Pavan Kumar MP

Pavan Kumar MP

Share

Sabka Saath Sabka Vikas

01/06/2026

ಮಾಜಿ ಸಂಸದರು, ಮಾಜಿ ಬಿಡಿಎ ಅಧ್ಯಕ್ಷರು ಹಾಗೂ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಹಿರಿಯ ಕಾಂಗ್ರೆಸ್ ನಾಯಕರಾದ ಶ್ರೀ ಎಲ್.ಆರ್. ಶಿವರಾಮೇ ಗೌಡ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

ಭಗವಂತ ನಿಮಗೆ ಆಯುರಾರೋಗ್ಯ ಕೊಟ್ಟು ಕಾಪಾಡಲೆಂದು ಪ್ರಾರ್ಥಿಸುತ್ತೇನೆ.

Heartiest birthday greetings to former MP, former BDA President and senior Congress leader from Padmanabhanagar Assembly constituency, Shri L.R. Shivarame Gowda.

I pray that God will grant you good health and protect you.

30/05/2026

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಸನ್ಮಾನ್ಯ ಶ್ರೀ ಡಿ.ಕೆ ಶಿವಕುಮಾರ್ ಅವರಿಗೆ ಅವರಿಗೆ ಹಾರ್ದಿಕ ಅಭಿನಂದನೆಗಳು.

ನಿಮ್ಮ ದಕ್ಷ ನಾಯಕತ್ವ, ಸಂಘಟನಾ ಚಾತುರ್ಯ ಮತ್ತು ಕಠಿಣ ಪರಿಶ್ರಮಕ್ಕೆ ಸಿಕ್ಕ ಅತ್ಯಂತ ಸೂಕ್ತ ಗೌರವ ಇದಾಗಿದೆ. ನಿಮ್ಮ ಮಾರ್ಗದರ್ಶನದಲ್ಲಿ ನಮ್ಮ ರಾಜ್ಯವು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಲಿ ಹಾಗೂ ಜನರ ನಿರೀಕ್ಷೆಗಳು ಸಾಕಾರಗೊಳ್ಳಲಿ ಎಂದು ಆಶಿಸುತ್ತೇನೆ.

Heartiest congratulations to Hon'ble Shri D.K. Shivakumar on being elected as the leader of the Congress Legislature Party.

This is a most fitting tribute to your effective leadership, organizational skills and hard work. I hope that under your guidance, our state will move forward on the path of development and the aspirations of the people will be fulfilled.

30/05/2026

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುತ್ತಿರುವ ಪೊಲೀಸ್ ಸಿಬ್ಬಂದಿ ನೆರವಿಗೆ ನಮ್ಮ ರಾಜ್ಯ ಕಾಂಗ್ರೆಸ್ ಸರ್ಕಾರ ₹1500 ಕೋಟಿ ವೆಚ್ಚದಲ್ಲಿ 4,914 ವಸತಿ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ.

ಇನ್ನು 60 ಮಹಿಳಾ ಕಿಯೋಸ್ಕ್ ಸ್ಥಾಪನೆ ಮಾಡಲಾಗುತ್ತಿದೆ. ₹18.85 ಕೋಟಿ ವೆಚ್ಚದ ನಿರ್ಭಯ ಯೋಜನೆ ಅಡಿ ಕಮಾಂಡ್ ಸೆಂಟರ್ ಸ್ಥಾಪನೆಗೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ.

Our State Congress Government has approved the construction of 4,914 houses at a cost of ₹1500 crore to help the police personnel maintaining law and order in the State.

60 more women's kiosks are being set up. The Congress Government is planning to set up a command center under the Nirbhaya scheme at a cost of ₹18.85 crore.

27/05/2026

ನಮ್ಮ ಕಾಂಗ್ರೆಸ್ ಸರ್ಕಾರವು ರಾಜ್ಯದ 81 ಉದ್ಯೋಗ ವಲಯಗಳ ಕಾರ್ಮಿಕರ ಕನಿಷ್ಠ ವೇತನವನ್ನು ಗರಿಷ್ಠ ಶೇ. 60 ರಷ್ಟು ಹೆಚ್ಚಳ ಮಾಡಿ ಅಧಿಸೂಚನೆ ಹೊರಡಿಸಿದೆ.

ಈ ಅಧಿಸೂಚನೆಯಿಂದ ಇ - ಕಾಮರ್ಸ್‌, ಕೊರಿಯರ್‌, ಖಾಸಗಿ ಶಾಲೆ - ಕಾಲೇಜುಗಳ ಬೋಧಕೇತರ ಸಿಬ್ಬಂದಿ, ಆಸ್ಪತ್ರೆ, ಹೋಟೆಲ್‌, ಆಹಾರ ಸಂಸ್ಕರಣೆ, ಪೆಟ್ರೋಲ್‌ ಬಂಕ್‌, ಧಾರ್ಮಿಕ ಸಂಸ್ಥೆಗಳಲ್ಲಿ ದುಡಿಯುವ ಸಿಬ್ಬಂದಿ, ಖಾಸಗಿ ಫೈನಾನ್ಸ್‌ ಸೇರಿದಂತೆ 83ಕ್ಕೂ ಅಧಿಕ ಅನುಸೂಚಿತ ಉದ್ಯೋಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಇದರಿಂದ ಉಪಯೋಗವಾಗಲಿದೆ

Our Congress Government has issued a notification increasing the minimum wage of workers in 81 employment sectors in the State by a maximum of 60 percent.

This notification will benefit workers working in more than 83 scheduled occupations including e-commerce, couriers, non-teaching staff of private schools and colleges, hospitals, hotels, food processing, petrol pumps, staff working in religious institutions, private finance, etc.

25/05/2026

ಕರ್ನಾಟಕದಲ್ಲಿ 15 ಸಾವಿರ ಶಿಕ್ಷಕರ ನೇಮಕಾತಿಗೆ ಗ್ರೀನ್ ಸಿಗ್ನಲ್!

ರಾಜ್ಯದಲ್ಲಿ 15 ಸಾವಿರ ಶಿಕ್ಷಕರ ನೇಮಕಾತಿಗೆ ನಮ್ಮ ಕಾಂಗ್ರೆಸ್ ಸರ್ಕಾರವು ಅನುಮೋದನೆ ನೀಡಿದ್ದು, ಆ ಮೂಲಕ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಸಮಸ್ಯೆ ನಿವಾರಣೆಗೆ ಮುಂದಾಗಿದೆ. ಇದರಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಲಿದೆ.

Green signal for recruitment of 15 thousand teachers in Karnataka!

Our Congress Government has approved the recruitment of 15 thousand teachers in the state, thereby addressing the problem of teacher shortage in government schools. This will ensure better education for government school children.

25/05/2026

ಬೆಂಗಳೂರಲ್ಲಿ ತಲೆ ಎತ್ತಲಿರುವ ದೇಶದ 2ನೇ ಅತಿ ದೊಡ್ಡ ಕ್ರೀಡಾಂಗಣ!

ಸಿಲಿಕಾನ್ ಸಿಟಿ ಬೆಂಗಳೂರಿನ ಕೀರ್ತಿ ಮುಕುಟಕ್ಕೆ ಮತ್ತೊಂದು ಐತಿಹಾಸಿಕ ಗರಿ ಸೇರ್ಪಡೆಯಾಗುತ್ತಿದೆ.

ನಮ್ಮ ಬೆಂಗಳೂರಿನ ಆನೇಕಲ್‌ನಲ್ಲಿ ₹943.46 ಕೋಟಿ ವೆಚ್ಚದಲ್ಲಿ 80,000 ಆಸನಗಳ ಸಾಮರ್ಥ್ಯದ ದೇಶದ 2ನೇ ಅತಿ ದೊಡ್ಡ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣವಾಗುತ್ತಿದೆ.

ಈ ಭವ್ಯ ಯೋಜನೆಯು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರಲಿದ್ದು, ನಾಡಿನ ಕ್ರೀಡಾಪಟುಗಳ ಉಜ್ವಲ ಭವಿಷ್ಯಕ್ಕೆ ಭದ್ರ ಬುನಾದಿಯಾಗಲಿದೆ.

