ರೂಪೇಶ್ ರಾಜಣ್ಣ ಅಭಿಮಾನಿಗಳ ಬಳಗ-Roopesh Rajanna Fans Club

ರೂಪೇಶ್ ರಾಜಣ್ಣ ಅಭಿಮಾನಿಗಳ ಬಳಗ-Roopesh Rajanna Fans Club

Share

RR Fans Club

16/01/2023

ಅಣ್ಣ ಇಸ್ ಬ್ಯಾಕ್..✊️🔥💛❤️

ಸಾವಿರ, ಲಕ್ಷ, ಕೋಟಿ ಬೆಲೆ ಬಾಳುವ ಹಾಸಿಗೆ ಇದ್ರೂ,
ನೆಮ್ಮದಿ ನೀಡೋಕೆ ಹರಿದ ತಾಯಿಯ ಸೀರೆಯೇ ಚಂದ.
ಲಕ್ಷ ಲಕ್ಷ ಬೆಲೆ ಬಾಳೋ ಸೂಟು ಬೂಟು ಧರಿಸಿದ್ರು,
ಈ ಬಿಳಿ ಅಂಗಿ ಜೊತೆಗೆ ಕನ್ನಡ ಶಾಲೇ ನಿಮಗೆ ಅಂದ ಅಣ್ಣ.

ನಿಮ್ಮನ್ನು ಮರಳಿ ಈ ಬಟ್ಟೆಯಲ್ಲಿ ನೋಡಿ ನಿಮ್ಮನ್ನು ಪ್ರೀತಿಸುವವರ ಹೃದಯದಲ್ಲಿ ನಿಮ್ಮ ಬಗೆಗೆ ಪ್ರೀತಿ ಹೆಚ್ಚಿದೆ,

ನಿಮ್ಮ ವಿರೋಧಿಗಳ ಎದೆಯಲ್ಲಿ ಭಯ ಹುಟ್ಟಿದೆ.

ಇನ್ಮೇಲೆ ನಡೆಯೋದೆಲ್ಲವೂ ಇತಿಹಾಸವಾಗಲಿ... ✊️

ಕನ್ನಡ-ಕನ್ನಡಿಗರು-ಕರ್ನಾಟಕದ ರಕ್ಷಣೆಗಾಗಿ ನಿಮ್ಮೊಂದಿಗೆ ನಿಂತು ಹೋರಾಡಲು ಇಡೀ ಯುವ ಸಮುದಾಯವೇ ಕಾದು ನಿಂತಿದೆ...

ದೊಡ್ಡ ದೊಡ್ಡ ಚರಿತ್ರೆ ಬರೆಯುವ ನಾಯಕರು ನಿಮ್ಮ ಗರಡಿಯಲ್ಲಿ ಹುಟ್ಟಲಿ ನಾಡ ಬೆಳಗಲಿ...

ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಅಧಿಕಾರ ಹಿಡಿದು ನಮ್ಮ ನಾಡಿನ ಗಡಿ-ನುಡಿಗಾಗಿ ನಿಮ್ಮ ಯುವ ಸೈನ್ಯದ ಒಂದೊಂದು ಹೋರಾಟ ಹೊಸ ಚರಿತ್ರೆ ಸೃಷ್ಟಿಸಲಿ ಅಣ್ಣ..

ರೂಪೇಶ್ ರಾಜಣ್ಣ ರೂಪೇಶ್ ರಾಜಣ್ಣ-ಕನ್ನಡ ಎಂದವರು ನಮ್ಮ ಸಂಗಡ

#ರೂಪೇಶ್_ರಾಜಣ್ಣ

03/01/2023

ಸಮಸ್ತ ಕರುನಾಡಿಗೆ ಧನ್ಯವಾದಗಳು.. 💛❤️

ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹದಿಂದ ರೂಪೇಶ್ ರಾಜಣ್ಣ-ಕನ್ನಡ ಎಂದವರು ನಮ್ಮ ಸಂಗಡ ಸಮಸ್ತ ಕನ್ನಡಿಗರ ಮನಸ್ಸನ್ನು ಗೆದ್ದಿದ್ದಾರೆ,
ಅವರ ಈ ಗೆಲುವಿನಲ್ಲಿ ನಿಮ್ಮೆಲ್ಲರ ಪಾತ್ರ
ಬಹುದೊಡ್ಡದ್ದು ಮತ್ತು ವಿಶೇಷ.

