04/06/2026
ನಮ್ಮಲಿ ಅಪ್ಪ ಮಕ್ಕಳ ರಾಜಕೀಯ ಮತ್ತು ಜಾತಿ ರಾಜಕಾರಣಕ್ಕೆ ಹಿಂದೂ ನಶಿಸಿ ಹೋಗತಾ ಇದ್ದಾನೆ..,
ನಮಗೆ ಸಿಎಂ ಯೋಗಿ ಯಂತವರು ಬೇಕು ಅಂದ್ರೆ ಜಾತಿ , ಉಚಿತ ಗ್ಯಾರಂಟಿಗಳ ಆಸೆ ಬಿಟ್ಟು ವೋಟ್ ಮಾಡಬೇಕು…
ಯುಪಿ ಹಿಂದೂ ಸಹೋದರಿಯರಿಗೆ ಹೃತ್ಪೂರ್ವಕ ಅಭಿನಂದನೆಗಳು ❤️🙏🚩
27/05/2026
ಮೋದಿಜಿ ನಾಯಕತ್ವ ಪ್ರಭಾವ…
ಭಾರತದ ವಿದೇಶಾಂಗ ನೀತಿ ಇನ್ನೂ ಸಹ ತಂತ್ರಾತ್ಮಕ ಸ್ವಾಯತ್ತತೆ, ರಾಷ್ಟ್ರೀಯ ಹಿತಾಸಕ್ತಿ ಮತ್ತು ಸಮತೋಲನದ ಜಾಗತಿಕ ಸಹಭಾಗಿತ್ವಗಳ ಮೇಲೆ ಕೇಂದ್ರೀಕೃತವಾಗಿದೆ. ಜೈಶಂಕರ್ ಅವರ ದೃಢವಾದ ಹೇಳಿಕೆ ಮತ್ತೊಮ್ಮೆ ಸುದ್ದಿಯಲ್ಲಿದೆ 🇮🇳🔥
25/05/2026
ಇತ್ತೀಚೆಗೆ ನಾರ್ವೆಯಿಂದ ಬಂದ ವರದಿಗಳು ಪ್ರಧಾನಿ Narendra Modi ಅವರ ಅಂತರರಾಷ್ಟ್ರೀಯ ನಾಯಕತ್ವ ಮತ್ತು ಜಾಗತಿಕ ಪ್ರತಿಮೆಯ ಬಗ್ಗೆ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿವೆ. ಈ ಚರ್ಚೆಗೆ ಹೆಚ್ಚಿನ ವೇಗ ದೊರಕಿದ್ದು, ನಾರ್ವೆಯ ಪ್ರಮುಖ ಪತ್ರಿಕೆ Dagens Næringsliv ನಲ್ಲಿ ಮಾಜಿ ಯುಎನ್ ಪರಿಸರ ಕಾರ್ಯಕ್ರಮದ ಮುಖ್ಯಸ್ಥ Erik Solheim ಬರೆದ ಲೇಖನದ ನಂತರ. ಆ ಲೇಖನದಲ್ಲಿ ಅವರು ಮೋದಿಯನ್ನು ಪರಿವರ್ತನಾತ್ಮಕ ಹಾಗೂ ಅತ್ಯಂತ ಜನಪ್ರಿಯ ನಾಯಕ ಎಂದು ಶ್ಲಾಘಿಸಿದ್ದಾರೆ.
