Mahila Morcha BJP Karnataka

Mahila Morcha BJP Karnataka

Share

BJP Karnataka State Mahila Morcha official. BJMM - women wing of the Bharatiya Janata Party

03/06/2026

ಮೆಗಾ ಪವರ್ ಸ್ಟೇಷನ್‌ಗಳನ್ನು ಅಧಿಕೃತವಾಗಿ ಮೀರಿಸುತ್ತಿವೆ ಮನೆಗಳ ಮೇಲ್ಛಾವಣಿಗಳು ! 🏡

ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಯ ಮೂಲಕ, ಮನೆಗಳಲ್ಲಿ ಅಳವಡಿಸಲಾಗಿರುವ ಸೌರಶಕ್ತಿ ವ್ಯವಸ್ಥೆಗಳು ಭಾರತದ ಅತಿದೊಡ್ಡ ಥರ್ಮಲ್ ಪವರ್ ಪ್ಲಾಂಟ್‌ನ ಸಾಮರ್ಥ್ಯಕ್ಕಿಂತ ಎರಡು ಪಟ್ಟು ಹೆಚ್ಚು ವಿದ್ಯುತ್ ಉತ್ಪಾದಿಸುತ್ತಿವೆ.

ಬನ್ನಿ ನಾವೆಲ್ಲರೂ ನಮ್ಮ ಮನೆಯ ಮೇಲ್ಛಾವಣಿಗಳನ್ನು ಸೌರಶಕ್ತಿಗೆ ಪರಿವರ್ತಿಸೋಣ. 🔌

01/06/2026

2020 ರಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಬೀದಿ ಬದಿ ವ್ಯಾಪಾರಿಗಳ ಸಹಾಯಕ್ಕಾಗಿ ಪ್ರಾರಂಭಿಸಿದ ಪಿಎಂ ಸ್ವನಿಧಿ ಯೋಜನೆಗೆ 6 ವರ್ಷ !

ಪಿಎಂ ಸ್ವನಿಧಿ ಯೋಜನೆಯಡಿಯಲ್ಲಿ ಇದುವರೆಗೆ 75 ಲಕ್ಷಕ್ಕೂ ಅಧಿಕ ಬೀದಿ ಬದಿ ವ್ಯಾಪಾರಿಗಳಿಗೆ ಸುಮಾರು ₹17,800 ಕೋಟಿಗೂ ಅಧಿಕ ಆರ್ಥಿಕ ನೆರವು ದೊರೆತಿದೆ.

31/05/2026

ಈ ಸಲನೂ ಕಪ್ ನಮ್ದೇ 🏆

ಐಪಿಎಲ್ 2026 ಚಾಂಪಿಯನ್ಸ್ ಆದ ನಮ್ಮ ಆರ್‌ಸಿಬಿ ತಂಡಕ್ಕೆ ಹಾರ್ದಿಕ ಅಭಿನಂದನೆಗಳು.

ಕನ್ನಡಿಗರ ಹೆಮ್ಮೆ ನಮ್ಮ ಆರ್​ಸಿಬಿ! ❤️

31/05/2026

ಮಾಳ್ವಾ ಪ್ರಾಂತ್ಯದ ಮಹಾರಾಣಿಯಾಗಿ ದಕ್ಷ ಆಡಳಿತಗಾರ್ತಿಯಾಗಿ, ಹಳೆಯ ಮತ್ತು ವಿಧ್ವಂಸಗೊಂಡ ಅನೇಕ ದೇವಾಲಯಗಳು ಹಾಗೂ ಕಾಶಿ ವಿಶ್ವನಾಥನ ದೇವಾಲಯವನ್ನು ಪುನರ್‌ ನಿರ್ಮಾಣ ಮಾಡುವ ಮೂಲಕ ಧರ್ಮ ರಕ್ಷಣೆ ಮಾಡಿದ ಲೋಕಮಾತೆ ಅಹಲ್ಯಾಬಾಯಿ ಹೋಳ್ಕರ್‌ ಅವರ ಜನ್ಮದಿನದಂದು ಶತ ಶತ ನಮನಗಳು.

28/05/2026

ಜೀವನವನ್ನೇ ರಾಷ್ಟ್ರಕ್ಕಾಗಿ, ಸ್ವಾತಂತ್ರ್ಯ ಹೋರಾಟಕ್ಕಾಗಿ ಮುಡುಪಾಗಿಟ್ಟ ಭಾರತಮಾತೆಯ ಸುಪುತ್ರ, ಕ್ರಾಂತಿಕಾರಿ, ಸ್ವಾತಂತ್ರ್ಯ ವೀರ ಸಾವರ್ಕರ್‌ ಎಂದೇ ಪ್ರಸಿದ್ಧರಾದ ವಿನಾಯಕ ದಾಮೋದರ ಸಾವರ್ಕರ್‌ ಅವರ ಜನ್ಮದಿನದಂದು ಶತ ಶತ ನಮನಗಳು.

#ವೀರಸಾವರ್ಕರ್

27/05/2026

ದೃಢ ನಾಯಕತ್ವದ ಮೋದಿ ಸರ್ಕಾರಕ್ಕೆ 12 ವರ್ಷ !

