22/05/2026
ಸುತ್ತೂರು ಮಠದ ಜೆ.ಎಸ್.ಎಸ್ ವಸತಿ ಶಾಲೆ ಪ್ರವೇಶ ಬಯಸಿ ಬಂದ ರಾಜ್ಯ ಹಾಗೂ ನೆರೆ ರಾಜ್ಯಗಳ ಸಹಸ್ರಾರು ವಿದ್ಯಾರ್ಥಿಗಳು ಹಾಗೂ ಪೋಷಕರೊಂದಿಗೆ ಸಂಸ್ಥೆಯ ಆಡಳಿತ ಮಂಡಳಿ, ಮುಖ್ಯಸ್ಥರು ಹಾಗೂ ಶಿಕ್ಷಕರುಗಳಿದ್ದಾರೆ.
ವೀರಶೈವ ಲಿಂಗಾಯತ, ಸಮುದಾಯಕ್ಕಾಗಿ, ಸಮುದಾಯಕೋಸ್ಕರ...
22/05/2026
ಸುತ್ತೂರು ಮಠದ ಜೆ.ಎಸ್.ಎಸ್ ವಸತಿ ಶಾಲೆ ಪ್ರವೇಶ ಬಯಸಿ ಬಂದ ರಾಜ್ಯ ಹಾಗೂ ನೆರೆ ರಾಜ್ಯಗಳ ಸಹಸ್ರಾರು ವಿದ್ಯಾರ್ಥಿಗಳು ಹಾಗೂ ಪೋಷಕರೊಂದಿಗೆ ಸಂಸ್ಥೆಯ ಆಡಳಿತ ಮಂಡಳಿ, ಮುಖ್ಯಸ್ಥರು ಹಾಗೂ ಶಿಕ್ಷಕರುಗಳಿದ್ದಾರೆ.
10/05/2026
ಶ್ರೇಷ್ಠ ಶಿವಶರಣೆ ,ಯೋಗಿ ವೇಮನನ ಮನ ಪರಿವರ್ತನೆ ಮಾಡಿದ ಮಹಾತಾಯಿ ಸಿರಿತನ
ಬಂದ ಕಾಲಕ್ಕೆ ಮೈಮರೆತು ಹಿಗ್ಗದೇ, ದಾನಧರ್ಮ ಮಾಡುವುದರ ಮೂಲಕ ತನ್ನ ಬಳಗದವರು ದಾನಗುಣವನ್ನು ಬೆಳೆಸಿಕೊಳ್ಳಬೇಕು" ಎಂದು ಸಾರಿದ ಹೇಮರೆಡ್ಡಿ ಮಲ್ಲಮ್ಮನ ಜೀವನಮೌಲ್ಯಗಳು ಮನುಕುಲಕ್ಕೆ ಅದರಲ್ಲೂ ಸ್ತ್ರೀಕುಲಕ್ಕೆ ಅಮೂಲ್ಯ ಕಾಣಿಕೆಗಳಾಗಿವೆ ಸರ್ವರಿಗೂ ಹೇಮರೆಡ್ಡಿ ಮಲ್ಲಮ್ಮನ ಜಯಂತಿಯ ಶುಭಾಶಯಗಳು.
