2 Lakh Free Flight tickets for Thailand ⚡️
Anchor Basheer
Welcome to my page
𝐍𝐞𝐰𝐬 𝐀𝐧𝐜𝐡𝐨𝐫 | 𝐒𝐨𝐜𝐢𝐚𝐥 𝐀𝐜𝐭𝐢𝐯𝐢𝐬𝐭 | 𝐅𝐢𝐭𝐭𝐧𝐞𝐬𝐬
Karnataka Government giving you 50 Lakh Rupees for Buisness
ELEVATE-2025
50 % Offer on Banglore traffic violence fine
ರಾಮಲಿಂಗ ರೆಡ್ಡಿ ಅಭಿಮಾನಿಗಳ ಬಳಗ ಬೆಂಗಳೂರು, ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ,ಎಲ್ಮಾಸ್ ಗ್ರೂಪ್ ಹಾಗೂ ನಾರಾಯಣ ಹೃದಯಾಲಯ ರಕ್ತ ನಿಧಿ ಇದರ ಜಂಟಿ ಆಶ್ರಯದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿದ ಸಂಧರ್ಭ. ಇರೋದಕ್ಕಿಂತ ಹೆಚ್ಚಿನದನ್ನೇ ಹೇಳಿದ್ರೂ Ashraf Arabi ಅವರ ನಿರೂಪಣೆ ಶೈಲಿಗಂತೂ ರಾಮಲಿಂಗ ರೆಡ್ಡಿಯವರೂ ಫಿದಾ ಆಗ್ಬಿಟ್ಟರು.
Blood Help Line Karnataka ♥️
ಬೆಂಗಳೂರಿನಲ್ಲಿ ಭೀಕರ ನೀರಿನ ಅಭಾವಕ್ಕೆ ಕಾರಣ ಏನು ಗೊತ್ತಾ !
14/01/2023
Delegate on MIA Buisness Summit-2023 Bangalore.
❤️
ಸುಮಾರು 800 ವರ್ಷಗಳ ಇತಿಹಾಸವಿರುವ ಹಝ್ರತ್ ಸಯ್ಯದ್ ಬಾಬ ಫಕ್ರುದ್ದೀನ್ (ರ.ಅ) ಅಜಿಲಮೊಗರು ಮಾಲಿದಾ ಉರೂಸ್ ಗೆ ಬಾಲ್ಯದಲ್ಲಿ ಹಲವಾರು ಬಾರಿ ದರ್ಗಾ ಝಿಯಾರತ್ ಗೆ ಭೇಟಿ ನೀಡಿದ್ದೆ, ನೇತ್ರಾವತಿ ನದಿ ದಡದ ಒಂದು ಕಡೆ ಲಕ್ಶ್ಮೀನರಸಿಂಹ ದೇವಸ್ಥಾನ ಮತ್ತೊಂದು ತಟದಲ್ಲಿ ಮಸೀದಿ ನೇರ ನೇರವಾಗಿ ಭಾವೈಕ್ಯತೆಯೊಂದಿಗೆ ಪ್ರಕೃತಿ ರಮನೀಯವಾಗಿ ಕಂಗೊಳಿಸುತ್ತಿರುವ ಈ ಸ್ಥಳವನ್ನು ಕಂಣ್ತುಂಬಿಕೊಳ್ಳಲು ಕಣ್ಣುಗಳೆರಡು ಸಾಲದು.
ನಿನ್ನೆ ಅಜ್ಜಿ ಮನೆಯಲ್ಲಿ ಮಾಲಿದ(ಪ್ರಸಾದ) ತಯಾರಿಸಿ ಮಸೀದಿಗೆ ತಲುಪಿಸಿ ನದಿ ತಟದಲ್ಲಿ ಬಿಸಿ ಬಿಸಿ ಗಂಜಿ ಊಟ ಸವಿದದ್ದು ಅವಿಸ್ಮರಣೀಯ.❤️
28/12/2022
ಕರಾವಳಿ ಪ್ರೀಮಿಯರ್ ಲೀಗ್-2022 , ಪವರ್ ಸ್ಟಾರ್ ಟ್ರೋಫಿ . ಇದರ ಅಂಗವಾಗಿ ಬೆಂಗಳೂರಿನಲ್ಲಿ ನಡೆದ 2 ದಿನದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಕೂಟದ ಸಮಾರೋಪ ಸಮಾರಂಭದಲ್ಲಿ ಸಾಮಾಜಿಕ ಹೋರಾಟಗಾರ, ನಟ Chetan Ahimsa , ಕರ್ನಾಟಕ ರಕ್ಷಣಾ ವೇದಿಕೆ ರಿ. ವೀರ ಕನ್ನಡಿಗರ ಗರ್ಜನೆ ವೇದಿಕೆಯ ಗೌರವಾಧ್ಯಕ್ಷರು Abubakkar J P Nagar ಹಾಗೂ ಹಲವು ಉದ್ಯಮಿಗಳು,ರಾಜಕೀಯ ಮುಖಂಡರೊಂದಿಗೆ ವೇದಿಕೆ ಹಂಚಿಕೊಂಡ ಕ್ಷಣ.
