Karnataka Skill Development Corporation

Directions Website Contact the organization

Karnataka Skill Development Corporation ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧಿಕೃತ ಫೇಸ್ಬುಕ್ ಖಾತೆ. Official page of Karnataka Skill Development Corporation(KSDC)

ಜಾಗತಿಕ ವೇದಿಕೆಯಲ್ಲಿ ಕರ್ನಾಟಕದ ಕೌಶಲ್ಯ ಪತಾಕೆ ✨ಚೀನಾದ ಶಾಂಘೈನಲ್ಲಿ ನಡೆದ 48ನೇ 'ವರ್ಲ್ಡ್‌ಸ್ಕಿಲ್ಸ್' (WorldSkills Competition) ಜಾಗತಿಕ...
28/09/2026

ಜಾಗತಿಕ ವೇದಿಕೆಯಲ್ಲಿ ಕರ್ನಾಟಕದ ಕೌಶಲ್ಯ ಪತಾಕೆ ✨
ಚೀನಾದ ಶಾಂಘೈನಲ್ಲಿ ನಡೆದ 48ನೇ 'ವರ್ಲ್ಡ್‌ಸ್ಕಿಲ್ಸ್' (WorldSkills Competition) ಜಾಗತಿಕ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಗೆಲುವು ಸಾಧಿಸಿದ ಎಲ್ಲರಿಗೂ ಅಭಿನಂದನೆಗಳು

ಮಾನ್ಯ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರಾದ ಡಾ. ಶರಣಪ್ರಕಾಶ್ ರುದ್ರಪ್ಪ ಪಾಟೀಲ್ ಅವರು ಚೀನಾದಲ...
27/09/2026

ಮಾನ್ಯ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರಾದ ಡಾ. ಶರಣಪ್ರಕಾಶ್ ರುದ್ರಪ್ಪ ಪಾಟೀಲ್ ಅವರು ಚೀನಾದಲ್ಲಿ ನಡೆಯುತ್ತಿರುವ ವರ್ಲ್ಡ್ ಸ್ಕಿಲ್ ಜೆನ್ನಿ ಶಾಕಲ್ಟನ್ ಸೇರಿದಂತೆ ಅಂತಾರಾಷ್ಟ್ರೀಯ ತಜ್ಞರೊಂದಿಗೆ ಜಾಗತಿಕ ಮಟ್ಟದ ಕೆಲವು ಮಹತ್ವದ ಚರ್ಚೆ ನಡೆಸಿದರು.

ಕರ್ನಾಟಕದ ಕೌಶಲ್ಯ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವುದು, ತರಬೇತಿ ಪ್ರಯೋಗಾಲಯಗಳನ್ನು ಆಧುನೀಕರಿಸುವುದು ಹಾಗೂ ನಮ್ಮ ಯುವಜನರನ್ನು ಜಾಗತಿಕ ಮಟ್ಟದಲ್ಲಿ ಪ್ರೋತ್ಸಾಹಿಸಿ ಕರ್ನಾಟಕದ ಸಾಧನೆಯನ್ನು ಹೆಚ್ಚಿಸುವ ಮಟ್ಟಕ್ಕೆ ಸಜ್ಜುಗೊಳಿಸುವ ಕುರಿತು ಸುಧೀರ್ಘ ಮಾಹಿತಿ ವಿನಿಮಯ ಮಾಡಿಕೊಂಡರು.

ನಿಮ್ಮ ವೃತ್ತಿ ಜೀವನದ ಮಾರ್ಗದರ್ಶಿ KSDC - ಉಚಿತ ತರಬೇತಿ, ಸರ್ಕಾರಿ ಪ್ರಮಾಣಪತ್ರ, ಉಜ್ವಲ ಭವಿಷ್ಯ!   #𝖲𝗄𝗂𝗅𝗅𝖣𝖾𝗏𝖾𝗅𝗈𝗉𝗆𝖾𝗇𝗍
27/09/2026

ನಿಮ್ಮ ವೃತ್ತಿ ಜೀವನದ ಮಾರ್ಗದರ್ಶಿ KSDC - ಉಚಿತ ತರಬೇತಿ, ಸರ್ಕಾರಿ ಪ್ರಮಾಣಪತ್ರ, ಉಜ್ವಲ ಭವಿಷ್ಯ!

#𝖲𝗄𝗂𝗅𝗅𝖣𝖾𝗏𝖾𝗅𝗈𝗉𝗆𝖾𝗇𝗍

ಕರ್ನಾಟಕದ ಎಲ್ಲಾ ಜಿಲ್ಲೆಗಳ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ (DSDO) ಜೊತೆ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ (KSDC) ಉನ್ನತ ಮಟ್ಟದ ಪ...
25/09/2026

ಕರ್ನಾಟಕದ ಎಲ್ಲಾ ಜಿಲ್ಲೆಗಳ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ (DSDO) ಜೊತೆ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ (KSDC) ಉನ್ನತ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

ರಾಜ್ಯದ ಯುವಜನತೆಗೆ ಗುಣಮಟ್ಟದ ಕೌಶಲ್ಯ ತರಬೇತಿ ನೀಡುವುದು, ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು ಮತ್ತು ಜಿಲ್ಲಾ ಮಟ್ಟದಲ್ಲಿ ವಿವಿಧ ಕೌಶಲ್ಯ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಕುರಿತು ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು.

