25/03/2026
🌟 ಸಂಭ್ರಮದ ಪುಸ್ತಕ ಲೋಕಾರ್ಪಣೆ: 'ನಕ್ಷತ್ರ ತರಂಗ' 📚
ನಮಸ್ಕಾರ ಸ್ನೇಹಿತರೇ,
ನಿನ್ನೆ ದಿನಾಂಕ 24.03.2026 ರಂದು ಬೆಂಗಳೂರಿನ ನಯನ ಸಭಾಂಗಣದಲ್ಲಿ ಕಲಾರಂಗ ಟ್ರಸ್ಟ್ ರಿ. ವತಿಯಿಂದ ಹಮ್ಮಿಕೊಂಡಿದ್ದ 'ಕಲಾರಂಗ ಪಬ್ಲಿಕೇಷನ್ಸ್' ನ 3ನೇ ಪುಸ್ತಕ 'ನಕ್ಷತ್ರ ತರಂಗ' ಲೋಕಾರ್ಪಣೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.
✨ ಪುಸ್ತಕ ಬಿಡುಗಡೆ: ನಕ್ಷತ್ರ ತರಂಗ (ಕಲಾರಂಗ ಪಬ್ಲಿಕೇಷನ್ಸ್‌ನ 3ನೇ ಹೆಜ್ಜೆ).
👤 ವೇದಿಕೆಯ ಮೇಲೆ: ಪುಸ್ತಕದ ಕರ್ತೃಗಳಾದ ಡಾ. ವಿನಯ್ ಗುರೂಜಿ ಹಾಗೂ ಕಲಾರಂಗ ಪಬ್ಲಿಕೇಷನ್ಸ್‌ನ ಬಿಂದು ಜೀವನ್ ಅವರು ಉಪಸ್ಥಿತರಿದ್ದರು.
🎤 ಅಚ್ಚುಕಟ್ಟಾದ ನಿರೂಪಣೆ: ಇಡೀ ಕಾರ್ಯಕ್ರಮವನ್ನು Srinivas Murthy ಅವರು ತಮ್ಮ ಅದ್ಭುತ ಶೈಲಿಯಲ್ಲಿ ಅಚ್ಚುಕಟ್ಟಾಗಿ ನಿರೂಪಿಸಿದರು.
ಮುಖ್ಯ ಅತಿಥಿಗಳು:
ಸಮಾರಂಭಕ್ಕೆ ವಿಶೇಷ ಮೆರುಗು ನೀಡಿದ ಅತಿಥಿಗಳು:
ಕುಮಾರಿ ಅಕ್ಷರ ('ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಖ್ಯಾತಿ)
ಮಾಸ್ಟರ್ ಚಿರಂಜೀವಿ ಏಕಮಯ್ಯ (ಚಲನಚಿತ್ರ ನಟರು)
ಕಲೆ ಮತ್ತು ಸಾಹಿತ್ಯದ ಈ ಸುಂದರ ಸಂಗಮಕ್ಕೆ ಸಾಕ್ಷಿಯಾದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು. 'ನಕ್ಷತ್ರ ತರಂಗ' ಪುಸ್ತಕವು ಓದುಗರ ಮನೆ-ಮನಗಳನ್ನು ತಲುಪಲಿ ಎಂಬುದು ನಮ್ಮ ಆಶಯ. 📖
L Jeevan
ಅಧ್ಯಕ್ಷ
ಕಲಾರಂಗ ಟ್ರಸ್ಟ್ ರಿ.
22/03/2026
📚 ಪುಸ್ತಕ ಲೋಕಾರ್ಪಣೆ ಸಮಾರಂಭ: "ನಕ್ಷತ್ರ ತರಂಗ"
ಕಲಾರಂಗ ಟ್ರಸ್ಟ್ (ರಿ.) ವತಿಯಿಂದ ಡಾ|| ವಿನಯ್ ರವರ ಜ್ಯೋತಿಷ್ಯ ಪುಸ್ತಕ "ನಕ್ಷತ್ರ ತರಂಗ" ಲೋಕಾರ್ಪಣೆ ಕಾರ್ಯಕ್ರಮಕ್ಕೆ ತಮಗೆ ಆದರದ ಸುಸ್ವಾಗತ.