ಆದ್ದರಿಂದ ಸಮಸ್ತ ಹೆಮ್ಮೆಯ ಕನ್ನಡಿಗರಿಗೆ
ಧನ್ಯವಾದ ತಿಳಿಸುವುದು ನಮ್ಮೆಲ್ಲರ ಕರ್ತವ್ಯ.🙏

ನಿಮ್ಮೆಲ್ಲರ ಆಶೀರ್ವಾದ ಪ್ರೋತ್ಸಾಹ ಇನ್ನು ಮುಂದೆಯೂ ಕೂಡ ಹೀಗೆ ಇರಲಿ..❤️

ಇಲ್ಲಿಯವರೆಗೂ ಮಾಡಿರುವುದು ಒಂದು ಅಧ್ಯಾಯ,
ಇನ್ನು ಮುಂದೆ ಮಾಡುವುದು ಇತಿಹಾಸ.. ✌️✊️

ನಿಮ್ಮ ಮುಖದಲ್ಲಿ ಕಾಣುತ್ತಿರುವ ನಿಷ್ಕಲ್ಮಶ ನಗು ಸದಾ ಹೀಗೆ ಇರಲಿ ಅಣ್ಣ....

#ರೂಪೇಶ್_ರಾಜಣ್ಣ

03/01/2023

https://www.facebook.com/189689684892678/posts/1438095643385403/?mibextid=Nif5oz

ನಿಮ್ಮ ಪ್ರೀತಿಗೆ ಧನ್ಯವಾದಗಳು ಕನ್ನಡಿಗರೇ..🙏🙏

ಇಷ್ಟು ದಿನ ನನ್ನ ಇಡೀ ಬಿಗ್ ಬಾಸ್ ಪ್ರಯಾಣದಲ್ಲಿ ನನ್ನನ್ನು ಬೆಂಬಲಿಸಿದ ಕನ್ನಡ ನಾಡಿನ ಸಮಸ್ತ ಕನ್ನಡ ಕುಲಕೋಟಿಗೆ ನನ್ನ ಧನ್ಯವಾದಗಳು..
ಪ್ರೀತಿಯ ಪತ್ರಿಕಾ ಮಾಧ್ಯಮ ಹಾಗೂ ಸುದ್ದಿ ವಾಹಿನಿ ಮಿತ್ರರಿಗೂ ಧನ್ಯವಾದಗಳು..
ನನ್ನ ಪ್ರೀತಿಯ ಸಂಘಟನಾ ಮಿತ್ರರಿಗೆ
ಹಾಗೂ ಎಲ್ಲಾ ಟ್ರೋಲ್ ಪೇಜ್ ಗಳಿಗೂ ನನ್ನ ಧನ್ಯವಾದಗಳು...🙏🙏
ನಿಮ್ಮ ಪ್ರೀತಿ ಆಶೀರ್ವಾದ ಹಾಗೂ ಅಭಿಮಾನಕ್ಕೆ ನಾ ಚಿರಋಣಿ ..🙏🙏🙏
ನನ್ನ ನೋವು ನಲಿವು ಖುಷಿ ಎಲ್ಲದರಲ್ಲೂ ತಾವೆಲ್ಲ ಭಾಗಿಯಾಗಿದ್ದೀರಿ...
ಇದ್ದಷ್ಟು ದಿನವೂ ನಿಮಗೆ ಮನರಂಜನೆ ನೀಡಿದ್ದೇವೆ ಎಂದು ನಂಬಿದ್ದೇನೆ...

ಒಬ್ಬ ಕನ್ನಡ ಹೋರಾಟಗಾರ ಬಿಗ್ ಬಾಸ್ ಮನೆಯಲ್ಲಿ 100 ದಿನ ಪೂರೈಸಿ ಫಿನಾಲೇ ಸ್ಪರ್ಧಿಯಾಗಿ ಇದ್ದೆ ಅನ್ನೋದು ನನಗೆ ಹೆಮ್ಮೆಯಿದೆ..
ಇದಕ್ಕೆಲ್ಲ ನಿಮ್ಮ ಬೆಂಬಲವೇ ಕಾರಣ ಗೆಳೆಯರೇ..🙏
ಎಂದಿನಂತೆ ನನ್ನ ಕನ್ನಡಪರ ಹಾಗೂ ಕನ್ನಡಿಗರ ಪರ ಕೆಲಸಗಳು ಇನ್ನುಮುಂದೆ ನಿಮ್ಮೊಂದಿಗೆ ಸದಾ...

