SDPI_Bailhongal

Directions

SDPI_Bailhongal FREEDOM FROM HUNGER★FREEDOM FROM FEAR
💚❤️

ಪತ್ರಿಕಾ ವರದಿ
15/10/2026

ಪತ್ರಿಕಾ ವರದಿ

ಉಚಿತ ಶಿಕ್ಷಣ ಯೋಜನೆಯಡಿ ಅರ್ಜಿ ಸಲ್ಲಿಸಿದ ಅಲ್ಪಸಂಖ್ಯಾತ ವಿದ್ಯಾರ್ಥಿಗಳ KSOU ಉಚಿತ ಸ್ನಾತಕೋತ್ತರ ಶಿಕ್ಷಣದ ಸಮಸ್ಯೆ ಪರಿಹಾರಕ್ಕಾಗಿ SDPI ಬೈಲಹ...
13/10/2026

ಉಚಿತ ಶಿಕ್ಷಣ ಯೋಜನೆಯಡಿ ಅರ್ಜಿ ಸಲ್ಲಿಸಿದ ಅಲ್ಪಸಂಖ್ಯಾತ ವಿದ್ಯಾರ್ಥಿಗಳ KSOU ಉಚಿತ ಸ್ನಾತಕೋತ್ತರ ಶಿಕ್ಷಣದ ಸಮಸ್ಯೆ ಪರಿಹಾರಕ್ಕಾಗಿ SDPI ಬೈಲಹೊಂಗಲ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಮಲಿಕಜಾನ ಮುಲ್ಲಾ ರವರ ನೇತೃತ್ವದಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ಬೈಲಹೊಂಗಲ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಉಪವಿಭಾಗಾಧಿಕಾರಿಗಳ ಮೂಲಕ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಯು.ಟಿ ಖಾದರ್ ರವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಇಲಿಯಾಸ ದೊಡಮನಿ ಕಾರ್ಯದರ್ಶಿ ಆಕೀಬ ಪಟ್ಟಿಹಾಳ, ಮೌಲಾನಾ ಮಾಜ,ಜುನೇದ ಕರಿಕಟ್ಟಿ,ಸುಫಿಯಾನ ಚಕ್ಕೊಲಿ, ಕೈಫ್ ತಿಗಡಿ ಮತ್ತು ಕಾರ್ಯಕರ್ತರರು ಉಪಸ್ಥಿತರಿದ್ದರು.

ಬೈಲಹೊಂಗಲ ನಗರದ ಹಿರಿಯರು,ಮುಸ್ಲಿಂ ಸಮಾಜದ ಮುಖಂಡರು ಹಾಗೂ ಮರ್ಕಜ್ ಮಸ್ಜಿದ್ ಕಮಿಟಿ ಸದಸ್ಯರು, ವೈಯಕ್ತಿಕವಾಗಿ ನನ್ನ ಹಿತಚಿಂತಕರಾಗಿದ್ದ ಶಬ್ಬೀರ ...
11/10/2026

ಬೈಲಹೊಂಗಲ ನಗರದ ಹಿರಿಯರು,ಮುಸ್ಲಿಂ ಸಮಾಜದ ಮುಖಂಡರು ಹಾಗೂ ಮರ್ಕಜ್ ಮಸ್ಜಿದ್ ಕಮಿಟಿ ಸದಸ್ಯರು, ವೈಯಕ್ತಿಕವಾಗಿ ನನ್ನ ಹಿತಚಿಂತಕರಾಗಿದ್ದ ಶಬ್ಬೀರ ಅಹಮದ ಅಬ್ದುಲಕರೀಮ ಸಂಗೊಳ್ಳಿ ರವರ ನಿಧನಕ್ಕೆ ತೀವ್ರ ಸಂತಾಪಗಳು.

ಸರ್ವಶಕ್ತನಾದ ಅಲ್ಲಾಹನು ಅವರಿಗೆ ಸ್ವರ್ಗದಲ್ಲಿ (ಜನ್ನತ್) ಅತ್ಯುನ್ನತ ಸ್ಥಾನವನ್ನು ಕರುಣಿಸಲಿ ಹಾಗೂ ಈ ತುಂಬಲಾರದ ನಷ್ಟವನ್ನು ಭರಿಸುವ ಶಕ್ತಿ ಮತ್ತು ತಾಳ್ಮೆಯನ್ನು ಅವರ ಕುಟುಂಬ ಮತ್ತು ಬಂಧು ಬಾಂಧವರಿಗೆ ನೀಡಲಿ.