#ಸುವರ್ಣ_ಕರ್ನಾಟಕ_ವೀರಶೈವ_ಲಿಂಗಾಯತ_ಮಹಾಸಭಾ(ರಿ)
07/05/2026
*ತುಮಕೂರಿನ ಶ್ರೀ ಸಿದ್ಧಗಂಗಾ ಮಠಕ್ಕೆ ಆರ್ಥಿಕವಾಗಿ ಶೈಕ್ಷಣಿಕವಾಗಿ ಹಿಂದೆ ಉಳಿದಿರುವ ಮಕ್ಕಳನ್ನು ಶಾಲೆಗೆ ಸೇರಿಸುವ ಇಚ್ಛೆಯಿದ್ದಲ್ಲಿ ಪ್ರವೇಶಕ್ಕೆ ಅರ್ಜಿಗಳನ್ನು ದಿನಾಂಕ 02.05.2026 ರಿಂದ 15.05.2026ರವರೆಗೆ ಕೊಡಲಾಗುವುದು.*
*ಎಲ್ಲಾ ಧರ್ಮ,ಜಾತಿ, ಜನಾಂಗದ ಮಕ್ಕಳಿಗೆಗೆ ಶ್ರೀಮಠದಲ್ಲಿ ವಿದ್ಯಾಭ್ಯಾಸ ಮಾಡಲು ಅವಕಾಶವಿದೆ.*
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
0816 295 5059
04/05/2026
*ಬಿ.ಎಸ್ ವೈ ಅಭಿಮಾನೋತ್ಸವಕ್ಕೆ ಕ್ಷಣಗಣನೆ..💫*
*ಮಾಜಿ ಮುಖ್ಯಮಂತ್ರಿ ರೈತ ನಾಯಕ ಸನ್ಮಾನ್ಯ ಶ್ರೀ ಬಿ.ಎಸ್ ಯಡಿಯೂರಪ್ಪ ಅವರ 50 ವರ್ಷಗಳ ಸುದೀರ್ಘ ರಾಜಕೀಯ ಜೀವನ ಮತ್ತು ಜನಸೇವೆಯ ಗೌರವಾರ್ಥವಾಗಿ*
*ಮೇ 9ರಂದು ಚಿತ್ರದುರ್ಗದಲ್ಲಿ ನಡೆಯಲಿರುವ 'ಬಿ.ಎಸ್.ವೈ ಅಭಿಮಾನೋತ್ಸವ'ದ ಸರ್ವರಿಗೂ ಆದರದ ಸುಸ್ವಾಗತ*
01/05/2026
|| #ವಿಶ್ವ_ಕಾರ್ಮಿಕರ_ದಿನದ_ಶುಭಾಶಯಗಳು ||
ಕಾಯಕವೇ ಕೈಲಾಸ ಎಂದು ಶ್ರಮದಿಂದ ದುಡಿದ ಕೈಗಳಿಂದಾಗಿ ನಾವು ಇಂದು ಬುದುಕುತ್ತಿರುವ ಪ್ರಪಂಚ ನಿರ್ಮಾಣಗೊಂಡಿದೆ. ' #ಅಂತರಾಷ್ಟ್ರೀಯ_ಕಾರ್ಮಿಕರ_ದಿನ'ವಾದ ಇಂದು ಕಾರ್ಮಿಕರ ಶ್ರಮ, ತ್ಯಾಗಗಳನ್ನು ಸ್ಮರಿಸೋಣ ಹಾಗೂ ಕಾರ್ಮಿಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡೋಣ.
28/04/2026
ಸರ್ ಕೆ.ಪಿ. ಪುಟ್ಟಣ್ಣ ಚೆಟ್ಟಿ ಅವರ ಜನ್ಮದಿನದ ಶುಭ ಸಂದರ್ಭದಲ್ಲಿ ನನ್ನ ಗೌರವದ ನಮನಗಳು
ಆಧುನಿಕ ಬೆಂಗಳೂರಿನ ಅಭಿವೃದ್ಧಿಗೆ ಶ್ರಮಿಸಿದ ಸರ್ ದಿವಾನ್ ಬಹದ್ದೂರ್ ಕೆ.ಪಿ. ಪುಟ್ಟಣ್ಣ ಚೆಟ್ಟಿ ತಮ್ಮ ಜೀವನವನ್ನು ಸಮಾಜದ ಸೇವೆಗಾಗಿಯೇ ಮುಡಿಪಾಗಿಟ್ಟ ಮಹನೀಯರು.
ಪುಟ್ಟಣ್ಣ ಚೆಟ್ಟಿ 1856ರ ಏಪ್ರಿಲ್ 29ರಂದು ಬೆಂಗಳೂರು ಬಳಿಯ ಕೃಷ್ಣರಾಜಪುರದಲ್ಲಿ ಯಲ್ಲಪ್ಪ ಚೆಟ್ಟಿ ಮತ್ತು ಯಲ್ಲಮ್ಮ ದಂಪತಿಗಳ ಸುಪುತ್ರರಾಗಿ ಜನಿಸಿದರು.
