Jayaramu Narasimha

Jayaramu Narasimha

Share

social services

ನಮ್ಮ ಪೇಜ್ Follow ಮಾಡಿ
ನಮ್ಮ ಚಿಕ್ಕ ಕು?

13/01/2025

*ತಾಯಿ ಮನೆ ವತಿಯಿಂದ*
ನಾಡಿನ ಸಮಸ್ತ ಜನತೆಗೂ ವಿಶೇಷವಾಗಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಹೆಗ್ಗನಹಳ್ಳಿ ವಾರ್ಡಿನ ಜನತೆಗೆ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು
ಶುಭಕೋರುವವರು
*ಶ್ರೀ ಜಯರಾಮು ನರಸಿಂಹ* ಸಮಾಜ ಸೇವಕರು
ಹೆಗ್ಗನಹಳ್ಳಿ ವಾರ್ಡ್

05/10/2024

ದಾಸರಹಳ್ಳಿ ವಿಧಾನಸಭಾ ಕ್ಷೇತ್ರ, ರಾಜಗೋಪಾಲ ನಗರ ವಾರ್ಡ್ ನಂ.70ಕ್ಕೆ ಒಳಪಡುವ ದೊಡ್ಡಣ್ಣ ಕೈಗಾರಿಕಾ ಪ್ರದೇಶ, ಶ್ರೀಗಂಧ ನಗರ, ಕೆಂಪೇಗೌಡ ಬಡಾವಣೆ, ಶಾಂಭವಿ ನಗರ, ಕಸ್ತೂರಿ ಬಡಾವಣೆ, ಕರೀಂ ಸಾಬ್ ಲೇಔಟ್, ಕೋನಿಕ ಗಾರ್ಮೆಂಟ್ಸ್ ರಸ್ತೆಗಳು, ಭೈರವೇಶ್ವರ ನಗರ, ರಾಜೇಶ್ವರಿ ನಗರ ಮತ್ತು ರಾಜಗೋಪಾಲ ನಗರಕ್ಕೆ ಒಳಪಡುವ ವಿವಿಧ ಅಡ್ಡರಸ್ತೆ ಹಾಗೂ ಮುಖ್ಯರಸ್ತೆಗಳ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರದ ಆದೇಶ ಸಂಖ್ಯೆ: ನಅಇ 153 ಎಂಎನ್ ವೈ 2022(ಇ) ಬೆಂಗಳೂರು, ದಿನಾಂಕ: 08.04.2022ರ ಅನ್ವಯ ಅಮೃತ ನಗರೋತ್ಥಾನ ಯೋಜನೆ ಅಡಿಯಲ್ಲಿ ರೂ. 12 ಕೋಟಿಗಳ ಅನುದಾನವನ್ನು ನನ್ನ ಅವಧಿಯಲ್ಲಿ ಬಿಡುಗಡೆಗೊಳಿಸಿ, ಕಾಮಗಾರಿ Job Code ದಿನಾಂಕ: 28.03.2023ರಂದು ಸೃಷ್ಟಿಯಾಗಿದ್ದು, ಈ ದಿನದಂದೇ ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಕಾಮಗಾರಿಗೆ ಚಾಲನೆ ನೀಡಲು ತೊಂದರೆಯಾಗಿರುತ್ತದೆ.

ಅಂದು ನನ್ನ ಅವಧಿಯಲ್ಲಿ ದೊಡ್ಡಣ್ಣ ಕೈಗಾರಿಕಾ ಪ್ರದೇಶದ ಪ್ರತಿಯೊಂದು ರಸ್ತೆಗಳನ್ನು ಪರಿಶೀಲನೆ ಮಾಡಿ, ಅನುದಾನ ನಿಗಧಿಮಾಡಿ ಟೆಂಡರ್ ಪ್ರಕ್ರಿಯೆ ಅಂತಿಮಗೊಳಿಸಲು ರಾಜಕೀಯ ದ್ವೇಷದಿಂದ ನಿರಂತರ ತೊಂದರೆ ನೀಡಿರುವುದು ಮತದಾರ ಬಂಧುಗಳಿಗೆ ತಿಳಿದಿರುವ ವಿಷಯ.

