Pavan Kumar MP

Call Directions Contact the organization

Pavan Kumar MP Sabka Saath Sabka Vikas

02/10/2026

SIR ಪ್ರಕ್ರಿಯೆಯಲ್ಲಿ ರಾಜ್ಯದಲ್ಲಿ ಬಿಜೆಪಿಗರು ರಾಜ್ಯದ ಹಲವೆಡೆ ಮತಪಟ್ಟಿಯಿಂದ ಮತದಾರರನ್ನು ತೆಗೆಯಲು ಉದ್ದೇಶಪೂರ್ವಕವಾಗಿಯೇ ಅರ್ಜಿ ಸಲ್ಲಿಸುತ್ತಿದ್ದಾರೆ. ನಮ್ಮ ಎಲ್ಲ BLAಗಳು, ಶಾಸಕರು, ಪಕ್ಷದ ಮುಖಂಡರು ಈ ಸಂಬಂಧ ತಮ್ಮಲ್ಲಿರುವ ಮಾಹಿತಿಯನ್ನು ತಕ್ಷಣ ಸಿಎಂಒ ಕಚೇರಿಗೆ ಹಂಚಿಕೊಳ್ಳಿ. ಸರ್ಕಾರದಿಂದ ಕೈಗೊಳ್ಳಬಹುದಾದ ಕಾನೂನು ಕ್ರಮಕ್ಕೆ ಸಹಕರಿಸಿ.

• ಶ್ರೀ ಡಿ.ಕೆ ಶಿವಕುಮಾರ್
ಮಾನ್ಯ ಮುಖ್ಯಮಂತ್ರಿಗಳು

During the SIR process, BJP members across the State are deliberately submitting applications to remove voters from the electoral rolls. All our BLAs, MLAs, and party leaders must immediately share any information they have regarding this with the CMO. Please cooperate with the legal action that the Government may initiate.

• Sri D.K. Shivakumar
Honorable Chief Minister

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 157ನೇ ಜಯಂತಿಯ ಶುಭಾಶಯಗಳು.ಗಾಂಧೀಜಿಯವರ ಸರಳತೆ ಹಾಗೂ ಅಹಿಂಸಾ ತತ್ವಗಳು ಸದಾ ಮಾರ್ಗದರ್ಶಕ. ತಳಮಟ್ಟದ ಜನರಿಗೂ...
02/10/2026

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 157ನೇ ಜಯಂತಿಯ ಶುಭಾಶಯಗಳು.

ಗಾಂಧೀಜಿಯವರ ಸರಳತೆ ಹಾಗೂ ಅಹಿಂಸಾ ತತ್ವಗಳು ಸದಾ ಮಾರ್ಗದರ್ಶಕ. ತಳಮಟ್ಟದ ಜನರಿಗೂ ಸೇವೆ ಸಲ್ಲಿಸುವ ಮತ್ತು ಸ್ವಚ್ಛ, ಸಮೃದ್ಧ ಸಮಾಜ ನಿರ್ಮಿಸುವ ಅವರ ಕನಸನ್ನು ನನಸು ಮಾಡಲು ನಾವೆಲ್ಲರೂ ಒಟ್ಟಾಗಿ ಶ್ರಮಿಸೋಣ.

Best wishes on the 157th birth anniversary of the Father of the Nation, Mahatma Gandhiji.

Gandhiji's simplicity and principles of non-violence serve as an eternal guide. Let us all strive together to realize his dream of serving the grassroots and building a clean, prosperous society.

ತೂಕ ಮತ್ತು ಅಳತೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಹಾಗೂ ಅಕ್ರಮಗಳಿಗೆ ಕಡಿವಾಣ ಹಾಕಲು ಕಾಂಗ್ರೆಸ್ ಸರ್ಕಾರ, ರಾಜ್ಯದಾದ್ಯಂತ ʻಮಿಷನ್ ನಿಖರʼ ಅಭ...
01/10/2026

ತೂಕ ಮತ್ತು ಅಳತೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಹಾಗೂ ಅಕ್ರಮಗಳಿಗೆ ಕಡಿವಾಣ ಹಾಕಲು ಕಾಂಗ್ರೆಸ್ ಸರ್ಕಾರ, ರಾಜ್ಯದಾದ್ಯಂತ ʻಮಿಷನ್ ನಿಖರʼ ಅಭಿಯಾನ ಮುಂದುವರಿಸಿದೆ.

