06/10/2026
ಬಾಗಲಕೋಟೆ ಜಿಲ್ಲೆಯ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿ ನಿಲಯಗಳಲ್ಲಿ ವಾಸಿಸುವ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಅರಿವು ಮೂಡಿಸುವುದು, ಆತ್ಮವಿಶ್ವಾಸ ಹೆಚ್ಚಿಸುವುದು ಹಾಗೂ ಯಶಸ್ಸಿನತ್ತ ಮುನ್ನಡೆಸುವ ಉದ್ದೇಶದಿಂದ ಜಿಲ್ಲಾ ಪಂಚಾಯತ್ ಬಾಗಲಕೋಟೆ ವತಿಯಿಂದ ವಿಶೇಷ ಆನ್‌ಲೈನ್ ಮಾರ್ಗದರ್ಶನ ತರಗತಿ ಆಯೋಜಿಸಲಾಗುತ್ತಿದೆ.
ಈ ವಿಶೇಷ ತರಗತಿಯಲ್ಲಿ
ಬಾಗಲಕೋಟೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಸಿದ್ಧಾರ್ಥ ಗೋಯಲ್, IPS ಅವರು
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೇಗೆ ಸಿದ್ಧತೆ ನಡೆಸಬೇಕು?
ಸಮಯವನ್ನು ಪರಿಣಾಮಕಾರಿಯಾಗಿ ಹೇಗೆ ನಿರ್ವಹಿಸಬೇಕು?
ಪರಿಣಾಮಕಾರಿ ಅಧ್ಯಯನದ ವಿಧಾನಗಳೇನು?
ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಯಾವ ತಂತ್ರಗಳನ್ನು ಅನುಸರಿಸಬೇಕು?
ಎಂಬ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಹಾಗೂ ಪ್ರೇರಣಾದಾಯಕ ಉಪನ್ಯಾಸ ನೀಡಲಿದ್ದಾರೆ.
ದಿನಾಂಕ: 11.10.2026, ಭಾನುವಾರ
ಸಮಯ: ಬೆಳಿಗ್ಗೆ 11.00 ಗಂಟೆಗೆ
#ಗ್ರಾಮೀಣವಿದ್ಯಾರ್ಥಿಗಳು #ಸ್ಪರ್ಧಾತ್ಮಕಪರೀಕ್ಷೆ #ವಿದ್ಯಾರ್ಥಿಸಬಲೀಕರಣ