ಇದೀಗ ಸದರಿ ಕಾಮಗಾರಿಗೆ ಚಾಲನೆ ದೊರಕಿದ್ದು, ದೊಡ್ಡಣ್ಣ ಕೈಗಾರಿಕಾ ಸಂಘ ಮತ್ತು ಸಾರ್ವಜನಿಕರು ತಮ್ಮೆಲ್ಲರ ತೆರಿಗೆ ಹಣದಿಂದ ನಡೆಯುತ್ತಿರುವ ಒಳಚರಂಡಿ, ರಸ್ತೆಗಳಿಗೆ ಡಾಂಬರೀಕರಣ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಪೂರ್ಣಗೊಳಿಸಿಕೊಳ್ಳಬೇಕಾಗಿ ವಿನಂತಿಸಿಕೊಳ್ಳುತ್ತೇನೆ.

ಸದರಿ ಕಾಮಗಾರಿಗಳ ವಿಚಾರವಾಗಿ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಈ ಕೆಳಕಂಡ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಲು ಕೋರಿದೆ.
9686105696

26/07/2024

ಅದಮ್ಯ ಸಾಹಸ, ಅಪ್ರತಿಮ ಶೌರ್ಯ, ದೇಶಭಕ್ತಿಯ ‌ಸ್ಫೂರ್ತಿಯೊಂದಿಗೆ ಶತ್ರುಗಳನ್ನು ಸದೆಬಡಿದು, ಭಾರತಾಂಬೆಯ ಘನತೆ, ಗೌರವವನ್ನು ಮುಗಿಲೆತ್ತರಕ್ಕೆ ಹಾರಿಸಿ ಅಮರರಾದ ಕಾರ್ಗಿಲ್‌ ಯುದ್ಧದ ವೀರ ಹುತಾತ್ಮರಿಗೆ ಕಾರ್ಗಿಲ್‌ ವಿಜಯ ದಿವಸ‌ದಂದು ಶತ ಶತ ನಮನಗಳು.

22/07/2024

ನಮ್ಮೆಲ್ಲರ ಆರಾಧ್ಯ ದೈವ ಶ್ರೀ ಸಿದ್ದಗಂಗಾ ಮಠದ ಪರಮಪೂಜ್ಯ ನಡೆದಾಡುವ ದೇವರು ಡಾ_ಶ್ರೀ_ಶ್ರೀ_ಶಿವಕುಮಾರ_ಮಹಾಸ್ವಾಮಿಗಳವರ ಕರ ಕಮಲ ಸಂಜಾತರು, ವಿದ್ಯಾದಾನದ ಮೂಲಕ ಸಾವಿರಾರು ಬಡ ವಿದ್ಯಾರ್ಥಿಗಳ ಜೀವನ ರೂಪಿಸುತ್ತಿರುವ ಮಹಾಗುರುಗಳು, ಸಾಮಾಜಿಕ ಕಳಕಳಿಯ ಮುನ್ನುಡಿಯ ಮುಂಚೂಣಿ ಗುರುಗಳು ಶ್ರೀ_ಸಿದ್ಧಗಂಗಾ_ಮಠದ ಪೀಠಾಧಿಪತಿಗಳಾದ ಪೂಜ್ಯ_ಶ್ರೀ_ಶ್ರೀ_ಶ್ರೀ_ಸಿದ್ದಲಿಂಗ_ಮಹಾಸ್ವಾಮಿಗಳ ರವರಿಗೆ ಜನ್ಮ ದಿನದ ಭಕ್ತಿ ಪ್ರಣಾಮಗಳು. ನಿಮ್ಮ ಆಶೀರ್ವಾದ ನಮ್ಮೆಲ್ಲರ ಮೇಲೆ ಸದಾ ಇರಲಿ

