30/03/2026
ವಿಶ್ವ ವಿಖ್ಯಾತ ರೈತ ನೇತಾರ ಪ್ರೊಫೆಸರ್ ಎಂ ಡಿ ನಂಜುಂಡಸ್ವಾಮಿಯವರ ಅಪರೂಪದ ರೇಖಾಚಿತ್ರ
ಸಂಯುಕ್ತ ಕಿಸಾನ್ ಮೋರ್ಚಾ
30/03/2026
ವಿಶ್ವ ವಿಖ್ಯಾತ ರೈತ ನೇತಾರ ಪ್ರೊಫೆಸರ್ ಎಂ ಡಿ ನಂಜುಂಡಸ್ವಾಮಿಯವರ ಅಪರೂಪದ ರೇಖಾಚಿತ್ರ
10/02/2026
"...ನಂಜುಂಡಸ್ವಾಮಿಯವರು ನನಗೆ ಕಾಲೇಜು ದಿನಗಳಿಂದಲೂ ಗೊತ್ತಿದ್ದವರು. ಆದರೆ ಓದು ಮುಗಿದ ನಂತರ ನಾವು ಸಮಾಜವಾದಿ ಪಕ್ಷದಲ್ಲಿ ಸಕ್ರಿಯರಾಗಿ ಕೆಲಸ ಮಾಡಲು ಶುರು ಮಾಡಿದಾಗ ನಾನು ನಂಜುಂಡಸ್ವಾಮಿ, ಸುಂದರೇಶ್, ಶ್ರೀರಾಮ್, ರಾಮದಾಸ್, ಕಡಿದಾಳು ಶಾಮಣ್ಣ ಈ ಐದು ಜನರು ಬಹಳ ಆತ್ಮೀಯ ಮಿತ್ರರಾದೆವು.
ನಾವು ಸಮಾಜವಾದಿ ಪಕ್ಷದೊಳಗೆ ಸಮಾಜವಾದಿ ಯುವಜನ ಸಭಾ ಎಂಬ ಒಂದು ತರುಣರ ಉಪ ಸಂಘಟನೆ ಕಟ್ಟಿಕೊಂಡು ನಾನು ನಂಜುಂಡಸ್ವಾಮಿ ಸಂಘಟನೆಯ ಮುಂಚೂಣಿಯಲ್ಲಿದ್ದರಿಂದ ಸಂಘಟನೆಯ ಕಾರ್ಯಕ್ರಮಗಳನ್ನು ರೂಪಿಸುವುದು ಆ ಕಾರ್ಯಕ್ರಮಗಳಿಗೆ ಒಂದು ಸೈದ್ಧಾಂತಿಕ ಸ್ವರೂಪ ಕೊಡುವುದು ಮೊದಲಾದ ಜವಾಬ್ದಾರಿಗಳು ನಮ್ಮ ಮೇಲೆ ಬೀಳುತ್ತಿತ್ತು ಆಗೆಲ್ಲಾ ನಂಜುಂಡಸ್ವಾಮಿಯವರು ಹಗಲು ರಾತ್ರಿಯನ್ನದೇ ಊಟ ಉಪಚಾರ ಅಲಕ್ಷಿಸಿ ಕೆಲಸ ಮಾಡುತ್ತಿದ್ದು ನನ್ನ ನೆನಪಿದೆ.
