ಗಂಧದಗುಡಿ ಬಳಗ ಕರ್ನಾಟಕ - ರಿ

ಗಂಧದಗುಡಿ ಬಳಗ ಕರ್ನಾಟಕ - ರಿ

Share

ದುಸ್ಥಿತಿಯಲ್ಲಿರುವ ಸರ್ಕಾರಿ ಕನ್ನಡ ಶಾಲೆ,ಮಕ್ಕಳಿಗೆ ದಾನಿಗಳ ಸಹಕಾರದಲ್ಲಿ ಅಗತ್ಯ ಶೈಕ್ಷಣಿಕ ಸಾಮಾಗ್ರಿಗಳ‌ ಕೊಡುಗೆ💛❤️

22/03/2026

ಗಂಧದಗುಡಿ ಬಳಗ ಕರ್ನಾಟಕ - ರಿ ಸಾಮಾಜಿಕ ಸೇವಾ ತಂಡವು
ಕಳೆದ ವರ್ಷ ಮಾರ್ಚ್ 26, 2025 ರಿಂದ
ಕರ್ನಾಟಕ ರತ್ನ ಶ್ರೀ ಡಾ. ಪುನೀತ್ ರಾಜ್ ಕುಮಾರ್ ಅವರ ಗೌರವಾರ್ಥವಾಗಿ
“ಹ್ಯಾಪಿ ಟು ಹೆಲ್ಪ್” ಘಟಕವನ್ನು ಪ್ರಾರಂಭಿಸಿದೆ.
ಈ ಘಟಕದ ಮೂಲಕ
ಉಡುಪಿ, ದಕ್ಷಿಣ ಕನ್ನಡ ಮತ್ತು ಮೈಸೂರು ಜಿಲ್ಲೆಗಳಲ್ಲಿ
ಸಹಾಯದ ಅವಶ್ಯಕತೆ ಇರುವ ಮಕ್ಕಳು, ಯುವಕರು ಹಾಗೂ ಯುವತಿಯರಿಗೆ
ಶೈಕ್ಷಣಿಕ ಶುಲ್ಕ
ವೈದ್ಯಕೀಯ ಚಿಕಿತ್ಸಾ ನೆರವು
ಔಷಧಿಗಳ ಸಹಾಯ
ಮದುವೆ ಪ್ರೋತ್ಸಾಹಧನ
ಪುಸ್ತಕಗಳ ವಿತರಣೆ
ಇತ್ಯಾದಿ ವಿವಿಧ ರೀತಿಯ ನೆರವುಗಳನ್ನು
ದಾನಿಗಳ ಸಹಕಾರದಿಂದ ತಲುಪಿಸಲಾಗಿದೆ.
ಇದುವರೆಗೆ ಒಟ್ಟು 18 ಯಶಸ್ವಿ ಅಭಿಯಾನಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ.
🙏 ನಮ್ಮ ದಾನಿಗಳ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಕೃತಜ್ಞತೆಗಳು 💛❤️
ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಅಗತ್ಯವಿರುವವರಿಗೆ
ಪ್ರಾಮಾಣಿಕವಾಗಿ ಹಾಗೂ ಪಾರದರ್ಶಕವಾಗಿ ಸೇವೆಯನ್ನು ವಿಸ್ತರಿಸುತ್ತೇವೆ.
🤝 ಆಸಕ್ತಿ ಇರುವವರು ನಮ್ಮೊಂದಿಗೆ ಕೈಜೋಡಿಸಲು ಸ್ವಾಗತ




08/03/2026

#ಅಭಿಯಾನ_೨೮
ಗಂಧದಗುಡಿ ಬಳಗ ಕರ್ನಾಟಕ - ರಿ ಸಾಮಾಜಿಕ ಸೇವಾ ತಂಡದಿಂದ ಕರ್ನಾಟಕ ರತ್ನ ಶ್ರೀ ಡಾ ಪುನೀತ್ ರಾಜ್ ಕುಮಾರ್ ಅವರ ಗೌರವಾರ್ಥ ನಡೆಸುತ್ತಿರುವ ನಮ್ಮ ಶಾಲೆ ನಮ್ಮ ಕೊಡುಗೆ ಅಭಿಯಾನದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ,ಕಟ್ಟಿಗೆ ಹಳ್ಳ ಶಿಕಾರಿಪುರ ತಾಲ್ಲೂಕು ಶಿವಮೊಗ್ಗ ಜಿಲ್ಲೆ .

#ಶಾಲೆಯ_ಹಿನ್ನೆಲೆ.
೧೯೬೭ರಿಂದ ಪ್ರಾರಂಭವಾದ ಈ ಶಾಲೆಯು ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ್ದು ಇಂದು ಮಕ್ಕಳ ದಾಖಲಾತಿ ಕಡಿಮೆ ಆಗುತ್ತಾ, ಕನಿಷ್ಠ ಮೂಲಭೂತ ಸೌಕರ್ಯಗಳ ಕೊರತೆಯಿಂದ ದುಸ್ಥಿತಿಗೆ ತಲುಪಿದೆ..