ಪ್ರೀತಿಯ ಕಿಚ್ಚ ಸುದೀಪ್ ಸಾರ್ ಗೆ ಧನ್ಯವಾದಗಳು🙏
ನನಗೆ ಅವಕಾಶ ನೀಡಿದ ಕಲರ್ಸ್ ಕನ್ನಡ ಚಾನಲ್ ನಾ ಮಾನ್ಯ ಶ್ರೀ ಪರಮೇಶ್ವರ್ ಗುಂಡ್ಕಲ್ ಸಾರ್ ಗೆ
ಹಾಗೂ ಪ್ರೀತಿಯಿಂದ ಮಕ್ಕಳಂತೆ ನೋಡಿಕೊಂಡ ಬಿಗ್ ಬಾಸ್ ಗೆ ನನ್ನ ಪ್ರೀತಿಯ ಧನ್ಯವಾದಗಳು..🙏🙏🙏
ಒಂದು ಅದ್ಭುತ ಕಾರ್ಯಕ್ರಮ ಬಿಗ್ ಬಾಸ್ ನಲ್ಲಿ ಭಾಗವಹಿಸಿದ್ದೇ ಅನ್ನೋ ಹೆಮ್ಮೆ ನನಗೆ.....❤️❤️

ಕನ್ನಡವೇ ಸತ್ಯ...

ಜೈ ಕನ್ನಡ...ಜೈ ಕರ್ನಾಟಕ..💛❤️

ನಿಮ್ಮ ಪ್ರೀತಿಯ ರೂಪೇಶ್ ರಾಜಣ್ಣ...

03/01/2023

🙏🙏🙏🙏

ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳಿಗೆ ಭಾವಪೂರ್ಣ ನಮನಗಳು...
ಮತ್ತೇ ಹುಟ್ಟಿ ಬನ್ನಿ ಮಾನ್ಯರೇ...

ಸದಾ ನಿಮ್ಮ ನೆನಪಲ್ಲಿ ಕರುನಾಡು..

ನಿಮ್ಮ ಆದರ್ಶಗಳು ಜನರ ಮನಸಲ್ಲಿ ಸದಾ ಜೀವಂತ..

02/01/2023

ಬಿಗ್ ಬಾಸ್ ನಲ್ಲಿ ಯಾರು ಕಪ್ ಗೆದ್ರು ಅನ್ನೋದು ಮುಖ್ಯವಲ್ಲ ಜನರ ಹೃದಯ ಯಾರ್ ಗೆದ್ರು ಅನ್ನೋದೇ ಮುಖ್ಯ ಅದಕ್ಕೆ ಉತ್ತಮ ಉದಾಹರಣೆ ಇಲ್ಲಿದೆ ನೋಡಿ 🔥 @⁨ರೂಪೇಶ್ ರಾಜಣ್ಣ ಕರುನಾಡ ಸೇವಕರು ರಾಜ್ಯ ಅಧ್ಯಕ್ಷರು⁩ ಪುಟ್ಟ ಪುಟ್ಟ ಕಂದಮ್ಮಗಳ ಕಣ್ಣಲ್ಲೂ ನೀರು ಬಂದಿದೆ ಅಂದ್ರೆ ಇನ್ನೆಷ್ಟು ಮನದ ಆಳಕ್ಕೆ ಅಣ್ಣನ ತೆಗೆದುಕೊಂಡಿದ್ದಾರೆ ಎಂಬುದು ಇದ್ರಲ್ಲೇ ಗೊತ್ತಾಗುತ್ತೆ. ಕಪ್ ಗೆಲ್ಲೋವಷ್ಟು ಸುಲಭವಲ್ಲ ಕನ್ನಡಿಗರ ಪ್ರೀತಿ ಗೆಲ್ಲೋದು. ಆ ವಿಚಾರದಲ್ಲಿ ನೀವು ಗೆದ್ದಾಗಿದೆ. ಇನ್ನುಮುಂದೆ ಅಸಲಿ ಆಟ ಈಗ ಶುರು. ✊️