ಈ ಉನ್ನತ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆಯನ್ನು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ (KSDC) ವ್ಯವಸ್ಥಾಪಕ ನಿರ್ದೇಶಕರಾದ ಡಾ. ರವಿ ಎಂ. ತಿರ್ಲಾಪೂರ (ಕೆ.ಎ.ಎಸ್.) ಅವರು ವಹಿಸಿದ್ದರು. ಸಭೆಯಲ್ಲಿ ನಿಗಮದ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀಮತಿ ಹೆಚ್. ಜಯಾ (ಕೆ.ಎ.ಎಸ್.) ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಚಂದ್ರಶೇಖರಯ್ಯ ಎಚ್.ಜಿ (ಕೆ.ಎ.ಎಸ್.) ಅವರು ಉಪಸ್ಥಿತರಿದ್ದು ಪ್ರಮುಖ ಸಮಾಲೋಚನೆ ನಡೆಸಿದರು. ಇವರೊಂದಿಗೆ ಕೆ.ಎಸ್.ಡಿ.ಸಿ (KSDC) ಕೇಂದ್ರ ಕಚೇರಿಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಆಗಮಿಸಿದ್ದ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು (DSDO) ಸಭೆಯಲ್ಲಿ ಭಾಗವಹಿಸಿದ್ದರು.

24/09/2026

ವಿದ್ಯಾರ್ಥಿಗಳಿಗೆ ಹೊಸ ಭವಿಷ್ಯ ರೂಪಿಸಿಕೊಳ್ಳಲು ನೀಡಿದಂತ ದೊಡ್ಡ ಅವಕಾಶ ಅಂದ್ರೆ ಅದು ಈ ವಿದೇಶದಲ್ಲಿ ಅಧ್ಯಯನ ಕಾರ್ಯಕ್ರಮ.

#2026

ಮಾನ್ಯ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರಾದ ಡಾ. ಶರಣಪ್ರಕಾಶ್ ರುದ್ರಪ್ಪ ಪಾಟೀಲ್ ಅವರು ಚೀನಾದ ...
24/09/2026

ಮಾನ್ಯ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರಾದ ಡಾ. ಶರಣಪ್ರಕಾಶ್ ರುದ್ರಪ್ಪ ಪಾಟೀಲ್ ಅವರು ಚೀನಾದ ಶಾಂಘೈನಲ್ಲಿ ದಕ್ಷಿಣ ಕೊರಿಯಾದ ಸ್ಯಾಮ್‌ಸಂಗ್ ಕಂಪನಿಯ ಪ್ರತಿನಿಧಿಗಳೊಂದಿಗೆ ಮಹತ್ವದ ಸಭೆ ನಡೆಸಿದರು.

ಸಭೆಯಲ್ಲಿ ಕರ್ನಾಟಕದ ವಿದ್ಯಾರ್ಥಿಗಳು ಹಾಗೂ ಸ್ಪರ್ಧಾಳುಗಳಿಗೆ ಮುಂಬರುವ ದಿನಗಳಲ್ಲಿ WorldSkills ಸ್ಪರ್ಧೆಗೆ ತರಬೇತಿ ಮತ್ತು ಸಿದ್ಧತೆ ಒದಗಿಸುವುದು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಕಾರದ ಸಾಧ್ಯತೆಗಳ ಕುರಿತು ಚರ್ಚಿಸಲಾಗಿದೆ.

ತಾಂತ್ರಿಕ ತಜ್ಞರು, ತರಬೇತುದಾರರು ಹಾಗೂ ಮೌಲ್ಯಮಾಪಕರ ವಿನಿಮಯ, ಸುಧಾರಿತ ವೃತ್ತಿಪರ ಹಾಗೂ ಕೈಗಾರಿಕಾ ಆಧಾರಿತ ಕೌಶಲ್ಯಾಭಿವೃದ್ಧಿ.
ವೆಲ್ಡಿಂಗ್, ಎಲೆಕ್ಟ್ರಿಕಲ್ ಇನ್‌ಸ್ಟಾಲೇಶನ್ ಹಾಗೂ ಇಂಡಸ್ಟ್ರಿಯಲ್ ಕಂಟ್ರೋಲ್ ಕ್ಷೇತ್ರಗಳಲ್ಲಿ ತಾಂತ್ರಿಕ ಸಹಕಾರ ನೀಡುವುದು. ಜಂಟಿಯಾಗಿ ತರಬೇತಿ ಕಾರ್ಯಕ್ರಮಗಳು ಹಾಗೂ ತಾಂತ್ರಿಕ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವ ಕುರಿತು ಸುಧೀರ್ಘ ಮಾತುಕತೆ ನಡೆದಿದೆ.