ಈ ಅಭಿಯಾನದ ಎಲ್ಲಾ ಸಾಮಗ್ರಿಗಳನ್ನು ಕೊಂಡು ಕೊಳ್ಳಲು ಬೇಕಾಗಿರುವ ಒಟ್ಟು ಸಹಾಯಧನ ರೂ೧೩೫೭೭೦/-
ಈಗ ಸಂಗ್ರಹ ಆಗಿರುವ ಸಹಾಯಧನ ರೂ೭೦೬೦೧/_

ಇನ್ನು ಬೇಕಾಗಿರುವ ಸಹಾಯಧನ ರೂ೬೫೧೬೯/- ಸಹೃದಯಿ ದಾನಿಯವರು ನಿಮ್ಮ ಇಚ್ಚಾನುಸಾರ ಸಹಾಯಧನವನ್ನು ಗಂಧದಗುಡಿ ಬಳಗ ರಿ ಕರ್ನಾಟಕ ಸಾಮಾಜಿಕ ಸೇವಾ ತಂಡದ ಅಧಿಕೃತ ಬ್ಯಾಂಕ್ ಖಾತೆಗೆ ಅಥವಾ ಯುಪಿಐ ಸಂಖ್ಯೆ 9743190122ಗೆ ತಲುಪಿಸಿ ಕೊಡಿ ಹಾಗೂ ಕೈಜೋಡಿಸಿ 🤝🙏💛❤️

#ಅಭಿಯಾನ_ನಡೆಯುವ_ಬಗೆ_ಹೀಗೆ👇

ಈ ಅಭಿಯಾನವು ನಾಲ್ಕು ಹಂತಗಳಲ್ಲಿ ನಡೆಯಲಿದೆ.
📚 ಮೊದಲ ಹಂತ:
೨೦೨೬–೨೦೨೭ರ ಶೈಕ್ಷಣಿಕ ವರ್ಷದಲ್ಲಿ ಶಾಲೆಯ ಈಗಿರುವ ಮಕ್ಕಳ ದಾಖಲಾತಿ ಸಂಖ್ಯೆ ೪೫.
ಇದನ್ನು ೮೦ಕ್ಕೆ ಏರಿಸುವ ಉದ್ದೇಶದಿಂದ ದಾಖಲಾತಿ ಅಭಿಯಾನ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.

🎨 ಎರಡನೇ ಹಂತ:
ಅಗಸ್ಟ್ ತಿಂಗಳ ಕೊನೆಯ ವಾರದಲ್ಲಿ ದಾನಿಗಳು ತಲುಪಿಸಿದ ಸಹಾಯಧನದಲ್ಲಿ
ರೂ ೨೫,೦೦೦/- ಮೌಲ್ಯದ ಪೇಂಟ್ ಸಾಮಗ್ರಿಗಳನ್ನು ಖರೀದಿಸಿ ಶಾಲೆಗೆ ಬಣ್ಣ ಬಳಿಸುವ ಕಾರ್ಯ ನಡೆಯಲಿದೆ.

🖌 ಮೂರನೇ ಹಂತ:
ನವೆಂಬರ್ ತಿಂಗಳ ಮೂರನೇ ವಾರದಲ್ಲಿ
ರೂ ೩೫,೦೦೦/- ವೆಚ್ಚದಲ್ಲಿ ಶಾಲೆಗೆ ಬಣ್ಣ ಬಳಿಸುವ ಕಾರ್ಯ ಮುಂದುವರಿಸಲಾಗುತ್ತದೆ.
🎨 ನಾಲ್ಕನೇ ಹಂತ (ಅಂತಿಮ ಹಂತ):
೨೦೨೭ರ ಫೆಬ್ರವರಿ ತಿಂಗಳ ಎರಡನೇ ವಾರದಲ್ಲಿ
ರೂ ೩೫,೦೦೦/- ಮೌಲ್ಯದ ಬಣ್ಣ ಹಾಗೂ
ರೂ ೧೫,೦೦೦/- ಚಿತ್ರ ಕಲಾವಿದರಿಗೆ ಪ್ರೋತ್ಸಾಹ ಧನ ನೀಡಿ
ಶಾಲೆಗೆ ಸುಂದರ ಚಿತ್ರಗಳು ಮತ್ತು ಹೊಸ ರೂಪ ನೀಡಲಾಗುತ್ತದೆ.
ಇನ್ನು ರೂ೧೫೭೭೦/-ರಲ್ಲಿ ಅಗತ್ಯ ಶೈಕ್ಷಣಿಕ ಸಾಮಾಗ್ರಿಗಳನ್ನು ಕೊಂಡು ಕೊಂಡು ತಲುಪಿಸುತ್ತೇವೆ.

