T Thimmegowda

T Thimmegowda

Share

Ex BBMP Corporator, Srinagar, Bengaluru.

20/07/2023

ಅನ್ನ, ಅಕ್ಷರ, ಆಶ್ರಯ ದಾಸೋಹಕ್ಕೆ ಹೆಸರುವಾಸಿಯಾಗಿರುವ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರಿಗೆ ಜನ್ಮದಿನದಂದು ನನ್ನ ಗೌರವಪೂರ್ಣ ಶುಭಾಶಯಗಳು.

Sri Sri Sri Dr.Nirmalanandanatha Maha Swamiji

15/07/2023

ತಮ್ಮಲ್ಲಿರುವ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸಿಕೊಂಡು ವೃತ್ತಿ ಜೀವನದಲ್ಲಿ ಹೆಚ್ಚಿನ ಯಶಸ್ಸು ಗಳಿಸಬೇಕಾದ ಜವಾಬ್ದಾರಿ ಯುವಜನತೆಯ ಮೇಲಿದೆ. ವಿಶ್ವ ಯುವ ಕೌಶಲ್ಯ ದಿನವಾದ ಇಂದು ಈ ಕುರಿತು ಚಿಂತನೆ ನಡೆಸೋಣ.

04/07/2023

ಶ್ರೇಷ್ಠ ಸಂತ, ವಿಶ್ವ ವಿಜೇತ ಶ್ರೀ ಸ್ವಾಮಿ ವಿವೇಕಾನಂದರಿಗೆ ಪುಣ್ಯತಿಥಿಯಂದು ನನ್ನ ಗೌರವಪೂರ್ಣ ಪ್ರಣಾಮಗಳು. ಯುವ ಸಮಾಜದ ಮನೋಬಲ ಹೆಚ್ಚಿಸುವಂತಹ ಇವರ ಪ್ರಬುದ್ಧ ಚಿಂತನೆಗಳನ್ನು ನಾವಿಂದು ಸ್ಮರಿಸೋಣ.

03/07/2023

ಗುರು ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು. ನಮ್ಮ ತಪ್ಪುಗಳನ್ನೆಲ್ಲ ತಿದ್ದಿ, ಜೀವನವನ್ನು ಸರಿಯಾದ ದಾರಿಯಲ್ಲಿ ಕೊಂಡೊಯ್ಯಲು ಮಾರ್ಗದರ್ಶನ ಮಾಡಿದ ಸಮಸ್ತ ಗುರುಗಳಿಗೆ ನನ್ನ ಗೌರವಪೂರ್ಣ ನಮನಗಳು.

01/07/2023

ತಮ್ಮ ಕರ್ತವ್ಯವನ್ನು ಅತ್ಯಂತ ಜವಾಬ್ದಾರಿಯಿಂದ ನಿಭಾಯಿಸಿ, ಜನರ ಆರೋಗ್ಯ ಹಾಗೂ ಜೀವವನ್ನು ಕಾಪಾಡುವ ವೈದ್ಯರುಗಳು ದೇವರಿಗೆ ಸಮಾನ. ರಾಷ್ಟ್ರೀಯ ವೈದ್ಯರ ದಿನವಾದ ಇಂದು ಅವರೆಲ್ಲರಿಗೂ ನನ್ನ ಗೌರವಪೂರ್ಣ ನಮನಗಳು.

30/06/2023

ವಿಜ್ಞಾನ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿ 'ಭಾರತರತ್ನ' ಗೌರವಕ್ಕೆ ಪಾತ್ರರಾಗಿರುವ ಶ್ರೀ ಸಿ.ಎನ್.ಆರ್.ರಾವ್‌‌ರವರಿಗೆ ಜನ್ಮದಿನದ ಶುಭಾಶಯಗಳು. ವಿಜ್ಞಾನದಲ್ಲಿ ಆಸಕ್ತಿಯಿರುವ ಯುವಪೀಳಿಗೆಗೆ ಇವರು ಸ್ಫೂರ್ತಿಯ ಚಿಲುಮೆಯಾಗಿದ್ದಾರೆ. ಭಗವಂತನು ಇವರಿಗೆ ಉತ್ತಮ ಆರೋಗ್ಯ, ಆಯುಷ್ಯ, ನೆಮ್ಮದಿಯನ್ನು ಕರುಣಿಸಲಿ ಎಂದು ಹಾರೈಸುತ್ತೇನೆ.