01/01/2023

ರಾಜಣ್ಣ ಅದ್ಯಾವುದೋ ಪ್ರಶಸ್ತಿ ಬರದೇ ಇದ್ದರೆ ಏನಾಯಿತು ನಿನ್ನ ಹೆಸರಲ್ಲಿ ರಾಜ ಇದ್ದಾನೆ ಜೊತೆಗೆ ನಿಜವಾದ ಕನ್ನಡಿಗರು ಇದ್ದೇವೆ

31/12/2022

ಕನ್ನಡದ ಕೆಲಸಗಳು ಬಹಳ ಇವೆ ಬನ್ನಿ ಅಣ್ಣ😍😍😍💛❤️
#ಲವ್_ಯು_ರಾಜಣ್ಣ

31/12/2022

ಇಬ್ಬರು ಹೀರೋಗಳು, ಒಬ್ಬಳು ಹೆಸರಾಂತ ಧಾರಾವಾಹಿಯ ಮುಖ್ಯ ನಟಿ ಇದರ ಮದ್ಯ ಒಬ್ಬ ಸಾಮಾನ್ಯ ಕನ್ನಡ ಹೋರಾಟಗಾರ ನಿಂತಿದ್ದಾನೆ ಅಂದ್ರೆ ಅದೇ ಕಪ್ ಗೆಲ್ಲೋದಕ್ಕಿಂತ ದೊಡ್ಡ ಸಾಧನೆ.. ಅದ್ರಲ್ಲೂ ಶೆಟ್ಟಿ ಪರ20ಕ್ಕೂ ಹೆಚ್ಚು ಹೆಸರಾಂತ ಕಲಾವಿದರ ಕೂಡ ಪ್ರಚಾರ ಮಾಡಿದ್ದಾರೆ, ಹಾಗೆ ರಾಕೇಶ್ ಅಡಿಗಾಗು ಮತ್ತೆ ದೀಪಿಕಾ ದಾಸ್ ಗು ಕೂಡ ಮಾಡಿದ್ದಾರೆ ಆದರೆ ರಾಜಣ್ಣಗೆ ಇರೋದು ಬರಿ ಜನಸಾಮಾನ್ಯ ಅಭಿಮಾನಿಗಳ ಬೆಂಬಲ ಅಷ್ಟೇ ಈಗ ನೀವೇ ಯೋಚನೆ ಮಾಡಿ ಹೇಳಿ ನಿಜವಾದ “ಹೀರೊ" ಯಾರು ಅಂತ.....

ಗುಡ್ ಬಾಯ್ ಬಿಗ್ ಬಾಸ್

#ಲವ್_ಯು_ರಾಜಣ್ಣ

31/12/2022

ಭರವಸೆ ನಿರಾಸೆಯಾಯಿತು.. 💔

ಆದರೂ ಮನಸ್ಸಿಗೆ ಸಂತೋಷವಿದೆ.. 🥰

ಟ್ರೋಫಿ ಗೆಲ್ಲಲಿಲ್ಲ ಅಷ್ಟೇ,
7 ಕೋಟಿ ಕನ್ನಡಿಗರ ಮನಸ್ಸನ್ನು ಗೆದ್ದಿದ್ದಾರೆ,
ಇದಕ್ಕಿನ್ನ ದೊಡ್ಡ ಜಯ ಇದೆಯೇ..?

ಇಷ್ಟು ದಿನ ನೀವು ಮಾಡಿರುವ ಕೆಲಸಗಳು ಒಂದು ಅಧ್ಯಾಯವಾದರೆ,
ಮುಂದೆ ಮಾಡುವ ಕೆಲಸ ಇತಿಹಾಸವಾಗಬೇಕು..✌️

ನಿಮ್ಮ ಎಲ್ಲಾ ಕೆಲಸಗಳಿಗೆ ಸದಾ ಕೈಜೋಡಿಸುತ್ತಾ
ನಿಮ್ಮ ಬೆಂಬಲಕ್ಕೆ ನಿಲ್ಲಲು ಸದಾ ಸಿದ್ಧ...✊️

#ಬಿಗ್_ಬಾಸ್ #ಬಿಬಿಕೆ9

30/12/2022
Want your business to be the top-listed Government Service in Bangalore?

Click here to claim your Sponsored Listing.

Location

Category

Telephone

Website

Address


Bangalore