✨ #ಶಿಕ್ಷಣ_ಬೆಳೆಯಲಿ_ಸರ್ಕಾರಿ_ಕನ್ನಡ_ಶಾಲೆಗಳು__ಉಳಿಯಲಿ ✨
ಗಂಧದಗುಡಿ ಬಳಗ® ಕರ್ನಾಟಕ ಸಾಮಾಜಿಕ ಸೇವಾ ತಂಡ

#ನಮಗೆ_ಸಹಾಯ_ಮಾಡುವ_ದಾನಿಗಳ_ಒಂದು_ಮುಖ್ಯವಾದ_ಬೇಡಿಕೆ:👇

ಸರ್ಕಾರಿ ಕನ್ನಡ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಬೇಕು ಎಂಬುದು.
ಸರ್ಕಾರಿ ಶಾಲೆಗಳು ಉಳಿಯಬೇಕಾದರೆ, ನಮ್ಮ ಮಕ್ಕಳು ಅಲ್ಲೇ ಓದಬೇಕು.
ಶಿಕ್ಷಣದ ಬೆಳಕು ಹರಡುವುದು ನಮ್ಮೆಲ್ಲರ ಜವಾಬ್ದಾರಿ.
“ನಮ್ಮ ಶಾಲೆ – ನಮ್ಮ ಕೊಡುಗೆ” ಅಭಿಯಾನ

📚 ಸರ್ಕಾರಿ ಕನ್ನಡ ಶಾಲೆಗಳು ಬೆಳೆಯಲಿ
📚 ಮಕ್ಕಳ ದಾಖಲಾತಿ ಹೆಚ್ಚಲಿ
#ಗಂಧದಗುಡಿಬಳಗ
#ಸರ್ಕಾರಿಕನ್ನಡಶಾಲೆ
#ನಮ್ಮಶಾಲೆನಮ್ಮಕೊಡುಗೆ
#ಶಿಕ್ಷಣಸೇವೆ
#ಮಕ್ಕಳಭವಿಷ್ಯ

#ಶೇರ್_ಮಾಡಿ.

05/03/2026

ಕರ್ನಾಟಕ ರತ್ನ ಶ್ರೀ ಡಾ ಪುನೀತ್ ರಾಜ್ ಕುಮಾರ್ ಅವರ ಗೌರವಾರ್ಥ
ಗಂಧದಗುಡಿ ಬಳಗ ರಿ ಕರ್ನಾಟಕ ಸಾಮಾಜಿಕ ಸೇವಾ ತಂಡದಿಂದ “ನೆರವು ನೀಡುವ ಸಡಗರ ಅಭಿಯಾನ – ೧೭”ರ ಅಂಗವಾಗಿ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಆಲಹಳ್ಳಿ ಗ್ರಾಮದ ಸರ್ಕಾರಿ ಕನ್ನಡ ಶಾಲೆಯ ಗ್ರಂಥಾಲಯಕ್ಕೆ ದಾನಿಗಳ ಸಹಕಾರದಿಂದ ೩೫ ಉಪಯುಕ್ತ ಪುಸ್ತಕಗಳನ್ನು ಸಂಗ್ರಹಿಸಿ ತಲುಪಿಸಿ ನೀಡುತ್ತಿದ್ದೇವೆ.

ಈ ಪುಸ್ತಕಗಳು ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ಮತ್ತು ಜ್ಞಾನ ವೃದ್ಧಿಗೆ ಸಹಾಯಕವಾಗಲಿವೆ.
ಗಂಧದಗುಡಿ ಬಳಗ ಕರ್ನಾಟಕ - ರಿ
#ಗಂಧದಗುಡಿಬಳಗ
#ಸಾಮಾಜಿಕಸೇವೆ
#ಸಡಗರಅಭಿಯಾನ17
#ನಮ್ಮಶಾಲೆನಮ್ಮಕೊಡುಗೆ
#ಪುಸ್ತಕದಾನ
#ಶಿಕ್ಷಣಸೇವೆ
#ಸರ್ಕಾರಿಕನ್ನಡಶಾಲೆ
#ಮಕ್ಕಳಭವಿಷ್ಯ
#ಗ್ರಂಥಾಲಯಅಭಿವೃದ್ಧಿ
ರೇಣುಕ ವೈಕುಂಠಯ್ಯ

