ಪೊಲೀಸ್ ಆಯುಕ್ತರು
ಇನ್ಫೆಂಟ್ರಿ ರಸ್ತೆ
ಬೆಂಗಳೂರು ನಗರ
ವಿಷಯ:- ಜೀವನ್ ಭೀಮಾ ನಗರ ಠಾಣೆಯಲ್ಲಿ 13/3/ 26 ರಂದು NCR ಮಾಡಿರುತ್ತಾರೆ ಇದುವರೆಗೂ ಆ ವಿಷಯದ ಕುರಿತು ಏನು ನ್ಯಾಯ ಕೊಡಿಸಿಲ್ಲ ಅಸಡ್ಡೆ ರೀತಿಯಲ್ಲಿ ವ್ಯವಸ್ಥೆಗೆ ಬೇಸತ್ತು ದೂರು..
ಸ್ವಾಮಿ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಜೀವನ್ ಭೀಮ ನಗರ ಪೊಲೀಸ್ ಠಾಣೆಯಲ್ಲಿ ದಿನಾಂಕ 13/03/2026ರಂದು ZoomCar ಎನ್ನುವ ಹೆಸರಿನ ಸಂಸ್ಥೆ ವಿರುದ್ಧ ದೂರು ನೀಡಿದ್ದೇವೆ NCR ಕಾಪಿ ಸಹ ಲಗತ್ತಿಸಿದ್ದೀವಿ.. ಈ ಸಂಸ್ಥೆ ವೈಟ್ ಬೋರ್ಡ್ ಕಾರ್ ಗಳನ್ನು ಸಾರಿಗೇತರವಾಗಿ ಬಳಸಿಕೊಂಡು Online App ಮೂಲಕ ಅಕ್ರಮ ಚಟುವಟಿಕೆ ನಡೆಸುತ್ತಿದೆ. ವೈಟ್ ಬೋರ್ಡ್ ಕಾರುಗಳು ಸ್ವಂತ ಬಳಕೆಗೆ ಇರುವ ವಾಹನ ಇಂತಹ ವಾಹನದ ಮಾಲೀಕರನ್ನು ಅವರ ತಂತ್ರಗಾರಿಕೆಯಿಂದ ಸಂಪರ್ಕ ಮಾಡಿಕೊಂಡು ಅವರ ಮನವೊಲಿಸಿ ಯಾಕೆ ಮನೆ ಮುಂದೆ ಕಾರು ನಿಲ್ಲಿಸುತ್ತೀರಾ ಬಂಡವಾಳ ಹಾಕಿ ಯಾಕೆ EMI ಕೈಯಿಂದ ಸಾಲ ಕಟ್ಟುತ್ತೀರಾ ನಮ್ಮ ಸಂಸ್ಥೆಗೆ ಆನ್ಲೈನ್ ಆಪ್ ಮೂಲಕ ಸೇರ್ಪಡೆಯಾಗಿ ನಿಮ್ಮ ಕಾರನ್ನು ಬಾಡಿಗೆಗೆ ಬಿಡಿ ನಾವು ಗ್ರಾಹಕರನ್ನು ಸಂಪರ್ಕ ಮಾಡಿಕೊಡುತ್ತೇವೆ. ಸಾರಿಗೆ ಇಲಾಖೆಯಿಂದ ಅನುಮತಿ ಪಡೆದಿದ್ದೇವೆ ಎಂದು ಸುಳ್ಳು ಭರವಸೆ ನೀಡಿ ಕಾರ್ ಗಳನ್ನು ಬಾಡಿಗೆ ಬಿಡಿಸುತ್ತಾರೆ ಇವರುಗಳು ಕಮಿಷನ್ ಪಡೆದುಕೊಳ್ಳುತ್ತಾರೆ ಹೀಗೆ ಇವರ ಅಕ್ರಮ ಚಟುವಟಿಕೆ ಸುಮಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ ಇವರ ಕಚೇರಿಯು ಸಹ ಅಕ್ರಮವಾಗಿದೆ ದಾಖಲಾತಿ ಇಲ್ಲದೆ ಸಾರಿಗೆ ಇಲಾಖೆಗೆ / ಸರ್ಕಾರ ಕ್ಕೂ ವಂಚನೆ ಮಾಡಿ ವಾಣಿಜ್ಯ ಬಳಕೆಯ ಕ್ಯಾಪ್ ಚಾಲಕರ ವರ್ಗಕ್ಕೂ ಅನ್ಯಾಯ ಮಾಡಿಕೊಂಡು ನಿಮ್ಮ ವ್ಯಾಪ್ತಿಯಲ್ಲಿಯೇ ಇಂತಹ ಸಂಸ್ಥೆಯ ಕಚೇರಿ ಮಾಡಿಕೊಂಡು ಬಿಸಿನೆಸ್ ನಡೆಸುತ್ತಿದ್ದಾರೆ ಎಂದು Jeevan Bheema Nagar Police Station ದೂರು ನೀಡಿದ್ದೇವೆ ಇದುವರೆಗೂ ಆ ಸಂಸ್ಥೆಗೆ ಸಂಬಂಧಪಟ್ಟ ಮಾಲೀಕರನ್ನು ಕರೆಸಿ ದಾಖಲೆ ಪರಿಶೀಲಿಸಿ ಅವರ ಸಂಸ್ಥೆ ಸಾರಿಗೆ ಇಲಾಖೆಯಿಂದ ಅನುಮೋದನೆ ಪಡೆದಿದೆಯಾ ಈ ವ್ಯವಹಾರಕ್ಕೆ ಎಂದು ಪರಿಶೀಲನೆ ನಡೆಸದೆ ಅಸಡ್ಡೆಯಿಂದ ಇದ್ದಾರೆ ಠಾಣೆಗೆ ದೂರು ನೀಡಿ ಇಷ್ಟು ದಿನ ಕಳೆದರೂ ಇದುವರೆಗೂ ನ್ಯಾಯ ಕೊಡಿಸುವ ಕೆಲಸ ಠಾಣೆ ವತಿಯಿಂದ ಆಗಿಲ್ಲ ಹಾಗಾಗಿ ಈ ವಿಚಾರ ನಿಮ್ಮ ಗಮನಕ್ಕೆ ದೂರಿನ ಮೂಲಕ ನೀಡುತ್ತಿದ್ದೀವಿ ದಯವಿಟ್ಟು ನ್ಯಾಯ ದೊರಕಿಸಿ ಕೊಡಬೇಕೆಂದು ವಿನಂತಿಸಿಕೊಳ್ಳುತ್ತಿದ್ದೇವೆ..
ಧನ್ಯವಾದಗಳು
ಇಂತಿ..
Somashekar K
Karnataka rajya chalakara parishath member's team ಸಂಸ್ಥಾಪಕರು
ದೂರಿನ ಮನವಿ BENGALURU CITY POLICE
Karnataka rajya chalakara parishath member's team
Somashekar K 9535580976 ಸಂಘಟನೆ ನಂಬರ್ https://youtube.com/@somashekarchalakaraparishat?si=PsoxBdzu7HRRbyqX
ದವರೇ ನಿಮ್ಮ NCR ವಿಚಾರ ಪೊಲೀಸ್ ಆಯುಕ್ತರಿಗೆ ತಲುಪಿಸುವೆ
ಕೇರಳ ರಾಜ್ಯದಿಂದ - ಓರಿಸ್ಸಾ - ಆಸಾಂ - ಬಿಹಾರ್ ಇನ್ನಿತರ ರಾಜ್ಯ ದಿಂದ ಬಂದಿರೋ ನಿರುದ್ಯೋಗಿಗಳು ಇಲ್ಲಿ ಉದ್ಯೋಗಿ ಚಾಲಕರಾಗಿದ್ದರಲ್ಲ ಅವರನ್ನು ನಮ್ಮ ನಾಡಿನ ಚಾಲಕರ ವರ್ಗದವರೇ ಬಡಿಯೊ ದಿನಮಾನ ಬರಬಹುದೇನೋ ಕಾರಣ
ಇ ಲೈವ್ ನಲ್ಲಿ ತಿಳಿಸಿರೋ ವಿಷಯ ನೋಡಿ 2 ತಿಂಗಳ ಒಳಗೆ
ದುಸ್ಥಿತಿ ಬರೋದ್ರಲ್ಲಿ ಅಚ್ಚರಿ ಇಲ್ಲಾ