ಈ ಹಿಂದೆ ಇಂಧನ ಅಳತೆಯಲ್ಲಿ ಅಕ್ರಮ ನಡೆಸುತ್ತಿದ್ದ ಪೆಟ್ರೋಲ್ ಬಂಕ್ ಗಳ ವಿರುದ್ಧ ಸಮರ ಸಾರಿದ್ದ ಸರ್ಕಾರ, ಇದೀಗ ರಾಜ್ಯದ 18 ಎಲ್‌ಪಿಜಿ ಬಾಟ್ಲಿಂಗ್ ಘಟಕಗಳ ಮೇಲೆ ದಾಳಿ ನಡೆಸಿದೆ.

ಸಿಲಿಂಡರ್ ಗಳ ತೂಕದಲ್ಲಿ ಅಕ್ರಮ ನಡೆಸುತ್ತಿದ್ದ ಏಜೆನ್ಸಿಗಳ ವಿರುದ್ಧ 3 ಕೇಸು ದಾಖಲಿಸಿದ್ದು, 79 ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ.

The Congress Government has continued its State-wide 'Mission Nikhara' campaign to ensure transparency in weights and measures and to curb irregularities.

Having previously cracked down on petrol bunks engaging in fuel measurement irregularities, the Government has now conducted raids on 18 LPG bottling plants across the State.

Cases have been registered against agencies found manipulating cylinder weights, and fines amounting to ₹79,000 have been collected.

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ ತಡೆಯಲು ನಮ್ಮ ಕಾಂಗ್ರೆಸ್ ಸರ್ಕಾರ ಮಾಸ್ಟರ್ ಪ್ಲಾನ್ ರೂಪಿಸಿದೆ.KEA ಮತ್ತು KPSC ಪರೀಕ್ಷೆಗಳಲ್ಲಿ ಸದ್ಯ ಬ...
30/09/2026

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ ತಡೆಯಲು ನಮ್ಮ ಕಾಂಗ್ರೆಸ್ ಸರ್ಕಾರ ಮಾಸ್ಟರ್ ಪ್ಲಾನ್ ರೂಪಿಸಿದೆ.

KEA ಮತ್ತು KPSC ಪರೀಕ್ಷೆಗಳಲ್ಲಿ ಸದ್ಯ ಬಳಸುತ್ತಿರುವ ಡಬಲ್ ಲೇಯರ್ ಒಎಂಆರ್ ಶೀಟ್ ಗಳ ಬದಲು ತ್ರಿಪಲ್ ಲೇಯರ್ OMR ಶೀಟ್ ಬಳಸಲು ಚಿಂತನೆ ನಡೆಸಿದೆ.

ಒಎಂಆರ್ ನ ಮೂಲಪ್ರತಿಯನ್ನು ಪ್ರಾಧಿಕಾರಕ್ಕೆ, ಮತ್ತೊಂದನ್ನು ಅಭ್ಯರ್ಥಿಗಳಿಗೆ ನೀಡಲಾಗುತ್ತದೆ. ಆದರೆ ಹೊಸ ಪ್ರಸ್ತಾವನೆ ಪ್ರಕಾರ, 3ನೇ ಒಎಂಆರ್ ಪ್ರತಿಯನ್ನು ಸಂಪೂರ್ಣ ನೇಮಕಾತಿ ಪ್ರಕ್ರಿಯೆ ಮುಗಿಯುವವರೆಗೆ DC ಕಚೇರಿಯಲ್ಲಿ ಸುರಕ್ಷಿತವಾಗಿಡಲು ನಿರ್ಧರಿಸಲಾಗಿದೆ.

ಒಂದು ವೇಳೆ ಒಎಂಆರ್ ಶೀಟ್‌ಗಳನ್ನು ತಿರುಚಿದ (Tampering) ಆರೋಪ ಬಂದರೆ, 3 ಒಎಂಆರ್ ಪ್ರತಿಗಳನ್ನು ತಾಳೆ ಮಾಡಲು ಇದರಿಂದ ಸಹಕಾರಿಯಾಗಲಿದೆ.

Our Congress Government has devised a master plan to prevent irregularities in competitive examinations.

There is a proposal to switch from the currently used double-layer OMR sheets to triple-layer OMR sheets for KEA and KPSC examinations.