05/03/2026

ಗಂಧದಗುಡಿ ಬಳಗ (ರಿ) ಕರ್ನಾಟಕ ಸಾಮಾಜಿಕ ಸೇವಾ ತಂಡ ಹುಟ್ಟಿ ೩ ವರ್ಷವಾಗಿದೆ...💛❤️

ಈ ಮೂರು ವರ್ಷಗಳ ಪಯಣದಲ್ಲಿ ಕರ್ನಾಟಕ ರತ್ನ ಶ್ರೀ ಡಾ ಪುನೀತ್ ರಾಜಕುಮಾರ್ ಗೌರವಾರ್ಥ ಕರ್ನಾಟಕ ರಾಜ್ಯಾದ್ಯಂತ ಒಟ್ಟು ೨೫(ಹಾಸನ, ಚಿಕ್ಕಮಗಳೂರು , ದಾವಣಗೆರೆ, ಬೀದರ್, ಚಿತ್ರದುರ್ಗ, ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ,ಉಡುಪಿ, ವಿಜಯನಗರ, ಬೆಂಗಳೂರು ನಗರ)ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆ ಮತ್ತು ಮಕ್ಕಳಿಗೆ ದಾನಿಗಳಿಂದ ಸಹಾಯಧನ ಪಡೆದು ಅಗತ್ಯ ಶೈಕ್ಷಣಿಕ ಮತ್ತು ಕ್ರೀಡಾ ಸಾಮಾಗ್ರಿಗಳನ್ನು ತಲುಪಿಸಿದ್ದೇವೆ.

ದಾವಣಗೆರೆ,ಹಾಸನ, ಚಿಕ್ಕಮಗಳೂರು ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಇರುವ ಒಟ್ಟು ೩ ಸರ್ಕಾರಿ ಕನ್ನಡ ಶಾಲೆಗಳಿಗೆ ಬಣ್ಣ ಬಳಿದು ಚಿತ್ರಗಳನ್ನು ಬಿಡಿಸಿ ಹೊಸ ರೂಪ ನೀಡಿದ್ದೇವೆ.
ಹೆಣ್ಣು ಮಕ್ಕಳಿಗಾಗಿ 3 ಹೊಸ ಶೌಚಾಲಯವನ್ನು ಸರ್ಕಾರಿ ಕನ್ನಡ ಶಾಲೆ ಹುಣಸೂರು ತಾಲೂಕಿನಲ್ಲಿ ಕಟ್ಟಿಸಿಕೊಟ್ಟಿದ್ದೇವೆ..

ಈ ಶೌಚಾಲಯ ನಿರ್ಮಾಣ ಆದ ಮೇಲೆ ಮಕ್ಕಳ ದಾಖಲಾತಿ ಹೆಚ್ಚಾಗಿದೆ, ಸ್ವತಃ ಶಾಲೆಯ ಪ್ರಾಂಶುಪಾಲರು ತಿಳಿಸಿದ್ದಾರೆ...

ಸರ್ಕಾರಿ ಕನ್ನಡ ಶಾಲೆಗಳಲ್ಲಿ ೨೫೦೦+ಉಪಯುಕ್ತ ಮಕ್ಕಳು ಓದುವ ಪುಸ್ತಕಗಳನ್ನು ಶಾಲೆಯ ಗ್ರಂಥಾಲಯಕ್ಕೆ ದಾನಿಗಳಿಂದ ಸಂಗ್ರಹಿಸಿ ತಲುಪಿಸಿ ಕೊಟ್ಟಿದ್ದೇವೆ..

ಮೈಸೂರು ಜಿಲ್ಲೆಯ,ರಾಜೀವ್ ನಗರ ಎರಡನೇಯ ಹಂತದಲ್ಲಿ ಕನ್ನಡ ಪ್ರೇಮಿ ಸೈಯದ್ ಇಸಾಕ್ ರವರು ನಡೆಸುವ ಖಾಸಗಿ ಗ್ರಂಥಾಲಯಕ್ಕೆ ದಾನಿಗಳಿಂದ ಪುಸ್ತಕ ಮತ್ತು ರೂ೧,೫೦,೦೦೦/- ಸಹಾಯಧನದ ನೆರವು ಪಡೆದು ಒಟ್ಟು ೧೦೫೭+ಉಪಯುಕ್ತ ಪುಸ್ತಕ ಮತ್ತು ಪುಸ್ತಕಗಳನ್ನು ಇಟ್ಟುಕೊಳ್ಳಲು ರೂ೩೨,೦೦೦/-ಸ್ಟೀಲ್ ಕಪಾಟುಗಳನ್ನು ತಲುಪಿಸಿದ್ದೇವೆ.

ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಮುಸ್ಲಿಂ ಸಮುದಾಯದ ಬಡ ಕುಟುಂಬದ ಯುವಕನೊಬ್ಬನಿಗೆ ಶೈಕ್ಷಣಿಕ ಅಭ್ಯಾಸಕ್ಕಾಗಿ ರೂ೩೫,೦೦೦/- ಮೌಲ್ಯದ ಗಣಕಯಂತ್ರ ತಲುಪಿಸಿಕೊಟ್ಟಿದ್ದೇವೆ.