ನಮ್ಮ ಎಲ್ಲೊ ಬೋರ್ಡ್ 🚖ಕ್ಯಾಬ್ ಡ್ರೈವರ್ ಗೆ ಮಾನಸಿಕವಾಗಿ ತೊಂದರೆ ಕೋಟ್ಟಿದ್ದ ಚೇತನ್ ಎನ್ನುವ ನಾಗರಬಾವಿ ಮೂಲದ ವ್ಯಕ್ತಿ ವಿರುದ್ದ "ಲಾ ಆಂಡ್ ಆರ್ಡರ್" ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ರಾಜ್ಯದ ಉಪಮುಖ್ಯಮಂತ್ರಿಗಳ ಹೆಸರು ಬಳಸಿಕೊಂಡು ಅದೆಷ್ಟು ಜನಕ್ಕೆ ಷೋ ಕೊಟ್ಟಿಕೊಂಡು ಇಗೆಲ್ಲ ಜೀವನ ಮಾಡುತ್ತಿದ್ದನೋ ಇಗ ಅತನ ದೊಂಬರಾಟಕ್ಕೆ ಲಗಾಮ್ ಬಿದ್ದಿದೆ- ಪೊಲೀಸ್ ನವರು PH ಮಾಡುತಿದ್ದರು ಫೋನ್ ಪಿಕ್ ಮಾಡದೇ ಇದ್ದಾನೆ..ಇನ್ನೂ ಕಾನೂನೂ ರೀತಿ ವ್ಯವಸ್ಥೆಯಲ್ಲಿ ಸಾಗುತ್ತೆ
ಇಂದು 20/5/26 DCM ರವರ ಕಚೇರಿ ಯಿಂದ ಮಾಹಿತಿ ತಿಳಿದುಕೊಳ್ಳಲಾಹಿತು ಆ ಬಿಲ್ದಪ್ ರಾಜ ಚೇತನ್ ಎನ್ನುವವನು DK ರವರ ಗೆಳೆಯ ಅಲ್ಲ ಎಂದು ಈಗ ನಮ್ಮ ಕೆಲಸ ಶುರು
ಇಂದು ನಾನು DCM ರವರ ಕಚೇರಿ ಹೋಗೋಕೆ ಆಗಿಲ್ಲ ಕಾರಣ ಕಾಮೆಂಟ್ ಬಾಕ್ಸ್ ನಲ್ಲಿ link ಇದೆ ನೋಡಿ
DK Shivakumar ರವರೆ ಇ ಚೇತನ್ ಎನ್ನೋ ವ್ಯಕ್ತಿ ನಿಮ್ಮ ಹೆಸರು ಬಳಸಿಕೊಂಡು ಮಾಡಿರೋ ಕುಚೇಷ್ಟೆ ಯಿಂದ ಒಬ್ಬ ಬಡ ಚಾಲಕಕಾರ್ಮಿಕ ನ ಮೇಲೆ 5000/- ಹಣಕ್ಕೆ ಮಾತಾಡಿರೋ ಆಡಿಯೋದಲ್ಲಿ ಬೇಜಾನ್ ಬಿಲ್ಡಪ್ ಕೊಟ್ಟು ಕುಣಿಗಲ್ ಬಂದ್ ಮಾಡಿಸುವೆ ಅಂತ ಒಂದೊಂದ್ ಅಲ್ಲ ಬಡ ಕ್ಯಾಬ್ ಚಾಲಕನ ಮೇಲೆ DCM ರವರ ಹೆಸರು ಹೇಳಿ FIR ಮಾಡಿಸೋ ಕಾರ್ಯ ಮಾಡಿದ್ದಾನೆ
ಅ ಎಲ್ಲಾ ವಿಚಾರ ಕುರಿತು ಇಂದು ಇಷ್ಟು ಕೆಲಸ ಆಗಿದೆ
ನಾಳೆ ನಮ್ಮ Karnataka rajya chalakara parishath member's team ಮತ್ತೆ DCM ರವರನ್ನು ಭೇಟಿ ಮಾಡಿ ಮುಂದಕ್ಕೆ ಇ ಪ್ರೊಸಸ್ ಮಾಡುತ್ತೀವಿ
ಟ್ಯಾಕ್ಸಿ 🚖ದರ ಜಾಸ್ತಿ ಮಾಡಬೇಕು ಅಂತ ಹೋರಾಟ ಮಾಡಬೇಕಿರೋರು ನಮ್ಮ ರಾಜ್ಯದಲ್ಲಿ ಟಿಕಣಿ ಹೂಡಿರೋ ಕೇರಳ ಡ್ರೈವರ್ಸ್/ಹಿಂದಿರಾಜ್ಯ ದ ಡ್ರೈವರ್ಸ್ Ola Uber Rapido Namma Yatri ಇವರು ಕೇಳಬೇಕು ಸರ್ಕಾರ ನ ಸತ್ಯ ತಾನೇ ಗೆಳೆಯರೇ ಹೇಳಿ..
