Lidkar Karnataka

Lidkar Karnataka

Share

Dr. Babu Jagjivan Ram Leather Industries Development Corporation Ltd. formerly known as KLIDCL

Photos from Lidkar Karnataka's post 06/04/2025

ನಿಗಮದ ಮಾನ್ಯ ಅಧ್ಯಕ್ಷರಾದ ಶ್ರೀ ಮುಂಡರಗಿ ನಾಗರಾಜ್ ರವರು ಪಾದುಕೆ ಕುಟೀರ ಫಲಾನುಭವಿಗಳಿಗೆ ಪಾದುಕೆ ಕುಟೀರಗಳನ್ನು ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಿದರು.

Photos from Lidkar Karnataka's post 06/04/2025

ಡಾ. ಬಾಬು ಜಗಜೀವನ್ ರಾಮ್ ರವರ ೧೧೮ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾನ್ಯ ಸಮಾಜ‌ ಕಲ್ಯಾಣ ಸಚಿವರಾದ ಡಾ. ಎಚ್. ಸಿ ಮಹದೇವಪ್ಪನವರು ಪಾದುಕೆ ಕುಟೀರ ಫಲಾನುಭವಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿದರು.ನಿಗಮದ ಅಧ್ಯಕ್ಷರಾದ ಶ್ರೀ ಮುಂಡರಗಿ ನಾಗರಾಜು ರವರು ಹಾಗೂ ಇತರರು ಉಪಸ್ಥಿತರಿದ್ದರು.

06/04/2025

ವಿಧಾನಸೌಧ ಆವರಣದಲ್ಲಿ ಆಯೋಜಿಸಲಾಗಿದ್ದ 118ನೇ ಡಾ. ಬಾಬು ಜಗಜೀವನ‌‌ ರಾಂ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಪಾದುಕೆ ಕುಟೀರ ಫಲಾನುಭವಿಗೆ ಪ್ರಮಾಣಪತ್ರ ವಿತರಿಸಿದರು. ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಶ್ರೀ ಹೆಚ್ ಸಿ ಮಹದೇವಪ್ಪನವರು, ಡಾ. ಜಿ ಪರಮೇಶ್ವರ್ ಹಾಗೂ ಲಿಡ್ಕರ್ ನಿಗಮದ ಅಧ್ಯಕ್ಷರಾದ ಶ್ರೀ ಮುಂಡರಗಿ ನಾಗರಾಜು ಹಾಗೂ ಇತರೆ ಗಣ್ಯಾತಿಗಣ್ಯರು ಉಪಸ್ಥಿತರಿದ್ದರು.

Photos from Lidkar Karnataka's post 02/04/2025

ಬಿಬಿಎಂಪಿ ಗೆ ನೀಡಿದ ಲಿಡ್ಕರ್ ಬಜೆಟ್ ಬ್ಯಾಗ್..

Photos from Lidkar Karnataka's post 06/08/2024

ಭಾರತೀಯ ಅಂಚೆ ಇಲಾಖೆಯೊಡನೆ ಲಿಡ್ಕರ್ ಒಪ್ಪಂದ. ಇನ್ನು ಕೆಲವೇ ದಿನಗಳಲ್ಲಿ E-Commerce ಮೂಲಕ ಮನೆಮನೆ ತಲುಪಲಿರುವ ಲಿಡ್ಕರ್ ಉತ್ಪನ್ನಗಳು.

Photos from Lidkar Karnataka's post 09/05/2024
09/05/2024

ಉತ್ಕೃಷ್ಟ ಚರ್ಮೋತ್ಪನ್ನಗಳ ಕರ್ನಾಟಕ ಸರ್ಕಾರದ ಒಂದು ಉದ್ದಿಮೆ ಲಿಡ್‌ಕರ್.
ಲಿಡ್‌ಕರ್‌ ಉತ್ಪನ್ನಗಳನ್ನು ಬಳಸಿ, ಪ್ರೋತ್ಸಾಹಿಸಿ.

