BJP OBC Morcha Karnataka

BJP OBC Morcha Karnataka

Share

Official Page of BJP OBC Morcha, Karnataka

27/05/2026

ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಸರ್ಕಾರದ 'F3 ಮಹಾ ಕವಚ' ಜಾಗತಿಕ ಬಿಕ್ಕಟ್ಟಿನಲ್ಲೂ ಭಾರತದ ಆರ್ಥಿಕತೆಗೆ ಗಟ್ಟಿ ರಕ್ಷಣೆ ನೀಡಿದೆ.
⛽: ರಷ್ಯಾದಿಂದ ದಾಖಲೆ ಇಂಧನ ಆಮದು, ಸುಂಕ ಕಡಿತದಿಂದ ಜನರಿಗೆ ನೆರವು.
🌾 ರಸಗೊಬ್ಬರ ಸಬ್ಸಿಡಿ ಹೊರೆ ಹೊತ್ತ ಸರ್ಕಾರ, 200 ಲಕ್ಷ ಟನ್ ದಾಸ್ತಾನು.
💵 : ಡಾಲರ್ ರಕ್ಷಣೆ, ರೂಪಾಯಿ-ರೂಬಲ್ ವ್ಯಾಪಾರದ ಮೂಲಕ ಆರ್ಥಿಕ ಸ್ಥಿರತೆ.

27/05/2026

The Supreme Court’s decision has reaffirmed the constitutional validity of the SIR process and exposed the politics of fear and misinformation being spread by the INDI-Alliance.

Those who repeatedly questioned democratic institutions and the Constitution have received a strong answer today.

When facts, constitutional principles, and democratic processes stand together, propaganda and false narratives cannot survive for long.

*Facebook*
https://facebook.com/reel/1613215396439009/

*Instagram*
https://www.instagram.com/reels/DY17aLylYhh/

*Youtube*
https://youtube.com/shorts/eXhOQt4U5F0?feature=share

*X*
https://x.com/drlaxmanbjp/status/2059617296222691522?s=20

~
Regards,
Dr. K. Laxman,
MP (Rajya Sabha)
BJP National President (OBC Morcha)

01/05/2026

ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಿ ಎನ್ನುವ ಹೆಸರಿನಲ್ಲಿ ದೊಡ್ಡ ದಂಧೆ ನಡೆದಿದ್ದು, ಬಡವರಿಗೆ ಸೇರಿದ ಒಂದು ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಬಂಗಾರ ದರೋಡೆ ಆಗಿದೆ. ರಾಜ್ಯ ಸರಕಾರವು ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು: ಶ್ರೀ ಆರ್. ರಘು ಕೌಟಿಲ್ಯ, ಅಧ್ಯಕ್ಷರು, ಬಿಜೆಪಿ ಕರ್ನಾಟಕ ಹಿಂದುಳಿದ ವರ್ಗಗಳ ಮೋರ್ಚಾ. Raghu Kautilya BJP
#ಮೈಸೂರು

19/04/2026

ಲೋಕಸಭೆಯಲ್ಲಿ ನಾರಿ ಶಕ್ತಿ ವಂದನ ಮಸೂದೆಯನ್ನು ವಿರೋಧಿಸಿದ ಕಾಂಗ್ರೆಸ್ ಹಾಗೂ ವಿಪಕ್ಷಗಳ ವಿರುದ್ಧ ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆಯನ್ನು ನಡೆಸಿದರು. ಚಿಕ್ಕಬಳ್ಳಾಪುರ ನಗರವು ಕೇಸರಿಮಯವಾಗಿತ್ತು. ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಶ್ರೀ ಎಸ್ ವಿ ರಾಮಚಂದ್ರಗೌಡ ರವರ ನೇತೃತ್ವದಲ್ಲಿ ನಡೆದ ಈ ಬೃಹತ್ ಪ್ರತಿಭಟನೆಯಲ್ಲಿ, ರಾಜ್ಯ ಬಿಜೆಪಿ ಓಬಿಸಿ ಮೋರ್ಚಾ ಉಪಾಧ್ಯಕ್ಷರಾದ ಶ್ರೀಮತಿ ಅಶ್ವಿನಿ ಶಂಕರ್ Ashwini Swamy ರವರು ಭಾಗವಹಿಸಿ, ಕಾಂಗ್ರೆಸ್ ಮತ್ತು ವಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಮಹಿಳೆಯರ ಸಬಲೀಕರಣಕ್ಕೆ ಪೂರಕವಾದ ಮಸೂದೆಗೆ ಅಡ್ಡಪಡಿಸಿದ ಕಾಂಗ್ರೆಸ್ ಹಾಗೂ ವಿಪಕ್ಷಗಳ ನಡೆಯು ಮಹಿಳಾ ವಿರೋಧಿ ಎಂದು ಕಿಡಿ ಕಾರಿದರು.
#ಚಿಕ್ಕಬಳ್ಳಾಪುರ

