11/03/2023
*ದಿನಾಂಕ : 08/03/2023 ರಂದು ಡಾ|| ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಯುತ ರವಿಕುಮಾರ್ ರವರ ಅಧ್ಯಕ್ಷತೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಿದ್ದು ಈ ಕಾರ್ಯಕ್ರಮದ ವಿಷಯವು ನ್ಯೂಸ್ ಪತ್ರಿಕೆಯಲ್ಲಿ ಪ್ರಕಟಗೊಂಡಿರುವ ದೃಶ್ಯಾವಳಿಗಳು*
08/03/2023
*ಇಂದು ಡಾ||ಬಿ.ಆರ್ ಅಂಬೇಡ್ಕರ್ ಸಮುದಾಯ ಭವನ ಟ್ರಸ್ಟ್ (ರಿ), ಜಕ್ಕೂರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿಯಮಿತ (ರಿ) ಮತ್ತು ಕರ್ನಾಟಕ ಜಾತ್ಯತೀತ ಸಮಾಜವಾದಿ ಸಂಘಟನೆ (ರಿ) ಈ ಮೂರು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಯುತ ರವಿಕುಮಾರ್ ರವರ ಅಧ್ಯಕ್ಷತೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.*
*ವಿಶೇಷವಾಗಿ ಜಕ್ಕೂರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿಯಮಿತ ಸಂಸ್ಥೆ ವತಿಯಿಂದ ಜಕ್ಕೂರು ಗ್ರಾಮದ ಶ್ರೀ ಮಂಜುನಾಥಸ್ವಾಮಿ ನಗರ ಶ್ರೀ ಶಕ್ತಿ ಸಂಘಕ್ಕೆ ಮೂರನೇ ಬಾರಿಗೆ ತಲಾ ಒಬ್ಬರಿಗೆ 1,00,000/-ಗಳಂತೆ ಒಟ್ಟು 10ಜನರ ಗುಂಪಿಗೆ 10,00,000/- (ಹತ್ತು ಲಕ್ಷ)ಗಳ ಸ್ತ್ರೀ ಶಕ್ತಿ ಗುಂಪು ಸಾಲವನ್ನು ಚೆಕ್ ಮೂಲಕ ವಿತರಿಸಲಾಯಿತು.*
*ಶ್ರೀಮತಿ ಮೀನಾಕ್ಷಿ ಕೃಷ್ಣ ಬೈರೇಗೌಡ ರವರಿಗೆ ಪ್ರತಿ ವರ್ಷದಂತೆ ಈ ವರ್ಷವೂ ಸಹ ತವರು ಮನೆ ಉಡುಗೊರೆಯನ್ನು ಮಹಿಳೆಯರಿಂದ ನೀಡಲಾಯಿತು.*
*ಕೆಲವು ಮಹಿಳೆಯರಿಗೆ ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ರಸಮಂಜರಿ ಕಾರ್ಯಕ್ರಮವನ್ನು ಏರ್ಪಡಿಸಿದ್ದು ಹಾಡು ಹಾಡಿದ ಕೆಲವು ಮಹಿಳೆಯರಿಗೆ ಬಹುಮಾನಗಳನ್ನು ವಿತರಿಸಲಾಯಿತು.*
*ಈ ಕಾರ್ಯಕ್ರಮದಲ್ಲಿ ಸುಮಾರು 500 ಜನರಿಗಿಂತ ಹೆಚ್ಚಿನ ಮಹಿಳೆಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿ ಕೊಟ್ಟ ಎಲ್ಲಾ ಮಹಿಳೆಯರಿಗೆ ಹಾಗೂ ಮುಖ್ಯ ಅತಿಥಿಗಳಿಗೆ ತುಂಬು ಹೃದಯದ ಧನ್ಯವಾದಗಳು.*
*ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಮಹಿಳೆಯರಿಗೆ ಭೋಜನದ ವ್ಯವಸ್ಥೆಯನ್ನು ಮಾಡಿಕೊಟ್ಟ ಡಾ||ಬಿ.ಆರ್ ಅಂಬೇಡ್ಕರ್ ಸಮುದಾಯ ಭವನ ಟ್ರಸ್ಟ್ ನ ಎಲ್ಲಾ ಟ್ರಸ್ಟಿಗಳಿಗೆ ತುಂಬು ಹೃದಯದ ಧನ್ಯವಾದಗಳು.*
*ಇಂತಿ ತಮ್ಮ ವಿಶ್ವಾಸಿ*
*ರಾಕೇಶ್.ಎಸ್.ಟಿ*
*ಕಾರ್ಯದರ್ಶಿ*
01/03/2023
Call for demo Robonxt Innovative Foundation
Robonxt | Piano Bot | Jagath | Nakul | Mohan Krishna
...