05/04/2024

ಹಸಿರುಕ್ರಾಂತಿಯ ಹರಿಕಾರ, ಮಾಜಿ ಉಪಪ್ರಧಾನಿ, ಡಾ. ಬಾಬು ಜಗಜೀವನರಾಂ ರವರ 117ನೇ ಜನ್ಮದಿನೋತ್ಸವದ ಹಾರ್ದಿಕ ಶುಭಾಶಯಗಳು.

Photos from Lidkar Karnataka's post 16/03/2024

ದಿನಾಂಕ: 15-03-2024 ರಂದು ನಿಗಮದ ಮಾನ್ಯ ಅಧ್ಯಕ್ಷರು ಬೆಂಗಳೂರು ನಗರ ಜಿಲ್ಲೆಯ ಕೆ.ಜಿ ಹಳ್ಳಿಯಲ್ಲಿ PM-AJAY ಯೋಜನೆಯಡಿ 60 ದಿನಗಳ ಕೌಶಲ್ಯಾಭಿವೃದ್ಧಿ ತರಬೇತಿ ಪೂರ್ಣಗೊಳಿಸಿದ ಫಲಾನುಭವಿಗಳಿಗೆ ಹೊಲಿಗೆಯಂತ್ರ ಹಾಗೂ ಉಪಕರಣ ಪೆಟ್ಟಿಗೆಗಳನ್ನು ವಿತರಿಸಿದರು. ಈ ಕಾರ್ಯಕ್ರಮದಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು.

Photos from Lidkar Karnataka's post 16/03/2024

ನಿಗಮದ ಮಾನ್ಯ ವ್ಯವಸ್ಥಾಪಕ ನಿರ್ದೇಶಕರು ದಿನಾಂಕ: 14-3-2024 ರಂದು ಹಾಸನ ಜಿಲ್ಲೆಗೆ ಭೇಟಿ ನೀಡಿ ಕುಶಲಕರ್ಮಿಗಳೊಂದಿಗೆ ಸಂವಾದ ನಡೆಸುತ್ತಿರುವುದು.

Photos from Lidkar Karnataka's post 14/03/2024

ದಿನಾಂಕ: 07-03-2024 ರಂದು ಶ್ರೀ ಮುಂಡರಗಿ ನಾಗರಾಜು ರವರು ಡಾ. ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ನಿಗಮದ ವ್ಯವಸ್ಥಾಪಕ ನಿರ್ದೇಶಕರು ನೂತನ ಅಧ್ಯಕ್ಷರಿಗೆ ನಿಗಮದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

22/02/2024

ಡಾ. ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ ಚಿಲ್ಲರೆ ಮತ್ತು ಸಗಟು ವ್ಯಾಪಾರಕ್ಕೆ ದಾಸ್ತಾನುಗಳನ್ನು ಸರಬರಾಜು ಮಾಡಲು Empanelment of Manufactures for Supply of Footwear, Leather Goods, Leather Garments, Footwear Accessories for the Period 2024-25 & 2025-26 ಟೆಂಡರ್ ಇ-ಪೋರ್ಟಲ್ ಮೂಲಕ ಆಹ್ವಾನಿಸಲಾಗಿರುತ್ತದೆ.

ಕುಶಲಕರ್ಮಿಗಳು ಸದರಿ ಟೆಂಡರ್‌ನಲ್ಲಿ ಭಾಗವಿಸಬಹುದಾಗಿರುತ್ತದೆ.
ಟೆಂಡರ್ ಸಲ್ಲಿಸಲು ಕೊನೆಯ ದಿನಾಂಕ : 07-03-2024 ಸಂಜೆ 04.00 ಗಂಟೆ.

ಹೆಚ್ಚಿನ ಮಾಹಿತಿಗಾಗಿ ಉಪ ಪ್ರಧಾನ ವ್ಯವಸ್ಥಾಪಕರು (ವಾಣಿಜ್ಯ) ಇವರನ್ನು ಕಛೇರಿಯ ಕೆಲಸದ ಸಮಯದಲ್ಲಿ ಸಂಪರ್ಕಿಸಬಹುದು.

Want your business to be the top-listed Government Service in Bangalore?

Click here to claim your Sponsored Listing.

Location

Telephone

Address


No. 32, Drive Babu Jagajivana Ram LIDKAR Bhavan, Millers Tank Bund Area, Opp To UNI Building, Vasanthnagara
Bangalore
560052