ಬೆಂಗಳೂರಿನ ವೆಸ್ಲಿಯನ್ ಮಿಷನ್ ಹೈಸ್ಕೂಲ್ ಮತ್ತು ಸೆಂಟ್ರಲ್ ಕಾಲೇಜಿನಲ್ಲಿ ಪುಟ್ಟಣ್ಣ ಚೆಟ್ಟಿಯವರ ವಿದ್ಯಾಭ್ಯಾಸ ನಡೆಯಿತು. 1875ರಲ್ಲಿ ತಮ್ಮ 19ನೇ ವಯಸ್ಸಿನಲ್ಲಿಯೇ ಮೈಸೂರು ಸರ್ಕಾರದ ಸಿವಿಲ್ ಸರ್ವೀಸಸ್ ಸೇರಿದ ಪುಟ್ಟಣ್ಣ ಚೆಟ್ಟಿ, ತಮ್ಮ ಕರ್ತವ್ಯ ನಿಷ್ಠೆ, ಆಡಳಿತ ಸಾಮರ್ಥ್ಯ, ಸರಳ ಸ್ವಭಾವದಿಂದಾಗಿ ಹಂತ ಹಂತವಾಗಿ ಅಂದಿನ ಮೈಸೂರು ರಾಜ್ಯದ ರೈಲ್ವೆ ಟ್ರಾಫಿಕ್ ಮ್ಯಾನೇಜರ್, ಸಹಾಯಕ ಕಮಿಷನರ್, ಡೆಪ್ಯುಟಿ ಕಮಿಷನರ್, ಜಿಲ್ಲಾಧಿಕಾರಿ ಇವೇ ಮುಂತಾದ ಉನ್ನತ ಹುದ್ದೆಗಳನ್ನು ಹಂತ ಹಂತವಾಗಿ ಅಲಂಕರಿಸಿ ಶಿವಮೊಗ್ಗ, ಕೋಲಾರ, ಬೆಂಗಳೂರುಗಳಲ್ಲಿ ಸೇವೆ ಸಲ್ಲಿಸಿದರು.
1912ರಲ್ಲಿ ನಿವೃತ್ತರಾದ ಪುಟ್ಟಣ್ಣ ಚೆಟ್ಟಿ ಅವರು, ನಂತರ ಸಂಪೂರ್ಣವಾಗಿ ಸಮಾಜ ಸೇವೆಯಲ್ಲಿ ತೊಡಗಿಕೊಂಡರು. ಆ ದಿನಗಳಲ್ಲಿ ಪ್ರಾರಂಭವಾದ ಬಹುತೇಕ ಸರ್ಕಾರಿ ಹಾಗೂ ಸಾರ್ವಜನಿಕ ಸಂಸ್ಥೆಗಳ ಸ್ಥಾಪನೆ ಮತ್ತು ಮಾರ್ಗದರ್ಶನದಲ್ಲಿ ಪುಟ್ಟಣ್ಣ ಚೆಟ್ಟಿಯವರ ಪ್ರಮುಖ ಪಾತ್ರವಿದೆ. ಬೆಂಗಳೂರು ನಗರಾಭಿವೃದ್ಧಿ ಸಮಿತಿಯ ಅಧ್ಯಕ್ಷತೆ, ಮೈಸೂರ್ ಬ್ಯಾಂಕಿನ ಅಧ್ಯಕ್ಷತೆ, ಬೆಂಗಳೂರು ಪೌರಸಭಾದ ಅಧ್ಯಕ್ಷತೆ ಮುಂತಾದ ಜವಾಬ್ಧಾರಿಗಳನ್ನು ಅವರು ಸಮರ್ಥವಾಗಿ ನಿರ್ವಹಿಸಿದ್ದರು. ಇದಲ್ಲದೆ ರೈಲ್ವೆ ಮಂಡಳಿ, ಬೆಂಗಳೂರು ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್, ಬೆಂಗಳೂರ್ ಪ್ರೆಸ್, ಮೈಸೂರು ಕೃಷ್ಣರಾಜೇಂದ್ರ ಮಿಲ್ಸ್, ಕನ್ನಡ ಸಾಹಿತ್ಯ ಪರಿಷತ್ತು ಮುಂತಾದ ಸಂಘ-ಸಂಸ್ಥೆಗಳ ಬೆಳವಣಿಗೆಯಲ್ಲಿ ಸಹಾ ಅವರು ಅಪಾರವಾಗಿ ಶ್ರಮಿಸಿದರು. ಮೈಸೂರು ಲಿಂಗಾಯತ ಅಭಿವೃದ್ಧಿ ಸಂಸ್ಥೆ, ಅಖಿಲ ಭಾರತ ವೀರಶೈವ ಮಹಾಸಭೆಗಳಲ್ಲಿ ಅವರು ಅಧ್ಯಕ್ಷರಾಗಿ ಮಹತ್ವದ ಸೇವೆ ಸಲ್ಲಿಸಿದರು. ಗುಬ್ಬಿ ತೋಟದಪ್ಪನವರ ಧರ್ಮನಿಧಿ, ಆರ್ಕಾಟ್ ನಾರಾಯಣಸ್ವಾಮಿ ಮೊದಲಿಯಾರ್ ಧರ್ಮನಿಧಿ ಮುಂತಾದ ಅನೇಕ ಧರ್ಮಸಂಸ್ಥೆಗಳಿಗೆ ಅವರು ನ್ಯಾಯಪಾಲಕರಾಗಿದ್ದರು.