Dr.Sharan Prakash Patil

ಮಾನ್ಯ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರಾದ ಡಾ. ಶರಣಪ್ರಕಾಶ್ ರುದ್ರಪ್ಪ ಪಾಟೀಲ್ ಅವರು ಚೀನಾದ ...
23/09/2026

ಮಾನ್ಯ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರಾದ ಡಾ. ಶರಣಪ್ರಕಾಶ್ ರುದ್ರಪ್ಪ ಪಾಟೀಲ್ ಅವರು ಚೀನಾದ ಶಾಂಘೈನಲ್ಲಿ ನಡೆಯುತ್ತಿರುವ (ವರ್ಲ್ಡ್ ಸ್ಕಿಲ್ ಶಾಂಘೈ) WorldSkills Shanghai 2026 ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಕರ್ನಾಟಕ ರಾಜ್ಯದ ಸ್ಪರ್ಧಾರ್ಥಿಗಳನ್ನು ಭೇಟಿ ಮಾಡಿದರು.

ಕರ್ನಾಟಕದಿಂದ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಸ್ಪರ್ಧಾರ್ಥಿಗಳೊಟ್ಟಿಗೆ ಕೆಲ ಕಾಲ ಮಾತುಕತೆ ನಡೆಸಿ, ಸಕಾರಾತ್ಮಕ ಚರ್ಚೆ ನಡೆಸಿದರು. ಭಾರತ ತಂಡವನ್ನು ಪ್ರತಿನಿಧಿಸುತ್ತಿರುವ ಈ ಸ್ಪರ್ಧಾರ್ಥಿಗಳು ಕರ್ನಾಟಕದವರಾಗಿದ್ದು, WorldSkills Shanghai 2026 ಸ್ಪರ್ಧೆಯು ಸೆಪ್ಟೆಂಬರ್ 23ರಿಂದ ಚೀನಾದ ಶಾಂಘೈನಲ್ಲಿ ಆರಂಭವಾಗಲಿದೆ.

Dr.Sharan Prakash Patil

23/09/2026

ನನ್ನಂತಹ ಅನೇಕ ವಿದ್ಯಾರ್ಥಿಗಳ ವಿದೇಶಿ ಶಿಕ್ಷಣದ ಕನಸನ್ನು ನನಸು ಮಾಡುತ್ತಿರುವ ಸರ್ಕಾರಕ್ಕೆ ಧನ್ಯವಾದಗಳು.

ಜಯಮಹಲ್ ಪ್ಯಾಲೇಸ್ ಆವರಣದಲ್ಲಿ, ಗ್ರಾಮೀಣಾಭಿವೃದ್ಧಿ ಮಂತ್ರಾಲಯ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವತಿಯಿಂದ ನಡೆದ...
22/09/2026

ಜಯಮಹಲ್ ಪ್ಯಾಲೇಸ್ ಆವರಣದಲ್ಲಿ, ಗ್ರಾಮೀಣಾಭಿವೃದ್ಧಿ ಮಂತ್ರಾಲಯ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವತಿಯಿಂದ ನಡೆದ ಸರಸ್ ಮೇಳ 2026'ರಲ್ಲಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಮತಿ ಕಾಂತಾ ನಾಯಕ ಅವರು ಭಾಗಿಯಾದರು.

ನಮ್ಮ ಗ್ರಾಮೀಣ ಸ್ವ-ಸಹಾಯ ಗುಂಪುಗಳ ಅದ್ಭುತ ಉತ್ಪನ್ನಗಳು ಮತ್ತು ಉದ್ಯಮಶೀಲತೆಯನ್ನು ಬೆಂಬಲಿಸಿದರು. ಅದ್ಭುತ ಉತ್ಪನ್ನಗಳು ಮತ್ತು ಉದ್ಯಮಶೀಲತೆಯನ್ನು ಇಲ್ಲಿ ಕಾಣಲಾಯಿತು. ಅಷ್ಟೇ ಅಲ್ಲದೆ ಸಾಕಷ್ಟು ಕಡೆಗಳಿಂದ ಬಂದ ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸಲಾಯಿತು.

ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಮಹಿಳಾ ನೌಕರರ ಸಂಘದ ಅಧ್ಯಕ್ಷೆ ಶ್ರೀಮತಿ ರೋಶನಿ ಗೌಡ ಅವರು ಈ ಉಪಸ್ಥಿತರಿದ್ದರು.

22/09/2026

Today is the last day for registration - Register now for the 'Skill India Karnataka Competition 2026'.

Details:

Eligibility: Youth aged 16 to 25 years
Last date for registration: 22 September 2026
To register, visit: www.skillindiadigital.gov.in
For more information: +91 9606492216

Address

Dairy Circle, Hombegowda Nagar, Kaushalya Bhavan
Bangalore
560029

Alerts

Be the first to know and let us send you an email when Karnataka Skill Development Corporation posts news and promotions. Your email address will not be used for any other purpose, and you can unsubscribe at any time.

Contact The Organization

Send a message to Karnataka Skill Development Corporation:

Shortcuts

Share