ಸೋಲ್ಹೈಮ್ ಅವರ ಅಭಿಪ್ರಾಯದಲ್ಲಿ, ಆರ್ಥಿಕ ಅಭಿವೃದ್ಧಿಯ ಜೊತೆಗೆ ಪರಿಸರ ಸ್ನೇಹಿ ಬೆಳವಣಿಗೆಯನ್ನು ಸಮತೋಲನಗೊಳಿಸಿರುವ ಭಾರತದ ಮಾದರಿಯಿಂದ ಪಾಶ್ಚಾತ್ಯ ರಾಷ್ಟ್ರಗಳ ನಾಯಕರು ಬಹಳವನ್ನು ಕಲಿಯಬಹುದು. ದೊಡ್ಡ ಪ್ರಜಾಸತ್ತಾತ್ಮಕ ರಾಷ್ಟ್ರಗಳ ನಾಯಕರಲ್ಲಿ ಯಾರಿಗೂ ಇಲ್ಲದಷ್ಟು ಜನಬೆಂಬಲ ಪ್ರಧಾನಿ ಮೋದಿ ಅವರಿಗೆ ದೇಶೀಯವಾಗಿ ಇದೆ ಎಂದು ಅವರು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ನಾರ್ವೆಯ ಅತ್ಯುನ್ನತ ನಾಗರಿಕ ಗೌರವವಾದ Grand Cross of the Royal Norwegian Order of Merit ಪ್ರಧಾನಮಂತ್ರಿಗೆ ನೀಡಿರುವುದನ್ನು ಅವರ ಬೆಂಬಲಿಗರು ಭಾರತದ ಹೆಚ್ಚುತ್ತಿರುವ ಜಾಗತಿಕ ಪ್ರಭಾವ ಮತ್ತು ರಾಜತಾಂತ್ರಿಕ ಯಶಸ್ಸಿನ ಸ್ಪಷ್ಟ ಗುರುತಾಗಿ ನೋಡಿದ್ದಾರೆ.
ಆದರೆ, ಈ ಭೇಟಿ ನಾರ್ವೆಯ ಇತರ ಮಾಧ್ಯಮಗಳಲ್ಲಿ ತೀವ್ರ ವಿಮರ್ಶೆಯನ್ನೂ ಹುಟ್ಟುಹಾಕಿತು. ಭಾರತೀಯ ಆಡಳಿತದ ಬಗ್ಗೆ ಅಂತರರಾಷ್ಟ್ರೀಯ ಮಾಧ್ಯಮಗಳು ಹೇಗೆ ವಿಭಿನ್ನ ದೃಷ್ಟಿಕೋಣ ಹೊಂದಿವೆ ಎಂಬುದು ಇದರಿಂದ ಸ್ಪಷ್ಟವಾಯಿತು. ಓಸ್ಲೋದಲ್ಲಿ ನಡೆದ ಸಂಯುಕ್ತ ಪತ್ರಿಕಾಗೋಷ್ಠಿಯಲ್ಲಿ ಒಬ್ಬ ಸ್ಥಳೀಯ ಪತ್ರಕರ್ತರು ಪ್ರಧಾನಮಂತ್ರಿಯನ್ನು ಕಠಿಣ ಮಾಧ್ಯಮ ಪ್ರಶ್ನೆಗಳನ್ನು ತಪ್ಪಿಸುತ್ತಾರೆ ಎಂಬ ಆರೋಪದ ಬಗ್ಗೆ ಪ್ರಶ್ನಿಸಿದರು. ಇದರಿಂದ ಮಾಧ್ಯಮ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಹೊಣೆಗಾರಿಕೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆ ಆರಂಭವಾಯಿತು.
ಇದಲ್ಲದೆ, ಮತ್ತೊಂದು ಪ್ರಮುಖ ನಾರ್ವೇಜಿಯನ್ ಪತ್ರಿಕೆ Aftenposten ಪ್ರಕಟಿಸಿದ ವ್ಯಂಗ್ಯಚಿತ್ರವು ಸಹ ದೊಡ್ಡ ವಿವಾದಕ್ಕೆ ಕಾರಣವಾಯಿತು. ಹಲವರು ಅದನ್ನು ಭಾರತದ ಆಧುನಿಕ ಸಾಧನೆಗಳನ್ನು ಕಡಿಮೆ ಮಾಡಿ ತೋರಿಸಲು ಪಾಶ್ಚಾತ್ಯ ಮಾಧ್ಯಮಗಳು ಹಳೆಯ ವಸಾಹತುಶಾಹಿ ಮನೋಭಾವದ ಚಿತ್ರಣಗಳನ್ನು ಬಳಸಿವೆ ಎಂದು ಟೀಕಿಸಿದರು.