2014 ರಲ್ಲಿ ಎಲ್ಲರೊಂದಿಗೆ ಎಲ್ಲರ ವಿಕಾಸ ಎಂಬ ಧ್ಯೇಯದೊಂದಿಗೆ ಅಧಿಕಾರ ಸ್ವೀಕರಿಸಿ ಸತತ 12 ವರ್ಷಗಳಿಂದ ಬಡವರ ಕಲ್ಯಾಣ ಯೋಜನೆ ಸೇರಿದಂತೆ ದೇಶವನ್ನು ವಿಕಸಿತ ಭಾರತದತ್ತ ಕೊಂಡೊಯ್ಯುತ್ತಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಮತ್ತು ಎನ್‌ಡಿಎ ಸರ್ಕಾರಕ್ಕೆ ಅಭಿನಂದನೆಗಳು.

25/05/2026

ಇಡೀ ಜಗತ್ತೇ ಇಂದು ಅಂತರರಾಷ್ಟ್ರೀಯ ಬಿಕ್ಕಟ್ಟು ಹಾಗೂ ತೈಲ ದರದ ತೀವ್ರ ಏರಿಕೆಯನ್ನು ಎದುರಿಸುತ್ತಿದೆ. ವಿಶ್ವದ ಪ್ರಮುಖ ದೇಶಗಳಲ್ಲೇ ಪೆಟ್ರೋಲ್ ದರ ₹150 ರ ಗಡಿ ದಾಟಿದ್ದರೂ, ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಭಾರತೀಯ ನಾಗರಿಕರ ಮೇಲಿನ ಹೊರೆಯನ್ನು ತಗ್ಗಿಸಲು ನಿರಂತರವಾಗಿ ಶ್ರಮಿಸುತ್ತಿದೆ.

ಜಾಗತಿಕ ಸವಾಲುಗಳ ಈ ಕಠಿಣ ಸಮಯದಲ್ಲಿ, ದೇಶದ ಆರ್ಥಿಕ ಸ್ಥಿರತೆ ಮತ್ತು ಸ್ವಾವಲಂಬನೆಗಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ದೇಶದ ಪರವಾಗಿ, ಬಲಿಷ್ಠ ನಾಯಕತ್ವದ ಪರವಾಗಿ ನಿಲ್ಲಬೇಕಾಗಿದೆ.

ದೇಶ ಮೊದಲು, ದೇಶದ ಹಿತವೇ ಮೊದಲು🇮🇳

25/05/2026

ರಾಜ್ಯ ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಗೆ ಮೋಸ ಮಾಡುತ್ತಿದೆ. ಕಾಂಗ್ರೆಸ್ ಒಳಜಗಳದಿಂದ ಜನಹಿತದ ಕೆಲಸಗಳನ್ನು ಕಾಂಗ್ರೆಸ್ ನಿರ್ಲಕ್ಷಿಸಿದೆ. ರಾಜ್ಯ ಸರ್ಕಾರ ಕಾಂಗ್ರೆಸ್ ಹೈಕಮಾಂಡ್‌ಗೆ ಎಟಿಎಂ ಆಗಿ ಪರಿವರ್ತನೆಗೊಂಡಿದೆ.

- ಶ್ರೀ ನಿತಿನ್ ನಬಿನ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು

Photos from Mahila Morcha BJP Karnataka's post 25/05/2026

ದಿನಾಂಕ 24-May-26
ರಾಷ್ಟ್ರ ಅಧ್ಯಕ್ಷರಾದ ನಂತರ ಬಿಜೆಪಿ ರಾಜ್ಯ ಕಾರ್ಯಾಲಯಕ್ಕೆ ಮೊದಲ ಬಾರಿ ಆಗಮಿಸಿದಂತಹ ರಾಷ್ಟ್ರೀಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ನಿತಿನ್ ನಬಿನ್ ಅವರ ನೇತೃತ್ವದಲ್ಲಿ ಸಂಘಟನಾತ್ಮಕ ಸಭೆ ನಡೆಯಿತು.

ಈ ಮಹತ್ವಪೂರ್ಣ ಸಭೆಯಲ್ಲಿ ರಾಜ್ಯ ಬಿಜೆಪಿಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ Vijayendra Yediyurappa ಅವರು, ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ BS Yediyurappa ಅವರು, ಕೇಂದ್ರ ಸಚಿವರಾದ ಶ್ರೀ Pralhad Joshi ಅವರು, ಕರ್ನಾಟಕ ರಾಜ್ಯ ಉಸ್ತುವಾರಿಗಳು ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ Dr. Radha Mohan Das Agrawal ರವರು, ವಿಧಾನಸಭಾ ಪ್ರತಿಪಕ್ಷದ ನಾಯಕರು ಶ್ರೀ R Ashoka, ವಿಧಾನ ಪರಿಷತ್ ವಿಪಕ್ಷ ನಾಯಕರು ಶ್ರೀ Chalavadi Narayanaswamy ರವರು ಸೇರಿದಂತೆ ಗಣ್ಯರಾದ ಸಂಸದ್ ಸದಸ್ಯರು, ಶಾಸಕರು, ರಾಜ್ಯ ಮಹಿಳಾಮೋರ್ಚಾ ಅಧ್ಯಕ್ಷರಾದ ಕು ಸಿ ಮಂಜುಳಾ ರವರು, ರಾಜ್ಯ ಪದಾಧಿಕಾರಿಗಳು, ಪ್ರಮುಖರು ಉಪಸ್ಥಿತರಿದ್ದರು.

B L Santhosh ji Followers Vanathi Srinivasan Shobha Karandlaje Manjula C Bjp BJP Karnataka Mahila Morcha BJP

24/05/2026
Want your business to be the top-listed Government Service in Bangalore?

Click here to claim your Sponsored Listing.

Location

Telephone

Website

Address


Malleshwaram
Bangalore
560003