ಇದಲ್ಲದೇ ಮಾರ್ಚ್ ೨೬,೨೦೨೫ರಿಂದ ಹ್ಯಾಪಿ ಟು ಹೆಲ್ಪ್ ಎಂಬ ಹೊಸ ಘಟಕ( ಶೈಕ್ಷಣಿಕ ಶುಲ್ಕ ಪಾವತಿಸಲು ಕಷ್ಟಪಡುವ ಬಡ ಕುಟುಂಬದ ವಿದ್ಯಾರ್ಥಿಗಳಿಗೆ,ವಿದ್ಯಾರ್ಥಿನಿಯರಿಗೆ) ದಾನಿಗಳಿಂದ ನೆರವು ಪಡೆದು ತಲುಪಿಸಲು ಪ್ರಾರಂಭಿಸಿದ್ದು ಒಟ್ಟು ೧೫ಯಶಸ್ವಿ ಅಭಿಯಾನಗಳನ್ನು ಮಾಡಿದ್ದೇವೆ..

ಇದುವರೆಗೆ ಒಟ್ಟು ೫ ಪ್ರಶಸ್ತಿಗಳನ್ನು ವಿವಿಧ ಸಂಘ ಸಂಸ್ಥೆಗಳಿಂದ (ನಮ್ಮ ಪಾರದರ್ಶಕ ಮತ್ತು ಪ್ರಾಮಾಣಿಕ) ಸೇವೆಯನ್ನು ಗುರುತಿಸಿ ಪಡೆದುಕೊಂಡಿದ್ದೆವೆ.

ಈ ಎಲ್ಲಾ ಅಭಿಯಾನಗಳಿಗೆ ನೆರವಾಗಿರುವ ಸಹೃದಯಿ ದಾನಿಯವರಿಗೆ ಹೃತ್ಪೂರ್ವಕ ಧನ್ಯವಾದಗಳು 💛 ❤️
ಜೊತೆಗೆ ನಿಂತಿರುವ ತಂಡದ ಎಲ್ಲಾ ಸದಸ್ಯರಿಗೆ ಹೃತ್ಪೂರ್ವಕ ಧನ್ಯವಾದಗಳು 💛❤️

ಸಹಾಯದಾನಿಗಳಾಗಿ/ ಸ್ವಯಂಸೇವಕರಾಗಿ ನಮ್ಮೊಡನೆ ಕೈಜೋಡಿಸಲು ನಿಮಗೆ ಇಚ್ಚೆ ಇದ್ದರೆ 9743190122/8861052632ಗೆ ಕರೆ ಮಾಡಿ.

ಅಸಾಧ್ಯವಾದುದು ಯಾವುದು ಇಲ್ಲ ಮನಸಿದ್ದರೆ ಮಾರ್ಗ..

#ಗಂಧದಗುಡಿಬಳಗ
#ನಮ್ಮಶಾಲೆನಮ್ಮಕೊಡುಗೆಅಭಿಯಾನ

05/03/2026

#ಸಾರ್ವಜನಿಕ_ಪ್ರಕಟಣೆ.

ಸರ್ಕಾರಿ ಕನ್ನಡ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸುವ ಸಲುವಾಗಿ ಸಹಾಯ ಮಾಡುತ್ತಿರುವ ದಾನಿಗಳು ಹಾಗೂ ಗಂಧದಗುಡಿ ಬಳಗ ಕರ್ನಾಟಕ - ರಿ ಸಾಮಾಜಿಕ ಸೇವಾ ತಂಡದಿಂದ ನಮ್ಮ ಮುಂದಿನ ಎಲ್ಲಾ ಅಭಿಯಾನಗಳಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ.

Photos from ಗಂಧದಗುಡಿ ಬಳಗ ಕರ್ನಾಟಕ - ರಿ's post 25/02/2026

ಕರ್ನಾಟಕ ರತ್ನ ಶ್ರೀ ಡಾ ಪುನೀತ್ ರಾಜ್ ಕುಮಾರ್ ಅವರ ಗೌರವಾರ್ಥ ಗಂಧದಗುಡಿ ಬಳಗ ರಿ ಕರ್ನಾಟಕ ಸಾಮಾಜಿಕ ಸೇವಾ ತಂಡದ ಹ್ಯಾಪಿ ಟು ಹೆಲ್ಪ್ ಅಭಿಯಾನ -೧೪
ಉಡುಪಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಇರುವ ೬ ಸರ್ಕಾರಿ ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಶಿಕ್ಷಣ ಪಡೆಯುವ ಬಡ ಕುಟುಂಬದ ಕೂಲಿ ಕಾರ್ಮಿಕರ ಮಕ್ಕಳಿಗೆ ಮೊದಲ ಹಂತದ ೪೦೦ ಬರೆಯುವ ಪುಸ್ತಕಗಳನ್ನು ಕೊಂಡು ಕೊಳ್ಳಲು ಸಹಾಯದಾನಿಗಳು ಸಹಾಯಧನ ತಲುಪಿಸಿ ಕೊಟ್ಟಿದ್ದಾರೆ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು 💛❤️
ಇನ್ನು ಈ ಅಭಿಯಾನಕ್ಕೆ ಬೆಂಬಲವಾಗಿ ನಿಂತು ಪ್ರೇರಣೆ ಮಾಡಿದ ಮೈಸೂರು ಜಿಲ್ಲೆಯ ಹೆಬ್ಬಾಳ ಪೋಲೀಸ್ ಠಾಣೆಯ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಶ್ರೀ ಟೈಗರ್ ರವಿ ಸರ್ ರವರಿಗೆ ಹೃತ್ಪೂರ್ವಕ ಕೃತಜ್ಞತೆಗಳು 🙏💛❤️
ಅಭಿಯಾನದ ಪೋಸ್ಟರ್ ಪ್ರತಿನಿತ್ಯ ಪ್ರಚಾರ ಮಾಡಿದ ತಂಡದ ಎಲ್ಲಾ ಸದಸ್ಯರಿಗೆ ಹೃತ್ಪೂರ್ವಕ ಧನ್ಯವಾದಗಳು 🙏💛❤️