ಒಟ್ಟಾರೆ, ಈ ವಿಭಿನ್ನ ವರದಿಗಳು ಅಂತರರಾಷ್ಟ್ರೀಯ ರಾಜತಾಂತ್ರಿಕತೆಯ ಸಂಕೀರ್ಣ ಸ್ವರೂಪವನ್ನು ತೋರಿಸುತ್ತವೆ. ಒಂದೆಡೆ ಭಾರತದ ಆರ್ಥಿಕ ಮತ್ತು ಪರಿಸರ ನಾಯಕತ್ವಕ್ಕೆ ಭಾರೀ ಪ್ರಶಂಸೆ ದೊರೆಯುತ್ತಿದ್ದರೆ, ಮತ್ತೊಂದೆಡೆ ದೇಶೀಯ ರಾಜಕೀಯ, ಪ್ರಜಾಪ್ರಭುತ್ವ ಸಂಸ್ಥೆಗಳು ಮತ್ತು ಮಾಧ್ಯಮ ಸಂಬಂಧಿತ ವಿಚಾರಗಳ ಬಗ್ಗೆ ತೀವ್ರ ಪ್ರಶ್ನೆಗಳು ಮುಂದುವರಿಯುತ್ತಿವೆ.
ಕೊನೆಯಲ್ಲಿ, ಪ್ರಧಾನಿ Narendra Modi ಜಾಗತಿಕ ವೇದಿಕೆಯಲ್ಲಿ ಬಹಳ ಪ್ರಭಾವಶಾಲಿ ಮತ್ತು ಒಂದೇ ಸಮಯದಲ್ಲಿ ಭಿನ್ನಾಭಿಪ್ರಾಯಗಳಿಗೆ ಕಾರಣವಾಗುವ ನಾಯಕನಾಗಿ ಉಳಿದಿದ್ದಾರೆ. ಭಾರತದ ಅಭಿವೃದ್ಧಿಯ ಸಾಧನೆಗಳನ್ನು ಒಪ್ಪಿಕೊಂಡರೂ, ಪ್ರಜಾಪ್ರಭುತ್ವದ ಸಂಸ್ಥೆಗಳ ಬಗ್ಗೆ ಚರ್ಚೆಗಳು ಇನ್ನೂ ಮುಂದುವರಿಯುತ್ತಿವೆ. 🗳️🌍
23/05/2026
ನಿಜವಾಗಿಯೂ ನಾವು ಪುಣ್ಯ ಮಾಡಿದ್ದೇವೆ ಇಂಥ ಮಹಾನ್ ವ್ಯಕ್ತಿಗಳ ಜೊತೆ ನಾವಿರೋದೆ ನಮ್ಮ ಸೌಭಾಗ್ಯ ಬೋಲೋ ಭಾರತ್ ಮಾತಾ ಕಿ ಜೈ 🙏🏻🙏🏻🙏🏻🙏🏻🙏🏻🙏🏻
22/05/2026
ಜಗತ್ತಿನಲ್ಲಿ ಅತ್ಯಂತ ಹೆಚ್ಚು ಬೇಡಿಕೆ ಇರುವುದು ಸೆಮಿ ಕಂಡಕ್ಟರ್ ಗಳಿಗೆ. ಯಾರಿಗೆ ಇದನ್ನು ತಯಾರಿಸುವ ತಂತ್ರಜ್ಞಾನ ಸಿದ್ದಿಸಿರುತ್ತೆ ಅವರೇ ಮುಂದಿನ ಜಗತ್ತಿನ ಹಿರಿಯಣ್ಣ.
ಅಮೇರಿಕಾ ತನ್ನ ವ್ಯಾಪಾರಿಗಳನ್ನು ಒಟ್ಟಾಗಿಸಿ ಚೀನಾ ಪ್ರವಾಸ ಮಾಡಿದ್ದು ಕುಗ್ಗಿದ ಅಮೇರಿಕಾ ಶಕ್ತಿಯ ಪ್ರತೀಕ. ಅಮೇರಿಕಾ 9500 ಕಿಲೋಮೀಟರ್ ತೈವಾನ್ ರಕ್ಷಣೆಗೆ ಪ್ರಯಾಣ ಮಾಡುವುದಿಲ್ಲ ಎನ್ನುವ ಟ್ರಂಪ್ ಹೇಳಿಕೆ ಚೀನಾದ ಪ್ರಾಬಲ್ಯಕ್ಕೆ ಹಿಡಿದ ಕನ್ನಡಿ.