18/02/2023
*ಜಕ್ಕೂರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿಯಮಿತ (ರಿ) ಸಂಸ್ಥೆವತಿಯಿಂದ ನಾಡಿನ ಸಮಸ್ತ ಮಹಾಜನತೆಗೆ ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು. ನಾಡಿನ ಸಂಕಷ್ಟಗಳೆಲ್ಲವನ್ನು ಪರಿಹರಿಸಿ ಆ ಮಹಾ ಮಹೀಶ್ವರ ಸಕಲ ಜೀವರಾಶಿಗಳಿಗೂ ಒಳಿತನ್ನು ಮಾಡಲೆಂದು ವಿಶೇಷವಾಗಿ ಪ್ರಾರ್ಥಿಸುತ್ತೇನೆ.*
*ಈ ಶುಭ ಸಂದರ್ಭದಲ್ಲಿ ತಮ್ಮೆಲ್ಲರಲ್ಲಿ ಹಂಚಿಕೊಳ್ಳುವುದೇನೆಂದರೆ, ನಮ್ಮ ಜಕ್ಕೂರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿಯಮಿತ (ರಿ) ಸಂಸ್ಥೆಯು ಪ್ರಾರಂಭಗೊಂಡು 4 ವರ್ಷದಲ್ಲಿ ರೂ.5 ಕೋಟಿಗೂ ಹೆಚ್ಚು ವ್ಯವಹಾರವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದೇವೆ.*
*ಈ ಹಿಂದೆ 4ನೇ ವಾರ್ಷಿಕ ಮಹಾಸಭೆಯ ಸರ್ವ ಸದಸ್ಯರ ಸಮಕ್ಷದಲ್ಲಿ ಸೊಸೈಟಿಯ ಲಾಭದಲ್ಲಿ ರೂ.1,24,000/-ಗಳ ಡಿವಿಡೆಂಟ್ ಅನ್ನು ಷೇರುದಾರರಿಗೆ ವಿತರಣೆ ಮಾಡಿದ್ದೇವೆ.*
*ಈಗ ನಮ್ಮ ಸೊಸೈಟಿಯಲ್ಲಿ ಒಟ್ಟು 1,800 ಜನ ಷೇರುದಾರರು ಸದಸ್ಯತ್ವ ಪಡೆದಿದ್ದಾರೆ ಇದರಲ್ಲಿ ಈಗಾಗಲೆ ನಮ್ಮ ಸೊಸೈಟಿಯಿಂದ ಶೇಕಡ 25% ಷೇರುದಾರರಿಗೆ ಶ್ರೀ ಶಕ್ತಿ ಗುಂಪು ಸಾಲ, ವೈಯಕ್ತಿಕ ಜಾಮೀನು ಸಾಲ, ಸ್ವಯಂ ಉದ್ಯೋಗಗಳಿಗೆ ಉದ್ಯೋಗಗಳ ನೇರ ಸಾಲ, ಶಿಕ್ಷಣಕ್ಕೆ ಸಾಲ, ಸಣ್ಣಪುಟ್ಟ ವ್ಯಾಪಾರಕ್ಕೆ ಹೀಗೆ ಹಲವಾರು ಸಾಲ ಸೌಲಭ್ಯಗಳನ್ನು ನಿರಂತರವಾಗಿ ವಿತರಣೆ ಮಾಡಿಕೊಂಡು ಬರುತ್ತಿದ್ದೇವೆ.*
*ಇಲ್ಲಿವರೆಗೆ ಸಾಲ ಪಡೆದವರಲ್ಲಿ ಶೇಕಡ.80% ರಷ್ಟು ಜನರು ನಿರ್ಗತಿಕರಿಗೆ, ದಿನ ಕೂಲಿ ಕೆಲಸಗಾರರಿಗೆ, ಮನೆ ಕೆಲಸ ಗಾರರಿಗೆ, ಮಗ್ಗ ಕೆಲಸ ಗಾರರಿಗೆ, ಬೀದಿ ಬದಿ ವ್ಯಾಪಾರಿಗಳಿಗೆ, ಹಾಲು ಮಾರಾಟ ಮಾಡುವರಿಗೆ, ತರಕಾರಿ ಹಂಗಡಿ ನಡೆಸುವವರಿಗೆ, ಬೀದಿಯಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿರುವರಿಗೆ, ಮನೆಯಲ್ಲಿ ಟೈಲರಿಂಗ್ ಕೆಲಸ ನಡೆಸುವವರಿಗೆ, ಇಸ್ತ್ರಿ ಬಟ್ಟೆ ಅಂಗಡಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಸದಸ್ಯರುಗಳಿಗೆ ಇವರನ್ನು ಸಮಾಜದಲ್ಲಿ ಆರ್ಥಿಕವಾಗಿ ಸದೃಢಗೊಳಿಸುವ ಮುಖ್ಯ ಉದ್ದೇಶದಿಂದ ಮತ್ತು ಅವರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಹಣದ ಕೊರತೆಯನ್ನು ನೀಗಿಸಲು ಸಾಲವನ್ನು ವಿತರಿಸಿದ್ದೇವೆ.*
*ಇನ್ನು ಉಳಿದ ಶೇಕಡ.20% ರಷ್ಟು ಜನರಿಗೆ ವೇತನ ಆಧರಿತ ಮತ್ತು ಗೌರ್ನಮೆಂಟ್ ಬಾಂಡ್ ಗಳ ಆಧಾರದ ಮೇಲೆ ಸಾಲ ಸೌಲಭ್ಯಗಳನ್ನು ವಿತರಣೆ ಮಾಡಿದ್ದೇವೆ.*
*ಸಾಲ ಪಡೆದ ಸಾಲಗಾರರು ಪ್ರಾಮಾಣಿಕವಾಗಿ ತಮ್ಮ ಸಾಲದ ಅವಧಿಗೆ ಸರಿಯಾಗಿ EMI ಅನ್ನು ಮರುಪಾವತಿ ಮಾಡಿಕೊಂಡು ಬಂದಿರುತ್ತಾರೆ. ಶೇಕಡ.95% ರಷ್ಟು ಸಾಲ ಮರುಪಾವತಿ ಆಗಿರುತ್ತದೆ. ಇದಕ್ಕೆ ಎಲ್ಲಾ ಸಾಲಗಾರರಿಗೆ ಹೃದಯಪೂರ್ವಕ ಧನ್ಯವಾದಗಳು ತಿಳಿಯಪಡಿಸುತ್ತೇನೆ.*
*ಹಾಗೂ ಸರ್ಕಾರದಿಂದ ನಮ್ಮ ಸೊಸೈಟಿಯ ಷೇರುದಾರರಿಗೆ ಒದಗಿಸಬೇಕಾದ ಯೋಜನೆಯನ್ನು ಸಹ ನೀಡುತ್ತಿದ್ದೇವೆ ಹೀಗೆ ನಮ್ಮಲ್ಲಿ ಷೇರುದಾರರಿಗೆ ಯಶಸ್ವಿನಿ ಅರೋಗ್ಯ ಯೋಜನೆಯನ್ನು ಮಾಡಿಸುತ್ತಿದ್ದೇವೆ.*
*ಈ ರೀತಿಯಲ್ಲಿ ಯಶಸ್ವಿಯಾಗಿ ನಡೆಸಿಕೊಂಡು ಹೋಗುವುದಕ್ಕೆ, ಆಡಳಿತ ಮಂಡಳಿಯು ಮತ್ತು ಎಲ್ಲಾ ಷೇರುದಾರರುಗಳು ಸಹಕಾರವನ್ನು ನೀಡುತ್ತಾ ಬಂದಿರುತ್ತೀರ ಇದಕ್ಕೆ ನಾನು ಆಭಾರಿಯಾಗಿರುತ್ತೇನೆ.*
*ಇದೇ ರೀತಿಯಲ್ಲಿ ಮುಂದಿನ ದಿನದಲ್ಲಿ ನಿಮ್ಮೆಲ್ಲರ ಸಲಹೆ ಸಹಕಾರ ನೀಡುತ್ತೀರಿ ಎಂದು ಆಶಿಸುತ್ತೇನೆ. ಮತ್ತೊಮ್ಮೆ ತಮ್ಮೆಲ್ಲರಿಗೂ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು.*
*ಧನ್ಯವಾದಗಳು*
*ಇಂತಿ*
*ರವಿಕುಮಾರ್*