20/07/2024

ಶ್ರೀ ಆದಿಚುಂಚನಗಿರಿ ಮಠದ ಶ್ರೀ ಶ್ರೀ ನಿರ್ಮಲಾನಂದ ಸ್ವಾಮೀಜಿ ಅವರ ಜನುಮ ದಿನದಂದು ಹೃದಯ ಪೂರಕ ಭಕ್ತಿ ನಮನಗಳು

11/07/2024

ಕನ್ನಡದ ಖ್ಯಾತ ನಟಿ ಹಾಗು ಅತ್ಯುತ್ತಮ ಅಚ್ಚ ಕನ್ನಡ ಭಾಷೆಯ ನಿರೂಪಕಿ "ಅಪರ್ಣ"ರವರು ಇಂದು ಮೃತಪಟ್ಟಿದ್ದಾರೆ ಇವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.

27/06/2024

ಬೆಂಗಳೂರು ನಿರ್ಮಾತೃ, ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತಿಯಂದು ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. ಅಭಿವೃದ್ಧಿಯ ವಿಚಾರದಲ್ಲಿ ಕೆಂಪೇಗೌಡರಿಗಿದ್ದ ದೂರದೃಷ್ಟಿ ನಿಜಕ್ಕೂ ಶ್ಲಾಘನೀಯ. ಅವರ ಉದಾತ್ತ ಚಿಂತನೆಗಳು ಹಾಗೂ ಆಡಳಿತದ ವೈಖರಿ ಇಂದಿಗೂ ನಮಗೆಲ್ಲಾ ಮಾದರಿ.

18/12/2023
29/10/2023

ಅಜರಾಮರ ಪುನೀತ್ ರಾಜ್‍ಕುಮಾರ್, ಕರ್ನಾಟಕ ರತ್ನ.

Karnataka Ratna, Sri forever.

18/09/2023

ನಾಡಿನ ಸಮಸ್ತ ಜನತೆಗೆ, ವಿಶೇಷವಾಗಿ ದಾಸರಹಳ್ಳಿ ಕ್ಷೇತ್ರದ ಮಹಾ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು..

ಭಾದ್ರಪದ ಮಾಸದ ಮೊದಲ ಹಬ್ಬ ಗೌರಿ ಹಬ್ಬ... ಗೌರಿ ಸಮೃದ್ಧಿಯ ಸಂಕೇತ, ಗಣಪತಿ ಶುಭ ಹಾಗೂ ಲಾಭದ ಸಂಕೇತ. ಎಲ್ಲಿ ಸಮೃದ್ಧಿ ಇರುತ್ತದೊ ಅಲ್ಲಿ ಶುಭ ಹಾಗೂ ಲಾಭ ಇರುತ್ತದೆ. ಅರ್ಥಾತ್ ಎಲ್ಲಿ ಮಳೆ ಬಿದ್ದು ಬೆಳೆ ಸಮೃದ್ಧವಾಗಿದೆಯೊ ಅಲ್ಲಿ ಶುಭ ಹಾಗೂ ಲಾಭ ನೆಲೆಸುತ್ತದೆ...

ಪ್ರಥಮ ಪೂಜಿತ ಗಣೇಶನು ನಿಮ್ಮ ಜೀವನದ ಎಲ್ಲಾ ವಿಘ್ನಗಳನ್ನು ಕಳೆದು ಎಲ್ಲರಿಗೂ ಸುಖ, ಶಾಂತಿ, ಐಶ್ವರ್ಯ, ಆರೋಗ್ಯದ ಬೆಳಕನ್ನು ಬೆಳಗಲಿ.. ಎಲ್ಲರಿಗೂ ಶುಭವಾಗಲಿ.

🙏🏻 ನಮಸ್ಕಾರ 🙏🏻

Want your business to be the top-listed Government Service in Bangalore?

Click here to claim your Sponsored Listing.

Location

Category

Telephone

Address


Bangalore
560002