01/05/2026
ನಾಡಿನ ಸಮಸ್ತ ಕಾರ್ಮಿಕರಿಗೆ ಅಂತರರಾಷ್ಟ್ರೀಯ ಕಾರ್ಮಿಕರ ದಿನದ ಹಾರ್ದಿಕ ಶುಭಾಶಯಗಳು.
Karnataka State Workers Welfare and Social Security (Ashadeepa Scheme) Society
01/05/2026
ನಾಡಿನ ಸಮಸ್ತ ಕಾರ್ಮಿಕರಿಗೆ ಅಂತರರಾಷ್ಟ್ರೀಯ ಕಾರ್ಮಿಕರ ದಿನದ ಹಾರ್ದಿಕ ಶುಭಾಶಯಗಳು.
18/04/2026
ನಾಡಿನ ಸಮಸ್ತ ಜನತೆಗೆ ಅಕ್ಷಯ ತೃತೀಯದ ಹಾರ್ದಿಕ ಶುಭಾಶಯಗಳು.
ಅಕ್ಷಯ ತೃತೀಯವು ಸಮೃದ್ಧಿಯ ಶುಭ ಸೂಚಕ. ಆರೋಗ್ಯ, ಸುಖ, ಶಾಂತಿ, ನೆಮ್ಮದಿಯು ಅಕ್ಷಯವಾಗಲಿ. ಎಲ್ಲದರಲ್ಲೂ ಒಳಿತಾಗಲಿ.
13/04/2026
ಸಂವಿಧಾನದ ಶಿಲ್ಪಿ, ಸಮಾನತೆ ಮತ್ತು ನ್ಯಾಯದ ಮಹಾನ್ ಹೋರಾಟಗಾರ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯಂದು ಅವರ ಅಮೂಲ್ಯ ಚಿಂತನೆಗಳು ಮತ್ತು ಕೊಡುಗೆಗಳನ್ನು ಗೌರವದಿಂದ ಸ್ಮರಿಸೋಣ.
08/04/2026
ಖಾಸಗಿ ವಲಯದ ಸಂಸ್ಥೆಗಳಲ್ಲಿ ಹೊಸದಾಗಿ ನೇಮಿಸಿಕೊಳ್ಳುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯೋಗಿಗಳಿಗೆ ಮಾಲೀಕರು ಅಥವಾ ಉದ್ಯೋಗದಾತರು ಕಡ್ಡಾಯವಾಗಿ ಪಾವತಿಸಿದ ಶಾಸನಬದ್ಧ ಭವಿಷ್ಯ ನಿಧಿ ಹಾಗೂ ಇ ಎಸ್ ಐ ವಂತಿಗೆಯನ್ನು ಸರ್ಕಾರದಿಂದ ಮಾಲೀಕರಿಗೆ ಮರುಪಾವತಿಸಲಾಗುತ್ತದೆ.
ಈ ಸೌಲಭ್ಯ ಪಡೆಯಲು ಮಂಡಳಿಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು.
08/04/2026
ಆಶಾದೀಪ ಯೋಜನೆಯಡಿ ಮಾಲೀಕರು ಪಾವತಿಸಿದ ಇ ಎಸ್ ಐ ಮತ್ತು ಇ ಪಿ ಎಫ್ ವಂತಿಕೆಯನ್ನು ರಾಜ್ಯ ಸರ್ಕಾರದಿಂದ ಎರಡು ವರ್ಷಗಳ ಅವಧಿಯವರೆಗೆ ಮಾಸಿಕ ಗರಿಷ್ಠ ತಲಾ ₹3000 ಗಳ ಮಿತಿಯೊಳಗೆ ಮರುಪಾವತಿ ಮಾಡಲಾಗುವುದು.