*ಸಂಸ್ಥಾಪಕ ಅಧ್ಯಕ್ಷರು ಜಕ್ಕೂರು ಜಕ್ಕೂರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿಯಮಿತ (ರಿ)*
*ಮಾಜಿ ಅಧ್ಯಕ್ಷರು ಬೆಂಗಳೂರು ನಗರ ಜಿಲ್ಲಾ ಪಂಚಾಯತ್*
06/01/2023
ದಿನಾಂಕ : 03-01-2023 ರಂದು ಬ್ಯಾಟರಾಯನಪುರದಲ್ಲಿ ನಮ್ಮ ಜಕ್ಕೂರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿಯಮಿತ (ರಿ) ಸಂಸ್ಥೆಯ ಮಹಿಳಾ ನಿರ್ದೇಶಕರಾದ ಶ್ರೀಮತಿ ಸುಮಿತ್ರ ರವರು "ಪಾರ್ವತಿ ಚಾರಿಟೇಬಲ್ ಟ್ರಸ್ಟ್" (ಅನಾಥ ಸೇವಾಶ್ರಮ) ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿರುವ ಇವರು ಟ್ರಸ್ಟ್ ನ 6ನೇ ವರ್ಷದ ವಾರ್ಶಿಕೋತ್ಸವದ ಪ್ರಯುಕ್ತ ಸಾರ್ವಜನಿಕರಿಗೆ ಉಚಿತ ಆರೋಗ್ಯ (ಕಣ್ಣು, ಹಲ್ಲು, ಬಿ. ಪಿ ಇತ್ಯಾದಿ) ತಪಾಷಣೆ ಮತ್ತು ರಕ್ತದಾನ ಶಿಬಿರ ಆಯೋಜಿಸಿದ್ದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದು ಟ್ರಸ್ಟ್ ಅಧ್ಯಕ್ಷರಾದ ಶ್ರೀಮತಿ ಸುಮಿತ್ರ ರವರಿಗೆ ಮತ್ತು ಡಾಕ್ಟರ್ ಗಳಿಗೆ ಸನ್ಮಾನ ಮಾಡಲಾಯಿತು.
ಇಂತಿ
ರವಿಕುಮಾರ್
ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು
06/01/2023
ದಿನಾಂಕ :03-01-2023 ರಂದು ಜಕ್ಕೂರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿಯಮಿತ (ರಿ) ಸಂಸ್ಥೆವತಿಯಿಂದ ಹೊಸ ವರ್ಷದ ಪ್ರಯುಕ್ತ ಸ್ವಯಂ ಉದ್ಯೋಗಿಗಳ ಜಾಮೀನು ರಹಿತ ನೇರ ಸಾಲವನ್ನು ಬಡ ಕೂಲಿ ಕಾರ್ಮಿಕರಿಗೆ, ಬೀದಿಬದಿ ವ್ಯಾಪಾರಿಗಳಿಗೆ, ನಿರುದ್ಯೋಗಿಗಳಿಗೆ ಉದ್ಯೋಗ ಮಾಡಿಕೊಂಡು ಹೋಗುವುದಕ್ಕೆ 4 ಜನರಿಗೆ ತಲಾ ಒಬ್ಬರಿಗೆ ರೂ.40,000/-(ನಲವತ್ತು ಸಾವಿರ ರೂಪಾಯಿ ಮಾತ್ರ)ಗಳಂತೆ ಒಟ್ಟು ರೂ.1,60,000/-(ಒಂದು ಲಕ್ಷದ ಅರವತ್ತು ಸಾವಿರ )ಗಳನ್ನು ಚೆಕ್ ಮೂಲಕ ಸಾಲ ವಿತರಿಸಿದವು.
