕ: 03.10.2022 ರಂದು ಸಂಡೂರು ಪಟ್ಟಣದಲ್ಲಿ ತಾಯಿ ಚಾಮುಂಡೇಶ್ವರಿ ತಾಯಿಯ ಭವ್ಯ ರಥ ಯಾತ್ರೆ.
ಪ್ರಾರಂಭ ಸ್ಥಳ : ಬೆಳೆಗ್ಗೆ 11 ಘಂಟೆ , ತಹಶೀಲ್ದಾರ್ ಕಚೇರಿ (ಯಶವಂತ್ ವಿಹಾರ್ ಕ್ಲಬ್)
ರಥ ಯಾತ್ರೆ ಕೊನೆಗೊಳ್ಳುವ ಸ್ಥಳ : ಉಡಚಲ ಪರಮೇಶ್ವರಿ ದೇವಸ್ಥಾನ, ಲಕ್ಷ್ಮೀಪುರ.
ಈ ಭವ್ಯ ರಥ ಯಾತ್ರೆಯಲ್ಲಿ ಆನೇಕ ಸಾಂಸ್ಕೃತಿಕ ತಂಡಗಳು ಭಾಗವಹಿಸಲಿವೆ
ಹುಲಿ ಹೆಜ್ಜೆ
ಡೊಳ್ಳು
ವೀರಗಾಸೆ
ಕೋಲಾಟ
ನಂದಿಕೋಲು
ಇತ್ಯಾದಿ
ಇದರ ಜೊತೆಗೆ ಅತ್ಯಾಧುನಿಕ DJ, ಡ್ರಮ್ಸ್ ಹಾಗೂ ಗಜಾನನ ಆಗಮನ ಈ ಭವ್ಯ ರಥ ಯಾತ್ರೆಯ ಮೆರಗನ್ನು ಹೆಚ್ಚಿಸಲಿದೆ.
ನಾಡ ಹಬ್ಬ ದಸರಾ, ನಮ್ಮ ಮನೆಯ ಹಬ್ಬ. ನೀವು ಬನ್ನಿ , ನಿಮ್ಮವರನ್ನೂ ಕರೆತನ್ನಿ.
28/09/2022
ಭಾರತ ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿ ಸ್ವಾತಂತ್ರ್ಯಹೋರಾಟಗಾರ ಬ್ರಿಟಿಷರ ವಿರುದ್ಧ ಸಿಂಹದ್ವನಿ ಮೊಳಗಿದ್ದ ವೀರ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಸರ್ವಸ್ವವನ್ನೇ ನೀಡಿದ ಅಮರ ಹುತಾತ್ಮ ಸರದಾರ್ ಭಗತ್ ಸಿಂಗ್ ಅವರ ಜನ್ಮ ದಿನದಂದು ಗೌರವ ನಮನಗಳು....!
24/09/2022
ಆಸೆಗಳಿಗಾಗಿ ಬದುಕಬಾರದು
ಆದರ್ಶಕ್ಕಾಗಿ ಬದುಕಬೇಕು.
ಶುಭಮುಂಜಾನೆ ಮಿತ್ರರೇ😍
21/09/2022
ಸ್ನೇಹಿತರೇ,
*"ಭಾರತೀಯ ಜನತಾ ಪಾರ್ಟಿಯ ಸಂಡೂರು ಮಂಡಲದ ವತಿಯಿಂದ ಸಂಡೂರು ವಿಧಾನಸಭಾ ಕ್ಷೇತ್ರದ ಹಾಗೂ ಸ್ಥಳೀಯ ಸಮಸ್ಯೆಗಳ ಬಗ್ಗೆ ಬೃಹತ್ ಪ್ರತಿಭಟನೆ ರ್‍ಯಾಲಿ ಯನ್ನು ಇಂದು ಸಂಡೂರಿನ ವಿರಕ್ತಮಠದಿಂದ - ವಿಜಯ ಸರ್ಕಲ್ ವರೆಗೆ ಹಮ್ಮಿಕೊಳ್ಳಲಾಗಿತ್ತು.
ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಬಗರ್ಹುಕುಂ,ನಿರುದ್ಯೋಗ,ರೈತರ ಸಮಸ್ಯೆಗಳು ಸೇರಿದಂತೆ ಸಂಡೂರು ನಗರವು ಸುಮಾರು 60 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿದ್ದು, ಕುಡಿಯುವ ನೀರು ಸರಬರಾಜು ಸೇರಿದಂತೆ ಅನೇಕ ಸಮಸ್ಯೆಗಳಿದ್ದು, ಕಾಂಗ್ರೆಸ್ ಶಾಸಕರು ಮತ್ತು ಸ್ಥಳೀಯ ಸಂಡೂರು ಪುರಸಭೆಯ ಕಾಂಗ್ರೆಸ್ ಆಡಳಿತ ಇಲ್ಲಿನ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಿರ್ಲಕ್ಷ್ಯ ತೋರುತ್ತಿರುವುದನ್ನು ತೀವ್ರವಾಗಿ ಖಂಡಿಸಲಾಯಿತು.
