13/07/2025
• ಶಕ್ತಿ ಯೋಜನೆಯಡಿಯಲ್ಲಿ 500ನೇ ಕೋಟಿ ಮಹಿಳಾ ಪ್ರಯಾಣಿಕರ ಉಚಿತ ಪ್ರಯಾಣ ಸಾಧನೆಯ ಸಂಭ್ರಮ
ವಿಶೇಷ ಬಸ್ ಪೂಜಾ ಕಾರ್ಯಕ್ರಮ,
ನಗರದ ಪ್ರಮುಖ ಬಸ್ ನಿಲ್ದಾಣಗಳಲ್ಲಿ, ತಾಲ್ಲೂಕು ಮತ್ತು ಜಿಲ್ಲೆಯ ಬಸ್ ನಿಲ್ದಾಣಗಳಲ್ಲಿ ಒಂದೊಂದು ಬಸ್‌ಗೆ ಪೂಜೆ ನೆರವೇರಿಸಿ ಸಿಹಿ ಹಂಚಿ ಸಾಂಕೇತಿಕವಾಗಿ ಅಚರಣೆ
ಮಹಿಳಾ ಪ್ರಯಾಣಿಕರಿಗೆ ಬಸ್‌ನಲ್ಲಿ ಸ್ವಾಗತದ ರೂಪದಲ್ಲಿ ಗುಲಾಬಿ ಹೂಗಳ ವಿತರಣೆ.
*ಬಸ್ಸುಗಳಲ್ಲಿ ಶಕ್ತಿ 500ನೇ ಕೋಟಿ ಸ್ಟಿಕರ್ ಪ್ರದರ್ಶನ
10/07/2025
||ಆನೇಕಲ್ ವಿಧಾನಸಭಾ ಕ್ಷೇತ್ರ||
ಇಂದು ದಿನಾಂಕ 09/07/2025 ಆನೇಕಲ್ ವಿಧಾನಸಭಾ ಕ್ಷೇತ್ರದ ಶಾಸಕರಾದ ಶಿವಣ್ಣರವರನ್ನು ಭೇಟಿ ಮಾಡಿ, ಆನೇಕಲ್ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಪ್ರವೀಣ್ ರವರ ನೇತೃತ್ವದಲ್ಲಿ ಯುವ ಕಾಂಗ್ರೆಸ್ ಸಭೆಯನ್ನು ನಡೆಸಲಾಯಿತ್ತು. ಈ ಸಭೆಯಲ್ಲಿ ಸ್ಥಳೀಯ ಕ್ಷೇತ್ರ, ಬ್ಲಾಕ್ ಮತ್ತು ಪಂಚಾಯಿತಿ ಮಟ್ಟದ ಸಂಘಟನೆ, ಯುವಕರ ನೇಮಕಾತಿಗಳು, ಕುಂದು ಕೊರತೆಗಳು, ಯುವ ಕಾಂಗ್ರೆಸ್ ನ ಚಟುವಟಿಕೆಗಳ ಮತ್ತು ಕಾರ್ಯಕ್ರಮಗಳ ಕುರಿತು ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ, ಜಿಲ್ಲಾ ಅಧ್ಯಕ್ಷರು ಮೋನಿಶ್, ಜಿಲ್ಲಾ ಉಪಾಧ್ಯಕ್ಷರಾದ ಮನೋಹರ್ ರವರು, ಪ್ರಧಾನ ಕಾರ್ಯದರ್ಶಿಗಳಾದ ಡಾ.ಮುರಳಿ ರವರು, ಆನೇಕಲ್ ಕ್ಷೇತ್ರದ ಉಪಾಧ್ಯಕ್ಷರಾದ ಗೋಪಿ ರವರು, ಪ್ರಧಾನ ಕಾರ್ಯದರ್ಶಿಗಳಾದ ರೋಹಿತ್ ರವರು, ಬ್ಲಾಕ್ ಅಧ್ಯಕ್ಷರುಗಳು ಮತ್ತು ಉಪಾಧ್ಯಕ್ಷರುಗಳಾದ ಸಂದೀಪ್, ಮಧು, ವೇಣುಗೋಪಾಲ್, ಗೌತಮ್, ಸೂರ್ಯ, ಚಿರಂಜೀವಿ, ಮತ್ತು ಪವನ್ ಉಪಸ್ಥಿತರಿದ್ದರು.
07/05/2023
ಹೆಬ್ಬಗೋಡಿಯಲ್ಲಿ ಬಿ.ಶಿವಣ್ಣರವರ ಪರ ಪ್ರಚಾರ
2023ಕ್ಕೆ ಮತ್ತೆ ಬಿ.ಶಿವಣ್ಣ
#ಕಾಂಗ್ರೆಸ್_ಬರಲಿದೆ_ಪ್ರಗತಿ_ತರಲಿದೆ
15/01/2023
ಸಮಸ್ತ ಜನತೆಗೆ 'ಮಕರ ಸಂಕ್ರಾಂತಿ' ಹಬ್ಬದ ಹಾರ್ದಿಕ ಶುಭಾಶಯಗಳು.
ಈ ಶುಭ ದಿನದಂದು ಸೂರ್ಯನ ಬೆಳಕು ನಿಮ್ಮನ್ನು ಪ್ರೇರೇಪಿಸಲಿ ಮತ್ತು ನಿಮ್ಮ ಜೀವನವನ್ನು ಈ ವರ್ಷ ಬಹಳಷ್ಟು ಆಶಾವಾದದಿಂದ ತುಂಬಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
13/01/2023
ಸುಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾಗಿದ್ದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಪುಣ್ಯಸ್ಮರಣೆಯಂದು ನನ್ನ ಅನಂತ ಪ್ರಣಾಮಗಳನ್ನು ಸಲ್ಲಿಸುತ್ತೇನೆ.