1913ರಿಂದ 1922ರ ಅವಧಿಯಲ್ಲಿ ಬೆಂಗಳೂರು ನಗರಸಭೆಯ ಪ್ರಥಮ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಪುಟ್ಟಣ್ಣ ಚೆಟ್ಟಿಯವರು ನಗರಸಭೆಯ ಹಣಕಾಸಿನ ಸ್ಥಿತಿಯನ್ನು ಉತ್ತಮಗೊಳಿಸಿದರಲ್ಲದೆ, ಹೊಸ ಮಾರುಕಟ್ಟೆಗಳು, ಕೈಗಾರಿಕಾ ಪ್ರದೇಶಗಳು, ಬಡಜನತೆಗಾಗಿ ವಸತಿ ಸೌಕರ್ಯ, ಒಳಚರಂಡಿ ವ್ಯವಸ್ಥೆ ಮುಂತಾದ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕಾರ್ಯಗತ ಮಾಡಿದರು. 1918-19ರಲ್ಲಿ ಸಾಂಕ್ರಾಮಿಕ ರೋಗ ಹಾಗೂ ತೀವ್ರ ಆಹಾರ ಕೊರತೆ ಉಂಟಾದಾಗ ಇವರು ಕಾರ್ಯನಿರ್ವಹಿಸಿದ ರೀತಿ ಅನುಕರಣೀಯವಾದದ್ದು ಎಂಬ ಶ್ಲಾಘನೆ ಎಲ್ಲೆಲ್ಲೂ ಮಾರ್ದನಿಸಿತು.
ಅಂದಿನ ದಿನಗಳಲ್ಲಿ ಸಾವಿರಗಳ ಬೆಲೆ ತುಂಬಾ ದೊಡ್ಡದು. ಕೊಡುಗೈ ದಾನಿಯಾದ ಪುಟ್ಟಣ್ಣ ಚೆಟ್ಟಿ ಅವರು ಪುರಭವನ ನಿರ್ಮಾಣಕ್ಕಾಗಿ 75,000 ರೂ, ವಿಕ್ಟೋರಿಯಾ ಆಸ್ಪತ್ರೆ ಹೊರರೋಗಿ ವಿಭಾಗ ನಿರ್ಮಾಣಕ್ಕೆ 25,000 ರೂ, ಮೈಸೂರು ವಿಶ್ವವಿದ್ಯಾಲಯಕ್ಕೆ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ 20,000 ರೂ, ದೂರದ ಹಳ್ಳಿಗಳಿಂದ ಬೆಂಗಳೂರಿಗೆ ಬರುವ ವಿದ್ಯಾರ್ಥಿಗಳಿಗಾಗಿ ಬಸವನಗುಡಿಯಲ್ಲಿ ವೀರಶೈವ ಉಚಿತ ವಿದ್ಯಾರ್ಥಿನಿಲಯ ಕಟ್ಟಿದ್ದಲ್ಲದೆ ಅದಕ್ಕೆ 85,000 ರೂ. ಗಳನ್ನು ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸಹಾಯ ವರ್ಗದ ಸದಸ್ಯರಾಗಿದ್ದ ಪುಟ್ಟಣ್ಣ ಚೆಟ್ಟಿಯವರು ಪರಿಷತ್ತಿಗೆ ಅಪಾರ ಧನಸಹಾಯ ಮಾಡಿ ಅದರ ಅಭಿವೃದ್ಧಿಗೆ ಕಾರಣರಾದರು.