ಪತ್ರಿಕಾ ಪ್ರಕಟಣೆ ಬರಪೀಡಿತ ತಾಲೂಕುಗಳ ಪಟ್ಟಿಗೆ ಬೈಲಹೊಂಗಲ ಸೇರ್ಪಡೆ ಸ್ವಾಗತಾರ್ಹ: SDPIಬೈಲಹೊಂಗಲ: ರಾಜ್ಯ ಸರ್ಕಾರವು 3ನೇ ಹಂತದಲ್ಲಿ ಹೆಚ್ಚುವರ...
24/09/2026

ಪತ್ರಿಕಾ ಪ್ರಕಟಣೆ

ಬರಪೀಡಿತ ತಾಲೂಕುಗಳ ಪಟ್ಟಿಗೆ ಬೈಲಹೊಂಗಲ ಸೇರ್ಪಡೆ ಸ್ವಾಗತಾರ್ಹ: SDPI

ಬೈಲಹೊಂಗಲ: ರಾಜ್ಯ ಸರ್ಕಾರವು 3ನೇ ಹಂತದಲ್ಲಿ ಹೆಚ್ಚುವರಿಯಾಗಿ 53 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿದ್ದು,ಬೈಲಹೊಂಗಲ ತಾಲೂಕು ಒಳಗೊಂಡಂತೆ ಬೆಳಗಾವಿ ಜಿಲ್ಲೆಯ 9 ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರ್ಪಡೆ ಮಾಡಿರುವ ನಿರ್ಧಾರವನ್ನು SDPI ಬೈಲಹೊಂಗಲ ವಿಧಾನಸಭಾ ಕ್ಷೇತ್ರ ಸಮಿತಿ ಸ್ವಾಗತಿಸುತ್ತದೆ.

ಈ ಕುರಿತು ಮಾತನಾಡಿದ SDPI ಬೈಲಹೊಂಗಲ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಮಲಿಕಜಾನ ಮುಲ್ಲಾ,ರಾಜ್ಯ ಸರ್ಕಾರದ 3ನೇ ಹಂತದ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಬೈಲಹೊಂಗಲ ತಾಲೂಕು ಸೇರ್ಪಡೆಯಾಗಿದೆ. ಬೈಲಹೊಂಗಲ ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರಿಸುವಂತೆ SDPI ಬೈಲಹೊಂಗಲ ವಿಧಾನಸಭಾ ಸಮಿತಿಯ ವತಿಯಿಂದ ಮಾನ್ಯ ಮುಖ್ಯಮಂತ್ರಿಗಳಿಗೆ,ಉಪವಿಭಾಗಧಿಕಾರಿ(AC) ಬೈಲಹೊಂಗಲ ಅವರ ಮೂಲಕ ಮನವಿ ಸಲ್ಲಿಸಲಾಗಿತ್ತು ಮತ್ತು ಸಾಮಾಜಿಕ ಜಾಲತಾಣ "X" ಮೂಲಕ ನಿರಂತರವಾಗಿ ರೈತರ ಸಂಕಷ್ಟವನ್ನು ಸರ್ಕಾರದ ಗಮನಕ್ಕೆ ತಂದು,ಬೈಲಹೊಂಗಲಕ್ಕೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ SDPI ನಡೆಸಿದ ನಿರಂತರ ಹೋರಾಟಕ್ಕೆ ಇದು ಮಹತ್ವದ ಫಲಿತಾಂಶ.

“ಬೆಳಗಾವಿ ಜಿಲ್ಲೆಯ ಬೈಲಹೊಂಗಲ,ಅಥಣಿ, ಬೆಳಗಾವಿ, ಚಿಕ್ಕೋಡಿ, ಕಿತ್ತೂರು, ಮೂಡಲಗಿ, ನಿಪ್ಪಾಣಿ, ರಾಯಭಾಗ ಹಾಗೂ ಯರಗಟ್ಟಿ ಸೇರಿದಂತೆ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಿರುವುದು ಸ್ವಾಗತಾರ್ಹ ನಿರ್ಧಾರ. ಆದರೆ ಇದರಿಂದ ರೈತರ ಸಂಕಷ್ಟ ಸಂಪೂರ್ಣವಾಗಿ ಪರಿಹಾರವಾದಂತಲ್ಲ. ಇನ್ನೂ ಬರದಿಂದ ಬಾಧಿತವಾಗಿರುವ ಸವದತ್ತಿ, ರಾಮದುರ್ಗ ಸೇರಿದಂತೆ ಉಳಿದ ತಾಲೂಕುಗಳ ರೈತರ ಸಮಸ್ಯೆಗಳಿಗೂ ಸರ್ಕಾರ ನ್ಯಾಯ ಒದಗಿಸಬೇಕು” ಎಂದು ಹೇಳಿದರು.