ಇದರರ್ಥ ಅತಿ ಶೀಘ್ರದಲ್ಲಿ ಚೀನಾ ತೈವಾನ್ ಮೇಲೆ ಆಕ್ರಮಣ ಮಾಡುತ್ತೆ. ತೈವಾನ್ ಮೇಲೆ ಹಿಡಿತ ಸಾಧಿಸುತ್ತೆ .ಅಂದರೆ ಸೆಮಿ ಕಂಡಕ್ಟರ್ ಮೇಲೆ ಹಿಡಿತ, ಜಗತ್ತಿನ ಮೇಲೆ ಹಿಡಿತ. ನಿಮಗೆಲ್ಲಾ ಗೊತ್ತಿರಲಿ ತೈವಾನ್ ವಿಶ್ವಕ್ಕೆ ಸೆಮಿ ಕಂಡಕ್ಟರ್ ಚಿಪ್ ತಯಾರಿಸಿ ಕಳಿಸುವ ಏಕೈಕ ಪ್ರಮುಖ ದೇಶ. 75 ರಿಂದ 90 ಪ್ರತಿಶತ ಚಿಪ್ಪುಗಳು ತಯಾರಾಗುವುದು ಇಲ್ಲಿ ! ಬಟ್ ಇಂತಹ ಚಿಪ್ ತಯಾರಿಸಲು ಬೇಕಾಗುವ ಯಂತ್ರ ತಯಾರಿಸುವುದು ನೆದರ್ಲ್ಯಾಂಡ್ !
ಜಗತ್ತಿನ ಬಹಳಷ್ಟು ದೇಶಗಳು ಹಣದ ಥೈಲಿ ಹಿಡಿದು ಬೇಡಿ ಕೊಂಡರೂ ಮೆಷಿನರಿ, ತಂತ್ರಜ್ಞಾನ ನೆದರ್ಲ್ಯಾಂಡ್ ಯಾರಿಗೂ ನೀಡಿಲ್ಲ.
ಬಟ್ ಮೊನ್ನೆ ಮೋದಿಜೀ ನೆದರಲ್ಯಾಂಡ್ ಗೆ ಹೋದವರು ಬರೋಬ್ಬರಿ 17 ಒಪ್ಪಂದಕ್ಕೆ ಸಹಿ ಹಾಕಿ ಬಂದಿದ್ದಾರೆ . ಅದರಲ್ಲಿ ಒಂದು ಸೆಮಿ ಕಂಡಕ್ಟರ್ ತಯಾರು ಮಾಡುವ ಮೆಷಿನರಿ ತಂತ್ರಜ್ಞಾನ ನಮ್ಮ ಟಾಟ ಎಲೆಕ್ಟ್ರಾನಿಕ್ಸ್ ಸಂಸ್ಥೆಗೆ ನೀಡುವುದಕ್ಕೆ ಒಪ್ಪಿರುವ ಒಪ್ಪಂದ!
ಚೀನಾ ಅಮೇರಿಕಾ ದೇಶಕ್ಕೆ ಅದರ ನಿಜ ಸ್ಥಾನ ತೋರಿಸಿ ಅವಮಾನ ಮಾಡುತ್ತಿದ್ದ ಸಮಯದಲ್ಲಿ ಭಾರತ ಸದ್ದಿಲ್ಲದೆ ಫಾದರ್ ಆಫ್ ಆಲ್ ಡೀಲ್ಸ್ ಮಾಡಿಕೊಂಡು ಬಂದಿದೆ
ನಾಳೆ ಜಗತ್ತು ಚಿಪ್ ಕೊರತೆಯಿಂದ ಬಳಲುವ ಸಾಧ್ಯತೆಯಿದೆ. ಭಾರತ ನಾಳಿನ ಸಮಸ್ಯೆಗೆ ಇವತ್ತು ಉತ್ತರ ಸಿದ್ದಪಡಿಸಿ ಕೊಂಡಿದೆ . ಇದು ದೂರದರ್ಶಿತ್ವ,ಇದು ನಾಯಕತ್ವ, ಇದು ದೇಶ ಮತ್ತು ಜನತೆಯ ಬಗ್ಗೆ ಇರಬೇಕಾದ ಮನಸ್ಥಿತಿ
ಆದರೆ ಏನ್ಮಾಡೋದು ಕೆಲವರಿಗೆ ಚಿನ್ನ ಕೊಳ್ಳಬೇಡಿ ಎಂದರು ಎನ್ನುವುದೇ ದೊಡ್ಡ ವಿಷಯ .