ಪುಟ್ಟಣ್ಣ ಚೆಟ್ಟಿಯವರ ಸೇವೆಯನ್ನು ಬಹುವಾಗಿ ಮೆಚ್ಚಿದ ನಾಲ್ವಡಿ ಕೃಷ್ಣರಾಜ ಒಡೆಯರ್ 1911ರಲ್ಲಿ ಇವರಿಗೆ ‘ರಾಜ್ಯಸಭಾ ಭೂಷಣ’ ಪ್ರಶಸ್ತಿ ನೀಡಿ ಸನ್ಮಾನಿಸಿದರು. ಭಾರತ ಸರ್ಕಾರ ‘ದಿವಾನ್ ಬಹದ್ದೂರ್’ ಪ್ರಶಸ್ತಿ ನೀಡಿ ಗೌರವಿಸಿತು. 1917ರಲ್ಲಿ ‘ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ದಿ ಇಂಡಿಯನ್ ಎಂಪೈರ್’ ಮತ್ತು 1925ರ ವರ್ಷದಲ್ಲಿ ‘ಕೈಸರ್ ಹಿ ಹಿಂದ್’ ಪದಕ ಪಾರಿತೋಷಕ ಗೌರವವನ್ನು ಇವರಿಗೆ ಸಮರ್ಪಿಸಲಾಯಿತು. ಜೊತೆಗೆ ಬ್ರಿಟಿಷ್ ಸರ್ಕಾರ ಇವರಿಗೆ ‘ಸರ್’ ಬಿರುದನ್ನು ನೀಡಿತು. 1921ರಲ್ಲಿ ನಡೆದ ಚಿಕ್ಕಮಗಳೂರಿನ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇವರನ್ನು ಅಧ್ಯಕ್ಷರನ್ನಾಗಿ ಆರಿಸಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕ ಇವರನ್ನು ಗೌರವಿಸಿತು. 1936ರಲ್ಲಿ ವಿಜಯನಗರ ಸಾಮ್ರಾಜ್ಯ ಸ್ಮಾರಕೋತ್ಸವದ ಅಧ್ಯಕ್ಷತೆಯ ಗೌರವವೂ ಇವರಿಗೆ ಸಂದಿತು.
ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಪುಟ್ಟಣ್ಣ ಚೆಟ್ಟಿಯವರು ನುಡಿದ ಈ ಕೆಲವು ಮಾತುಗಳು ಇಂದೂ ಸತ್ಯದಂತೆ ನಮ್ಮ ಕಣ್ಣೆದುರಿಗಿದೆ: “ನಮ್ಮ ಕನ್ನಡ ನುಡಿಗೆ ಈಗ ಒದಗಿರುವ ಅವಸ್ಥೆಯನ್ನು ನೋಡಿದರೆ ಕಣ್ಣೀರು ಬರುವುದು. ಆದರೆ ಕಣ್ಣೀರು ಸುರಿಸುವುದರಿಂದ ಕಾರ್ಯಸಿದ್ಧಿಯಾಗದು. ಕನ್ನಡಕ್ಕೆ ತನ್ನ ಸ್ವಗೃಹದಲ್ಲಿಯೇ ಯಾಜಮಾನ್ಯವು ತಪ್ಪಿರುವುದು. ನಮ್ಮ ಮನೆಯಲ್ಲಿ ನಾವು ಯಜಮಾನನಲ್ಲದಂತಾಗಿರುವುದು ಈ ದುರವಸ್ಥೆಗೆ ಮುಖ್ಯ ಕಾರಣವು ಆಂಗ್ಲಭಾಷೆಯ ಪ್ರಾಬಲ್ಯವೇ ಎಂಬುದನ್ನು ನಾನು ತಮ್ಮಲ್ಲಿ ಹೊಸದಾಗಿ ಅರಿಕೆ ಮಾಡಬೇಕಾದುದಿಲ್ಲ. ಆಂಗ್ಲ ಭಾಷೆಯು ಇಂಡಿಯಾ ದೇಶದ ಭಾಷೆಗಳ ಮೇಲೆಲ್ಲಾ ಒಂದು ವಿಧವಾದ ಮಂಕುಬೂದಿಯನ್ನು ಎರಚಿರುವುದೆಂದು ಹೇಳಿದರೆ ಅದು ಅತ್ಯುಕ್ತಿಯಾಗಲಾರದು. ದೇಶಭಾಷೆಯನ್ನು ವಿರೂಪಗೊಳಿಸಿ ಅದರ ಹುಟ್ಟನ್ನು ಕೆಡಿಸುವುದರಲ್ಲಿ ಇಂಗ್ಲಿಷು ಅಭ್ಯಾಸ ಮಾಡಿರುವ ನಮ್ಮ ಕನ್ನಡಿಗರನ್ನು ಬಿಟ್ಟರೆ ಯಾರೂ ಇಲ್ಲ. ಇಟ್ಟಿಗೆಗಳನ್ನು ಒಂದಕ್ಕೊಂದನ್ನಂಟಿಸಿ ಭದ್ರಪಡಿಸುವ ಗಾರೆಯಂತೆ ಭಾಷೆಯು ಜನರನ್ನು ಸೇರಿಸತಕ್ಕ ಒಂದು ಬಗೆಯ ಅಂಟು. ಜನರ ಐಕಮತ್ಯವನ್ನು ಹೆಚ್ಚಿಸುವ ಉಪಾಯಗಳಲ್ಲಿ ಭಾಷೆಯೂ ಒಂದೆಂಬುದನ್ನು ನಾವು ಮರೆಯಲಾಗದು”.