ಈ ಯಶಸ್ವಿ ಹೋರಾಟದಲ್ಲಿ ಶ್ರೀ ಜಿ ಟಿ ಪಂಪಾಪತಿ ಅಧ್ಯಕ್ಷರು,ಭಾರತೀಯ ಜನತಾ ಪಾರ್ಟಿ ಸಂಡೂರು ಮಂಡಲ,ಬಿಜೆಪಿ ಪಕ್ಷದ ಹಿರಿಯ ಮುಖಂಡರುಗಳು, ಮಂಡಲ ಮತ್ತು ಜಿಲ್ಲಾ ಘಟಕದ ಎಲ್ಲ ಮೋರ್ಚಾಗಳ ಪದಾಧಿಕಾರಿಗಳು,ಜನ ಪ್ರತಿನಿದಿಗಳು, ನಾಮ ನಿರ್ದೇಶಿತ ಪದಾಧಿಕಾರಿಗಳು ಮತ್ತು ಪಕ್ಷದ ನಿಷ್ಠಾವಂತ ಕಾರ್ಯಕರ್ತರು,ಜನಸಾಮಾನ್ಯರು, ಬಂದುಗಳು ಹೆಚ್ಚಿನಸಂಖ್ಯೆಯಲ್ಲಿ ಭಾಗವಹಿಸಿದ್ದರು.
-ಇಂತಿ,
ಎನ್. ರಾಮಕೃಷ್ಣ GCB
ಪುರಸಭೆ ಸದಸ್ಯರು ಕುರೇಕುಪ್ಪ,
ಮುಖಂಡರು ಸಂಡೂರು ಬಿಜೆಪಿ ಮಂಡಲ.
19/09/2022
ಸ್ನೇಹಿತ ಬಂಧುಗಳೇ,
ಪರಮಪೂಜ್ಯರಾದ ಶ್ರೀ ಶ್ರೀ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಯವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಪ್ರಸ್ತುತ ಇರುವ ಶೇಕಡ ಮೀಸಲಾತಿನ್ನು ಹೆಚ್ಚಿಸಬೇಕು, ನಿವೃತ್ತ ನ್ಯಾಯಮೂರ್ತಿ ಶ್ರೀ ನಾಗಮೋಹನ್ ದಾಸ್ ವರದಿಯನ್ನು ಯಥಾವತ್ತಾಗಿ ಅನುಷ್ಠಾನ ಗೊಳಿಸಬೇಕೆಂದು ರಾಜ್ಯಸರ್ಕಾರವನ್ನು ಒತ್ತಾಯಿಸಿ ಕಳೆದ 222 ದಿನಗಳಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಸುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಇಂದು ಸಂಡೂರು ತಾಲೂಕಿನ ವಾಲ್ಮೀಕಿ ಸಮುದಾಯದ 100ಕ್ಕೂ ಹೆಚ್ಚು ಮುಖಂಡರೊಂದಿಗೆ ತೆರಳಿ ಪರಮಪೂಜ್ಯರು ನಡೆಸುತ್ತಿರುವ ಹೋರಾಟದಲ್ಲಿ ಭಾಗವಹಿಸಲಾಯಿತು.
ಈ ಸಂದರ್ಭದಲ್ಲಿ ಪರಮಪೂಜ್ಯರ ಆರೋಗ್ಯವನ್ನು ವಿಚಾರಿಸಿ,ಅವರ ಆಶೀರ್ವಾದವನ್ನು ಪಡೆದುಕೊಂಡು ಆದಷ್ಟು ಶೀಘ್ರ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪ್ರಸ್ತುತ ಇರುವ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇಕಡ 3% ರಿಂದ ಶೇಕಡ 7.5% ಕ್ಕೆ ಪರಿಶಿಷ್ಟ ಜಾತಿ ಶೇಕಡ 15%ರಿಂದ 17%ಮೀಸಲಾತಿ ಹೆಚ್ಚಿಸಬೇಕೆಂದು ಕೇಂದ್ರ - ರಾಜ್ಯ ಸರ್ಕಾರಗಳನ್ನು ಆಗ್ರಹಿಸಲಾಯಿತು.
ಈ ಹೋರಾಟಕ್ಕೆ ಸಂಡೂರು ತಾಲೂಕಿನ ವಾಲ್ಮೀಕಿ ಸಮಾಜದ ಮುಖಂಡರುಗಳಾದ ಶ್ರಿ ಕೃಷ್ಣಪ್ಪ, ಶ್ರೀ ಟಿ.ನ್.ನಾಗರಾಜ್,ಶ್ರೀ ಲಿಂಗಪ್ಪ,ಶ್ರೀ ವಸಂತ್, ಶ್ರೀ ಪುಲಿಕೊಂಡ,ಶ್ರೀ ಭೀಮಲಿಂಗಪ್ಪ,ಶ್ರೀ ಅಂಬರೇಶ್,ಶ್ರೀ ಮಂಜುನಾಥ್ ಸೇರಿದಂತೆ 100ಕ್ಕೂಹೆಚ್ಚು ಮುಖಂಡರು ಉಪಸ್ಥಿತರಿದ್ದರು.
