17/09/2026
🇮🇳 ವಿಕಸಿತ ಭಾರತದ ಸಂಕಲ್ಪದ ಸಾಕಾರಕ್ಕಾಗಿ ನಿರಂತರ ಪರಿಶ್ರಮಿಸುತ್ತಿರುವ ಹೆಮ್ಮೆಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಅವರ ಜನ್ಮದಿನದ ಸುಸಂದರ್ಭದಲ್ಲಿ, ಭಾರತೀಯ ಜನತಾ ಪಕ್ಷದ ವತಿಯಿಂದ ಹಮ್ಮಿಕೊಂಡಿರುವ ಸೇವಾ ಸಂಕಲ್ಪ ಅಭಿಯಾನದ ಅಂಗವಾಗಿ ಬೈಲಹೊಂಗಲ ನಗರದ ಪ್ರಮುಖರು, ಪಕ್ಷದ ಪದಾಧಿಕಾರಿಗಳು ಕಾರ್ಯಕರ್ತರು ಹಾಗೂ ಸಾರ್ವಜನಿಕರೊಂದಿಗೆ ನಗರದ ಆರಾಧ್ಯದೈವ ಐತಿಹಾಸಿಕ ಶ್ರೀ ಮರಡಿ ಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಅವರ ಉತ್ತಮ ಆರೋಗ್ಯ, ಸುದೀರ್ಘಾಯುಷ್ಯ ಹಾಗೂ ದೇಶಸೇವೆಗೆ ಮತ್ತಷ್ಟು ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸಲಾಯಿತು.
ನಂತರ ವೃದ್ಧಾಶ್ರಮಗಳಿಗೆ ಭೇಟಿ ನೀಡಿ ಹಿರಿಯರಿಗೆ ಉಪಹಾರದ ವ್ಯವಸ್ಥೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಬೈಲಹೊಂಗಲ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು-ಹಂಪಲು, ಬ್ರೆಡ್ ಹಾಗೂ ಬಿಸ್ಕೆಟ್‌ಗಳನ್ನು ವಿತರಿಸಿ, ಅವರ ಆರೋಗ್ಯ ಹಾಗೂ ಶೀಘ್ರ ಗುಣಮುಖರಾಗುವಿಕೆಗೆ ಹಾರೈಸಲಾಯಿತು.
ದೇಶದ ಅಭಿವೃದ್ಧಿ ಹಾಗೂ ಜನಸೇವೆಯನ್ನು ತಮ್ಮ ಜೀವನದ ಧ್ಯೇಯವಾಗಿಸಿಕೊಂಡಿರುವ ನಮ್ಮ ಆದರಣೀಯ ನಾಯಕ ಶ್ರೀ ನರೇಂದ್ರ ಮೋದಿ ಜೀ ಅವರಿಗೆ ಶ್ರೀ ಮರಡಿ ಬಸವೇಶ್ವರನ ಆಶೀರ್ವಾದ ಸದಾ ಇರಲಿ. ಉತ್ತಮ ಆರೋಗ್ಯ, ಸುದೀರ್ಘಾಯುಷ್ಯ ಹಾಗೂ ಇನ್ನಷ್ಟು ಶಕ್ತಿಯನ್ನು ಕರುಣಿಸಿ, ವಿಕಸಿತ ಭಾರತದ ನಿರ್ಮಾಣದ ಸಂಕಲ್ಪವನ್ನು ಸಾಕಾರಗೊಳಿಸುವ ಕಾರ್ಯಕ್ಕೆ ಭಗವಂತನು ಆಶೀರ್ವದಿಸಲಿ ಎಂದು ಪ್ರಾರ್ಥಿಸಲಾಯಿತು. 🙏🇮🇳
ಸೇವೆಯೇ ಸಂಕಲ್ಪ…
ವಿಕಸಿತ ಭಾರತವೇ ಗುರಿ…! 🇮🇳