26/01/2025
ಚಂದಾಪುರದ ಭಕ್ತಿ ಕಲಾ ಸಮ್ಮೇಳನದಲ್ಲಿ ನೂರಾರು ಕಲಾತಂಡಗಳ ವೈಭವ, ಭಜನೆ ಭಕ್ತಿಯಲ್ಲಿ ಮಿದೆಂದ ಸಾವಿರಾರು ಭಕ್ತರ ಹರ್ಷೋದ್ಘಾರ.
ಭಕ್ತಿಗಾಯನ ಹಾಗೂ ಕಲಾ ಆರಾಧನೆಗೆ ದೇವರು ಸುಲಭವಾಗಿ ಒಲಿಯುತ್ತಾರೆ, ಎಂಬುದಾಗಿ ತಿರುಪತಿ ಅನ್ನಮಯ್ಯ, ಕಲಾಕ್ಷೇತ್ರದ ಪೀಠಾಧಿಪತಿಗಳಾದ, ಶ್ರೀವಿಜಯ ಶಂಕರ ಸ್ವಾಮಿ ತಿಳಿಸಿದರು.
ಅವರು ಚಂದಾಪುರದ ಕೆಎಂಎಸ್ ಸಭಾಂಗಣದಲ್ಲಿ, ಅನ್ನಮಯ್ಯ ಕಲಾಕ್ಷೇತ್ರ ತಿರುಪತಿ, ಶ್ರೀ ಸಾಯಿ ಸರ್ವೋದಯ ಯೋಗ ಫೌಂಡೇಷನ್, ಚಂದಾಪುರ ವಿಶ್ವಶಾಂತಿ, ಸಾಯಿಯೋಗ ಕೇಂದ್ರದ, ವತಿಯಿಂದ ಅನ್ನಮಾಚಾರ್ಯರ, ಜನ್ಮದಿನೋತ್ಸವದ ಅಂಗವಾಗಿ, ಏರ್ಪಡಿಸಿದ್ದ 24 ಗಂಟೆಗಳ, ಭಕ್ತಿ ಕಲಾ ಸಮ್ಮೇಳನ ಕಾರ್ಯಕ್ರಮವನ್ನು, ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕದಲ್ಲಿ, ಕನಕದಾಸರು ಹಾಗೂ ಪುರಂದರದಾಸರ, ಕೀರ್ತನೆಗಳ ದೊಡ್ಡ ಹರಿದಾಸ ಪರಂಪರೆಯನ್ನು ನೋಡಬಹುದಾಗಿದೆ, ಇದರ ಜೊತೆಯಲ್ಲಿ, ಸಾಕಷ್ಟು ಸಂಖ್ಯೆಯಲ್ಲಿ, ಅನ್ನಮಯ್ಯ ಅಭಿಮಾನಿಗಳು ಹಾಗೂ ಕಲಾವಿದರು ಇದ್ದಾರೆ. ಇಂತಹ ಕಲಾಪ್ರತಿಭೆಗಳಿಗೆ, ತಿರುಪತಿಯ ತಿರುಮಲ ಕಲಾಕ್ಷೇತ್ರದಲ್ಲಿ, ಸೂಕ್ತವೇದಿಕೆಯನ್ನು, ಕಲ್ಪಿಸಿಕೊಡಲು ಈ ಕಾರ್ಯಕ್ರಮದ, ಆಯೋಜಕರಾದ ಯೋಗಗುರು ಶಾಮಣ್ಣಗುರೂಜಿ, ಮನವಿ ಮಾಡಿದ್ದಾರೆ. ಅದರಂತೆ ಸೂಕ್ತ ಅವಕಾಶದ ವ್ಯವಸ್ಥೆಯನ್ನು ಮಾಡಲು, ಟಿಟಿಡಿ ಕಲಾಕ್ಷೇತ್ರ ಮಂಡಳಿಯೊಂದಿಗೆ, ಚರ್ಚಿಸಿ, ಭಗವಂತನ ಅನುಗ್ರಹ ದೊರಕಿಸಿಕೊಡಲು, ಪ್ರಯತ್ನಸುತ್ತಿನಿ ಎಂಬುದಾಗಿ ತಿಳಿಸಿದರು.