ಈ ಮಹನೀಯರು 1938ರ ಜುಲೈ 23ರಂದು ಈ ಲೋಕವನ್ನಗಲಿದರು. ಆಡಳಿತ. ಸಾಮಾಜಿಕ. ಧಾರ್ಮಿಕ. ಸಹಕಾರ. ಸಾಂಸ್ಕೃತಿಕ ಮತ್ತು ಬೆಂಗಳೂರು ಮಹಾನಗರದ ಅಭಿವೃದ್ಧಿಗೆ ಶ್ರಮಿಸಿದ ಮಹಾಚೇತನದ ಆದರ್ಶ ಗುಣಗಳು ನಮ್ಮೆಲ್ಲರಿಗೆ ಸ್ಪೂರ್ತಿಯಾಗಲಿ..
20/04/2026
|| ಂತಿಯ_ಶುಭಾಶಯಗಳು||
|| 'ದಯವಿಲ್ಲದ ಧರ್ಮವದಾವುದಯ್ಯ,
ದಯವೇ ಧರ್ಮದ ಮೂಲವಯ್ಯ||
ಎಂದು ಸಾರಿ, ವಚನ ಸಾಹಿತ್ಯಕ್ಕೆ ಚಳುವಳಿಯ ರೂಪ ಕೊಟ್ಟು ಸಾಮಾಜಿಕ ತಾರತಮ್ಯ, ಜಾತಿ ವ್ಯವಸ್ಥೆ, ಶೋಷಣೆ, ಮೂಢನಂಬಿಕೆಯ ವಿರುದ್ಧ ಸಮರ ಸಾರಿದ, ಶ್ರೇಷ್ಠ ಶಿವಶರಣ, ಕ್ರಾಂತಿಯೋಗಿ, ಬಸವಣ್ಣನವರ ತತ್ವಾದರ್ಶಗಳು ಇಂದಿಗೆ ಅತ್ಯಂತ ಪ್ರಸ್ತುತ.
(R)
18/04/2026
|| #ವಿಶ್ವ_ಗುರು #ಕಾಯಕಯೋಗಿ #ಕ್ರಾಂತಿಕಾರಿ #ಬಸವಣ್ಣನವರಿಗೆ ಸರ್ಕಾರಿ ಮಟ್ಟದಲ್ಲಿ ಸಲ್ಲಬೇಕಾದ ಗೌರವದ ಕುರಿತು #ಸುವರ್ಣ_ಕರ್ನಾಟಕ_ವೀರಶೈವಲಿಂಗಾಯತ_ಮಹಾಸಭಾ ಒತ್ತಾಯಿಸುತ್ತದೆ !
*ಮನವಿಯ ಮುಖ್ಯ ಅಂಶಗಳು:*
1.*ಹಿನ್ನೆಲೆ*: ಕರ್ನಾಟಕ ಸರ್ಕಾರ ಬಸವಣ್ಣನವರನ್ನು ಈಗಾಗಲೇ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ, ಆದರೆ ಅದು ಘೋಷಣೆಗೆ ಮಾತ್ರ ಸೀಮಿತವಾಗಿದೆ.