ನಾನು ನಂಜುಂಡಸ್ವಾಮಿ ಭಾಷಣ, ಮೌನ, ಮೆರವಣಿಗೆ ಇತ್ಯಾದಿಗಳನ್ನು ಮಾಡಿಕೊಂಡು ಇಡೀ ಕರ್ನಾಟಕದ ಎಲ್ಲ ಜಿಲ್ಲೆಗಳನ್ನು ಸ್ಕೂಟರ್ ಮೇಲೆ ಸುತ್ತಿದ್ದೆವು. 1961 ರಿಂದ 1976 ರವರೆಗಿನ ನನ್ನ ನೆನಪಿನ ಬಹುಭಾಗ ನಂಜುಂಡಸ್ವಾಮಿ ಆಕ್ರಮಿಸಿದ್ದಾರೆ. ನಂಜುಂಡಸ್ವಾಮಿ ಬಗ್ಗೆ ನಾನು ಹೇಳಬಹುದಾದ ಸಾವಿರಾರು ಘಟನೆಗಳು ನನ್ನ ಮನಸ್ಸಿನಲ್ಲಿ ಹಚ್ಚ ಹಸಿರಾಗಿವೆ. 1976 ರಲ್ಲಿ ನಮ್ಮ ಕೆಲವು ಮಿತ್ರರ ವರ್ತನೆಯಿಂದ ಬೇಸರಗೊಂಡ ನಾನು ಸಕ್ರಿಯ ರಾಜಕಾರಣಕ್ಕೆ ವಿದಾಯ ಹೇಳಿದೆ. ನಂಜುಂಡಸ್ವಾಮಿ, ಸುಂದರೇಶ್, ಶಾಮಣ್ಣ ಮುಂತಾದವರು ರೈತ ಸಂಘದ ಪೂರ್ಣ ಪ್ರಮಾಣದ ಸಕ್ರಿಯ ರಾಜಕಾರಣಕ್ಕೆ ಇಳಿದು ಅದೊಂದು ಅಂತ ಆಂದೋಲನವಾಗಿ ಬೆಳೆಸಿದರು. ಸ್ವಾತಂತ್ರ್ಯ ಸಂಗ್ರಾಮದ ನಂತರ ನಮ್ಮ ಗ್ರಾಮಗಳವರೆಗೂ ವಿಸ್ತರಿಸಿದ ಏಕಮಾತ್ರ ರಾಜಕೀಯ ಚಳವಳಿ ಎಂದರೆ ಕರ್ನಾಟಕ ರಾಜ್ಯ ರೈತ ಸಂಘದ ಚಳವಳಿ ಅವರೆಗೂ ಅಧಿಕಾರಿಗಳ, ರಾಜಕಾರಣಿಗಳ ಮರ್ಜಿಯಲ್ಲಿ ತಗ್ಗಿ ಬಗ್ಗಿ ಗೂನು ಬೆನ್ನಾಗಿದ್ದ ರೈತನನ್ನು ನೆಟ್ಟಗೆ ನಿಲ್ಲಿಸಿ ಅವನಲ್ಲಿ ಆತ್ಮವಿಶ್ವಾಸ ತುಂಬಿ ದರ್ಪದಮನಗಳ ಎದುರು ಸೆಟೆದು ನಿಲ್ಲುವ ಆತ್ಮ ಗೌರವ ತಂದುಕೊಟ್ಟ ಮೊದಲಿಗರು ನಂಜುಂಡ ಸ್ವಾಮಿ ಅನಂತರ ಸುಂದರೇಶ್..."
-ಪೂರ್ಣಚಂದ್ರ ತೇಜಸ್ವಿ
ಆಕರ: -'ಹೊಸ ವಿಚಾರಗಳು'(ಪುಸ್ತಕ)
09/02/2026
With Vijaya Times – I just got recognised as one of their top fans! 🎉
29/01/2026
ಸಮಾಜ ಮತ್ತು ಕೃಷಿ ಭಾಗವಾಗಿ ಪ್ರಚಲಿತ ಕೃಷಿ ಹಾಗೂ ರೈತನ ಬದುಕಿನ ಬಗ್ಗೆ ಸುವಿಸ್ತರವಾಗಿ ಮಾತನಾಡಿದ ಶ್ರೀಮತಿ ಚುಕ್ಕಿ ನಂಜುಂಡಸ್ವಾಮಿ 💚🍀🙏🏻 ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ 💚💚✨💐🌺
fans
05/12/2025
ವಿಶ್ವ ಮಣ್ಣಿನ ದಿನ
ಮಣ್ಣು ಕೇವಲ ಮಣ್ಣಲ್ಲ, ಅದು ನಮ್ಮ ಬದುಕಿನ ಅಡಿಪಾಯ. ಮನುಕುಲದ ಅಸ್ತಿತ್ವ ಮತ್ತು ಆಹಾರದ ಮೂಲ ಮಣ್ಣು. ನಮ್ಮ ಭೂಮಿ, ನಮ್ಮ ತಾಯಿ - ಮಣ್ಣನ್ನು ಮಲಿನಗೊಳಿಸದೆ, ಮುಂದಿನ ಪೀಳಿಗೆಗಾಗಿ ಅದನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ.