ಮಾರ್ಚ್ ೧೬,೨೦೨೬ರ ಒಳಗೆ ಮಕ್ಕಳಿಗೆ ತಲುಪಿಸುತ್ತೇವೆ..
ಇದೇ ಮಕ್ಕಳಿಗೆ ಎರಡನೇಯ ಹಂತದ ೬೦೦ಪುಸ್ತಕಗಳನ್ನು ಜುಲೈ ತಿಂಗಳಿನಲ್ಲಿ ತಲುಪಿಸುತ್ತೇವೆ..










18/02/2026

ಹಸಿವಿನ ಮೌಲ್ಯ, ದಾನ ಧರ್ಮದ ಮಹತ್ವ ಸಾರುವ ಪವಿತ್ರ ರಂಜಾನ್ ಎಲ್ಲರಿಗೂ ಒಳಿತನ್ನು ತರಲಿ. ಸರ್ವರಿಗೂ ರಂಜಾನ್ ಶುಭಾಶಯಗಳು.

#ಗಂಧದಗುಡಿಬಳಗ

18/02/2026

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯ,ಉಪ್ಪಿನಂಗಡಿ, ಬೆಳ್ತಂಗಡಿ, ವಿಟ್ಲ ಹಾಗೂ ಮಂಗಳೂರು ತಾಲ್ಲೂಕಿನಲ್ಲಿ ಇರುವ ಸರ್ಕಾರಿ ಕನ್ನಡ ಶಾಲೆಗಳ ಅಗತ್ಯ ಶೈಕ್ಷಣಿಕ , ಮೂಲಭೂತ ಸೌಕರ್ಯಗಳ ಸಹಾಯದ ಮನವಿ ಬಂದಿದ್ದು ಮೊದಲು ಶಾಸಕರ ಗಮನಕ್ಕೆ ತರುತ್ತೇವೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ನಂತರ ದಾನಿಗಳಿಂದ ನೆರವು ಪಡೆದು ತಲುಪಿಸಿ ಕೊಡುವ ಪ್ರಯತ್ನ ನಮ್ಮ ಗಂಧದಗುಡಿ ಬಳಗ ರಿ ಕರ್ನಾಟಕ ಹಾಗೂ ಜೊತೆಗೂಡಿರುವ ಇತರೇ ಸಂಘಸಂಸ್ಥೆಗಳು ಮಾಡುತ್ತೇವೆ.
#ಗಂಧದಗುಡಿಬಳಗ

Photos from ಗಂಧದಗುಡಿ ಬಳಗ ಕರ್ನಾಟಕ - ರಿ's post 18/02/2026

ಕರ್ನಾಟಕದ ಗಾಂಧಿ ಎಂದೇ ಪ್ರಸಿದ್ಧರಾಗಿರುವ ಅಪ್ರತಿಮ ಕನ್ನಡಿಗ ಹರ್ಡೇಕರ್ ಮಂಜಪ್ಪ ನವರು..
ಇಂಥಹ ಮಹಾನ್ ವ್ಯಕ್ತಿಗಳ ಬಗ್ಗೆ ನೀವು ತಿಳಿದು ನಿಮ್ಮ ಮಕ್ಕಳಿಗೂ ತಿಳಿಸಿ
ಇಂದು ಇವರ ಜನುಮ ದಿನ, ಜನುಮ ದಿನದ ಶುಭಾಶಯಗಳು 💛❤️
#ನಮ್ಮಕನ್ನಡನಾಡಿನಮಹಾತ್ಮರು