2.*ರಾಜ್ಯ ಸರ್ಕಾರಕ್ಕೆ ಬೇಡಿಕೆ*: ಮುಂಬರುವ ಬಸವ ಜಯಂತಿಯಿಂದ ಪ್ರತಿ ವರ್ಷ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲಾ ಕಾಲೇಜುಗಳಲ್ಲಿ ಬಸವಣ್ಣನವರ ವಚನ ಸಾಹಿತ್ಯ ಮಕ್ಕಳಿಗೆ ಪರಿಚಯಿಸುವಂತಹ ಆಚರಣೆಗೆ ಮುಂದಾಗಬೇಕು
3.*ಕೇಂದ್ರ ಸರ್ಕಾರಕ್ಕೆ ಆಗ್ರಹ*: ಭಾರತ ಸರ್ಕಾರದ ವತಿಯಿಂದ ಬಸವ ಜಯಂತಿ ಆಚರಣೆ ಮಾಡಬೇಕು.
"ಸಾಂಸ್ಕೃತಿಕ ನಾಯಕ ಎನ್ನುವುದು ಘೋಷಣೆಗೆ ಸೀಮಿತ ವಾಗದೆ".
ಸಾಂಸ್ಕೃತಿಕ ನಾಯಕ ಸ್ಥಾನಮಾನಕ್ಕೆ ಅನುಷ್ಠಾನದ ರೂಪ ಕೊಡಬೇಕು ಎಂಬುದು ಸುವರ್ಣ ಕರ್ನಾಟಕ ವೀರಶೈವ ಲಿಂಗಾಯತ ಮಹಾಸಭಾ ಆಗ್ರಹವಾಗಿದೆ.
ಜೊತೆಗೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಬಸವ ಜಯಂತಿ ಆಚರಣೆ ಮಾಡಬೇಕಾಗಿದೆ. ಸಂಸತ್ತಿನಲ್ಲಿ ಬಸವಣ್ಣನವರ ಪ್ರತಿಮೆ ಇದೆ, ಸಂವಿಧಾನದ ಪೀಠಿಕೆಯಲ್ಲಿ ಸಮಾನತೆ, ಭ್ರಾತೃತ್ವ ಇವೆಲ್ಲ ಬಸವ ತತ್ವದ ಪ್ರತಿಧ್ವನಿ. ಹೀಗಾಗಿ ರಾಷ್ಟ್ರೀಯ ಮಟ್ಟದ ಆಚರಣೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುತ್ತೇವೆ.
ಇಂತಿ,
ಸುವರ್ಣ ಕರ್ನಾಟಕ ವೀರಶೈವಲಿಂಗಾಯತ ಮಹಾಸಭಾ (ರಿ)
Daily Highlight Highlight Highlight (R)
Mohankumar_Basavaraju
16/04/2026
|| ಬಸವೇಶ್ವರನಗರದಲ್ಲಿ ಬಸವ ಜಯಂತಿ ಮಹೋತ್ಸವ - 2026: ಬಸವ ಭಕ್ತಿಯ ಮಹಾಸಂಗಮ ||
ಐಕ್ಯತೆಯ ಸಂಕೇತ: ನಾಯಕರ ಮತ್ತು ಸಂಸ್ಥೆಗಳ ಸಹಭಾಗಿತ್ವ
ಈ ಬಾರಿಯ ಮೆರವಣಿಗೆಯಲ್ಲಿ ಬಸವಣ್ಣನವರ ತತ್ವದಡಿ ಎಲ್ಲರೂ ಒಂದಾಗಿದ್ದಾರೆ:
ಸಮುದಾಯದ ನಾಯಕರು: ನಾಡಿನ ವಿವಿಧ ಮಠಾಧೀಶರು, ಹಿರಿಯ ಮುಖಂಡರು ಮತ್ತು ಸಮಾಜದ ಗಣ್ಯರು ಮೆರವಣಿಗೆಯ ಮುಂಚೂಣಿಯಲ್ಲಿರಲಿದ್ದಾರೆ.
ವಿವಿಧ ಸಂಘ-ಸಂಸ್ಥೆಗಳು: ಸ್ಥಳೀಯ ವೀರಶೈವ ಲಿಂಗಾಯತ ಸಂಘಟನೆಗಳು, ಪ್ರಭಾವಿ ನಾಯಕರು ಮತ್ತು ಮುಖಂಡರು,ಸ್ತ್ರೀ ಶಕ್ತಿ ಸಂಘಗಳು, ಯುವಕ ಮಂಡಳಿಗಳು ಮತ್ತು ನಾಗರಿಕ ಕ್ಷೇಮಾಭಿವೃದ್ಧಿ ಸಂಘಗಳ ಬಳಗದೊಂದಿಗೆ ಕೈಜೋಡಿಸಿವೆ.