ಮಣ್ಣಿನ ಮಕ್ಕಳಾಗಿ ನಮ್ಮ ಮಣ್ಣಿನ ಋಣ ತೀರಿಸೋಣ, ಆರೋಗ್ಯಕರ ಸಮಾಜ ಕಟ್ಟೋಣ.
fans
03/12/2025
ಪದ್ಮಶ್ರೀ ಡಾ.ಸುಭಾಷ್ ಪಾಳೇಕರವರ ನೈಸರ್ಗಿಕ ಕೃಷಿ ಪದ್ಧತಿಯ ಕಾರ್ಯಗಾರ
ಸ್ಥಳ: ಶ್ರೀ ಕ್ಷೇತ್ರ ಪುಷ್ಪಗಿರಿ ಹಳೇಬೀಡು, ಬೇಲೂರು ತಾಲೂಕು ಹಾಸನ ಜಿಲ್ಲೆ.
ದಿನಾಂಕ: ಜನವರಿ 3 ರಿಂದ 6ರ ವರೆಗೆ
14/11/2025
ಪದ್ಮಶ್ರೀ ಪುರಸ್ಕೃತರಾದ 'ವೃಕ್ಷಮಾತೆ' ಸಾಲುಮರದ ತಿಮ್ಮಕ್ಕನವರು ನಿಧನರಾದ ಸುದ್ದಿ ತಿಳಿದು ತೀವ್ರ ದುಃಖವಾಗಿದೆ. ಅವರು ಪರಿಸರ ಸಂರಕ್ಷಣೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹಾನ್ ಚೇತನವಾಗಿದ್ದರು.
ಮಕ್ಕಳಿಲ್ಲದ ತಿಮ್ಮಕ್ಕನವರು ಸಾವಿರಾರು ಮರಗಳನ್ನು ತಮ್ಮ ಮಕ್ಕಳಂತೆ ಬೆಳೆಸಿ, ಪೋಷಿಸಿ, ಇಡೀ ಜಗತ್ತಿಗೆ ಪರಿಸರ ಪ್ರೀತಿಯ ಪಾಠವನ್ನು ಕಲಿಸಿದ ಅವರ ಸೇವೆ ಎಂದೆಂದಿಗೂ ಸ್ಮರಣೀಯ. ಅವರ ಪರಿಸರ ಪ್ರೇಮ ಮತ್ತು ಸಾಧನೆ ನಮಗೆಲ್ಲಾ ಒಂದು ದೊಡ್ಡ ಪ್ರೇರಣೆಯಾಗಿದೆ.
ಈ ದುಃಖದ ಸಂದರ್ಭದಲ್ಲಿ ಮತ್ತು ಅಪಾರ ಅಭಿಮಾನಿಗಳಿಗೆ ನನ್ನ ಆಳವಾದ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆ.
ಚುಕ್ಕಿ ನಂಜುಂಡಸ್ವಾಮಿ
ರೈತ ಸಂಘದ ಮುಖಂಡರು
13/11/2025
ಚುಕ್ಕಿ ನಂಜುಂಡಸ್ವಾಮಿ
ರೈತರ ಹೋರಾಟದ ಹೆಮ್ಮೆ
ರೈತ ಸಂಘದ ಮಹಿಳಾ ಹೋರಾಟಗಾರ್ತಿ ಚುಕ್ಕಿ ಅಕ್ಕ ನಂಜುಂಡಸ್ವಾಮಿ ಅವರು, ರೈತ ಚಳುವಳಿಯ ಪ್ರೇರಣಾ ಶಕ್ತಿ ಮತ್ತು ನಂಬಿಕೆಯ ಧ್ವನಿ. ಅವರು ರೈತ ಸಂಘದ ಸಂಸ್ಥಾಪಕರಾದ ಪ್ರೊ. ಎಂ. ಡಿ. ನಂಜುಂಡಸ್ವಾಮಿ ಅವರ ಪುತ್ರಿ ಆದರೂ, ಅವರ ಜೀವನಶೈಲಿ ಸಾಮಾನ್ಯ ರೈತರಂತೆಯೇ ಸರಳತೆ ಮತ್ತು ನಿಷ್ಠೆಯಿಂದ ಕೂಡಿದೆ.
ಬಾಲ್ಯದಿಂದಲೇ ರೈತರ ನೋವು, ದುಃಖ ಮತ್ತು ಹೋರಾಟವನ್ನು ಕಣ್ಣಾರೆ ಕಂಡು ಬೆಳೆದ ಚುಕ್ಕಿ ಅಕ್ಕ ಅವರು, ತಮ್ಮ ತಂದೆಯ ಹಾದಿಯಲ್ಲೇ ನಡೆದು ರೈತರ ಹಕ್ಕುಗಳಿಗಾಗಿ ಹೋರಾಡುವ ನಿಷ್ಟಾವಂತ, ಧೈರ್ಯಶಾಲಿ ಮಹಿಳೆಯಾಗಿ ರೂಪುಗೊಂಡಿದ್ದಾರೆ.
ಅವರಿಗೆ ರೈತರ ಜೀವನ, ಭೂಮಿ, ಪರಿಸರ ಮತ್ತು ಅಕ್ಕಪಕ್ಕದ ಸಾಮಾನ್ಯ ಜನರ ಕಲ್ಯಾಣದ ಬಗ್ಗೆ ಅಪಾರ ಕಾಳಜಿ ಇದೆ. ಅವರ ದೂರದೃಷ್ಟಿ, ಸಂಘಟನಾ ಸಾಮರ್ಥ್ಯ, ಮತ್ತು ಮಹಿಳಾ ಶಕ್ತಿ ಮೇಲಿನ ನಂಬಿಕೆ ರೈತ ಚಳುವಳಿಗೆ ಹೊಸ ಜೀವ ತುಂಬುತ್ತಿದೆ.
ಅವರು ಇಂದು ಕೇವಲ ರೈತ ಸಂಘದ ನಾಯಕರ ಮಗಳು ಎಂಬುದಲ್ಲ; ಬದಲಿಗೆ, ರೈತರ ಹೋರಾಟದ ಹೊಸ ಪೀಳಿಗೆಯನ್ನ ಗುರುತಿಸುತ್ತಿದ್ದಾರೆ, ಅವರ ಧ್ವನಿಯಲ್ಲಿ ಸತ್ಯದ ಬಲ ಇದೆ.
08/11/2025
ಇಂದು ಕೃಷಿ ಬಿಕ್ಕಟ್ಟು ಪರಿಹಾರ, ಪರ್ಯಾಯ ವಿಚಾರ ಸಂಕಿರಣ ಕೃಷಿಯ ಉಳಿಯು ಕೃಷಿಕನ ಬೆಳೆವು - ಚಿಂತನ ಮಂಥನ . ಮದ್ದೂರು ಮಂಡ್ಯ ಜಿಲ್ಲೆ ನಡೆದಂತಹ ಕಾರ್ಯಕ್ರಮ 💚✊💐✨