ಸರ್ಕಾರವೇ ಮುಂದಿನ ಹಂತದಲ್ಲೂ ಬರ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವುದಾಗಿ ತಿಳಿಸಿರುವ ಹಿನ್ನೆಲೆಯಲ್ಲಿ, ವೈಜ್ಞಾನಿಕ ಮೌಲ್ಯಮಾಪನದ ಸಂದರ್ಭದಲ್ಲಿ ಯಾವುದೇ ಅರ್ಹ ತಾಲೂಕು ಬರಪೀಡಿತ ಪಟ್ಟಿಯಿಂದ ಹೊರಗುಳಿಯದಂತೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಬರಪೀಡಿತ ತಾಲೂಕುಗಳ ಘೋಷಣೆ ಕೇವಲ ಸರ್ಕಾರಿ ಆದೇಶಕ್ಕೆ ಸೀಮಿತವಾಗದೆ, ಬರದಿಂದ ಸಂಕಷ್ಟಕ್ಕೊಳಗಾದ ಅರ್ಹ ರೈತರಿಗೆ ಬೆಳೆ ನಷ್ಟ ಪರಿಹಾರ, ಬರ ಪರಿಹಾರ ಹಾಗೂ ಅಗತ್ಯ ಸರ್ಕಾರಿ ನೆರವು ತ್ವರಿತವಾಗಿ ತಲುಪಬೇಕು.

“ಬೆಳಗಾವಿ ಜಿಲ್ಲೆಯ 9 ತಾಲೂಕುಗಳಿಗೆ ನ್ಯಾಯ ಸಿಕ್ಕಿದೆ. ಆದರೆ ಬರದಿಂದ ಬಾಧಿತವಾಗಿರುವ ಪ್ರತಿಯೊಬ್ಬ ರೈತನಿಗೂ ನ್ಯಾಯ ಸಿಗುವವರೆಗೆ SDPIಯ ಜನಪರ ಧ್ವನಿ ಮುಂದುವರಿಯಲಿದೆ” ಎಂದು ಮಲಿಕಜಾನ ಮುಲ್ಲಾ ಸ್ಪಷ್ಟಪಡಿಸಿದರು.

– ಮಲಿಕಜಾನ ಮುಲ್ಲಾ
ಅಧ್ಯಕ್ಷರು
SDPI, ಬೈಲಹೊಂಗಲ ವಿಧಾನಸಭಾ ಕ್ಷೇತ್ರ ಸಮಿತಿ

ರಾಜ್ಯ ಸರ್ಕಾರದ 3ನೇ ಹಂತದ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಬೈಲಹೊಂಗಲ ತಾಲೂಕು ಸೇರ್ಪಡೆಯಾಗಿದೆ. ಬೈಲಹೊಂಗಲ ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರ...
24/09/2026

ರಾಜ್ಯ ಸರ್ಕಾರದ 3ನೇ ಹಂತದ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಬೈಲಹೊಂಗಲ ತಾಲೂಕು ಸೇರ್ಪಡೆಯಾಗಿದೆ. ಬೈಲಹೊಂಗಲ ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರಿಸುವಂತೆ SDPI ಬೈಲಹೊಂಗಲ ವಿಧಾನಸಭಾ ಸಮಿತಿಯ ವತಿಯಿಂದ ಮಾನ್ಯ ಮುಖ್ಯಮಂತ್ರಿಗಳಿಗೆ,ಉಪವಿಭಾಗಧಿಕಾರಿ(AC) ಬೈಲಹೊಂಗಲ ಅವರ ಮೂಲಕ ಮನವಿ ಸಲ್ಲಿಸಲಾಗಿತ್ತು ಮತ್ತು ಸಾಮಾಜಿಕ ಜಾಲತಾಣ "X" ಮೂಲಕ ನಿರಂತರವಾಗಿ ರೈತರ ಸಂಕಷ್ಟವನ್ನು ಸರ್ಕಾರದ ಗಮನಕ್ಕೆ ತಂದು,ಬೈಲಹೊಂಗಲಕ್ಕೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ SDPI ನಡೆಸಿದ ನಿರಂತರ ಹೋರಾಟಕ್ಕೆ ಇದು ಮಹತ್ವದ ಫಲಿತಾಂಶ.