Typically, the original copy of the OMR sheet goes to the authority, while another is given to the candidate. However, under the new proposal, it has been decided to securely store the third copy at the Deputy Commissioner's (DC) office until the entire recruitment process is concluded.

This measure will facilitate the cross-verification of the three OMR copies should any allegations of tampering arise.

ನಾಡಿಗಾಗಿ ಒಂದು ಹೆಜ್ಜೆ, ಕ್ಷೇತ್ರಕ್ಕಾಗಿ ಒಂದು ಯಾತ್ರೆ, ಹೆಜ್ಜೆ ಹೆಜ್ಜೆಗೂ ಜನರ ಧ್ವನಿ!ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸ...
29/09/2026

ನಾಡಿಗಾಗಿ ಒಂದು ಹೆಜ್ಜೆ, ಕ್ಷೇತ್ರಕ್ಕಾಗಿ ಒಂದು ಯಾತ್ರೆ, ಹೆಜ್ಜೆ ಹೆಜ್ಜೆಗೂ ಜನರ ಧ್ವನಿ!

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಲಾಗುತ್ತಿರುವ ಐತಿಹಾಸಿಕ 'ಭಾರತ ಜೋಡೋ ಯಾತ್ರೆ 2.0' ಕ್ಕೆ ಸೆಪ್ಟೆಂಬರ್ 30 ರಂದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಅಧಿಕೃತವಾಗಿ ಚಾಲನೆ ದೊರೆಯಲಿದೆ.

A step for the nation, a journey for the constituency—the voice of the people at every step!

The historic 'Bharat Jodo Yatra 2.0', organized by the Karnataka Pradesh Congress Committee, will be officially flagged off on September 30 at Shikaripura in Shivamogga district.

ಜಿಬಿಎ ವ್ಯಾಪ್ತಿಯಲ್ಲಿ 50x80 ಅಡಿ ವಿಸ್ತೀರ್ಣದ ನಿವೇಶನದಲ್ಲಿ 4 ಅಂತಸ್ತಿನ ವಸತಿ ಕಟ್ಟಡ ನಿರ್ಮಾಣಕ್ಕೆ ಕೇವಲ 30 ನಿಮಿಷದಲ್ಲಿ ಆನ್ ಲೈನ್ ನಲ್ಲೇ...
29/09/2026

ಜಿಬಿಎ ವ್ಯಾಪ್ತಿಯಲ್ಲಿ 50x80 ಅಡಿ ವಿಸ್ತೀರ್ಣದ ನಿವೇಶನದಲ್ಲಿ 4 ಅಂತಸ್ತಿನ ವಸತಿ ಕಟ್ಟಡ ನಿರ್ಮಾಣಕ್ಕೆ ಕೇವಲ 30 ನಿಮಿಷದಲ್ಲಿ ಆನ್ ಲೈನ್ ನಲ್ಲೇ ನಕ್ಷೆ ನೀಡುವ ʻನಂಬಿಕೆ ನಕ್ಷೆ 2.0ʼ ವ್ಯವಸ್ಥೆಗೆ ನಮ್ಮ ಕಾಂಗ್ರೆಸ್ ಸರ್ಕಾರ ಚಾಲನೆ ನೀಡಿದೆ.

ಈ ಹಿಂದೆ ಎಲ್ಲ ದಾಖಲೆಗಳು ಸರಿಯಾಗಿದ್ದರೆ ಒಂದು ದಿನದಲ್ಲಿ ʻಡ್ರಾಫ್ಟ್ ಪ್ಲಾನ್ʼ ಹಾಗೂ 15 ದಿನಗಳಲ್ಲಿ ಅಂತಿಮ ನಕ್ಷೆ ನೀಡುವ ವ್ಯವಸ್ಥೆ ಇತ್ತು. ಈಗ ಈ ವ್ಯವಸ್ಥೆಯನ್ನೇ ಇನ್ನಷ್ಟು ಸರಳಗೊಳಿಸಿ ಕೇವಲ 30 ನಿಮಿಷಗಳಲ್ಲಿ ಆನ್ ಲೈನ್ ನಲ್ಲೇ ನಕ್ಷೆ ನೀಡುವ ಸೌಲಭ್ಯ ಕಲ್ಪಿಸಲಾಗಿದೆ.

ಪಾರದರ್ಶಕ ಹಾಗೂ ಡಿಜಿಟಲ್ ಆಡಳಿತದ ಉದ್ದೇಶದಿಂದ ಈ ತಂತ್ರಾಂಶ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.