ಜನಸಾಮಾನ್ಯರ ಸಹಭಾಗಿತ್ವ: ಶಾಲಾ-ಕಾಲೇಜು ವಿದ್ಯಾರ್ಥಿಗಳು, ಉದ್ಯಮಿಗಳು ಮತ್ತು ಸಾವಿರಾರು ಭಕ್ತಾದಿಗಳು ಸ್ವಯಂಪ್ರೇರಿತರಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.
ಸಾಂಸ್ಕೃತಿಕ ಮತ್ತು ಅಧ್ಯಾತ್ಮಿಕ ಮೆರುಗು
ದಿನಾಂಕ: ಏಪ್ರಿಲ್ 20, ಸೋಮವಾರ 2026
ಸ್ಥಳ: ಬಸವೇಶ್ವರನಗರ, ಬೆಂಗಳೂರು
ಜಗಜ್ಯೋತಿ ಬಸವಣ್ಣನವರ ಮತ್ತು ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿಯವರ ಭವ್ಯ ಭಾವಚಿತ್ರಗಳ ಮೆರವಣಿಗೆಯು ಕಣ್ಮನ ಸೆಳೆಯಲಿದೆ. ಮೆರವಣಿಗೆಯುದ್ದಕ್ಕೂ:
ಕಲಾತಂಡಗಳ ವೈಭವ: ಡೊಳ್ಳು ಕುಣಿತ, ವೀರಗಾಸೆ, ಕಂಸಾಳೆ ಮತ್ತು ನಂದಿಧ್ವಜ ಪ್ರದರ್ಶನಗಳು ನಮ್ಮ ಸಂಸ್ಕೃತಿಯ ಶ್ರೀಮಂತಿಕೆಯನ್ನು ಬಿಂಬಿಸಲಿವೆ.
ಶರಣ ಘೋಷಣೆ: ಸಹಸ್ರಾರು ಕಂಠಗಳಿಂದ ಮೊಳಗುವ ಶರಣರ ವಚನಗಳು ಮತ್ತು ಜೈಕಾರಗಳು ಬಸವೇಶ್ವರನಗರದಾದ್ಯಂತ ಭಕ್ತಿಯ ಅಲೆ ಎಬ್ಬಿಸಲಿವೆ.
"ಎಲ್ಲರೂ ನಮ್ಮವರು, ನಾವೆಲ್ಲರೂ ಒಂದೇ" ಎಂಬ ಶರಣರ ಸಂದೇಶವನ್ನು ಸಾರಲು ಇದು ಸಕಾಲ. ವಿವಿಧ ಸಂಘಟನೆಗಳ ಈ ಒಕ್ಕೂಟವು ನಮ್ಮ ಬಡಾವಣೆಯ ಒಗ್ಗಟ್ಟನ್ನು ಪ್ರದರ್ಶಿಸಲಿದೆ.
ನಿಮ್ಮ ಉಪಸ್ಥಿತಿ ಅನಿವಾರ್ಯ
ಬೆಂಗಳೂರು ನಗರದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮಟ್ಟದ ಈ ಮೆರವಣಿಗೆಗೆ ನೀವು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ನಾವು ವಿನಂತಿಸುತ್ತೇವೆ. ನಿಮ್ಮ ಸ್ನೇಹಿತರು, ಕುಟುಂಬದವರು ಮತ್ತು ನೆರೆಹೊರೆಯವರನ್ನು ಕರೆತಂದು, ಈ ಸಾಂಸ್ಕೃತಿಕ ಹಬ್ಬದಲ್ಲಿ ಎಲ್ಲರೂ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ,
14/04/2026
ಸಾಮಾಜಿಕ ಸಮಾನತೆ, ಅಸ್ಪೃಶ್ಯತೆ ನಿವಾರಣೆಗೆ ಹೋರಾಡಿದ ಮಹಾನ್ ಚೇತನ, ಭಾರತರತ್ನ , ಸಂವಿಧಾನ ಶಿಲ್ಪಿ ದಿವಂಗತ ಡಾ. #ಬಿ_ಆರ್_ಅಂಬೇಡ್ಕರ್ ಅವರ ಜಯಂತಿಯಂದು ನಮ್ಮ ಶತಶತ ನಮನಗಳು. ಅವರು ನಾಡಿಗೆ ನೀಡಿದ ಕೊಡುಗೆಯನ್ನು ನಾವೆಲ್ಲರೂ ಸ್ಮರಿಸೋಣ.