ಶುಭವಾಗಲಿ.
ನೆಮ್ಮದಿಯಾಗಿ ನಿದ್ದೆ ಮಾಡಿ. ನೀವೇಷ್ಟೆ ಆ ವ್ಯಕ್ತಿಯನ್ನು ಬಯ್ದರೂ ಆತ ರಾತ್ರಿ ನಿದ್ದೆಗೆಟ್ಟು ನಿಮ್ಮ ಒಳಿತಿಗಾಗಿ ಪ್ಲಾನ್ ಮಾಡುತ್ತಿರುತ್ತಾರೆ..
ಜೈ ಭಾರತ್ ❤️
21/05/2026
ಮೋದಿಜಿ ಅಂಜಿ ಸಿಜೆಪಿ ಆದ್ರೆ … ನಮಗೆ ಗೊತ್ತು ಕಾಕ್ರೋಚ್ ಹೊಡಿಯೋದು…
ಮೋದಿಜಿ ಮಂದೆ ಇಂದ ಏನು ಮಾಡೋಕೆ ಆಗಲ್ಲ ಅಂತ … ಅದಕ್ಕೆ ಹೊಸ ನಾಟಕ..
ಈ ಗಂಜಿ ಗಳಿಗೆ ಏನು ಮಾಡೋಕೆ ಆಗಲ್ಲ…
#ಮೋದಿ
21/05/2026
ನಮ್ಮ ದೇಶ ನಮ್ಮ ಹೆಮ್ಮೆ..
ನಾವು ದೇಶ ಮತ್ತು ಮೋದಿಜಿ ಅಭಿಮಾನಿಗಳು
.
ಪೇಡ ಮೀಡಿಯಾ ಅಂಡ್ ಗಂಜಿ ಗಿರಕೆಗಳು ಗುಂಪು …
"ಭಾರತದ ಏಳ್ಗೆ ಸಹಿಸದ ವಿದೇಶಿ ಶಕ್ತಿಗಳ ಡಿಜಿಟಲ್ ಸಂಚು': ಕಾಕ್ರೋಚ್ 90 ಲಕ್ಷ ಫಾಲೋವರ್ಸ್ ಹಿಂದಿರುವ ಕರಾಳ ಸತ್ಯವೇನು?"
ಇಡೀ ಜಗತ್ತು ಇಂದು ಯುದ್ಧ, ಆರ್ಥಿಕ ಮುಗ್ಗಟ್ಟು, ಸಾಮಾಜಿಕ ಅಸ್ಥಿರತೆ ಮತ್ತು ಭೌಗೋಳಿಕ ರಾಜಕೀಯ ಸಂಘರ್ಷಗಳ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದೆ. ಇಂತಹ ಭೀಕರ ಅಸ್ಥಿರತೆಯ ನಡುವೆಯೂ ಭಾರತ ಮಾತ್ರ ಒಂದು ಭರವಸೆಯ ಕಿರಣವಾಗಿ ಹೊರಹೊಮ್ಮುತ್ತಿದೆ. ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ, ಬೃಹತ್ ಮೂಲಸೌಕರ್ಯಗಳ ಅಭಿವೃದ್ಧಿ, ಜಾಗತಿಕ ವೇದಿಕೆಯಲ್ಲಿ ಹೆಚ್ಚುತ್ತಿರುವ ಪ್ರಭಾವ ಮತ್ತು ಜಗತ್ತಿನ ಉತ್ಪಾದನಾ ಕೇಂದ್ರವಾಗಿ ಭಾರತ ಬದಲಾಗುತ್ತಿರುವುದು ಇಂದು ಕಣ್ಣೆದುರಿಗಿರುವ ವಾಸ್ತವ. ಆದರೆ, ಭಾರತದ ಈ ಏಳ್ಗೆಯನ್ನು ಸಹಿಸದ ಕೆಲವು ಅದೃಶ್ಯ ಶಕ್ತಿಗಳು ಈಗ ಶಸ್ತ್ರಾಸ್ತ್ರಗಳ ಬದಲಿಗೆ ಡಿಜಿಟಲ್ ಅಸ್ತ್ರಗಳನ್ನು ಹಿಡಿದು ಭಾರತದ ಮೇಲೆ ದಾಳಿ ಮಾಡುತ್ತಿವೆ.