29/06/2023

ಸಮಸ್ತ ಮುಸ್ಲಿಂ ಬಾಂಧವರಿಗೆ ಬಕ್ರಿದ್ ಹಬ್ಬದ ಹಾರ್ದಿಕ ಶುಭಾಶಯಗಳು. ತ್ಯಾಗ ಮತ್ತು ಬಲಿದಾನದ ಪ್ರತೀಕವಾಗಿರುವ ಈದ್-ಅಲ್-ಅಧಾ ಹಬ್ಬವು ಸಮಾಜದಲ್ಲಿ ಸೌಹಾರ್ದತೆ ಬೆಸೆಯಲಿ ಹಾಗೂ ಎಲ್ಲರ ಬದುಕಿನಲ್ಲಿ ಸಂತೋಷ, ನೆಮ್ಮದಿ, ಸಮೃದ್ಧಿ ತರಲಿ ಎಂಬ ಹಾರೈಕೆಗಳು.

27/06/2023

ಸಮಸ್ತ ಜನತೆಗೆ ಶ್ರೀ ನಾಡಪ್ರಭು ಕೆಂಪೇಗೌಡ ಜಯಂತಿಯ ಹಾರ್ದಿಕ ಶುಭಾಶಯಗಳು. ಅತ್ಯಂತ ವ್ಯವಸ್ಥಿತವಾಗಿ ಬೆಂಗಳೂರು ನಗರವನ್ನು ನಿರ್ಮಿಸಿದ ಇವರ ದಕ್ಷ ಆಡಳಿತ, ದಿಟ್ಟ ನಿರ್ಧಾರ ಹಾಗೂ ದೂರದೃಷ್ಟಿಯ ಚಿಂತನೆಗಳು ನಮಗೆಲ್ಲರಿಗೂ ಮಾದರಿಯಾಗಿವೆ.

Statue of Prosperity - ಪ್ರಗತಿಯ ಪ್ರತಿಮೆ

23/06/2023

ಅಂತಾರಾಷ್ಟ್ರೀಯ ಒಲಂಪಿಕ್ ದಿನದ ಶುಭಾಶಯಗಳು. ಒಲಂಪಿಕ್ ಕ್ರೀಡಾಕೂಟಗಳಲ್ಲಿ ಸಾಧನೆ ತೋರಿದ ಪ್ರತಿಯೊಬ್ಬರಿಗೂ ಗೌರವ ಸಲ್ಲಿಸುತ್ತಾ, ಭಾರತವು ಇನ್ನಷ್ಟು ಸಾಧನೆ ಮಾಡಬೇಕೆಂಬ ಆಶಯದೊಂದಿಗೆ ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವವರನ್ನು ಪ್ರೋತ್ಸಾಹಿಸೋಣ.

21/06/2023

ಸಮಸ್ತ ಜನತೆಗೆ ಅಂತಾರಾಷ್ಟ್ರೀಯ ಯೋಗ ದಿನದ ಶುಭ ಹಾರೈಕೆಗಳು. ಪ್ರತಿದಿನವೂ ಶ್ರದ್ಧೆ ಹಾಗೂ ಬದ್ಧತೆಯಿಂದ ಯೋಗಾಸನಗಳನ್ನು ಮಾಡಿ ನಮ್ಮ ದೇಹ ಹಾಗೂ ಮನಸ್ಸನ್ನು ಇನ್ನಷ್ಟು ಸದೃಢಗೊಳಿಸಿಕೊಳ್ಳೋಣ.

18/06/2023

ಮಕ್ಕಳಿಗೆ ಸುಂದರ ಬದುಕು ಕಟ್ಟಿಕೊಡಲು ಜೀವನದ ಬಹುಕಾಲವನ್ನು ಬಳಸುವ ತಂದೆಯ ಶ್ರಮವು ಅತ್ಯಂತ ಶ್ರೇಷ್ಠವಾಗಿದೆ. ವಿಶ್ವ ಅಪ್ಪಂದಿರ ದಿನವಾದ ಇಂದು ಎಲ್ಲರ ತಂದೆಯರಿಗೆ ಗೌರವಯುತ ನಮನಗಳು.

06/06/2023

ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆ ನೀಡಿರುವ ಜ್ಞಾನಪೀಠ ಪುರಸ್ಕೃತ ಸಾಹಿತಿ ಶ್ರೀ ಮಾಸ್ತಿ ವೆಂಕಟೇಶ್ ಅಯ್ಯಂಗಾರ್‌‌ರವರಿಗೆ ಜನ್ಮದಿನ ಹಾಗೂ ಪುಣ್ಯತಿಥಿಯಂದು ನನ್ನ ಪ್ರಣಾಮಗಳು. 'ಮಾಸ್ತಿ ಕನ್ನಡದ ಆಸ್ತಿ' ಎಂದು ಕರೆಯಲ್ಪಡುವ ಇವರು ಸಮಸ್ತ ಸಾಹಿತ್ಯಪ್ರಿಯರ ಅಂತರಾಳದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ.

Want your business to be the top-listed Government Service in Bangalore?

Click here to claim your Sponsored Listing.

Location

Category

Website

Address


Basavanagudi
Bangalore