ಇಂತಿ
ರವಿಕುಮಾರ್
ಸಂಸ್ಥಾಪಕ ಅಧ್ಯಕ್ಷರು
27/12/2022
ದಿನಾಂಕ : 18.12.2022 ರಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಯುತ ರವಿಕುಮಾರ್ ರವರ 55 ನೇ ಹುಟ್ಟುಹಬ್ಬ ಕಾರ್ಯಕ್ರಮ ಮತ್ತು 2023 ನೇ ಸಾಲಿನ ಕ್ಯಾಲೆಂಡರ್ ಮತ್ತು ಡೈರಿ ಯನ್ನು ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ಟ್ರಸ್ಟ್ ಮತ್ತು ಜಕ್ಕೂರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಸಂಸ್ಥೆವತಿಯಿಂದ ಬಿಡುಗಡೆ ಮಾಡಿದನ್ನು ವಾರ್ತಾಪತ್ರಿಕೆ ಮತ್ತು ದೂರದರ್ಶನದಲ್ಲಿ ಪ್ರಕಟಕೊಂಡಿರುವುದು.
27/12/2022
ದಿನಾಂಕ : 18.12.2022 ರಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಮಾಜಿ ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಡಾ.ಬಿ.ಆರ್ ಅಂಬೇಡ್ಕರ್ ಸಮುದಾಯ ಭವನ ಟ್ರಸ್ಟ್, ಜಕ್ಕೂರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿಯಮಿತ, ಸಂಸ್ಥಾಪ ಅಧ್ಯಕ್ಷರಾದ ಶ್ರೀಯುತ ರವಿಕುಮಾರ್ ರವರ 55 ನೇ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಸೊಸೈಟಿ ಮತ್ತು ಟ್ರಸ್ಟ್ ವತಿಯಿಂದ 2023 ನೇ ಸಾಲಿನ ಕ್ಯಾಲೆಂಡರ ಮತ್ತು ಡೈರಿ ಬಿಡುಗಡೆ ಮಾಡಲಾಯಿತು.
27/12/2022
ದಿನಾಂಕ : 06.12.2022 ರಲ್ಲಿ ಡಾ||ಬಿ.ಆರ್.ಅಂಬೇಡ್ಕರ್ ಸಮುದಾಯ ಭಾವನ ಟ್ರಸ್ಟ್ (ರಿ) ಸಂಸ್ಥೆವತಿಯಿಂದ ವಿಶ್ವರತ್ನ ಮಹಾ ಮಾನವತಾವಾದಿ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಡಾ||ಬಿ. ಆರ್. ಅಂಬೇಡ್ಕರ್ ರವರ 66ನೇ ಪರಿನಿರ್ವಾಣ ಆಯೋಜಿಸಿದ್ದು. ಈ ಕಾರ್ಯಕ್ರಮದಲ್ಲಿ ಜಕ್ಕೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಪಾಠಶಾಲೆ ಕನ್ನಡ ಮಾಧ್ಯಮ ಮಕ್ಕಳಿಗೆ ಹಾಗೂ ಉರ್ದು ಶಾಲಾ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು ಹಾಗೂ ಸಾರ್ವಜನಿಕರಿಗೆ ಅನ್ನದಾನ ಆಯೋಜಿಸಲಾಗಿತ್ತು.