15/08/2023
ಸಮಸ್ತ ಭಾರತೀಯರಿಗೆ ದೇಶದ 77ನೇ ಸ್ವಾತಂತ್ರ್ಯ ದಿನಾಚರಣೆ ಶುಭಾಶಯಗಳು
ಸ್ವತಂತ್ರ ಭಾರತಕ್ಕಾಗಿ ಹೋರಾಡಿದ ಎಲ್ಲ ಸ್ವಾತಂತ್ರ್ಯ ಹೋರಾಟಗಾರರಿಗೆ ಶ್ರದ್ಧಾಪೂರ್ವಕ ನಮನಗಳು. ಸ್ವಾತಂತ್ರ್ಯದ ಸಂಭ್ರಮಾಚರಣೆಯ ಜೊತೆಗೆ ಸಂರಕ್ಷಣೆಯ ಕರ್ತವ್ಯವನ್ನೂ ನಾವು ನಿರ್ವಹಿಸೋಣ.
20/10/2021
ನಾಡಿನ ಜನತೆಗೆ ಶ್ರೀ ವಾಲ್ಮೀಕಿ ಜಯಂತಿಯ ಶುಭಾಶಯಗಳು.
ವಾಲ್ಮೀಕಿ ಮಹರ್ಷಿಗಳು ಬರೆದ ರಾಮಾಯಣ ಮಹಾಕಾವ್ಯ ಇಡೀ ವಿಶ್ವಕ್ಕೆ ಭಾರತ ನೀಡಿದ ಅಭೂತಪೂರ್ವ ಸಾಹಿತ್ಯದ ಕೊಡುಗೆಯಾಗಿದೆ.
Bharatiya Janata Party (BJP) BJYM
28/09/2021
ಬ್ರಿಟಿಷರ ಎದೆ ನಡುಗಿಸಿದ ಕ್ರಾಂತಿವೀರ ಭಗತ್ ಸಿಂಗ್..
ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ಎದೆ ನಡುಗಿಸಿದ್ದ, ಕ್ರಾಂತಿಕಾರಿ ನಾಯಕ ,ಮಹಾನ್ ದೇಶಭಕ್ತ, ಸ್ವಾತಂತ್ರ್ಯ ಹೋರಾಟಗಾರ ಭಗತಸಿಂಗ್ ಅವರ ೧೧೪ನೇ ಜನ್ಮದಿನದ ಪ್ರಯುಕ್ತವಾಗಿ ಭಾರತಾಂಬೆಯ ಈ ವೀರ ಪುತ್ರನಿಗೆ ಮನಃಪೂರ್ವಕವಾಗಿ ಕೋಟಿ, ಕೋಟಿ ನಮನಗಳನ್ನು ಸಲ್ಲಿಸುತ್ತೇನೆ.
ಸಾಮ್ರಾಜ್ಯಶಾಹಿಗೆ ದಿಕ್ಕಾರ, ಇಂಕ್ವಿಲಾಬ್ ಜಿಂದಾಬಾದ್, ಕ್ರಾಂತಿ ಚಿರಾಯುವಾಗಲಿ ಎಂಬ ಘೋಷಣೆಗಳನ್ನು ಹುಟ್ಟು ಹಾಕಿದ್ದೇ ಈ ಮಹಾನ್ ನಾಯಕ. ಅಂತಿಮವಾಗಿ ಈ ಘೋಷಣೆಗಳು ಭಾರತದ ಸಶಸ್ತ್ರ ಸ್ವಾತಂತ್ರ್ಯ ಹೋರಾಟದ ಘೊಷಣೆಗಳಾಗಿ ಮಾರ್ಪಟ್ಟವು. ಇಂತಹ ಮಾಹಾನ್ ದೇಶಭಕ್ತರಾದ ಭಗತ್ ಸಿಂಗ್ ಅವರ ಜನ್ಮದಿನದಂದು ಅವರನ್ನು ಅತ್ಯಂತ ಗೌರವಪೂರ್ವಕವಾಗಿ ಸ್ಮರಿಸುತ್ತಾ, ಅನಂತ, ಅನಂತ ನಮನಗಳನ್ನು ಸಲ್ಲಿಸುತ್ತೇನೆ..