ಶ್ರೀ ಸಾಯಿ ಸರ್ವೋದಯ ಯೋಗ ಫೌಂಡೇಷನ್ ಅಧ್ಯಕ್ಷರಾದ, ಶಾಮಣ್ಣ ಗುರೂಜಿ ಮಾತನಾಡುತ್ತ, ಕೋಲಾಟ, ಭಜನೆ, ಕಂಸಾಳೆ, ಸುಗಮಸಂಗೀತ, ಜಾನಪದಗಾಯನ, ಸೋಬಾನೆ, ಮಂಟೇಸ್ವಾಮಿ, ಗೀಗಿಪದ, ಹರಿಕಥೆ, ಭರತನಾಟ್ಯ, ರಂಗಕುಣಿತ ವಿವಿಧ ಪ್ರಕಾರಗಳ 150ಕ್ಕೂಹೆಚ್ಚು ಕಲಾ ತಂಡಗಳು, ನಮ್ಮ ಬೆಂಗಳೂರು ಗ್ರಾಮಾಂತರ ಹಾಗೂ ಆನೇಕಲ್ ತಾಲ್ಲೂಕು ಸುತ್ತಮುತ್ತಲಿನ, ಹತ್ತಾರು ಪ್ರದೇಶಗಳಿಂದ ಆಗಮಿಸಿ ಉತ್ತಮ ಪ್ರದರ್ಶನ ನೀಡಿವೆ, ಇಂತಹ ಕಾರ್ಯಕ್ರಮವು ಆನೇಕಲ್ ಇತಿಹಾಸದಲ್ಲಿ ಇದೇ ಮೊಟ್ಟಮೊದಲ ಬಾರಿಗೆ, ಆಯೋಜನೆಗೊಂಡಿದ್ದು, 24 ಗಂಟೆಗಳ ಕಾಲ, ಸಾವಿರಾರು ಭಕ್ತರು ಕಲಾಭಕ್ತಿ ಭಜನೆಯಲ್ಲಿ ಪರವಶರಾದರು, ಇಂತಹ ಅದ್ಭುತ ಕಲಾ ಪ್ರದರ್ಶನ ನೀಡಿದ, ಕಲಾತಂಡಗಳಿಗೆ ನಿರಂತರ ಅವಕಾಶ ಮತ್ತು ಪ್ರೋತ್ಸಾಹ ನೀಡಲು, ರಾಜ್ಯ ಮುಜರಾಯಿ ಸಚಿವರಲ್ಲಿ, ಮನವಿ ಮಾಡಲು ಕಲಾವಿದ ನಿಯೋಗ ಹೋಗಲು , ವ್ಯವಸ್ಥೆ ಮಾಡಲಾಗುತ್ತದೆ, ಎಂದರು.
ಇದೇ ಸಂದರ್ಭದಲ್ಲಿ ರಾಮಣ್ಣಸ್ಚಾಮಿಗಳು ಮಾತನಾಡುತ್ತ, 24 ಗಂಟೆಗಳ ಕಾಲ ನಿರಂತರ ತಮ್ಮ ತಮ್ಮಕಲಾ ಪ್ರದರ್ಶನವನ್ನು ನೀಡಿದ ಕಲಾವಿದರಿಗೆ, ಈಸೇವಾ ಕಾರ್ಯದಲ್ಲಿ ಎಲ್ಲ ರೀತಿಯಲ್ಲಿ ಸಹಕಾರ,ಪ್ರೋತ್ಸಾಹ ನೀಡಿದ ಭಕ್ತರಿಗೆ ಧನ್ಯವಾದಗಳು ಅರ್ಪಿಸಿದರು.
ಇದೇ ಸಂದರ್ಭದಲ್ಲಿ, ಯೋಗ ಗುರು ಶಿವಶಂಕರರೆಡ್ಡಿ, ವೆಂಕಟಸ್ವಾಮಿರೆಡ್ಡಿ, ಯೋಗ ಕೇಂದ್ರದ ಮಂಜುಳ, ಮಹದೇವ್ ಹರೀಶ್,ಶೇಖರ್,ಸುರೇಶ್ ರೆಡ್ಡಿ, ಶ್ರೀನಿವಾಸ್, ಪ್ರದೀಪ್ ಹಾಗೂ ಮುರಳಿ, ಪ್ರಕಾಶ್ ಹಾಜರಿದ್ದರು.
ಸರ್ವೋದಯಯೋಗಫೌಂಡೇಷನ್ ಯೋಗಗುರು ಶಾಮಣ್ಣ ನೇತೃತ್ವದಲ್ಲಿಇತಿಹಾಸನಿರ್ಮಿಸಿದ24ಗಂಟೆಗಳಭಕ್ತಿಕಲಾಸಮ್ಮೇಳನದ ವ