ಕೇವಲ 5 ದಿನ, 80 ಲಕ್ಷ ಫಾಲೋವರ್ಸ್: ಇದು ಪವಾಡವೋ ಅಥವಾ ಸಂಚೋ?
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ "ಕಾಕ್ರೋಚ್ ಜನತಾ ಪಾರ್ಟಿ" Cockroach Janta Party ಎಂಬ ಪುಟವೊಂದು ದಿಢೀರನೆ ಪ್ರತ್ಯಕ್ಷವಾಗಿದೆ. ಕೇವಲ 5 ದಿನಗಳಲ್ಲಿ ಈ ಪುಟಕ್ಕೆ 80 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಬಂದಿದ್ದಾರೆ ಆದರೆ ವಿಚಿತ್ರವೆಂದರೆ, ಅಲ್ಲಿನ ಯಾವುದೇ ಪೋಸ್ಟ್ಗಳಿಗೆ ಕನಿಷ್ಠ 10 ಲಕ್ಷ ಲೈಕ್ಸ್ ಕೂಡ ಇಲ್ಲ. ಸಾಮಾನ್ಯ ಜನರಿಗೆ ಇದು ಕೇವಲ ಒಂದು ಹಾಸ್ಯದ ಪುಟದಂತೆ ಕಂಡರೂ, ಅದರ ಹಿಂದೆ ವ್ಯವಸ್ಥಿತವಾದ ಅಲ್ಗಾರಿದಮ್ ಆಟ ಮತ್ತು ಕೋಟ್ಯಂತರ ರೂಪಾಯಿಗಳ ಪಿಆರ್ PR ತಂತ್ರ ಅಡಗಿದೆ ಎಂಬುದು ಸ್ಪಷ್ಟ. ಯಾವುದೇ ಪುಟ ಇಷ್ಟು ವೇಗವಾಗಿ ಬೆಳೆಯಬೇಕಾದರೆ ಅದರ ಹಿಂದೆ ಬಲಿಷ್ಠವಾದ ವಿದೇಶಿ ನೆಟ್ವರ್ಕ್ ಇರಲೇಬೇಕು.
ಅಮೆರಿಕಾದ ಐಷಾರಾಮಿ ಜೀವನ, ಭಾರತದ ವಿರುದ್ಧ ವಿಷದ ಬೋಧನೆ!
ಈ ಜಾಲದ ಹಿಂದೆ ಇರುವ ವ್ಯಕ್ತಿ ಅಭಿಜೀತ್ ದೀಪ್ಕೆ. ಮಹಾರಾಷ್ಟ್ರ ಮೂಲದ ಈತ ಇಂದು ಅಮೆರಿಕಾದಲ್ಲಿ ಕುಳಿತುಕೊಂಡು ಅಲ್ಲಿನ ಐಷಾರಾಮಿ ಜೀವನ ನಡೆಸುತ್ತಾ ಭಾರತದ ಯುವಜನರ ಮತಿಭ್ರಮಣೆ Brainwashing ಮಾಡುತ್ತಿದ್ದಾನೆ. ಈ ಹಿಂದೆ ಆಮ್ ಆದ್ಮಿ ಪಾರ್ಟಿಯ AAP ಇಕೋ ಸಿಸ್ಟಮ್ ಜೊತೆ ಗುರುತಿಸಿಕೊಂಡಿದ್ದ ಈತ, ಈಗ ಅಮೆರಿಕಾದಲ್ಲಿ ಕುಳಿತುಕೊಂಡು ಭಾರತದಲ್ಲಿ ಜಾತಿ ವಿಭಜನೆ ಉಂಟುಮಾಡುವುದು, ಸಾಮಾಜಿಕ ಸಾಮರಸ್ಯ ಕೆಡಿಸುವುದು ಮತ್ತು ದೇಶದ ಸಾಂವಿಧಾನಿಕ ಸಂಸ್ಥೆಗಳ ಮೇಲೆ ದಾಳಿ ಮಾಡುವುದನ್ನೇ ಕಸುಬಾಗಿಸಿಕೊಂಡಿದ್ದಾನೆ. ಅಚ್ಚರಿಯೆಂದರೆ, ಈತನ ಉಚ್ಚಾರಣೆ ಮತ್ತು ಸಹಚರರಲ್ಲಿ ಪಾಕಿಸ್ತಾನಿ ಛಾಪು ದಟ್ಟವಾಗಿ ಕಾಣುತ್ತಿದೆ. ಇಲ್ಲಿಯೇ ನಮಗೆ 'ಡೀಪ್ ಸ್ಟೇಟ್ Deep State ನ ಸಂಚಿನ ವಾಸನೆ ಬಡಿಯುತ್ತಿದೆ.