The country's 2nd largest stadium to rise in Bengaluru!

Another historic feather is being added to the crown of fame of Silicon City Bengaluru.

The country's 2nd largest international cricket stadium with a capacity of 80,000 seats is being built at a cost of ₹943.46 crore in Anekal, our Bengaluru.

This grand project will have state-of-the-art facilities and will be a solid foundation for the bright future of the country's athletes.

22/05/2026

ಬೆಂಗಳೂರು ಜಲಮಂಡಳಿಗೆ ಜಾಗತಿಕ ಮನ್ನಣೆ!

ನಮ್ಮ ಕಾಂಗ್ರೆಸ್ ‌ಸರ್ಕಾರದ ದಕ್ಷ ಆಡಳಿತದಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಯು ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ ನಡೆದ ಪ್ರತಿಷ್ಠಿತ ಗ್ಲೋಬಲ್ ವಾಟರ್ ಸಮ್ಮಿಟ್ 2026 ರಲ್ಲಿ ಜಾಗತಿಕ ಮಟ್ಟದ ಅತ್ಯುತ್ತಮ 5 ಜಲಸಂಸ್ಥೆಗಳಲ್ಲಿ ಒಂದಾಗಿ ಆಯ್ಕೆಯಾಗಿದ್ದು, ಈ ಸಾಧನೆ ಮಾಡಿದ ಭಾರತದ ಏಕೈಕ ಜಲಮಂಡಳಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಜಾಗತಿಕ ಮನ್ನಣೆಯು ನೀರಿನ ಲಭ್ಯತೆ ಮತ್ತು ಸಂರಕ್ಷಣೆಯಲ್ಲಿ ಬೆಂಗಳೂರು ನಗರವು ಕೈಗೊಳ್ಳುತ್ತಿರುವ ದೂರದೃಷ್ಟಿಯ ತಂತ್ರಜ್ಞಾನ ಆಧಾರಿತ ಕ್ರಮಗಳಿಗೆ ಸಾಕ್ಷಿಯಾಗಿದೆ.

Global recognition for Bangalore Water Board!

Under the efficient governance of our Congress government, Bangalore Water Supply and Sewerage Board (BWSSB) has been selected as one of the top 5 water bodies globally at the prestigious Global Water Summit 2026 held in Madrid, Spain, making it the only water board in India to achieve this feat.

This global recognition is a testament to the visionary technology-based measures being taken by Bengaluru city in water availability and conservation.

22/05/2026

ಸತಿಪದ್ಧತಿ ನಿಷೇಧಕ್ಕಾಗಿ ಹೋರಾಡಿ ಬ್ರಹ್ಮ ಸಮಾಜ ಸ್ಥಾಪಿಸಿ ರಾಷ್ಟ್ರದ ಸಮಾಜ ಸುಧಾರಣೆಗೆ ಬಹುದೊಡ್ಡ ಕೊಡುಗೆ ನೀಡಿದ ಭಾರತೀಯ ಪುನರುಜ್ಜೀವನದ ಪಿತಾಮಹ ರಾಜಾರಾಮ ಮೋಹನ್ ರಾಯ್ ಅವರ ಜಯಂತಿಯಂದು ಗೌರವ ನಮನಗಳು.

ಅವರ ಆದರ್ಶಗಳನ್ನು, ಧರ್ಮ ಸಂರಕ್ಷಣೆಯ ಸಂದೇಶಗಳನ್ನು ಪಾಲಿಸೋಣ.

Tributes to Raja Ram Mohan Roy, the father of Indian renaissance, who fought for the abolition of sati and founded the Brahma Samaj, and made a great contribution to the social reform of the nation, on his birth anniversary.

Let us follow his ideals and messages of preserving religion.

21/05/2026

ರಾಜ್ಯದ ಗ್ರಾಮೀಣ ಆಡಳಿತಕ್ಕೆ ರಾಷ್ಟ್ರಮಟ್ಟದ ಗರಿ!