ಮೀಟರ್ 📟ಹಾಕದ🚖ಟ್ಯಾಕ್ಸಿ ಚಾಲಕರು ನಮ್ಮವರು ಕೇಳಿದರೆ ಉಪಯೋಗ ಇಲ್ಲಾ ಇದು ಸತ್ಯ ತಾನೇ ನೀಟಾಗಿ ಲೈವ್ ನೋಡಿ ಅರ್ಥ ಮಾಡಿಕೊಳ್ಳಿ..
@ಪ್ರಮುಖಅಭಿಮಾನಿಗಳು
17/05/2026
ಸಂಘಟನೆಯ ಸರ್ವಸದಸ್ಯರ ಸಭೆ ಕುರಿತು - ಆಡಿಟಿಂಗ್ ಕುರಿತು - ಪದಾಧಿಕಾರಿಗಳ ಸ್ಥಾನ ಬದಲಾವಣೆ - ನೂತನ ಆಯ್ಕೆ ಇನ್ನಿತರ ವಿಚಾರ ಕುರಿತು ಇಂದು 17/05/26 ಕಚೇರಿಯಲ್ಲಿ ಸಭೆ ಮಾಡಲಾಹಿತು ಅತೀ ಶೀಘ್ರದಲ್ಲಿ ಸರ್ವಸದಸ್ಯರ26/27ನೇ ಸಾಲಿನ ಸಭೆ ನೆಡೆಸಲಾಗುತ್ತದೇ ಆ ದಿನದ ಆ ಸಭೆಯಲ್ಲಿ ಸಂಘಟನೆಯ ಚಾಲ್ತಿ ಸದಸ್ಯರಲ್ಲಿ ತಿಳಿಸಲಾಗುತ್ತದೆ ಸಭೆ ಗೆ Karnataka rajya chalakara parishath member'sಗಳು ಭಾಗವಹಿಸಿ ಧನ್ಯವಾದಗಳು.
17/05/2026
Ramalinga Reddy 👀👇ನೋಡು ಇದು ಕೆಲಸ ಆದ್ರೆ..
ಮಹಾರಾಷ್ಟ್ರದ ಸಾರಿಗೆ ಸಚಿವರಾದ ಪ್ರತಾಪ್ ಸರ್‌ನಾಯಕ್ ಅವರು ಮೇ 12, 2026ರಿಂದ ಅನುಮತಿ ಇಲ್ಲದೆ ಕಾರ್ಯನಿರ್ವಹಿಸುತ್ತಿರುವ ಬೈಕ್ ಟ್ಯಾಕ್ಸಿ ಆಪ್‌ಗಳು — ಓಲಾ, ಊಬರ್ ಮತ್ತು ರಾಪಿಡೋ — ಗಳನ್ನು ತಕ್ಷಣವೇ ಬಂದ್ ಮಾಡಲು ರಾಜ್ಯ ಸೈಬರ್ ಕ್ರೈಂ ಇಲಾಖೆಗೆ ನಿರ್ದೇಶನ ನೀಡಿದ್ದಾರೆ.
ಈ ಕ್ರಮವು ಮಾರ್ಚ್ 2026ರಲ್ಲಿ ಇ-ಬೈಕ್ ಟ್ಯಾಕ್ಸಿ ನಿಯಮಗಳನ್ನು ಪಾಲಿಸದ ಕಾರಣ ಈ ಅಗ್ರಿಗೇಟರ್‌ಗಳಿಗೆ ನೀಡಿದ್ದ ತಾತ್ಕಾಲಿಕ ಪರವಾನಗಿಯನ್ನು ರದ್ದುಗೊಳಿಸಿದ ನಂತರ ಕೈಗೊಳ್ಳಲಾಗಿದೆ.
ಮೂಲ ಕಾರಣಗಳು (Crackdown Reasons)
1. ಸುರಕ್ಷತಾ ಚಿಂತನೆಗಳು
“ಅನಧಿಕೃತ ಬೈಕ್ ಟ್ಯಾಕ್ಸಿ” ಸಂಬಂಧಿಸಿದ ಮರಣಾಂತಿಕ ಅಪಘಾತವನ್ನು ಸಚಿವರು ಪ್ರಮುಖ ಕಾರಣ ಎಂದು ಹೇಳಿದ್ದಾರೆ.
ಚಾಲಕರ ಪರಿಶೀಲನೆ, ವಿಮೆ, ತುರ್ತು ಪ್ರತಿಕ್ರಿಯಾ ವ್ಯವಸ್ಥೆಗಳ ಕೊರತೆಯನ್ನೂ ಉಲ್ಲೇಖಿಸಿದ್ದಾರೆ.