07/04/2026
ಆಶಾದೀಪ ಯೋಜನೆಯಡಿ ಹೊಸದಾಗಿ ನೇಮಿಸಿಕೊಂಡ ಅಪ್ರಂಟೈಸ್ ಅಭ್ಯರ್ಥಿಗಳ ವೇತನ ಮರುಪಾವತಿ ಪಡೆಯಲು ಕೆಲವು ದಾಖಲೆಗಳನ್ನು ನೀಡಬೇಕು. ಎಲ್ಲಾ ದಾಖಲೆಗಳೊಂದಿಗೆ ಸಮೀಪದ ಕಾರ್ಮಿಕ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಬೇಕು.
07/04/2026
ಅಪ್ರೆಂಟೈಸ್ ತರಬೇತಿ ಪೂರ್ಣಗೊಂಡ ನಂತರ ಅದೇ ಮಾಲೀಕರು ಖಾಯಂ ಹುದ್ದೆಗೆ ಅದೇ ಅಭ್ಯರ್ಥಿಯನ್ನು ಹೊಸದಾಗಿ ನೇಮಕಾತಿ ಮಾಡಿಕೊಂಡಲ್ಲಿ ಮಾಲೀಕರು ಪಾವತಿಸಿದ ಮಾಸಿಕ ವೇತನದಲ್ಲಿ ಶೇ.50 ರಷ್ಟು ಮೊತ್ತವನ್ನು ಮಾಸಿಕ ತಲಾ ₹7000 ಗಳ ಮಿತಿಯೊಳಗೆ ಎರಡು ವರ್ಷಗಳ ಅವಧಿಗೆ ಮರುಪಾವತಿಸಲಾಗುವುದು. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಮಂಡಳಿಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
ಕಾರ್ಮಿಕರೇ, ಆರೋಗ್ಯ ಕಾಪಾಡುವ ಅರಿವು ಸದಾ ಇರಲಿ. ಉತ್ತಮ ಆರೋಗ್ಯ ಕಾಪಾಡಿಕೊಳ್ಳುವತ್ತ ಜಾಗೃತರಾಗಿರೋಣ.
06/04/2026
ಆಶಾದೀಪ ಯೋಜನೆಯಡಿ ಅಪ್ರಂಟೈಸ್ ಶಿಪ್ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳಿಗೆ ಮಾಲೀಕರು ಪಾವತಿಸಿದ ಶಿಷ್ಯವೇತನ ( Stipend ) ಮೊತ್ತದಲ್ಲಿ 2/3 ರಷ್ಟು ಮೊತ್ತವನ್ನು ಮಾಸಿಕ ತಲಾ ₹5000 ಗಳ ಮಿತಿಯೊಳಗೆ ಮರುಪಾವತಿಸಲಾಗುತ್ತದೆ.
06/04/2026
ಅಪ್ರೆಂಟೈಸ್ ತರಬೇತಿ ಪಡೆಯುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಆಶಾದೀಪ ಯೋಜನೆಯಡಿ ಶಿಷ್ಯವೇತನವನ್ನು ಮರುಪಾವತಿಸಲಾಗುತ್ತದೆ. ಮಾಲೀಕರು ಪಾವತಿಸಿದ ಮಾಸಿಕ ಶಿಷ್ಯವೇತನದಲ್ಲಿ 2/3 ರಷ್ಟು ಮೊತ್ತವನ್ನು ಮಾಸಿಕ ತಲಾ ₹5000 ಗಳ ಮಿತಿಯೊಳಗೆ ಮರುಪಾವತಿಸಲಾಗುತ್ತದೆ.
04/04/2026
ಹೊಸದಾಗಿ ಖಾಯಂ ಹುದ್ದೆಗೆ ನೇಮಕಗೊಂಡ ಅಭ್ಯರ್ಥಿಗಳ ವೇತನ ಮರುಪಾವತಿ ಪಡೆಯಲು ಫಲಾನುಭವಿಯು ಹತ್ತಿರದ ಕಾರ್ಮಿಕ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಬಹುದು.
| Monday | 10am - 5pm |
| Tuesday | 9am - 5pm |
| Wednesday | 9am - 5pm |
| Thursday | 9am - 5pm |
| Friday | 9am - 5pm |
| Saturday | 9am - 5pm |