Photos from BJP OBC Morcha Karnataka's post 19/04/2026

ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ನಾರಿಶಕ್ತಿ ಅಧಿನಿಯಮ ಮಸೂದೆಯನ್ನು ವಿರೋಧಿಸಿದ ಕಾಂಗ್ರೆಸ್ ಮತ್ತು ವಿಪಕ್ಷಗಳ ವಿರುದ್ಧ ಬಿಜೆಪಿ ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯಾಲಯದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಎಸ್ ವಿ ರಾಮಚಂದ್ರ ಗೌಡ ಹಾಗೂ ಓಬಿಸಿ ಮೋರ್ಚಾ ಕರ್ನಾಟಕ ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ ಅಶ್ವಿನಿ ಶಂಕರ್ Ashwini Swamy ರವರ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು.

19/04/2026

ಮಹಿಳಾ ಮೀಸಲಾತಿ ಜಾರಿ ರಾಜಕೀಯ ಲಾಭಕ್ಕಾಗಿ ಅನ್ನೋದು ತಪ್ಪು. ಒಳ್ಳೆಯ ನೀತಿ ಯಾವಾಗ ಬಂದರೂ ಒಳ್ಳೆಯದಾಗಿದೆ. ಬಸವಣ್ಣನವರು ಸಮಾಜದಲ್ಲಿ ಸಮಾನತೆ, ನ್ಯಾಯ ಮತ್ತು ಅವಕಾಶದ ಬಗ್ಗೆ ಹೇಳಿದ್ದಾರೆ. ಅವರ ಕಾಲದಲ್ಲಿ ಹೆಣ್ಣು-ಗಂಡು ಭೇದವಿಲ್ಲದೆ ಸಮಾನ ಹಕ್ಕಿಗಾಗಿ ಹೋರಾಡಿದ್ದರು. ಮಹಿಳಾ ಮೀಸಲಾತಿ ವಿರೋಧಿಸುವುದು ಸಮಾನತೆ ತತ್ವಕ್ಕೆ ವಿರೋಧವಾಗಿದೆ. ವಿರೋಧ ಪಕ್ಷದ ಈ ನೀತಿಯನ್ನು ಖಂಡಿಸುತ್ತೇನೆ.