2. ಅನಧಿಕೃತ ಕಾರ್ಯಾಚರಣೆಗಳು
ರಾಜ್ಯದಲ್ಲಿ ಕಡ್ಡಾಯವಾಗಿ ಎಲೆಕ್ಟ್ರಿಕ್ ವಾಹನಗಳು (EV) ಬಳಸಬೇಕು ಎಂಬ ನಿಯಮವಿದ್ದರೂ, ಕೆಲವು ಪ್ಲಾಟ್‌ಫಾರ್ಮ್‌ಗಳು ಪೆಟ್ರೋಲ್ ಬೈಕ್‌ಗಳನ್ನು ಬಳಸುತ್ತಿರುವುದು ಪತ್ತೆಯಾಗಿದೆ.
3. ಆರ್ಥಿಕ ಪರಿಣಾಮ
ಇಂತಹ ಅನಧಿಕೃತ ಸೇವೆಗಳು ಪರವಾನಗಿ ಪಡೆದ ಆಟೋ-ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರ ಜೀವನೋಪಾಯಕ್ಕೆ ಹಾನಿ ಮಾಡುತ್ತಿವೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.
ಕಾನೂನು ಕ್ರಮಗಳು (Legal Directives)
• ಆಪ್‌ಗಳನ್ನು ಬಂದ್ ಮಾಡುವುದು
ಮಹಾರಾಷ್ಟ್ರ ಸೈಬರ್ ಇಲಾಖೆಯ ADGಗೆ ಈ ಪ್ಲಾಟ್‌ಫಾರ್ಮ್‌ಗಳ ಆನ್‌ಲೈನ್ ಸೇವೆಗಳನ್ನು ತಕ್ಷಣ ಬ್ಲಾಕ್ ಮಾಡಲು ಆದೇಶಿಸಲಾಗಿದೆ.
• FIR ಮತ್ತು ದಂಡ ಕ್ರಮಗಳು
ಕಂಪನಿ ಮಾಲೀಕರು, ಚಾಲಕರು ಮತ್ತು ನಿರ್ವಹಣೆಯ ವಿರುದ್ಧ IT ಕಾಯಿದೆ ಮತ್ತು ಮೋಟಾರು ವಾಹನ ಕಾಯಿದೆಗಳ ಅಡಿಯಲ್ಲಿ FIR ದಾಖಲಿಸಲು ಸೂಚಿಸಲಾಗಿದೆ.
• ಪರವಾನಗಿ ಸ್ಥಿತಿ
ಕಂಪನಿಗಳು EV ನೀತಿ ಮತ್ತು ಸುರಕ್ಷತಾ ಮಾರ್ಗಸೂಚಿಗಳನ್ನು ಸಂಪೂರ್ಣ ಪಾಲಿಸುವವರೆಗೆ
ಎಲ್ಲ ಬೈಕ್ ಟ್ಯಾಕ್ಸಿ ಸೇವೆಗಳು ರಾಜ್ಯದಲ್ಲಿ ಅಪರಾಧ ಮತ್ತು ಅನಧಿಕೃತ ಎಂದು ಪರಿಗಣಿಸಲಾಗಿದೆ.
👇
ಮಹಾರಾಷ್ಟ್ರದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಬ್ರೇಕ್! 🚫🏍️
ಅಕ್ರಮವಾಗಿ ಬೈಕ್ ಟ್ಯಾಕ್ಸಿ ಸೇವೆಗಳನ್ನು ನಡೆಸುತ್ತಿರುವ ಹಿನ್ನೆಲೆಯಲ್ಲಿ ಓಲಾ, ಉಬರ್ ಮತ್ತು ರ್ಯಾಪಿಡೊ ಆ್ಯಪ್‌ಗಳನ್ನು ಪ್ಲೇ ಸ್ಟೋರ್ ಹಾಗೂ ಆ್ಯಪ್ ಸ್ಟೋರ್‌ನಿಂದ ತೆಗೆದುಹಾಕುವಂತೆ ಮಹಾರಾಷ್ಟ್ರ ಸರ್ಕಾರವು ಗೂಗಲ್ ಮತ್ತು ಆಪಲ್ ಕಂಪನಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
@ಪ್ರಮುಖಅಭಿಮಾನಿಗಳು
Click here to claim your Sponsored Listing.
Location
Category
Contact the business
Telephone
Website
Address
Bangalore
560096