ಏನಿದು ಮಾಹಿತಿ ತಂತ್ರಜ್ಞಾನ ಯುದ್ಧ ಇನ್ಫಾರ್ಮಶನ್ ವಾರ್ಫೇರ್?
ಇಂದಿನ ಯುದ್ಧಗಳು ಕೇವಲ ಟ್ಯಾಂಕ್ ಅಥವಾ ಕ್ಷಿಪಣಿಗಳಿಂದ ನಡೆಯುವುದಿಲ್ಲ. ಮನುಷ್ಯನ ಮೆದುಳನ್ನು ನಿಯಂತ್ರಿಸುವುದು ಗಡಿಗಳನ್ನು ನಿಯಂತ್ರಿಸುವುದಕ್ಕಿಂತಲೂ ಶಕ್ತಿಶಾಲಿಯಾಗಿದೆ. ಈ ಸಂಚಿನ ಗುರಿಗಳೆಂದರೆ ಸಮಾಜದಲ್ಲಿ ಅಸ್ಥಿರತೆ ಮೂಡಿಸುವುದು.ಒಂದು ಸಮುದಾಯವನ್ನು ಮತ್ತೊಂದರ ವಿರುದ್ಧ ಎತ್ತಿಕಟ್ಟುವುದು.ದೇಶದ ಸಂಸ್ಥೆಗಳ ಮೇಲಿನ ನಂಬಿಕೆ ಕಳೆದುಕೊಳ್ಳುವಂತೆ ಮಾಡುವುದು.ಯುವಜನತೆಯನ್ನು ತಪ್ಪು ದಾರಿಗೆ ಎಳೆಯುವುದು.ಜನರ ಆಕ್ರೋಶವನ್ನೇ ಬಂಡವಾಳ ಮಾಡಿಕೊಂಡು ಹಣ ಗಳಿಸುವುದು.ಭಾರತವು ಜಾಗತಿಕವಾಗಿ ಸ್ಪರ್ಧಿಸುತ್ತಿರುವಾಗ, ದೇಶವನ್ನು ಒಳಗಿನಿಂದಲೇ ದುರ್ಬಲಗೊಳಿಸಿ ಜನರ ಗಮನವನ್ನು ಬೇರೆಡೆಗೆ ಸೆಳೆಯುವುದು ಈ ಶಕ್ತಿಗಳ ಮುಖ್ಯ ಉದ್ದೇಶವಾಗಿದೆ.