ಮಲಿಕಜಾನ ಮುಲ್ಲಾ
ಅಧ್ಯಕ್ಷರು SDPI ಬೈಲಹೊಂಗಲ ವಿಧಾನಸಭಾ ಕ್ಷೇತ್ರ ಸಮಿತಿ

ಸಂತಾಪಗಳುಬೈಲಹೊಂಗಲ ನಗರದ ಹಿರಿಯರು,ಮಾಜಿ ಪುರಸಭೆ ಸದಸ್ಯರು ಹಾಗೂ ಅಂಜುಮನ್ ಇಸ್ಲಾಂ ಕಮಿಟಿ ಮಾಜಿ ಕಾರ್ಯದರ್ಶಿ ಯಾದ G.D ಬಾಗವಾನ(ಬಾಗವಾನ ಜನಾಬ)ರ...
11/09/2026

ಸಂತಾಪಗಳು

ಬೈಲಹೊಂಗಲ ನಗರದ ಹಿರಿಯರು,ಮಾಜಿ ಪುರಸಭೆ ಸದಸ್ಯರು ಹಾಗೂ ಅಂಜುಮನ್ ಇಸ್ಲಾಂ ಕಮಿಟಿ ಮಾಜಿ ಕಾರ್ಯದರ್ಶಿ ಯಾದ G.D ಬಾಗವಾನ(ಬಾಗವಾನ ಜನಾಬ)ರವರ ನಿಧನಕ್ಕೆ ತೀವ್ರ ಸಂತಾಪಗಳು.

ಸರ್ವಶಕ್ತನಾದ ಅಲ್ಲಾಹನು ಅವರಿಗೆ ಸ್ವರ್ಗದಲ್ಲಿ (ಜನ್ನತ್) ಅತ್ಯುನ್ನತ ಸ್ಥಾನವನ್ನು ಕರುಣಿಸಲಿ ಹಾಗೂ ಈ ತುಂಬಲಾರದ ನಷ್ಟವನ್ನು ಭರಿಸುವ ಶಕ್ತಿ ಮತ್ತು ತಾಳ್ಮೆಯನ್ನು ಅವರ ಕುಟುಂಬ ಮತ್ತು ಬಂಧು ಬಾಂಧವರಿಗೆ ನೀಡಲಿ.

ಸಂಪೂರ್ಣ ಬೆಳಗಾವಿ ಜಿಲ್ಲೆಯನ್ನು ಬರಪೀಡಿತವೆಂದು ಘೋಷಿಸಬೇಕು ಎಂದು ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ಪಕ್ಷದ ಮುಖಂಡ...
03/09/2026

ಸಂಪೂರ್ಣ ಬೆಳಗಾವಿ ಜಿಲ್ಲೆಯನ್ನು ಬರಪೀಡಿತವೆಂದು ಘೋಷಿಸಬೇಕು ಎಂದು ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ಪಕ್ಷದ ಮುಖಂಡರು ಬೈಲಹೊಂಗಲ ಉಪವಿಭಾಗಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ D.K ಶಿವಕುಮಾರ ಅವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಸಮಿತಿ ಸದಸ್ಯ ಹಾಗೂ ಬೈಲಹೊಂಗಲ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಮಲಿಕಜಾನ ಮುಲ್ಲಾ ಉಪಾಧ್ಯಕ್ಷ ಇಲಿಯಾಸ ದೊಡಮನಿ,ಕಾರ್ಯದರ್ಶಿ ಆಕೀಬ ಪಟ್ಟಿಹಾಳ, ಮೌಲಾನಾ ಮಾಜ,ಜುನೇದ ಕರಿಕಟ್ಟಿ,ಹಾಗೂ ಸುಫಿಯಾನ ಚಕ್ಕೊಲಿ, ಮತ್ತು ಕಾರ್ಯಕರ್ತರರು ಉಪಸ್ಥಿತರಿದ್ದರು

80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಬೈಲಹೊಂಗಲ ನಗರದ ವಿವಿಧ ಪ್ರದೇಶದಲ್ಲಿ ಧ್ವಜಾರೋ...
16/08/2026

80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಬೈಲಹೊಂಗಲ ನಗರದ ವಿವಿಧ ಪ್ರದೇಶದಲ್ಲಿ ಧ್ವಜಾರೋಹಣ ಸಮಾರಂಭಗಳನ್ನು ಆಯೋಜಿಸಿತ್ತು. ದೇಶನೂರ ಚಾಳದಲ್ಲಿ, SDPI ಬೈಲಹೊಂಗಲ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಮಲಿಕಜಾನ ಮುಲ್ಲಾ ಅವರು ರಾಷ್ಟ್ರಧ್ವಜವನ್ನು ಹಾರಿಸಿದರು.

On the occasion the 80th Independence Day, the Social Democratic Party of India (SDPI) organized flag-hoisting ceremonies in various parts of Bailhongal town. At Deshanur Chawl, Malikjan Mulla, President of the SDPI Bailhongal Assembly Constituency Committee, hoisted the national flag.

ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅತಿಥಿಗಳು
16/08/2026

ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅತಿಥಿಗಳು

Address

Bail Hongal

Website

Alerts

Be the first to know and let us send you an email when SDPI_Bailhongal posts news and promotions. Your email address will not be used for any other purpose, and you can unsubscribe at any time.

Shortcuts

Share