ಚೇತನ್ ಅಹಿಂಸಾ ಜೊತೆ ನಡೆಸಿದ ಸಂದರ್ಶನದ ಸಂಪೂರ್ಣ ವೀಡಿಯೋಗಾಗಿ ಈ ಲಿಂಕ್ ಬಳಸಿ
https://youtu.be/cCCFvpY2_ps
18/12/2022
ಎಲ್ಲರಿಗೂ ಎಲ್ಲಾ ಇಷ್ಟ ಆಗಬೇಕೇನೆಂದಿಲ್ಲ. ಹಾಗಂತ ಎಲ್ಲರನ್ನು ಮೆಚ್ಚಿಸೋಕು ಆಗಲ್ಲ. ಮಹಾನ್ ವ್ಯಕ್ತಿತ್ವಗಳಾದ ಗಾಂಧೀಜಿ-ಅಂಬೇಡ್ಕರ್ ಅವರನ್ನೇ ಹಲವರು ದ್ವೇಷಿಸುತ್ತಿರುವಾಗ ಈ Chetan Ahimsa ಯಾವ ಲೆಕ್ಕ ಅಲ್ವಾ ?
10 ವರ್ಷಗಳ ಹಿಂದೆ ಜಿಮ್ ಮುಗಿಸಿಕೊಂಡು ನಮ್ಮ ಹೋಟೆಲ್ ಗೆ ಬರುತ್ತಿದ್ದ ಚೇತನ್ ತನ್ನ ಕಾರಿನಲ್ಲಿ ಕೂರಿಸಿಕೊಂಡು ತಾಸುಗಟ್ಟಲೆ ಮಾತಾಡುತ್ತಿದ್ದಾಗ ಈತ ಸಿನಿಮಾ ನಟನೆಂದು ಗೊತ್ತಾಗಿದ್ದು ಹೋಟೆಲ್ ನಲ್ಲಿದ್ದ ಮಂಡ್ಯದ ಹುಡುಗ್ರು ಏನ್ ಗುರೂ ಫಿಲಂ ಆ್ಯಕ್ಟರ್ ಜೊತೆ ಕಾರಲ್ಲಿ ಕೂತ್ಕೊಂಡು ಮಾತಾಡ್ತಿದ್ದೀರಿ ಎಂದಾಗಲೇ... ಅಷ್ಟು ಸರಳತೆಯಿಂದ ಪ್ರತಿಯೊಬ್ಬರೊಂದಿಗೂ ಯಾವುದೇ ಅಹಂ ಇಲ್ಲದೇ ಬೆರೆಯುವ ನಟ ಬಹುಷಃ ಕನ್ನಡ ಇಂಡಸ್ಟ್ರಿಯಲ್ಲಿಲ್ಲ. ಚೇತನ್ ನೀಡಿದ ಸಲಹೆಯೊಂದು ನನ್ನ ಜೀವನದ ದಿಕ್ಕನ್ನೇ ಬದಲಿಸಿತ್ತು, ಬಶೀರ್ ನಿನ್ನ ಮಾತಲ್ಲಿ ಸ್ಪಷ್ಟತೆ ಇದೆ, ಏನೋ ಸಾಧನೆ ಮಾಡಬೇಕಾದ ಮುಖ ನಿನ್ನದು, ನಿನ್ನ ಸಮಯವನ್ನು ಹೋಟೆಲ್ ನಲ್ಲಿ ಸವೆಸಬೇಕಾದವನಲ್ಲ, ಬೇರೇನಾದರು ಮಾಡಲೇಬೇಕು ಎಂದು ಅವತ್ತು ಪ್ರೇರಣೆ ನೀಡಿದ್ದ ಚೇತನ್ ನನ್ನನ್ನ ನ್ಯೂಸ್ ಚಾನೆಲ್ ನಲ್ಲಿ ಆ್ಯಂಕರ್ ಆಗಿ ನೋಡಿದಾಗ ನನ್ನಷ್ಟೆ ಖುಷಿಪಟ್ಟ ಗೆಳೆಯ.
ನನಗಂತೂ ಚೇತನ್ ಇಷ್ಟವಾಗೋದು ಹಲವಾರು ಕಾರಣಗಳಿಗೆ. ಅಗರ್ಭ ಶ್ರೀಮಂತ ಕುಟುಂಬದ ಹಿನ್ನಲೆಯಿರುವ ನಟನೊಬ್ಬ , ನಟನೆ, ದುಡ್ಡು, ಐಶರಾಮಿ ಜೀವನ ಮಾಡೋದು ಬಿಟ್ಟು ಹಿಂದುಳಿದ ಜನರಿಗೆ, ಆದಿವಾಸಿಗಳಿಗೆ, ಶೋಷಿತ ವರ್ಗದ ಜನರ ಹಕ್ಕುಗಳಿಗೆ ಹೊರಾಡಿ ಎಲ್ಲರಿಗೂ ನ್ಯಾಯ ಸಮಾನತೆಯಿಂದ ಕೂಡಿದ ಜೀವನ ದೊರೆಯಬೇಕೆಂದು ಹೋರಾಡುವುದು ಸುಲಭದ ವಿಚಾರವೇನಲ್ಲ.
ಮೊನ್ನೆ ಚೇತನ್ ಜೊತೆ ನಾನು ನನ್ನ ಮೊದಲ ಸಂದರ್ಶನ ಮಾಡಿದ್ದೇನೆ... ಪ್ರಸ್ತುತ ನ್ಯೂಸ್ ನಲ್ಲಿ ಒಂದಷ್ಟು ವಿಚಾರವನ್ನು ಹಂಚಿಕೊಂಡ್ಡಿದ್ದಾರೆ ದಯವಿಟ್ಟು ವೀಕ್ಷಿಸಿ.
ಚೇತನ್ ಯಾರು? ಚೇತನ್ ಏನು? ಚೇತನ್ ಉದ್ದೇಶಗಳೇನು?
ವೀಡಿಯೋ ವೀಕ್ಷಿಸಿ https://youtu.be/cCCFvpY2_ps
Click here to claim your Sponsored Listing.
Location
Category
Contact the business
Website
Address
Bangalore