ಯುವ ಜನತೆಯೇ ಎಚ್ಚರ
ವಿಶೇಷವಾಗಿ ಜೆನ್-ಜಿ Gen Z ಯುವಕರಿಗೆ ಇದು ನಮ್ಮ ಮನವಿ. ಸೋಷಿಯಲ್ ಮೀಡಿಯಾದಲ್ಲಿ ಯಾವುದನ್ನೋ ನೋಡಿ ಕುರುಡಾಗಿ ನಂಬಬೇಡಿ. ವಿದೇಶದಲ್ಲಿ ಕುಳಿತು ಯಾರೋ ನೀಡುವ ಸುಳ್ಳು ಮಾಹಿತಿಗಳಿಗೆ ಬಲಿಯಾಗಬೇಡಿ. ಭಾರತದ ಸಾರ್ವಭೌಮತ್ವದ ಮೇಲೆ ದಾಳಿ ಮಾಡಲು ಇಂತಹ 'ರಾಕ್ಷಸ' ಜಾಲಗಳು ಸಿದ್ಧವಾಗಿವೆ. ಸತ್ಯಾಸತ್ಯತೆಗಳನ್ನು ಪರಿಶೀಲಿಸದೆ ಯಾವುದೇ ಆಕ್ರೋಶಕ್ಕೆ ಒಳಗಾಗುವುದು ದೇಶಕ್ಕೆ ಮಾಡುವ ದ್ರೋಹವಾಗುತ್ತದೆ.ಭಾರತದಲ್ಲಿ ಬದುಕುತ್ತಾ, ಭಾರತದ ಪ್ರಜೆಗಳಾಗಿ ನಮಗೆ ಬೇಕಾದಂತೆ ಕಾನೂನುಬದ್ಧವಾಗಿ ಬದುಕುವ ಹಕ್ಕು ನಮಗಿದೆ. ಆದರೆ ಅಮೆರಿಕಾದಲ್ಲಿ ಕುಳಿತು ಇಲ್ಲಿನ ಶಾಂತಿಯನ್ನು ಕೆಡಿಸಲು ಪ್ರಯತ್ನಿಸುವವರಿಗೆ ನಮ್ಮ ಯುವಶಕ್ತಿ ಬಲಿಯಾಗಬಾರದು. ಭಾರತದ ಏಳ್ಗೆಯನ್ನು ತಡೆಯಲು ನಡೆಯುತ್ತಿರುವ ಈ ಡಿಜಿಟಲ್ ಯುದ್ಧದ ವಿರುದ್ಧ ನಾವು ಜಾಗೃತರಾಗಬೇಕಿದೆ.ನಮ್ಮ ದೇಶದ ರಕ್ಷಣೆ ಕೇವಲ ಸೈನಿಕರ ಜವಾಬ್ದಾರಿಯಲ್ಲ, ಅದು ಪ್ರತಿ ಮೊಬೈಲ್ ಬಳಸುವ ಪ್ರಜೆಯ ಜವಾಬ್ದಾರಿಯೂ ಹೌದು.
Copied
19/05/2026
ಮೋದಿ ಜೀ ವಿದೇಶ ಪ್ರವಾಸಗಳಿಗೆ ಏಕೆ ಹೋಗುತ್ತಾರೆ ಎಂದು ಪ್ರಶ್ನಿಸುವವರು, ಪ್ರವಾಸೋದ್ಯಮ (Tourism) ಮತ್ತು ರಾಜತಾಂತ್ರಿಕತೆ (Diplomacy) ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಬೇಕು.
ಒಬ್ಬ ಪ್ರವಾಸಿಗನು ವಿದೇಶಿ ವಿನಿಮಯ ಹಣವನ್ನು ಖರ್ಚು ಮಾಡುತ್ತಾನೆ, ಇದರಿಂದ ರೂಪಾಯಿ ಮೌಲ್ಯ ಕಡಿಮೆಯಾಗುತ್ತದೆ. ಆದರೆ ಮೋದಿ ಜಿಯವರ ರಾಜತಾಂತ್ರಿಕತೆ ಭಾರತಕ್ಕೆ ಹೂಡಿಕೆ, ತಂತ್ರಜ್ಞಾನ ಮತ್ತು ಉದ್ಯೋಗಗಳನ್ನು ತಂದುಕೊಡುತ್ತದೆ. ಇದರಿಂದ ಆರ್ಥಿಕತೆ ಮತ್ತು ರೂಪಾಯಿ ಎರಡೂ ಬಲವಾಗುತ್ತವೆ…
15/05/2026
ಜಾತಿ ಗೆ ಗುಲಾಮನಾಗುವ ಮುನ್ನ… ದೇಶ ಧರ್ಮ ಅಂತ ಬದುಕಿ.. ಭಾರತ ಒಂದೇ ಹಿಂದೂ ದೇಶ..
ಇನ್ನಾದರೂ ಎಚ್ಚೆತುಕೋ…
14/05/2026
ನಾವು ಈ ಕಾರಣಕ್ಕೆ ಮೋದಿಜಿ ನ ನಾಯಕ …ಮಹಾನಾಯಕ …