- ಶ್ರೀ ಬಿ. ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳು

Photos from BJP OBC Morcha Karnataka's post 04/04/2026

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ, ಇಂದು, ಬಿಜೆಪಿ ಓಬಿಸಿ ಮೋರ್ಚಾ ವತಿಯಿಂದ ಆಯೋಜಿಸಿದ ಚುನಾವಣಾ ಪಾದಯಾತ್ರೆಯು ಹೊಸ ಮುನ್ನುಡಿಯನ್ನು ಬರೆದಿದೆ. "ಹಿಂದುಳಿದ ವರ್ಗದವರ ನಡೆ – ಬಿಜೆಪಿಯ ಕಡೆ" (OBC With BJP) ಎಂಬ ಘೋಷದೊಂದಿಗೆ ನಡೆದ ಈ ಪಾದಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ ಜನರು ಮತ್ತು ಅಭಿಮಾನಿಗಳು ಪಕ್ಷದ ಮೇಲಿನ ನಂಬಿಕೆ ಮತ್ತು ಬೆಂಬಲವನ್ನು ಸ್ಪಷ್ಟವಾಗಿ ತೋರಿಸಿದರು. ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ ರವರ ಮಾರ್ಗದರ್ಶನದಲ್ಲಿ ಹಾಗೂ ಓಬಿಸಿ ಮೋರ್ಚಾ ರಾಜ್ಯಾಧ್ಯಕ್ಷರಾದ ಶ್ರೀ ಆರ್ ರಘು ಕೌಟಿಲ್ಯ ರವರ ಮುಂದಾಳುತ್ವದಲ್ಲಿ, ಕಾರ್ಯಕರ್ತರು ಮತ್ತು ಮುಖಂಡರ ಸಕ್ರಿಯ ಭಾಗವಹಿಸುವಿಕೆಯಿಂದ ಪಾದಯಾತ್ರೆಯು ಯಶಸ್ವಿಯಾಯಿತು. ಈ ಪಾದಯಾತ್ರೆಯು ಕೇವಲ ಒಂದು ಕಾರ್ಯಕ್ರಮವಲ್ಲ, ಇದು ಹಿಂದುಳಿದ ವರ್ಗದವರ ಸಬಲೀಕರಣದ ಸಂಕೇತವಾಗಿದೆ. ಸಮಾಜದ ಪ್ರತಿಯೊಂದು ವರ್ಗದವರನ್ನು ಒಂದೇ ವೇದಿಕೆಯಲ್ಲಿ ತರಲು ಬಿಜೆಪಿ ಕೈಗೊಂಡ ಈ ಪ್ರಯತ್ನವು ಹೊಸ ಇತಿಹಾಸವನ್ನು ನಿರ್ಮಿಸಿದೆ... ಸಾಮಾಜಿಕ ನ್ಯಾಯಕ್ಕೆ ಬಿಜೆಪಿ ಜೊತೆ ಕೈಜೋಡಿಸೋಣ, ಹಿಂದುಳಿದ ವರ್ಗದ ಧ್ವನಿ ಬಿಜೆಪಿಯ ಧ್ಯೇಯ, ಬಿಜೆಪಿ ಜೊತೆ ಕೈಜೋಡಿಸಿ ಅಭಿವೃದ್ಧಿಯ ದಾರಿಯಲ್ಲಿ ಸಾಗೋಣ.

Vijayendra Yediyurappa

03/04/2026

ದಾವಣಗೆರೆಯಲ್ಲಿ ಅತೀ ಹಿಂದುಳಿದ ಸಮುದಾಯಗಳು ಸರಕಾರದಿಂದ ಸಿಗಬೇಕಾದ ಸವಲತ್ತು ಮತ್ತು ಸೌಲಭ್ಯಗಳಿಂದ ವಂಚಿತವಾಗಿವೆ. ಹಿಂದುಳಿದವರಿಗೆ ಸವಲತ್ತುಗಳನ್ನು ನೀಡದೆ ವಂಚಿಸಿದ ಕಾಂಗ್ರೆಸ್ ಸರ್ಕಾರ: ಶ್ರೀ ಆರ್. ರಘು ಕೌಟಿಲ್ಯಾ, ರಾಜ್ಯಾಧ್ಯಕ್ಷರು, ಓಬಿಸಿ ಮೋರ್ಚಾ ಕರ್ನಾಟಕ.

01/04/2026

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ-ಚುನಾವಣಾ ಪ್ರಚಾರದಲ್ಲಿ ಓಬಿಸಿ ಮೋರ್ಚಾ ರಾಜ್ಯಾಧ್ಯಕ್ಷರಾದ ಶ್ರೀ ಆರ್. ರಘು ಕೌಟಿಲ್ಯಾ ರವರು ಹಿಂದುಳಿದ ವರ್ಗಗಳ ವಿವಿಧ ಸಮುದಾಯಗಳ ಪ್ರಮುಖರ ಸಮಾಗಮ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀ ಶ್ರೀನಿವಾಸ್ ದಾಸ್ ಕರಿಯಪ್ಪ ರವರ ಪರವಾಗಿ ಪ್ರಚಾರ ಮಾಡಿದರು. ಸನ್ಮಾನ್ಯ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ಬಿ. ವೈ. ವಿಜಯೇಂದ್ರ ಯಡಿಯೂರಪ್ಪ ರವರು ಸಭೆಯನ್ನು ಉದ್ಘಾಟಿಸಿದರು.

Want your business to be the top-listed Government Service in Bangalore?

Click here to claim your Sponsored Listing.

Location

Category

Website

Address


#48, Temple Street, Vyalikaval, Kodandarampura, Malleshwaram
Bangalore
560003