Photos from ಗಂಧದಗುಡಿ ಬಳಗ ಕರ್ನಾಟಕ - ರಿ's post 17/02/2026

ಕರ್ನಾಟಕ ರತ್ನ ಶ್ರೀ ಡಾ ಪುನೀತ್ ರಾಜ್ ಕುಮಾರ್ (ಅಪ್ಪು ಸರ್)ರವರ ಹುಟ್ಟು ಹಬ್ಬದ ಗೌರವಾರ್ಥ ಗಂಧದಗುಡಿ ಬಳಗ ರಿ ಕರ್ನಾಟಕ ಸಾಮಾಜಿಕ ಸೇವಾ ತಂಡದ ಹ್ಯಾಪಿ ಟು ಹೆಲ್ಪ್ ಉಡುಪಿ ಜಿಲ್ಲಾ ಘಟಕದಿಂದ, ಉಡುಪಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಇರುವ ೬ ಸರ್ಕಾರಿ ಕನ್ನಡ ಶಾಲೆಗಳಲ್ಲಿ ಶಿಕ್ಷಣ ಪಡೆಯುವ ಬಡ ಕುಟುಂಬದ ಕೂಲಿ ಕಾರ್ಮಿಕರ ಮಕ್ಕಳಿಗೆ ಮೊದಲ ಹಂತದಲ್ಲಿ ೪೦೦ ಬರೆಯುವ ೨೦೦ ಪುಟದ ಪುಸ್ತಕಗಳನ್ನು ತಲುಪಿಸಿ ಕೊಡುತ್ತಿದ್ದೇವೆ, ಈ ಅಭಿಯಾನಕ್ಕೆ ನೆರವಾದ ದಾನಿಯವರಿಗೆ ಹೃತ್ಪೂರ್ವಕ ಕೃತಜ್ಞತೆಗಳು 💛❤️
ಇನ್ನು ಬೇಕಾಗಿರುವುದು 100 ಬರೆಯುವ ಪುಸ್ತಕಗಳು..
ಮಾರ್ಚ್ 16,2026ರರ ಒಳಗೆ ಸಹಾಯಧನ ತಲುಪಿಸಿ ಕೊಡಿ 🙏
ಹೃತ್ಪೂರ್ವಕ ಕೃತಜ್ಞತೆಗಳು

#ಗಂಧದಗುಡಿಬಳಗ


14/02/2026

ಸರ್ಕಾರಿ ಕನ್ನಡ ಶಾಲೆಗಳ ಅಭಿವೃದ್ಧಿಯಲ್ಲಿ ಹಳೆಯ ವಿದ್ಯಾರ್ಥಿಗಳ (Alumni) ಪಾತ್ರ ಬಹಳ ದೊಡ್ಡದು. ತಾವು ಕಲಿತ ಶಾಲೆಗೆ ಮರಳಿ ಕೊಡುಗೆ ನೀಡುವುದು ಕೇವಲ ಕರ್ತವ್ಯವಲ್ಲ, ಅದು ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಉಡುಗೊರೆ.
​ಹಳೆಯ ವಿದ್ಯಾರ್ಥಿಗಳು ಶಾಲೆಯ ಏಳಿಗೆಗೆ ಯಾವ ರೀತಿ ಸಹಕರಿಸಬಹುದು ಎಂಬ ಪ್ರಮುಖ ಅಂಶಗಳು ಇಲ್ಲಿವೆ:

​೧. ಮೂಲಸೌಕರ್ಯ ಅಭಿವೃದ್ಧಿ
​ಶಾಲೆಯ ಕಟ್ಟಡಗಳ ದುರಸ್ತಿ, ಬಣ್ಣ ಬಳಿಯುವುದು, ಶೌಚಾಲಯಗಳ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ ಅಥವಾ ಆಟದ ಮೈದಾನವನ್ನು ಸರಿಪಡಿಸಲು ಹಳೆಯ ವಿದ್ಯಾರ್ಥಿಗಳು ಆರ್ಥಿಕವಾಗಿ ಅಥವಾ ಶ್ರಮದಾನದ ಮೂಲಕ ನೆರವಾಗಬಹುದು.

​೨. ತಾಂತ್ರಿಕ ಮತ್ತು ಶೈಕ್ಷಣಿಕ ನೆರವು
​ಕಂಪ್ಯೂಟರ್ ಶಿಕ್ಷಣ: ಇಂದಿನ ಕಾಲಕ್ಕೆ ತಕ್ಕಂತೆ ಶಾಲೆಗೆ ಕಂಪ್ಯೂಟರ್, ಪ್ರೊಜೆಕ್ಟರ್ ಅಥವಾ ಇಂಟರ್ನೆಟ್ ಸೌಲಭ್ಯ ಒದಗಿಸುವುದು.