🗓️ ಕಾರ್ಯಕ್ರಮದ ವಿವರಗಳು
ದಿನಾಂಕ: 24-03-2026, ಮಂಗಳವಾರ
ಸಮಯ: ಸಂಜೆ 5.00 ಗಂಟೆಗೆ
ಸ್ಥಳ: ನಯನ ಸಭಾಂಗಣ, 1ನೇ ಎ ಮುಖ್ಯರಸ್ತೆ, ಸಂಪಂಗಿ ರಾಮನಗರ, ಜೆ.ಸಿ. ರಸ್ತೆ, ಬೆಂಗಳೂರು.
🤝 ಮುಖ್ಯ ಅತಿಥಿಗಳು
ಈ ಸಮಾರಂಭದಲ್ಲಿ ಈ ಕೆಳಗಿನ ಗಣ್ಯರು ಭಾಗವಹಿಸಲಿದ್ದಾರೆ:
ಶ್ರೀ ಸಿ.ಎನ್. ಬಾಲಕೃಷ್ಣ: ಶಾಸಕರು, ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರ.
ಕು|| ಅಕ್ಷರ: ಚಲನಚಿತ್ರ ನಟಿ (ಪುಟ್ಟಕ್ಕನ ಮಕ್ಕಳು ಧಾರಾವಾಹಿ ಖ್ಯಾತಿ).
ಮಾ|| ಚಿರಂಜೀವಿ ಏಕಮೇವ: ಚಲನಚಿತ್ರ ನಟ.
ಶ್ರೀ ಎಲ್. ಜೀವನ್: ಪ್ರಕಾಶಕರು, ಕಲಾರಂಗ ಪಬ್ಲಿಕೇಷನ್ಸ್.
15/01/2026
🌾ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು🌾
ಹೊಲಗಳಲ್ಲಿ ಬೆಳೆ ನಗುತಿರುವ ಸಮಯ,
ಮನೆಮನೆಗಳಲ್ಲಿ ಸಂಭ್ರಮ ತುಂಬಿರುವ ದಿನ.
ಸೂರ್ಯ ಉತ್ತರಾಯಣಕ್ಕೆ ಹೊರಡುವ ಈ ಸಂಕ್ರಾಂತಿ
ನಿಮ್ಮ ಬದುಕಿಗೂ ಹೊಸ ದಾರಿ, ಹೊಸ ಆಸೆ ತರುವಂತಾಗಲಿ.
ಎಳ್ಳು–ಬೆಲ್ಲ ಹಂಚಿಕೊಂಡಂತೆ
ಸ್ನೇಹ–ಸಂಬಂಧಗಳಲ್ಲಿ ಸಿಹಿತನ ಇರಲಿ.
ರೈತನ ಕೈಗೆ ಬೆಳೆ,
ಜನರ ಬದುಕಿಗೆ ನೆಮ್ಮದಿ ಬರಲಿ.
ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಹೃದಯಪೂರ್ವಕ ಶುಭಾಶಯಗಳು! 🌞🌾
17/11/2025
ಇಂದಿನ ದಿನಪತ್ರಿಕೆಗಳಲ್ಲಿರುವ ಕೆಲವು ಪ್ರಮುಖ ಸುದ್ದಿಗಳು
01/11/2025
ಎಲ್ಲರಿಗೂ ೭೦ನೇ #ಕನ್ನಡರಾಜ್ಯೋತ್ಸವ’ದ ಶುಭಾಶಯಗಳು.
ಸಿರಿಗನ್ನಡಂ ಗೆಲ್ಗೆ; ಸಿರಿಗನ್ನಡಂ ಬಾಳ್ಗೆ.
೦೧-೧೧-೨೦೨೫.
22/06/2025
ಕೆಂಪೇಗೌಡ ಜಯಂತಿಯ ಅಂಗವಾಗಿ ಇದೆ ಜೂನ್ 26 ಮತ್ತು 27 ರಂದು ತುರುವೇಕೆರೆ ತಾಲ್ಲೂಕಿನಲ್ಲಿ, ತಾಲ್ಲೂಕು ಮಟ್ಟದ ಕಬ್ಬಡಿ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ ನಮ್ಮ ಕಲಾರಂಗ ವರಿಯರ್ಸ್ ತಂಡ.