-ಎನ್. ರಾಮಕೃಷ್ಣ GCB,
ಪುರಸಭೆ ಸದಸ್ಯರು ಕುರೆಕುಪ್ಪ ಹಾಗೂ ಬಿಜೆಪಿ ಮುಖಂಡರು ಸಂಡೂರು ತಾಲೂಕು ಬಳ್ಳಾರಿ
17/09/2022
ಸ್ನೇಹಿತರೆ,
ವಿಶ್ವ ನಾಯಕ,ಭಾರತ ದೇಶದ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರ 72ನೇ ಹುಟ್ಟುಹಬ್ಬದ ಪ್ರಯುಕ್ತ ತೋರಣಗಲ್ಲು (ಆರ್.ಎಸ್) ಎಚ್ ಎಲ್ ಸಿ ಕಾಲೋನಿಯ ಪಾರ್ಕ್ ನಲ್ಲಿ ಸಂಡೂರು ಬಿಜೆಪಿ ಮಂಡಲ ಹಾಗೂ ಸಂಡೂರು ಬಿಜೆಪಿ ಯುವ ಮೋರ್ಚಾ ವತಿಯಿಂದ ಬೃಹತ್ ರಕ್ತದಾನ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂಡೂರು ತಾಲೂಕು ಬಿಜೆಪಿ ಅಧ್ಯಕ್ಷರಾದ ಶ್ರೀ ಜಿ ಟಿ ಪಂಪಾಪತಿ, ಜಿ ಚನ್ನಬಸಪ್ಪ ಜಿಸಿಬಿ ತೋರಣಗಲ್ಲು, ಸೋಮನಗೌಡ ಜಿಲ್ಲಾಧ್ಯಕ್ಷರು ಯುವ ಮೋರ್ಚಾ, ಶರಣಗೌಡ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರು ಸಂಡೂರು ಹಾಗೂ ಪುರಸಭೆ ಸದಸ್ಯರುಗಳಾದ ನಾಗಲಕ್ಷ್ಮಿ ಪುಲಿಕೊಂಡ, ಸುರೇಶ್,ವೆಂಕಟೇಶ್, ಯರಿಸ್ವಾಮಿ ಸೇರಿದಂತೆ ಬಿಜೆಪಿ ಪಕ್ಷದ ಎಲ್ಲಾ ಘಟಕಗಳ ಮುಂಚೂಣಿ ನಾಯಕರು, ಮುಖಂಡರುಗಳು, ಪಕ್ಷದ ಕಾರ್ಯಕರ್ತರ ಸಮ್ಮುಖದಲ್ಲಿ ನರೇಂದ್ರ ಮೋದಿಜಿಯವರ 72ನೇ ಹುಟ್ಟುಹಬ್ಬವನ್ನು ಆಚರಿಸುವ ಮೂಲಕ ಬೃಹತ್ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಲಾಯಿತು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ಅಧ್ಯಕ್ಷರು ಹಾಗೂ ಗಣ್ಯರು ರಕ್ತದಾನ ಶ್ರೇಷ್ಠದಾನ ರಕ್ತದಾನದಿಂದ ಅನೇಕ ಜೀವಗಳನ್ನ ಉಳಿಸಬಹುದು ಪ್ರತಿಯೊಬ್ಬ ಆರೋಗ್ಯವಂತ ಮನುಷ್ಯ ಮೂರು ತಿಂಗಳಿಗೊಮ್ಮೆ ರಕ್ತದಾನವನ್ನು ಮಾಡಬಹುದು ಎಂದು ತಿಳಿಸಿದರಲ್ಲದೆ, ವಿಶ್ವ ನಾಯಕ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರ 72ನೆ ಹುಟ್ಟು ಹಬ್ಬದಂದು ಬಿಜೆಪಿ ಪಕ್ಷವು ಈ ಬೃಹತ್ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದು ಈ ಶುಭ ಸಂದರ್ಭದಲ್ಲಿ ನಾವೆಲ್ಲರೂ ಸೇರಿ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುತ್ತಿರುವುದು ಅತೀವ ಸಂತಸ ತಂದಿದೆ ಎಂದರು.
- ಎನ್. ರಾಮಕೃಷ್ಣ GCB
ಸದಸ್ಯರು ಪುರಸಭೆ ಕುರೆಕುಪ್ಪ,
ಮುಖಂಡರು ಸಂಡೂರು ಬಿಜೆಪಿ ಮಂಡಲ