​ಗ್ರಂಥಾಲಯ: ಮಕ್ಕಳಿಗೆ ಓದಲು ಪಠ್ಯಪುಸ್ತಕಗಳ ಜೊತೆಗೆ ಕಥೆ ಪುಸ್ತಕಗಳು, ದಿನಪತ್ರಿಕೆಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಯ ಪುಸ್ತಕಗಳನ್ನು ಕೊಡಿಸುವುದು.
​೩. ಮಾರ್ಗದರ್ಶನ ಮತ್ತು ಪ್ರೇರಣೆ (Mentorship)
​ಹಳೆಯ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ (ಡಾಕ್ಟರ್, ಎಂಜಿನಿಯರ್, ರೈತ, ಸೈನಿಕ, ಉದ್ಯಮಿ) ಯಶಸ್ವಿಯಾಗಿರುತ್ತಾರೆ. ಅವರು ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿದಾಗ, ಗ್ರಾಮೀಣ ಭಾಗದ ಮಕ್ಕಳಿಗೆ ಆತ್ಮವಿಶ್ವಾಸ ಹೆಚ್ಚುತ್ತದೆ ಮತ್ತು ಭವಿಷ್ಯದ ಬಗ್ಗೆ ಸ್ಪಷ್ಟ ಗುರಿ ಸಿಗುತ್ತದೆ.

​೪. ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿವೇತನ
​ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಧನಸಹಾಯ ಮಾಡುವುದು ಅಥವಾ ಶಾಲಾ ವಾರ್ಷಿಕೋತ್ಸವದ ಸಮಯದಲ್ಲಿ ಬಹುಮಾನಗಳನ್ನು ನೀಡುವ ಮೂಲಕ ಮಕ್ಕಳನ್ನು ಪ್ರೋತ್ಸಾಹಿಸಬಹುದು.

​೫. ಸಮುದಾಯ ಮತ್ತು ಸರ್ಕಾರದ ನಡುವೆ ಸೇತುವೆ
​ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಶಾಲೆಗೆ ಸರಿಯಾಗಿ ತಲುಪಿಸಲು ಹಳೆಯ ವಿದ್ಯಾರ್ಥಿಗಳ ಸಂಘವು ಒತ್ತಡ ತರಬಹುದು. ಅಲ್ಲದೆ, ಸ್ಥಳೀಯ ದಾನಿಗಳನ್ನು ಒಗ್ಗೂಡಿಸಿ ಶಾಲೆಯ ಅಭಿವೃದ್ಧಿಗೆ "ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ" (SDMC) ಜೊತೆಗೂಡಿ ಕೆಲಸ ಮಾಡಬಹುದು.

​ಒಂದು ಮಾತು: "ಶಾಲೆ ಎಂಬುದು ಕೇವಲ ಕಟ್ಟಡವಲ್ಲ, ಅದು ನಮ್ಮ ವ್ಯಕ್ತಿತ್ವ ರೂಪಿಸಿದ ದೇಗುಲ." ಹಳೆಯ ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಒಂದು ಸಾಮಾನ್ಯ ಸರ್ಕಾರಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಪರಿವರ್ತಿಸಬಹುದು.
#ಗಂಧದಗುಡಿಬಳಗ


12/02/2026

ಗಂಧದ ಗುಡಿ ಬಳಗ ರಿ ಕರ್ನಾಟಕ ಸಾಮಾಜಿಕ ಸೇವಾ ತಂಡದ ಹ್ಯಾಪಿ ಟು ಹೆಲ್ಪ್ ಅಭಿಯಾನ -14..
ಉಡುಪಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಇರುವ ಒಟ್ಟು 6 ಸರ್ಕಾರಿ ಕನ್ನಡ ಕಿರಿಯ ಶಾಲೆಗಳಲ್ಲಿ ಶಿಕ್ಷಣ ಪಡೆಯುವ ಬಡ ಕೂಲಿ ಕಾರ್ಮಿಕರ ಮಕ್ಕಳಿಗೆ 100 ಪುಟದ 500 ಒಂದು ಗೆರೆಯ ಬರೆಯುವ ಪುಸ್ತಕಗಳು,200 ಪುಟದ 500 ಒಂದು ಗೆರೆಯ ಬೇಕಾಗಿದೆ.
ಇದರ ಒಟ್ಟು ಮೌಲ್ಯ ರೂ24000/-(ಹೋಲ್ ಸೇಲ್ ದರ)
ಸಹೃದಯಿ ದಾನಿಯವರೆ ನೀವು ಕೈಲಾದಷ್ಟು ಸಹಾಯಧನವನ್ನು ಮಾರ್ಚ್ 16,2026ರ ಒಳಗೆ ಗಂಧದಗುಡಿ ಬಳಗ ರಿ ಕರ್ನಾಟಕ ಸಾಮಾಜಿಕ ಸೇವಾ ತಂಡದ ಅಧಿಕೃತ ಬ್ಯಾಂಕ್ ಖಾತೆ ಅಥವಾ ಯುಪಿಐ ಸಂಖ್ಯೆಗೆ ತಲುಪಿಸಿ ಕೊಡಿ ಹಾಗೂ ಪಾರದರ್ಶಕ ಸೇವೆಗೆ ಕೈಜೋಡಿಸಿ 🤝 💛 ❤️






Want your business to be the top-listed Government Service in Bangalore?

Click here to claim your Sponsored Listing.

Location

Category

Telephone

Website

Address


Bangalore
560091