Our Congress Government has launched the 'Nambike Nakshe 2.0' system, which provides an online building plan within just 30 minutes for the construction of a four-story residential building on a 50x80-foot plot within the GBA (Greater Bengaluru Area) limits.

Previously, the system involved issuing a 'draft plan' in one day and the final plan in 15 days, provided all documents were in order. Now, this process has been further simplified to enable the issuance of the plan online in just 30 minutes.

This software system has been implemented to ensure transparent and digital governance.

ಭಾರತಾಂಬೆಯ ಹೆಮ್ಮೆಯ ಪುತ್ರ, ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಜಯಂತಿಯಂದು ಗೌರವಪೂರ್ವಕ ನಮನಗಳು.‎‎ಅವರ ಅಚಲ ದೇಶಭಕ್ತಿ,...
28/09/2026

ಭಾರತಾಂಬೆಯ ಹೆಮ್ಮೆಯ ಪುತ್ರ, ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಜಯಂತಿಯಂದು ಗೌರವಪೂರ್ವಕ ನಮನಗಳು.
‎‎ಅವರ ಅಚಲ ದೇಶಭಕ್ತಿ, ಧೈರ್ಯ, ತ್ಯಾಗ ಮತ್ತು ಸ್ವಾತಂತ್ರ್ಯದ ಕನಸು ಇಂದಿಗೂ ಪ್ರತಿಯೊಬ್ಬ ಭಾರತೀಯನಲ್ಲೂ ರಾಷ್ಟ್ರಪ್ರೇಮದ ಕಿಚ್ಚು ಹೊತ್ತಿಸುತ್ತದೆ.

Respectful tributes on the birth anniversary of the revolutionary freedom fighter and proud son of Mother India, Bhagat Singh.
His unwavering patriotism, courage, sacrifice, and vision of freedom continue to ignite the flame of love for the nation in every Indian.

ಭಾರತ ದೇಶ ಕಂಡ ಶ್ರೇಷ್ಠ ಆರ್ಥಿಕ ತಜ್ಞ, ಚಿಂತಕ, ಮಾಜಿ ಪ್ರಧಾನಮಂತ್ರಿಗಳಾದ ಡಾ.ಮನಮೋಹನ್ ಸಿಂಗ್ ಅವರ ಜನ್ಮದಿನದಂದು ಗೌರವ ಪೂರ್ವಕ ನಮನಗಳು.ದೇಶದ ...
26/09/2026

ಭಾರತ ದೇಶ ಕಂಡ ಶ್ರೇಷ್ಠ ಆರ್ಥಿಕ ತಜ್ಞ, ಚಿಂತಕ, ಮಾಜಿ ಪ್ರಧಾನಮಂತ್ರಿಗಳಾದ ಡಾ.ಮನಮೋಹನ್ ಸಿಂಗ್ ಅವರ ಜನ್ಮದಿನದಂದು ಗೌರವ ಪೂರ್ವಕ ನಮನಗಳು.

ದೇಶದ ಆರ್ಥಿಕ ಬೆಳವಣಿಗೆಗೆ ಬಲವಾದ ಅಡಿಪಾಯ ಹಾಕುವುದರ ಜೊತೆಗೆ, ಶಿಕ್ಷಣದ ಹಕ್ಕು, ಮಾಹಿತಿ ಹಕ್ಕು, ಉದ್ಯೋಗ ಖಾತ್ರಿ ಹಾಗೂ ಆಹಾರ ಭದ್ರತೆಯಂತಹ ಜನಪರ ಹಕ್ಕುಗಳಿಗೆ ಕಾನೂನಿನ ಬಲ ನೀಡಿದ ಅವರ ನಾಯಕತ್ವ ಭಾರತದ ಅಭಿವೃದ್ಧಿಯ ಪಯಣದಲ್ಲಿ ಮಹತ್ವದ ಅಧ್ಯಾಯವಾಗಿದೆ.

Respectful tributes on the birthday of Dr. Manmohan Singh—a distinguished economist, thinker, and former Prime Minister of India.

His leadership marks a significant chapter in India's development journey; beyond laying a robust foundation for the nation's economic growth, he empowered people-centric rights—such as the Right to Education, Right to Information, employment guarantees, and food security—with the force of law.

ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಅವರಿಂದ ನಾಡಹಬ್ಬ ದಸರಾ 2026 ಉದ್ಘಾಟನೆ.ನಾಡಹಬ್ಬ ಮೈಸೂರು ದಸರಾ 2026 ರ ಉದ್ಘಾಟನೆಯನ್ನು ಜ್ಞಾನ ಮತ್ತು ದಾಸೋಹ...
25/09/2026

ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಅವರಿಂದ ನಾಡಹಬ್ಬ ದಸರಾ 2026 ಉದ್ಘಾಟನೆ.

ನಾಡಹಬ್ಬ ಮೈಸೂರು ದಸರಾ 2026 ರ ಉದ್ಘಾಟನೆಯನ್ನು ಜ್ಞಾನ ಮತ್ತು ದಾಸೋಹದ ಕಾಯಕಯೋಗಿಗಳಾದ ಕೊಪ್ಪಳದ ಗವಿಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳು ನೆರವೇರಿಸಲಿರುವುದು ನಾಡಿನ ಜನತೆಗೆ ಹೆಮ್ಮೆಯ ಹಾಗೂ ಸಂತಸದ ಕ್ಷಣ.

ನಮ್ಮ ನಾಡಿನ ಸಂಸ್ಕೃತಿ ಹಾಗೂ ಪರಂಪರೆಯನ್ನು ಪ್ರತಿಬಿಂಬಿಸುವ ವಿಶ್ವವಿಖ್ಯಾತ ಮೈಸೂರು ದಸರಾವನ್ನು ಇಂತಹ ಸಮಾಜಮುಖಿ, ಕಾಯಕಯೋಗಿ ಸಂತರು ಉದ್ಘಾಟಿಸುತ್ತಿರುವುದು ಈ ಬಾರಿಯ ದಸರಾ ಸಂಭ್ರಮಕ್ಕೆ ಮತ್ತಷ್ಟು ಅರ್ಥ ಹಾಗೂ ಗೌರವವನ್ನು ತಂದಿದೆ.

Inauguration of the State Festival 'Mysuru Dasara 2026' by Sri Gavisiddeshwara Swamiji.

It is a moment of pride and joy for the people of the state that the Mysuru Dasara 2026 festival will be inaugurated by His Holiness Sri Sri Sri Abhinava Gavisiddeshwara Mahaswamiji of Gavi Math, Koppal—a revered saint dedicated to the noble causes of disseminating knowledge and selfless service (Dasoha).

The inauguration of the world-renowned Mysuru Dasara—which reflects our State's culture and heritage—by such a socially conscious saint dedicated to selfless service adds profound meaning and dignity to this year's festivities.

25/09/2026

ಗ್ರಾಹಕರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದ ಕ್ವಿಕ್ ಕಾಮರ್ಸ್ ದಂಧೆ ವಿರುದ್ಧ ನಮ್ಮ ಕಾಂಗ್ರೆಸ್ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡಿದೆ.

ಆನೇಕಲ್, ದೇವನಹಳ್ಳಿ, ಲಿಂಗರಾಜಪುರಂ, ಹೊಸಕೋಟೆಯ ಕ್ವಿಕ್ ಕಾಮರ್ಸ್ ಸ್ಟೋರ್ ಗಳ ಮೇಲೆ ದಾಳಿ ನಡೆಸಿ, ಕೋಟ್ಯಾಂತರ ರೂ. ಮೌಲ್ಯದ ಕಳಪೆ ಸರಕುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇದುವರೆಗೆ 236 ಗೋದಾಮುಗಳ ತಪಾಸಣೆ ನಡೆಸಲಾಗಿದ್ದು, 44 ಸಂಸ್ಥೆಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗಿದೆ.

Our Congress Government has taken stern action against the 'quick commerce' trade that was playing with the lives of consumers.

Raids were conducted on quick commerce stores in Anekal, Devanahalli, Lingarajapuram, and Hoskote, resulting in the seizure of substandard goods worth crores of rupees. So far, 236 warehouses have been inspected, and disciplinary action has been initiated against 44 entities.

Address

Bharath Housing Society, Chikkallsandra
Bangalore
560061

Telephone

+919972843899

Website

Alerts

Be the first to know and let us send you an email when Pavan Kumar MP posts news and promotions. Your email address will not be used for any other purpose, and you can unsubscribe at any time.

Contact The Organization

Send a message to Pavan Kumar MP:

Shortcuts

Share

Category