2025ನೇ ರಾಷ್ಟ್ರೀಯ ಪಂಚಾಯಿತಿ ಪ್ರಶಸ್ತಿಗೆ ಕರ್ನಾಟಕ ರಾಜ್ಯದ 6 ಗ್ರಾಮ ಪಂಚಾಯಿತಿಗಳು ಆಯ್ಕೆಯಾಗಿವೆ. ಮುದ್ರಾಡಿ, ವಂಡ್ಲೆ, ಹಾಲನಾಯಕನಹಳ್ಳಿ, ಮಡಾಮಕ್ಕಿ, ಸಾಣೂರು, ಹಕ್ಲಾಡಿ ಗ್ರಾಮ ಪಂಚಾಯಿತಿಗಳು ಪ್ರಶಸ್ತಿಗೆ ಭಾಜನವಾಗಿದ್ದು, ಕಾಂಗ್ರೆಸ್ ಸರ್ಕಾರದ ಪಾರದರ್ಶಕ ಆಡಳಿತಕ್ಕೆ ಸಾಕ್ಷಿಯಾಗಿದೆ.

National level feather for the State's rural administration!

6 Gram Panchayats of Karnataka have been selected for the 2025th National Panchayat Awards. Mudradi, Vandley, Halanayakanahalli, Madamaki, Sanur, Hakladi Gram Panchayats have won the award, testifying to the transparent administration of the Congress Government.


20/05/2026

ಮೂರು ವರ್ಷಗಳು...
ನೂರಾರು ಸಾಧನೆಗಳು...

ನಾಡಿನ ಜನತೆಯ ಅಪಾರ ಪ್ರೀತಿ, ಅಭಿಮಾನ ಹಾಗೂ ನಂಬಿಕೆಯಿಂದ ಚುನಾಯಿಸಿದ ನಮ್ಮ ಗ್ಯಾರಂಟಿ ಸರ್ಕಾರಕ್ಕೆ ಈಗ ಮೂರು ವರ್ಷ!

ಅಭೂತಪೂರ್ವ ಜನಾಶೀರ್ವಾದದೊಂದಿಗೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರವು ಜನರು ಇಟ್ಟಿರುವ ನಂಬಿಕೆ, ಭರವಸೆಗಳನ್ನು ಉಳಿಸಿಕೊಂಡು ಬಂದಿದ್ದು, ರಾಷ್ಟ್ರ ರಾಜಕೀಯದಲ್ಲಿ ಮೊದಲ ಬಾರಿಗೆ ಗ್ಯಾರಂಟಿಗಳ ಮೂಲಕ ಸಂಚಲನ ಮೂಡಿಸಿದ್ದ ಕಾಂಗ್ರೆಸ್ ಸರ್ಕಾರ ಈಗ ಯೋಜನೆಗಳ ಯಶಸ್ವಿ ಅನುಷ್ಠಾನದಲ್ಲೂ ಸೈ ಎನಿಸಿಕೊಂಡಿದೆ.

ಕೇವಲ ಭರವಸೆಗಳನ್ನಷ್ಟೇ ನೀಡದೆ, ಅವುಗಳನ್ನು ಸಾಕಾರಗೊಳಿಸಿ ಜನರ ಆರ್ಥಿಕ ಸಬಲೀಕರಣಕ್ಕೆ ಶ್ರಮಿಸಿದ ತೃಪ್ತಿ ನಮ್ಮದಾಗಿದೆ.

Three years...
Hundreds of achievements...

Our guarantee government, elected with immense love, admiration and trust of the people of the country, has now completed three years!

The Congress Government, which came to power with unprecedented public blessings, has maintained the trust and promises placed by the people. The Congress Government, which created a stir in national politics for the first time through guarantees, has now also become a force in the successful implementation of projects.

We are satisfied that it has not only made promises, but also worked towards the economic empowerment of the people by fulfilling them.

Want your business to be the top-listed Government Service in Bangalore?

Click here to claim your Sponsored Listing.

Location

Category

Telephone

Website

Address


Bharath Housing Society, Chikkallsandra
Bangalore
560061