ಕರ್ನಾಟಕ ಪ್ರದೇಶ್ ಅಸಂಘಟಿತ ಕಾರ್ಮಿಕರ ವಿಭಾಗ

ಕರ್ನಾಟಕ ಪ್ರದೇಶ್ ಅಸಂಘಟಿತ ಕಾರ್ಮಿಕರ ವಿಭಾಗ

Share

ಅಸಂಘಟಿತ ಕಾರ್ಮಿಕರ ಸಮಿತಿ (ಬೆಂ. ದ)

18/09/2025
15/08/2025

ಸಮಸ್ತ ಜನತೆಗೆ ‘ಸ್ವಾತಂತ್ರ್ಯ ದಿನಾಚರಣೆ’ಯ ಶುಭಾಶಯಗಳು. ಸ್ವಾತಂತ್ರ್ಯಕ್ಕಾಗಿ ಹೋರಾಡಿ ತಮ್ಮ ಪ್ರಾಣ ಬಲಿದಾನ ಮಾಡಿದ ಎಲ್ಲಾ ಮಹನೀಯರನ್ನು ಇಂದು ಸ್ಮರಿಸುವ ಮೂಲಕ ಗೌರವ ಸಲ್ಲಿಸೋಣ

14/04/2025

ತಾನು ಬದುಕಿದ್ದ ಸಮಾಜದಲ್ಲಿ ತನ್ನ ಸಹಜೀವಿಗಳಿಂದಲೇ ಬದುಕಲ್ಲಿ ನೂರೆಂಟು ಅವಮಾನಗಳನ್ನು ಅನುಭವಿಸಿದ ಬಾಬಾ ಸಾಹೇಬರು ಎಂದೂ ಕೂಡಾ ಯಾರನ್ನೂ ದ್ವೇಷ ಮಾಡದೇ ಸಮಾಜದ ಹಿತಕ್ಕಾಗಿ ಚಿಂತಿಸಿದ ಮಹಾನ್ ವ್ಯಕ್ತಿ.

ಕತ್ತಲೆಯ ಕೋಣೆಯಲ್ಲಿ ಕಣ್ಣುಗಳನ್ನು ಒತ್ತೆಯಿಟ್ಟು ಅಧ್ಯಯನ ನಡೆಸಿದ ಬಾಬಾ ಸಾಹೇಬರು ಅತ್ಯಂತ ವೈಜ್ಞಾನಿಕ ವೈಚಾರಿಕ ನೆಲೆಯಲ್ಲಿ ಜೊತೆಗೆ ದೂರದೃಷ್ಟಿಯಿಂದ ನಮ್ಮ ಜನರಿಗಾಗಿ ಸಂವಿಧಾನ ಮತ್ತು ಹಲವಾರು ವಿಚಾರ ಧಾರೆಗಳನ್ನು ನೀಡಿದ್ದಾರೆ.

ಈ ದೇಶದಲ್ಲಿ ಅಂತಹ ಮಹನೀಯರನ್ನು ಪ್ರತಿ ದಿನವೂ ನೆನೆಯಬೇಕಾದಂತಹ ಮಹಾನ್ ಋಣ ದೇಶದ ಮೇಲಿದೆ.

ಒಬ್ಬ ಬಾಬಾ ಸಾಹೇಬರ ಉಪಸ್ಥಿತಿಯು ಬಹಳಷ್ಟು ಮಂದಿಗೆ ಮುಖ್ಯ ಎನಿಸದೇ ಇರಬಹುದು. ಆದರೆ ಒಂದು ವೇಳೆ ಅವರು ಇಲ್ಲದೇ ಹೋಗಿದ್ದರೆ, ಪರಿಸ್ಥಿತಿಯನ್ನು ಊಹಿಸಲೂ ಸಾಧ್ಯವಿಲ್ಲ.

ಭಾರತದ ಇತಿಹಾಸದಲ್ಲಿ ರಾಜಕೀಯ ಸ್ವಾತಂತ್ರ್ಯಕ್ಕಾಗಿ ಸಾವಿರಾರು ಜನರು ತ್ಯಾಗ ಮಾಡಿದ್ದಾರೆ. ಆದರೆ ನಮ್ಮ ದೇಶದ ಸಾಮಾಜಿಕ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಏಕೈಕ ಮಹಾನ್ ಹೋರಾಟಗಾರ ಎಂದರೆ ಅದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು.

ನಮ್ಮ ಶೋಷಿತ ಸಮುದಾಯಗಳು ಮಾತ್ರವಲ್ಲದೇ ಇಡೀ ಜನ ಸಮುದಾಯಗಳು ಪರಸ್ಪರ ಐಕ್ಯತೆ, ಬಾಂಧವ್ಯ, ಪ್ರೀತಿ ಮತ್ತು ಸಮಾನತೆಯಿಂದ ಬದುಕುವುದೇ ಇಂತಹ ಮಹಾನ್ ಹೋರಾಟಗಾರರಿಗೆ ನಾವು ಸಲ್ಲಿಸುವ ಮಹಾನ್ ಗೌರವ ಆಗಿದ್ದು, ಬಾಬಾ ಸಾಹೇಬರ ಈ ಸದಾಶಯವು ಸಾಕಾರಗೊಳ್ಳಲಿ ಎಂದಿ ಆಶಿಸುತ್ತಾ ಅವರ 134 ನೇ ಜನ್ಮದಿನವಾದ ಇಂದು ಅವರನ್ನು ನಾನು ಅತ್ಯಂತ ಗೌರವಪೂರ್ವಕವಾಗಿ, ಪ್ರೀತಿಪೂರ್ವಕವಾಗಿ ನೆನೆಯುತ್ತೇನೆ.

#ಜೈಭೀಮ್

19/03/2025

ಜಯನಗರದ ಜನಪ್ರಿಯ ಮಾಜಿ ಶಾಸಕರು,ಹಾಗೂ ಕೆಪಿಸಿಸಿ ರಾಜ್ಯ ಮಹಿಳಾ ಅಧ್ಯಕ್ಷರು ಕಾಂಗ್ರೆಸ್ ಪಕ್ಷದ ಯುವ ನಾಯಕಿ, ಶ್ರೀಮತಿ ಸೌಮ್ಯರೆಡ್ಡಿ ಅಕ್ಕ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.💐💐

ದೇವರು ನಿಮಗೆ ಉತ್ತಮ ಆಯುರಾರೋಗ್ಯ, ನೆಮ್ಮದಿ ಕರುಣಿಸಿ ದೀರ್ಘಕಾಲ ಜನಸೇವೆ ಮಾಡುವಂತಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

Photos from ಕರ್ನಾಟಕ ಪ್ರದೇಶ್ ಅಸಂಘಟಿತ ಕಾರ್ಮಿಕರ ವಿಭಾಗ's post 08/03/2025
Want your business to be the top-listed Government Service in Bangalore?

Click here to claim your Sponsored Listing.

Location

Address


KPCC OFFICE. ANANDROA Circle
Bangalore
560067